HOME » NEWS » Explained » CORONA VACCINE IN KARNATAKA IS DELAYED FOLLOW THESE STEPS TO DEVELOP IMMUNITY AND STAY AWAY FROM INFECTION UNTIL THEN SKTV

Corona Vaccine ಬರೋದು ಇನ್ನೂ ತಡವಾಗುತ್ತೆ, ಅಲ್ಲಿತನಕ ಇಮ್ಯುನಿಟಿ ಹೆಚ್ಚಿಸಿಕೊಳ್ಳೋಕೆ ಹೀಗೆ ಮಾಡಿ

ಬಹುಶಃ ಮೇ ಮಧ್ಯಭಾಗದಲ್ಲಿ ಅಥವಾ ಅಂತ್ಯದ ವೇಳೆಗೆ ಲಸಿಕೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂಥಾ ಸಂದರ್ಭದಲ್ಲಿ ಲಸಿಕೆ ಪಡೆದು ಸೇಫ್ ಆಗ್ಬಹುದು ಎಂದುಕೊಂಡಿದ್ದ ಅನೇಕರು ಈಗ ಸ್ವಲ್ಪ ಆತಂಕಕ್ಕೆ ಒಳಗಾಗಿದ್ದಾರೆ. ಆದ್ರೆ ಅದರ ಬಗ್ಗೆ ಚಿಂತಿಸದೆ ನಿಮ್ಮ ಪಾಡಿಗೆ ನೀವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಒಂದಷ್ಟು ವಿಚಾರಗಳ ಬಗ್ಗೆ ಗಮನ ಹರಿಸಿ ಎನ್ನುತ್ತಾರೆ ವೈದ್ಯರು.

news18-kannada
Updated:April 30, 2021, 1:18 PM IST
Corona Vaccine ಬರೋದು ಇನ್ನೂ ತಡವಾಗುತ್ತೆ, ಅಲ್ಲಿತನಕ ಇಮ್ಯುನಿಟಿ ಹೆಚ್ಚಿಸಿಕೊಳ್ಳೋಕೆ ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
  • Share this:
Covid Vaccine: ಅಂದುಕೊಂಡದ್ದಕ್ಕಿಂತ ತಡವಾಗಿ ಕೊರೊನಾ ಲಸಿಕೆ ಸಾರ್ವಜನಿಕರಿಗೆ ಸಿಗಲಿದೆ. ಮೇ 1ರಿಂದ 18 ವರ್ಷಕ್ಕಿಂದ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವುದಾಗಿ ಭಾರತ ಸರ್ಕಾರ ಘೋಷಿಸಿತ್ತು. ಆದ್ರೆ ಇಷ್ಟು ದೊಡ್ಡ ಜನಸಂಖ್ಯೆಗೆ ಅಗತ್ಯವಿರುವಷ್ಟು ಪ್ರಮಾಣದ ಲಸಿಕೆಯ ಸ್ಟಾಕ್ ಇಲ್ಲ ಎನ್ನುವ ಕಾರಣಕ್ಕೆ ಅನೇಕ ರಾಜ್ಯ ಸರ್ಕಾರಗಳು ಮೇ 1ರಿಂದ ಲಸಿಕೆ ನೀಡಲು ಸಾಧ್ಯವಿಲ್ಲ ಎಂದಿವೆ. ಬಹುಶಃ ಮೇ ಮಧ್ಯಭಾಗದಲ್ಲಿ ಅಥವಾ ಅಂತ್ಯದ ವೇಳೆಗೆ ಲಸಿಕೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂಥಾ ಸಂದರ್ಭದಲ್ಲಿ ಲಸಿಕೆ ಪಡೆದು ಸೇಫ್ ಆಗ್ಬಹುದು ಎಂದುಕೊಂಡಿದ್ದ ಅನೇಕರು ಈಗ ಸ್ವಲ್ಪ ಆತಂಕಕ್ಕೆ ಒಳಗಾಗಿದ್ದಾರೆ. ಆದ್ರೆ ಅದರ ಬಗ್ಗೆ ಚಿಂತಿಸದೆ ನಿಮ್ಮ ಪಾಡಿಗೆ ನೀವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಒಂದಷ್ಟು ವಿಚಾರಗಳ ಬಗ್ಗೆ ಗಮನ ಹರಿಸಿ ಎನ್ನುತ್ತಾರೆ ವೈದ್ಯರು.  ಹಾಗಿದ್ರೆ ದೇಹದ ಇಮ್ಯುನಿಟಿ ಹೆಚ್ಚಿಸಿಕೊಳ್ಳೋಕೆ ಏನೆಲ್ಲಾ ಮಾಡಬಹುದು, ಅದರ ಪಟ್ಟಿ ಇಲ್ಲಿದೆ:

ವಿಟಮಿನ್ ಸಿ & ಜಿಂಕ್ ಹೆಚ್ಚಿರುವ ಆಹಾರವನ್ನು ಸೇವಿಸಿ

ನಿಮಗೀಗಾಗಲೇ ಗೊತ್ತಿರಬಹುದು, ಜ್ವರ-ಶೀತ-ನೆಗಡಿ ಬಂದವರಿಗೆ ಕೋವಿಡ್ ಪರೀಕ್ಷೆ ಆಗಿ ಅದರ ರಿಸಲ್ಟ್ ಬರುವ ಮುನ್ನ ವೈದ್ಯರು ಅವರಿಗೆ ಕೊಡುವ ಔಷಧಗಳ ಜೊತೆಗೆ ವಿಟಮಿನ್ ಸಿ ಮತ್ತು ಜಿಂಕ್ ಮಾತ್ರೆಗಳನ್ನು ಕೊಡ್ತಾರೆ. ಈ ಎರಡು ವಸ್ತುಗಳು ಇಡೀ ದೇಹದ ರೋಗನಿರೋಧಕ ಶಕ್ತಿಯನ್ನು ಬಹಳ ಪ್ರಬಲವಾಗಿ ಇರುವಂತೆ ನೋಡಿಕೊಳ್ಳುತ್ತವೆ. ಕಿತ್ತಳೆ, ನಿಂಬೆಹಣ್ಣು, ಮೂಸಂಬಿ, ಸ್ಟ್ರಾಬೆರಿ ಮುಂತಾದ ವಿಟಮಿನ್ ಸಿ ಹೆಚ್ಚಿರುವ ಹಣ್ಣು-ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ಧಾನ್ಯಗಳು, ಕಾಳುಗಳು, ಬೀನ್ಸ್, ಏಡಿ, ಸಮುದ್ರ ಆಹಾರಗಳಲ್ಲಿ ಜಿಂಕ್ ಹೇರಳವಾಗಿ ಇರುತ್ತದೆ. ಇವುಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸುವುದು ಉತ್ತಮ.

ವಿಟಮಿನ್ ಡಿ, ಇ ಮತ್ತು ಬೀಟಾ ಕೆರೋಟಿನ್ ಇರುವ ಆಹಾರಗಳನ್ನು ಬಳಸಿ

ಮೀನು, ಮೊಟ್ಟೆ ಮತ್ತು ಸೂರ್ಯರಶ್ಮಿ ವಿಟಮಿನ್ ಡಿ ಯ ಅತ್ಯುತ್ತಮ ಮೂಲಗಳು. ಕ್ಯಾರೆಟ್, ಹಸಿರು ಸೊಪ್ಪುಗಳು, ಡ್ರೈ ಫ್ರೂಟ್ಸ್ ಇವೆಲ್ಲವೂ ದೇಹದ ಆರೋಗ್ಯ ಕಾಪಾಡುವ ಸಂಜೀವಿನಿಗಳು. ಊಟದಲ್ಲಿ ಹೆಚ್ಚಾಗಿ ತಾಜಾ ತರಕಾರಿ, ಹಣ್ಣುಗಳ ಬಳಕೆ ದೇಹಕ್ಕೆ ಸೋಂಕು ಬಾರದಂತೆ ತಡೆಯಲು ಭದ್ರಕೋಟೆ ರಚಿಸುವಲ್ಲಿ ಸಹಕಾರಿಯಾಗುತ್ತವೆ.

ನೀರು- ದೇಹ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಿ

ದಿನಕ್ಕೆ ನಾಲ್ಕೈದು ಲೀಟರ್ ನೀರು ಕುಡೀರಿ ಅಂತ ಅನೇಕರು ಹೇಳ್ತಾರೆ. ಅಷ್ಟು ಆಗದಿದ್ರೆ ಕನಿಷ್ಟ 3 ಲೀಟರ್​ಗಳಷ್ಟಾದ್ರೂ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ದೇಹ ಹೈಡ್ರೇಟ್ ಆಗಿರುತ್ತದೆ. ನೀರಿನಂಶ ಉತ್ತಮವಾಗಿದ್ದಷ್ಟೂ ಸೋಂಕು ತಗಲುವ ಅಪಾಯ ಕಡಿಮೆ ಇರುತ್ತದೆ. ಅಲ್ಲದೇ ಏನು ತಿಂದರೂ ಅದನ್ನು ಸರಿಯಾಗಿ ಅರಗಿಸಿಕೊಳ್ಳೋಕೆ ದೇಹಕ್ಕೆ ನೀರಿನ ಅವಶ್ಯಕತೆ ಬಹಳ ಇರುತ್ತದೆ. ದೇಹದೊಳಗಿನ ಟಾಕ್ಸಿನ್​ಗಳನ್ನು ಹೊರಹಾಕುವುದಕ್ಕೂ ಇದು ಬೇಕೇ ಬೇಕು.ನಿಯಮಿತ ವ್ಯಾಯಾಮ ತಪ್ಪಿಸಬೇಡಿ

ಜಿಮ್, ಯೋಗ, ಏರೋಬಿಕ್ಸ್, ಜೂಂಬಾ...ಯಾವುದೂ ಇಲ್ಲದಿದ್ರೆ ಕನಿಷ್ಟ ವಾಕಿಂಗ್ ಆದ್ರೂ ಸರಿ. ಪ್ರತಿದಿನದ ವ್ಯಾಯಾಮವನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ. ವಾರದಲ್ಲಿ ಕನಿಷ್ಟ 5 ದಿನಗಳಾದರೂ ದಿನಕ್ಕೆ 40 ನಿಮಿಷಗಳಷ್ಟು ವ್ಯಾಯಾಮ ಮಾಡೋದ್ರಿಂದ ದೇಹವನ್ನು ಆರೋಗ್ಯವಂತವಾಗಿ ಇಡಲು ಸಾಧ್ಯ. ಆರೋಗ್ಯ ಉತ್ತಮವಾಗಿದ್ರೆ ಸೋಂಕು ಹತ್ತಿರಕ್ಕೂ ಸುಳಿಯುವುದಿಲ್ಲ.

ಇದನ್ನೂ ಓದಿhttps://kannada.news18.com/news/explained/myths-and-truths-around-corona-vaccine-doctors-clarify-them-all-sktv-557885.html

ಒಳ್ಳೆ ನಿದ್ದೆ ಮಾಡಿ

ನಿಮಗೆ ಆಶ್ಚರ್ಯ ಎನಿಸಬಹುದು. ಆದರೆ ಒಳ್ಳೆ ನಿದ್ದೆ ಕೂಡಾ ಉತ್ತಮ ಆರೋಗ್ಯದ ಗುಟ್ಟು. ಆಹಾರ, ವ್ಯಾಯಾಮದಷ್ಟೇ ವಿಶ್ರಾಂತಿ ಕೂಡಾ ದೇಹಕ್ಕೆ ಅತ್ಯವಶ್ಯಕ.  ಅಗತ್ಯ ವಿಶ್ರಾಂತಿ ಸಿಕ್ಕಾಗ ದೇಹ ಸೋಂಕಿನೊಡನೆ ಹೋರಾಡಲು ಶಕ್ತಿಯುತವಾಗಿರುತ್ತದೆ, ಹೊಸಾ ಎನರ್ಜಿ ಬಂದಂತಾಗುತ್ತದೆ. ಆದ್ದರಿಂದ 6ರಿಂದ 8 ಗಂಟೆಗಳ ವಿಶ್ರಾಂತಿ ಬಹಳ ಮುಖ್ಯ ಎನ್ನುತ್ತಾರೆ ವೈದ್ಯರು.

ಈ ಎಲ್ಲಾ ವಿಚಾರಗಳನ್ನು ಪ್ರತಿಯೊಬ್ಬರೂ ಪಾಲಿಸಬಹುದು. ಇವುಗಳ ಮೂಲಕ ಲಸಿಕೆ ಬರುವ ತನಕ ಎಚ್ಚರಿಕೆಯಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮಾಸ್ಕ್ ಧರಿಸೋದು, ದೈಹಿಕ ಅಂತರ ಕಾಪಾಡುವುದು ಮತ್ತು ಶುಚಿತ್ವ ಕಾಪಾಡುವುದು ವೈರಸ್ ವಿರುದ್ಧ ಹೋರಾಡಲು ಪ್ರಮುಖ ಅಸ್ತ್ರಗಳಾಗಿವೆ.
Published by: Soumya KN
First published: April 30, 2021, 1:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories