HOME » NEWS » Explained » CHANCES TO RAPE CASE AGAINST EX MINISTER RAMESH JARAKIHOLI

Ramesh Jarkiholi CD Case; ರಮೇಶ್​ ಜಾರಕಿಹೊಳಿ ವಿರುದ್ಧ ದಾಖಲಾಗುತ್ತಾ ಅತ್ಯಾಚಾರ ಪ್ರಕರಣ, ಮಾಜಿ ಸಚಿವರಿಗೆ ಎದುರಾಗಲಿದೆಯಾ ಸಂಕಷ್ಟ?

ಒಂದು ವೇಳೆ ರಮೇಶ್​ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾದರೆ, ಮಾಜಿ ಸಚಿವರಿಗೆ ಸಂಕಷ್ಟ ತಪ್ಪಿದ್ದಲ್ಲ. ಪ್ರಸ್ತುತ ವಕೀಲ ಜಗದೀಶ್​ ದೂರಿನ ಅನ್ವಯ ಐಪಿಸಿ 506 (ಜೀವ ಬೆದರಿಕೆ) , 354(A) ಕೆಲಸ ಕೊಡಿಸವುದಾಗಿ ನಂಬಿಸಿ ದೈಹಿಕ‌ ಸಂಪರ್ಕ, 376 ಅತ್ಯಾಚಾರ ಕೇಸ್ ದಾಖಲಾಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

news18-kannada
Updated:March 26, 2021, 4:41 PM IST
Ramesh Jarkiholi CD Case; ರಮೇಶ್​ ಜಾರಕಿಹೊಳಿ ವಿರುದ್ಧ ದಾಖಲಾಗುತ್ತಾ ಅತ್ಯಾಚಾರ ಪ್ರಕರಣ, ಮಾಜಿ ಸಚಿವರಿಗೆ ಎದುರಾಗಲಿದೆಯಾ ಸಂಕಷ್ಟ?
ರಮೇಶ್​ ಜಾರಕಿಹೊಳಿ.
  • Share this:
ಬೆಂಗಳೂರು (ಮಾರ್ಚ್​ 26); ಪ್ರಸ್ತುತ ರಾಜ್ಯದಲ್ಲಿ ಮಾತ್ರವಲ್ಲ ದೇಶದಾದ್ಯಂತ ಸದ್ದು ಮಾಡುತ್ತಿರುವ ಸೆಕ್ಸ್​ ಸಿಡಿ ಕೇಸ್​ ರಮೇಶ್​ ಜಾರಕಿಹೊಳಿ ಸಚಿವ ಸ್ಥಾನಕ್ಕೆ ಕುತ್ತಾಗಿ ಪರಿಣಮಿಸಿತ್ತು. ಆದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಯೂ ಈ ಉರುಳು ಮಾತ್ರ ಸದ್ಯಕ್ಕಂತು ರಮೇಶ್​ ಜಾರಕಿಹೊಳಿಯನ್ನು ಬಿಡುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಏಕೆಂದರೆ ಇಂದು ಮತ್ತೆ ವಿಡಿಯೋ ಮೂಲಕ ದಿಢೀರ್ ಪ್ರತ್ಯಕ್ಷವಾದ ಅಶ್ಲೀಲ ಸಿಡಿ ಸಂತ್ರಸ್ಥ ಯುವತಿ ತಮ್ಮ ಜೀವಕ್ಕೆ ಬೆದರಿಕೆ ಇದೆ ಎಂದು ಹೇಳಿ, ಮಾಜಿ ಸಚಿವ ರಮೇಶ್​ ಜಾರಕಿಹೊಳಿ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಸಿದ್ದರು. ಅಲ್ಲದೆ, ತಮ್ಮ ವಕೀಲ ಜಗದೀಶ್​ ಮೂಲಕ ಇದೀಗ ರಮೇಶ್​ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿದ್ದಾಳೆ. ಒಂದು ವೇಳೆ ಈ ದೂರಿನ ಅನ್ವಯ ಎಫ್​​ಐಆರ್​ ದಾಖಲಾದರೆ, ಸಚಿವರನ್ನು ಬಂಧಿಸುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಪೊಲೀಸರು ಸಂತ್ರಸ್ಥ ಯುವತಿಯ ವಕೀಲ ಜಗದೀಶ್​ ಸಲ್ಲಿಸಿರುವ ದೂರಿನ ಪ್ರತಿಯನ್ನು ವಿಶ್ಲೇಷಣೆ ಮಾಡುತ್ತಿದ್ದಾರೆ. ಪ್ರಕರಣದ ತನಿಕೆಯನ್ನು ಕೈಗೆತ್ತಿಕೊಂಡಿರುವ ಎಸ್​ಐಟಿ ಪೊಲೀಸರು ಈಗಾಗಲೇ ಯುವತಿಯ ವಿಚಾರಣೆಗಾಗಿ ನೊಟೀಸ್​ ಜಾರಿ ಮಾಡಿದ್ದಾರೆ. ಆದರೆ, ಯುವತಿ ಈವರೆಗೆ ವಿಚಾರಣೆಗೆ ಹಾಜರಾಗಿಲ್ಲ. ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳದೆ ಕೇವಲ ಪರೋಕ್ಷ ದೂರಿನ ಮೇಲೆ ಮಾಜಿ ಸಚಿವರ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶ ಇದೆಯೇ? ಎಂದು ಪೊಲೀಸರು ಅವಲೋಕನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಒಂದು ವೇಳೆ ರಮೇಶ್​ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾದರೆ, ಮಾಜಿ ಸಚಿವರಿಗೆ ಸಂಕಷ್ಟ ತಪ್ಪಿದ್ದಲ್ಲ. ಪ್ರಸ್ತುತ ವಕೀಲ ಜಗದೀಶ್​ ದೂರಿನ ಅನ್ವಯ ಐಪಿಸಿ 506 (ಜೀವ ಬೆದರಿಕೆ) , 354(A) ಕೆಲಸ ಕೊಡಿಸವುದಾಗಿ ನಂಬಿಸಿ ದೈಹಿಕ‌ ಸಂಪರ್ಕ, 376 ಅತ್ಯಾಚಾರ ಕೇಸ್ ದಾಖಲಾಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Ramesh Jarkiholi: ಸರ್ಕಾರ ಬೀಳಿಸಿದ್ದಕ್ಕೆ ಈ ರೀತಿ ಷಡ್ಯಂತ್ರ; ನಾಳೆ ನಮ್ಮ ಅಸ್ತ್ರ ಪ್ರಯೋಗ: ರಮೇಶ್​ ಜಾರಕಿಹೊಳಿ

ಅತ್ಯಾಚಾರ ಪ್ರಕರಣ ದಾಖಲಿಸಬೇಕು ಎಂದರೆ ಯುವತಿಯ ವಿಚಾರಣೆ ಅಗತ್ಯ. ಯುವತಿಯೇ ಖುದ್ದಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳಿಕೆ ನೀಡಬೆಕು. ಹೇಳಿಕೆ ನೀಡಿದ ಬಳಿಕ ಅತ್ಯಾಚಾರ ನಡೆದ ಸ್ಥಳ, ವೈದ್ಯಕೀಯ ಪರೀಕ್ಷೆ ಬಳಿಕ ಆರೋಪಿಯನ್ನು ಬಂಧಿಸಲಾಗುತ್ತದೆ. ಆದ್ರೆ ಇಲ್ಲಿ ವಕೀಲರ ಮೂಲಕ ದೂರು ಬಂದಿರೋದ್ರಿಂದ ಹಿರಿಯ ಅಧಿಕಾರಿ ಜೊತೆ ಚರ್ಚಿಸಿ ಎಫ್ ಐ ಆರ್ ದಾಖಲು ಮಾಡಲು ಪೊಲೀಸರು ನಿರ್ಧರಿಸಿದ್ದಾರೆ.

ಐಪಿಸಿ ಸೆಕ್ಷನ್ 376 ಅಡಿಯಲ್ಲಿ ಕೇಸ್ ದಾಖಲಾದ್ರೆ ರಮೇಶ್ ಜಾರಕಿಹೊಳಿ ಬಂಧನ‌ ಸಾದ್ಯತೆ. ಆದರೆ, ಯುವತಿ ಖುದ್ದು ತನಿಖಾಧಿಕಾರಿ ಮುಂದೆ ಹಾಜರಾಗಿ ಹೇಳಿಕೆ ನೀಡಬೇಕು. ಹೀಗಾಗಿ ಸಂತ್ರಸ್ಥ ಯುವತಿ ಪೊಲೀಸ್​ ಅಧಿಕಾರಿಗಳ ಎದುರು ಖುದ್ದು ಹಾಜರಾಗಿ ಹೇಳಿಕೆ ನೀಡುತ್ತಾರ? ಎಂಬುದನ್ನು ಕಾದುನೋಡಬೇಕಿದೆ.
Published by: MAshok Kumar
First published: March 26, 2021, 4:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories