SEX ವಿಡಿಯೋ ನೋಡೋದು, ಹಂಚುವುದು, ನಿರ್ಮಿಸುವುದು.. ಕಾನೂನಿನಲ್ಲಿ ಯಾವುದು ಶಿಕ್ಷಾರ್ಹ?

Pornography in India: ಅಶ್ಲೀಲತೆ ಹಾಗೂ ಕಾಮಪ್ರಚೋದಕತೆಗೆ ಇರುವ ವ್ಯತ್ಯಾಸವೇನು? ಭಾರತದಲ್ಲಿ ಅಶ್ಲೀಲತೆಯ ವ್ಯಾಖ್ಯಾನವೇನು? ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಪ್ರಕರಣದಲ್ಲಿ ಆಗುತ್ತಿರುವುದೇನು?

ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್​ ಕುಂದ್ರಾ ​ ಪೊಲೀಸರು ಬಂಧಿಸಿದ್ದಾರೆ.

ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್​ ಕುಂದ್ರಾ ​ ಪೊಲೀಸರು ಬಂಧಿಸಿದ್ದಾರೆ.

 • Share this:

  ಭಾರತೀಯ ಕಾನೂನು ಹೇಳುವ ಪ್ರಕಾರ ಅಶ್ಲೀಲ ಚಿತ್ರ ವೀಕ್ಷಣೆ ನಡೆಸಿದಲ್ಲಿ ಜೈಲು ಶಿಕ್ಷೆಯಾಗುವುದಿಲ್ಲ. ಆದರೆ ಅಶ್ಲೀಲ ವಿಷಯ ಹಂಚುವುದು ಇಲ್ಲವೇ ನಿರ್ಮಿಸಿದಲ್ಲಿ ವ್ಯಕ್ತಿಯನ್ನು ಬಂಧಿಸಲಾಗುತ್ತದೆ. ಆದರೆ ಲಿಖಿತ ರೂಪದಲ್ಲಿ ಬರೆದಿರುವ ಕಾನೂನಿನ ಪ್ರಾಯೋಗಿಕ ಅನ್ವಯಗಳು ನಿಗೂಢವಾಗಿದೆ. ಕಾನೂನು ಪರಿಭಾಷೆ ಬಳಸುವುದು, ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ದ ಸೆಕ್ಷನ್ 67ಎ ಹೇಳುವಂತೆ ಲೈಂಗಿಕ ಅಭಿವ್ಯಕ್ತಿ ಅಥವಾ ನಡವಳಿಕೆಯನ್ನು ಹೊಂದಿರುವ ಯಾವುದೇ ವಸ್ತು ಪ್ರಕಟಿಸುವುದು, ಪ್ರಸಾರ ಮಾಡುವುದು ಹಾಗೂ ಯಾವುದೇ ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಸಾರ ಮಾಡುವುದಕ್ಕೆ ಕಾರಣವಾದಲ್ಲಿ ಐದು ವರ್ಷಗಳ ಜೈಲು ಶಿಕ್ಷೆ ಹಾಗೂ 10 ಲಕ್ಷ ದಂಡವನ್ನು ವಿಧಿಸಲಾಗುತ್ತದೆ. ಹಾಗಾಗಿ ಅಶ್ಲೀಲ ಕಂಟೆಂಟ್ ಮಾರಾಟ ಮಾಡುವಾಗ ಅಥವಾ ವ್ಯಾಪಾರೀಕರಣದಲ್ಲಿ ಸಿಕ್ಕಿಬಿದ್ದರೆ ನಿಮಗೆ ಜೈಲು ಹಾಗೂ ದಂಡ ವಿಧಿಸಲಾಗುತ್ತದೆ.


  ಜುಲೈ 19ರಂದು ಬಂಧನಕ್ಕೊಳಗಾದ ರಾಜ್ ಕುಂದ್ರಾ ಈ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆಪಾದನೆ ಎದುರಿಸುತ್ತಿದ್ದಾರೆ. ಅಸಭ್ಯ ಜಾಹೀರಾತುಗಳು ಮತ್ತು ಪ್ರದರ್ಶನಗಳು, ಜೊತೆಗೆ ಐಟಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳು, ಅಸಭ್ಯ ರೀತಿಯಲ್ಲಿ ಮಹಿಳೆಯರ ಪ್ರದರ್ಶನ ಮೊದಲಾದ ಪ್ರಕರಣಗಳಲ್ಲಿ ನಿರ್ಮಾಪಕ-ಉದ್ಯಮಿ ರಾಜ್ ಕುಂದ್ರಾರನ್ನು ಭಾರತೀಯ ದಂಡ ಸಂಹಿತೆ (ಐಪಿಸಿ) ವಂಚನೆಗಾಗಿ ಸೆಕ್ಷನ್ 420ರ ಅಡಿಯಲ್ಲಿ ಬಂಧಿಸಲಾಗಿದೆ. ಅವರ ವಕೀಲರು ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಸಹವರ್ತಿಗಳು ಇದುವರೆಗೆ ಹೇಳುತ್ತಾ ಬಂದಿರುವುದು ಏನೆಂದರೆ ಕುಂದ್ರಾ ಕಂಪೆನಿಗಳು, ಸಹವರ್ತಿಗಳು ಹಾಗೂ ಅವರ ಅಪ್ಲಿಕೇಶನ್ ಹಾಟ್‌ಶಾಟ್ಸ್ ಅಶ್ಲೀಲತೆಯ ಉತ್ಪಾದನೆಯಲ್ಲಿ ಭಾಗಿಯಾಗಿಲ್ಲ. ಬದಲಿಗೆ ಕಾಮಪ್ರಚೋದಕ ಚಿತ್ರಗಳ ನಿರ್ಮಾಣ ಮಾಡಿರುವುದಾಗಿ ಸಮರ್ಥಿಸಿಕೊಂಡಿದ್ದಾರೆ.


  ಹಾಗಾದರೆ ಅಶ್ಲೀಲತೆ ಮತ್ತು ಕಾಮಪ್ರಚೋದಕತೆಗೆ ಇರುವ ವ್ಯತ್ಯಾಸವೇನು ಎಂಬುದನ್ನು ತಿಳಿದುಕೊಳ್ಳೋಣ.


  ಅಶ್ಲೀಲತೆಯ ಅರ್ಥ


  ಇಂಡಿಯನ್ ಟೈಮ್ಸ್ ಅಶ್ಲೀಲತೆ, ಕಾಮಪ್ರಚೋದಕ ಹಾಗೂ ವಯಸ್ಕ ಚಿತ್ರಗಳ ಕುರಿತು ಉದ್ಯಮದ ತಜ್ಞರೊಂದಿಗೆ ಸಂವಾದ ನಡೆಸಿದಾಗ ಬೇರೆ ಬೇರೆ ಗ್ರಹಿಕೆಗಳು ಹಾಗೂ ಅಭಿಪ್ರಾಯಗಳನ್ನು ಪಡೆದಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಗ್ರಹಿಕೆಯನ್ನು ಸಮರ್ಥಿಸಿಕೊಂಡಿದ್ದು, ಸಮಾಜದ ದೃಷ್ಟಿಕೋನವನ್ನು ಅವಲಂಬಿಸಿದೆ ಎಂದು ತಿಳಿದುಬಂದಿದೆ. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ನ ಮಾಜಿ ಸದಸ್ಯೆ ಜ್ಯೋತಿ ವೆಂಕಟೇಶ್ ಪ್ರಕಾರ, ಯಾವುದೇ ಭಾರತೀಯ ಚಲನಚಿತ್ರದಲ್ಲಿ ಜನನಾಂಗಗಳನ್ನು ತೋರಿಸಬಾರದು ಎಂದು ನಮಗೆ ಸ್ಪಷ್ಟ ಸೂಚನೆ ಇತ್ತು. ಆದರೆ ಶೇಖರ್ ಕಪೂರ್ ಅವರ ಡಕಾಯಿತ್ ರಾಣಿ ಚಿತ್ರಕ್ಕಾಗಿ ಕೋರ್ಟ್‌ಗೆ ಹೋಗಿ ಚಿತ್ರದಲ್ಲಿನ ಯಾವುದೇ ದೃಶ್ಯಕ್ಕೆ ಕತ್ತರಿ ಹಾಕದಂತೆ ಪ್ರಮಾಣಪತ್ರ ಪಡೆದರು. ಆದರೆ ನಗ್ನತೆ ಹೊಂದಿದ್ದ ‘ಷಿಂಡ್ಲರ್ಸ್ ಲಿಸ್ಟ್’ ಚಿತ್ರದ ಪ್ರಮಾಣಪತ್ರಕ್ಕಾಗಿ ಚಿತ್ರದಲ್ಲಿನ ಕೆಲವೊಂದು ಭಾಗಕ್ಕೆ ಕತ್ತರಿ ಪ್ರಯೋಗ ಮಾಡಬೇಕಾಯಿತು ಎಂದು ತಿಳಿಸಿದ್ದಾರೆ.


  ಸುಪ್ರೀಂ ಕೋರ್ಟ್ ವಕೀಲರಾದ ಖುಶ್ಬೂ ಜೈನ್ ಹೇಳುವಂತೆ ಕೇಬಲ್ ಟೆಲಿವಿಶನ್ ಕಾಯ್ದೆ 1995ರ ಪ್ರಕಾರ ಟಿವಿಯಲ್ಲಿ ಅಶ್ಲೀಲ ದೃಶ್ಯಗಳ ಪ್ರಸಾರಕ್ಕೆ ನಿರ್ಬಂಧನೆ ಇದೆ ಎಂದಾಗಿದೆ. ಇಂತಹ ಚಿತ್ರಗಳನ್ನು ಇಲ್ಲವೇ ಸಂಬಂಧಿತ ವಿಷಯವನ್ನು ಪ್ರಸಾರ ಮಾಡಿದಲ್ಲಿ ಶಿಕ್ಷೆ ಹಾಗೂ ದಂಡಕ್ಕೆ ಒಳಗಾಗಬೇಕಾಗುತ್ತದೆ ಎಂದು ಜೈನ್ ವಿವರಿಸಿದ್ದಾರೆ. ಆದರೆ ಆನ್‌ಲೈನ್ ಪೋರ್ಟಲ್‌ಗಳು ಎಗ್ಗಿಲ್ಲದೆ ಇಂತಹ ಚಿತ್ರಗಳ ಪ್ರಸಾರ ಮಾಡುತ್ತಿದ್ದು ಇವುಗಳನ್ನು ನಿಯಂತ್ರಿಸಲು ಅಥವಾ ನಿರ್ಬಂಧಿಸಲು ಯಾವುದೇ ಸೆನ್ಸಾರ್ ಬೋರ್ಡ್‌ಗಳಿಲ್ಲ ಎಂಬುದನ್ನು ತಿಳಿದುಕೊಂಡಿವೆ. ಹಾಗಾಗಿ ಅವುಗಳು ಏನನ್ನು ಬೇಕಾದರೂ ಪ್ರಸಾರ ಮಾಡಬಹುದು ಎಂಬ ಸ್ವಾತಂತ್ರ್ಯ ಹೊಂದಿದೆ ಎಂದು ಜೈನ್ ಉಲ್ಲೇಖಿಸಿದ್ದಾರೆ.


  ಯಾವುದು ಅಪರಾಧ ಹಾಗೂ ಯಾವುದು ಅಪರಾಧವಲ್ಲ


  ದೇಶದ ಹಿರಿಯ ವಕೀಲರು ಕೂಡ ಅಶ್ಲೀಲತೆಯ ಪ್ರಪಂಚದಲ್ಲಿ ಕೆಲವೊಂದು ನಿಗೂಢವಿದೆ ಎಂದು ನಂಬಿದ್ದು, ಸುಪ್ರೀಂ ಕೋರ್ಟ್ ಕೂಡ ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಖಚಿತ ಉತ್ತರ ನೀಡುವಲ್ಲಿ ಸೋತಿದೆ ಎಂದು ತಿಳಿಸಿದ್ದಾರೆ. ವಕೀಲೆ ವಂದನಾ ಶಾ ಹೇಳುವಂತೆ ಖಾಸಗಿ ವಲಯದಲ್ಲಿ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದಲ್ಲಿ ಕಾನೂನುಬಾಹಿರವಾಗುವುದಿಲ್ಲ. ಆದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಲ್ಲಿ ಇಲ್ಲವೇ ವಿತರಿಸಿದಲ್ಲಿ ಕಾನೂನು ಬಾಹಿರವಾಗುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಅಶ್ಲೀಲತೆ ಮಾರಿ ಹಣ ಸಂಪಾದಿಸುವುದು ಕೂಡ ಶಿಕ್ಷಾರ್ಹ ಅಪರಾಧವೆಂದು ಉಲ್ಲೇಖಿಸಿದ್ದಾರೆ.


  ಭಾರತದಲ್ಲಿ ಅಶ್ಲೀಲತೆ ಕಾನೂನು ಬಾಹಿರ ಚಟುವಟಿಕೆಯಾಗಿದೆ ಏಕೆ?


  ಸ್ಕಾಂಡಿನೇವಿಯನ್ ದೇಶದಲ್ಲಿ ರಾಜ್ ಕುಂದ್ರಾ ವಿವಾದಾತ್ಮಕ ಚಲನಚಿತ್ರಗಳನ್ನು ನಿರ್ಮಿಸಿದ್ದರೆ, ಉದ್ಯೋಗ ಸೃಷ್ಟಿಸಿದ್ದಕ್ಕಾಗಿ ಮೆಚ್ಚುಗೆ ಪಡೆಯುತ್ತಿದ್ದರು. ಆದರೆ ಭಾರತದಲ್ಲಿ ಅಶ್ಲೀಲತೆ ಕಾನೂನು ಬಾಹಿರವೆಂದು ಪರಿಗಣಿಸಿರುವುದರಿಂದ ಸಾಮಾಜಿಕ-ಕಾನೂನು ಪರಿಣಾಮಗಳಿಗೆ ಒಳಪಡುತ್ತದೆ. ಮಹಿಳೆಯರ ವಿರುದ್ಧ ಇದು ಒಂದು ರೀತಿಯ ಶೋಷಣೆಯಾಗಿದೆ ಎಂಬುದನ್ನು ವಂದನಾ ತಿಳಿಸಿದ್ದಾರೆ. ವಾಸ್ತವವಾಗಿ ಮಹಿಳೆಯರು ಚಿತ್ರೀಕರಣಕ್ಕೆ ಒಪ್ಪಿಗೆ ನೀಡುವ ಒಪ್ಪಂದಕ್ಕೆ ಸಹಿ ಹಾಕಿದರೂ ಭಾರತದಲ್ಲಿ ಅಶ್ಲೀಲತೆ ಕಾನೂನುಬಾಹಿರವಾಗಿದೆ ಎಂದವರು ಉಲ್ಲೇಖಿಸಿದ್ದಾರೆ.


  ಪೊಲೀಸರು ತಪ್ಪಿತಸ್ಥರನ್ನು ಬಂಧಿಸಿದ್ದು ಹೇಗೆ?


  ಒಂದು ಬಂಗಲೆಯಲ್ಲಿ ಅಶ್ಲೀಲ ಚಿತ್ರಗಳ ದೃಶ್ಯೀಕರಣ ನಡೆಸಲಾಗುತ್ತಿದೆ ಎಂಬ ಸುಳಿವನ್ನು ಆಧರಿಸಿ ಪೊಲೀಸರು ಮಧ್ ದ್ವೀಪದ ಬಂಗಲೆಯ ಮೇಲೆ ದಾಳಿ ನಡೆಸಿದ್ದರು. ಅಲ್ಲದೆ ಈ ಹಿಂದೆ ಕೆಲವು ಸಂತ್ರಸ್ತರು ಕಾಮಪ್ರಚೋದಕ ಮತ್ತು ಅಶ್ಲೀಲ ವಿಷಯವನ್ನು ಚಿತ್ರೀಕರಿಸಲು ಒತ್ತಾಯಿಸಲಾಗುತ್ತಿದೆ ಎಂದು ದೂರುಗಳನ್ನು ಸಲ್ಲಿಸಿದ್ದರು. ಫೆಬ್ರವರಿಯಲ್ಲಿ ನಡೆದ ದಾಳಿ ನಂತರ, ನಟಿ ಗೆಹನಾ ವಸಿಷ್ಠ್‌ರನ್ನು ಚಲನಚಿತ್ರ ನಿರ್ಮಾಪಕ ತನ್ವೀರ್ ಹಶ್ಮಿ ಮತ್ತು ನಟಿ ರೋವಾ ಖಾನ್ ಜೊತೆಗೆ ಬಂಧಿಸಲಾಯಿತು. ನಿವೃತ್ತ ಎಸಿಪಿ ವಸಂತ್ ತಾಜಾ ಈ ಪ್ರಕ್ರಿಯೆಯ ಕುರಿತು ಮಾತನಾಡುತ್ತಾ ಪ್ರಕರಣಗಳ ಪತ್ತೆಗೆ ನಾವು ಎರಡು ಮಾರ್ಗಗಳನ್ನು ಅನುಸರಿಸುತ್ತೇವೆ. ಒಂದು ಸ್ಥಳಕ್ಕೆ ನೇರವಾಗಿ ದಾಳಿ ನಡೆಸಿ ಇನ್ನೊಂದು ತಾಂತ್ರಿಕ ರೂಪದಲ್ಲಿ ಎಂದು ತಿಳಿಸಿದ್ದಾರೆ.


  ಕಾಮಪ್ರಚೋದಕ ಚಲನಚಿತ್ರ ನಿರ್ಮಾಪಕರು ಶೂಟಿಂಗ್ ವಿಧಾನವನ್ನು ಬಣ್ಣಿಸಿದ್ದು ಹೇಗೆ?


  ಆನ್‌ಲೈನ್ ಪ್ಲಾಟ್‌ಫಾರ್ಮ್ ಮತ್ತು ಕೆಲವು ಇತರ ಮೊಬೈಲ್ ಅಪ್ಲಿಕೇಶನ್‌ಗಳಿಗೆ ಕಾಮಪ್ರಚೋದಕ ವಿಷಯವನ್ನು ನಿರ್ದೇಶಿಸಿದ ನಿರ್ದೇಶಕ ಎಂ ಚೌಹಾಣ್ ಹೇಳುವಂತೆ "ಇದು ಎಲ್ಲಾ ಕ್ಯಾಸ್ಟಿಂಗ್ ನಿರ್ದೇಶಕರೊಂದಿಗೆ ಪ್ರಾರಂಭವಾಗುತ್ತದೆ, ಅವರು ಹುಡುಗಿಯರ ಪೋರ್ಟ್‌ಫೋಲಿಯೋವನ್ನು ಸಂಪೂರ್ಣ ಮಾಹಿತಿಯೊಂದಿಗೆ ಹಂಚಿಕೊಳ್ಳುತ್ತಾರೆ ಮತ್ತು ಚಿತ್ರದ ಇತರ ನಿಕಟ ದೃಶ್ಯಗಳನ್ನು ಬಹಿರಂಗಪಡಿಸಲು ಮತ್ತು ತೊಡಗಿಸಿಕೊಳ್ಳಲು ಸಿದ್ಧರಾಗಿದ್ದಾರೆ ಎಂಬುದನ್ನು ಚಾನಲ್‌ನೊಂದಿಗೆ ಹಂಚಿಕೊಳ್ಳಲಾಗುತ್ತದೆ.


  ಅದು ಪಾತ್ರವರ್ಗ ಅಂತಿಮಗೊಳಿಸುತ್ತದೆ ಮತ್ತು ಶುಲ್ಕ ನಿಗದಿಪಡಿಸಲಾಗುತ್ತದೆ. ಈ ಸಿನಿಮಾಗಳಲ್ಲಿ ಕೆಲಸ ಮಾಡುವ ಬಹುತೇಕ ಹುಡುಗಿಯರು ಚಿತ್ರರಂಗದ ಸದಸ್ಯರಲ್ಲದವರು ಮತ್ತು ಕೋಲ್ಕತ್ತಾ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಂತಹ ಹೊರಗಿನ ರಾಜ್ಯದವರು ಎಂದು ತಿಳಿಸಿದ್ದಾರೆ.


  ಅಂಗಾಂಗ ಪ್ರದರ್ಶನದ ವ್ಯಾಪಾರ


  2018ರಲ್ಲಿ ಜನಪ್ರಿಯ ವಯಸ್ಕರ ತಾಣವಾದ ಪೋರ್ನ್‌ಹಬ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ವಿಶ್ವದಲ್ಲಿ ಅಶ್ಲೀಲ ವಿಷಯಗಳ ಬಳಕೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಒಂದು ಕಾಲದಲ್ಲಿ ಚಿತ್ರಮಂದಿರಗಳಲ್ಲಿ ಇಂಟರ್ವಲ್‌ ಸಮಯದಲ್ಲಿ ಮಾತ್ರವೇ ಅಶ್ಲೀಲ ದೃಶ್ಯಗಳ ಪ್ರದರ್ಶನ ನಡೆಯುತ್ತಿತ್ತು. ಆದರೀಗ ಒಟಿಟಿ ತಾಣಗಳಲ್ಲಿ ಅಶ್ಲೀಲತೆಯನ್ನು ಕಾಮಪ್ರಚೋದಕ ಎಂಬ ಹೆಸರಿನಿಂದ ಮುಕ್ತವಾಗಿ ಪ್ರಚಾರಪಡಿಸಲಾಗುತ್ತಿದೆ.


  ಯಾವುದು ಅಶ್ಲೀಲತೆ ಅಥವಾ ಯಾವುದು ಅಲ್ಲ ಎಂಬುದು ನೋಡುಗರ ಕಾನೂನು ಅಥವಾ ಸಾಮಾಜಿಕ ದೃಷ್ಟಿಕೋನವನ್ನು ಅವಲಂಬಿಸಿದೆ. ಆದರೆ ಯಾರಾದರೂ ಸಿಕ್ಕಿಬಿದ್ದಾಗ ಮಾತ್ರವೇ ಪ್ರಕ್ರಿಯೆಯು ಕಾನೂನು ಬಾಹಿರವಾಗುತ್ತದೆ.

  First published: