Lumpy Skin Disease: ಜಾನುವಾರುಗಳಿಗೆ ಚರ್ಮ ಗಂಟುರೋಗದ ಕಂಟಕ! ಭಾರತದಲ್ಲಿ ಹೈನುಗಾರಿಕೆಯ ಭವಿಷ್ಯವೇನು?

ರಾಜಸ್ಥಾನದ ನಾಗೌರ್ ಜಿಲ್ಲೆ ಹಾಗೂ ಆಸುಪಾಸಿನ ಐದು ಹಳ್ಳಿಗಳಲ್ಲಿ ದಿನವೊಂದಕ್ಕೆ 100ಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿದ್ದು, ಇವುಗಳನ್ನು ಮಣ್ಣುಮಾಡಲೆಂದೇ ಒಂದು ಜೆಸಿಬಿ ಯಂತ್ರ ಕಾರ್ಯನಿರ್ವಹಿಸುತ್ತಿದೆ. ಇನ್ನುಳಿದ ಹಸುಗಳ ಮೃತ ಶರೀರಗಳನ್ನು ಹೆದ್ದಾರಿಗಳು ಹಾಗೂ ತೆರೆದ ಬಯಲುಗಳಲ್ಲಿ ಎಸೆಯಲಾಗುತ್ತಿದೆ. ಇಷ್ಟೊಂದು ಹಸುಗಳು ಸಾಯುವುದಕ್ಕೆ ಪ್ರಮುಖ ಕಾರಣ ಚರ್ಮಗಂಟು ರೋಗವಾಗಿದೆ!

ಜಾನುವಾರುಗಳನ್ನು ಕಾಡುತ್ತಿರುವ ಚರ್ಮಗಂಟು ರೋಗ

ಜಾನುವಾರುಗಳನ್ನು ಕಾಡುತ್ತಿರುವ ಚರ್ಮಗಂಟು ರೋಗ

  • Share this:
ರಾಜಸ್ಥಾನದ ನಾಗೌರ್ ಜಿಲ್ಲೆ ಹಾಗೂ ಆಸುಪಾಸಿನ ಐದು ಹಳ್ಳಿಗಳಲ್ಲಿ ದಿನವೊಂದಕ್ಕೆ 100 ಕ್ಕೂ ಹೆಚ್ಚು ಹಸುಗಳು (Cows) ಸಾವನ್ನಪ್ಪಿದ್ದು ಸಾವನ್ನಪ್ಪಿದ ರಾಸುಗಳನ್ನು ಮಣ್ಣುಮಾಡಲೆಂದೇ ಒಂದು ಜೆಸಿಬಿ ಯಂತ್ರ ಕಾರ್ಯನಿರ್ವಹಿಸುತ್ತಿದೆ. ಇನ್ನುಳಿದ ಹಸುಗಳ ಮೃತ ಶರೀರಗಳನ್ನು (Dead body) ಹೆದ್ದಾರಿಗಳು ಹಾಗೂ ತೆರೆದ ಬಯಲುಗಳಲ್ಲಿ ಎಸೆಯಲಾಗುತ್ತಿದೆ. ಇಷ್ಟೊಂದು ಹಸುಗಳು ಸಾಯುವುದಕ್ಕೆ ಪ್ರಮುಖ ಕಾರಣ ಚರ್ಮಗಂಟು ರೋಗವಾಗಿದೆ (Lumpy skin disease). ವೈರಸ್‌ನಿಂದ ಚರ್ಮಗಂಟು ರೋಗ ಹಸುಗಳಲ್ಲಿ ಹಬ್ಬುತ್ತಿದ್ದು 5-10 ಸಾವಿರಕ್ಕಿಂತಲೂ ಹೆಚ್ಚಿನ ಜಾನುವಾರಗಳ ಬಲಿ ಪಡೆದುಕೊಳ್ಳುತ್ತಿದೆ. ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್‌ಗೆ ಹಳ್ಳಿಗರೊಬ್ಬರು ಈ ಕಾಯಿಲೆ ಕುರಿತು ವಿವರವಾದ ಪತ್ರ ಬರೆದಿದ್ದು ಸ್ಥಳೀಯ ಲಸಿಕೆ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ.

ಜಾನುವಾರುಗಳಲ್ಲಿ ಹೆಚ್ಚುತ್ತಿರುವ ಚರ್ಮಗಂಟು ರೋಗ
ಹಿಸ್ಸಾರ್‌ನಲ್ಲಿರುವ ರಾಷ್ಟ್ರೀಯ ಸಂಶೋಧನಾ ಕೇಂದ್ರದ ಈಕ್ವಿನ್ಸ್ ಐಸಿಎಆರ್-ಎನ್‌ಸಿಆರ್‌ಇ ಸಂಸ್ಥೆಯು ಲಂಪಿ ಪ್ರೊ ವ್ಯಾಕ್ ವ್ಯಾಕ್ಸಿನ್ ನೀಡುವಂತೆ ಕೋರಿದ್ದು ಈ ಲಸಿಕೆಯನ್ನು ICAR ಇಜತ್‌ನಗರ, ಬರೇಲಿ, ಯು.ಪಿ.ಯ ಸಹಯೋಗದೊಂದಿಗೆ ನಿರ್ಮಿಸಿದ ಮೊದಲ ಸ್ಥಳೀಯ ಲಸಿಕೆ ಎಂದೆನಿಸಿದೆ. ಮೇಕೆ ಹಾಗೂ ಕುರಿಗಳಿಗೆ ಬರುವ ಪಾಕ್ಸ್ ವೈರಸ್ ವಿರುದ್ಧ ಲಸಿಕೆಯನ್ನು ಬಳಸುತ್ತಿದ್ದು ರೋಗದಿಂದ ರಕ್ಷಣೆ ನೀಡುವಲ್ಲಿ 70% ನಷ್ಟು ಪರಿಣಾಮಕಾರಿಯಾಗಿದೆ. ಇನ್ನು ಕೆಲವು ಸಂದರ್ಭಗಳಲ್ಲಿ ಲಸಿಕೆ ಅಷ್ಟೊಂದು ಪರಿಣಾಮಕಾರಿಯಲ್ಲ ಎಂಬ ಮಾಹಿತಿಯೂ ಲಭ್ಯವಾಗಿದೆ.

ಕಳೆದ ಎರಡು ತಿಂಗಳಲ್ಲಿ ಈ ವೈರಸ್‌ಗೆ ಬಲಿಯಾದ ರಾಸುಗಳ ಸಂಖ್ಯೆ ನಿಜಕ್ಕೂ ನಿಬ್ಬೆರಗಾಗಿಸುವಂತಹದ್ದು. ರಾಜ್ಯಗಳಾದ್ಯಂತ ಸುಮಾರು 7,300 ಹಸುಗಳನ್ನು ಈ ವೈರಸ್ ಬಲಿ ತೆಗೆದುಕೊಂಡಿದೆ. ಪಂಜಾಬ್‌ನಲ್ಲಿ 3,359, ರಾಜಸ್ಥಾನದಲ್ಲಿ 2,111, ಗುಜರಾತ್‌ನಲ್ಲಿ 1,679, ಜಮ್ಮು ಮತ್ತು ಕಾಶ್ಮೀರದಲ್ಲಿ 62, ಹಿಮಾಚಲ ಪ್ರದೇಶದಲ್ಲಿ 38, ಉತ್ತರಾಖಂಡದಲ್ಲಿ 36 ಮತ್ತು ಅಂಡಮಾನ್ ನಿಕೋಬಾರ್‌ನಲ್ಲಿ 29 ಸಾವನ್ನಪ್ಪಿವೆ.

ಮುಂಬರುವ ತಿಂಗಳುಗಳಲ್ಲಿ ಹಾಲಿನ ಇಳುವರಿ ಮೇಲೆ ಎಲ್‌ಎಸ್‌ಡಿ ವೈರಸ್ ಪರಿಣಾಮ:
ಮುಂಗಾರು ಕೊನೆಗೊಳ್ಳುವ ಮೊದಲು ಜಾನುವಾರುಗಳಿಗೆ ವೈರಸ್ ವಿರುದ್ಧ ಲಸಿಕೆ ಹಾಕದೇ ಇದ್ದರೆ ಇದು ಹಾಲು ಉತ್ಪಾದನೆ ಹಾಗೂ ವಿತರಣೆಯ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡಬಹುದು ಹಾಗೂ ಸಣ್ಣಹೈನುಗಾರರನ್ನು ನಷ್ಟಕ್ಕೆ ದೂಡಬಹುದು ಎಂಬ ಭೀತಿ ಇದೀಗ ಹೈನುಗಾರರನ್ನು ಕಾಡುತ್ತಿದೆ.

ಚರ್ಮಗಂಟು ರೋಗದ ಕಾರಣ ಗುಜರಾತ್‌ನಲ್ಲಿ ಏಕಾಏಕಿಯಾಗಿ ದಿನಕ್ಕೆ ಸುಮಾರು 50,000 ಲೀಟರ್ ಹಾಲಿನ ಇಳುವರಿ ಕುಸಿಯಲು ಪ್ರಾರಂಭಿಸಿದೆ. 20 ದಶಲಕ್ಷ ಲೀಟರ್‌ಗಳ ದೈನಂದಿನ ಸಂಗ್ರಹಣೆಯಲ್ಲಿ ಕೇವಲ 0.25% ಹೊಂದಿದ್ದು ಹೆಚ್ಚಿನ ಪರಿಣಾಮವನ್ನುಂಟು ಮಾಡುವುದಿಲ್ಲ ಎಂಬುದು ಗುಜರಾತ್ ಆನಂದ್‌ನಲ್ಲಿರುವ AMUL ನ ವ್ಯವಸ್ಥಾಪಕ ನಿರ್ದೇಶಕ ಆರ್‌ಎಸ್ ಸೋಧಿ ಅಭಿಪ್ರಾಯವಾಗಿದೆ.

ಇದನ್ನೂ ಓದಿ: Crime News: ಗೋಡೆ ಮೇಲೆ ಸತ್ತು ಅಂಟಿದ್ದ ಸೊಳ್ಳೆಯಿಂದ ಸಿಕ್ಕಿಬಿದ್ದ ಕಳ್ಳ! ಈ ಪೊಲೀಸ್​ ಸ್ಟೋರಿ ಸಖತ್ತಾಗಿದೆ

ಜಾನುವಾರುಗಳ ಸಾವಿನಿಂದ ತೀವ್ರವಾಗಿ ಬಾಧಿತವಾಗಿರುವ ರಾಜ್ಯಗಳಲ್ಲಿ ಒಂದಾಗಿರುವ ಪಂಜಾಬ್‌ ರಾಜ್ಯದಲ್ಲಿ ಹಾಲಿನ ಉತ್ಪಾದನೆಯು ಶೇಕಡಾ 15-20 ರಷ್ಟು ಕುಸಿದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಇದೇ ಸಮಯದಲ್ಲಿ ಹಾಲಿನ ಕಲಬೆರಕೆ ದಂಧೆ ಕೂಡ ನಡೆಯುತ್ತಿರುವುದು ಮತ್ತೊಂದು ದೊಡ್ಡ ಸವಾಲಾಗಿದೆ. ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಹಾಲು ಮತ್ತು ಹಾಲಿನ ಉತ್ಪಾದನೆಯಲ್ಲಿ ಕಲಬೆರಕೆಯಾಗುವ ಭೀತಿಯಿಂದ ಹಾಲಿನ ಮಾದರಿಗಳನ್ನು ಸಂಗ್ರಹಿಸಲು ಆರಂಭಿಸಿದೆ.

ಗರ್ಭಿಣಿ ಹಸುಗಳ ಸಾವು ಮತ್ತು ಗರ್ಭಪಾತ, ಎತ್ತುಗಳಲ್ಲಿ ಕ್ರಿಮಿನಾಶಕ:
ವೈರಸ್‌ನಿಂದ ಬಾಧಿತಗೊಂಡಿರುವ ಹಸುಗಳು ಸಂತಾನೋತ್ಪತ್ತಿ ಮಾಡದ ಕಾರಣ ಹಾಲಿನ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಸಂಪೂರ್ಣವಾಗಿ ನಿಂತುಹೋಗಬಹುದು. ರೋಗಲಕ್ಷಣಗಳು ತುಂಬಾ ದುರ್ಬಲವಾಗಿರುವುದರಿಂದ, ಜಾನುವಾರುಗಳಲ್ಲಿ ಹಾಲು ಉತ್ಪಾದನೆಯ ಮೇಲೆ ನೇರ ಪರಿಣಾಮ ಬೀರುತ್ತದೆ.

ಚರ್ಮದ ಗಂಟು ರೋಗದ ಲಕ್ಷಣಗಳೆಂದರೆ ಹೆಚ್ಚಿನ ಜ್ವರ ಮತ್ತು ಚರ್ಮದ ಗಂಟುಗಳ ಬೆಳವಣಿಗೆಯಾಗಿದೆ. ಹಾಲಿನ ಇಳುವರಿ ಕಡಿಮೆಯಾಗುವುದರಿಂದ ಈ ರೋಗ ಕಂಡುಬಂದ ಗರ್ಭಿಣಿ ಹಸುಗಳ ಗರ್ಭಪಾತ ಮಾಡಲಾಗುತ್ತಿದೆ ಹಾಗೂ ಎತ್ತುಗಳು ಹಾಲಿಲ್ಲದೆ ಬರಡಾಗಿವೆ. ಹಾಲಿನ ಫಾರ್ಮ್‌ಗಳು 50% ರಷ್ಟು ಕುಸಿತವನ್ನು ಕಂಡಿವೆ ಎಂದು ಹಿಸ್ಸಾರ್‌ನ ಐಸಿಎಆರ್, ಎನ್‌ಸಿಆರ್‌ಇ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ.ನವೀನ್ ಕುಮಾರ್ ಹೇಳುತ್ತಾರೆ.

ಎಮ್ಮೆಗಳಲ್ಲಿ ಕೂಡ ರೋಗಲಕ್ಷಣಗಳು ಕಂಡುಬಂದಿದ್ದು, ಲಕ್ಷಣ ಸೌಮ್ಯವಾಗಿದ್ದರೂ, ಅವು ಐದು ದಿನಗಳವರೆಗೆ ಆಹಾರವನ್ನು ಸೇವಿಸುವುದಿಲ್ಲ. ಹಸುಗಳಲ್ಲಿ, 4-5 ದಿನಗಳವರೆಗೆ ತೀವ್ರ ಜ್ವರ ಇರುತ್ತದೆ. ಎಲ್ಲಾ ಚಿಕಿತ್ಸೆಯು ರೋಗಲಕ್ಷಣದ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಮತ್ತು ನಿರ್ದಿಷ್ಟ ಚಿಕಿತ್ಸೆ ಇಲ್ಲ ಎಂಬುದು ರೋಗದ ತೀವ್ರತೆಗೆ ಕಾರಣವಾಗುತ್ತಿದೆ. ಹಸುಗಳ ಚೇತರಿಕೆಗೆ 15-20 ದಿನಗಳು ಬೇಕು. ಚೇತರಿಕೆಯಾದ ನಂತರ ಹಿಂದಿದ್ದ ಅದೇ ಮಟ್ಟದಲ್ಲಿ ಹಾಲು ಉತ್ಪಾದಿಸುತ್ತವೆಯೇ ಎಂಬುದು ಕೂಡ ತಿಳಿದಿಲ್ಲ ಎಂಬುದು ವೈದ್ಯರಾದ ಮುಂಜಾಲ್ ಅಭಿಪ್ರಾಯವಾಗಿದೆ.

ಎಮ್ಮೆ, ಎತ್ತುಗಳಲ್ಲಿ ಚರ್ಮಗಂಟು ರೋಗ: ಚುರುಕಾದ ವ್ಯಾಕ್ಸಿನೇಶನ್ ಪ್ರಕ್ರಿಯೆ
ಎಮ್ಮೆ ಎತ್ತುಗಳಲ್ಲಿ ಈ ರೋಗ ಕಂಡುಬರುವುದಿಲ್ಲವೆಂದು ಭಾವಿಸಿದ್ದರೂ ಇತ್ತೀಚಿನ ನಿದರ್ಶನಗಳಿಂದ ಅವುಗಳೂ ಕೂಡ ರೋಗಕ್ಕೆ ಬಾಧಿತಗೊಂಡಿವೆ. ಕುದುರೆ ಹಾಗೂ ಒಂಟೆಗಳೂ ಕೂಡ ರೋಗಕ್ಕೆ ತುತ್ತಾದ ಪ್ರಕರಣಗಳು ಕಂಡುಬಂದಿವೆ ಎಂಬುದಾಗಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:  Elephant: ಹೆಣ್ಣಾನೆ ಬಳಸಿ ಕಾಡಾನೆಗೆ ಖೆಡ್ಡಾ! ಭಾನುಮತಿ ನಿನ್ನ ನಂಬಿದ್ರೆ ಫಜೀತಿ ಅಂತ ಒಂಟಿ ಸಲಗ ಎಸ್ಕೇಪ್!

ಹರಿಯಾಣದ ಹಿಸ್ಸಾರ್‌ನಲ್ಲಿರುವ ಹಿಸ್ಸಾರ್ ಬೋವಿನ್ ಸ್ಪರ್ಮ್ ಸೆಂಟರ್‌ನಲ್ಲಿ, ರೋಗ ಹರಡುವ ಭೀತಿಯಿಂದ ತೋಟದ ಮಾಲೀಕರು 46 ಎತ್ತುಗಳಿಗೆ ಲಸಿಕೆ ಹಾಕಿದ್ದಾರೆ. ಲಸಿಕೆ ನೀಡಿರುವ ವಿ.ಕೆ ಮುಂಜಾಲ್ ಹೇಳುವಂತೆ ಲಸಿಕೆಯ ಅಡ್ಡ ಪರಿಣಾಮಗಳ ಬಗ್ಗೆ ತಿಳಿಯದೇ ಇದ್ದ ಕಾರಣ ಅವರು, ಕೇವಲ 46 ಗೂಳಿಗಳಿಗೆ ಮಾತ್ರ ಚುಚ್ಚುಮದ್ದು ನೀಡಿದ್ದಾರೆ. ಇಲ್ಲಿಯವರೆಗೆ, ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ ಮತ್ತು ಗೂಳಿಯ ವೀರ್ಯದ ಗುಣಮಟ್ಟದಲ್ಲಿಯೂ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ವ್ಯಾಕ್ಸಿನೇಷನ್ ಮಾಡಿದ ಒಂದು ತಿಂಗಳ ನಂತರ ಆ್ಯಂಟಿಬಾಡಿ ಟೈಟ್ರೆ ಪರೀಕ್ಷೆ ನಡೆಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ಭಾರತದಲ್ಲಿ ಹಾಲಿನ ಇಳುವರಿ: ಬೆಲೆಗಳನ್ನು ಮತ್ತಷ್ಟು ಹೆಚ್ಚಿಸಬಹುದೇ?
ಹಾಲಿನ ಉತ್ಪಾದನೆ ಹಾಗೂ ಬೆಲೆ ಏರಿಕೆಯ ಮೇಲೆ ಎಲ್‌ಎಸ್‌ಡಿಯ ಪರಿಣಾಮ ಬೀರಿದೆ ಎಂದು CRISIL ಮೌಲ್ಯಮಾಪನವು ಸೂಚಿಸುತ್ತದೆ. ಕಳೆದ ಆರು ತಿಂಗಳಲ್ಲಿ ಹಾಲು ಸಂಗ್ರಹಣೆ ದರವು 8-10% ದಷ್ಟು ಏರಿಕೆಯಾಗಿರುವುದಕ್ಕೆ ಕಾರಣ ನಿರೀಕ್ಷೆಗಿಂತ ಕಡಿಮೆ ಪ್ರಮಾಣದಲ್ಲಿ ಹಾಲು ಸಂಗ್ರಹವಾಗಿರುವುದಾಗಿದೆ.

ಹೆಚ್ಚುವರಿಯಾಗಿ, ಕಚ್ಚಾ ಬೆಲೆಯ ಏರಿಕೆಯು ಸಾರಿಗೆ ಮತ್ತು ಪ್ಯಾಕೇಜಿಂಗ್ ವೆಚ್ಚಗಳಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗಿದೆ. ಇದರಿಂದಾಗಿ ಕಳೆದ ಆರು ತಿಂಗಳಲ್ಲಿ ಎರಡನೇ ಬಾರಿ ಬೆಲೆ ಏರಿಕೆ ಅನಿವಾರ್ಯವಾಗಿದೆ. ಹಾಲಿನ ಸಂಗ್ರಹಣೆಯಲ್ಲಿ ಏರಿಕೆಯಾದರೆ ಬೆಲೆಗಳಲ್ಲಿ ಹೆಚ್ಚಳವುಂಟಾಗುವುದಿಲ್ಲ ಇದರಿಂದ ಲಾಭದಾಯಕತೆ ಉಂಟಾಗುತ್ತದೆ.

ಸರಾಸರಿಯಾಗಿ, ಹಾಲು ಉತ್ಪಾದನೆಯು ಕಳೆದ ಆರು ವರ್ಷಗಳಲ್ಲಿ ದೇಶದ ಹೆಚ್ಚಳದ ಪ್ರಮಾಣದೊಂದಿಗೆ, 2018-19 ರವರೆಗೆ ಸುಮಾರು 6% ಕ್ಕಿಂತ ಹೆಚ್ಚಿದೆ ಮತ್ತು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಇದರ ಮೇಲೆ ಸ್ವಲ್ಪ ಪರಿಣಾಮ ಬೀರಿದೆ. 2019-2020 ರಲ್ಲಿ ಭಾರತದ ಇಳುವರಿ 198.4 ಮಿಲಿಯನ್ ಟನ್‌ಗಳು, ಇದು 5.69% ಮತ್ತು 210.0 ಮಿಲಿಯನ್ ಟನ್‌ಗಳು ಎಂದು ಅಂದಾಜಿಸಲಾಗಿದೆ. (2020-21 ರಲ್ಲಿ 5.81%, ಫೆಬ್ರವರಿ 2022 ರಲ್ಲಿ ಲೋಕಸಭೆಯಲ್ಲಿ ಮಂಡಿಸಲಾದ ತಾತ್ಕಾಲಿಕ ಮಾಹಿತಿಯ ಪ್ರಕಾರ)

ಚರ್ಮಗಂಟು ರೋಗದ ಲಸಿಕೆ: ಸಮಯೋಚಿತ ಲಭ್ಯತೆ ಮುಖ್ಯವಾಗಿದೆ:
ರೋಗ ಹರಡುವಿಕೆ ಹೆಚ್ಚಿರುವ ರಾಜ್ಯಗಳಾದ್ಯಂತ ಹಾಲು ಉತ್ಪಾದನೆಯ ಕುಸಿತವನ್ನು ತಪ್ಪಿಸಲು ಅಧಿಕಾರು ಜಾನುವಾರುಗಳಿಗೆ ಲಸಿಕೆ ಹಾಕುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ. ವಿವಿಧ ರಾಜ್ಯಗಳಲ್ಲಿರುವ ಸಂಘಟಿತ ಫಾರ್ಮ್‌ಗಳು, ಗೋಶಾಲೆಗಳಿಗೆ 12,000 ಡೋಸ್‌ಗಳನ್ನು ನೀಡಿದ್ದು, ಲಸಿಕೆ ಉತ್ಪಾದನೆಯನ್ನು ಶೀಘ್ರವೇ ಹೆಚ್ಚಿಸುತ್ತಿದ್ದು, ಇದೀಗ 4 ಲಕ್ಷ ಡೋಸ್‌ಗಳಿವೆ ಮತ್ತು ಹೆಚ್ಚಿನವು ಉತ್ಪಾದನೆಯಲ್ಲಿವೆ ಎಂಬುದು ಅಧಿಕಾರಿ ವರ್ಗದ ಹೇಳಿಕೆಯಾಗಿದೆ. ಈ ಸಲುವಾಗಿ ಕೃಷಿ ಸಚಿವಾಲಯದ ಪ್ರಾಧಿಕಾರದಲ್ಲಿ ಅಗ್ರಿ ಇನ್ನೋವೇಟ್‌ಗೆ ಪತ್ರ ಬರೆದಿದ್ದು, ಪಶುಸಂಗೋಪನೆ ಇಲಾಖೆಯಿಂದ ಅನುಮೋದನೆ ಪಡೆದ ನಂತರ ಲಸಿಕೆ ಉತ್ಪಾದನೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತೇವೆ ಎಂಬುದು ಅಧಿಕಾರಿಗಳ ಮಾತಾಗಿದೆ.

ಇದನ್ನೂ ಓದಿ:  Wild Animals: ವಿದೇಶಿ ಪ್ರಾಣಿಗಳ ಕಳ್ಳಸಾಗಣೆಗೆ ಬ್ರೇಕ್! ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳೇನು?

ಆದರೆ ಅಧಿಕೃತ ಅಂದಾಜಿನ ಪ್ರಕಾರ, ಭಾರತವು ಹಸುಗಳು ಮತ್ತು ಎಮ್ಮೆಗಳನ್ನು ಒಳಗೊಂಡಂತೆ ಸುಮಾರು 23 ಕೋಟಿಗಳಷ್ಟು ಜಾನುವಾರುಗಳನ್ನು ಹೊಂದಿದೆ, ಒಟ್ಟು 53 ಕೋಟಿ ಸಾಕುಪ್ರಾಣಿಗಳಲ್ಲಿ ಕುರಿಗಳು, ಮೇಕೆಗಳು, ಒಂಟೆಗಳು, ಕುದುರೆಗಳು, ಗೂಳಿಗಳು, ಎತ್ತುಗಳು ಸೇರಿವೆ. ಜಾನುವಾರುಗಳ ರಕ್ಷಣೆ ಕುರಿತಂತೆ ವಿಜ್ಞಾನಿಗಳು ಮಾಹಿತಿ ನೀಡಿದ್ದು ದನಗಳನ್ನು ಕನಿಷ್ಟ ಒಂದು ವರ್ಷಗಳ ಕಾಲ ಈ ರೋಗದಿಂದ ರಕ್ಷಿಸಬಹುದು ಎಂದಾಗಿದೆ. ಲಸಿಕೆ ಹಾಕಿದ ಒಂದು ತಿಂಗಳ ನಂತರ ಮಾತ್ರ ರೋಗನಿರೋಧಕ ಶಕ್ತಿಯು ಪ್ರಾರಂಭವಾಗುತ್ತದೆ, ಆ ಅವಧಿಯಲ್ಲಿ LSD ಸೋಂಕಿಗೆ ಇನ್ನೂ ಒಳಗಾಗಬಹುದು. ಎಲ್‌ಎಸ್‌ಡಿ ವೈರಸ್ ಅನ್ನು ಪ್ರತ್ಯೇಕಿಸುವ ಮೂಲಕ ರಚಿಸಲಾದ ಲೈವ್ ಅಟೆನ್ಯೂಯೇಟೆಡ್ ಲಸಿಕೆ 1-2 ವರ್ಷಗಳವರೆಗೆ ರಕ್ಷಣೆ ನೀಡುತ್ತದೆ, ಆದರೆ ಈ ಕುರಿತು ಮಾಹಿತಿ ಇನ್ನೂ ಲಭ್ಯವಾಗಬೇಕಿದೆ. ಈ ಲಸಿಕೆಗಳು ಕನಿಷ್ಠ ಒಂದು ವರ್ಷದವರೆಗೆ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ವೈದ್ಯರಾದ ನವೀನ್ ಹೇಳುತ್ತಾರೆ.
Published by:Ashwini Prabhu
First published: