Climate Change: ಹವಾಮಾನ ಬದಲಾವಣೆಯು ತಿನ್ನುವ ಅನ್ನಕ್ಕೆ ಸಂಚಕಾರ ತರಲಿದೆ; ಅಧ್ಯಯನಗಳು

Explained Climate change and it's effect on food production: ಅಂದಾಜು ಮೂರು ವರ್ಷಗಳ ಹಿಂದೆ ಊಹಿಸಿದ್ದಕ್ಕಿಂತಲೂ ಒಂದು ದಶಕದಷ್ಟು ಹಿಂದಿನದಾಗಿದೆ ಎಂದು United Nations ಮೌಲ್ಯಮಾಪನ ವರದಿ ಬಹಿರಂಗಪಡಿಸಿದೆ

ಹವಾಮಾನ ಬದಲಾವಣೆ

ಹವಾಮಾನ ಬದಲಾವಣೆ

 • Share this:
  Climate Change and Effect: 2021 ರಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳು ಹಿಂದೆಂದಿಗಿಂತಲೂ ಹೆಚ್ಚು ಗೋಚರವಾಗುತ್ತಿದ್ದು ಜಾಗತಿಕ ತಾಪಮಾನವು ಉಚ್ಛ್ರಾಯ ಸ್ಥಿತಿಯನ್ನು ತಲುಪಿದ್ದು ಭೂಮಿಯ ಸರಾಸರಿ ಉಷ್ಣತೆಯು 2030 ರ ಸುಮಾರಿಗೆ 1.5 ಡಿಗ್ರಿ ತಲುಪಬಹುದು ಎಂಬುದಾಗಿ ಅಂದಾಜಿಸಲಾಗಿದ್ದು, ಈ ಅಂದಾಜು ಮೂರು ವರ್ಷಗಳ ಹಿಂದೆ ಊಹಿಸಿದ್ದಕ್ಕಿಂತಲೂ ಒಂದು ದಶಕದಷ್ಟು ಹಿಂದಿನದಾಗಿದೆ ಎಂದು United Nations ಮೌಲ್ಯಮಾಪನ ವರದಿ ಬಹಿರಂಗಪಡಿಸಿದೆ.

  ಹವಾಮಾನ ಬದಲಾವಣೆಯ ಅಂತರ್ ಸರಕಾರಿ ಸಮಿತಿ (IPCC) ಬಾಂಬ್ ಶೆಲ್ ತಿಳಿಸಿರುವಂತೆ ಮಾನವ ಜನಾಂಗ ಎಷ್ಟು ಪರಿಣಾಮಕಾರಿಯಾಗಿ ಇಂಗಾಲದ ಮಾಲಿನ್ಯವನ್ನು ಕಡಿಮೆ ಮಾಡಿದರೂ ಹವಾಮಾನ ವೈಪರೀತ್ಯ ಮಿತಿಮೀರಲಿದೆ ಎಂದು ತಿಳಿಸಿದೆ. 195 ರಾಷ್ಟ್ರಗಳು ಅನುಮೋದಿಸಿರುವ ಗಂಭೀರ ವರದಿಯು ಹವಾಮಾನ ಬದಲಾವಣೆಯ ಅಸ್ತಿತ್ವಕ್ಕೆ ಸಂಚನ್ನುಂಟು ಮಾಡಲಿದೆ ಎಂಬ ಅಂಶವನ್ನು ಆಧರಿಸಿ ಸರಕಾರಗಳು ಈ ನಿಟ್ಟಿನಲ್ಲಿ ಗಮನ ಹರಿಸುತ್ತಿವೆ. ಇಲ್ಲಿಯವರೆಗೆ ದಾಖಲಾದ 1.1ಸೆಲ್ಸಿಯಸ್ ತಾಪಮಾನದೊಂದಿಗೆ ಹವಾಮಾನ ಬದಲಾವಣೆಯಿಂದ ಹೆಚ್ಚಾದ ಮಾರಣಾಂತಿಕ ವಿಪತ್ತುಗಳು, ಕೆನಡಾದಲ್ಲಿ ಡಾಂಬರನ್ನೇ ಕರಗಿಸುವ ಶಾಖದ ಅಲೆಗಳು ಚೀನಾದ ನಗರಗಳನ್ನು ನದಿಗಳನ್ನಾಗಿ ಪರಿವರ್ತಿಸಿದ ಮಳೆ ಬಿರುಗಾಳಿಗಳು, ಗ್ರೀಸ್ ಹಾಗೂ ಕ್ಯಾಲಿಫೋರ್ನಿಯಾದ ಅರಣ್ಯವನ್ನು ಆವರಿಸಿದ ಕಾಳ್ಗಿಚ್ಚು ಮೊದಲಾದ ಉದಾಹರಣೆಗಳನ್ನು ಪಟ್ಟಿಮಾಡುತ್ತಲೇ ಹೋಗಬಹುದು.

  ಜಾಗತಿಕ ತಾಪಮಾನದಲ್ಲಿ ಕೊಂಚ ಏರಿಕೆಯಾದರೂ ಕರಾವಳಿಯ ಪ್ರವಾಹವು ಪ್ರತೀ ವರ್ಷ ಉಂಟಾಗುವ ಸಂಭವವಿದ್ದು ಸಮುದ್ರಗಳಿಂದ ಚಂಡಮಾರುತಗಳು ಉಂಟಾಗುವ ಅಪಾಯ ಇದ್ದೇ ಇದೆ ಎನ್ನಲಾಗಿದೆ. ಪರಿಸರದ ಈ ಬದಲಾವಣೆಗಳು ಪ್ರಮುಖವಾಗಿ ಬೆಳೆ ಉತ್ಪಾದನೆಯ ಮೇಲೂ ಕರಿನೆರಳನ್ನು ಉಂಟುಮಾಡಲಿದೆ ಎಂಬುದು ಈಗ ಹೆಚ್ಚು ಕಾಡುತ್ತಿರುವ ಸಮಸ್ಯೆಗಳಲ್ಲಿ ಒಂದಾಗಿದೆ. ನಾಸಾ ಪಾಲುದಾರ ಏಜೆನ್ಸಿಗಳ ಜೊತೆಗೂಡಿ ಈ ಪರಿಸರ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ. ಇದರ ಜೊತೆಗೆ ಉಪಗ್ರಹ ದತ್ತಾಂಶವನ್ನು ಒದಗಿಸುವ ಸುಧಾರಿತ ಕಂಪ್ಯೂಟರ್ ತಂತ್ರಜ್ಞಾನಗಳನ್ನು ಬಳಸುತ್ತಿದ್ದು ಭವಿಷ್ಯದಲ್ಲಿ ಭೂಮಿಯ ವಾತಾವರಣವು ನಿರಂತರ ಹಸಿರು ಮನೆ ಅನಿಲ ಹೊರಸೂಸುವಿಕೆಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಅನುಕರಿಸುತ್ತಿದೆ.

  ಇದನ್ನೂ ಓದಿ: ಬಾಲ್ಯದಲ್ಲಿ ಮನೆಯಲ್ಲಿ ಕರೆಂಟ್​ ಕೂಡ ಇರಲಿಲ್ಲ, ಇಂದು ದಿನವೊಂದಕ್ಕೆ ಗಳಿಸ್ತಾರೆ 153 ಕೋಟಿ ಈ ಉದ್ಯಮಿ

  ಸಸ್ಯಗಳಲ್ಲಿನ ಶಾರೀರಿಕ ಬದಲಾವಣೆಗಳು ಕ್ಷಿಷ್ಟವಾಗಲಿದ್ದು ಬೆಳೆ ಪ್ರಕಾರಗಳಿಗೆ ಅವು ಬದ್ಧವಾಗಿರುತ್ತವೆ ಹಾಗೂ ಹವಾಮಾನ ಪರಿಣಾಮಗಳು ಪ್ರಾದೇಶಿಕ ಹಾಗೂ ಸ್ಥಳೀಯ ಮಟ್ಟದಲ್ಲಿ ಕಂಡುಬರಲಿವೆ ಎಂದು ತಿಳಿಸಿದೆ. ವಿವಿಧ ಪ್ರದೇಶಗಳು ವಿಭಿನ್ನ ಶಾಖದ ತೀವ್ರತೆಗೆ ಒಳಗಾಗಲಿವೆ ಇದು ಬೆಳೆಗಳನ್ನು ಬೆಳೆಯುವ ಮಾದರಿಯಲ್ಲಿನ ಪರಿಣಾಮಗಳನ್ನು ಆಧರಿಸಿರುತ್ತದೆ ಎಂದು ನಾಸಾ ತಿಳಿಸಿದೆ. ಉಷ್ಣವಲಯದಲ್ಲಿ ನೀವು ಹೆಚ್ಚು ಬೆಳೆದಂತೆ ನಿಮಗೆ ಇಳುವರಿ ದೊರೆಯುವುದಿಲ್ಲ ನೀವು ಇನ್ನೂ ಹೆಚ್ಚಿನ ಸಂಕಷ್ಟಕ್ಕೆ ಒಳಗಾಗುತ್ತೀರಿ. ಏಕೆಂದರೆ ಈಗಾಗಲೇ ಬೆಚ್ಚಗಿರುವ ಪ್ರದೇಶದಲ್ಲಿ ಹೆಚ್ಚಿದ ತಾಪಮಾನವು ತೀವ್ರವಾಗಿರುತ್ತದೆ. ಎಂದು GISS ನಲ್ಲಿ AgMIP ಅಡಿಯಲ್ಲಿ ಗ್ಲೋಬಲ್ ಗ್ರಿಡೆಡ್ ಕ್ರಾಪ್ ಮಾಡೆಲ್ ಇಂಟರ್‌ಕಾಂಪರಿಸನ್ ಪ್ರಾಜೆಕ್ಟ್‌ನ ಸಂಯೋಜಕರಾದ ಜೊನಾಸ್ ಜೆಗರ್‌ಮೇರ್ ತಿಳಿಸಿದ್ದಾರೆ.

  ಇದನ್ನೂ ಓದಿ: 

  ಭವಿಷ್ಯದ ಜಾಗತಿಕ ಗೋಧಿ ಉತ್ಪಾದನೆಯನ್ನು ಯೋಜಿತ ಜಾಗತಿಕ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್ ಮತ್ತು 2.0 ಡಿಗ್ರಿ ಸೆಲ್ಸಿಯಸ್ನಂತೆ ಪೂರ್ವ-ಕೈಗಾರಿಕಾ ತಾಪಮಾನಗಳಿಗಿಂತ ಹೆಚ್ಚಿನ ಮಟ್ಟದಲ್ಲಿ ಭವಿಷ್ಯದ ಜಾಗತಿಕ ಗೋಧಿ ಉತ್ಪಾದನೆಯನ್ನು ಮಿತಿಗೊಳಿಸಿದೆ. ಇಂಗಾಲದ ಡೈಆಕ್ಸೈಡ್‌ನ ಫಲೀಕರಣ ಪರಿಣಾಮವನ್ನು ಗಣನೆಗೆ ತೆಗೆದುಕೊಂಡು, ಅಮೆರಿಕಾ ಹಾಗೂ ಯುರೋಪ್‌ಗಳಂತಹ ಹೆಚ್ಚಿನ ಸಮಶೀತೋಷ್ಣಪ್ರದೇಶಗಳಲ್ಲಿ ಚಳಿಗಾಲದ ಧಾನ್ಯದ ಇಳುವರಿ ಅಥವಾ ವಸಂತಕಾಲದಲ್ಲಿ ನಾಟಿ ಮಾಡಿದ ಗೋಧಿಯು ಸುಮಾರು 5% ದಷ್ಟು ಹೆಚ್ಚಾಗಿದೆ ಹಾಗೂ ಮಧ್ಯ ಅಮೆರಿಕಾ ಹಾಗೂ ಆಫ್ರಿಕಾದ ಭಾಗಗಳಾದ ಬೆಚ್ಚಗಿನ ಪ್ರದೇಶಗಳಲ್ಲಿ ಇದು 2 ರಿಂದ 3% ದಷ್ಟು ಕಡಿಮೆಯಾಗಿದೆ. ಭಾರತದಲ್ಲಿ ವಿಶೇಷವಾಗಿ ಜಾಗತಿಕ ಗೋಧಿ 14% ಉತ್ಪಾದಿಸುವ ದೇಶವು ಕಡಿಮೆ ಗೋಧಿ ಇಳುವರಿಗಳನ್ನು ಕಂಡಿದೆ ಎಂಬುದಾಗಿ ಅಧ್ಯಯನಗಳು ತಿಳಿಸಿವೆ.
  Published by:Sharath Sharma Kalagaru
  First published: