• ಹೋಂ
 • »
 • ನ್ಯೂಸ್
 • »
 • Explained
 • »
 • Karnataka Assembly Election: 'ಕೈ' ಟಿಕೆಟ್ ಬೊಮ್ಮಾಯಿ ಕ್ಷೇತ್ರಕ್ಕೂ ಇಲ್ಲ, ಶೆಟ್ಟರ್ ಕ್ಷೇತ್ರಕ್ಕೂ ಇಲ್ಲ! ಸಸ್ಪೆನ್ಸ್ ಹಿಂದಿದೆಯಾ ಡಿಕೆಶಿ ರಣತಂತ್ರ?

Karnataka Assembly Election: 'ಕೈ' ಟಿಕೆಟ್ ಬೊಮ್ಮಾಯಿ ಕ್ಷೇತ್ರಕ್ಕೂ ಇಲ್ಲ, ಶೆಟ್ಟರ್ ಕ್ಷೇತ್ರಕ್ಕೂ ಇಲ್ಲ! ಸಸ್ಪೆನ್ಸ್ ಹಿಂದಿದೆಯಾ ಡಿಕೆಶಿ ರಣತಂತ್ರ?

ಶೆಟ್ಟರ್-ಡಿಕೆಶಿ-ಬೊಮ್ಮಾಯಿ (ಸಂಗ್ರಹಚಿತ್ರ)

ಶೆಟ್ಟರ್-ಡಿಕೆಶಿ-ಬೊಮ್ಮಾಯಿ (ಸಂಗ್ರಹಚಿತ್ರ)

ಕಾಂಗ್ರೆಸ್ ಅಳೆದು ತೂಗಿ ಮೂರನೇ ಪಟ್ಟಿಯನ್ನೂ ರಿಲೀಸ್ ಮಾಡಿದೆ. ಆ ಲಿಸ್ಟ್‌ನಲ್ಲೂ ಶಿಗ್ಗಾಂವಿ ಕ್ಷೇತ್ರದ ಟಿಕೆಟ್ ಇನ್ನೂ ಸಸ್ಪೆನ್ಸ್ ಆಗಿಟ್ಟಿದೆ. ಅತ್ತ ಧಾರವಾಡ ಕೇಂದ್ರಕ್ಕೂ ಇನ್ನು ಅಭ್ಯರ್ಥಿಯನ್ನು ಘೋಷಿಸಿಲ್ಲ!

 • News18 Kannada
 • 3-MIN READ
 • Last Updated :
 • Karnataka, India
 • Share this:

  ವಿಧಾನಸಭಾ ಚುನಾವಣಾ ಕುರುಕ್ಷೇತ್ರಕ್ಕೆ ಸಜ್ಜಾಗ್ತಿರೋ ಕಾಂಗ್ರೆಸ್ (Congress), ಬಿಜೆಪಿ (BJP) ಹಾಗೂ ಜೆಡಿಎಸ್ (JDS) ವಿರುದ್ಧ ರಣತಂತ್ರ ರೂಪಿಸುತ್ತಿದೆ. ಬಿಜೆಪಿ ಬಂಡಾಯಗಾರರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಪ್ಲಾನ್ ಮಾಡುತ್ತಿದೆ. ಈಗಾಗಲೇ ಬಿಜೆಪಿ ತೊರೆದಿರುವ ಲಕ್ಷ್ಮಣ ಸವದಿ (Laxman Savadi), ಕಾಂಗ್ರೆಸ್‌ನ ಟಿಕೆಟ್ ಗಿಟ್ಟಿಸಿದ್ದಾರೆ. ಇನ್ನೂ ಹಲವರು ಕಾಂಗ್ರೆಸ್‌ನತ್ತ ಮುಖ ಮಾಡುವ ಸಾಧ್ಯತೆ ಇದೆ. ಈ ನಡುವೆ ಕಾಂಗ್ರೆಸ್ ಅಳೆದು ತೂಗಿ ಮೂರನೇ ಪಟ್ಟಿಯನ್ನೂ ರಿಲೀಸ್ ಮಾಡಿದೆ. ಆ ಲಿಸ್ಟ್‌ನಲ್ಲೂ ಶಿಗ್ಗಾಂವಿ (Shiggaon) ಕ್ಷೇತ್ರದ ಟಿಕೆಟ್‌ನ ಇನ್ನೂ ಸಸ್ಪೆನ್ಸ್ ಆಗಿಟ್ಟಿದೆ. ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bomami) ವಿರುದ್ಧ ಕಣಕ್ಕಿಳಿಯೋ ಕಾಂಗ್ರೆಸ್ ಹುರಿಯಾಳು ಯಾರೆಂಬುದಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಹೀಗಾಗಿ ಸಿಎಂ ಬೊಮ್ಮಾಯಿ ಪ್ರತಿನಿಧಿಸೋ ಶಿಗ್ಗಾಂವಿ ಕ್ಷೇತ್ರ ಭಾರೀ ಕುತೂಹಲ ಮೂಡಿಸಿದೆ.


  ಬೊಮ್ಮಾಯಿ ವಿರುದ್ಧ ತೊಡೆ ತಟ್ಟೋರು ಯಾರು?


  ಶಿಗ್ಗಾಂವಿ ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದು ಶಾಸಕರಾಗಿ, ಸಚಿವರಾಗಿ, ಇಂದು ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಬಿಜೆಪಿಯಿಂದ ಕಣಕ್ಕಿಳಿಯೋದು ಪಕ್ಕಾ ಆಗಿದೆ. ನಾಮಿನೇಷನ್ ಕೂಡಾ ಸಲ್ಲಿಸಿಯಾಗಿದೆ. ಆದ್ರೆ ಬೊಮ್ಮಾಯಿ ವಿರುದ್ಧ ಸ್ಪರ್ಧಿಸೋ ಕಾಂಗ್ರೆಸ್‌ ಅಭ್ಯರ್ಥಿ ಯಾರು ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.. ಕಾದು ನೋಡುವ ತಂತ್ರಕ್ಕೆ ಮುಂದಾಗಿರೋ ಕಾಂಗ್ರೆಸ್ ಹೈಕಮಾಂಡ್‌, ಬೊಮ್ಮಾಯಿ ಕಟ್ಟಿಹಾಕಲು ರಣತಂತ್ರ ರೂಪಿಸುತ್ತಿದೆ.
  ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರವೇನು?


  2008ರಲ್ಲಿ ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದು ಬೀಗಿದ್ದ ಬಸವರಾಜ ಬೊಮ್ಮಾಯಿ ನಂತರ 2013 ರಲ್ಲಿ ಕೆಜೆಪಿ-ಬಿಜೆಪಿ ಗದ್ದಲದ ನಡುವೆಯೂ ಬಿಜೆಪಿಯಿಂದ ಕಣಕ್ಕಿಳಿದು 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ರು.. 2018ರಲ್ಲಿ 3ನೇ ಬಾರಿಗೆ ಗೆದ್ದು ಶಿಗ್ಗಾಂವಿ ಸವಣೂರು ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ರು. ಆದ್ರೆ ಮೂರು ಬಾರಿಯೂ ಬೊಮ್ಮಾಯಿ ಗೆದ್ದಿರೋದು ಕೇವಲ 10-12 ಸಾವಿರ ಮತಗಳ ಅಂತರದಿಂದ. ಹೀಗಾಗಿ ಬೊಮ್ಮಾಯಿ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿದ್ರೆ ಗೆಲುವು ಸಾಧಿಸಬಹುದು ಅನ್ನೋದು ಕಾಂಗ್ರೆಸ್ ಹೈಕಮಾಂಡ್‌ ಲೆಕ್ಕಾಚಾರ.


  ಇದನ್ನೂ ಓದಿ: Laxman Savadi: ಸವದಿ ಸಿಟ್ಟು, ಡಿಕೆ ಡೈನಾಮೈಟ್‌, ಸಾಹುಕಾರ್‌ಗೆ ಸ್ಕೆಚ್‌! ಕುಂದಾನಗರಿ ಕೊತ ಕೊತ!


  ಬಸವರಾಜ ಬೊಮ್ಮಾಯಿಗೆ ಸೋಲುಣಿಸಲು ಪ್ಲಾನ್


  ಈ ಬಾರಿ ಬಸವರಾಜ ಬೊಮ್ಮಾಯಿ ಕ್ಷೇತ್ರವನ್ನ ಜಿದ್ದಿಗೆ ತೆಗೆದುಕೊಂಡಿರುವ ಕಾಂಗ್ರೆಸ್ ಶತಾಯಗತಾಯ ಸೋಲಿಸಲೇಬೇಕೆಂಬ ಪಣ ತೊಟ್ಟಂತಿದೆ. ಇದೇ ಕಾರಣಕ್ಕೆ ಇನ್ನೂ ಟಿಕೆಟ್ ಘೋಷಿಸದೇ ವಿಳಂಬ ಮಾಡ್ತಿದೆ ಎಂಬುದು ಮೂಲಗಳ ಮಾಹಿತಿ. ಶಿಗ್ಗಾಂವಿ ಕ್ಷೇತ್ರದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯದವರೇ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್‌ ಲಿಂಗಾಯತ ಮುಖಂಡ ವಿನಯ್ ಕುಲಕರ್ಣಿಯನ್ನ ಅಖಾಡಕ್ಕಿಳಿಸಿ ಬೊಮ್ಮಾಯಿ ಹಣಿಯಲು ಪ್ಲ್ಯಾನ್ ಮಾಡ್ತಿದೆ ಎಂಬುದು ಮಾಹಿತಿ.


  ಲಿಂಗಾಯತ ಅಸ್ತ್ರ ಬಳಸುತ್ತಾರಾ ಡಿಕೆಶಿ?


  ಕ್ಷೇತ್ರದಲ್ಲಿ ಪಂಚಮಸಾಲಿ ಹಾಗೂ ಮುಸ್ಲಿಂ ಮತಗಳೇ ನಿರ್ಣಾಯಕವಾಗಿವೆ. ಪಂಚಮಸಾಲಿ ಸಮಾಜದ 65-70 ಸಾವಿರ ಮತಗಳಿದ್ದರೆ, 60ರಿಂದ 65 ಸಾವಿರ ಮುಸ್ಲಿಂ ಮತಗಳಿವೆ. ಎಸ್ಸಿ 20 ಸಾವಿರ, ಎಸ್ಟಿ17 ಸಾವಿರ, ಕುರುಬ 20 ಸಾವಿರ ಮತಗಳಿವೆ. 2ಎ ಮೀಸಲಾತಿಗಾಗಿ ಪಂಚಮಸಾಲಿ ಹೋರಾಟ ಈ ಚುನಾವಣೆ ಮೇಲೆ ಪರಿಣಾಮ ಬೀರುವ ಆತಂಕದಲ್ಲಿ ಬಿಜೆಪಿ ನಾಯಕರಿದ್ದಾರೆ. ಒಂದ್ವೇಳೆ ಕಾಂಗ್ರೆಸ್‌ನಿಂದ ವಿನಯ್ ಕುಲಕರ್ಣಿ ಕಣಕ್ಕಿಳಿದಿದ್ದೇ ಆದ್ರೆ ಈ ಬಾರಿ ಶಿಗ್ಗಾಂವಿ ರಾಜಕೀಯ ಚಿತ್ರಣವೇ ಬದಲಾಗಲಿದೆ.
  ಶೆಟ್ಟರ್‌ಗೂ ಗಾಳ ಹಾಕ್ತಿದ್ದಾರಾ ಡಿಕೆಶಿ?


  ಶಿಗ್ಗಾಂವಿ ಅಷ್ಟೇ ಅಲ್ಲದೇ ಹುಬ್ಬಳ್ಳಿ -ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್‌ನೂ ಕಾಂಗ್ರೆಸ್‌ ಬಾಕಿ ಉಳಿಸಿಕೊಂಡಿದೆ. ಯಾಕಂದ್ರೆ ಬಿಜೆಪಿ ಆ ಕ್ಷೇತ್ರದಲ್ಲಿ ಜಗದೀಶ್‌ ಶೆಟ್ಟರ್‌ಗೆ ಟಿಕೆಟ್ ನೀಡದೇ ಇನ್ನೂ ಸತಾಯಿಸುತ್ತಿದೆ. ಬಿಜೆಪಿಯಿಂದ ಶೆಟ್ಟರ್‌ಗೆ ಟಿಕೆಟ್‌ ಸಿಗೋದು ಕೂಡಾ ಡೌಟ್‌ ಎನ್ನಲಾಗ್ತಿದೆ. ಒಂದು ವೇಳೆ ಬಿಜೆಪಿ ಟೆಕೆಟ್ ಕೊಡದಿದ್ರೆ ಜಗದೀಶ್ ಶೆಟ್ಟರ್‌ ಬಂಡಾಯ ಏಳುವ ಸಾಧ್ಯತೆ ಇದೆ. ಈಗಾಗಲೇ ಬೆಂಬಲಿಗರೊಂದಿಗೆ ಮಾತನಾಡಿರುವ ಶೆಟ್ಟರ್‌ ಬಿಜೆಪಿ ನಾಯಕರಿಗೆ ಆಗಲೇ ಬಂಡಾಯದ ಸಂದೇಶ ರವಾನಿಸಿದ್ದಾರೆ.


  ಇದನ್ನೂ ಓದಿ: Laxman Savadi: ಬಿಜೆಪಿ ವಿರುದ್ಧ ಸಮರ ಸಾರಿರುವ ಲಕ್ಷ್ಮಣ ಸವದಿ ಯಾರು? ಪ್ರಭಾವಿ ನಾಯಕನ ರಾಜಕೀಯ ಏಳುಬೀಳು ಹೇಗಿತ್ತು?


  ‘ಕಮಲ’ ಜಗಳ ‘ಕೈ’ಗೆ ಬಲ ತಂದುಕೊಡುತ್ತಾ?


  ಬಿಜೆಪಿಯೊಳಗಿನ ಇದೇ ಬಂಡಾಯವನ್ನ ಲಾಭ ಮಾಡಿಕೊಳ್ಳಲು ಮುಂದಾಗಿರೋ ಕಾಂಗ್ರೆಸ್‌ ಜಗದೀಶ್‌ ಶೆಟ್ಟರ್‌ನಾ ಪಕ್ಷಕ್ಕೆ ಸೆಳೆಯಲು ಮುಂದಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡಾ ಶೆಟ್ಟರ್‌ಗೆ ಬಹಿರಂಗ ಆಹ್ವಾನ ನೀಡಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್ ಮೂರನೇ ಪಟ್ಟಿಯಲ್ಲಿ ಹುಬ್ಬಳ್ಳಿ-ಧಾರವಾಡ ಕೇಂದ್ರದ ಟಿಕೆಟ್‌ನಾ ಪೆಂಡಿಂಗ್ ಇಟ್ಟುಕೊಂಡಿದೆ.
  ಈಗಾಗಲೇ ಸವದಿ ಕೂಡಾ ಕಾಂಗ್ರೆಸ್ ಮನೆ ಸೇರಿದ್ದು ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಈಗ ಶೆಟ್ಟರ್‌ ಕೂಡಾ ಕಾಂಗ್ರೆಸ್‌ ಹಾದಿ ಹಿಡಿದ್ರೆ ಬಿಜೆಪಿಗೆ ಭಾರೀ ಹೊಡೆತ ಬೀಳೋದ್ರಲ್ಲಿ ಅನುಮಾನವಿಲ್ಲ..

  top videos


   (ವರದಿ: ಹನುಮಂತ್ ಜೋಳದಾಳ, ನ್ಯೂಸ್ 18 ಕನ್ನಡ)

   First published: