HOME » NEWS » Explained » CORONAVIRUS VACCINATION IN INDIA REGISTRATION ON CO WIN WILL BEGIN FROM APRIL 1 FOR VACCINATION FOR PEOPLE OVER 45 YEARS OF AGE STG LG

Explained: ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್​ ಲಸಿಕೆ: ನಿಮ್ಮೆಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ!

ಪ್ರತಿ ಡೋಸ್​ಗೂ ಒಂದು ಲೈವ್​ ಅಪಾಯಿಂಟ್ಮೆಂಟ್‌ ಇರುತ್ತದೆ. ಅಪ್ಲಿಕೇಷನ್​ ಮೂಲಕ ದಿನಾಂಕ ಮತ್ತು ಸ್ಥಳದ ಬಗ್ಗೆ ವ್ಯಾಕ್ಸಿನೇಷನ್​ಗೂ ಮುಂಚೆ ಅಪಾಯಿಂಟ್ಮೆಂಟ್‌​ ಸೆಟ್ ಮಾಡಬೇಕು. ಉದಾ: ಏಪ್ರಿಲ್​ 2 ಕ್ಕೆ ನೀವು ಅಪಾಯಿಂಟ್ಮೆಂಟ್‌ ಬುಕ್ ಮಾಡಿದರೆ, ಲಭ್ಯತೆ ನೋಡಿಕೊಂಡು ನಿಮಗೆ ಸ್ಲಾಟ್ ಅರೆಂಜ್​ ಮಾಡಲಾಗುತ್ತದೆ.

news18-kannada
Updated:March 27, 2021, 9:15 AM IST
Explained: ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್​ ಲಸಿಕೆ: ನಿಮ್ಮೆಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ!
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಮಾ.27): ಕೇಂದ್ರ ಸರ್ಕಾರ ಏಪ್ರಿಲ್​ 1 ರಿಂದ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್​- 19 ಲಸಿಕೆ ನೀಡಲು ಪ್ರಾರಂಭಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್‌ ಮಂಗಳವಾರ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ 45 ವರ್ಷ ಮೇಲ್ಪಟ್ಟ ಯಾರಾದರೂ ಅಂದರೆ ಕೋ ಮಾರ್ಬಿಡಿಟೀಸ್ ಇಲ್ಲದವರು ಸಹ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ. ಈ ನಿಟ್ಟಿನಲ್ಲಿ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.

Co-Win 2.0 ಪೋರ್ಟಲ್​ಗೆ ರಿಜಿಸ್ಟಾರ್​ ಆಗುವುದು ಹೇಗೆ?

ಲಸಿಕೆಗೆ ಅರ್ಹರಾದ ವ್ಯಕ್ತಿಗಳು ತಮ್ಮ ಮೊಬೈಲ್​ ಮೂಲಕ ಹಂತ ಹಂತವಾಗಿ Co-Win 2.0 ಪೋರ್ಟಲ್​ಗೆ ರಿಜಿಸ್ಟರ್ ಮಾಡಿಕೊಳ್ಳಬಹುದು.

ಹಂತ 1 - Co-Win ಅಪ್ಲಿಕೇಷನ್​​ ಗಾಗಿ www.cowin.gov.in ಗೆ ಲಾಗಿನ್​ ಮಾಡಬಹುದು.

ಹಂತ 2 - ಮೊದಲು ನಿಮ್ಮ ಮೊಬೈಲ್​​ ನಂಬರ್ ಎಂಟ್ರಿ ಮಾಡಬೇಕು. ನಂತರ ಅಕೌಂಟ್​ ಕ್ರಿಯೆಟ್​ ಮಾಡಲು ಓಟಿಪಿ ನೀಡಲಾಗುತ್ತದೆ. ಓಟಿಪಿ ಎಂಟ್ರಿ ಮಾಡಿ 'Verify' ಬಟನ್ ಕ್ಲಿಕ್​ ಮಾಡಬೇಕು.

ಹಂತ 3 - ನಂತರ ವ್ಯಾಕ್ಸಿನೇಷನ್​ ರಿಜಿಸ್ಟ್ರೇಷನ್​​​ ಪೇಜ್​ಗೆ ರೀ ಡೈರಕ್ಟ್​ ಮಾಡುತ್ತದೆ. ಇಲ್ಲಿ ಫೋಟೊ ಐಡಿ ಪ್ರೂಫ್​ ಆಯ್ಕೆ ಮಾಡಬೇಕು. ಇದರ ಜೊತೆಗೆ ನಿಮ್ಮ ಹೆಸರು, ವಯಸ್ಸು, ಲಿಂಗ ಮತ್ತು ನೀವು ಆಯ್ಕೆ ಮಾಡಿರುವ ಐಡಿ ಪ್ರೂಫ್​​ ಅಪ್​ಲೋಡ್​ ಮಾಡಬೇಕು.

ಹಂತ 4 - ರಿಜಿಸ್ಟ್ರೇಷನ್​​ ಮಾಹಿತಿಯ ನಂತರ 'Register' ಬಟನ್ ಕ್ಲಿಕ್ ಮಾಡಬೇಕು.ಹಂತ 5 - ರಿಜಿಸ್ಟ್ರೇಷನ್​​ ಸಂಪೂರ್ಣವಾದ ನಂತರ ಸಿಸ್ಟಮ್​ ನಿಮಗೆ 'Account details'ಎಂಟ್ರಿ ಮಾಡಬೇಕು ಎಂದು ತೋರಿಸುತ್ತದೆ

ಹಂತ 6-'Add More' ಕ್ಲಿಕ್ ಮಾಡುವ ಮೂಲಕ ನಿಮ್ಮ ಮೊಬೈಲ್​ ಸಂಖ್ಯೆಗೆ ಸಂಬಂಧಿಸಿದ ಇನ್ನಿತರ 3 ಜನರನ್ನು ಸೇರಿಸಬಹುದು.

ಹಂತ 7 - ಇಲ್ಲಿ ಅಪಾಯಿಂಟ್ಮೆಂಟ್‌ ಬಗ್ಗೆ ಮಾಹಿತಿ ಲಭ್ಯವಿರುತ್ತದೆ.

ಹಂತ 8 - ರಾಜ್ಯ, ತಾಲೂಕು, ಬ್ಲಾಕ್ ಮತ್ತು ಪಿನ್​​ ಕೋಡ್​​ ಗೆ ಅನುಗುಣವಾಗಿ ವ್ಯಾಕ್ಸಿನೇಷನ್​​ ಸೆಂಟರ್ ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ದಿನಾಂಕ ಮತ್ತು ಅದರ ಲಭ್ಯತೆಯ ಮಾಹಿತಿ ಸಿಗುತ್ತದೆ.

Belagavi Lok Sabha Bypoll: ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ತಂತ್ರ-ಪ್ರತಿತಂತ್ರ...!

ಹಂತ 9 - ಬಟನ್​ ಮೇಲೆ ಕ್ಲಿಕ್ ಮಾಡಿ.

ಹಂತ 10 - ಒಮ್ಮೆ ಅಪಾಯಿಂಟ್ಮೆಂಟ್‌​​ ಬುಕ್​​ ಮಾಡಿದ ಮೇಲೆ ಬದಲಾವಣೆ ಮಾಡಬೇಕಿದ್ರೆ, ಅಪಾಯಿಂಟ್ಮೆಂಟ್‌​ ದಿನಕ್ಕಿಂತಲೂ ಮೊದಲು ರೀ ಶೆಡ್ಯೂಲ್ ಮಾಡಿಕೊಳ್ಳಬಹುದು.

ರಿಜಿಸ್ಟ್ರೇಷನ್ ಯಾವಾಗ ಆರಂಭವಾಗುತ್ತದೆ?

ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ರಾಜ್ಯಗಳಿಗೆ ತಿಳಿಸಿದೆ. ಜೊತೆಗೆ 45 ವರ್ಷ ಮೇಲ್ಟಟ್ಟವರಿಗೆ Co-Win ಪೋರ್ಟಲ್ ನಲ್ಲಿ ಏಪ್ರಿಲ್​ 1 ರಿಂದ ರಿಜಿಸ್ಟ್ರೇಷನ್ ಆರಂಭವಾಗಲಿದೆ.

ಇದಕ್ಕೆ ಪ್ರಮಾಣ ಪತ್ರದ ಅಗತ್ಯವಿದೆಯೇ ?

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಮಾತನಾಡಿ, " ಏಪ್ರಿಲ್ 1 ರಿಂದ 45 ವರ್ಷದಿಂದ 59 ವರ್ಷ ವಯಸ್ಸಿನವರೆಗೆ ಲಸಿಕೆ ಪಡೆಯಲು ಬೇರೆ ಯಾವುದೇ ಕಾಯಿಲೆಗಳಿಂದ ಬಳಲುತ್ತಿರುವ ಪ್ರಮಾಣಪತ್ರದ ಅಗತ್ಯವಿರುವುದಿಲ್ಲ". ಈ ನಿಟ್ಟಿನಲ್ಲಿ ಈ ವರ್ಗದ ಜನರಿಗೆ ನೋಂದಣಿ ಮಾಡಿಸಲು Co-Win ಪೋರ್ಟಲ್​ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಜನವರಿ 1, 1977 ಕ್ಕೂ ಮುನ್ನ ಜನಿಸಿದವರು ರಿಜಿಸ್ಟ್ರೇನ್​ ಮಾಡಿಸಲು ಅರ್ಹರಾಗಿರುತ್ತಾರೆ ಎಂದು ಭೂಷಣ್ ಅವರು ತಿಳಿಸಿದ್ದಾರೆ.

ಸರ್ಕಾರದಿಂದ ನೀಡಲಾಗಿರುವ ಯಾವ ಐಡಿಯನ್ನು ತೋರಿಸಬೇಕು?

ಆಧಾರ್​ ಕಾರ್ಡ್​, ವೋಟರ್​ ಐಡಿ, ಪಾಸ್​ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್​ ಕಾರ್ಡ್, ಹೆಲ್ತ್​ ಇನ್​ಶ್ಯೂರೆನ್ಸ್​​ ಸ್ಮಾರ್ಟ್ ಕಾರ್ಡ್, ಪಿಂಚಣಿ ದಾಖಲೆ, ಬ್ಯಾಂಕ್/ ಪೋಸ್ಟ್ ಆಫೀಸ್ ಪಾಸ್​ಬುಕ್​, ಮನ್ರೇಗಾ ಉದ್ಯೋಗದ ಕಾರ್ಡ್, ಎಮ್​ಪಿ/ಎಮ್​ಎಲ್​ಎ/ ಎಮ್​ಎಲ್​ಸಿ ಕಾರ್ಡ್/ ಸರ್ಕಾರಿ ಉದ್ಯೋಗ ಸೇವಾ ಐಡಿ, ಜನಸಂಖ್ಯೆ ರಿಜಿಸ್ಟರ್​ ಅಡಿಯಲ್ಲಿ ನೀಡಲಾದ ಸ್ಮಾರ್ಟ್ ಕಾರ್ಡ್ - ಇವುಗಳ ಪೈಕಿ ಯಾವುದಾದರೊಂದು​ ತೋರಿಸಿ ರೋಗನಿರೋಧಕ ಕೇಂದ್ರಗಳಲ್ಲಿ ನೀವು ಲಸಿಕೆಯನ್ನು ಪಡೆಯಬಹುದು.

ಕುಟುಂಬ ಸದಸ್ಯರಿಗೆ ಅಪಾಯಿಂಟ್ಮೆಂಟ್‌ ಬುಕ್ ಮಾಡುವುದು ಹೇಗೆ?

ಪ್ರತಿ ಡೋಸ್​ಗೂ ಒಂದು ಲೈವ್​ ಅಪಾಯಿಂಟ್ಮೆಂಟ್‌ ಇರುತ್ತದೆ. ಅಪ್ಲಿಕೇಷನ್​ ಮೂಲಕ ದಿನಾಂಕ ಮತ್ತು ಸ್ಥಳದ ಬಗ್ಗೆ ವ್ಯಾಕ್ಸಿನೇಷನ್​ಗೂ ಮುಂಚೆ ಅಪಾಯಿಂಟ್ಮೆಂಟ್‌​ ಸೆಟ್ ಮಾಡಬೇಕು. ಉದಾ: ಏಪ್ರಿಲ್​ 2 ಕ್ಕೆ ನೀವು ಅಪಾಯಿಂಟ್ಮೆಂಟ್‌ ಬುಕ್ ಮಾಡಿದರೆ, ಲಭ್ಯತೆ ನೋಡಿಕೊಂಡು ನಿಮಗೆ ಸ್ಲಾಟ್ ಅರೆಂಜ್​ ಮಾಡಲಾಗುತ್ತದೆ.

ಸೆಕೆಂಡ್​ ಡೋಸ್​​ಗೆ ಅಪಾಯಿಂಟ್ಮೆಂಟ್‌​ ಪಡೆಯುವುದು ಹೇಗೆ?

ಕೋವಿಡ್​ ವ್ಯಾಕ್ಸಿನೇಷನ್​​ ಸೆಂಟರ್​​ನಲ್ಲಿಯೇ ವ್ಯಾಕ್ಸಿನೇಷನ್ ಪಡೆದ ದಿನಾಂಕದಿಂದ 29 ನೇ ದಿನಕ್ಕೆ ಎರಡನೇ ಡೋಸ್​ ಸ್ಲಾಟ್​​ ಬುಕ್ ಮಾಡಬಹುದು. ಲಸಿಕೆ ಪಡೆಯುವವರು ಮೊದಲ ಡೋಸ್​ನ ಅಪಾಯಿಂಟ್ಮೆಂಟ್‌​ ಕ್ಯಾನ್ಸಲ್ ಮಾಡಿದರೆ, ಎರಡನೇ ಡೋಸ್ ಅಪಾಯಿಂಟ್ಮೆಂಟ್‌ ಕೂಡ ಕ್ಯಾನ್ಸಲ್ ಆಗುತ್ತದೆ

ಯಾವೆಲ್ಲಾ ಅಪ್ಲಿಕೇಷನ್​ ಮೂಲಕ ಅಪಾಯಿಂಟ್ಮೆಂಟ್‌ ಪಡೆಯಬಹುದು?

Co-Win 2.0 ಮತ್ತು ಆರೋಗ್ಯ ಸೇತುವಿನಂತಹ ಇನ್ನಿತರ ಅಪ್ಲಿಕೇಷನ್ ಮೂಲಕ ಲಸಿಕೆ ಪಡೆಯುವ ದಿನವನ್ನು ನೋಂದಣಿ ಮಾಡಬಹುದು.

ಎಷ್ಟು ಆಸ್ಪತ್ರೆಗಳಿವೆ?

ಆಯುಷ್ಮಾನ್​ ಭಾರತ್​ PMJAY ಅಡಿಯಲ್ಲಿ 10,000 ಖಾಸಗಿ ಆಸ್ಪತ್ರೆಗಳು, CGHS ಅಡಿಯಲ್ಲಿ 600 ಖಾಸಗಿ ಆಸ್ಪತ್ರೆಗಳನ್ನು ಪಟ್ಟಿ ಮಾಡಲಾಗಿದೆ. ರಾಜ್ಯ ಸರ್ಕಾರ ವಿಮಾ ಯೋಜನೆಯಡಿ ಇನ್ನಿತರ ಖಾಸಗಿ ಆಸ್ಪತ್ರೆಗಳನ್ನು ಗುರುತಿಸಲಾಗಿದೆ.

ಸ್ಮಾರ್ಟ್​ ಫೋನ್​ ಇಲ್ಲದವರು ಏನು ಮಾಡಬೇಕು?

ಒಂದು ವೇಳೆ ನಿಮ್ಮ ಬಳಿ ಸ್ಮಾರ್ಟ್​ ಫೊನ್ ಇಲ್ಲದಿದ್ದರೆ, ಆನ್​ ಸೈಟ್​ ರಿಜಿಸ್ಟ್ರೇಷನ್​​ ಅನುಕೂಲವಿದೆ. ಗುರುತಿಸ್ಪಲ್ಪಟ್ಟ ರೋಗನಿರೋಧಕ ಕೇಂದ್ರಗಳಿಗೆ ತೆರಳಿ ರಿಜಿಸ್ಟ್ರೇಷನ್​ ಮಾಡಿಸಿ ಲಸಿಕೆ ತೆಗೆದುಕೊಳ್ಳಬಹುದು. ಸಾಧ್ಯವಾದರೆ ಇನ್ನೊಬ್ಬರ ಮೊಬೈಲ್​ ನಂಬರ್​ನಿಂದ ನಿಮ್ಮ ನಂಬರ್ ಕೊಟ್ಟು ರಿಜಿಸ್ಟಾರ್ ಮಾಡಿಸಬಹುದು.

ಲಸಿಕೆಯ ಶುಲ್ಕವೆಷ್ಟು?

ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್​19 ಲಸಿಕೆ​ ಉಚಿತ. ಖಾಸಗಿ ಆಸ್ಪತ್ರೆಗಳಲ್ಲಿ 250 ರೂಪಾಯಿ ಶುಲ್ಕವಿರುತ್ತದೆ.

ಇಲ್ಲಿಯ ತನಕ ಎಷ್ಟು ಜನರು ಲಸಿಕೆಯನ್ನು ತೆಗೆದುಕೊಂಡಿದ್ದಾರೆ?

ಮಾರ್ಚ್​ 23 ರವರೆಗೆ 5.21 ಕೋಟಿ ಡೋಸ್ ಲಸಿಕೆಯನ್ನು ಭಾರತದಲ್ಲಿ ನೀಡಲಾಗಿದೆ. ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಹೇಳುವ ಪ್ರಕಾರ ರಾಷ್ಟ್ರೀಯ ತಜ್ಞರ ಗುಂಪು (ಎನ್‌ಇಜಿವಿಎಸಿ) ಲಸಿಕೆ ಹಾಕಲು ಮಾರ್ಗದರ್ಶನ ನೀಡುತ್ತಿದೆ.

ಎರಡು ಹಂತದ ಲಸಿಕೆ ಕಾರ್ಯ ಆರಂಭವಾಗಿದೆ

ಜನವರಿ 16 ರಿಂದ ದೇಶದಲ್ಲಿ ಲಸಿಕೆಯನ್ನು ನೀಡಲು ಆರಂಭಿಸಲಾಗಿದೆ. ಆರೋಗ್ಯ ಕಾರ್ಯಕರ್ತರು, ವೈದ್ಯರು ಮೊದಲು ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಅನಂತರ ಸಿಬ್ಬಂದಿಗೆ ಲಸಿಕೆಯನ್ನು ನೀಡಲಾಗಿದೆ. ಮುಂದಿನ ಹಂತದಲ್ಲಿ 60 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರಿಗೆ ಹಾಗೂ ಏಪ್ರಿಲ್‌ 1 ರಿಂದ 45 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯವನ್ನು ಆರಂಭಿಸಲಾಗಿದೆ.
Published by: Latha CG
First published: March 27, 2021, 9:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories