ಇಟಲಿಯ ನಗರಗಳು ಮತ್ತು ಪಟ್ಟಣಗಳಾ ಡೇಟಾವನ್ನು ವಿಶ್ಲೇಷಿಸಿದಾಗ ಕೋವಿಡ್ -19 ಗೆ ಕಾರಣವಾಗುವ ವೈರಸ್ SARS-CoV-2 ಸೋಂಕಿನ 9 ತಿಂಗಳವರೆಗೂ, ರೋಗಲಕ್ಷಣಗಳೊಂದಿಗೆ ಅಥವಾ ರೋಗಲಕ್ಷಣರಹಿತವಾಗಿ, ಪ್ರತಿಕಾಯದ ಮಟ್ಟಗಳು ಅಧಿಕವಾಗಿರುತ್ತವೆ ಎಂದು ಸೋಮವಾರ ಪ್ರಕಟವಾದ ಅಧ್ಯಯನದ ಪ್ರಕಾರ ತಿಳಿದುಬಂದಿದೆ. ಕಳೆದ ವರ್ಷ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ, ಇಟಲಿಯ ಪಡುವಾ ವಿಶ್ವವಿದ್ಯಾಲಯ ಮತ್ತು ಯುನೈಟೆಡ್ ಕಿಂಗ್‌ಡಂನ ಲಂಡನ್‌ನ ಇಂಪೀರಿಯಲ್ ಕಾಲೇಜ್‌ನ ಸಂಶೋಧಕರು ಇಟಲಿಯ ವೊ ಎಂಬ ಪ್ರದೇಶದ 3,000 ನಿವಾಸಿಗಳಲ್ಲಿ 85% ಕ್ಕಿಂತ ಹೆಚ್ಚು ಜನರನ್ನು SARS-CoV-2 ಸೋಂಕು ಕೋವಿಡ್-19 ಗಾಗಿ ಪರೀಕ್ಷಿಸಿದ್ದಾರೆ.ನಂತರ ವೈರಸ್ ಪ್ರತಿಕಾಯಗಳನ್ನು ತಿಳಿದುಕೊಳ್ಳಲು ಮೇ ಮತ್ತು ನವೆಂಬರ್ 2020 ರಲ್ಲಿ ಮತ್ತೆ ಪರೀಕ್ಷಿಸಿದರು. ಈ ಪರೀಕ್ಷೆಯ ಫಲಿತಾಂಶದಿಂದ ಕೋವಿಡ್-19 ಪ್ರತಿಕಾಯಗಳು ಸೋಂಕಿನ ನಂತರ 9 ತಿಂಗಳವರೆಗೆ ಮಾತ್ರ ಇರುತ್ತವೆ ಎಂದು ತಿಳಿದುಬಂದಿದೆ.
ನೇಚರ್ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಸೋಂಕಿತ ಜನರಲ್ಲಿ 98.8% ಜನರನ್ನು ಮತ್ತೆ ನವೆಂಬರ್‌ನಲ್ಲಿ ಪರೀಕ್ಷೆಮಾಡಲಾಯಿತು ಆ ವೇಳೆ ಪ್ರತಿಕಾಯದ ಮಟ್ಟ ಅಧಿಕವಾಗಿರುವ ಸಂಗತಿ ತಿಳಿದುಬಂದಿದೆ. ಕೋವಿಡ್-19 ನ ರೋಗಲಕ್ಷಣಗಳನ್ನು ಹೊಂದಿದ ರೋಗಿಗಳ ಮತ್ತು ರೋಗಲಕ್ಷಣವಿಲ್ಲದ ರೋಗಿಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಫಲಿತಾಂಶಗಳು ತೋರಿಸುತ್ತವೆ.ಹಾಗೂ "ರೋಗಲಕ್ಷಣ ಮತ್ತು ಲಕ್ಷಣರಹಿತ ಸೋಂಕುಗಳ ನಡುವಿನ ಪ್ರತಿಕಾಯದ ಮಟ್ಟಗಳು ಗಮನಾರ್ಹವಾಗಿ ಭಿನ್ನವಾಗಿವೆ ಎಂಬುದಕ್ಕೆ ನಮಗೆ ಯಾವುದೇ ಪುರಾವೆಗಳಿಲ್ಲ, ಇದು ರೋಗನಿರೋಧಕ ಪ್ರತಿಕ್ರಿಯೆಯ ಸಾಮರ್ಥ್ಯವು ರೋಗಲಕ್ಷಣಗಳು ಮತ್ತು ಸೋಂಕಿನ ತೀವ್ರತೆಯನ್ನು ಅವಲಂಬಿಸಿರುವುದಿಲ್ಲ ಎಂದು ಸೂಚಿಸುತ್ತದೆ" ಎಂದು ಇಂಪೀರಿಯಲ್ ಕಾಲೇಜಿನ ಅಧ್ಯಯನದ ಪ್ರಮುಖ ಲೇಖಕ ಇಲಾರಿಯಾ ಡೊರಿಗಟ್ಟಿ ಹೇಳಿದ್ದಾರೆ. "ಆದರೆ, ನಾವು ಮಾಡುವ ಪರೀಕ್ಷೆಯ ಕಾರಣದಿಂದ ಪ್ರತಿಕಾಯದ ಮಟ್ಟಗಳು ಕೆಲವೊಮ್ಮೆ ಗಮನಾರ್ಹವಾಗಿ ಬದಲಾಗಬಹುದು ಎಂದು ನಮ್ಮ ಸಂಶೋಧನೆಯು ತೋರಿಸುತ್ತದೆ" ಎಂದು ಡೊರಿಗಟ್ಟಿ ಹೇಳಿದರು
ವೈರಸ್‌ನ ವಿವಿಧ ಭಾಗಗಳಿಗೆ ಪ್ರತಿಕ್ರಿಯಿಸುವ ವಿಭಿನ್ನ ರೀತಿಯ ಪ್ರತಿಕಾಯಗಳನ್ನು ಪತ್ತೆ ಮಾಡುವ ಪ್ರತಿಕಾಯ ಮಟ್ಟ-ಪರೀಕ್ಷೆಗಳನ್ನು ಪತ್ತೆಹಚ್ಚಲು ಮೂರು ಮೌಲ್ಯಮಾಪನಗಳನ್ನು ಬಳಸಲಾಗುತ್ತದೆ. ಎಲ್ಲಾ ಪ್ರತಿಕಾಯ ಪ್ರಕಾರಗಳು ಮೇ ಹಾಗೂ ನವೆಂಬರ್‌ನಲ್ಲಿ ಸ್ವಲ್ಪ ಮಟ್ಟಿಗಿನ ಕುಸಿತವನ್ನು ತೋರಿಸಿದರೂ ವಿಶ್ಲೇಷಣೆಯನ್ನು ಆಧರಿಸಿ ನಶಿಸುವಿಕೆಯ ಪ್ರಮಾಣ ವಿಭಿನ್ನವಾಗಿರುತ್ತದೆ ಎಂಬುದು ತಿಳಿದು ಬಂದಿದೆ.
ಪ್ರತಿಕಾಯಗಳ ಮಟ್ಟದ ಪ್ರಕರಣಗಳಲ್ಲಿನ ಕೆಲವರಲ್ಲಿ ಹೆಚ್ಚುತ್ತಿರುವ ವೈರಸ್ ಸಂಭಾವ್ಯ ಮರು ಸೋಂಕಿಗೆ ಕಾರಣವಾಗಬಹುದು ಹಾಗೂ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು ಎಂದು ಅಧ್ಯಯನದ ತಂಡವು ತಿಳಿಸಿದೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಪಡೆದ ಜನಸಂಖ್ಯೆಯಲ್ಲಿ ಸೋಂಕಿನ ಮಟ್ಟಗಳ ಅಂದಾಜುಗಳನ್ನು ವಿಭಿನ್ನ ಪರೀಕ್ಷೆಗಳೊಂದಿಗೆ ಮತ್ತು ವಿಭಿನ್ನ ಸಮಯಗಳೊಂದಿಗೆ ಹೋಲಿಸಿದಾಗ ನಾವು ಎಚ್ಚರಿಕೆಯಿಂದ ಇರಬೇಕು ಎಂದು ಸಂಶೋಧನೆಗಳು ಸೂಚಿಸುತ್ತವೆ. "ಆದರೆ, ಏಕಾಏಕಿ ಸುಮಾರು ಒಂಭತ್ತು ತಿಂಗಳ ನಂತರ ನಡೆಸಿದ ಅನುಸರಣೆಯ ಸಮಯದಲ್ಲಿ, ಕಡಿಮೆ ಪ್ರತಿಕಾಯಗಳಿವೆ ಎಂದು ನಾವು ಕಂಡುಕೊಂಡಿದ್ದೇವೆ, ಆದ್ದರಿಂದ ಪ್ರತಿಕಾಯಗಳ ನಿರಂತರತೆಯನ್ನು ನಾವು ದೀರ್ಘಕಾಲದವರೆಗೆ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಬೇಕಾಗಿದೆ" ಎಂದು ಲ್ಯಾವೆ ಹೇಳಿದ್ದಾರೆ. SARS-CoV-2 ಸೋಂಕಿತ ವ್ಯಕ್ತಿಯು ಕುಟುಂಬ ಸದಸ್ಯರಿಗೆ ಸೋಂಕನ್ನು ಹರಡುವ ಸಾಧ್ಯತೆಯ ಕಾಲು ಭಾಗದಷ್ಟು ಹೆಚ್ಚು ಎಂದು ಅವರು ತಿಳಿಸಿದ್ದಾರೆ, ಮತ್ತು ಹೆಚ್ಚಿನ ಸಂವಹನ (79%) 20% ಸೋಂಕುಗಳಿಂದ ಉಂಟಾಗುತ್ತದೆ ಎಂದು ಹೇಳಿದ್ದಾರೆ.
ಹೆಚ್ಚಿನ ಸೋಂಕುಗಳು ಮತ್ತಷ್ಟು ಸೋಂಕುಗಳನ್ನು ಉಂಟುಮಾಡುವುದಿಲ್ಲ ಎಂದು ಈ ಸಂಶೋಧನೆಯು ದೃಡಪಡಿಸಿದೆ ಮತ್ತು ಕೆಲವು ಸೋಂಕುಗಳು ಹೆಚ್ಚಿನ ಸಂಖ್ಯೆಯ ಸೋಂಕುಗಳಿಗೆ ಕಾರಣವಾಗುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ. ಲಸಿಕೆ ಹಾಕಿದ ಜನರಲ್ಲಿ ಸಹ, ರೋಗಗಳ ಹರಡುವಿಕೆಯ ಅಪಾಯವನ್ನು ಕಡಿಮೆ ಮಾಡಲು ದೈಹಿಕ ಅಂತರವನ್ನು ಕಾಪಾಡುವುದು, ಸಂಪರ್ಕಗಳ ಸಂಖ್ಯೆಯನ್ನು ಸೀಮಿತಗೊಳಿಸುವುದು ಮತ್ತು ಮಾಸ್ಕ್ ಧರಿಸುವುದು ಇನ್ನೂ ಮುಖ್ಯವಾಗಿದೆ ಎಂದು ಅಧ್ಯಯನಗಳು ತಿಳಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ