Explained: ನಶಿಸಿ ಹೋಗಿದ್ದ ಆಮೆ ಪ್ರಭೇದ ಪತ್ತೆ; ಈ ಚೆಲೋನಾಯಿಡಿಸ್ ಫ್ಯಾಂಟಸ್ಟಿಕಸ್ ಕಾಣಸಿಕ್ಕಿದ್ದು ಎಲ್ಲಿ ಗೊತ್ತಾ?

ನಶಿಸಿಯೇ ಹೋಗಿದೆ ಎಂದು ಭಾವಿಸಲಾಗಿದ್ದ ದೈತ್ಯ ಆಮೆ, ಅಪರೂಪದ ಗ್ಯಾಲಪಗೋಸ್ ಪ್ರಭೇದ ಚೆಲೋನಾಯಿಡಿಸ್ ಫ್ಯಾಂಟಾಸ್ಟಿಕಸ್ ಒಂದು ಶತಮಾನಕ್ಕೂ ಹೆಚ್ಚು ಸಮಯದ ನಂತರ ಮೊದಲ ಬಾರಿಗೆ ಅಧಿಕೃತವಾಗಿ ಗುರುತಿಸಲ್ಪಟ್ಟಿದೆ. 2019ರಲ್ಲಿ ಜೀವಂತವಾಗಿ ಕಂಡುಬಂದ ದೈತ್ಯ ಆಮೆ, ಅಳಿವಿನಂಚಿನಲ್ಲಿರುವ ಗ್ಯಾಲಪಗೋಸ್ ಜಾತಿಗೆ ಸೇರಿದೆ ಎಂದು ದೃಢಪಡಿಸಲಾಗಿದೆ.

ಚೆಲೋನಾಯಿಡಿಸ್ ಫ್ಯಾಂಟಸ್ಟಿಕಸ್ ಆಮೆ

ಚೆಲೋನಾಯಿಡಿಸ್ ಫ್ಯಾಂಟಸ್ಟಿಕಸ್ ಆಮೆ

  • Share this:
ಚಿಪ್ಪಿನ ಆಕಾರ ಹೊಂದಿರುವ ಸರೀಸೃಪ ಜಾತಿಗೆ ಸೇರಿದ ಆಮೆಗಳು (tortoise) ಒಂದು ರೀತಿಯ ವಿಶಿಷ್ಟವಾದ ಪ್ರಾಣಿ (Animal). ಆಮೆಗಳ ಮೇಲಿನ ವಿಶೇಷ ಚಿಪ್ಪು ಅಥವಾ ಮೃದುವಾದ ಎಲುಬಿನ ಚಿಪ್ಪು ಅವುಗಳ ಪಕ್ಕೆಲಬುಗಳಿಂದ ಬೆಳವಣಿಗೆ ಹೊಂದಿ ಅವುಗಳಿಗೆ ಕವಚದಂತೆ ರಕ್ಷಣೆ ನೀಡುತ್ತವೆ. ಸಮುದ್ರ ಆಮೆ, ಸಿಹಿ ನೀರಿನ ಆಮೆ, ಸಣ್ಣ ಮತ್ತು ದೊಡ್ಡ ಆಮೆ ಸೇರಿ ಈ ಪ್ರಾಣಿ ವರ್ಗದಲ್ಲಿ ಈಗಲೂ ಇರುವ ಮತ್ತು ನಶಿಸಿ ಹೋಗಿರುವ ತಳಿಗಳು ಪರಿಸರದಲ್ಲಿ ಸಾಕಷ್ಟಿವೆ. ನಶಿಸಿಯೇ ಹೋಗಿದೆ ಎಂದು ಭಾವಿಸಲಾಗಿದ್ದ ದೈತ್ಯ ಆಮೆ, ಅಪರೂಪದ ಗ್ಯಾಲಪಗೋಸ್ (Galapagos) ಪ್ರಭೇದ ಚೆಲೋನಾಯಿಡಿಸ್ ಫ್ಯಾಂಟಾಸ್ಟಿಕಸ್ (Chelonoidis phantasticus) ಒಂದು ಶತಮಾನಕ್ಕೂ ಹೆಚ್ಚು ಸಮಯದ ನಂತರ ಮೊದಲ ಬಾರಿಗೆ ಅಧಿಕೃತವಾಗಿ ಗುರುತಿಸಲ್ಪಟ್ಟಿದೆ.

ಅಳಿವಿನಂಚಿನಲ್ಲಿರುವ ಗ್ಯಾಲಪಗೋಸ್ ಜಾತಿಗೆ ಸೇರಿದ ಆಮೆ ಪತ್ತೆ
2019ರಲ್ಲಿ ಜೀವಂತವಾಗಿ ಕಂಡುಬಂದ ದೈತ್ಯ ಆಮೆ, ಅಳಿವಿನಂಚಿನಲ್ಲಿರುವ ಗ್ಯಾಲಪಗೋಸ್ ಜಾತಿಗೆ ಸೇರಿದೆ ಎಂದು ದೃಢಪಡಿಸಲಾಗಿದೆ. ಫೆರ್ನಾಂಡಿನಾ ದ್ವೀಪದ ಬಳಿ ಇದು ಕಾಣಿಸಿಕೊಂಡಿದ್ದರಿಂದ ಇದನ್ನು ಫರ್ನಾಂಡಾ ಎಂದು ಹೆಸರಿಸಲಾಗಿದೆ.

ಈ ಜಾತಿಯ ಮೊದಲನೆಯ ಆಮೆ ಚೆಲೋನಾಯಿಡಿಸ್ ಫ್ಯಾಂಟಾಸ್ಟಿಕಸ್, ಒಂದು ಶತಮಾನದ ನಂತರ ಮತ್ತೆ ಗೋಚರವಾಗಿದೆ. ನೇಚರ್ ಕಮ್ಯುನಿಕೇಷನ್ಸ್ ಬಯಾಲಜಿಯಲ್ಲಿನ ಒಂದು ಪತ್ರಿಕೆಯಲ್ಲಿ ಸಂಶೋಧಕರು ಈ ಬಗ್ಗೆ ದೃಢೀಕರಣವನ್ನು ವರದಿ ಮಾಡಿದ್ದಾರೆ.

ವಿಶಿಷ್ಟವಾದ ಸ್ಯಾಡಲ್ಬ್ಯಾಕ್ ಆಕಾರದ ಶೆಲ್ ಅನ್ನು ಹೊಂದಿದ ಆಮೆ
ಜೀವಶಾಸ್ತ್ರಜ್ಞರು 2019ರಲ್ಲಿ ದ್ವೀಪ ಸಮೂಹದ ಪಶ್ಚಿಮದ ದ್ವೀಪದಲ್ಲಿ ಫೆರ್ನಾಂಡಾ ಎಂದು ಕರೆಯಲ್ಪಡುವ ಆಮೆಯನ್ನು ಕಂಡುಹಿಡಿದರು. 1906ರಲ್ಲಿ ಒಂದೇ ಒಂದು ಗಂಡು ಆಮೆಯನ್ನು ಕ್ಯಾಲಿಫೋರ್ನಿಯಾ ಅಕಾಡೆಮಿ ಆಫ್ ಸೈನ್ಸಸ್‌ನ ಪರಿಶೋಧಕ ರೊಲೊ ಬೆಕ್ ಅವರು ಗುರುತಿಸಿದ ನಂತರ ದ್ವೀಪದಲ್ಲಿ ಪತ್ತೆಯಾದ ಎರಡನೇ ಆಮೆ ಇದು.

ಚೆಲೋನಾಯಿಡಿಸ್ ಫ್ಯಾಂಟಾಸ್ಟಿಕಸ್, ಶತಮಾನದ ಹಳೆಯ ಪುರುಷ ಮಾದರಿ ಹೊಂದಿದ್ದ ವಿಶಿಷ್ಟವಾದ ಸ್ಯಾಡಲ್ಬ್ಯಾಕ್ ಆಕಾರದ ಶೆಲ್ ಅನ್ನು ಈ ಆಮೆ ಹೊಂದಿಲ್ಲದಿರುವುದೇ ಸದ್ಯ ಚರ್ಚೆಯಲ್ಲಿನ ಪ್ರಶ್ನೆ.

ಅದ್ಭುತ ದೈತ್ಯ ಆಮೆ
ಚೆಲೋನಾಯಿಡಿಸ್ ಫ್ಯಾಂಟಾಸ್ಟಿಕಸ್ (Chelonoidis phantasticus) ಎಂದರೆ "ಅದ್ಭುತ ದೈತ್ಯ ಆಮೆ". ಸಾಮಾನ್ಯವಾಗಿ ಫೆರ್ನಾಂಡಿನಾ ಐಲ್ಯಾಂಡ್ ಗ್ಯಾಲಪಗೋಸ್ ದೈತ್ಯ ಆಮೆ ಎಂದು ಕರೆಯಲ್ಪಡುವ ಆಮೆ. ಪಶ್ಚಿಮ ಗ್ಯಾಲಪಗೋಸ್ ಆರ್ಕಿಪೆಲಾಗೋದಲ್ಲಿ ಸಕ್ರಿಯ ಜ್ವಾಲಾಮುಖಿಯಾದ ಫೆರ್ನಾಂಡಿನಾ ದ್ವೀಪದಲ್ಲಿ ಕಂಡು ಬಂದಿರುವುದರಿಂದ ಫೆರ್ನಾಂಡಾ ಎಂಬ ಹೆಸರನ್ನು ನೀಡಲಾಗಿದೆ. "1906ರಲ್ಲಿ ಸಂಗ್ರಹಿಸಿದ ಮೂಲ ಮಾದರಿಯನ್ನು ದ್ವೀಪಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹಲವು ವರ್ಷಗಳವರೆಗೆ ಭಾವಿಸಲಾಗಿತ್ತು" ಎಂದು ಪ್ರಿನ್ಸ್‌ಟನ್‌ನ ಪ್ರಾಣಿಶಾಸ್ತ್ರದ ಪ್ರಾಧ್ಯಾಪಕ, ಎಮೆರಿಟಸ್ ಮತ್ತು ಪ್ರಾಧ್ಯಾಪಕ ಪೀಟರ್ ಗ್ರಾಂಟ್ ಹೇಳಿದ್ದಾರೆ.

2019ರಲ್ಲಿ ಫೆರ್ನಾಂಡಾ ಪತ್ತೆಯಾದಾಗ, ಅನೇಕ ಪರಿಸರಶಾಸ್ತ್ರಜ್ಞರು ನಿಜವಾಗಿಯೂ ಇದು ಸ್ಥಳೀಯ ಫ್ಯಾಂಟಾಸ್ಟಿಕಸ್ ಆಮೆಯೇ ಎಂಬುದರ ಬಗ್ಗೆ ಹಲವಾರು ಅನುಮಾನಗಳನ್ನು ವ್ಯಕ್ತಪಡಿಸಿದರು. ಆದಾಗ್ಯೂ ವಿಜ್ಞಾನಿಗಳು ಹೆಣ್ಣು ಆಮೆಯ ಕುಂಠಿತ ಬೆಳವಣಿಗೆಯು ಅದರ ವೈಶಿಷ್ಟ್ಯಗಳನ್ನು ವಿರೂಪಗೊಳಿಸಿರಬಹುದು ಎಂದು ಊಹಿಸಿದರು ಎಂಬುದರ ಬಗ್ಗೆ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Ancovax: ಪ್ರಾಣಿಗಳಿಗೂ ಬಂತು ಭಾರತದ ಮೊದಲ ಕೋವಿಡ್-19 ಲಸಿಕೆ; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಇಲ್ಲಿದೆ ವಿವರ

ಈ ಆಮೆಗಳು ಒಂದು ದ್ವೀಪದಿಂದ ಇನ್ನೊಂದಕ್ಕೆ ಈಜಲು ಸಾಧ್ಯವಿಲ್ಲ ಹೀಗಾಗಿ ಫೆರ್ನಾಂಡಾ ಆಮೆ, ಫರ್ನಾಂಡಿನಾ ದ್ವೀಪದಲ್ಲಿಯೇ ಕಂಡುಬಂದಿದ್ದು, ದೊಡ್ಡ ಬಿರುಗಾಳಿ ಸಮಯದಲ್ಲಿ ಗ್ಯಾಲಪಗೋಸ್ ದ್ವೀಪದಿಂದ ಇಲ್ಲಿಗೆ ಬಂದಿರಬಹುದು ಎನ್ನಲಾಗಿದೆ. ಅಲ್ಲದೇ ಸಮುದ್ರಯಾನಕಾರರು ಆಮೆಗಳನ್ನು ದ್ವೀಪಗಳ ನಡುವೆ ಸ್ಥಳಾಂತರಿಸಿದ ಐತಿಹಾಸಿಕ ದಾಖಲೆಗಳೂ ಸಹ ಇವೆ.

ಆಮೆಯ ಜಾತಿಯನ್ನು ನಿರ್ಧರಿಸಲು, ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದಲ್ಲಿ ಸ್ಟೀಫನ್ ಗೌಫ್ರಾನ್ ಮತ್ತು ಅವರ ಸಹೋದ್ಯೋಗಿಗಳು ಆಮೆಯ ಡಿಎನ್‌ಎಯನ್ನು ಇತರ ತಿಳಿದಿರುವ ಗ್ಯಾಲಪಗೋಸ್ ಆಮೆಗಳಿಗೆ ಹೋಲಿಸಿ ಪರೀಕ್ಷಿಸಿದರು. "ಅನೇಕ ಜನರಂತೆ, ಇದು ಫರ್ನಾಂಡಿನಾ ದ್ವೀಪದ ಸ್ಥಳೀಯ ಆಮೆ ಅಲ್ಲ ಎಂಬುದು ನನ್ನ ಆರಂಭಿಕ ಅನುಮಾನವಾಗಿತ್ತು" ಎಂದು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯವು ಪ್ರಿನ್ಸ್‌ಟನ್‌ನಲ್ಲಿ ಪರಿಸರ ವಿಜ್ಞಾನ ಮತ್ತು ವಿಕಾಸಾತ್ಮಕ ಜೀವಶಾಸ್ತ್ರದಲ್ಲಿ ಪೋಸ್ಟ್ ಡಾಕ್ಟರಲ್ ಸಂಶೋಧನಾ ಸಹೋದ್ಯೋಗಿ ಸಂಶೋಧಕ ಸ್ಟೀಫನ್ ಗೌಫ್ರಾನ್ ಅವರು ಉಲ್ಲೇಖಿಸಿದ್ದಾರೆ.

ವಿಜ್ಞಾನಿಗಳು ಆಮೆ ಮಾದರಿಯನ್ನು ಹೇಗೆ ಕಂಡುಕೊಂಡರು?
ಫರ್ನಾಂಡಾ ಆಮೆಯ ರಕ್ತದ ಮಾದರಿ ಮತ್ತು ಈಗ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿರುವ 1906ರ ಸಂಗ್ರಹದ ಪುರುಷ ಆಮೆಯ ಮೂಳೆ ಮಾದರಿಯನ್ನು ಬಳಸಿಕೊಂಡು ಪರೀಕ್ಷಿಸಿದ ನಂತರ ತಂಡವು ಜೀನ್‌ಗಳು ನಿಕಟವಾಗಿ ಹೊಂದಿಕೆಯಾಗಿರುವುದನ್ನು ದೃಢಪಡಿಸಿತು ಮತ್ತು ಇತರ 13 ಜಾತಿಯ ಗ್ಯಾಲಪಗೋಸ್ ದೈತ್ಯ ಆಮೆಗಳಿಂದ ಇದು ಭಿನ್ನವಾಗಿದೆ ಎಂಬ ಅಂಶ ತಿಳಿದುಬಂದಿತು. ಈ ಮೂಲಕ ವಿಜ್ಞಾನಿಗಳು ದೊರೆತಿರುವ ಫೆರ್ನಾಂಡಿನಾ ಆಮೆ ಹಿಂದಿನ ಆಮೆಗೆ ಹೋಲುತ್ತಿದ್ದು, ಎರಡೂ ಒಂದೇ ಜಾತಿಯ ಸದಸ್ಯರು ಎಂದು ತೋರಿಸಿಕೊಟ್ಟಿದ್ದಾರೆ.

ಆದಾಗ್ಯೂ ಇವುಗಳನ್ನು ಜಾತಿಗಳು ಅಥವಾ ಉಪಜಾತಿ ಎಂದು ಪರಿಗಣಿಸಬೇಕೆ ಎಂದು ಕೆಲವು ವಿಜ್ಞಾನಿಗಳು ಪ್ರಶ್ನಿಸಿದ್ದಾರೆ. ಕ್ಯಾಲಿಫೋರ್ನಿಯಾ ಮರ್ಸಿಡ್ ವಿಶ್ವವಿದ್ಯಾಲಯದ ಗ್ಯಾಲಪಗೋಸ್ ಆಮೆ ತಜ್ಞ ಡೇನಿಯಲ್ ಎಡ್ವರ್ಡ್ಸ್ ಹೇಳುವ ಪ್ರಕಾರ, ಈ ಗ್ಯಾಲಪಗೋಸ್ ಆಮೆಗಳ ಜಾತಿಗಳು ಅಥವಾ ಉಪಜಾತಿಗಳ ಬಗ್ಗೆ ಚರ್ಚೆಗಳಿವೆ. "ಜೀವಶಾಸ್ತ್ರವು ಗೊಂದಲಮಯವಾಗಿದೆ ಮತ್ತು ಸ್ಪೆಸಿಯೇಶನ್ ನಿರಂತರವಾಗಿದೆ" ಎಂದು ಎಡ್ವರ್ಡ್ಸ್ ಹೇಳಿದರು. ಆದರೆ ಪ್ರಿನ್ಸ್‌ಟನ್-ಯೇಲ್ ತಂಡವು ಸಾವಿರಾರು ವಿಶಿಷ್ಟವಾದ ಆನುವಂಶಿಕ ಗುರುತುಗಳೊಂದಿಗೆ ಪ್ರತ್ಯೇಕ ಜಾತಿಗಳೆಂದು ಪರಿಗಣಿಸಲು ಸಾಕಷ್ಟು ವಿಭಿನ್ನವಾಗಿದೆ ಎಂದು ತೀರ್ಮಾನಿಸಿದೆ.

ಹೇಗಿದೆ ಪತ್ತೆಯಾದ ಚೆಲೋನಾಯಿಡಿಸ್ ಫ್ಯಾಂಟಾಸ್ಟಿಕಸ್?
"ಫೆರ್ನಾಂಡಾ 100 ವರ್ಷಗಳ ಹಿಂದೆ ಆ ದ್ವೀಪದಲ್ಲಿ ಕಂಡುಕೊಂಡಿದ್ದ ಆಮೆಯನ್ನು ಹೋಲುತ್ತಿದ್ದರು ಮತ್ತು ಇವೆರಡೂ ಇತರ ಎಲ್ಲಾ ದ್ವೀಪಗಳ ಆಮೆಗಳಿಗಿಂತ ಬಹಳ ಭಿನ್ನವಾಗಿವೆ" ಎಂದು ಗೌಫ್ರಾನ್ ಉಲ್ಲೇಖಿಸಿದ್ದಾರೆ. “ಈ ದ್ವೀಪದಲ್ಲಿ ಇನ್ನೂ ಒಂದೆರಡು ಆಮೆಗಳಿವೆ ಎಂಬುದು ನಮ್ಮ ಆಶಯ. ಆದರೆ ಹೆಚ್ಚಾಗಿ ಅವುಗಳಲ್ಲಿ ಹೆಚ್ಚಿನವುಗಳಿಲ್ಲ,”ಎಂದು ಗೌಗ್ರನ್ ಹೇಳುತ್ತಾರೆ.

ಗ್ಯಾಲಪಗೋಸ್ ಆಮೆಗಳ ವೈವಿಧ್ಯೀಕರಣವು ಶೆಲ್ ಆಕಾರಗಳ ನಿರಂತರತೆಯನ್ನು ಬಹಿರಂಗಪಡಿಸುತ್ತದೆ. ಪೂರ್ವದ ದ್ವೀಪಗಳ ಪ್ರಾಣಿಗಳು ಗುಮ್ಮಟಾಕಾರದ ಚಿಪ್ಪುಗಳನ್ನು ತೋರಿಸುತ್ತವೆ ಮತ್ತು ಪಶ್ಚಿಮದ ದ್ವೀಪದ ಫರ್ನಾಂಡಿನಾ ಸ್ಯಾಡಲ್ ಬ್ಯಾಕಿಂಗ್ ಹೊಂದಿರುವ ಆಮೆಗಳಿಗೆ ನೆಲೆಯಾಗಿದೆ. ಗುಮ್ಮಟಾಕಾರದ ಆಮೆಗಳು ಹೆಚ್ಚು ಆರ್ದ್ರ, ಎತ್ತರದ ಪರಿಸರ ವ್ಯವಸ್ಥೆಗಳಲ್ಲಿ ವಾಸಿಸುತ್ತವೆ. ಆದರೆ ಸ್ಯಾಡಲ್‌ಬ್ಯಾಕ್ಡ್ ಆಮೆಗಳು ಒಣ, ಕಡಿಮೆ ಎತ್ತರದ ಪರಿಸರದಲ್ಲಿ ವಾಸಿಸುತ್ತವೆ. ಈ ಆಮೆ ಜಾತಿಯನ್ನು ಅಳಿವಿನಂಚಿನಲ್ಲಿರುವ ಆಮೆಗಳು ಎಂದು ಪಟ್ಟಿಮಾಡಲಾಗಿದೆ.

200 ವರ್ಷಗಳವರೆಗೆ ಬದುಕ ಬಲ್ಲ ಆಮೆ
ವಿಜ್ಞಾನಿಗಳು ಈ ಜಾತಿಯ ಗಂಡು ಆಮೆಗಳನ್ನು ಪತ್ತೆಹಚ್ಚಲು ಸಾಧ್ಯವಾದರೆ, ಫೆರ್ನಾಂಡಿನಾ ದ್ವೀಪದ ಆಮೆಗಳು ಅಳಿವಿನ ಅಂಚಿನಿಂದ ಹಿಂತಿರುಗಲು ಸಾಧ್ಯವಾಗುತ್ತದೆ. ಫೆರ್ನಾಂಡಾ ಆಮೆಗೆ ಸುಮಾರು 50 ವರ್ಷಗಳಾಗಿದ್ದು, 200 ವರ್ಷಗಳವರೆಗೆ ಬದುಕಬಲ್ಲದು ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಆದರೆ ಇದು ವಿಶಿಷ್ಟವಾದ ದೈತ್ಯ ಆಮೆಗಿಂತ ಕೊಂಚ ಚಿಕ್ಕದಾಗಿದೆ.

ಇದನ್ನೂ ಓದಿ: Explained: ಭಾರತದಲ್ಲಿ ಚಿರತೆಗಳು ಕಣ್ಮರೆಯಾಗುತ್ತಿವೆಯಾ? ಅವುಗಳ ಉಳಿವಿಗೆ ಸರ್ಕಾರ ಏನು ಮಾಡುತ್ತಿದೆ?

ಪ್ರಸ್ತುತ ಫೆರ್ನಾಂಡಾ ಗ್ಯಾಲಪಗೋಸ್ ರಾಷ್ಟ್ರೀಯ ಉದ್ಯಾನ ನಿರ್ದೇಶನಾಲಯದಿಂದ ನಿರ್ವಹಿಸಲ್ಪಡುವ ಗ್ಯಾಲಪಗೋಸ್ ಆಮೆ ಕೇಂದ್ರದಲ್ಲಿ ತಜ್ಞರ ಆರೈಕೆಯಲ್ಲಿ ಇದೆ.
Published by:Ashwini Prabhu
First published: