HOME » NEWS » Explained » COVID 19 WHICH ARE THE CORONAVIRUS VARIANTS IN INDIA DO THEY EXPLAIN THE RECENT SURGE HERE IS DETAILS STG SCT

Covid-19: ಭಾರತದಲ್ಲಿರುವ ಕೋವಿಡ್ -19 ರೂಪಾಂತರಗಳು ಯಾವುವು?; ದೇಶದಲ್ಲಿ ಸೋಂಕು ಹೆಚ್ಚಲು ಕಾರಣ ಈ ತಳಿಗಳೇ?

ಯುಕೆ ರೂಪಾಂತರ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ಮುಂತಾದ ರೂಪಾಂತರವೂ ಭಾರತೀಯರಲ್ಲಿ ಪತ್ತೆಯಾಗುತ್ತಿದೆ. ಮಹಾರಾಷ್ಟ್ರ, ಕೇರಳ, ಪಂಜಾಬ್‌, ಕರ್ನಾಟಕ ಸೇರಿ ಕೆಲ ರಾಜ್ಯಗಳಲ್ಲಿ ಮತ್ತೆ ಕೊರೊನಾ ಜನರನ್ನು ಆತಂಕಕ್ಕೀಡುಮಾಡಿದ್ದು, ಎರಡನೆಯ ಅಲೆ ಕಾಣಿಸಿಕೊಂಡಿದೆ ಎಂದೇ ಬಿಂಬಿತವಾಗುತ್ತಿದೆ.

news18-kannada
Updated:March 27, 2021, 3:57 PM IST
Covid-19: ಭಾರತದಲ್ಲಿರುವ ಕೋವಿಡ್ -19 ರೂಪಾಂತರಗಳು ಯಾವುವು?; ದೇಶದಲ್ಲಿ ಸೋಂಕು ಹೆಚ್ಚಲು ಕಾರಣ ಈ ತಳಿಗಳೇ?
ಪ್ರಾತಿನಿಧಿಕ ಚಿತ್ರ.
  • Share this:
ನವದೆಹಲಿ (ಮಾ. 27): ಭಾರತದಲ್ಲಿ ಇನ್ನೇನು ಕೊರೊನಾ ವೈರಸ್‌ ನಿಯಂತ್ರಣಕ್ಕೆ ಬರುತ್ತಿದೆ. ಲಸಿಕೆ ಬಂದಾಯಿತು. ಟೆನ್ಷನ್‌ ತಗೊಳ್ಳೋದು ಬೇಡ ಅಂತ ಹಲವರು ಅಂದ್ಕೊಳ್ಳುತ್ತಿದ್ದಂತೆ ಕಳೆದ ಕೆಲ ವಾರಗಳಿಂದ ದೇಶದ ಹಲವು ರಾಜ್ಯಗಳಲ್ಲಿ ಕೇಸ್‌ಗಳು ಹೆಚ್ಚಾಗತೊಡಗಿದೆ. ದೇಶದ ಕೆಲ ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು, ಇದರಿಂದ ದೇಶದ ಸೋಂಕಿತರ ಪ್ರಮಾಣವೂ ವೇಗವಾಗಿ ಹೆಚ್ಚಾಗುತ್ತಿದೆ. ಈ ಪೈಕಿ, ಯುಕೆ ರೂಪಾಂತರ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ಮುಂತಾದ ರೂಪಾಂತರವೂ ಭಾರತೀಯರಲ್ಲಿ ಪತ್ತೆಯಾಗುತ್ತಿದೆ. ಮಹಾರಾಷ್ಟ್ರ, ಕೇರಳ, ಪಂಜಾಬ್‌, ಕರ್ನಾಟಕ ಸೇರಿ ಕೆಲ ರಾಜ್ಯಗಳಲ್ಲಿ ಮತ್ತೆ ಕೊರೊನಾ ಜನರನ್ನು ಆತಂಕಕ್ಕೀಡುಮಾಡಿದ್ದು, ಎರಡನೆಯ ಅಲೆ ಕಾಣಿಸಿಕೊಂಡಿದೆ ಎಂದೇ ಬಿಂಬಿತವಾಗುತ್ತಿದೆ.

ಪಂಜಾಬ್‌ನಲ್ಲಿ 320 ಕ್ಕೂ ಹೆಚ್ಚು ಕೊರೊನಾ ವೈರಸ್‌ ಕೇಸ್‌ಗಳು ಯುಕೆ ರೂಪಾಂತರಿಯಾಗಿದೆ ಎಂದು ಕಂಡುಬಂದಿದೆ. ಪಂಜಾಬ್‌ನಲ್ಲೇ ಈ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮತ್ತು ಕಳೆದ ಕೆಲವು ವಾರಗಳಲ್ಲಿ ಪ್ರಕರಣಗಳು ಶೀಘ್ರವಾಗಿ ಏರುತ್ತಿರುವುದರ ಹಿಂದೆ ಇದೂ ಒಂದು ಕಾರಣವಿರುವ ಸಾಧ್ಯತೆ ಬಗ್ಗೆ ಅಲ್ಲಿ ಚರ್ಚೆ ನಡೆಯುತ್ತಿದೆ.

ದೇಶಾದ್ಯಂತ 736 ಮಾದರಿಗಳು ಯುಕೆ ವಂಶಾವಳಿಯನ್ನು ಹೊಂದಿರುವುದು ಕಂಡುಬಂದಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿಕೆ ನೀಡಿದೆ. ಅಲ್ಲದೆ, 34 ದಕ್ಷಿಣ ಆಫ್ರಿಕಾ ರೂಪಾಂತರಿ ಪ್ರಕರಣಗಳು, ಮತ್ತು ಒಂದು ಬ್ರೆಜಿಲ್‌ ರೂಪಾಂತರದ ಪ್ರಕರಣವು ದೇಶದಲ್ಲಿ ಕಂಡುಬಂದಿದೆ. ಯುಕೆ ತಳಿ ಹೊರತುಪಡಿಸಿದರೆ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲಿಯನ್‌ ತಳಿಗಳು ಪ್ರಬಲ ರೂಪಾಂತರಿ ತಳಿಗಳಾಗಿವೆ. ಈ ಎರಡು ರೂಪಾಂತರಗಳಲ್ಲಿನ ಅನುವಂಶಿಕ ರೂಪಾಂತರಗಳು ಮಾನವನ ಪ್ರತಿರಕ್ಷಣಾ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಆದ್ದರಿಂದ, ಪ್ರಸ್ತುತ ನೀಡುತ್ತಿರುವ ಲಸಿಕೆಗಳು ಈ ತಳಿಗಳ ವಿರುದ್ಧ ತುಲನಾತ್ಮಕವಾಗಿ ಕಡಿಮೆ ಪರಿಣಾಮಕಾರಿಯಾಗಬಹುದು ಎಂಬ ಆತಂಕವಿದ್ದರೂ ಈ ಬಗ್ಗೆ ಇನ್ನೂ ತನಿಖೆ ಮಾಡಲಾಗುತ್ತಿದೆ.

ಭಾರತದಲ್ಲಿರುವ ರೂಪಾಂತರಗಳು ಯಾವುದು ನೋಡಿ..
ಯುಕೆ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ರೂಪಾಂತರಗಳು ಮಾತ್ರವೇ ಪ್ರಸ್ತುತ ಭಾರತೀಯ ಜನಸಂಖ್ಯೆಯಲ್ಲಿ ಹರಡುತ್ತಿಲ್ಲ. ಬದಲಾಗಿ, ಇತರ ಜೀವಿಗಳಂತೆ, ಕೊರೊನಾ ವೈರಸ್‌ ಸಹ ನಿರಂತರವಾಗಿ ರೂಪಾಂತರಗೊಳ್ಳುತ್ತಿದೆ. ಅದರ ಪ್ರತಿರೂಪ ಚಕ್ರದಲ್ಲಿ ಅದರ ಅನುವಂಶಿಕ ರಚನೆಯಲ್ಲಿ ಕೆಲವು ಬದಲಾವಣೆಗಳು ಸಂಭವಿಸುತ್ತವೆ. ಈ ರೂಪಾಂತರಗಳಲ್ಲಿ ಹೆಚ್ಚಿನವು ಅಸಂಭವವಾಗಿದೆ, ಮತ್ತು ಕೊರೊನಾ ವೈರಸ್‌ನ
ಒಟ್ಟಾರೆ ಸ್ವರೂಪ ಅಥವಾ ನಡವಳಿಕೆಯನ್ನು ಬದಲಾಯಿಸುವುದಿಲ್ಲ. ಆದರೆ ಅವುಗಳಲ್ಲಿ ಕೆಲವು , ಬಹುಶಃ ಸಾವಿರಾರು ವೈರಸ್‌ಗಳ ಪೈಕಿ ಒಂದು ವೈರಾಣು ಪ್ರಮುಖ ಬದಲಾವಣೆಗಳನ್ನು ಪರಿಚಯಿಸಬಹುದು. ಇದರಿಂದ ಪ್ರಮುಖ ವೈರಸ್‌ಗೆ ಹೊಂದಿಕೊಳ್ಳಲು ಅಥವಾ ಉತ್ತಮವಾಗಿ ಬದುಕಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Explainer: ನಿಮ್ಮ ಮಕ್ಕಳಿಗೆ ಕೋವಿಡ್‌-19 ಲಸಿಕೆ ನೀಡಲು ಸರಿಯಾದ ಸಮಯ ಯಾವುದು?ಇನ್ನು, ಈ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ವೈರಸ್ ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೆಚ್ಚಿಸುವುದನ್ನು, ಸೋಂಕಿತ ವ್ಯಕ್ತಿಯಲ್ಲಿ ಹೆಚ್ಚು ತೀವ್ರವಾದ ರೋಗವನ್ನು ಉಂಟುಮಾಡುವ ಮತ್ತು ವೈರಸ್ ರೋಗನಿರೋಧಕ ಪ್ರತಿಕ್ರಿಯೆಯಿಂದ ಪಾರಾಗಲು ಸಹಾಯ ಮಾಡುವ - ಹೀಗೆ ಮೂರು ರೀತಿಯ ಬದಲಾವಣೆಗಳನ್ನು ತೀವ್ರವಾಗಿ ಗಮನಿಸಲಾಗುತ್ತಿದೆ. ಯುಕೆ, ಬ್ರೆಜಿಲಿಯನ್ ಮತ್ತು ದಕ್ಷಿಣ ಆಫ್ರಿಕಾದ ರೂಪಾಂತರಗಳು ಅಂತಹ ತಳಿಗಳಾಗಿದ್ದು, ಅವುಗಳಲ್ಲಿ ಪ್ರತಿಯೊಂದೂ ಈಗ ತನ್ನದೇ ಆದ ಕುಟುಂಬಗಳನ್ನು ಹೊಂದಿದೆ. ಉದಾಹರಣೆಗೆ ಯುಕೆ ತಳಿಯೊಂದರಲ್ಲೇ ಅನೇಕ ರೂಪಾಂತರಗಳು ಕಂಡುಬಂದಿವೆ. ಆದರೆ ಮೂಲ ವ್ಯಾಖ್ಯಾನಿಸುವ ರೂಪಾಂತರವು ಹಾಗೇ ಉಳಿದಿದೆ. ಇಂತಹ ರೂಪಾಂತರಗಳು ಹಲವು ದೇಶಗಳಲ್ಲಿ ಕಂಡುಬಂದಿದ್ದು, ಯುರೋಪ್ ಮತ್ತು ಬ್ರೆಜಿಲ್‌ನಲ್ಲಿ ಇದರಿಂದಲೇ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗಿದೆ.

ಭಾರತದಲ್ಲಿ ಈ ರೂಪಾಂತರಗಳ ಜತೆಗೆ ಸ್ಥಳೀಯವಾಗಿಯೂ ಅನೇಕ ರೂಪಾಂತರಗಳು ಹುಟ್ಟಿಕೊಂಡಿದೆ. ಇವುಗಳಲ್ಲಿ ಹಲವು ಸ್ಥಳೀಯವಾಗಿಯೇ ಹುಟ್ಟಿಕೊಂಡು ಒಬ್ಬರಿಂದ ಒಬ್ಬರಿಗೆ ಹರಡುತ್ತಿದ್ದರೆ, ಇನ್ನು ಕೆಲವು ರೂಪಾಂತರಗಳು ವಿದೇಶದಿಂದ ಬಂದ ಭಾರತೀಯರಲ್ಲಿ ಕಂಡುಬರುತ್ತಿವೆ.

ಯುಕೆ ಕೋವಿಡ್ -19 ರೂಪಾಂತರದ ಆತಂಕಗಳು ಹೀಗಿವೆ..
ಯುಕೆ, ಬ್ರೆಜಿಲಿಲ್ ಅಥವಾ ದಕ್ಷಿಣ ಆಫ್ರಿಕಾದ ಮೂರು ಆತಂಕಕಾರಿ ರೂಪಾಂತರಗಳಲ್ಲಿ ಯಾವುದೂ ಪ್ರಸ್ತುತ ದೇಶದಲ್ಲಿ ಕೋವಿಡ್ ಎರಡನೇ ಅಲೆ ಅಥವಾ ಪ್ರಕರಣಗಳ ಏರಿಕೆಗೆ ಕಾರಣವಾಗಿಲ್ಲ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಸಮುದಾಯದಲ್ಲಿ ಸದ್ಯ ಏರುತ್ತಿರುವ ಪ್ರಕರಣಗಳ ಉಲ್ಬಣಕ್ಕೆ ಈ ಮೂರೂ ತಳಿಗಳು ಕಾರಣ ಎನ್ನಲಾಗಲ್ಲ ಎಂದಿದ್ದಾರೆ.

ಪಂಜಾಬ್‌ನಲ್ಲೂ ಈಗ ವಿಶ್ಲೇಷಿಸಿದ 400 ಮಾದರಿಗಳಲ್ಲಿ ಶೇ. 80 ರಷ್ಟು ಯುಕೆ ರೂಪಾಂತರ ಎಂದು ಹೇಳಲಾಗುತ್ತಿದ್ದರೂ ಸಹ, ಕಳೆದ ಕೆಲವು ವಾರಗಳಲ್ಲಿ ಅಸಾಧಾರಣ ಪ್ರಕರಣಗಳ ಹೆಚ್ಚಳಕ್ಕೆ ಇದೇ ಕಾರಣ ಎಂದು ಈಗಲೇ ದೂಷಿಸುವ ಹಾಗಿಲ್ಲ. ಜೀನೋಮ್ ಅನುಕ್ರಮದ ಫಲಿತಾಂಶಗಳನ್ನು ಸದ್ಯ ಬಹಿರಂಗಪಡಿಸಲಾಗಿದೆ, ಮತ್ತು ಪ್ರಕರಣಗಳ ಏರಿಕೆಗೆ ಅವು ಕಾರಣವೇ ಎಂದು ನಿರ್ಣಯಿಸಲು ಕ್ಲಿನಿಕಲ್ ಪರಸ್ಪರ ಸಂಬಂಧವನ್ನು ಪರಿಶೀಲಿಸಬೇಕಿದೆ.

ಪಂಜಾಬ್‌ನಲ್ಲಿ ಯುಕೆ ತಳಿ ಸೋಂಕಿಗೆ ಒಳಗಾದ ಜನರು ಎಲ್ಲರೂ ವಿದೇಶಿ ಪ್ರಯಾಣಿಕರು ಅಥವಾ ಅವರ ನೇರ ಸಂಪರ್ಕಗಳಾಗಿದ್ದರೆ, ಇವುಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಇದು ಹೆಚ್ಚು ಆತಂಕಕಾರಿಯೂ ಇಲ್ಲ. ಆದರೆ, ಇದು ವಿಶಾಲ ಸಮುದಾಯದ ಜನರಲ್ಲಿ ಕಂಡುಬಂದರೆ, ಇತರರಿಗೆ ಬೇಗನೆ ಹರಡುವ ಅಪಾಯವಿದೆ ಎಂದು ವಿಜ್ಞಾನಿಗಳು ಗಮನಿಸಿದ್ದಾರೆ.

ಯುಕೆ ಸ್ಟ್ರೈನ್‌ನಲ್ಲಿ ಕಂಡುಬರುತ್ತಿರುವ ಕೆಲವು ನಿರ್ದಿಷ್ಟ ರೂಪಾಂತರಗಳು, E484Q ಮತ್ತು ಇನ್ನೊಂದನ್ನು N440K ಎಂದು ಕರೆಯಲಾಗುತ್ತದೆ. ಇವು ಹಲವಾರು ತಿಂಗಳುಗಳಿಂದ ಭಾರತೀಯ ಜನಸಂಖ್ಯೆಯಲ್ಲಿ ಹರಡುತ್ತಿದ್ದು, ಈ ಹಿನ್ನೆಲೆ ಪ್ರಸ್ತುತ ಎರಡನೇ ಅಲೆಗೆ ಇದೇ ಕಾರಣ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೂ, ದೇಶದಲ್ಲಿ ಸೋಂಕು ಹರಡುತ್ತಿರುವುದರ ಬಗ್ಗೆ ಅವುಗಳ ಪ್ರಭಾವವನ್ನು ನಿರ್ಣಯಿಸಲು ಹೆಚ್ಚು ವಿವರವಾದ ವೈಜ್ಞಾನಿಕ ತನಿಖೆಯ ಅಗತ್ಯವಿದೆ.

ಜೀನೋಮ್ ಸೀಕ್ವೆನ್ಸಿಂಗ್
ಅಮೆರಿಕ ಮತ್ತು ಚೀನಾ ಸೇರಿದಂತೆ ಅನೇಕ ದೇಶಗಳು 100,000 ಕ್ಕೂ ಹೆಚ್ಚು ಜೀನ್ ಸೀಕ್ವೆನ್ಸಿಂಗ್‌ ಅನ್ನು ವಿಶ್ಲೇಷಿಸಿವೆ. ಇನ್ನೊಂದೆಡೆ, ಕೊರೊನಾ ಸೋಂಕಿಗೆ ಒಳಗಾದವರಲ್ಲಿ ಜಗತ್ತಿನಲ್ಲೇ ಭಾರತ ಎರಡನೇ ಸ್ಥಾನದಲ್ಲಿದ್ದರೂ, 19,092 ಮಾದರಿಗಳ ಜೀನ್ ವಿಶ್ಲೇಷಣೆಯನ್ನು ನಡೆಸಿದೆ ಎಂದು ಕೇಂದ್ರ ಸರ್ಕಾರ ಕಳೆದ ವಾರ ಸಂಸತ್ತಿನಲ್ಲಿ ಹೇಳಿಕೆ ನೀಡಿತ್ತು. ಅಲ್ಲದೆ, ಈ ಉದ್ದೇಶಕ್ಕಾಗಿ ಸರ್ಕಾರವು ಡಿಸೆಂಬರ್‌ನಲ್ಲಿ INSACOG (ಇಂಡಿಯನ್ SARS-CoV2 ಕನ್ಸೋರ್ಟಿಯಂ ಆನ್ ಜೀನೋಮಿಕ್ಸ್) ಅನ್ನು ಸ್ಥಾಪಿಸಿದ ಬಳಿಕ 10,787 ಮಾದರಿಗಳ ಸೀಕ್ವೆನ್ಸ್‌ಗಳನ್ನು ಮಾಡಲಾಗಿದೆ.

ಜೀವಿಯಲ್ಲಿನ ಆನುವಂಶಿಕ ಬದಲಾವಣೆಗಳನ್ನು ಅಧ್ಯಯನ ಮಾಡುವುದರಿಂದ ರೋಗಿಗಳ ಮೇಲೆ ವೈರಸ್‌ನ ಮೂಲ, ಪ್ರಸರಣ ಮತ್ತು ಪ್ರಭಾವವನ್ನು ಅರ್ಥಮಾಡಿಕೊಳ್ಳುವ ಪ್ರಮುಖ ಸುಳಿವುಗಳಾಗಿವೆ. 10
ಪ್ರಯೋಗಾಲಯಗಳ ಜಾಲದ ಮೂಲಕ ಎಲ್ಲಾ ಸೋಂಕಿತ ಪ್ರಕರಣಗಳಲ್ಲಿ ಕನಿಷ್ಠ 5% ನಷ್ಟು ಮಾದರಿಗಳನ್ನು ಅನುಕ್ರಮಗೊಳಿಸುವುದು INSACOG ನ ಉದ್ದೇಶಿತ ಉದ್ದೇಶವಾಗಿದೆ. ಆದರೆ, ಭಾರತದಲ್ಲಿ ಇದುವರೆಗೆ 1.17 ಕೋಟಿ ಕೊರೊನಾ ಸೋಮಕಿತರಿದ್ದು, ಈವರೆಗೆ 19,092 ಮಾದರಿಗಳ ಜೀನೋಮ್ ಸೀಕ್ವೆನ್ಸಿಂಗ್ ಮಾಡಿರುವುದು ಕೇವಲ 0.16 ರಷ್ಟು ಆಗಿದೆ.

ಈ ವಿಳಂಬಕ್ಕೆ ಕಾರಣವೇನು..?
ಜೀನೋಮ್ ಸೀಕ್ವೆನ್ಸಿಂಗ್ ನಿಧಾನಗತಿಗೆ ಒಂದು ಪ್ರಮುಖ ಕಾರಣವೆಂದರೆ ಹಣದ ಕೊರತೆ. ಇಲ್ಲಿಯವರೆಗೆ, INSACOG ಗಾಗಿ ಯಾವುದೇ ಹಣವನ್ನು ಹಂಚಿಕೆ ಮಾಡಿಲ್ಲ. ಪ್ರಯೋಗಾಲಯಗಳು ತಮ್ಮದೇ ಆದ ವಾರ್ಷಿಕ ಬಜೆಟ್‌ನಿಂದ ಹಣವನ್ನು ಬಳಸುತ್ತಿದ್ದು, ಒಂದು ಮಾದರಿಯ ಜೀನ್ ಸೀಕ್ವೆನ್ಸಿಂಗ್‌ ಮಾಡಲು 3,000 ರಿಂದ 5,000 ರೂ. ವೆಚ್ಚ ತಗುಲುತ್ತದೆ.

ಅಲ್ಲದೆ, ರಾಜ್ಯಗಳು ಸಹ ತಮ್ಮ ಮಾದರಿಗಳನ್ನು ಸೀಕ್ವೆನ್ಸ್ ಮಾಡಲು ಪ್ರಯೋಗಾಲಯಗಳಿಗೆ ಕಳುಹಿಸುತ್ತಿಲ್ಲ. ಮಹಾರಾಷ್ಟ್ರದಲ್ಲಿ ಈವರೆಗೆ 25 ಲಕ್ಷಕ್ಕೂ ಹೆಚ್ಚು ಸೋಂಕಿತರು ಕಂಡುಬಂದಿದ್ದು, ಈ ಪೈಕಿ ಸುಮಾರು 2,800 ಮಾದರಿಗಳನ್ನು ಮಾತ್ರ ಕಳುಹಿಸಿದೆ. ಅಲ್ಲದೆ, ಕರ್ನಾಟಕ ಕೇವಲ 137 ಮಾದರಿಗಳನ್ನು ಕಳುಹಿಸಿದೆ ಎಂದು ಸರ್ಕಾರದ ಅಂಕಿ ಅಂಶಗಳು ಬಹಿರಂಗಪಡಿಸಿವೆ. ಈ ಪ್ರಕ್ರಿಯೆ ವೇಗ ಪಡೆದುಕೊಂಡರೆ ಮಾತ್ರ ಪ್ರಸ್ತುತ ಕೊರೊನಾ ಸೋಂಕಿನ ಪ್ರಕರಣಗಳ ಏರಿಕೆಗೆ ನಿಜವಾದ ಹಾಗೂ ಸರಿಯಾದ ಕಾರಣ ತಿಳಿದುಬರುತ್ತದೆ.
Published by: Sushma Chakre
First published: March 27, 2021, 3:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories