ಆಧುನಿಕ ಕಾಲದಲ್ಲಿ ಪ್ರತಿಯೊಂದು ಸೌಲಭ್ಯಗಳು ವೆಚ್ಚದಾಯಕವಾಗಿದ್ದು ಜೀವನ ನಿರ್ವಹಣೆಯೇ ಕಷ್ಟ ಎಂದೆನಿಸಿದೆ. ಹಾಗಾಗಿಯೇ ಹೆಚ್ಚಿನ ಜನರು ಇದಕ್ಕಾಗಿ ಕೆಲವೊಂದು ಪರ್ಯಾಯ ವಿಧಾನಗಳನ್ನು ಅನ್ವೇಷಿಸುತ್ತಿದ್ದಾರೆ ಹಾಗೂ ನಿರ್ವಹಣಾ ವೆಚ್ಚವನ್ನು (Maintenance) ಆದಷ್ಟು ಕಡಿಮೆ ಮಾಡುವ ಮೂಲಕ ಸಾಧನೆ ಮಾಡುತ್ತಿದ್ದಾರೆ. ಹೀಗಿರುವಾಗ ಇದೇ ರೀತಿಯ ಸಾಧನೆ ಮಾಡಿದ ವ್ಯಕ್ತಿಯೊಬ್ಬರ ಯಶೋಗಾಥೆ ಇಲ್ಲಿದೆ. ಇವರು ವಿದ್ಯುತ್ ಬಿಲ್‌ಗೆ (Electricity Bill)ಪಾವತಿಸುವ ಮೊತ್ತ ಬರೇ ರೂ 20. ಇಂದಿನ ಕಾಲದಲ್ಲಿ ಇದು ಸಾಧ್ಯವೇ ಎಂದರೆ ಹೌದು ಎಂದು ಸಾಧಿಸಿ ತೋರಿಸಿದ್ದಾರೆ ಜಗದೀಶನ್.
ಸಂಪ್ರದಾಯದ ಸಂಕೇತವನ್ನು ಉಳಿಸಿಕೊಳ್ಳಲು ಮಣ್ಣಿನ ಮನೆಯ ನಿರ್ಮಾಣ
ತಮಿಳುನಾಡಿನ ಚಿಕ್ಕ ಗ್ರಾಮವಾದ ಅಣ್ಣಮಂಗಲಂನ ಜಗದೀಶನ್, ಮಣ್ಣಿನ ಇಟ್ಟಿಗೆಯಿಂದ ಮನೆ ಕಟ್ಟಿ ಎಸಿಯೇ ಇಲ್ಲದೆ ಬಿರುಬೇಸಿಗೆಯಲ್ಲೂ ತಂಪಾದ ಗೂಡಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ತಮ್ಮ ಮಣ್ಣಿನ ಮನೆಯನ್ನು ಕಾಂಕ್ರೀಟ್ ಆಗಿ ಪರಿವರ್ತಿಸಲು ವ್ಯಕ್ತಿಯೊಬ್ಬರು ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಜಗದೀಶ್‌ರನ್ನು ಸಂಪರ್ಕಿಸಿದಾಗ ಮಣ್ಣಿನ ಮನೆಗಳು ಇದೀಗ ಕಣ್ಮರೆಯಾಗುತ್ತಿರುವ ಅರಿವು ಅವರಿಗೆ ಉಂಟಾಗುತ್ತದೆ.
ಇದನ್ನೂ ಓದಿ: House Cleaning Tips: ನೆಲ ಫಳಫಳ ಹೊಳಿಬೇಕು ಅಂದ್ರೆ ನೀರಿಗೆ ಈ ವಸ್ತು ಮಿಕ್ಸ್ ಮಾಡಿ
ಹಾಗಾಗಿ ಸಂಪ್ರದಾಯಿಕ ಸಂಕೇತವನ್ನು ಉಳಿಸಿಕೊಳ್ಳಬೇಕು ಎಂಬ ನಿಟ್ಟಿನಿಂದ ತಮ್ಮ ಮನೆಯನ್ನೇ ಮಣ್ಣಿನ ಇಟ್ಟಿಗೆಗಳಿಂದ ಕಟ್ಟುವ ನಿರ್ಧಾರಕ್ಕೆ ಬಂದರು. ನಿಸರ್ಗಕ್ಕೆ ಹೊಂದುವಂತೆ ಮನೆ ನಿರ್ಮಿಸಬೇಕು ಎಂಬುದು ಅವರ ಬಯಕೆಯಾಗಿತ್ತು. ಹೀಗಾಗಿ ಅವರ ಕನಸಿನ ಮನೆ ತೈಮನ್ ವೀಡು (ತಮಿಳಿನಲ್ಲಿ ಭೂಮಿ ತಾಯಿ ಎಂದರ್ಥ) ಸಿದ್ಧಗೊಂಡಿದೆ.
ಪರಿಸರ ಸ್ನೇಹಿ, ಸಮರ್ಥನೀಯ ಮತ್ತು ಸರಳ
ಮಣ್ಣಿನ ಮನೆಯನ್ನು ಹೇಗೆ ನಿರ್ಮಿಸುವುದು ಎಂದು ತಿಳಿಯದೆ, ಜಗದೀಶನ್ ಪುದುಚೇರಿಯ ಆರೋವಿಲ್ಲೆ ಅರ್ಥ್ ಇನ್‌ಸ್ಟಿಟ್ಯೂಟ್‌ಗೆ ಸೇರಿಕೊಂಡರು ಹಾಗೂ ಮಣ್ಣಿನ ಮನೆಯ ಎಲ್ಲಾ ಸಾಧಕ ಬಾಧಕಗಳನ್ನು ಅರಿತುಕೊಂಡರು. ಬೆಂಕಿ ರಹಿತ ಇಟ್ಟಿಗೆಗಳು ಹಾಗೂ ಆರ್ಚ್ ವಾಲ್ಟ್ ಡೋಮ್ ನಿರ್ಮಿಸುವ ಕಲೆಯನ್ನು ವಿದ್ಯಾಲಯದಲ್ಲಿ ಸಿದ್ಧಿಸಿಕೊಂಡರು. ಅದೇ ಸಂಸ್ಥೆಯಲ್ಲಿ ಸ್ವಯಂಸೇವಕರಾಗಿ ಕೂಡ ಸೇರಿಕೊಂಡು ಇನ್ನಷ್ಟು ಜ್ಞಾನವನ್ನು ವೃದ್ಧಿಸಿಕೊಂಡರು ಎಂದು ಜಗದೀಶನ್ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಸಾಮಾನ್ಯ ಇಟ್ಟಿಗೆಗಳಿಗಿಂತ ಭಿನ್ನವಾಗಿ, ಮಣ್ಣಿನ ಇಟ್ಟಿಗೆಗಳನ್ನು ಬೆಂಕಿಯಿಲ್ಲದ ಮತ್ತು ಸೈಟ್‌ನ 30 ಮೀಟರ್ ವ್ಯಾಪ್ತಿಯೊಳಗೆ ಲಭ್ಯವಿರುವ ಕೆಂಪು ಮಣ್ಣನ್ನು ಬಳಸಿ ತಯಾರಿಸಲಾಗುತ್ತದೆ ಎಂಬುದು ಜಗದೀಶನ್ ಮಾತಾಗಿದೆ.
ಇದಲ್ಲದೆ ಅವರು ಗುಮ್ಮಟ ಆಕಾರದ ಕಮಾನು, ಛಾವಣಿ ಜೊತೆಗೆ ಲೋಹ ಮತ್ತು ಸಿಮೆಂಟ್-ಆಧಾರಿತ ಅಚ್ಚುಗಳ ಬಳಕೆಯನ್ನು ಕಡಿಮೆ ಮಾಡಲು ಅದೇ ವಸ್ತುಗಳಿಂದ ಮಾಡಿದ ಗಾರೆ ಬಳಸಿ ಬೆಂಕಿಯಿಲ್ಲದ ಇಟ್ಟಿಗೆಗಳನ್ನು ಸಿದ್ಧಪಡಿಸಿದರು.
ತಾರಸಿ ತೋಟದ ನಿರ್ಮಾಣ
ಮಳೆ ನೀರು ಸಂಗ್ರಹಕ್ಕಾಗಿ 20,000 ಲೀಟರ್ ಸಾಮರ್ಥ್ಯದ ಟ್ಯಾಂಕ್ ಸ್ಥಾಪಿಸಿ ತಾರಸಿ ತೋಟ ಬೆಳೆಸಿರುವ ಜಗದೀಶನ್, ಮಾಸ್ಟರ್ ಬೆಡ್‌ರೂಮ್‌ನಲ್ಲಿ ಫೆರೋಸಿಮೆಂಟ್ (ವೈರ್ ಮೆಶ್‌ಗಳು ಮತ್ತು ಸಿಮೆಂಟ್ ಗಾರೆಗಳನ್ನು ಒಳಗೊಂಡಿರುವ ನಿರ್ಮಾಣ ಸಾಮಗ್ರಿ) ಒಳಗೊಂಡಿರುವ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಿದ್ದಾರೆ.
ಇದನ್ನೂ ಓದಿ: House Lifting Technology: ಕಟ್ಟಿದ ಮನೆಯೇ ನೆಲದಿಂದ 6 ಅಡಿ ಎತ್ತರಕ್ಕೆ ಲಿಫ್ಟ್!
ಮರದ ಪೀಠೋಪಕರಣಗಳ ಬಳಕೆಯ ಬದಲಿಗೆ ಅದರ ಮೇಲೆ ಹಾಸಿಗೆಯನ್ನಿರಿಸಿ ಮಲಗುವ ಮಂಚವನ್ನಾಗಿ ಸಿದ್ಧಪಡಿಸಿಕೊಂಡರು ಎಂದು ತಿಳಿಸಿದ್ದಾರೆ. ಹಗಲಿನಲ್ಲಿ ನೈಸರ್ಗಿಕ ಬೆಳಕು ಇಡೀ ಮನೆಯನ್ನು ಆವರಿಸುವ ರೀತಿಯಲ್ಲಿ ಮನೆಯನ್ನು ವಿನ್ಯಾಸಗೊಳಿಸಲಾಗಿದೆ, ಹಾಗಾಗಿ ವಿದ್ಯುತ್ ಬಿಲ್‌ಗಳ ವೆಚ್ಚ ಕಡಿಮೆಯಾಗಿದೆ ಎಂಬುದು ಜಗದೀಶನ್ ಮಾತಾಗಿದೆ.
ಸೂರ್ಯನ ಬೆಳಕು ಸಾಕಷ್ಟು ಬೀಳುವ ಸ್ಥಳವನ್ನು ಜಗದೀಶನ್ ಮನೆಯೊಳಗೆ ನಿರ್ಮಿಸಿದ್ದು, ಇದು ವಿದ್ಯುತ್ ಬಿಲ್ ಅನ್ನು ಸಾಕಷ್ಟು ಉಳಿಸಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.
ಎರಡು ತಿಂಗಳಿಗೊಮ್ಮೆ ವಿದ್ಯುತ್ ಬಿಲ್‌ನಂತೆ ರೂ 20 ಅಥವಾ ರೂ 30 ಅನ್ನು ಪಾವತಿಸುತ್ತಿದ್ದೇವೆ ಹಾಗೂ ಸರಕಾರದ ಸಬ್ಸಿಡಿ ಕೂಡ ದೊರೆಯುತ್ತಿದ್ದು ಮೊದಲ 100 ಯುನಿಟ್‌ಗಳು ಉಚಿತವಾಗಿದೆ ಹಾಗೂ ಆ ಮಿತಿಯನ್ನು ಮನೆಯವರು ಯಾರೂ ಮೀರುವುದಿಲ್ಲ ಎಂಬುದು ಜಗದೀಶನ್ ಮಾತಾಗಿದೆ..
ಮರ ಬಳಸದೇ ನಿರ್ಮಿಸಿರುವ ಮನೆ
1,000 ಚದರ ಅಡಿ ಎರಡು ಅಂತಸ್ತಿನ ಮನೆಯನ್ನು ಒಂದೇ ಒಂದು ಮರವನ್ನು ಸಹ ಕತ್ತರಿಸದೆ ನಿರ್ಮಿಸಲಾಗಿದೆ ಎಂಬುದು ಜಗದೀಶನ್ ಹೆಮ್ಮೆಯ ಮಾತಾಗಿದ್ದು ಎಲ್ಲಾ ಕಿಟಕಿ ಚೌಕಟ್ಟುಗಳು, ಬಾಗಿಲುಗಳು ಇತ್ಯಾದಿಗಳನ್ನು ಹಳೆಯ ಕೆಡವಲ್ಪಟ್ಟ ಮನೆಯಿಂದ ಮರುಬಳಕೆಯ ಮರದಿಂದ ತಯಾರಿಸಲಾಗಿದೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ