Explainer: ಕೊರೋನಾದ ಹೊಸ ರೂಪಾಂತರ ಕಪ್ಪಾ ವೈರಸ್ ಕುರಿತು ನೀವು ತಿಳಿದುಕೊಳ್ಳಬೇಕಾದ ಅಂಶಗಳೇನು?

ಕೊರೋನಾ ವೈರಸ್‌ನ ಇತರ ರೂಪಾಂತರಗಳಿಂದ ಸಂರಕ್ಷಣೆಯನ್ನು ಪಡೆಯಲು ಮಾಸ್ಕ್, ಸಾಮಾಜಿಕ ಅಂತರ, ಲಸಿಕೆ, ಸ್ಯಾನಿಟೈಸರ್‌ನ ಬಳಕೆಯನ್ನು ಹೇಗೆ ಮಾಡುತ್ತೇವೆಯೋ ಅದೇ ರೀತಿ ಕಪ್ಪಾ ರೂಪಾಂತರ ತಡೆಯಲು ಇದೇ ವಿಧಾನವನ್ನು ಅನುಸರಿಸಬೇಕಾಗುತ್ತದೆ.

ಕೊರೋನಾ ವೈರಸ್ ಕಪ್ಪಾ ರೂಪಾಂತರಿ.

ಕೊರೋನಾ ವೈರಸ್ ಕಪ್ಪಾ ರೂಪಾಂತರಿ.

  • Share this:

    ಕೊರೋನಾ ವೈರಸ್ ತನ್ನ ಹೊಸ ರೂಪಾಂತರಗಳ ಮೂಲಕ ವಿಜ್ಞಾನಿಗಳಿಗೆ ಹಾಗೂ ವೈಜ್ಞಾನಿಕ ಲೋಕಕ್ಕೆ ಸವಾಲೊಡ್ಡುತ್ತಿದೆ. ಡೆಲ್ಟಾ ಪ್ಲಸ್ ರೂಪಾಂತರದ ಕಾಟ ಹೆಚ್ಚುತ್ತಿರುವ ಈ ದಿನಗಳಲ್ಲಿ ಈಗ ಕೊರೋನಾದ ಕಪ್ಪಾ ರೂಪಾಂತರ ದಾಳಿ ಇಡಲು ಸರ್ವ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಈ ರೂಪಾಂತರದ ಕೇಸ್‌ಗಳು ಇದೀಗ ರಾಜಸ್ಥಾನ ಹಾಗೂ ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದೆ. ಅಧ್ಯಯನಗಳ ಪ್ರಕಾರ ಡೆಲ್ಟಾ ರೂಪಾಂತರದಂತೆಯೇ ಕಪ್ಪಾ ಕೂಡ ಕೊರೋನಾದ ದ್ವಿ ರೂಪಾಂತರವಾಗಿದೆ. ರಾಜಸ್ಥಾನದ ಜೈಪುರದ ಎಸ್‌ಎಂಎಸ್ ವೈದ್ಯಕೀಯ ಕಾಲೇಜು, ದೆಹಲಿಯಲ್ಲಿರುವ ಒಂದು ಲ್ಯಾಬ್‌ಗೆ ಮತ್ತು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಸಂಸ್ಥೆಗೆ ಕೊರೋನಾ ಪಾಸಿಟಿವ್ ಮಾದರಿಗ ಳನ್ನು ಕಳುಹಿಸುತ್ತದೆ. ಎರಡನೇ ಅಲೆಯ ವೇಳೆ 174 ಮಾದರಿಗಳನ್ನು ಕಳುಹಿಸಲಾ ಗಿತ್ತು. ಇದರಲ್ಲಿ 166 ಮಾದರಿಗಳು ಡೆಲ್ಟಾ ರೂಪಾಂತರ ಮತ್ತು ಐದು ಕಪ್ಪಾ ರೂಪಾಂತರ ಎಂಬುದು ಕಂಡುಬಂದಿದೆ.


    ಅಂತೆಯೇ, ಉತ್ತರ ಪ್ರದೇಶದ ರಾಜಧಾನಿಯಾದ ಲಕ್ನೋದಲ್ಲಿನ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನ 109 ಮಾದರಿಗಳಲ್ಲಿ, 107 ಮಾದರಿಗಳು ಡೆಲ್ಟಾ ಪ್ಲಸ್ ಮತ್ತು 2 ಮಾದರಿಗಳು ಕಪ್ಪಾ ರೂಪಾಂತರಗಳಾಗಿವೆ. ಡೆಲ್ಟಾ, ಡೆಲ್ಟಾ ಪ್ಲಸ್ ಮತ್ತು ಲ್ಯಾಂಬ್ಡಾ ನಂತರ, ಈಗ ಕಪ್ಪಾ ಎಂದು ಕರೆಯಲ್ಪಡುವ ಈ ಹೊಸ ರೂಪಾಂತರ ಅಥವಾ ಹೆಚ್ಚು ನಿಖರವಾಗಿ ಹೇಳುವುದಾದರೆ ಹೊಸ ರೀತಿಯ ಕೊರೋನಾ ವೈರಸ್ ಜನರ ಆತಂಕವನ್ನು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಕಪ್ಪಾ ರೂಪಾಂತರದ ಕುರಿತು ಹೆಚ್ಚಿನ ಮಾಹಿತಿಗಳನ್ನು ಅರಿತುಕೊಳ್ಳುವುದು ಒಳಿತು.


    ಕೊರೋನಾ ವೈರಸ್‌ನ ಕಪ್ಪಾ ರೂಪಾಂತರದ ವಿಶೇಷತೆ ಏನು?


    ಕಪ್ಪಾ ರೂಪಾಂತರವು ಕೊರೋನಾ ವೈರಸ್‌ನ ಡಬಲ್ ರೂಪಾಂತರವಾಗಿದೆ ಅಂದರೆ ಎರಡು ಮಾರ್ಪಾಡುಗಳಿಂದ ಕೂಡಿದೆ. ಇದನ್ನು B.1.617.1 ಎಂದೂ ಕರೆಯಲಾಗಿದೆ. ವೈರಸ್‌ನ ಈ ಎರಡು ರೂಪಾಂತರಗಳನ್ನು E484Q ಮತ್ತು L453R ನ ವೈಜ್ಞಾನಿಕ ಹೆಸರುಗಳಿಂದ ಕರೆಯಲಾಗುತ್ತದೆ.


    ಇದು ಕೊರೋನಾದ ಹೊಸ ರೂಪಾಂತರವೇ?ದುಮೊದಲು ಯಾವಾಗದೊರಕಿತು?


    ಕಪ್ಪಾ ರೂಪಾಂತರವು ಕೊರೋನಾ ವೈರಸ್‌ನ ಹೊಸ ರೂಪಾಂತರವಲ್ಲ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಕಪ್ಪಾ ರೂಪಾಂತರವನ್ನು ಭಾರತದಲ್ಲಿ ಮೊದಲು ಗುರುತಿಸಿದ್ದು 2020 ರ ಅಕ್ಟೋಬರ್‌ನಲ್ಲಿ. ಕಪ್ಪಾ ಹೊರತುಪಡಿಸಿ, ಡೆಲ್ಟಾ ರೂಪಾಂತರವು ಭಾರತದಲ್ಲಿ ಮೊದಲ ಬಾರಿಗೆ ಕಂಡುಬಂದಿದೆ. WHO ಇದನ್ನು ಆಸಕ್ತಿದಾಯಕ ರೂಪಾಂತರವೆಂದು ಏಪ್ರಿಲ್ 4, 2021 ರಂದು ಘೋಷಿಸಿತು.


    ಕೊರೋನಾದ ಕಪ್ಪಾ ರೂಪಾಂತರವು ಎಷ್ಟು ಅಪಾಯಕಾರಿ ಅಥವಾ ವೇಗವಾಗಿ ಹರಡುವ ರೂಪಾಂತರವಾಗಿದೆ..?


    ಕಪ್ಪಾ ರೂಪಾಂತರವನ್ನು WHO "ವೇರಿಯಂಟ್ ಆಫ್ ಕನ್ಸರ್ನ್" ಬದಲಾಗಿ "ವೇರಿಯೇಂಟ್ ಆಫ್ ಇಂಟ್ರೆಸ್ಟ್" ಎಂದು ಘೋಷಿಸಿದೆ. WHO ಅಧ್ಯಯನದ ಪ್ರಕಾರ, ಕೊರೋನಾ ವೈರಸ್‌ನ ಕಪ್ಪಾ ರೂಪಾಂತರವು ಅನುವಂಶಿಕ ವ್ಯತ್ಯಾಸವನ್ನು ತಿಳಿದಿರುವ ರೂಪಾಂತರವಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ಬದಲಾವಣೆ ಸ್ವಾಭಾವಿಕವಾಗಿದೆ. ಇದರಿಂದ ವೈರಸ್ ಹರಡುವುದು, ಅದರಿಂದ ಉಂಟಾಗುವ ರೋಗದ ತೀವ್ರತೆ, ಮಾನವನ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಉಂಟುಮಾಡುವ ಪರಿಣಾಮ, ಔಷಧದಿಂದ ಸಂರಕ್ಷಣೆ ಪಡೆದುಕೊಳ್ಳುವ ರೀತಿ ಮೊದಲಾದ ಅಂಶಗಳು ಮೊದಲೇ ಗೊತ್ತಾಗುತ್ತದೆ.


    ಪ್ರಸ್ತುತ ಕೊರೋನಾ ಲಸಿಕೆಗಳು ಕಪ್ಪಾ ರೂಪಾಂತರದ ವಿರುದ್ಧ ಪರಿಣಾಮಕಾರಿಯಾಗಿದೆಯೇ?


    ಕಪ್ಪಾ ರೂಪಾಂತರವು L453R ರೂಪಾಂತರವನ್ನು ಹೊಂದಿದೆ. ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹಾನಿಗೊಳಿಸುತ್ತದೆ ಎಂದು ಹೇಳಲಾಗಿದೆ, ಅಂದರೆ ನಮ್ಮ ರೋಗನಿರೋಧಕ ಶಕ್ತಿ ಈ ರೂಪಾಂತರದ ಮೇಲೆ ಪರಿಣಾಮ ಬೀರುವುದಿಲ್ಲ, ಆದರೆ ಈ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಿವೆ ಮತ್ತು ಇದನ್ನು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಿಲ್ಲ. ಆದರೆ ಕಪ್ಪಾ ರೂಪಾಂತರದ ವಿರುದ್ಧ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಪರಿಣಾಮಕಾರಿ ಎಂದು ICMRಇತ್ತೀಚೆಗೆ ತಿಳಿಸಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ತಿಳಿಸಿರುವ ಮಾಹಿತಿಯ ಪ್ರಕಾರ ಕೋವಿಶೀಲ್ಡ್ ಕೂಡ ಕಪ್ಪಾ ರೂಪಾಂತರದಿಂದ ರಕ್ಷಣೆ ನೀಡಬಲ್ಲುದು ಎಂಬುದು ತಿಳಿದು ಬಂದಿದೆ.


    ಇದನ್ನೂ ಓದಿ: ಪಾಕಿಸ್ತಾನದಲ್ಲಿ ವಕೀಲನ ಮೇಲೆ ದಾಳಿ ಮಾಡಿದ ಸಾಕು ನಾಯಿ; 2 ಜರ್ಮನ್ ಶೇಪರ್ಡ್​ಗಳಿಗೆ ಮರಣ ದಂಡನೆ!

    ಕಪ್ಪಾ ರೂಪಾಂತರದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ?


    ಕೊರೋನಾ ವೈರಸ್‌ನ ಇತರ ರೂಪಾಂತರಗಳಿಂದ ಸಂರಕ್ಷಣೆಯನ್ನು ಪಡೆಯಲು ಮಾಸ್ಕ್, ಸಾಮಾಜಿಕ ಅಂತರ, ಲಸಿಕೆ, ಸ್ಯಾನಿಟೈಸರ್‌ನ ಬಳಕೆಯನ್ನು ಹೇಗೆ ಮಾಡುತ್ತೇವೆಯೋ ಅದೇ ರೀತಿ ಕಪ್ಪಾ ರೂಪಾಂತರ ತಡೆಯಲು ಇದೇ ವಿಧಾನವನ್ನು ಅನುಸರಿಸಬೇಕಾಗುತ್ತದೆ.


    ಇದನ್ನೂ ಓದಿ: Election 2024 India| 2024ರ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿದ ಪ್ರಶಾಂತ್ ಕಿಶೋರ್; ಗಾಂಧಿ ಕುಟುಂಬದ ಜೊತೆ ಚರ್ಚೆ

    ಲಸಿಕೆಯ ಒಂದು ಡೋಸ್‌ಗಳನ್ನು ಪಡೆದಿರುವವರ ಮೇಲೆ ಕಪ್ಪಾ ಪರಿಣಾಮ ಬೀರುವುದಿಲ್ಲವೇ?


    ಪ್ರಸಿದ್ಧ ವಿಜ್ಞಾನ ನಿಯತಕಾಲಿಕೆ ನೇಚರ್‌ನಲ್ಲಿ ಪ್ರಕಟವಾದ ಪ್ಯಾಶ್ಚರ್‌ ಇನ್‌ಸ್ಟಿಟ್ಯೂಟ್ ಆಫ್ ಫ್ರಾನ್ಸ್‌ನ ಇತ್ತೀಚಿನ ಸಂಶೋಧನೆಯ ಪ್ರಕಾರ, ಕೊರೋನಾ ಲಸಿಕೆಯ ಒಂದು ಡೋಸ್ ಬೀಟಾ ಮತ್ತು ಡೆಲ್ಟಾ ರೂಪಾಂತರಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದಾಗಿದೆ. ಇದೇ ಸಂಶೋಧನೆಯನ್ನು ಆಸ್ಟ್ರಾಜೆನಿಕಾ ಮತ್ತು ಫೈಜರ್ –ಬಯೋಟೆಕ್ ಲಸಿಕೆಗಳನ್ನು ತೆಗೆದುಕೊಳ್ಳುವವರ ಮೇಲೆ ಮಾಡಲಾಗಿದೆ.




    ಸಂಶೋಧನೆಯ ಪ್ರಕಾರ ಲಸಿಕೆಯ ಒಂದು ಡೋಸ್ ಪಡೆದುಕೊಂಡ 10% ಜನರು ಮಾತ್ರವೇ ಆಲ್ಫಾ ಹಾಗೂ ಡೆಲ್ಟಾ ರೂಪಾಂತರಗಳ ವಿರುದ್ಧ ಪ್ರತಿರಕ್ಷಣೆಯನ್ನು ಪಡಿದಿದ್ದಾರೆ. ಇದೇ ಸಮಯದಲ್ಲಿ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದ 95% ಜನರು ಡೆಲ್ಟಾ ಹಾಗೂ ಬೀಟಾ ರೂಪಾಂತರಗಳ ವಿರುದ್ಧ ಪ್ರತಿರಕ್ಷಣೆ ಪಡೆಯಬಹುದು. ಈಗ ಕಪ್ಪಾ ಕೂಡ ಡೆಲ್ಟಾದ ಹಾಗೆ ಡಬಲ್ ರೂಪಾಂತರಿಯಾಗಿರುವುದರಿಂದ ಲಸಿಕೆಯ ಒಂದು ಡೋಸ್ ಅಷ್ಟೊಂದು ಪರಿಣಾಮಕಾರಿಯಲ್ಲ ಎಂಬುದು ಸಾಬೀತಾಗಿದೆ. ಹಾಗಾಗಿ ಕಪ್ಪಾದ ವಿರುದ್ಧ ಸಂರಕ್ಷಣೆಯನ್ನು ಪಡೆಯಲು ಲಸಿಕೆಯ ಎರಡು ಡೋಸ್‌ಗಳನ್ನು ನೀಡುವುದು ಅನಿವಾರ್ಯವಾಗಿದೆ.

    First published: