ಬೆಂಗಳೂರು (Bengaluru) ಮತ್ತು ನೆರೆಯ ರಾಜ್ಯಗಳಲ್ಲಿ ಕೋವಿಡ್-19 (Covide-19) ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಿಂದಾಗಿ, ನೆಗಡಿ, ಕೆಮ್ಮು, ಜ್ವರ, ಮೈಕೈ ನೋವು ಅಥವಾ ಹೊಟ್ಟೆನೋವಿನ ಲಕ್ಷಣಗಳಿರುವ (Symptoms) ಮಕ್ಕಳನ್ನು ತರಗತಿಗೆ ಕಳುಹಿಸದಂತೆ ಶಾಲೆಗಳು (School) ಪೋಷಕರ ಬಳಿ ಮನವಿ ಮಾಡಿಕೊಳ್ಳುತ್ತಿವೆ. ಬೆಂಗಳೂರಿನಲ್ಲಿ ಕಳೆದ 13 ದಿನಗಳಲ್ಲಿ ಪತ್ತೆಯಾದ ಸೋಂಕಿತ ಪ್ರಕರಣಗಳಲ್ಲಿ 13.42 ಪ್ರತಿಶತ ಸೋಂಕುಗಳು ಮಕ್ಕಳಲ್ಲಿಯೇ (Children) ಕಂಡು ಬಂದಿದೆ. ಸಾಂಕ್ರಾಮಿಕ ರೋಗ ಕೊರೋನಾ ಸೋಂಕು (Corona Virus) ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ಮನೆಯಲ್ಲಿಯೇ ಆನ್ಲೈನ್ ತರಗತಿ ಕೇಳುತ್ತಿದ್ದ ಮಕ್ಕಳು, ಈ ವರ್ಷ ಶಾಲೆ ಮೆಟ್ಟಿಲು ಹತ್ತಿದ್ದಾರೆ. ಇದೀಗ ತಾನೇ ಶಾಲೆಗಳು ಪುನರಾರಂಭವಾಗುತ್ತಿದ್ದು, ಅದರ ಬೆನ್ನಲ್ಲೇ ಸೋಂಕು ಏರಿಕೆ ಪ್ರಕರಣಗಳು ದಾಖಲಾಗುತ್ತಿವೆ.
340 ಮಕ್ಕಳಲ್ಲಿ ಕೋವಿಡ್ ಧೃಡೃ
ಬಿಬಿಎಂಪಿ ಆರೋಗ್ಯ ಬುಲೆಟಿನ್ ಪ್ರಕಾರ, ಬೆಂಗಳೂರಿನಲ್ಲಿ ಒಟ್ಟು 2,533 ಕೋವಿಡ್ -19 ಪ್ರಕರಣಗಳಲ್ಲಿ 340 ಮಕ್ಕಳಲ್ಲಿ ಕೋವಿಡ್ ಧೃಡೃವಾಗಿದೆ. 340 ಮಕ್ಕಳಲ್ಲಿ 237 ಮಂದಿ 10 ರಿಂದ 19 ವರ್ಷ ವಯಸ್ಸಿನವರು. ಆದಾಗ್ಯೂ, ಖುಷಿಪಡುವ ವಿಚಾರವೆಂದರೆ ಈ ವಯೋಮಾನದವರಲ್ಲಿ ಆಸ್ಪತ್ರೆಗೆ ದಾಖಲಾದವರ ಅಥವಾ ಸಾವಿನ ಸಂಖ್ಯೆಯಲ್ಲಿ ಯಾವುದೇ ಹೆಚ್ಚಳವಿಲ್ಲ ಎಂಬುವುದು ಕಂಡು ಬಂದಿದೆ.
ಕ್ಲಸ್ಟರ್ ಗಳು ಇನ್ನೂ ಆರಂಭವಾಗಿಲ್ಲ. ಈ ಹಿನ್ನೆಲೆಯಲ್ಲಿ ಆಂತಕ ಪಡುವ ಅಥವಾ ಶಾಲೆಗಳನ್ನು ಮುಚ್ಚಲು ಯಾವುದೇ ಕಾರಣವಿಲ್ಲ ಎಂದು ನಗರದ ವೈದ್ಯರು ಹೇಳಿದ್ದಾರೆ. ಆದಾಗ್ಯೂ, ಹೆಚ್ಚಿನ ಮಕ್ಕಳಲ್ಲಿ ಕೋವಿಡ್ ಪಾಸಿಟಿವ್ ಕಂಡು ಬರುತ್ತಿದೆ ಎಂದು ತಿಳಿಸಿದ್ದಾರೆ.
'ಶಾಲೆಗಳನ್ನು ಬಂದ್ ಮಾಡುವ ಅಗತ್ಯವಿಲ್ಲ'
ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ. ಈ ಮಕ್ಕಳಲ್ಲಿ ಹೆಚ್ಚಿನವರು ಮಹಾರಾಷ್ಟ್ರ ಅಥವಾ ತಮಿಳುನಾಡು ಪ್ರಯಾಣದ ಇತಿಹಾಸವನ್ನು ಹೊಂದಿದ್ದಾರೆ. ಆದರೆ, ಸೋಂಕಿತ ಮಕ್ಕಳಲ್ಲಿ ಸೌಮ್ಯ ಲಕ್ಷಣಗಳು ಕಂಡು ಬರುತ್ತಿವೆ. ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯವಾಗಿದೆ. “ಶಾಲೆಯನ್ನು ಮುಚ್ಚುವ ಬದಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುಬೇಕು. ಸೋಂಕು ಕಂಡು ಬಂದ ಕೂಡಲೇ ನಿರ್ದಿಷ್ಟ ತರಗತಿ ಕೊಠಡಿಗಳನ್ನು ಸ್ಯಾನಿಟೈಸ್ ಮಾಡುವುದು ಮುಖ್ಯವಾಗಿದೆ. ಜೊತೆಗೆ ಸೋಂಕಿತ ಮಕ್ಕಳೊಂದಿಗೆ ಸಂಪರ್ಕದಲ್ಲಿದ್ದವರನ್ನು 4-5 ದಿನ ಐಸೋಲೇಷನ್ ನಲ್ಲಿಡುವುದು ಮುಖ್ಯವಾಗುತ್ತದೆ, ”ಎಂದು ಜಯನಗರ ಆಸ್ಪತ್ರೆಯ ಡಾ. ಗೋಪಿಕೃಷ್ಣ ಟಿ ಹೇಳಿದ್ದಾರೆ.
ಇದನ್ನೂ ಓದಿ: Cabs In Bengaluru: ಬೆಂಗಳೂರಿನಲ್ಲಿ ಉಬರ್, ಓಲಾ ಸಿಗುತ್ತಿಲ್ಲವೇ? ಇದಕ್ಕೆ ಕಾರಣ ಇಲ್ಲಿದೆ ನೋಡಿ
ಏತನ್ಮಧ್ಯೆ, ಹಾಸ್ಟೆಲ್‌ಗಳಲ್ಲಿನ ಕೆಲವು ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾದ ಬಳಿಕ ಕೆಲವು ಶಾಲಾ-ಕಾಲೇಜುಗಳು 11 ಮತ್ತು 12ನೇ ತರಗತಿಗಳನ್ನು ಪುನರಾರಂಭಿಸುವುದನ್ನು ಮುಂದೂಡಿವೆ. “ಮುಂಬೈ ಮತ್ತು ಕೇರಳದಿಂದ ಹಿಂತಿರುಗಿದ ಕೆಲವು ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದ ನಂತರ ನಾವು 11ನೇ ತರಗತಿಯನ್ನು ಪುನಃ ತೆರೆಯುವುದನ್ನು ಮುಂದೂಡಿದ್ದೇವೆ. ಮತ್ತು 12 ನೇ ತರಗತಿಯನ್ನು ಆನ್‌ಲೈನ್ ಕ್ಲಾಸ್ ಮೂಲಕ ನಡೆಸುತ್ತಿದ್ದೇವೆ. ಇದು ಮುನ್ನೆಚ್ಚರಿಕೆ ಮತ್ತು ತಾತ್ಕಾಲಿಕ ವ್ಯವಸ್ಥೆ ಮಾತ್ರ” ಎಂದು ಕನಕಪುರ ರಸ್ತೆಯಲ್ಲಿರುವ ಪ್ರತಿಷ್ಠಿತ ಶಾಲೆ-ಕಾಲೇಜಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಯ ಬೇಡ, ಮುನ್ನೆಚ್ಚರಿಕೆ ಕ್ರಮ ಅನುಸರಿಸಿ
ಈ ಎಲ್ಲಾ ಬೆಳವಣಿಗೆ ನಡುವಲ್ಲೂ ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ ಎಂದು ಬಿಬಿಎಂಪಿ ಆರೋಗ್ಯ ವಿಶೇಷ ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ ಹೇಳಿದ್ದಾರೆ. “ಕೋವಿಡ್ ಸಂಖ್ಯೆಗಳಿಗೆ ಕೊಡುಗೆ ನೀಡುವ ಮಕ್ಕಳ ಶೇಕಡಾವಾರು ಪ್ರಮಾಣವು ಇನ್ನೂ ತುಂಬಾ ಕಡಿಮೆಯಾಗಿದೆ. ಶಾಲೆಗಳಿಂದ ಯಾವುದೇ ಕ್ಲಸ್ಟರ್‌ಗಳು ವರದಿಯಾಗಿಲ್ಲ. ನಾವು ಪರೀಕ್ಷೆಯನ್ನು ಹೆಚ್ಚಿಸುತ್ತಿದ್ದೇವೆ ಮತ್ತು ಎಲ್ಲಾ ILI ಮತ್ತು SARI ಪ್ರಕರಣಗಳನ್ನು ಪರೀಕ್ಷಿಸುತ್ತೇವೆ. ವೈದ್ಯರು, ಶಿಕ್ಷಕರು ಮತ್ತು ಪೋಷಕರು ಅರ್ಹ ಮಕ್ಕಳಿಗೆ ಲಸಿಕೆ ಹಾಕುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ,”ಎಂದು ಅವರು ವಿವರಿಸಿದರು.
ಇದನ್ನೂ ಓದಿ: Explained: ಅಪಾಯ ಮಟ್ಟ ಮೀರಿದ ಜಾಗತಿಕ ತಾಪಮಾನ; 2026ಕ್ಕೆ ಎದುರಾಗಲಿದೆಯೇ ಮಹಾ ಕಂಟಕ?
ಏತನ್ಮಧ್ಯೆ, ಪ್ರಸಿದ್ಧ ವೈರಾಲಜಿಸ್ಟ್ ಮತ್ತು ಭಾರತೀಯ SARS-COV-2 ಜೀನೋಮಿಕ್ಸ್ ಕನ್ಸೋರ್ಟಿಯಾ (Insacog) ಗೆ ಸಲಹಾ ಗುಂಪಿನ ಮಾಜಿ ಮುಖ್ಯಸ್ಥ ಡಾ. ಶಾಹಿದ್ ಜಮೀಲ್ ಮಾತನಾಡಿ, “ಮಕ್ಕಳು ಸೋಂಕಿಗೆ ಒಳಗಾಗುತ್ತಾರೆ ಮತ್ತು ಕಡಿಮೆ ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ಹೊಂದಿರುತ್ತಾರೆ. ಕೋವಿಡ್ -19 ಇನ್ನೂ ಮುಗಿದಿಲ್ಲ, ವೈರಸ್ ಇದೆ. ಇದನ್ನು ಜನರು ಅರಿತುಕೊಂಡು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ.” ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ