• Home
  • »
  • News
  • »
  • explained
  • »
  • Explained: ಅನಿಯಂತ್ರಿತ ಸ್ಪೇಸ್ ಜಂಕ್‌ಗಳೇ ಅಪಾಯ ತಂದೊಡ್ಡಲಿದ್ಯಾ? ಇವುಗಳಿಗೂ ಕಾನೂನು ನಿಯಮಗಳಿವೆಯೆ?

Explained: ಅನಿಯಂತ್ರಿತ ಸ್ಪೇಸ್ ಜಂಕ್‌ಗಳೇ ಅಪಾಯ ತಂದೊಡ್ಡಲಿದ್ಯಾ? ಇವುಗಳಿಗೂ ಕಾನೂನು ನಿಯಮಗಳಿವೆಯೆ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಬಹಳಷ್ಟು ದೇಶಗಳ ರಾಕೆಟ್ಟುಗಳಲ್ಲಿ ಭೂಮಿಯ ವಾತಾವರಣ ದಾಟುವ ಮುಂಚೆಯೇ ಲಾಂಚರ್ ಹಾಗೂ ಪೇಲೋಡ್‌ಗಳು ಪ್ರತ್ಯೇಕಗೊಳ್ಳುತ್ತವೆ. ತದನಂತರ ಅದಕ್ಕೆ ಅಳವಡಿಸಲಾಗಿರುವ ಹೆಚ್ಚುವರಿ ಎಂಜಿನ್ ಉಪಗ್ರಹವನ್ನು ಕಕ್ಷೆ ಸೇರುವಂತೆ ಹೆಚ್ಚಿನ ಬೂಸ್ಟ್ ನೀಡುತ್ತದೆ. ಆದರೆ, ಚೈನಾದ ರಾಕೆಟ್‌ನಲ್ಲಿ ಈ ರೀತಿಯಾಗಿ ಹೆಚ್ಚುವರಿ ಎಂಜಿನ್ ಇರುವುದಿಲ್ಲ ಹಾಗೂ ಇರುವ ಪ್ರಮುಖ ಎಂಜಿನ್ ಉಪಗ್ರಹವನ್ನು ಕಕ್ಷೆಯವರೆಗೆ ತಳ್ಳಿಕೊಂಡು ಹೋಗುತ್ತದೆ ಎಂದು ತಿಳಿಸಲಾಗಿದೆ.

ಮುಂದೆ ಓದಿ ...
  • Share this:

ಕಳೆದ ವಾರಾಂತ್ಯದ ಸಮಯ ಒಂದು ರೀತಿಯ ಒತ್ತಡದಿಂದ ಕೂಡಿತ್ತೆಂದರೆ ತಪ್ಪಾಗಲಾರದು. ಏಕೆಂದರೆ ಚೀನಾದ (China) 22 ಟನ್‌ಗಳಷ್ಟು ಭಾರದ ಅದರ ಅತಿದೊಡ್ಡ ರಾಕೆಟ್ (Rocket) ಆದ ಲಾಂಗ್ ಮಾರ್ಚ್ 5B ಅವಶೇಷ ಭೂಮಿಗೆ ಅಪ್ಪಳಿಸಲು ನಭದಿಂದ ತೂರಿಕೊಂಡು ಕೆಳ ಬೀಳುತ್ತಿತ್ತು. ಇದು ಅನಿಯಂತ್ರಿತವಾಗಿತ್ತೆನ್ನಲಾಗಿದೆ. ವಿಜ್ಞಾನಿಗಳು (Scientists) ಹಾಗೂ ಪ್ರದೇಶದ ಆಡಳಿತ ಯಂತ್ರವು ಈ ರಾಕೆಟ್ ಬೀಳುವವರೆಗೂ ಉಸಿರನ್ನು ಗಟ್ಟಿಯಾಗೇ ಹಿಡಿದುಕೊಂಡಿದ್ದರೆನ್ನಬಹುದು, ಏಕೆಂದರೆ ಇದು ಜನವಸತಿ ಇದ್ದ ಯಾವುದಾದರೂ ಪ್ರದೇಶದ ಮೇಲೆ ಬಿದ್ದಿದ್ದರೆ ಸಾವು-ನೋವುಗಳುಂಟಾಗುವ ಸಾಧ್ಯತೆ ಅಪಾರವಾಗಿತ್ತು. ಆದರೆ, ಅದೃಷ್ಟವಶಾತ್ ಹಾಗಾಗಲಿಲ್ಲ. ಈ ರಾಕೆಟ್ ಅವಶೇಷ (Rocket debris) ನೇರವಾಗಿ ಪೆಸಿಫಿಕ್ ಹಾಗೂ ಹಿಂದು ಮಹಾಸಾಗರದಲ್ಲಿ ಸಮಾಗಮವಾಯಿತು ಹಾಗೂ ಈ ಮೂಲಕ ಎಲ್ಲರೂ ನಿಟ್ಟುಸಿರು ಬಿಡುವಂತಾಯಿತು.


ಈಗಾಗಲೇ ನಭೋಮಂಡಲದ ಕಕ್ಷೆಯಲ್ಲಿರುವ ತನ್ನ ಸ್ಪೇಸ್ ಸ್ಟೇಷನ್ ನಿರ್ಮಾಣ ಕಾರ್ಯದಲ್ಲಿ ಚೀನಾ ತೊಡಗಿದೆ. ಈ ಸಂದರ್ಭದಲ್ಲಿ ಅದು ಇನ್ನೊಂದು ಹೊಸ ಘಟಕವನ್ನು ನಿರ್ಮಾಣ ಕಾರ್ಯಕ್ಕೆಂದು ಕಳುಹಿಸಲು ಲಾಂಗ್ ಮಾರ್ಚ್ ರಾಕೆಟನ್ನು ಜುಲೈ 24 ರಂದು ಉಡಾಯಿಸಿತ್ತು. ಈ ಮೂಲಕ ಪ್ರಥಮ ಬಾರಿಗೆ 2020 ರಲ್ಲಿ ಲಾಂಚ್ ಮಾಡಿದ್ದ ತನ್ನ ಅತಿ ಶಕ್ತಿಯುತ ರಾಕೆಟ್ ಲಾಂಗ್ ಮಾರ್ಚ್ ಅನ್ನು ಮತ್ತೆ ಬಳಸಿ ಅಲ್ಪ ಕಾಲದಲ್ಲೇ ಮೂರನೇ ಬಾರಿಗೆ ರಾಕೆಟ್ ಉಡಾಯಿಸಿತ್ತು.


ಅನಿಯಂತ್ರಿತವಾಗಿ ಭೂಮಿಗೆ ಅಪ್ಪಳಿಸುವುದೆಂದರೇನು?
ಸಾಮಾನ್ಯವಾಗಿ ರಾಕೆಟ್ ಹಾರುವ ಯಂತ್ರದ ಮೊದಲ ಹಂತವು ಅತಿ ಭಾರವಾದ ಸಾಮಗ್ರಿಗಳನ್ನು ಹೊಂದಿರುತ್ತದೆ. ಇವು ರಾಕೆಟ್ ಮೇಲಕ್ಕೆ ಸಾಗಿದಂತೆ ಕಳಚಿಕೊಳ್ಳುವ ಹಾಗೆ ವಿನ್ಯಾಸಗೊಳಿಸಲ್ಪಟ್ಟಿರುತ್ತವೆ. ಈ ಭಾರವಾದ ಬಿಡಿ ಭಾಗಗಳು ಸ್ವಾಭಾವಿಕವಾಗಿ ಕಕ್ಷೆಯನ್ನು ತಲುಪುವುದಿಲ್ಲ. ಬದಲಾಗಿ ಇವುಗಳು ನಿರ್ದಿಷ್ಟ ಸ್ಥಳದಲ್ಲಿ ಮುಂಚೆಯೇ ನಿಗದಿಪಡಿಸಲಾದ ಸ್ಥಳದಲ್ಲಿ ಬೀಳುವಂತೆ ಪ್ರೊಗ್ರ್ಯಾಮ್ ಮಾಡಲಾಗಿರುತ್ತದೆ. ಒಮ್ಮೊಮ್ಮೆ ಈ ಭಾಗಗಳು ಕಕ್ಷೆಯನ್ನು ತಲುಪಿದರೂ ಸಹ ಅದನ್ನು ಕಕ್ಷೆಯಿಂದ ಹೊರಬರುವಂತೆ ತಂತ್ರಗಾರಿಕೆಯನ್ನು ಅನ್ವಯಿಸಲಾಗುತ್ತದೆ. ಆದರೆ, ಈ ರೀತಿಯ ತಂತ್ರಗಾರಿಕೆ ಮಾಡದೆ ಹೋದಾಗ ಆ ಬಿಡಿ ಭಾಗ ಅನಿಯಂತ್ರಿತಗೊಳ್ಳುತ್ತವೆ.


ಆದರೆ, ಚೈನಾದ ದೊಡ್ಡದಾದ ರಾಕೆಟ್ ಲಾಂಗ್ ಮಾರ್ಚ್ ನ ಬಿಡಿಭಾಗವು ಈ ರೀತಿ ಅನಿಯಂತ್ರಿತಗೊಂಡು ಭೂಮಿಗೆ ಬೀಳುವ ಬಗ್ಗೆ ಗುರುತಿಸಿಕೊಂಡಿದೆ. ಇದಕ್ಕೆ ಒಂದು ಕಾರಣ ಎಂದರೆ ಕಾರ್ಯಾಚರಣೆಯೆ ಸಿಕ್ವೆನ್ಸ್ ನಲ್ಲಿರುವ ವ್ಯತ್ಯಾಸ, ಈ ಸಂದರ್ಭದಲ್ಲಿ ರಾಕೆಟ್ ಕಕ್ಷೆಯನ್ನು ತಲುಪಿ ನಂತರ ಕ್ರ್ಯಾಶ್ ಆಗಿ ಬೀಳಲು ಪ್ರಾರಂಭಿಸುತ್ತದೆ.


ಪ್ರಮುಖ ಎಂಜಿನ್ ಉಪಗ್ರಹವನ್ನು ಕಕ್ಷೆಯವರೆಗೆ ತಳ್ಳಿಕೊಂಡು ಹೋಗುವ ಚೀನಾದ ರಾಕೆಟ್
ಗಾರ್ಡಿಯನ್ ಸುದ್ದಿ ಮಾಧ್ಯಮ ವರದಿ ಮಾಡಿರುವಂತೆ ಬಹಳಷ್ಟು ದೇಶಗಳ ರಾಕೆಟ್ಟುಗಳಲ್ಲಿ ಭೂಮಿಯ ವಾತಾವರಣ ದಾಟುವ ಮುಂಚೆಯೇ ಲಾಂಚರ್ ಹಾಗೂ ಪೇಲೋಡ್ ಗಳು ಪ್ರತ್ಯೇಕಗೊಳ್ಳುತ್ತವೆ. ತದನಂತರ ಅದಕ್ಕೆ ಅಳವಡಿಸಲಾಗಿರುವ ಹೆಚ್ಚುವರಿ ಎಂಜಿನ್ ಉಪಗ್ರಹವನ್ನು ಕಕ್ಷೆ ಸೇರುವಂತೆ ಹೆಚ್ಚಿನ ಬೂಸ್ಟ್ ನೀಡುತ್ತದೆ. ಆದರೆ, ಚೈನಾದ ರಾಕೆಟ್ ನಲ್ಲಿ ಈ ರೀತಿಯಾಗಿ ಹೆಚ್ಚುವರಿ ಎಂಜಿನ್ ಇರುವುದಿಲ್ಲ ಹಾಗೂ ಇರುವ ಪ್ರಮುಖ ಎಂಜಿನ್ ಉಪಗ್ರಹವನ್ನು ಕಕ್ಷೆಯವರೆಗೆ ತಳ್ಳಿಕೊಂಡು ಹೋಗುತ್ತದೆ ಎಂದು ತಿಳಿಸಲಾಗಿದೆ.


ಇದನ್ನೂ ಓದಿ:   Explained: 5G ಸ್ಪೆಕ್ಟ್ರಮ್ ಹರಾಜು ಎಂದರೇನು? ಈ ಹರಾಜಿನಲ್ಲಿ ಏನನ್ನು ನಿರೀಕ್ಷಿಸಬಹುದು? ಇಲ್ಲಿದೆ ವಿವರ


ಮೇ 2020 ರಲ್ಲಿ ಉಡಾವಣೆಗೊಂಡಿದ್ದ ಚೈನಾದ ಲಾಂಗ್ ಮಾರ್ಚ್ ರಾಕೆಟ್ಟಿನ ಪ್ರಮುಖ ಬಿಡಿ ಭಾಗವೂ ಸಹ ಅನಿಯಂತ್ರಿತವಾಗಿ ಭೂಮಿಗೆ ಬಂದಾಗ ಅದು ಆ ಸಮಯದಲ್ಲಿ ಐವರಿ ಕೋಸ್ಟ್ ಮೇಲೆ ಬಿದ್ದಿತ್ತು. ಇದಲ್ಲದೆ, ಮತ್ತೊಂದು ಬಾರಿ ಚೈನಾದ ಲಾಂಗ್ ಮಾರ್ಚ್ ಅವಶೇಷವು 2021 ರಲ್ಲಿ ಮಾಲ್ಡೀವ್ಸ್ ಬಳಿ ಹಿಂದೂ ಮಹಾಸಾಗರದಲ್ಲಿ ಅನಿಯಂತ್ರಿತವಾಗಿ ಬಿದ್ದಿತ್ತು.


ಅನಿಯಂತ್ರಿತ ಬೀಳುವಿಕೆಯನ್ನು ಟ್ರ್ಯಾಕ್ ಮಾಡುವುದು ಏಕೆ ಕಷ್ಟ?
ಹೀಗೆ ಮುಖ್ಯ ಕೋರ್ ಭಾಗವು ಅನಿಯಂತ್ರಿತವಾಗಿ ಕೆಳಗೆ ಬೀಳಿವುದು ಹಲವು ಕ್ಲಿಷ್ಟಕರ ಅಂಶಗಳನ್ನು ಒಳಗೊಂಡಿರುವುದರಿಂದ ಇದನ್ನು ಟ್ರ್ಯಾಕ್ ಮಾಡುವುದು ಅಷ್ಟೊಂದು ಸುಲಭವಾದ ಕೆಲಸವಲ್ಲ. ವಾತಾವರಣದಲ್ಲಾಗುವ ವ್ಯತ್ಯಾಸ, ಸೌರ ಚಟುವಟಿಕೆಗಳು, ಆಂಗಲ್ ಮತ್ತು ರೊಟೇಷನಲ್ ವೈವಿಧ್ಯತೆಗಳು ಇತ್ಯಾದಿ ಸೇರಿಕೊಂಡು ಅನಿಯಂತ್ರಿತ ಬೀಳುವಿಕೆಯನ್ನು ಟ್ರ್ಯಾಕ್ ಮಾಡುವುದನ್ನು ಕಷ್ಟಕರಗೊಳಿಸುತ್ತವೆ. ಕೆಳಗೆ ಬೀಳುವ ಸಮಯವನ್ನು ಲೆಕ್ಕಾಚಾರ ಹಾಕುವಾಗ ಒಂದು ನಿಮಿಷದ ದೋಷಪೂರಿತ ಲೆಕ್ಕಾಚಾರವೂ ಸಹ ಅಂತಿಮ ಹಂತದಲ್ಲಿ ಬೀಳುವಿಕೆಯ ಸ್ಥಳವನ್ನು ಗುರುತಿಸುವಲ್ಲಿ ಸಾಕಷ್ಟು ವ್ಯತ್ಯಾಸವಾಗುವಂತೆ ಮಾಡುತ್ತದೆ. ಇದು ಅಪಾಯದ ಸಂದರ್ಭವಾಗಿಯೂ ಪರಿಣಮಿಸಬಹುದು.


ಉಪಗ್ರಹಗಳನ್ನು ಟ್ರ್ಯಾಕ್ ಮಾಡುವ ಸಂಸ್ಥೆಯಾದ ಲಿಯೋ ಲ್ಯಾಬ್ಸ್ ನ ಡಾ. ಡೆರನ್ ಮ್ಯಾಕ್ ನೈಟ್ ಅವರು, "ಜನರು, ಬಾಹ್ಯಾಕಾಶದಲ್ಲಿ ಅತಿ ಕಷ್ಟಕರವಾದ ಹತ್ತು ಕೆಲಸಗಳಲ್ಲಿ ರಾಕೆಟ್ ಅವಶೇಷ ಎಲ್ಲಿ ಹಾಗೂ ಯಾವಾಗ ಬೀಳುತ್ತದೆ ಎಂಬುದನ್ನು ನಿರ್ಧರಿಸುವ ಕೆಲಸ ಬಹಳಷ್ಟು ಕಠಿಣವಾಗಿರುತ್ತದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು" ಎಂದು ಹೇಳುತ್ತಾರೆ.


ಸ್ಪೇಸ್ ಜಂಕ್ ಗಳಿಗಾಗಿ ಯಾವುದಾರೂ ನಿಯಮ-ಕಾನೂನುಗಳಿವೆಯೆ?
ಯಾವುದಾದರೂ ಸ್ಪೇಸ್ ಜಂಕ್ ಹಾನಿ ಮಾಡಿದರೆ ಆ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳುವ ಬಗ್ಗೆ ದಿ ಸ್ಪೇಸ್ ಲಿಯಾಬಿಲಿಟಿ ಕನ್ವೆನ್ಷನ್ ಆಫ್ 1972 ವ್ಯಾಖ್ಯಾನಿಸುತ್ತದೆ. ಇದರಡಿಯಲ್ಲಿ ಈ ರೀತಿ ಹೇಳಲಾಗಿದೆ, "ರಾಕೆಟ್ ಉಡಾಯಿಸುವ ಯಾವುದೇ ಸಂಸ್ಥೆಯು ಅದರ ದೋಷಪೂರಿತ ಆಚರಣೆಯಿಂದಾಗಿ ಅಥವಾ ಅದು ಉಡಾಯಿಸಿದ ರಾಕೆಟ್ ಅವಶೇಷ ಭೂಮಿಗೆ ಬಿದ್ದು ಯಾವುದೇ ರೀತಿಯ ಹಾನಿ-ನಷ್ಟ ಮಾಡಿದರೆ ಆ ಸಂಸ್ಥೆಯು ನಷ್ಟದ ಪರಿಹಾರವನ್ನು ನೀಡಬೇಕು". ಅಲ್ಲದೆ, ಈ ರೀತಿಯ ಹಾನಿಯಾದಾಗ ಹಾನಿ ಮರುಪಾವತಿಗೆ ಸಂಬಂಧಿಸಿದಂತೆ ಪ್ರಕ್ರಿಯೆಯನ್ನೂ ಸಹ ಲಿಯಾಬಿಲಿಟಿ ಕನ್ವೆನ್ಷನ್ ಚಾಲನೆಗೊಳಿಸಲು ಸಮರ್ಥವಾಗಿದೆ.


ಇದನ್ನೂ ಓದಿ:  Air Pollution: ಈ ಪಟ್ಟಣಕ್ಕೆ ಏನಾಗಿದೆ? ಬೆಂಗಳೂರಲ್ಲಿ ವಾಯುಮಾಲಿನ್ಯ ಹೆಚ್ಚಾಗಲು ಕಾರಣವೇನು?


ಆದಾಗ್ಯೂ, ಸ್ಪೇಸ್ ಜಂಕ್ ಭೂಮಿಗೆ ಬಂದು ಅಪ್ಪಳಿಸುವುದಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ಯಾವುದೇ ಕಾನೂನು ಅಥವಾ ನಿಯಮಗಳು ಜಾರಿಯಲ್ಲಿಲ್ಲ. ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಚೈನಾದ ಕೆಲ ರಾಕೆಟ್ ಅವಶೇಷಗಳನ್ನು ಮಹಾರಾಷ್ಟ್ರದ ಎರಡು ಗ್ರಾಮಗಳಲ್ಲಿ ಪತ್ತೆ ಹಚ್ಚಲಾಗಿದೆ. ಸ್ವಲ್ಪ ಇತಿಹಾಸವನ್ನು ಕೆದಕಿ ನೋಡಿದಾಗ 1979 ರಲ್ಲಿಯೂ ಇಂಥದ್ದೊಂದು ಘಟನೆ ನಡೆದಿತ್ತು. ಆ ಸಂದರ್ಭದಲ್ಲಿ ಪ್ರತಿಷ್ಠಿತ ನಾಸಾದ 76 ಟನ್ ಗಳಷ್ಟು ತೂಗುವ ಸ್ಕೈ ಲ್ಯಾಬ್ ಅವಶೇಷಗಳು ಛಿದ್ರ ಛಿದ್ರವಾಗಿ ಆಸ್ಟ್ರೇಲಿಯಾದ ನಿರ್ಜನ ಪ್ರದೇಶವೊಂದರ ಮೇಲೆ ಬಂದಪ್ಪಳಿಸಿತ್ತು. ಆಗ ಅಲ್ಲಿನ ಸ್ಥಳೀಯ ಸರ್ಕಾರ/ಆಡಳಿತವು ತನ್ನ ಪ್ರದೇಶವನ್ನು ತ್ಯಾಜ್ಯಮಯಗೊಳಿಸಿದ್ದಕ್ಕಾಗಿ ನಾಸಾಗೆ 400 ಡಾಲರುಗಳ ದಂಡವನ್ನು ವಿಧಿಸಿತ್ತು.


ಇದಲ್ಲದೆ, ಲಿಯಾಬಿಲಿಟಿ ಕನ್ವೆನ್ಷನ್ ಪ್ರಕಾರ ಇಲ್ಲಿಯವರೆಗೂ ಸೆಟಲ್ ಮಾಡಲಾದ ಒಂದೇ ಪ್ರಕರಣವೆಂದರೆ ಸೋವಿಯತ್ ಒಕ್ಕೂಟ ಹಾಗೂ ಕೆನಡಾದ ಮಧ್ಯೆ ಎಂದು ಹೇಳಬಹುದಾಗಿದೆ. ಈ ಸಂದರ್ಭದಲ್ಲಿ ಸೋವಿಯತ್ ಒಕ್ಕೂಟದ ಸೋವಿಯತ್ ಕಾಸ್ಮೋಸ್ 954 ರಾಕೆಟ್ ಅವಶೇಷಗಳು ಕೆನಡಾದ ಭೂಮಿಯ ಮೇಲೆ ಬಿದ್ದಿದ್ದವು. ಈ ತ್ಯಾಜ್ಯವನ್ನು ಪ್ರದೇಶದಿಂದ ಸ್ವಚ್ಛಗೊಳಿಸಲು ಅನುಕೂಲವಾಗುವಂತೆ ಕೆನಡಾಗೆ ಸಿಎಡಿ 3 ಮಿಲಿಯನ್ ಅನ್ನು ಪಾವತಿಸಲಾಗಿತ್ತು.


ಇದನ್ನೂ ಓದಿ:  Gaganyaan Abort Mission: ಗಗನಯಾನ್ ಸ್ಥಗಿತ ಪರೀಕ್ಷೆ ಎಂದರೇನು? ಫುಲ್ ಡೀಟೆಲ್ಸ್ ಇಲ್ಲಿದೆ


ಒಟ್ಟಿನಲ್ಲಿ, ಸ್ಪೇಸ್ ವಲಯವು ಇತ್ತೀಚಿಗಷ್ಟೇ ಹೆಚ್ಚು ಹೆಚ್ಚು ಸಕ್ರಿಯವಾಗುತ್ತಿದ್ದು ಇದನ್ನು ಬಳಸುವ ಕೆಲವೇ ಕೆಲವು ದೇಶಗಳು ತಮ್ಮ ರಾಕೆಟ್ ಉಡಾವಣೆಗಳಿಗೆ ಸಂಬಂಧಿಸಿದಂತೆ ಹೆಚ್ಚು ಜಾಗರೂಕರಾಗಿ ಕೆಲಸ ಮಾಡಬೇಕಾಗಿರುವುದು ಅವಶ್ಯಕ. ಇಲ್ಲದಿದ್ದಲ್ಲಿ ಯಾರದ್ದೋ ತಪ್ಪಿಗೆ ಮತ್ತಿನ್ನ್ಯಾರೋ ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿ ಬಂದರೆ ಅಚ್ಚರಿ ಪಡಬೇಕಾಗಿಲ್ಲ.

Published by:Ashwini Prabhu
First published: