Explained: ರಾಜಕಾರಣಕ್ಕೆ ಮರಳಿದ ಬಿಎಸ್​ವೈ, ಸಿದ್ದುಗೆ ಟೆನ್ಶನ್, ಬೊಮ್ಮಾಯಿ ಕತೆ ಏನು? ಒಗಟಾದ ಕರ್ನಾಟಕ ರಾಜಕೀಯ!

ದಾವಣಗೆರೆಯಲ್ಲಿ ಕಾಂಗ್ರೆಸ್ ನಾಯಕನ 75ನೇ ಹುಟ್ಟುಹಬ್ಬದಂದು ಅಂದರೆ ಆಗಸ್ಟ್ 3 ರಂದು ನೆರೆದ ಲಕ್ಷಗಟ್ಟಲೆ ಜನಸಾಗರ ಆಡಳಿತ ಪಕ್ಷದ ಪಾಳಯದಲ್ಲಿ ಎಚ್ಚರಿಕೆಯ ಗಂಟೆಯಾಗಿದೆ. ಕಾಂಗ್ರೆಸ್‌ನ ಅತ್ಯಂತ ಶಕ್ತಿಶಾಲಿ ಮತ್ತು ಜನಪ್ರಿಯ ನಾಯಕನ ಎದುರಾಳಿಯಾಗಿ ಸದ್ಯ ಬಿಜೆಪಿ ನಿವೃತ್ತಿ ಪಡೆದಿದ್ದ ಯಡಿಯೂರಪ್ಪ ಅವರನ್ನು ಬಲವಂತವಾಗಿ ಮರಳಿ ಕರೆತಂದಿದೆ. ಯಡಿಯೂರಪ್ಪ ಮರಳಿ ಅಖಾಡಕ್ಕೆ ಇಳಿದಿರುವುದರಿಂದ ಕರ್ನಾಟಕ ರಾಜಕೀಯ ಮತ್ತೊಮ್ಮೆ ಬಹುದೊಡ್ಡ ಆಟಕ್ಕೆ ಸಿದ್ಧವಾಗಿದೆ.

ಬಸವರಾಜ್ ಬೊಮ್ಮಾಯಿ, ಬಿ. ಎಸ್. ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ

ಬಸವರಾಜ್ ಬೊಮ್ಮಾಯಿ, ಬಿ. ಎಸ್. ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ

  • Share this:
ಬೆಂಗಳೂರು(ಆ.18): ಭಾರತದ 76 ನೇ ಸ್ವಾತಂತ್ರ್ಯ ದಿನಾಚರಣೆಯ (Independence Day) ಒಂದು ದಿನದ ನಂತರ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರಾಜಕೀಯ ಅಖಾಡದಲ್ಲಿ (Politics) ಪ್ರಮುಖ ಜಯ ಗಳಿಸಿದ್ದಾರೆ. ಬಿಜೆಪಿಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಮಂಡಳಿಯ ಸದಸ್ಯರಾಗಿರುವ ಅವರು ಎರಡು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪಕ್ಷವು ಅವರನ್ನು ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿಯ ಸದಸ್ಯರನ್ನಾಗಿ ಮಾಡಿದೆ. 75 ವರ್ಷ ಮೇಲ್ಪಟ್ಟ ನಾಯಕರಿಗೆ ಯಾವುದೇ ರಾಜಕೀಯ ಹುದ್ದೆ ನೀಡುವುದಿಲ್ಲ ಎಂಬ ಸ್ವಂತ ನಿರ್ಧಾರದ ವಿರುದ್ಧ ಬಿಜೆಪಿ ಹೈಕಮಾಂಡ್ (BJP High Command), ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election) ಮತ್ತು ಒಂದು ವರ್ಷದ ನಂತರ ನಡೆಯಲಿರುವ ಲೋಕಸಭೆ ಚುನಾವಣೆಯನ್ನು (Loksabha Elections) ಗಮನದಲ್ಲಿಟ್ಟುಕೊಂಡು ಯಡಿಯೂರಪ್ಪ (BS Yediyurappa) ಅವರನ್ನು ಮತ್ತೆ ಸಕ್ರಿಯ ರಾಜಕಾರಣಕ್ಕೆ ಕರೆತರಲು ನಿರ್ಧರಿಸಿದೆ.

ಇದರ ಬೆನ್ನಲ್ಲೇ ಕರ್ನಾಟಕ ಬಿಜೆಪಿಯಲ್ಲಿ ಸಂಭ್ರಮಾಚರಣೆ ಆರಂಭವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ನಾಯಕರು ಯಡಿಯೂರಪ್ಪ ಅವರ ಮನೆಗೆ ತೆರಳಿ ಅಭಿನಂದಿಸಿದರು. ಇನ್ನು ಪುನರ್ ರಚನೆಯಾದ ಸಂಸದೀಯ ಮಂಡಳಿಯಲ್ಲಿ ಯಡಿಯೂರಪ್ಪ ಅತ್ಯಂತ ಹಿರಿಯ ನಾಯಕರಾಗಿದ್ದಾರೆ. ಇದರೊಂದಿಗೆ, ಅವರು ಬಿಜೆಪಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರು ಮತ್ತು ಅವರು ಜನಸಂಘದೊಂದಿಗೆ ಸಂಬಂಧ ಹೊಂದಿದ್ದರು. 1967ರಲ್ಲಿ ಜನಸಂಘ ಸೇರಿದರು ಎಂಬುವುದು ಉಲ್ಲೇಖನೀಯ.

ಇದನ್ನೂ ಓದಿ:  Karnataka Politics: ಸಿದ್ದರಾಮೋತ್ಸವ, ಕಾಲ್ನಡಿಗೆ ಬಳಿಕ ಬಿಜೆಪಿಯಲ್ಲಿ ಟೆನ್ಷನ್, ಟೆನ್ಷನ್; RSS ಮುಖಂಡರ ಜೊತೆ ಸಿಎಂ ಚರ್ಚೆ

ಯಡಿಯೂರಪ್ಪನವರ ಪ್ರಾಮುಖ್ಯತೆ

ಯಡಿಯೂರಪ್ಪ ಅವರ ಹಠಾತ್ ಪದೋನ್ನತಿ ಕೆಲವು ವಿಷಯಗಳನ್ನು ಸಾಬೀತುಪಡಿಸಿದೆ. ಯಡಿಯೂರಪ್ಪ ಎಂಬುದಕ್ಕೆ ತನ್ನದೇ ಆದ ಮಹತ್ವವಿದೆ. ಅವರು ರಾಜಕೀಯ ವಲಯದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಅವರ ಗೈರುಹಾಜರಿಯಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಷ್ಟು ಹಾನಿಯಾಗಬಹುದು ಎಂಬುದು ಬಿಜೆಪಿಗೆ ಅರಿವಾಗಿದೆ ಎಂದರೆ ತಪ್ಪಾಗುವುದಿಲ್ಲ. ಯಡಿಯೂರಪ್ಪ ಲಿಂಗಾಯತ ಮತಗಳನ್ನು ನಿಯಂತ್ರಿಸುತ್ತಿದ್ದಾರೆ ಎಂಬುವುದು ಉಲ್ಲೇಖನೀಯ.

BJP workers threw eggs at Former CM Siddaramaiahs car at Kodagu congress protests
ಸಿದ್ದರಾಮಯ್ಯ


ಭವಿಷ್ಯದಲ್ಲಿ ಪಕ್ಷವನ್ನು ಮುನ್ನಡೆಸಲು ಹೊಸ ನಾಯಕತ್ವದ ನೆಲೆಯನ್ನು ಸೃಷ್ಟಿಸುವ ಉದ್ದೇಶದಿಂದ ಹೈಕಮಾಂಡ್ ಅವರನ್ನು ಕೈಬಿಟ್ಟಿತ್ತು ಎಂಬುದು ಒಳಗಿನವರ ಮಾತಾಗಿದೆ. ಆದರೆ ಕಳೆದ ಒಂದು ವರ್ಷದಲ್ಲಿ ಯಡಿಯೂರಪ್ಪ ಅವರಿಲ್ಲದೆ ಮತ್ತೆ ಕರ್ನಾಟಕವನ್ನು ಗೆಲ್ಲುವುದು ಕಠಿಣ ಕೆಲಸ ಎಂದು ಅವರು ಅರಿತುಕೊಂಡಿದ್ದಾರೆ. ಹೀಗಾಗಿ ಅವರನ್ನು ಮರಳಿ ತರುವುದು ಬಿಜೆಪಿಗೆ ಅನಿವಾರ್ಯವಾಗಿದೆ. ಕಳೆದ ವರ್ಷ ಜುಲೈನಲ್ಲಿ ಯಡಿಯೂರಪ್ಪ ಅವರ ಸ್ಥಾನ ಪಡೆದ ಬೊಮ್ಮಾಯಿ ಅವರು ಪಕ್ಷದ ಒಳಗೆ ಮತ್ತು ಹೊರಗೆ ಹಲವಾರು ಹೋರಾಟಗಳನ್ನು ನಡೆಸುತ್ತಿದ್ದಾರೆ. ಹೀಗಿರುವಾಗಲೇ ಈ ಹಿಂದೆ ತಮಗಿದ್ದ ಸ್ಥಾನಮಾನದ ಕೊರತೆ ಮತ್ತು ಜನಪ್ರಿಯತೆಯು ಅವರ ದುಃಖವನ್ನು ಮತ್ತಷ್ಟು ಹೆಚ್ಚಿಸಿದೆ. ಪಕ್ಷ ಮಧ್ಯದಲ್ಲಿಯೇ ಇಬ್ಭಾಗವಾಗಿದ್ದು, ಬಹುತೇಕ ನಾಯಕರು ಯಡಿಯೂರಪ್ಪ ಅವರ ಜೊತೆ ಇನ್ನೂ ಗುರುತಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:  Karnataka Politics: ಆಪರೇಷನ್ ಕಮಲಕ್ಕೆ ಡಿಕೆಶಿ ರಿವರ್ಸ್ ಆಪರೇಷನ್

ಬೊಮ್ಮಾಯಿ ಅವರು ಮುಖ್ಯವಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಹೆಣಗಾಡುತ್ತಿದ್ದಾರೆ. ಪಕ್ಷವನ್ನಾಗಲಿ, ಸರಕಾರವನ್ನಾಗಲಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಅವರಿಂದ ಸಾಧ್ಯವಾಗುತ್ತಿಲ್ಲ. ಅದರ ಲಾಭ ಈಗ ಯಡಿಯೂರಪ್ಪ ಅವರಿಗೆ ಸಿಕ್ಕಿದೆ. ಆದರೆ ಬಿಜೆಪಿಯ ಈ ನಿರ್ಧಾರದ ಬಗ್ಗೆ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಲೇವಡಿ ಮಾಡಿದ್ದು, ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಗೈಡ್ ಬೋರ್ಡ್‌ಗೆ ಒಂದು ಹೆಜ್ಜೆ ಹತ್ತಿರಕ್ಕೆ ತಂದಿದೆ ಎಂದು ಕಿಡಿಕಾರಿದೆ.

ಸಿದ್ದರಾಮಯ್ಯ ಅವರ ಜನಪ್ರಿಯತೆಗೆ ಬಿಜೆಪಿ ಅಸಮಾಧಾನ

ಮಾಜಿ ಸಿಎಂ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿರ್ವಿವಾದದ ಜನಪ್ರಿಯತೆಯು ಬಿಜೆಪಿಗೆ ಬಹುದೊಡ್ಡ ತಲೆನೋವಾಗಿದೆ. ದಾವಣಗೆರೆಯಲ್ಲಿ ಕಾಂಗ್ರೆಸ್ ನಾಯಕನ 75ನೇ ಹುಟ್ಟುಹಬ್ಬದಂದು ಅಂದರೆ ಆಗಸ್ಟ್ 3 ರಂದು ನೆರೆದ ಲಕ್ಷಗಟ್ಟಲೆ ಜನಸಾಗರ ಆಡಳಿತ ಪಕ್ಷದ ಪಾಳಯದಲ್ಲಿ ಎಚ್ಚರಿಕೆಯ ಗಂಟೆಯಾಗಿದೆ. ಕಾಂಗ್ರೆಸ್‌ನ ಅತ್ಯಂತ ಶಕ್ತಿಶಾಲಿ ಮತ್ತು ಜನಪ್ರಿಯ ನಾಯಕನ ಎದುರಾಳಿಯಾಗಿ ಸದ್ಯ ಬಿಜೆಪಿ ನಿವೃತ್ತಿ ಪಡೆದಿದ್ದ ಯಡಿಯೂರಪ್ಪ ಅವರನ್ನು ಬಲವಂತವಾಗಿ ಮರಳಿ ಕರೆತಂದಿದೆ. ಯಡಿಯೂರಪ್ಪ ಮರಳಿ ಅಖಾಡಕ್ಕೆ ಇಳಿದಿರುವುದರಿಂದ ಕರ್ನಾಟಕ ರಾಜಕೀಯ ಮತ್ತೊಮ್ಮೆ ಬಹುದೊಡ್ಡ ಆಟಕ್ಕೆ ಸಿದ್ಧವಾಗಿದೆ.

BS Yediyurappa play special role in Tanuja movie

ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ಗುಂಪುಗಾರಿಕೆಯಿಂದ ನಲುಗುತ್ತಿದ್ದು, ವಿವಿಧ ನಾಯಕರ ವೈಯಕ್ತಿಕ ಮಹತ್ವಾಕಾಂಕ್ಷೆಗಳು ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾರೆ ಸಾಧನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇತ್ತೀಚೆಗೆ, ಸಾರಿಗೆ ಸಚಿವ ಮತ್ತು ಬಿಜೆಪಿಯ ಪ್ರಭಾವಿ ಬುಡಕಟ್ಟು ನಾಯಕ ಬಿ ಶ್ರೀರಾಮುಲು ಅವರು ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಅವರನ್ನು ಬಹಿರಂಗವಾಗಿ ಬೆಂಬಲಿಸಿದ್ದರು. ಮುಜುಗರಕ್ಕೀಡಾಗಿರುವ ಬಿಜೆಪಿ ಇದನ್ನು ಅವರ ವೈಯಕ್ತಿಕ ದೃಷ್ಟಿಕೋನ ಎಂದು ಬಣ್ಣಿಸಿತ್ತು. ಇತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್‌ನಲ್ಲಿ, ಸಿದ್ದರಾಮಯ್ಯ ವಿರೋಧಿ ಪಾಳಯದಲ್ಲಿ ಅಭದ್ರತೆ ಹೆಚ್ಚಿದೆ.

ಕರ್ನಾಟಕದ ರಾಜಕೀಯ ಪರಿಸ್ಥಿತಿ ಸಂಕೀರ್ಣವಾಗಿದೆ

ಸಿದ್ದರಾಮಯ್ಯ ವಿರುದ್ಧದ ಶಿವಕುಮಾರ್ ಹೋರಾಟಕ್ಕೆ ಜನರು ತಿರುಗಿ ಬೀಳಬಹುದು ಎಂದು ಬಿಜೆಪಿ ಆಗಾಗ್ಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತದೆ. ಇನ್ನು ಕರ್ನಾಟಕದ ಪರಿಸ್ಥಿತಿ ಎಷ್ಟು ಸಂಕೀರ್ಣವಾಗಿದೆ ಎಂದರೆ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯನವರ ಅಪಾರ ಜನಪ್ರಿಯತೆಯನ್ನು ಬಿಜೆಪಿ ಮತ್ತು ಕಾಂಗ್ರೆಸ್ ಖಂಡಿತವಾಗಿಯೂ ಇಷ್ಟಪಡುವುದಿಲ್ಲ. ಆದರೆ ಅವರಿಲ್ಲದೆ ಬದುಕಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯಲ್ಲೂ ಪಕ್ಷಗಳಿವೆ. ಇಬ್ಬರೂ ನಾಯಕರು ಹಲವು ವಿಧಗಳಲ್ಲಿ ಅನಿವಾರ್ಯವಾಗಿದ್ದಾರೆ ಹೀಗಾಗಿ ಅವರ ಹೊಸಾಸಕ್ತಿಯಲ್ಲಿ ಅವಕಾಶ ಕಲ್ಪಿಸಿ ಎಲ್ಲವನ್ನೂ ಸಹಿಸಿಕೊಳ್ಳಬೇಕಿದೆ.

ಇದನ್ನೂ ಓದಿ: Karnataka Politics: ಸಿಎಂ ಮಕ್ಕಳು ಸಿಎಂ ಆದವರಲ್ಲಿ ಬಸವರಾಜ ಬೊಮ್ಮಾಯಿ ಎರಡನೆಯವರು

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್

ಯಡಿಯೂರಪ್ಪ, ಸಿದ್ದರಾಮಯ್ಯ ಮತ್ತು ಎಚ್‌ಡಿ ದೇವೇಗೌಡರು ಒಟ್ಟಾಗಿ ಕರ್ನಾಟಕದಲ್ಲಿ ಒಟ್ಟು ಶೇಕಡ 35 ಕ್ಕಿಂತ ಹೆಚ್ಚು ಮತಗಳನ್ನು ಪಡೆದಿದ್ದರು, ಈ ಮೂಲಕ ಅವರು ಅಜೇಯರಾಗಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಅಂತರ ಹೆಚ್ಚಾಗುತ್ತಿದ್ದು, ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ಪಾಳಯದಲ್ಲಿ ಆತಂಕ ಮೂಡಿಸಿದೆ.

Talk war between opposition leader Siddaramaiah and former CM Yediyurappa
ಯಡಿಯೂರಪ್ಪ, ಸಿದ್ದರಾಮಯ್ಯ


ಹೀಗಿರುವಾಗ ಯಡಿಯೂರಪ್ಪನವರ ಪುನರಾಗಮನವು ಬಿಜೆಪಿಗೆ ದೊಡ್ಡ ರೀತಿಯಲ್ಲಿ ಸಹಾಯ ಮಾಡದಿರಬಹುದು, ಯಾಕೆಂದರೆ ಪಕ್ಷವು ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೂ, ಅವರು ಮತ್ತೆ ಸಿಎಂ ಆಗುವ ಸಾಧ್ಯತೆಗಳು ಕಡಿಮೆ. ಹೆಚ್ಚೆಂದರೆ ಬಿಜೆಪಿಯ ಓಟುಬ್ಯಾಂಕ್​ ಕ್ಷೀಣಿಸದಂತೆ ಸವೆತವನ್ನು ತಡೆಯಬಹುದು ಮತ್ತು ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬಬಹುದು. ಸದ್ಯ ಕರ್ನಾಟಕ ರಾಜಕೀಯದ ಒಗಟು ಹೀಗೆಯೇ ಮುಂದುವರಿದಿದೆ.
Published by:Precilla Olivia Dias
First published: