• Home
 • »
 • News
 • »
 • explained
 • »
 • Joshimath: ಕುಸಿಯುತ್ತಿದೆಯೇ ಜೋಶಿಮಠ? ಇದು ಹಿಮಾಲಯ ಕರಗುವ ಮುನ್ಸೂಚನೆಯೇ?

Joshimath: ಕುಸಿಯುತ್ತಿದೆಯೇ ಜೋಶಿಮಠ? ಇದು ಹಿಮಾಲಯ ಕರಗುವ ಮುನ್ಸೂಚನೆಯೇ?

ಜೋಶಿಮಠದಲ್ಲಿ ಆತಂಕ

ಜೋಶಿಮಠದಲ್ಲಿ ಆತಂಕ

ಜೋಶಿಮಠ ಪುರಸಭೆಯ ಸಮೀಕ್ಷೆ ಪ್ರಕಾರ ಜೋಶಿಮಠದ 550 ಮನೆಗಳು ಕಳೆದೊಂದು ವರ್ಷದಿಂದ ಬಿರುಕು ಬಿಟ್ಟಿವೆಯಂತೆ! ಜೋಶಿಮಠ್ ‘ಮುಳುಗುತ್ತಿರುವ ನಗರ’ (sinking city) ಎಂದು ಉಲ್ಲೇಖಗೊಂಡಿದ್ದು ಮನೆಯೊಳಗೆ ನಿದ್ರಿಸಲು ಹೆದರುತ್ತಿರುವ ಜನರು ತೀವ್ರ ಚಳಿಯಲ್ಲಿಯೇ ಮನೆಯ ಹೊರಗೆ ನಿದ್ರಿಸುತ್ತಿದ್ದಾರೆ!

ಮುಂದೆ ಓದಿ ...
 • Trending Desk
 • 3-MIN READ
 • Last Updated :
 • Uttarakhand (Uttaranchal), India
 • Share this:

  ಉತ್ತರಾಖಾಂಡ್‌ನ (Uttarakhand) ಪರ್ವತ ಪಟ್ಟಣವಾದ ಜೋಶಿಮಠ್‌ನಲ್ಲಿ (Joshimath) ಕೆಲವೊಂದು ವಿಲಕ್ಷಣವಾದ ಘಟನೆಗಳು ಸಂಭವಿಸಿದ್ದು ಭೂಮಿಯೊಳಗಿನಿಂದ ಶಬ್ಧಗಳು ಕೇಳಿಬರುತ್ತಿದ್ದು ಮನೆ, ಕಟ್ಟಡಗಳಲ್ಲಿ ಬಿರುಕುಗಳು (cracks) ಕಂಡುಬಂದಿವೆ. ಜೋಶಿಮಠ್ ‘ಮುಳುಗುತ್ತಿರುವ ನಗರ’ (sinking city) ಎಂದು ಉಲ್ಲೇಖಗೊಂಡಿದ್ದು ಮನೆಯೊಳಗೆ ನಿದ್ರಿಸಲು ಹೆದರುತ್ತಿರುವ ಜನರು ತೀವ್ರ ಚಳಿಯಲ್ಲಿಯೇ ಮನೆಯ ಹೊರಗೆ ನಿದ್ರಿಸುತ್ತಿದ್ದಾರೆ. ತ್ವರಿತ ಪುನರ್‌ವಸತಿಗಾಗಿ ಕಾಯುತ್ತಿರುವ ಇಲ್ಲಿನ ನಿವಾಸಿಗಳು ಆತಂಕ ಹಾಗೂ ಭಯದಿಂದ ದಿನ ದೂಡುವಂತಾಗಿದೆ. ಗುರುವಾರದಿಂದ ತೆರವು ಕಾರ್ಯ ಆರಂಭಗೊಂಡಿದ್ದು, ಭೂ ಕುಸಿತದಿಂದ ಮನೆಗಳು ಮತ್ತು ದೇವಾಲಯಗಳ ಗೋಡೆಗಳು ಬಿರುಕು ಬಿಟ್ಟಿವೆ ಎಂದು ವರದಿಯಾಗಿದೆ. ಆಗಾಗ್ಗೆ ಭೂ ಕುಸಿತ ಉಂಟಾಗುತ್ತಿದ್ದು ಚಳಿಯಲ್ಲೇ ನಿವಾಸಿಗಳು ಮನೆಯಿಂದ ಹೊರಗೆ ನಿದ್ರಿಸುತ್ತಿದ್ದು ಮನೆಗಳ ಮೇಲ್ಛಾವಣಿ ಕೂಡ ಕುಸಿಯುತ್ತಿದ್ದು ಇದರಿಂದ ನಿವಾಸಿಗಳು ಭಯಗೊಂಡಿದ್ದಾರೆ.


  ಜೋಶಿಮಠ್ ಮುಳುಗುತ್ತಿದೆ ಭೂಮಿಯಿಂದ ಶಬ್ದ ಕೇಳಿಬರುತ್ತಿದೆ


  ಜೋಶಿಮಠ್ ಮುಳುಗುತ್ತಿದೆ ಎಂದು ಇಲ್ಲಿನ ನಿವಾಸಿಗಳು ಪ್ರತಿಭಟನೆಗಳು ನಡೆಸಿದ ಪರಿಣಾಮವಾಗಿ ದೇಶಾದ್ಯಂತ ಈ ಮುಳುಗುತ್ತಿರುವ ನಗರ ಗಮನ ಸೆಳೆಯಿತು. ಒಂದು ವರ್ಷದಿಂದ 500 ಕ್ಕೂ ಹೆಚ್ಚಿನ ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು ನಗರಸಭೆಯಲ್ಲಿ ಈ ಸಮಸ್ಯೆಯನ್ನು ಪ್ರಸ್ತುಪಡಿಸಲಾಗಿದೆ ಎಂಬುದು ವರದಿಯಾಗಿದೆ. ಆದರೆ ಆಡಳಿತವು ಈ ಕುರಿತು ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ನಿವಾಸಿಗಳು ಪ್ರತಿಭಟನೆ ನಡೆಸಿದರು.


  ತಜ್ಞರ ಸಮಿತಿ ಭೇಟಿ


  ಡಿಸೆಂಬರ್ 27 ರಂದು ತಜ್ಞರ ತಂಡ ಸ್ಥಳ ಪರಿಶೀಲನೆ ನಡೆಸಿತು. ಹಿರಿಯ ಅಧಿಕಾರಿಗಳು, ಭೂವಿಜ್ಞಾನ ತಜ್ಞರು, ಇಂಜಿನಿಯರ್‌ಗಳನ್ನು ಒಳಗೊಂಡ ಐವರು ಸದಸ್ಯರ ತಂಡ ಬಿರುಕು ಬಿಟ್ಟಿರುವ ಕಟ್ಟಡಗಳನ್ನು ಪರಿಶೀಲಿಸಿ, ಸಂತ್ರಸ್ತ ಜನರೊಂದಿಗೆ ಸಂವಹನ ನಡೆಸಿದರು ಹಾಗೂ ನಿವಾಸಿಗಳಿಗೆ ಆಶ್ವಾಸನೆ ನೀಡಿದರು ಎಂಬುದು ವರದಿಯಾಗಿದೆ.


  ಬಿರುಕು ಹಾಗೂ ಭೂಕುಸಿತ ಉಂಟಾಗಲು ಕಾರಣವೇನು?


  ಚಮೋಲಿಯು ಆಗಾಗ್ಗೆ ಭೂಕುಸಿತಗಳು ಮತ್ತು ಪ್ರವಾಹಕ್ಕೆ ಒಳಗಾದ್ದರಿಂದ ಗೋಡೆ ಹಾಗೂ ಕಟ್ಟಡಗಳ ಮೇಲಿನ ಬಿರುಕುಗಳು 2021 ರಲ್ಲಿ ಮೊದಲ ಬಾರಿಗೆ ವರದಿಯಾಗಿದೆ. ವರದಿಗಳ ಪ್ರಕಾರ, 2022 ರಲ್ಲಿ ಉತ್ತರಾಖಂಡ ಸರ್ಕಾರದ ತಜ್ಞರ ಸಮಿತಿಯು ಇದಕ್ಕೆ ಕಾರಣಗಳನ್ನು ತಿಳಿಸಿದ್ದು, ಮಾನವ ನಿರ್ಮಿತ ಕಟ್ಟಡಗಳು, ಕಾಮಗಾರಿಗಳು ಹಾಗೂ ನೈಸರ್ಗಿಕ ವಿಕೋಪವೇ ಜೋಶಿಮಠ್‌ನಲ್ಲಿ ಉಂಟಾಗುತ್ತಿರುವ ಹಾನಿಗೆ ಕಾರಣ ಎಂದು ತಿಳಿಸಿದೆ.


  ಇದನ್ನೂ ಓದಿ: Santro Ravi: ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದ! ಮಂಜುನಾಥ ಆಗಿದ್ದವ 'ಸ್ಯಾಂಟ್ರೋ ರವಿ' ಹೇಗಾದ?


  ಭೂಗರ್ಭದಲ್ಲಿರುವ ವಸ್ತುಗಳ ಅಗೆತ, ಸ್ಥಳಾಂತರವು ನಗರದಲ್ಲಿ ಭೂಕುಸಿತ ಬಿರುಕು ಹಾಗೂ ಮುಳುಗುವಿಕೆಗೆ ಕಾರಣವಾಗಿವೆ ಎಂದು ತಜ್ಞರ ತಂಡ ಸೂಚಿಸಿದೆ. ನೈಸರ್ಗಿಕ ಅಂಶಗಳಾದ ಬಂಡೆಗಳ ಸವೆತ, ಕಟ್ಟಡಗಳ ನಿರ್ಮಾಣ, ಜಲವಿದ್ಯುತ್ ಯೋಜನೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಕೂಡ ಕಾರಣವಾಗಿವೆ ಎಂಬುದಾಗಿ ಅಧ್ಯಯನಗಳು ಉಲ್ಲೇಖಿಸಿವೆ.


  ಮಾನವ ಜನಸಂಖ್ಯೆಯ ಮೇಲೆ ಪರಿಣಾಮ


  ಇತ್ತೀಚಿನ ವರದಿಗಳ ಪ್ರಕಾರ ಕನಿಷ್ಠ 66 ಕುಟುಂಬಗಳು ಪಟ್ಟಣವನ್ನು ತ್ಯಜಿಸಿವೆ ಮತ್ತು 561 ಮನೆಗಳು ಬಿರುಕು ಬಿಟ್ಟಿವೆ ಎಂದು ವರದಿಯಾಗಿದೆ. ಎರಡು ಹೋಟೆಲ್‌ಗಳನ್ನು ಮುಚ್ಚಲಾಗಿದೆ. ಇದುವರೆಗೆ 3000 ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.


  ಸ್ಥಳೀಯರು ತಿಳಿಸಿರುವ ಮಾಹಿತಿಗಳೇನು?


  ಸ್ಥಳೀಯರು ಪ್ರದೇಶದಲ್ಲಿ ನಡೆಯುತ್ತಿರುವ ಕ್ಷಿಪ್ರ ನಿರ್ಮಾಣ ಕಾಮಗಾರಿಗಳನ್ನು ದೂಷಿಸಿದ್ದಾರೆ. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ 6,000 ಅಡಿ ಎತ್ತರದಲ್ಲಿ ಜೋಶಿಮಠ್ ಇದ್ದು ಬದರಿನಾಥ್ ಮತ್ತು ಹೇಮಕುಂಡ್ ಸಾಹಿಬ್‌ಗೆ ಹೋಗುವ ಮಾರ್ಗದಲ್ಲಿ ಈ ಪಟ್ಟಣ ಕಂಡುಬರುತ್ತದೆ. ಈ ಪಟ್ಟಣವು ಭೂಕಂಪನ ವಲಯದಲ್ಲಿ ಬರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.


  ವಿಸ್ತರಿಸುತ್ತಿರುವ ಬಿರುಕು


  ಹಿಂದೂ ಧರ್ಮದ ಪ್ರಮುಖ ಸ್ಥಳಗಳಲ್ಲಿ ಒಂದಾದ ಜ್ಯೋತಿರ್ಮಠ ಚೀನಾದ ಗಡಿಗೆ ಸಮೀಪವಿರುವ ಮಿಲಿಟರಿ ಕೇಂದ್ರಗಳ ಬಳಿಯಲ್ಲಿದೆ. ಕಳೆದ ಎರಡು ವರ್ಷಗಳಿಂದ ಈ ಸ್ಥಳಗಳಲ್ಲಿ ಬಿರುಕುಗಳ ಪ್ರಕರಣಗಳು ವರದಿಯಾಗುತ್ತಲೇ ಇದ್ದು ಕಳೆದ ಕೆಲವು ದಿನಗಳಿಂದ ವಿಷಯಗಳು ಉಲ್ಭಣಗೊಂಡಿವೆ ಎಂದು ವರದಿಯಾಗಿದೆ. ಮನೆ, ರಸ್ತೆ, ಕಟ್ಟಡ, ಕೃಷಿ ಭವನಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಸುದ್ದಿಮಾಧ್ಯಮ ತಿಳಿಸುವಂತೆ ಪಟ್ಟಣದ ಎಲ್ಲಾ ಒಂಭತ್ತು ವಾರ್ಡ್‌ಗಳಲ್ಲಿ ಬಿರುಕುಗಳು ವಿಸ್ತರಿಸಿವೆ ಎಂಬುದು ವರದಿಯಾಗಿದೆ.


  550 ಮನೆಗಳಲ್ಲಿ ಬಿರುಕು!
  ಜೋಶಿಮಠ ಪುರಸಭೆಯ ಸಮೀಕ್ಷೆ ಪ್ರಕಾರ ಜೋಶಿಮಠದ 550 ಮನೆಗಳು ಕಳೆದೊಂದು ವರ್ಷದಿಂದ ಬಿರುಕು ಬಿಟ್ಟಿವೆ ಎಂದಾಗಿದೆ. ರವಿಗ್ರಾಮದಲ್ಲಿ 153, ಗಾಂಧಿನಗರದಲ್ಲಿ 127, ಮನೋಹರಬಾಗ್‌ನಲ್ಲಿ 71, ಸಿಂಗ್‌ಧಾರ್‌ನಲ್ಲಿ 52, ಪರ್ಸಾರಿಯಲ್ಲಿ 50, ಅಪ್ಪರ್ ಬಜಾರ್‌ನಲ್ಲಿ 29, ಸುನೀಲ್‌ನಲ್ಲಿ 27, ಮಾರ್ವಾಡಿಯಲ್ಲಿ 28, ಸೇರಿದಂತೆ ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಇದುವರೆಗೆ 561 ಮನೆಗಳು ಬಿರುಕು ಬಿಟ್ಟಿವೆ ಎಂದು ಲೋವರ್ ಬಜಾರ್‌ನಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಎನ್.ಕೆ ಜೋಶಿ ಮಾಹಿತಿ ನೀಡಿದ್ದಾರೆ.


  ಮರದ ಕಂಬಗಳನ್ನು ಬಳಸಿದ ನಿವಾಸಿಗಳು


  ಹತ್ತಿರದ ಚಮೋಲಿಯಲ್ಲಿ ಭೂಕುಸಿತದ ನಂತರ 2021 ರಲ್ಲಿ ಮನೆಗಳಲ್ಲಿ ಕಾಣಿಸಿಕೊಂಡ ಬಿರುಕುಗಳು ರಾಷ್ಟ್ರವ್ಯಾಪಿ ಸುದ್ದಿಯಾದವು. ತದನಂತರ ನಿವಾಸಿಗಳು ತಮ್ಮ ಮನೆಗಳಿಗೆ ಆಧಾರವಾಗಿ ಮರದ ಕಂಬಗಳನ್ನು ಬಳಸಲಾರಂಭಿಸಿದರು. ಡಿಸೆಂಬರ್ 22 ರಂದು, ಹೆಲಾಂಗ್-ಜೋಶಿಮಠ ಹೆದ್ದಾರಿಯ ಒಂದು ಭಾಗವು ಸಂಪೂರ್ಣವಾಗಿ ಕುಸಿದಿದೆ ಎಂದು ಸುದ್ದಿಮಾಧ್ಯಮ ವರದಿ ಮಾಡಿದೆ. ನೆಲದಿಂದ ಶಬ್ಧಗಳು ಬರುತ್ತಿದ್ದು ನಿವಾಸಿಗಳು ಭಯಗೊಂಡಿದ್ದಾರೆ.


  ಇದು ಏಕೆ ಸಂಭವಿಸುತ್ತಿದೆ?


  ಇದಕ್ಕೆ ಕಾರಣ ಮಾನವ ನಿರ್ಮಿತ ಕಟ್ಟಡಗಳು ಹಾಗೂ ಕೆಲವೊಂದು ನೈಸರ್ಗಿಕ ಅಂಶಗಳು ಎಂದು ತಜ್ಞರು ತಿಳಿಸಿದ್ದಾರೆ. ಅತಿಯಾದ ಕಟ್ಟಡಗಳ ನಿರ್ಮಾಣದಿಂದಾಗಿ ಈ ಪ್ರದೇಶವು ಹಲವಾರು ದೊಡ್ಡ ಪ್ರಮಾಣದ ಭೂಕುಸಿತಗಳಿಗೆ ಸಾಕ್ಷಿಯಾಗಿದೆ.


  ಸುರಂಗ ಮತ್ತು ಇಳಿಜಾರು ಕಡಿತ ಬಿರುಕಿಗೆ ಕಾರಣ


  2009 ಮತ್ತು 2012 ರ ನಡುವೆ ಚಮೋಲಿ-ಜೋಶಿಮಠ ಪ್ರದೇಶದಲ್ಲಿ 128 ಭೂಕುಸಿತಗಳು ದಾಖಲಾಗಿವೆ ಎಂದು ಸಿಎಸ್ಐಆರ್ ಮುಖ್ಯ ವಿಜ್ಞಾನಿ ಡಿಪಿ ಕನುಂಗೋ ತಿಳಿಸಿದ್ದಾರೆ. ಸರ್ವಋತು ಚಾರ್ ಧಾಮ್ ರಸ್ತೆ ಯೋಜನೆಯಲ್ಲಿ ಹೈಪವರ್ ಕಮಿಟಿ (ಎಚ್‌ಪಿಸಿ) ಮಾಜಿ ಅಧ್ಯಕ್ಷ ರವಿ ಚೋಪ್ರಾ, ಸುರಂಗ ಮತ್ತು ಇಳಿಜಾರು ಕಡಿತವನ್ನು ದೂಷಿಸಿದ್ದಾರೆ. 1976 ರಿಂದ ಸಮಿತಿಯು ಪ್ರತಿಪಾದಿಸಿರುವ ಮುನ್ನೆಚ್ಚರಿಕೆಗಳನ್ನು ಪಾಲಿಸಿಲ್ಲ ಎಂದು ತಿಳಿಸಿರುವ ರವಿ ಚೋಪ್ರಾ, ನಗರವು ಕ್ಷಿಪ್ರ ಬೆಳವಣಿಗೆಯನ್ನು ಪಡೆಯುವುದರೊಂದಿಗೆ ರಂಧ್ರವಿರುವ ಸುರಂಗವನ್ನು ಅಗೆಯುವುದು ಪಟ್ಟಣದ ಪ್ರಸ್ತುತ ಸಮಸ್ಯಗೆ ಮುಖ್ಯ ಕಾರಣವಾಗಿದೆ ಎಂದು ತಿಳಿಸಿದ್ದಾರೆ.


  ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮದ ವಿರುದ್ಧ ಆಕ್ರೋಶ


  ನಾಗರಿಕರು ಪ್ರಸ್ತುತ ಸಮಸ್ಯೆಗೆ ಉಷ್ಣ ವಿದ್ಯುತ್ ನಿಗಮವನ್ನು ದೂರಿದ್ದು ಪುನರ್ವಸತಿಗಾಗಿ ತಮ್ಮ ಮನವಿಗಳಿಗೆ ಸರಕಾರವು ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ. ಜೋಶಿಮಠ ಬಚಾವೋ ಸಂಘರ್ಷ ಸಮಿತಿಯ ಸಂಚಾಲಕ ಅತುಲ್ ಸತಿ ಸುದ್ದಿಮಾಧ್ಯಮಗಳಿಗೆ ವರದಿ ನೀಡಿದ್ದು, ಅಂತರ್ಜಲ ಒಳಗೊಂಡಿರುವ ಬಂಡೆಯಲ್ಲಿನ ಸುರಂಗದಲ್ಲಿ ನೀರು ಸೋರಿಕೆ ಉಂಟಾಗಿರುವುದರಿಂದ ನೀರಿನ ಮೂಲಗಳು ಒಣಗಲು ಕಾರಣವಾಗಿದೆ ಎಂದು NTPC ಅಂಗೀಕರಿಸಿದೆ ಎಂಬುದನ್ನು ತಿಳಿಸಿದ್ದಾರೆ.


  ಪರ್ವತ ಪ್ರದೇಶದ ಒಳಗಿರುವ ಅಂತರ್ಜಲ ಸೋರಿಕೆ


  ಜೋಶಿಮಠದ ಪರ್ವತ ಪ್ರದೇಶದ ಒಳಗಿರುವ ಅಂತರ್ಜಲವು ಸೋರುತ್ತಿದ್ದು ನೀರಿನ ಸೋರಿಕೆ ನಿರಂತರವಾಗಿದೆ ಹೀಗಾಗಿ ಕುಸಿತ ಉಂಟಾಗುತ್ತಿದೆ. ಇದೇ ರೀತಿ ಪರ್ವತಗಳ ಒಳಗೂ ಸಂಭವಿಸಿರಬಹುದು ಎಂಬುದು ಪರಿಸರವಾದಿ ರವಿ ಚೋಪ್ರಾ ಹೇಳಿಕೆಯಾಗಿದೆ.


  ಮಾಹಿತಿ ಸುಳ್ಳು ಎಂದು ತಿಳಿಸಿರುವ ಅಧಿಕಾರಿಗಳು


  NTPC ಅಧಿಕಾರಿಗಳು ಈ ಮಾಹಿತಿ ನಿಜವಲ್ಲ ಸುಳ್ಳು ಎಂದು ತಳ್ಳಿಹಾಕಿದ್ದಾರೆ. ಸುರಂಗವು ಒಣಗಿದೆ ಮತ್ತು ಯೋಜನೆಯಿಂದಾಗಿ ಜೋಶಿಮಠವು ಮುಳುಗುತ್ತಿಲ್ಲ ಎಂಬುದು ಅಧಿಕಾರಿಗಳ ಮಾತಾಗಿದೆ.


  ಪ್ರತಿಭಟನೆ ನಡೆಸಿರುವ ನಿವಾಸಿಗಳು


  ಜೋಶಿಮಠದ ದುಸ್ಥಿತಿಗೆ ಕಾರಣ ಆಡಳಿತದ ಉದಾಸೀನ ಪ್ರವೃತ್ತಿ ಹಾಗೂ ಎನ್‌ಟಿಪಿಸಿ ಯೋಜನೆಗಳು ಎಂದು ನಗರವಾಸಿಗಳು ಪ್ರತಿಭಟಿಸಿದ್ದು ಬಂದ್‌ಗಳನ್ನು ನಡೆಸುತ್ತಿದ್ದಾರೆ. ನಿವಾಸಿಗಳು ತಕ್ಷಣದ ಪುನವರ್ಸತಿ ಸೌಲಭ್ಯವನ್ನು ಬಯಸುತ್ತಿದ್ದು, ಎನ್‌ಟಿಪಿಸಿ ಸುರಂಗ ನಿರ್ಮಾಣ ಮತ್ತು ಬದರಿನಾಥಕ್ಕೆ ಹೆಲಂಗ್ ಮತ್ತು ಮಾರ್ವಾಡಿ ನಡುವೆ ಬೈಪಾಸ್ ರಸ್ತೆ ನಿರ್ಮಾಣವನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ


  ನಿವಾಸಿಗಳ ತಾತ್ಕಾಲಿಕ ವರ್ಗಾವಣೆ


  ಮನೆಗಳಿಗೆ ಉಂಟಾಗುತ್ತಿರುವ ಹಾನಿಯ ಪ್ರಮಾಣವು ಭಿನ್ನವಾಗಿದ್ದು ಇದುವರೆಗೆ ಹೆಚ್ಚು ಹಾನಿಗೊಳಗಾದ ಮನೆಗಳಿಂದ 29 ಕುಟುಂಬಗಳನ್ನು ಪಟ್ಟಣದಿಂದ ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂಬುದು ರವಿ ಚೋಪ್ರಾ ಮಾತಾಗಿದೆ. ಇನ್ನಷ್ಟು ಕುಟುಂಬಗಳನ್ನು ಸ್ಥಳಾಂತರಿಸಲಾಗುತ್ತದೆ ಎಂಬುದು ರವಿಯರ ಹೇಳಿಕೆಯಾಗಿದೆ.


  ಇದನ್ನೂ ಓದಿ: Explainer: ಅಮೆರಿಕಾದೆಲ್ಲೆಡೆ ಬಾಂಬ್ ಸೈಕ್ಲೋನ್‌ನ ಆರ್ಭಟ! ಚಳಿಗಾಲದ ಚಂಡಮಾರುತ ಆರಂಭ


  ಮುಖ್ಯಮಂತ್ರಿಗಳ ಆಶ್ವಾಸನೆ


  ನಗರ ಪಾಲಿಕೆ ಭವನ, ಪ್ರಾಥಮಿಕ ಶಾಲಾ ಕಟ್ಟಡ, ಮಿಲನ್ ಕೇಂದ್ರ ಮತ್ತು ಜೋಶಿಮಠ ಗುರುದ್ವಾರ ಸೇರಿದಂತೆ ಸ್ಥಳಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೋಶಿಮಠದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಮತ್ತು ಪರಿಸ್ಥಿತಿಯನ್ನು ಅವಲೋಕಿಸಲು ಸ್ಥಳಕ್ಕೆ ಭೇಟಿ ನೀಡುವುದಾಗಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.

  Published by:Annappa Achari
  First published: