Cheapest Countries: ಅಮೆರಿಕನ್ನರು ದೇಶ ತೊರೆದರೆ ಬೇರೆ ಎಲ್ಲಿಗೆ ಹೋಗಬಹುದು? ಇಲ್ಲಿದೆ ರಿಪೋರ್ಟ್

ಅಮೆರಿಕನ್ನರು ಈಗ ತಾವು ವಾಸಿಸುವ ಸ್ಥಳವನ್ನೇ ಬದಲಾಯಿಸುವುದಕ್ಕೆ ಸಂಬಂಧಿಸಿದಂತೆ ಹೆಚ್ಚು ಇಚ್ಛೆಯನ್ನು ವ್ಯಕ್ತಪಡಿಸಿದ್ದು ಉತ್ತಮ ಹಾಗೂ ಗುಣಮಟ್ಟದ ಜೀವನಶೈಲಿಯೊಂದಿಗೆ ಅಗ್ಗತನವೂ ಇರುವ ಸ್ಥಳಗಳನ್ನು ತಮ್ಮ ಮುಂದಿನ ವಾಸ ಸ್ಥಳಗಳನ್ನಾಗಿ ಆಯ್ಕೆ ಮಾಡಿಕೊಳ್ಳಲು ಹೆಚ್ಚು ಒಲವು ತೋರುತ್ತಿದ್ದಾರಂತೆ! ಹೆಚ್ಚಿನ ಅಮೆರಿಕನ್ನರು ಅಮೆರಿಕದಲ್ಲೇ ಇತರೆ ಕಡೆ ವಾಸಿಸಲು ಬಯಸಿದ್ದರೂ ಕೆಲವು ಅಮೆರಿಕನ್ನರು ಬೇರೆ ದೇಶಗಳಿಗೆ ತೆರಳುವ ಆಲೋಚನೆಯಲ್ಲೂ ಇದ್ದಾರೆನ್ನಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
ಇಂದಿನ ಜಗತ್ತಿನಲ್ಲಿ ಈಗ ಹಲವು ಬದಲಾವಣೆಗಳಾಗಿವೆ. ಅದರಲ್ಲೂ ಕೋವಿಡ್ (COVID) ನಂತರ ಕೆಲಸಕ್ಕೆಂದು ಕಚೇರಿಗಳಿಗೆ (Office) ಹೋಗುವ ರೂಢಿ ಹೆಚ್ಚು ಕಡಿಮೆ ತಪ್ಪಿದಂತೆಯೇ ಆಗಿದೆ, ಕಾರಣ ಬಹುತೇಕ ಕಂಪನಿಗಳು (Company) ಈಗ ರಿಮೋಟ್ ಅಥವಾ ವಾರದಲ್ಲೊಂದೆರಡು ಬಾರಿ ಮಾತ್ರ ಕಚೇರಿಗೆ ಬಂದು ಕೆಲಸ ನಿರ್ವಹಿಸುವಂತಹ ಹೊಸ ಕ್ರಮಗಳಿಗೆ ಹೆಚ್ಚು ಅಂಟಿಕೊಂಡಿವೆ. ಹೀಗೆ ಮನೆಯಿಂದಲೇ ಕಚೇರಿ ಕೆಲಸ ಮಾಡುವಂತಹ ಪರಿಪಾಠ ಹಲವರಿಗೆ ಇಷ್ಟವಾಗಿದ್ದರೆ ಕೆಲವರಿಗೆ ಇದು ಇಷ್ಟವೇ ಅಗುತ್ತಿಲ್ಲ. ಈ ವಿಚಾರವನ್ನು ಪರಿಗಣಿಸಿ ಇತ್ತೀಚೆಗೆ ಅಮೆರಿಕದಲ್ಲಿ (America) ಸಮೀಕ್ಷೆಯೊಂದನ್ನು ನಡೆಸಲಾಯಿತು. ಅದರಲ್ಲಿ ಒಟ್ಟು 23,000 ಜನರನ್ನು ಸಮೀಕ್ಷೆ ಮಾಡಲಾಯಿತು. ಸಮೀಕ್ಷೆಯ (Survey) ವರದಿಯ ಪ್ರಕಾರ, 28% ರಷ್ಟು ಅಮೆರಿಕನ್ನರು ಕನಿಷ್ಠ ನಾಲ್ಕು ಗಂಟೆಗಳಾದರೂ ಮನೆಯಿಂದಾಚೆ ಇರುವಿಕೆಯನ್ನು ಬಯಸುವುದಾಗಿ ಪ್ರತಿಕ್ರಿಯಿಸಿದ್ದಾರೆಂದು ತಿಳಿದುಬಂದಿದೆ.

ಅಮೆರಿಕನ್ನರು ವಾಸ ಸ್ಥಳವನ್ನು ಬದಲಾಯಿಸುವುದಕ್ಕೆ ಕಾರಣವೇನು?
ಒಟ್ಟಿನಲ್ಲಿ ಸಾಕಷ್ಟು ಅಮೆರಿಕನ್ನರು ಈಗ ತಾವು ವಾಸಿಸುವ ಸ್ಥಳವನ್ನೇ ಬದಲಾಯಿಸುವುದಕ್ಕೆ ಸಂಬಂಧಿಸಿದಂತೆ ಹೆಚ್ಚು ಇಚ್ಛೆಯನ್ನು ವ್ಯಕ್ತಪಡಿಸಿದ್ದು ಉತ್ತಮ/ಗುಣಮಟ್ಟದ ಜೀವನಶೈಲಿಯೊಂದಿಗೆ ಅಗ್ಗತನವೂ ಇರುವ ಸ್ಥಳಗಳನ್ನು ತಮ್ಮ ಮುಂದಿನ ಆವಾಸ ಸ್ಥಳಗಳನ್ನಾಗಿ ಆಯ್ಕೆ ಮಾಡಿಕೊಳ್ಳಲು ಹೆಚ್ಚು ಒಲವು ತೋರುತ್ತಿದ್ದಾರೆಂದು ತಿಳಿದುಬಂದಿದೆ. ಹೆಚ್ಚಿನ ಅಮೆರಿಕನ್ನರು ಅಮೆರಿಕದಲ್ಲೇ ಇತರೆ ಕಡೆ ವಾಸಿಸಲು ಬಯಸಿದ್ದರೂ ಕೆಲವು ಅಮೆರಿಕನ್ನರು ಬೇರೆ ದೇಶಗಳಿಗೆ ತೆರಳುವ ಆಲೋಚನೆಯಲ್ಲೂ ಇದ್ದಾರೆನ್ನಲಾಗಿದೆ.

ಈ ಬಗ್ಗೆ ಇನ್ಸೈಡರ್ ನಿಯತಕಾಲಿಕವು ಅಮೆರಿಕನ್ನರು ಬೇರೆ ಬೇರೆ ಯಾವ ದೇಶಗಳಲ್ಲಿ ತಮ್ಮನ್ನು ತಾವು ಆರಾಮದಾಯಕವಾಗಿ ಇರಿಸಿಕೊಂಡು ಜೀವಿಸಬಹುದು ಹಾಗೂ ಅದಕ್ಕೆ ಸಂಬಂಧಿಸಿದಂತೆ ಮಿತವ್ಯಯಕಾರಿ ಹಾಗೂ ಗುಣಮಟ್ಟದ ಜೀವನಶೈಲಿಯನ್ನು ಅವರು ಎಲ್ಲಿ ಪಡೆಯಬಹುದು ಎಂಬುದರ ಬಗ್ಗೆ ದೇಶಗಳ ಪಟ್ಟಿಯನ್ನು ತಯಾರಿಸಿದೆ. ಹಾಗಾದರೆ, ಈ ಲೇಖನದಲ್ಲಿ ಆ ಬಗ್ಗೆ ತಿಳಿಯೋಣ.

1. ಐರ್ಲ್ಯಾಂಡ್


 • ಗೃಹ ಬೆಲೆ-ಆದಾಯ ಅನುಪಾತ : 93.853

 • ಹ್ಯುಮನ್ ಡೆವೆಲಪ್ಮೆಂಟ್ ಇಂಡೆಕ್ಸ್ : 0.955

 • 2BHK ಫ್ಲ್ಯಾಟಿನ ಸರಾಸರಿ ಬೆಲೆ (USD) : 237,913.97


ಎಮರಾಲ್ಡ್ ಐಸಲ್ ಎಂದು ಕರೆಯಲ್ಪಡುವ ದೇಶ ಜೀವನವೆಚ್ಚ ಹಾಗೂ ಜೀವನಶೈಲಿಗೆ ಸಂಬಂಧಿಸಿದಂತೆ ವಾಸ ಮಾಡಲು ಪರಿಗಣಿಸಬಹುದಾದ ಪಟ್ಟಿಯಲ್ಲಿ ಒಂದನೇ ಸ್ಥಾನದಲ್ಲಿದೆ. ವಿಶಿಷ್ಟ ಆಚರಣೆಗಳು, ಪ್ರಾಕೃತಿಕ ಸೌಂದರ್ಯ, ಶಾಂತ ಪರಿಸರ, ಆಧುನಿಕತೆಯಲ್ಲೂ ಸಾಂಪ್ರದಾಯಕತೆ ಇವೆಲ್ಲವೂ ಸೇರಿ ಈ ದೇಶವನ್ನು ಸುಂದರ ವಾಸಯೋಗ್ಯ ತಾಣವಾಗಿ ರೂಪಿಸಿವೆ. ರೈಟರ್ಸ್ ವರದಿ ಮಾಡಿರುವಂತೆ ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮ ಕೊಂಚ ಬಳಲುತ್ತಿದೆಯಾದರೂ ಬೇಗನೆ ಚೇತರಿಕೊಳ್ಳಲಿದೆ ಎನ್ನಲಾಗಿದೆ.

2. ಭಾರತ 

 • ಗೃಹ ಬೆಲೆ-ಆದಾಯ ಅನುಪಾತ : 87.175

 • ಹ್ಯುಮನ್ ಡೆವೆಲಪ್ಮೆಂಟ್ ಇಂಡೆಕ್ಸ್ : 0.645

 • 2BHK ಫ್ಲ್ಯಾಟಿನ ಸರಾಸರಿ ಬೆಲೆ : 85,539.21


ಕೆಲ ಅಮೆರಿಕನ್ನರಿಗೆ ಭಾರತ ವಾಸಿಸಲು ಸಾಕಷ್ಟು ಆಕರ್ಷಣೀಯ ದೇಶವಾಗಿ ಕಾಣಬಹುದು. ಭಾರತಕ್ಕಿಂತ ಅಮೆರಿಕದಲ್ಲಿ ವಾಸಿಸುವುದು ದುಬಾರಿಯಾಗಬಹುದಾದರೂ ಭಾರತದ ಕೆಲವು ನಗರಗಳಲ್ಲಿ ವಾಸಿಸುವುದು ವಿದೇಶಿಗರಿಗೂ ಅಷ್ಟೊಂದು ಅಗ್ಗವೆಂದೇನಿಲ್ಲ. ಹಾಗಾಗಿ ಭಾರತಕ್ಕೆ ಬರುವ ಆಲೋಚನೆ ಹೊಂದಿರುವ ಅಮೆರಿಕನ್ನರಾಗಲಿ ಅಥವಾ ಇತರೆ ದೇಶದವರಾಗಲಿ ತಮ್ಮ ಅವಶ್ಯಕತೆಗಳೇನು ಹಾಗೂ ಇಲ್ಲಿ ಯಾವ ರೀತಿಯ ವಿಸಾ ದೊರೆಯುತ್ತದೆ ಎಂಬುದನ್ನು ತಿಳಿದುಕೊಂಡು ಬರುವುದು ಒಳಿತು.

3. ಬೆಲ್ಜಿಯಮ್ 

 • ಗೃಹ ಬೆಲೆ-ಆದಾಯ ಅನುಪಾತ : 108.263

 • ಹ್ಯುಮನ್ ಡೆವೆಲಪ್ಮೆಂಟ್ ಇಂಡೆಕ್ಸ್ : 0.931

 • 2BHK ಫ್ಲ್ಯಾಟಿನ ಸರಾಸರಿ ಬೆಲೆ : 201,582.28


ಇದನ್ನೂ ಓದಿ:   Work From Home: ಹೊಸ ನಿಯಮ ಜಾರಿಗೆ ತಂದ ಕೇಂದ್ರ; ಯಾರಿಗೆ ಹೆಚ್ಚು ಲಾಭ?

11 ಮಿಲಿಯನ್ ಜನಸಂಖ್ಯೆಯುಳ್ಳ ಬೆಲ್ಜಿಯಮ್ ಒಂದು ಯುರೋಪ್ ಖಂಡದ ದೇಶವಾಗಿದೆ. ಲಿಂಗ ತಾರತಮ್ಯ ಹೊಂದಿಲ್ಲದ ಅಗ್ರಗಣ್ಯ ದೇಶಗಳಲ್ಲಿ ಒಂದಾಗಿರುವ ಬೆಲ್ಜಿಯಮ್ ನಲ್ಲಿ ಸಮಾನತೆ ಎಂಬುದು ಪ್ರಬಲವಾಗಿ ನೆಲೆಯೂರಿದೆ. ಅಲ್ಲದೆ, ಈ ದೇಶವು ವಾರದಲ್ಲಿ ನಾಲ್ಕು ದಿನಗಳ ಕೆಲಸದ ರೂಢಿಗೆ ಅನುಮೋದನೆ ನೀಡಿರುವುದರಿಂದ ಬಹಳಷ್ಟು ಅಮೆರಿಕನ್ನರಿಗೆ ಇದೊಂದು ನೆಚ್ಚಿನ ದೇಶವಾಗಿಯೂ ಕಾಣಬಹುದು.

ಇಲ್ಲಿನ ರಿಯಲ್ ಎಸ್ಟೇಟ್ ಸಾಕಷ್ಟು ಸದೃಢವಾಗಿದ್ದು ಕೋವಿಡ್ ಬಿಕ್ಕಟ್ಟಿನ ಸಮಯದಲ್ಲೂ ತನ್ನನ್ನು ತಾನು ನಿಯಂತ್ರಣದಲ್ಲಿರಿಸಿಕೊಂಡಿತ್ತು. ಒಟ್ಟಿನಲ್ಲಿ ಇದು ವಾಸಯೋಗ್ಯ ಉತ್ತಮ ದೇಶವಾಗಿ ಅಮೆರಿಕನ್ನರಿಗೆ ಗೋಚರಿಸಬಹುದು. ಹಾಗಾಗಿ ಈ ದೇಶಕ್ಕೆ ಬರುವ ಆಲೋಚನೆ ಹೊಂದಿರುವ ಅಮೆರಿಕನ್ನರಾಗಲಿ ಅಥವಾ ಇತರೆ ದೇಶದವರಾಗಲಿ ತಮ್ಮ ಅವಶ್ಯಕತೆಗಳೇನು ಹಾಗೂ ಇಲ್ಲಿ ಯಾವ ರೀತಿಯ ವಿಸಾ ದೊರೆಯುತ್ತದೆ ಎಂಬುದನ್ನು ತಿಳಿದುಕೊಂಡು ಬರುವುದು ಒಳಿತು.

4. ಬಲ್ಗೇರಿಯಾ

 • ಗೃಹ ಬೆಲೆ-ಆದಾಯ ಅನುಪಾತ : 99.113

 • ಹ್ಯುಮನ್ ಡೆವೆಲಪ್ಮೆಂಟ್ ಇಂಡೆಕ್ಸ್ : 0.816

 • 2BHK ಫ್ಲ್ಯಾಟಿನ ಸರಾಸರಿ ಬೆಲೆ : 92,587.21


ಕೆಲ ಸಮೀಕ್ಷೆಗಳಲ್ಲಿ ಈ ದೇಶವನ್ನು ನಿವೃತ್ತಿ ಪಡೆದು ಜೀವಿಸಲು ಯೋಗ್ಯವಾದ ಅಗ್ಗದ ಎರಡನೇ ದೇಶ ಎಂಬ ಹೆಗ್ಗಳಿಕೆ ದೊರೆತಿದೆ. ಕಪ್ಪು ಸಮುದ್ರ ಕರಾವಳಿ ತೀರವನ್ನು ಹೊಂದಿರುವ ಬಲ್ಗೇರಿಯಾ ದೇಶವು ನಿಜಕ್ಕೂ ಅಮೆರಿಕನ್ನರಿಗೆ ವಾಸ ಮಾಡಲು ಸಾಕಷ್ಟು ಯೋಗ್ಯಕರವಾಗಿದೆ ಅಂತಾನೇ ಹೇಳಬಹುದು. ಅಮೆರಿಕಕ್ಕಿಂತ ಬಹುಮಟ್ಟಿನಷ್ಟು ಅಗ್ಗಕರವಾಗಿರುವ ಇಲ್ಲಿನ ವಾಸ, ಖಂಡಿತ ಅಮೆರಿಕನ್ನರಿಗೆ ಇಲ್ಲಿಗೆ ಬರಲು ಪ್ರೇರೇಪಿಸಬಹುದು.

5.ಬ್ರೆಜಿಲ್

 • ಗೃಹ ಬೆಲೆ-ಆದಾಯ ಅನುಪಾತ : 84.141

 • ಹ್ಯುಮನ್ ಡೆವೆಲಪ್ಮೆಂಟ್ ಇಂಡೆಕ್ಸ್ : 0.765

 • 2BHK ಫ್ಲ್ಯಾಟಿನ ಸರಾಸರಿ ಬೆಲೆ (USD) :97,275.17


ದಕ್ಷಿಣ ಅಮೆರಿಕದಲ್ಲಿರುವ ಬ್ರೆಜಿಲ್ ಅಪಾರ ಜನಸಂಖ್ಯೆಯುಳ್ಳ ರಾಷ್ಟ್ರವಾಗಿದೆ. ಸಾಕಷ್ಟು ಪ್ರಕೃತಿ ಸೌಂದರ್ಯ ಹಾಗೂ ಡಿಜಿಟಲ್ ವಾತಾವರಣವನ್ನು ಸಹ ಹೊಂದಿರುವ ಬ್ರೆಜಿಲ್ ಹಲವು ಅಮೆರಿಕನ್ನರಿಗೆ ಆಕರ್ಷಕವಾಗಿ ಕಾಣಬಹುದು. ಈ ದೇಶ ನೀಡುವ ಡಿಜಿಟಲ್ ನೊಮಾಡ್ ವಿಸಾ ಸಹ ಕೆಲವು ಅಮೆರಿಕನ್ನರಿಗೆ ಇಲ್ಲಿಗೆ ಬಂದು ನೆಲೆಸಲು ಪ್ರೇರೇಪಿಸಬಹುದು.

6. ಇಂಡೊನೇಷಿಯಾ

 • ಗೃಹ ಬೆಲೆ-ಆದಾಯ ಅನುಪಾತ : 84.887

 • ಹ್ಯುಮನ್ ಡೆವೆಲಪ್ಮೆಂಟ್ ಇಂಡೆಕ್ಸ್ : 0.718

 • 2BHK ಫ್ಲ್ಯಾಟಿನ ಸರಾಸರಿ ಬೆಲೆ (USD) :87,893.62


ಇದನ್ನೂ ಓದಿ: GDP Growth: ಜಿಡಿಪಿಯಲ್ಲಿ ಚೀನಾವನ್ನೂ ಹಿಂದಿಕ್ಕಿದ ಭಾರತ! ಡ್ರ್ಯಾಗನ್ ರಾಷ್ಟ್ರಕ್ಕೆ ಶುರುವಾಯ್ತು ಭಯ

ಫಾರ್ಚ್ಯೂನ್ ಎಂಬ ನಿಯತಕಾಲಿಕವು ಈಗಾಗಲೇ ಇಂಡೊನೇಷಿಯಾ ದೇಶವನ್ನು ವಲಸಿಗರು ವಾಸಿಸಲು ಯೋಗ್ಯವಾದ ಎರಡನೇ ಉತ್ತಮ ದೇಶ ಎಂಬ ಮನ್ನಣೆ ನೀಡಿದೆ. ಇಲ್ಲಿ ನೆಲೆಸಿರುವ ಹಲವು ವಲಸಿಗರು ಇಲ್ಲಿನ ಜೀವನವೆಚ್ಚದ ಬಗ್ಗೆ ಸಕಾರಾತ್ಮಕ ಭಾವನೆ ಹೊಂದಿದ್ದಾರೆ. ಹಾಗಾಗಿ, ಜೀವನವೆಚ್ಚಕ್ಕೆ ಸಂಬಂಧಿಸಿದಂತೆ ಅಮೆರಿಕನ್ನರಿಗೆ ಇದು ನೆಚ್ಚಿನ ದೇಶವಾಗಿ ಹೊರಹೊಮ್ಮಬಹುದು.

7. ಫಿನ್ಲ್ಯಾಂಡ್

 • ಗೃಹ ಬೆಲೆ-ಆದಾಯ ಅನುಪಾತ : 96.168

 • ಹ್ಯುಮನ್ ಡೆವೆಲಪ್ಮೆಂಟ್ ಇಂಡೆಕ್ಸ್ : 0.938

 • 2BHK ಫ್ಲ್ಯಾಟಿನ ಸರಾಸರಿ ಬೆಲೆ (USD) : 270,699.66


ನಿಮಗೆಲ್ಲ ಗೊತ್ತಿರುವ ಹಾಗೆ ಫಿನ್ಲ್ಯಾಂಡ್ ಅನ್ನು ಜಗತ್ತಿನಲ್ಲೇ ಅತಿ ಸಂತಸದ ದೇಶ ಎಂದು ಕರೆಯಲಾಗುತ್ತದೆ. ಇಲ್ಲಿ ಅಪರಾಧ ಕೃತ್ಯಗಳು ಅತ್ಯಂತ ಕಡಿಮೆ ಹಾಗೂ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲೂ ಅತಿ ಅಗ್ರಗಣ್ಯ ಕ್ರಮಾಂಕ ಹೊಂದಿದೆ ಈ ದೇಶ. ಇನ್ನು ಅಮೆರಿಕಕ್ಕೆ ಹೋಲಿಸಿದರೆ ಜೀವನವೆಚ್ಚ ಕಡಿಮೆಯೇ ಇರುವುದರಿಂದ ವಲಸಿಗ ಅಮೆರಿಕನ್ನರು ನೆಲೆಸಲು ಪರಿಗಣಿಸಬಹುದಾದ ನೆಚ್ಚಿನ ದೇಶ ಇದಾಗಿದೆ.

8. ಉತ್ತರ ಮೆಸೆಡೋನಿಯಾ

 • ಗೃಹ ಬೆಲೆ-ಆದಾಯ ಅನುಪಾತ : 88.021

 • ಹ್ಯುಮನ್ ಡೆವೆಲಪ್ಮೆಂಟ್ ಇಂಡೆಕ್ಸ್ : 0.774

 • 2BHK ಫ್ಲ್ಯಾಟಿನ ಸರಾಸರಿ ಬೆಲೆ (USD) : 63,275.58


ಯುರೋಪ್ ಖಂಡದ ಪುರಾತನ ವಸತಿ ಪ್ರದೇಶಗಳಲ್ಲೊಂದಾಗಿ ಗುರುತಿಸಿಕೊಂಡಿದೆ ಈ ದೇಶ. ಹಲವು ದಶಕಗಳ ಕಾಲ ತನ್ನ ನೆರೆ ರಾಷ್ಟ್ರ ಗ್ರೀಸ್ ನೊಂದಿಗಿನ ಜಟಾಪಟಿಯ ನಂತರ ಅಂತಿಮವಾಗಿ 2019 ರಲ್ಲಿ ಈ ದೇಶ ತನ್ನ ಹೆಸರನ್ನು ಬದಲಾಯಿಸಿಕೊಂಡಿತು ಹಾಗೂ ತಾನು ಒಂದು ಸ್ವಾಯತ್ತ ರಾಷ್ಟ್ರವಾಗಿ ರೂಪಗೊಂಡಿತು. ನಾರ್ಥ್ ಅಟ್ಲಾಂಟಿಕ್ ಟ್ರೀಟಿಗೆ ಒಳಪಟ್ಟ ಈ ದೇಶ ಸಾಕಷ್ಟು ಗಮನಾರ್ಹವಾಗಿ ಬೆಳೆಯುತ್ತಿದೆ. ಇಲ್ಲಿನ ರಿಯಲ್ ಎಸ್ಟೇಟ್ ಕ್ಷೇತ್ರ ವೇಗ ಪಡೆಯುತ್ತಿದೆ.

9. ಪೆರು

 • ಗೃಹ ಬೆಲೆ-ಆದಾಯ ಅನುಪಾತ : 77.046

 • ಹ್ಯುಮನ್ ಡೆವೆಲಪ್ಮೆಂಟ್ ಇಂಡೆಕ್ಸ್ : 0.777

 • 2BHK ಫ್ಲ್ಯಾಟಿನ ಸರಾಸರಿ ಬೆಲೆ (USD) : 96,103.18


ಪೆರು ದೇಶ ತನ್ನ ಪ್ರಾಕೃತಿಕ ಸೊಬಗಿಗಾಗಿ ಹೆಚ್ಚು ಪ್ರಸಿದ್ಧವಾಗಿದೆ. ಇದನ್ನು ಆನಂದಿಸಲು ಸಾವಿರಾರು ವಿದೇಶಿಗರು ಈ ದೇಶಕ್ಕೆ ಭೇಟಿ ನೀಡುತ್ತಿರುತ್ತಾರೆ. ಅಲ್ಲದೆ ಇಲ್ಲಿ ಜಗತ್ತಿನ ಏಳು ಅದ್ಭುತಗಳಲ್ಲೊಂದಾದ ಮಾಚುಪಿಚುವನ್ನು ಸಹ ಕಾಣಬಹುದು. ಹಾಗಾಗಿ ಈ ದೇಶವು ವಲಸಿಗರನ್ನು ಆಕರ್ಷಿಸಲು ಸಶಕ್ತವಾಗಿದೆ. ಕೋವಿಡ್ ಸಮಯದಲ್ಲಿ ಖರೀದಿ ವಹಿವಾಟು ತಗ್ಗಿತ್ತಾದರೂ ಇದೀಗ ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮ ಚೇತರಿಸಿಕೊಳ್ಳುತ್ತಿದೆ.

10. ರೋಮೇನಿಯಾ

 • ಗೃಹ ಬೆಲೆ-ಆದಾಯ ಅನುಪಾತ : 80.375

 • ಹ್ಯುಮನ್ ಡೆವೆಲಪ್ಮೆಂಟ್ ಇಂಡೆಕ್ಸ್ : 0.828

 • 2BHK ಫ್ಲ್ಯಾಟಿನ ಸರಾಸರಿ ಬೆಲೆ (USD) : 106,651.09


ಇದನ್ನೂ ಓದಿ:  Indian Economy: ಪ್ರಕಾಶಿಸುತ್ತಿದೆ ಭಾರತದ ಆರ್ಥಿಕತೆ, ಬ್ರಿಟನ್‌ ಹಿಂದಿಕ್ಕಿ 5ನೇ ಸ್ಥಾನಕ್ಕೇರಿದ ಇಂಡಿಯಾ!

ಕಪ್ಪು ಸಮುದ್ರ ತಟದ ಬಳಿ ಸ್ಥಿತವಿರುವ ಈ ದೇಶವು ಸಾಕಷ್ಟು ಐತಿಹಾಸಿಕ ಮಹತ್ವವುಳ್ಳ ದೇಶವಾಗಿದೆ. ಪುರಾತನ ಕೋಟೆಗಳು, ಧರ್ಮಶಾಲೆಗಳು, ಚರ್ಚುಗಳು ಇಲ್ಲಿನ ಶ್ರೀಮಂತಿಕೆಯನ್ನು ಅನಾವರಣಗೊಳಿಸುತ್ತವೆ. ಎಲ್ಲ ದೇಶಗಳಂತೆ ರೋಮೇನಿಯಾ ಸಹ ಕೋವಿಡ್ ಸಮಯದಲ್ಲಿ ಸಾಕಷ್ಟು ಕಷ್ಟ ಅನುಭವಿಸಿತ್ತು. ಆದರೆ, ಈಗ ಇಲ್ಲ ಸ್ಥಿತಿ ಸಹಜತೆಗೆ ಮರಳುತ್ತಿದ್ದು ಸ್ಥಿರಾಸ್ತಿ ಉದ್ಯಮವೂ ಚೇತರಿಸಿಕೊಳ್ಳುತ್ತಿದೆ. ಜೀವನವೆಚ್ಚವು ಅಮೆರಿಕಕ್ಕೆ ಹೋಲಿಸಿದರೆ ಸಾಕಷ್ಟು ನಿಯಂತ್ರಣದಲ್ಲಿದ್ದು ವಲಸಿಗರು ಬರಲು ಪ್ರಿಗಣಿಸಬಹುದಾದ ಯೋಗ್ಯ ದೇಶವಾಗಿದೆ.

11. ಸೈಪ್ರಸ್ 

 • ಗೃಹ ಬೆಲೆ-ಆದಾಯ ಅನುಪಾತ : 89.303

 • ಹ್ಯುಮನ್ ಡೆವೆಲಪ್ಮೆಂಟ್ ಇಂಡೆಕ್ಸ್ : 0.887

 • 2BHK ಫ್ಲ್ಯಾಟಿನ ಸರಾಸರಿ ಬೆಲೆ (USD) : 113,683.03


ಮೆಡಿಟರೇನಿಯನ್ ಸಮುದ್ರದ ಪೂರ್ವ ಭಾಗದಲ್ಲಿ ಸ್ಥಿತವಿರುವ ಈ ದೇಶವು ಕಡಲ ತೀರಗಳ ಮನಮೋಹಕ ತಾಣಗಳಿಗಾಗಿ ಹೆಸರು ಮಾಡಿದೆ. ಐಲ್ಯಾಂಡ್ ಆಫ್ ಲವ್ ಎನ್ನಲಾಗುವ ಈ ದೇಶವು ಗ್ರೀಕ್ ಪರಂಪರೆಯ ಅಫ್ರೋಡೈಟ್ ದೇವತೆಯ ಜನ್ಮಸ್ಥಳ ಎಂದು ನಂಬಲಾಗಿದೆ. ಈ ದೇಶಕ್ಕೆ ಲಕ್ಷಾನುಗಟ್ಟಲೆ ಜನರು ಪರ್ಯಟನಕ್ಕಾಗಿ ಬರುತ್ತಿರುತ್ತಾರೆ. ವಿದೇಶಿಗರು ಇಲ್ಲಿ ದೀರ್ಘ ಕಾಲ ವಾಸಿಸಲು ಬಯಸಿದ್ದರೆ ಅವರು ಇಲ್ಲಿನ ಆಡಳಿತವು ರೂಪಿಸಿರುವ ಗೋಲ್ಡನ್ ವಿಸಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಆ ಸವಲತ್ತನ್ನು ಪಡೆಯಬಹುದು.

12. ಯುಎಇ 

 • ಗೃಹ ಬೆಲೆ-ಆದಾಯ ಅನುಪಾತ : 71.323

 • ಹ್ಯುಮನ್ ಡೆವೆಲಪ್ಮೆಂಟ್ ಇಂಡೆಕ್ಸ್ : 0.890

 • 2BHK ಫ್ಲ್ಯಾಟಿನ ಸರಾಸರಿ ಬೆಲೆ (USD) : 162,906.61


ವ್ಯವಹಾರ ಸ್ನೇಹಿ, ವೈವಿಧ್ಯಮಯ ಸಂಪ್ರದಾಯದ ಜನರು ಹಾಗೂ ವೇಗವಾಗಿ ಬೆಳೆಯುತ್ತಿರುವ ಅಭಿವೃದ್ಧಿ ಯುಎಇ ಯನ್ನು ವಿಶಿಷ್ಟ ಸ್ಥಾನದಲ್ಲಿ ನಿಲ್ಲುವಂತೆ ಮಾಡುತ್ತದೆ. ಹೂಡಿಕೆದಾರರ ಸ್ನೇಹಿಯೂ ಆಗಿರುವ ಈ ದೇಶ ಜಗತ್ತಿನಾದ್ಯಂತೆ ಎಲ್ಲ ಉದ್ದಿಮೆದಾರರ ಆಕರ್ಷಕ ತಾಣವಾಗಿ ಮನಗೆಲ್ಲುತ್ತದೆ. ಕಳೆದ ಜುಲೈನಲ್ಲಿ ಇಲ್ಲಿನ ದುಬೈನಲ್ಲಿ ಸ್ಥಿರಾಸ್ತಿ ಉದ್ಯಮವನ್ನು ಬೂಸ್ಟ್ ಮಾಡುವ ದೃಷ್ಟಿಯಿಂದ ಇಲ್ಲಿನ ಆಡಳಿತವು ವಿನೂತನ ಕಾರ್ಯಕ್ರಮವನ್ನು ಅನಾವರಣಗೊಳಿಸಿದ್ದು ಆ ಮೂಲಕ ಈ ದೇಶವನ್ನು ಜಾಗತಿಕ ಮಟ್ಟದಲ್ಲಿ ರಿಯಲ್ ಎಸ್ಟೇಟ್ ಉದ್ಯಮದ ಪ್ರಭಾವಿ ದೇಶವನ್ನಾಗಿ ರೂಪಿಸಲು ಪ್ರಯತ್ನಿಸುತ್ತಿದೆ. ಜೀವನವೆಚ್ಚ ಹಾಗೂ ಆದಾಯ ಎಲ್ಲವೂ ಇರುವುದರಿಂದ ಈ ದೇಶವು ಅಮೆರಿಕನ್ನರಿಗೆ ಒಂದು ಅದ್ಭುತ ಆಯ್ಕೆಯಾಗಿದೆ.

13. ಟರ್ಕಿ

 • ಗೃಹ ಬೆಲೆ-ಆದಾಯ ಅನುಪಾತ : 86.189

 • ಹ್ಯುಮನ್ ಡೆವೆಲಪ್ಮೆಂಟ್ ಇಂಡೆಕ್ಸ್ : 0.820

 • 2BHK ಫ್ಲ್ಯಾಟಿನ ಸರಾಸರಿ ಬೆಲೆ (USD) : 55,073.19


ಇದನ್ನೂ ಓದಿ:  Multibagger Stock: 5 ವರ್ಷದಲ್ಲಿ 1 ಲಕ್ಷದಿಂದ 43 ಲಕ್ಷಕ್ಕೆ ಏರಿಕೆ ಕಂಡ ಮಲ್ಟಿಬ್ಯಾಗರ್ ಷೇರುಗಳು

ಇದೊಂದು ಸಾಕಷ್ಟು ವೈವಿಧ್ಯತೆಯಿಂದ ಕೂಡಿರುವ ದೇಶ. ಇಲ್ಲಿನನಗರವಾದ ಇಸ್ತಾಂಬುಲ್ ಜಗತ್ತಿನ ಏಕೈಕ ಒಂದಕ್ಕಿಂತ ಹೆಚ್ಚು ಖಂಡಗಳಲ್ಲಿನ ಉಪಸ್ಥಿತಿ ಹೊಂದಿರುವ ನಗರವಾಗಿದ್ದು ಯುರೋಪ್ ಹಾಗೂ ಒರಿಯೆಂಟಲ್ ಸಂಪ್ರದಾಯಗಳ ಮಿಶ್ರಣವನ್ನು ಇಲ್ಲಿ ನೋಡಬಹುದಾಗಿದೆ. ನಾಲ್ಕು ಮಿಲಿಯನ್ ಗಿಂತಲೂ ಹೆಚ್ಚಿನವಿದೇಶಿಗರನ್ನು ಹೊಂದಿರುವ ಈ ದೇಶ ಬಹುಸಂಪ್ರದಾಯದ ದೇಶವಾಗಿದೆ. ಇಲ್ಲಿಯೂ ಗೋಲ್ಡನ್ ವಿಸಾ ಕಾರ್ಯಕ್ರಮವಿದ್ದು ಬೇಕಾದ ವಿದೇಶಿಗರು ಇದರ ಪೂರ್ವ ಅವಶ್ಯಕತೆಗಳನ್ನು ಪೂರೈಸಿ ಅದರ ಲಾಭ ಪಡೆಯಬಹುದು.
Published by:Ashwini Prabhu
First published: