HOME » NEWS » Explained » COVID 19 ALL YOU NEED TO KNOW ABOUT PREGNANCY AND BREASTFEEDING DURING CORONAVIRUS STG LG

Explained: ಕೋವಿಡ್ ಸಂದರ್ಭದಲ್ಲಿ, ಗರ್ಭಿಣಿಯರು ಮತ್ತು ತಾಯಂದಿರಿಗೆ ಇದು ಗೊತ್ತಿರಲೇಬೇಕು !

ಗರ್ಭಿಣಿಯರು ತಮಗೆ ಕೊರೋನಾ ಬಂದರೆ, ಹೊಟ್ಟೆಯಲ್ಲಿರುವ ಕಂದನಿಗೂ ಹಾನಿಯಾಗಬಹುದು ಎಂದು ಗಾಬರಿ ಪಡಬಹುದು. ಆದರೆ ಹೊಟ್ಟೆಯಲ್ಲಿರುವ ಮಗುವಿಗೆ ಕೋವಿಡ್‍ನಿಂದ ಹಾನಿಯಾಗಿರುವ ಕುರಿತು ಯಾವುದೇ ಪುರಾವೆಗಳು ಲಭ್ಯವಿಲ್ಲ.

news18-kannada
Updated:June 8, 2021, 4:35 PM IST
Explained: ಕೋವಿಡ್ ಸಂದರ್ಭದಲ್ಲಿ, ಗರ್ಭಿಣಿಯರು ಮತ್ತು ತಾಯಂದಿರಿಗೆ ಇದು ಗೊತ್ತಿರಲೇಬೇಕು !
ಸಾಂದರ್ಭಿಕ ಚಿತ್ರ
  • Share this:
ನೀವು ಗರ್ಭಿಣಿಯಾಗಿದ್ದರೆ, ಈ ಸಮಯದಲ್ಲಿ ನಿಮ್ಮ ಬಗ್ಗೆ ಮಾತ್ರವಲ್ಲ ಹೊಟ್ಟೆಯಲ್ಲಿರುವ ಪುಟ್ಟ ಕಂದಮ್ಮನ ಬಗ್ಗೆ ಕೂಡ ಅತೀ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಹಾಗೆಯೇ ಗರ್ಭಿಣಿಯರು ಮತ್ತು ನವಜಾತ ಶಿಶುವಿನ ತಾಯಂದಿರು ಕೂಡ ಕೋವಿಡ್ -19 ಮಗುವಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.

1. ಕೋವಿಡ್ -19 ಮತ್ತು ಗರ್ಭಾವಸ್ಥೆಯ ಬಗ್ಗೆ ನಿಮಗೆಷ್ಟು ತಿಳಿದಿದೆ? ಇಲ್ಲಿದೆ ಒಂದಿಷ್ಟು ಮಾಹಿತಿ.

ಕೊರೋನಾ ವೈರಸ್ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿರುವುದು ಮತ್ತು ಹೊಸ ವೈರಸ್ ಅವತರಿಣಿಕೆ ಜನರಲ್ಲಿ ಮತ್ತಷ್ಟು ಭೀತಿ ಹುಟ್ಟಿಸಿದೆ. ಇದು ನಮಗೆಲ್ಲರಿಗೂ ಗಾಬರಿ ಹುಟ್ಟಿಸುವಂತಹ ವಿಷಯವೇ. ಆದರೆ ನೀವು ಗರ್ಭಿಣಿಯಾಗಿದ್ದರೆ, ಈ ಸಮಯದಲ್ಲಿ ನಿಮ್ಮ ಬಗ್ಗೆ ಮಾತ್ರವಲ್ಲ ಹೊಟ್ಟೆಯಲ್ಲಿರುವ ಪುಟ್ಟ ಕಂದಮ್ಮನ ಬಗ್ಗೆ ಕೂಡ ಅತೀ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ನೀವು ನಿಮ್ಮನ್ನು ಮತ್ತು ಹೊಟ್ಟೆಯೊಳಗಿನ ಆ ಕಂದನನ್ನು ಸುಕ್ಷಿತವಾಗಿ ಇಡಲು ಖಂಡಿತಾ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತೀರಿ ನಿಜ. ಆದರೆ ಗರ್ಭಿಣಿಯರಲ್ಲಿ ಹೊಸ ವೈರಸ್ ಅಪಾಯಗಳು ಅನಿಶ್ಚಿತ ರೀತಿಯಲ್ಲಿ ಹೆಚ್ಚುತ್ತಿವೆ ಎಂಬುದು ಅಧ್ಯಯನಗಳು ತಿಳಿಸಿವೆ. ಹಾಗಾಗಿ, ಕೋವಿಡ್ -19 ಗರ್ಭಿಣಿಯರು, ಎದೆ ಹಾಲುಣಿಸುವಿಕೆ ಮತ್ತು ನವಜಾತ ಶಿಶುಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬ ಕುರಿತು ಪ್ರಾಥಮಿಕ ಮಾಹಿತಿಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯ.

2. ನವಜಾತ ಶಿಶು ಹೊಟ್ಟೆಯಲ್ಲಿದ್ದಾಗಲೇ ಕೊರೋನಾ ಸೋಂಕಿಗೆ ಒಳಗಾಗಿರುತ್ತದೆಯೇ?
ಗರ್ಭಾವಸ್ಥೆಯಲ್ಲಿ ನಿಮಗೆ ಕೊರೋನಾ ಬಂದಿದ್ದರೆ, ಹೊಟ್ಟೆಯಲ್ಲಿರುವ ಶಿಶು ಕೂಡ ಸೋಂಕಿಗೆ ಒಳಗಾಗುವುದು ಸಹಜ. ಆದರೆ ಇದನ್ನು ದೃಢಪಡಿಸಲು ಹೆಚ್ಚಿನ ಆಧಾರಗಳು ಲಭ್ಯವಿಲ್ಲ. ಕೊರೋನಾ ಸೋಂಕಿಗೆ ಒಳಗಾದ ಗರ್ಭಿಣಿಯರ ಹೊಟ್ಟೆಯೊಳಗಿನ ಅಮ್ನಿಯಾಟಿಕ್ ದ್ರವದಲ್ಲೂ ಕೂಡ ಕೊರೋನಾ ವೈರಸ್ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ:Unique Service: ದಪ್ಪಗಿರುವವರು ಬಾಡಿಗೆಗೆ ಬೇಕಾಗಿದ್ದಾರೆ, ಮಿನಿಮಮ್ 100 ಕೆ.ಜಿ. ಇರಲೇಬೇಕು..!

3. ಹೊಟ್ಟೆಯಲ್ಲಿರುವ ಮಗುವಿಗೆ ಕೋವಿಡ್‍ನಿಂದ ತೊಂದರೆ ಆಗಬಹುದೆ?ಗರ್ಭಿಣಿಯರು ತಮಗೆ ಕೊರೋನಾ ಬಂದರೆ, ಹೊಟ್ಟೆಯಲ್ಲಿರುವ ಕಂದನಿಗೂ ಹಾನಿಯಾಗಬಹುದು ಎಂದು ಗಾಬರಿ ಪಡಬಹುದು. ಆದರೆ ಹೊಟ್ಟೆಯಲ್ಲಿರುವ ಮಗುವಿಗೆ ಕೋವಿಡ್‍ನಿಂದ ಹಾನಿಯಾಗಿರುವ ಕುರಿತು ಯಾವುದೇ ಪುರಾವೆಗಳು ಲಭ್ಯವಿಲ್ಲ. ದ ಲ್ಯಾನ್ಸೆಟ್ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿರುವ ಎರಡು ಬೇರೆಬೇರೆ ವರದಿಗಳ ಪ್ರಕಾರ, ಹೊಟ್ಟೆಯೊಳಗಿನ ಮಗುವಿನ ಬೆಳವಣಿಗೆಗೆ ಕೊರೋನಾ ವೈರಸ್ ಅಪಾಯವನ್ನು ಉಂಟು ಮಾಡಿರುವ ಬಗ್ಗೆ ಯಾವುದೇ ಪುರಾವೆ ಸಿಕ್ಕಿಲ್ಲ. ಆದರೆ ಸಿಡಿಸಿಯ ಪ್ರಕಾರ, ಕೆಲವು ಪ್ರಕರಣಗಳಲ್ಲಿ ಅವಧಿ ಪೂರ್ವ ಜನನಗಳು ಆಗಿವೆ. ಈ ಕುರಿತು ಇನ್ನಷ್ಟು ಅಧ್ಯಯನದ ಅಗತ್ಯ ಇದೆ.

4. ಎದೆ ಹಾಲಿನ ಮೂಲಕ ಕೊರೋನಾ ಹರಡುತ್ತದೆಯೇ?
ಅಧ್ಯಯನಗಳ ಪ್ರಕಾರ, ಎದೆಹಾಲಿನಿಂದ ಕೊರೋನಾ ವೈರಸ್ ಹರಡುವುದಿಲ್ಲ. ಸಿಡಿಸಿಯ ವರದಿಯ ಪ್ರಕಾರ ಕೊರೋನಾ ಪೀಡಿತ ತಾಯಂದಿರ ಎದೆ ಹಾಲಿನಲ್ಲಿ ಇದುವರೆಗೆ ವೈರಸ್‍ನ ಇರುವಿಕೆ ಕಂಡು ಬಂದಿಲ್ಲ. ಹಾಗಾಗಿ ಕೊರೋನಾ ಪೀಡಿತ ತಾಯಂದಿರು ಎದೆ ಹಾಲುಣಿಸಲು ಯಾವುದೇ ಅಡ್ಡಿ ಇಲ್ಲ. ಎದೆಹಾಲಿನ ಮೂಲಕ ಮಗುವಿಗೆ ಕೊರೋನಾ ಹರಡದಿದ್ದರೂ, ತಾಯಂದಿರ ಉಸಿರಿನ ಮೂಲಕ ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಚ್ಚರಿಕೆ ಅಗತ್ಯ. ಕೊರೋನಾ ರೋಗಿ ತಾಯಂದಿರು ಕಂದನಿಗೆ ಹಾಲುಣಿಸುವಾಗ ಚೆನ್ನಾಗಿ ಕೈ ತೊಳೆದುಕೊಳ್ಳಬೇಕು ಮತ್ತು ಮಾಸ್ಕ್ ಧರಿಸಬೇಕು.

ಇದನ್ನೂ ಓದಿ:ಮೆಡಿಕಲ್​, ಎಂಜಿನಿಯರಿಂಗ್​ ಕೋರ್ಸ್​​​​ಗೆ CET ಅಂಕ ಮಾತ್ರ ಪರಿಗಣನೆ; ಪರೀಕ್ಷೆ ದಿನಾಂಕ ಘೋಷಣೆ

5. ನವಜಾತ ಶಿಶುವನ್ನು ಸುರಕ್ಷಿತವಾಗಿ ಇಡುವುದು ಹೇಗೆ?
ನವಜಾತ ಶಿಶುಗಳಲ್ಲಿ ರೋಗನಿರೋಧಕ ವ್ಯವಸ್ಥೆ ಪ್ರಬಲವಾಗಿರುವುದಿಲ್ಲ ಮತ್ತು ಅಭಿವೃದ್ಧಿ ಹೊಂದಿರುವುದಿಲ್ಲ. ಹಾಗಾಗಿ ಈ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಮಗುವಿನ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಗತ್ಯ. ನಿಮಗೆ ಕೊರೋನಾ ಇಲ್ಲದಿದ್ದರೂ, ಮನೆಯ ಹೊರಗಿನ ಜನರಿಂದ ಮಗುವನ್ನು ದೂರವಿಡಿ, ಮಗುವಿನ ಸುತ್ತಮುತ್ತಲಿನ ಸ್ಥಳವನ್ನು ಸದಾ ಸ್ವಚ್ಛವಾಗಿಡಿ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: Latha CG
First published: June 8, 2021, 4:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories