Explained: ಬಾಡಿಗೆ ತಾಯಿ ಎಂದರೇನು, ಹೇಗೆ ನಡೆಯುತ್ತೆ ಈ ಪ್ರಕ್ರಿಯೆ? ಇಲ್ಲಿದೆ Full details

ಬಾಡಿಗೆ ತಾಯಿಯೆಂದರೆ ಮಕ್ಕಳಿಲ್ಲದ ದಂಪತಿಗಳಿಗೋಸ್ಕರ ಓರ್ವ ಮಹಿಳೆ ಗರ್ಭಧರಿಸಿ ಮಗುವನ್ನು ಹೆತ್ತು ನಂತರ ಆ ದಂಪತಿಗಳಿಗೆ ನೀಡುವುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತದಲ್ಲಿ ಬಾಡಿಗೆ ತಾಯಿ ಹೊಂದುವ ಪ್ರಕ್ರಿಯೆ ಕುರಿತು ಅನೇಕರಲ್ಲಿ ಹಲವು ಗೊಂದಲಗಳಿವೆ. ಬಾಡಿಗೆ ತಾಯಿ (Surrogate Mother) ಎಂದರೆ ಮಕ್ಕಳಾಗದ ದಂಪತಿಗಳು ಮಕ್ಕಳು ಹೊಂದಲು ಇರೋ ಉತ್ತಮ ಮಾರ್ಗ. ಇತ್ತೀಚಿನ ದಿನಗಳಲ್ಲಿ ಬಂಜೆತನದ ಸಮಸ್ಯೆಯಿಂದ ಹಲವರು ಬಳಲುತ್ತಿದ್ದು ಇಂತವರಿಗೆ ಬಾಡಿಗೆ ತಾಯಿ ವ್ಯವಸ್ಥೆ ವರದಾನವಾಗಿದೆ. ಬಂಜೆತನ (Infertility) ದಿಂದ ಬಳಲುತ್ತಿರುವ ಮಹಿಳೆಯರಲ್ಲಿ ಕಾರಣಾಂತರಗಳಿಂದ ಗರ್ಭವತಿ (Pregnant) ಆಗಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಉಂಟಾದಾಗ ಈ ಅಂತಿಮ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬಹುದು. ಗರ್ಭಾವಧಿ ಬಾಡಿಗೆ ತಾಯ್ತನದಲ್ಲಿ ಭ್ರೂಣ ಮರು ಉತ್ಪಾದನಾ (Fetal re-production) ಲ್ಯಾಬ್​ನಲ್ಲಿ ಸೃಷ್ಟಿಯಾಗಿ ಬಾಡಿಗೆ ಗರ್ಭಾಶಯ (Uterus) ಕ್ಕೆ  ವರ್ಗಾವಣೆಯಾಗುತ್ತೆ. 9 ತಿಂಗಳ ಬಳಿಕ ಮಗುವನ್ನು ದಂಪತಿಗಳಿಗೆ ಹಸ್ತಾಂತರಿಸಲಾಗುತ್ತೆ. ಈ ವೈದ್ಯಕೀಯ ವ್ಯವಸ್ಥೆ ಬಗ್ಗೆ ಅನೇಕರಲ್ಲಿ ಗೊಂದಲಗಳಿವೆ. ಅನುಮಾನಗಳನ್ನ ಪರಿಹರಿಸಿಕೊಳ್ಳಬೇಕು ಅಂತಾರೆ ಫರ್ಟಿಲಿಟಿ ಸ್ಪೆಷಲಿಸ್ಟ್​  ಡಾ. ನಯನಾ ಪಟೇಲ್​.  

ಬಾಡಿಗೆ ತಾಯಿ ಎಂದರೇನು?

ಇದೊಂದು ಕೃತಕ ಪುನರುತ್ಪಾದನಾ ವಿಧಾನ. ಬಾಡಿಗೆ ತಾಯಿಯೆಂದರೆ ಮಕ್ಕಳಿಲ್ಲದ ದಂಪತಿಗಳಿಗೋಸ್ಕರ ಓರ್ವ ಮಹಿಳೆ ಗರ್ಭಧರಿಸಿ ಮಗುವನ್ನು ಹೆತ್ತು ನಂತರ ಆ ದಂಪತಿಗಳಿಗೆ ನೀಡುವುದು. ಬಂಜೆತನದಿಂದ ಬಳಲುತ್ತಿರುವ ಮಹಿಳೆಯರಲ್ಲಿ ಕಾರಣಾಂತರಗಳಿಂದ ಗರ್ಭವತಿ ಆಗಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಉಂಟಾದಾಗ ಈ ಅಂತಿಮ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ಮಹಿಳೆಯರಲ್ಲಿ ಅಂಡೋತ್ಪಾದನೆ ಸ್ಥಗಿತವಾದಾಗ ಅಥವಾ ಗರ್ಭಕೋಶದ ತೊಂದರೆ ಇದ್ದಾಗ ಗರ್ಭಧರಿಸುವ ಸಾಧ್ಯತೆ ಬಹಳಷ್ಟು ಕಡಿಮೆ. ಇಂತಹ ಸಂದರ್ಭದಲ್ಲಿ ಈ ಕೃತಕ ವಿಧಾನವನ್ನು ಅಳವಡಿಸಿಕೊಳ್ಳಬಹುದು.

ಎರಡು ವಿಧದಲ್ಲಿ ಮಗು ಪಡೆಯಬಹುದು

ಸಾಂಪ್ರದಾಯಿಕ ಬಾಡಿಗೆ ತಾಯಿ ((Traditional Surrogate) ಈ ವಿಧಾನದಲ್ಲಿ ಮಹಿಳೆ ತನ್ನ ಅಂಡಾಣು ಮತ್ತು ಗರ್ಭಕೋಶ ಎರಡನ್ನೂ ಬಾಡಿಗೆ ನೀಡುತ್ತಾರೆ. ಈಕೆ ಮಗುವಿನ ಅನುವಂಶಿಕ ತಾಯಿ (Genetic Mother) ಕೂಡ ಆಗುತ್ತಾಳೆ. ಮತ್ತೊಂದು ವಿಧಾನ  ಪೂರ್ಣ ಬಾಡಿಗೆ ತಾಯಿ ಈ ವಿಧಾನದಲ್ಲಿ ಮಹಿಳೆ ತನ್ನ ಗರ್ಭಕೋಶವನ್ನು ಮಾತ್ರ ಬಾಡಿಗೆ ನೀಡುತ್ತಾಳೆ. ಪ್ರನಾಳ ಶಿಶು ವಿಧಾನದಿಂದ ಭ್ರೂಣವನ್ನು ಶರೀರದ ಹೊರಗೆ ಉತ್ಪಾದಿಸಿ ನಂತರ ಬಾಡಿಗೆ ತಾಯಿಯ ಗರ್ಭದಲ್ಲಿ ಇರಿಸಲಾಗುವುದು. ಭ್ರೂಣವು ಬಾಡಿಗೆ ತಾಯಿಯ ಗರ್ಭಕೋಶದಲ್ಲಿ ಬೆಳೆಯುತ್ತದೆ. ಬಾಡಿಗೆ ತಾಯಿಯಿಂದ ಪಡೆದ ಮಗುವನ್ನು ಬಾಡಿಗೆ ಮಗು ಎನ್ನಬಹುದು. ಈ ರೀತಿ ಜನಿಸಿದ ಬಾಡಿಗೆ ಮಗುವಿಗೆ ಎರಡಕ್ಕಿಂತ ಹೆಚ್ಚು ಪೋಷಕರಿರಬಹುದು.

ಯಾರು ಬಾಡಿಗೆ ತಾಯಿ ಆಗಬಹುದು?

ಓರ್ವ ಮಹಿಳೆ ಬಾಡಿಗೆ ತಾಯಿಯಾಗಲು ಕೆಲವೊಂದು ಅರ್ಹತೆ, ನಿಯಮ ಹಾಗೂ ನಿರ್ಬಂಧಗಳಿರುತ್ತವೆ. ಬಾಡಿಗೆ ತಾಯಿಯಾಗಲು ಇಚ್ಚಿಸುವವರಿಗೆ 18 ರಿಂದ 35 ವರ್ಷ ವಯಸ್ಸಿನವರಾಗಿರಬೇಕು. ದೈಹಿಕವಾಗಿ, ಆರೋಗ್ಯವಾಗಿರಬೇಕು. ಈಗಾಗಲೇ ಮದುವೆ ಆಗಿದ್ದು, ಮಕ್ಕಳೂ ಇದ್ದರೆ ಉತ್ತಮ

ಇದನ್ನೂ ಓದಿ: Priyanka Chopra ತಾಯಿಯಾಗುತ್ತಿದ್ದಂತೆ “surrogacy” ಪದದ ಹುಡುಕಾಟ ನಡೆಸಿದ ನೆಟ್ಟಿಗರು

ಬಾಡಿಗೆ ತಾಯ್ತನದ ಪ್ರಕ್ರಿಯೆ ಹೇಗೆ ನಡೆಯುತ್ತೆ

ಪೋಷಕ ತಂದೆಯಾಗುವ ವ್ಯಕ್ತಿಯ ವೀರ್ಯವನ್ನು ಬಾಡಿಗೆ ತಾಯಿಯ ಗರ್ಭಕೋಶದ/ಯೋನಿಯ ಒಳಕ್ಕೆ ಕೃತಕವಾಗಿ ಹಾಯಿಸಲಾಗುವುದು. ಹೀಗೆ ಗರ್ಭಿಣಿ ಆದ ಬಾಡಿಗೆ ತಾಯಿ ಮಗುವನ್ನು ಹೆತ್ತು ದಂಪತಿಗಳಿಗೆ ನೀಡುವಳು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಬಾಡಿಗೆ ತಾಯಿ ತನ್ನ ಅಂಡಾಣುವನ್ನು ನೀಡಿರುತ್ತಾಳೆ. ದಾನಿಯ ವೀರ್ಯಾಣುವನ್ನು ಉಪಯೋಗಿಸಿಯೂ ಮಗುವನ್ನು ಪಡೆಯಬಹುದು. ಆಗ ಮಗುವಿಗೆ ಅನುವಂಶಿಕ ತಂದೆ ದಾನಿಯೂ ಆಗಿರುತ್ತಾನೆ.

ಮತ್ತೊಂದು ವಿಧಾನದಲ್ಲಿ ಬಾಡಿಗೆ ತಾಯಿ ತನ್ನ ಗರ್ಭಕೋಶವನ್ನಷ್ಟೆ ಎರವಲು ನೀಡುತ್ತಾಳೆ. ತನ್ನ ಅಂಡಾಣುವನ್ನು ನೀಡಿರುವುದಿಲ್ಲ. ಆದ್ದರಿಂದ ಆಕೆಯ ವರ್ಣತಂತುಗಳು ಮತ್ತು ವಂಶವಾಹಿಗಳು ಮಗುವಿನಲ್ಲಿ ಸೇರಿರುವುದಿಲ್ಲ. 3 ರಿಂದ 4 ದಿನ ಹೊರಗೆ ಬೆಳೆದ ಭ್ರೂಣವನ್ನು ಪ್ರಣಾಳ ಶಿಶು ವಿಧಾನದಿಂದ (IVF) ಗರ್ಭಕೋಶದ ಒಳಗೆ ಹಸ್ತಾಂತರಿಸಲಾಗುತ್ತದೆ. ಮಗುವಿನ ಪೋಷಕ ತಂದೆ, ತಾಯಿಗಳು ಬಾಡಿಗೆ ಪಡೆಯುವ ತಂದೆ,ತಾಯಿಗಳೇ ಆಗಿರಬಹುದು. ಅಥವಾ ಇನ್ಯಾರೋ ದಾನಿಗಳಾಗಿರಬಹುದು. ಅಂದರೆ ಅಂಡಾಣು ಅಥವಾ ವೀರ್ಯಾಣುಗಳನ್ನು ಬೇರ ಬೇರೆ ದಾನಿಗಳಿಂದ ಪಡೆದಿರಬಹುದು.

ಇದನ್ನೂ ಓದಿ:  ಹತ್ತಿರದ ಸಂಬಂಧಿ ಮಾತ್ರ ಬಾಡಿಗೆ ತಾಯಿಯಾಗಬಹುದು; ಸಂಸತ್​ನಲ್ಲಿ ಅಂಗೀಕೃತವಾದ ಮಸೂದೆಯ ನಿರ್ಬಂಧಗಳೇನು?

ಬಾಡಿಗೆ ತಾಯಿ ಮತ್ತು ಮಗುವಿನ ಬಗ್ಗೆ ಕಾನೂನು ಏನು ಹೇಳುತ್ತದೆ?

ಬಾಡಿಗೆ ತಾಯ್ತನದ ವ್ಯವಸ್ಥೆಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಹೆಚ್ಚಾಗಿ ಬಳಕೆ ಆಗ್ತಿತ್ತು ಹೀಗಾಗಿ ಕಾನೂನು ನಿಯಮಗಳನ್ನು ಜಾರಿಗೊಳಿಸಲಾಗಿದೆ. ಆದರೂ ಸಹ ಬಾಡಿಗೆ ತಾಯಿಯ ಸಂಪೂರ್ಣ ಒಪ್ಪಿಗೆ, ಬಾಡಿಗೆ ತೆಗೆದುಕೊಳ್ಳುವ ದಂಪತಿಗಳ ಪೂರ್ಣ ಒಪ್ಪಿಗೆ ಮತ್ತು ಇವರ ಮಧ್ಯೆ ಆಗುವ ಒಪ್ಪಂದ ಎಲ್ಲವೂ ಲಿಖಿತ ರೂಪದಲ್ಲಿ ಸಾಕ್ಷಿಗಳ ಸಮೇತ ಆಗುವುದು ಒಳ್ಳೆಯದು ಮತ್ತು ಎಲ್ಲರಿಗೂ ಕ್ಷೇಮ. ಕಾನೂನಿನ ರೀತಿ ದತ್ತು ಸ್ವೀಕರಿಸಿ ನೋಂದಾವಣೆ ಮಾಡಿಸಿಕೊಳ್ಳಬೇಕು. ಆಗ ಇವರು ಕಾನೂನಿನಡಿ ಹಕ್ಕುದಾರ ತಂದೆ-ತಾಯಿಗಳಾಗುತ್ತಾರೆ. ಬಾಡಿಗೆ ಮಗು ಕಾನೂನು ರೀತಿಯಲ್ಲಿ ದತ್ತು ತೆಗೆದುಕೊಂಡ ಮಗು ಆಗುತ್ತದೆ.
Published by:Pavana HS
First published: