Buddha Purnima 2022: ಆಸೆಯೇ ದುಃಖಕ್ಕೆ ಮೂಲ ಎಂದು ಜಗತ್ತಿಗೆ ಸಾರಿದ ಭಗವಾನ್ ಬುದ್ಧನ ಜನ್ಮ ದಿನ - ಇತಿಹಾಸ, ಮಹತ್ವ ಇಲ್ಲಿದೆ

ಬೌದ್ಧ ಧರ್ಮದವರು ಆಚರಿಸುವ ಪ್ರಮುಖ ದಿನಗಳಲ್ಲಿ ಬುದ್ಧ ಪೂರ್ಣಿಮೆ ಕೂಡ ಒಂದು. ಇದು ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಭಗವಾನ್ ಬುದ್ಧನ ಜನ್ಮ ದಿನ. ಹೌದು, ವೈಶಾಖ ಪೂರ್ಣಿಮೆಯ ದಿನದಂದು, ಭಗವಾನ್ ಬುದ್ಧನು ಜನಿಸಿದನು ಎಂದು ಹೇಳಲಾಗುತ್ತದೆ. ಹಿಂದೂ ಚಾಂದ್ರಮಾನ ಕ್ಯಾಲೆಂಡರ್, ವಿಕ್ರಮ್ ಸಂವತ್ ಪ್ರಕಾರ ಈ ದಿನಾಂಕವು ಪ್ರತೀ ವರ್ಷ ಭಿನ್ನವಾಗಿರುತ್ತದೆ.

ಬುದ್ಧ ಪೂರ್ಣಿಮೆ 2022

ಬುದ್ಧ ಪೂರ್ಣಿಮೆ 2022

  • Share this:

ಬೌದ್ಧ ಧರ್ಮದವರು (Buddhism) ಆಚರಿಸುವ ಪ್ರಮುಖ ದಿನಗಳಲ್ಲಿ ಬುದ್ಧ ಪೂರ್ಣಿಮೆ (Buddha Purnima) ಕೂಡ ಒಂದು. ಇದು ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಭಗವಾನ್ ಬುದ್ಧನ ಜನ್ಮ ದಿನ. ಹೌದು, ವೈಶಾಖ ಪೂರ್ಣಿಮೆಯ (Vaisakha Purnima) ದಿನದಂದು, ಭಗವಾನ್ ಬುದ್ಧನು ಜನಿಸಿದನು ಎಂದು ಹೇಳಲಾಗುತ್ತದೆ. ಹಿಂದೂ ಚಾಂದ್ರಮಾನ ಕ್ಯಾಲೆಂಡರ್, ವಿಕ್ರಮ್ ಸಂವತ್ (Vikram Samvat) ಪ್ರಕಾರ ಈ ದಿನಾಂಕವು ಪ್ರತೀ ವರ್ಷ ಭಿನ್ನವಾಗಿರುತ್ತದೆ. ಈ ವರ್ಷ ಬುದ್ಧ ಜಯಂತಿಯನ್ನು (Buddha Jayanthi) ಮೇ 16 ರಂದು ಆಚರಿಸಲಾಗುತ್ತಿದೆ.ಬುದ್ಧ ಜಯಂತಿಯ ವಿಶೇಷವೇನು? ಅದನ್ನು ಹೇಗೆ ಆಚರಿಸುತ್ತಾರೆ ಎಂಬುವುದು ನಿಮಗೆ ಗೊತ್ತೆ? ಇಲ್ಲಿದೆ ಆ ಕುರಿತಒಂದು ವಿಶೇಷ ಮಾಹಿತಿ.


ಹಿಂದೂ ಕ್ಯಾಲೆಂಡರ್‍ನ ಪ್ರಕಾರ ಬುದ್ಧ ಪೂರ್ಣಿಮೆ , ವೈಶಾಕ ಮಾಸದ ಪೌರ್ಣಮಿ ತಿಥಿಯಂದು ಬರುತ್ತದೆ. ದೃಕ್ ಪ್ರಂಚಾಂಗದ ಪ್ರಕಾರ, ಪೌರ್ಣಮಿ ತಿಥಿ ಮೇ 15ರ ಮಧ್ಯಾಹ್ನ 12 .45ಕ್ಕೆ ಆರಂಭವಾಗುತ್ತದೆ ಮತ್ತು ಮೇ 16 ರಂದು ಬೆಳಗ್ಗೆ 9.43 ರ ವರೆಗೆ ಇರುತ್ತದೆ.


ಬುದ್ಧ ಪೂರ್ಣಿಮಾ 2022 : ಇತಿಹಾಸ
ಇದು ವಿಶ್ವದ ಅತ್ಯಂತ ಪ್ರಮುಖ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರಾದ ಭಗವಾನ್ ಬುದ್ಧನು ಹುಟ್ಟಿದ ದಿನ. ಜಗತ್ತಿನಾದ್ಯಂತ ಜನರಿಂದ ಮತ್ತು ಅನುಯಾಯಿಗಳಿಂದ ಗೌತಮ ಬುದ್ಧ ಅಥವಾ ಭಗವಾನ್ ಬುದ್ಧ ಎಂದು ಕರೆಸಿಕೊಳ್ಳುವ , ಬುದ್ಧ 623 ಬಿಸಿಯಲ್ಲಿ ಲುಂಬಿನಿಯಲ್ಲಿ ಜನಿಸಿದನು. ಯುನೆಸ್ಕೋ ಪ್ರಕಾರ ಪ್ರಸ್ತುತ ಲುಂಬಿನಿ ನೇಪಾಳದಲ್ಲಿದೆ. ರಾಜಕುಮಾರನಾಗಿ ಜನಿಸಿದ್ದ ಬುದ್ಧನ ಮೂಲ ಹೆಸರು ಸಿದ್ಧಾರ್ಥ ಗೌತಮ. ರಾಜ ಮನೆತನದಲ್ಲಿ ಹುಟ್ಟಿದ್ದರೂ, ಸುಖದ ಸುಪ್ಪತ್ತಿಗೆಯನ್ನು ತೊರೆದು , ಆಧ್ಯಾತ್ಮದ ಪಥವನ್ನು ಆಯ್ಕೆ ಮಾಡಿಕೊಂಡ ಬುದ್ಧ , ವಿಶ್ವದಾದ್ಯಂತ ಸಂಚರಿಸಿ ಜನರಿಗೆ ಶಾಂತಿಯ ಸಂದೇಶವನ್ನು ಸಾರಿದರು.


ಈ ಮಹಾನ್ ಆಧ್ಯಾತ್ಮ ಗುರುವಿನ ಜನ್ಮದಿನವನ್ನು , ವೈಶಾಖ ಪೂರ್ಣಿಮೆಯಂದು ಅವರ ಭಕ್ತರು ಅತ್ಯಂತ ಉತ್ಸಾಹದಿಂದ ಆಚರಿಸುತ್ತಾರೆ.


ಇದನ್ನೂ ಓದಿ: Explained: ಚಂಡಮಾರುತಗಳಿಗ್ಯಾಕೆ ವಿಚಿತ್ರ ಹೆಸರುಗಳು? ಅವುಗಳ ಅರ್ಥ, ಆ ಹೆಸರಿನ ಕಾರಣ ಏನು ಗೊತ್ತಾ? 

ಗೌತಮ ಬುದ್ಧ ಒಬ್ಬ ತತ್ವಜ್ಞಾನಿ, ಆಧ್ಯಾತ್ಮಿಕ ಮಾರ್ಗದರ್ಶಕ, ಧಾರ್ಮಿಕ ಗುರು ಮತ್ತು ಧ್ಯಾನಿ. ಅವರು ಬಿಹಾರದ ಬೋಧ ಗಯಾದಲ್ಲಿ, ಬೋಧಿ ವೃಕ್ಷದ ಕೆಳಗೆ 49 ದಿನಗಳ ಕಾಲ ನಿರಂತರವಾಗಿ ಧ್ಯಾನ ಮಾಡಿದ ಬಳಿಕ, ಅವರಿಗೆ ಜ್ಞಾನೋದಯವಾಯಿತು ಎಂದು ನಂಬಲಾಗುತ್ತದೆ. ಅವರು ತಮ್ಮ ಸುದೀರ್ಘ ಧ್ಯಾನದ ಮೂಲಕ , ‘ಸಂಕಟ’ವನ್ನು ಕೊನೆಗೊಳಿಸುವ ರಹಸ್ಯವನ್ನು ಕಂಡು ಹಿಡಿಯಲು ಪ್ರಯತ್ನಿಸಿದರು. ಅವರ ಬೋಧನೆಗಳ ಸಾರವಾದ ದ ಫೋರ್ ನೋಬೆಲ್ ಟ್ರುತ್ಸ್‍ನಲ್ಲಿ ದುಃಖ ಮತ್ತು ಪಾಪಗಳನ್ನು ಕೊನೆಗೊಳಿಸುವ ಮಾರ್ಗವನ್ನು ವಿವರಿಸಲಾಗಿದೆ.


ಗೌತಮ ಬುದ್ಧ, ಬೌದ್ಧ ಧರ್ಮವನ್ನು ಸ್ಥಾಪಸಿದರು. ಈ ಧರ್ಮ ಜಗತ್ತಿಗೆ ಧರ್ಮ, ಅಹಿಂಸೆ, ಸಾಮರಸ್ಯ, ದಯೆ ಮತ್ತು ನಿರ್ವಾಣದ ಪಾಠಗಳನ್ನು ಬೋಧಿಸುತ್ತಾ ಬಂದಿದೆ.


ಬುದ್ಧ ಪೂರ್ಣಿಮೆ 2022 : ಮಹತ್ವ
ಇಡೀ ಜಗತ್ತಿನ ಎಲ್ಲೆಡೆ ನೆಲೆಸಿರುವ ಬೌದ್ಧ ಧರ್ಮದ ಸಮುದಾಯದವರ ಪಾಲಿಗೆ ಬುದ್ಧನ ಜನ್ಮದಿನ ಅತ್ಯಂತ ಮಹತ್ವಪೂರ್ಣವಾಗಿದೆ. ಗೌತಮ ಬುದ್ಧರು ‘ಕರ್ಮ’ ಪದವನ್ನು ಹರಡಿದರು ಎಂದು ನಂಬಲಾಗಿದ್ದು, ಜನನ ಮತ್ತು ಪುನರ್ಜನ್ಮದ ಚಕ್ರದಿಂದ ಮುಕ್ತಿಯನ್ನು ಪಡೆದರು ಎನ್ನಲಾಗುತ್ತದೆ. ಅವರಿಗೆ ಗೌರವ ಸಲ್ಲಿಸಲು ಈ ದಿನವನ್ನು ಆಚರಿಸಲಾಗುತ್ತದೆ.


ಇದನ್ನೂ ಓದಿ:  NO Entry to Indians: ಭಾರತದಲ್ಲಿರುವ ಈ 7 ಸ್ಥಳಗಳಿಗೆ ವಿದೇಶಿಗರಿಗೆ ಮಾತ್ರ ಎಂಟ್ರಿ, ಏಕೆ? ಯಾವುದು ಆ ಸ್ಥಳಗಳು?

ಬುದ್ಧ ಪೂರ್ಣಿಮಾ 2022 : ಆಚರಣೆ
ಕೇವಲ ಭಾರತದಲ್ಲಿ ಮಾತ್ರವಲ್ಲ , ಶ್ರೀಲಂಕಾ, ಮಯನ್ಮಾರ್, ಕಾಂಬೋಡಿಯಾ, ಟಿಬೆಟ್, ನೇಪಾಲ್ ಮತ್ತು ಮಂಗೋಲಿಯಾ ಸೇರಿದಂತೆ ವಿಶ್ವದ ನಾನಾ ಭಾಗಗಳಲ್ಲಿ ಬುದ್ಧ ಪೂರ್ಣೀಮೆಯನ್ನು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಜನರು ಬುದ್ಧ ವಿಹಾರಗಳಿಗೆ ಭೇಟಿ ನೀಡುವ ಮೂಲಕ ಈ ದಿನವನ್ನು ಆಚರಿಸುತ್ತಾರೆ. ಅಂದು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ, ಶ್ಲೋಕಗಳನ್ನು ಪಠಿಸುತ್ತಾರೆ, ಧ್ಯಾನ ಮಾಡುತ್ತಾರೆ, ಉಪವಾಸ ಇರುತ್ತಾರೆ ಮತ್ತು ಬುದ್ಧನ ಬೋಧನೆಗಳನ್ನು ನೆನಪಿಸಿಕೊಳ್ಳುತ್ತಾರೆ.

Published by:Ashwini Prabhu
First published: