Britain Royal Family: ಬ್ರಿಟನ್ ರಾಜಮನೆತನದ ಕಥೆ ನಿಮಗೆ ಗೊತ್ತಾ? ಇಲ್ಲಿದೆ ಓದಿ ರಾಯಲ್ ಕಹಾನಿ

ಬ್ರಿಟನ್ ಭವ್ಯ ಸಾಮ್ರಾಜ್ಯದಲ್ಲಿ ಎಂದಿಗೂ ಹೊಳೆಯುವ ತಾರೆಯೆಂದ್ರೆ ಅದು ರಾಣಿ ಎಲಿಜಬೆತ್ II ಅಂದ್ರೆ ತಪ್ಪಾಗಲಿಕ್ಕಿಲ್ಲ. ಯಾಕೆಂದ್ರೆ ಸುದೀರ್ಘ 70 ವರ್ಷಗಳು ಇವರು ಬ್ರಿಟನ್ ರಾಣಿಯಾಗಿ ಆಳ್ವಿಕೆ ನಡೆಸಿದ್ದಾರೆ. ಬ್ರಿಟನ್ ರಾಜಮನೆತನದ ಇತಿಹಾಸವೇ ರೋಚಕ.

 ರಾಣಿ ಎಲಿಜಬೆತ್ II ಮತ್ತು ಪ್ರಿನ್ಸ್ ಚಾರ್ಲ್ಸ್

ರಾಣಿ ಎಲಿಜಬೆತ್ II ಮತ್ತು ಪ್ರಿನ್ಸ್ ಚಾರ್ಲ್ಸ್

 • Share this:
  ಕಳೆದ 70 ವರ್ಷಗಳಿಂದ ಬ್ರಿಟನ್ ರಾಣಿಯಾಗಿ ತಮ್ಮ ಸೇವೆ ಸಲ್ಲಿಸಿ, ತಮ್ಮ 96 ನೇ ವಯಸ್ಸಿನಲ್ಲಿ ಬ್ರಿಟನ್ ರಾಣಿ ಎಲಿಜಬೆತ್ II ಕೊನೆಯುಸಿರೆಳೆದಿದ್ದಾರೆ. ಗುರುವಾರ ಸ್ಕಾಟ್ಲೆಂಡ್‌ನ ಬಾಲ್ಮೋರಲ್ ಕ್ಯಾಸಲ್‌ನಲ್ಲಿ ನಿಧನರಾಗಿದ್ದಾರೆ. ರಾಣಿ ಎಲಿಜಬೆತ್ II ಅವರ ಸಾವು ಜನರನ್ನು ಶೋಕದಲ್ಲಿ ಮುಳುಗಿಸಿದೆ. ಬ್ರಿಟನ್ ಭವ್ಯ ಸಾಮ್ರಾಜ್ಯದಲ್ಲಿ ಎಂದಿಗೂ ಹೊಳೆಯುವ ತಾರೆಯೆಂದ್ರೆ ಅದು ರಾಣಿ ಎಲಿಜಬೆತ್ II ಅಂದ್ರೆ ತಪ್ಪಾಗಲಿಕ್ಕಿಲ್ಲ. ಯಾಕೆಂದ್ರೆ ಸುದೀರ್ಘ 70 ವರ್ಷಗಳು ಬ್ರಿಟನ್ ರಾಣಿಯಾಗಿ ಆಳ್ವಿಕೆ ನಡೆಸಿದ್ದಾರೆ. ಬ್ರಿಟನ್ ರಾಜಮನೆತನದ ಇತಿಹಾಸವೇ ರೋಚಕ. ರಾಣಿ ಎಲಿಜಬೆತ್ II ಅವರ ಸಾವಿನ ಬಳಿಕ ಬ್ರಿಟನ್ ರಾಜನಾಗಿ ಅಧಿಕಾರ ಸ್ವೀಕರಿಸಲಿದ್ದಾರೆ  ಪ್ರಿನ್ಸ್ ಚಾರ್ಲ್ಸ್.

  ಬ್ರಿಟಿಷ್ ರಾಜಮನೆತನದ ಕಥೆ

  ಕಳೆದ ವರ್ಷ ಅಕ್ಟೋಬರ್‌ನಿಂದ ರಾಣಿ ಎಲಿಜಬೆತ್ II ಅವರಿಗೆ ಆರೋಗ್ಯ ಸಮಸ್ಯೆ ಕಾಡಲು ಶುರುವಾಗಿತ್ತು. ಸೆಪ್ಟಂಬರ್ 08, 2022 ರಾಣಿ ಎಲಿಜಬೆತ್ II ನಿಧನರಾಗಿದ್ದಾರೆ. ಈಗ ಬ್ರಿಟನ್ ರಾಜಮನೆತನ ಹಾಗೂ ಭವ್ಯ ಇತಿಹಾಸವನ್ನ ಮುಂದುರೆಸಿಕೊಂಡು, ಮಹಾರಾಜನ ಪಟ್ಟ ಸ್ವೀಕರಿಸಲಿದ್ದಾರೆ ಪ್ರಿನ್ಸ್ ಚಾರ್ಲ್ಸ್‌. ಹಾಗಾದ್ರೆ ಈ ಸುಪ್ರಸಿದ್ಧ ಬ್ರಿಟನ್ ರಾಜಮನೆತನದಲ್ಲಿ ಯಾರೆಲ್ಲಾ ಆಳ್ವಿಕೆ ನಡೆಸಿದ್ರು ಎಂಬ ಸಂಪೂರ್ಣ ಇತಿಹಾಸವನ್ನ ಇಲ್ಲಿ ತಿಳಿಯೋಣ.

  ಬ್ರಿಟನ್ ರಾಜನ ಜೊತೆ ರಾಜಮನೆತನದ ಆರಂಭ

  1707 ರವರೆಗೆ, ಇಂಗ್ಲೆಂಡ್, ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಪ್ರತ್ಯೇಕ ರಾಜಪ್ರಭುತ್ವ ಹೊಂದಿದ್ದವು. ಮೇ 1707 ರಲ್ಲಿ ಬ್ರಿಟಿಷ್ ರಾಜಮನೆತನವು ಪ್ರತ್ಯೇಕ ರಾಜಪ್ರಭುತ್ವ ಹೊಂದಿತು. ರಾಜ ಜಾರ್ಜ್ V ಮತ್ತು ಪತ್ನಿ ಮೇರಿ ಆಫ್ ಟೆಕ್ ರಾಣಿ ಎಲಿಜಬೆತ್ II ರ ಅಜ್ಜ ಮತ್ತು ಅಜ್ಜಿಯರು. 1894 ರಿಂದ 1905 ರವರೆಗೆ, ಇಬ್ಬರಿಗೆ ಆರು ಮಕ್ಕಳಿದ್ದವು.

  ಅವರಲ್ಲಿ ನಾಲ್ವರು ತಮ್ಮ ಸ್ವಂತ ಮಕ್ಕಳನ್ನು ಹೊಂದಿದ್ದರು. ಕಿಂಗ್ ಜಾರ್ಜ್ ಮತ್ತು ಮೇರಿಗೆ ಆರು ಮಕ್ಕಳಿದ್ದರು. ಕಿಂಗ್ ಎಡ್ವರ್ಡ್-VIII, ಕಿಂಗ್ ಜಾರ್ಜ್-VI, ರಾಜಕುಮಾರಿಯರಾದ ರಾಯಲ್ ಮೇರಿ, ಡ್ಯೂಕ್ ಆಫ್ ಗ್ಲೌಸೆಸ್ಟರ್ ಪ್ರಿನ್ಸ್ ಹೆನ್ರಿ, ಡ್ಯೂಕ್ ಆಫ್ ಕೆಂಟ್ ಪ್ರಿನ್ಸ್ ಜಾರ್ಜ್ VI ಮತ್ತು ಪ್ರಿನ್ಸ್ ಜಾನ್. ಇದರಲ್ಲಿ ಪ್ರಿನ್ಸ್ ಜಾನ್ ಅನೇಕ ರೋಗಗಳಿಗೆ ಗುರಿಯಾಗಿದ್ದರು. ಹಾಗಾಗಿ ಅವರು 13 ನೇ ವಯಸ್ಸಿನಲ್ಲಿ ನಿಧನರಾದರು.

  ಇದನ್ನೂ ಓದಿ: ಬ್ರಿಟನ್ ರಾಣಿ ನಿಧನಕ್ಕೆ ಭಾರತದಲ್ಲೂ ಶೋಕಾಚರಣೆ; ಕೇಂದ್ರ ಘೋಷಣೆ

  ಕಿಂಗ್ ಜಾರ್ಜ್ ಮತ್ತು ಮೇರಿ ಹಿರಿಯ ಮಗ, ಕಿಂಗ್ ಎಡ್ವರ್ಡ್ VIII, 1936 ರಲ್ಲಿ ತಂದೆಯ ಮರಣದ ನಂತರ ಸಿಂಹಾಸನವೇರಿದರು. ಆದರೆ ರಾಜನಾಗಿ ಕಿಂಗ್ ಎಡ್ವರ್ಡ್ VIII ಉಳಿಯಲಿಲ್ಲ. ಹಾಗಾಗಿ ಅವರು ಬ್ರಿಟಿಷ್ ಕಿರೀಟವನ್ನು ಆನುವಂಶಿಕವಾಗಿ ಪಡೆಯಲಿಲ್ಲ. ಯಾಕೆಂದ್ರೆ ಎಡ್ವರ್ಡ್ VIII ಅಮೇರಿಕನ್ ವಿಚ್ಛೇದಿತ ವಾಲಿಸ್ ಸಿಂಪ್ಸನ್ ಅವರನ್ನು ಮದುವೆಯಾಗಲು 1937 ರಲ್ಲಿ ತಮ್ಮ ಸಿಂಹಾಸನ ತ್ಯಜಿಸಿದರು. ಈ ಇಬ್ಬರಿಗೂ ಮಕ್ಕಳು ಇರಲಿಲ್ಲ.

  ಇಲ್ಲಿಂದ ಶುರುವಾಯಿತು ಎಲಿಜಬೆತ್ ಕಥೆ

  ಕಿಂಗ್ ಎಡ್ವರ್ಡ್ VIII ರ ನಂತರ, ಅವರ ಸಹೋದರ ಕಿಂಗ್ ಜಾರ್ಜ್ VI 15 ವರ್ಷಗಳವರೆಗೆ ಬ್ರಿಟನ್ ಸಿಂಹಾಸನ ಗದ್ದುಗೆಯಲ್ಲಿದ್ದರು. ಕಿಂಗ್ ಜಾರ್ಜ್ VI ಅವರ ಪತ್ನಿ ರಾಣಿ ಎಲಿಜಬೆತ್‌ ಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ಅವರಲ್ಲಿ ಒಬ್ಬರು ರಾಣಿ ಎಲಿಜಬೆತ್ II ಮತ್ತು ಇನ್ನೊಬ್ಬರು ರಾಜಕುಮಾರಿ ಮಾರ್ಗರೇಟ್.

  ಕಿಂಗ್ ಜಾರ್ಜ್ VI ರ ಸಾವಿನ ನಂತರ, ಅವರ ಮಗಳು ರಾಣಿ ಎಲಿಜಬೆತ್ II 6 ಫೆಬ್ರವರಿ 1952 ರಂದು ಬ್ರಿಟನ್ನ ಸಿಂಹಾಸನವೇರಿದರು. ಎಲಿಜಬೆತ್ II ಬ್ರಿಟನ್ನಿನ ದೀರ್ಘಾವಧಿಯ ರಾಣಿಯಾದರು. ಎಲಿಜಬೆತ್ II ಎಡಿನ್ಬರ್ಗ್ನ ಡ್ಯೂಕ್ ಪ್ರಿನ್ಸ್ ಫಿಲಿಪ್ ಅವರನ್ನು ವಿವಾಹವಾದರು. ಇಬ್ಬರಿಗೂ ನಾಲ್ಕು ಮಕ್ಕಳು. ಪ್ರಿನ್ಸ್ ಚಾರ್ಲ್ಸ್, ಪ್ರಿನ್ಸೆಸ್ ರಾಯಲ್ ಅನ್ನಿ, ಡ್ಯೂಕ್ ಆಫ್ ಯಾರ್ಕ್ ಪ್ರಿನ್ಸ್ ಆಂಡ್ರ್ಯೂ ಮತ್ತು ಪ್ರಿನ್ಸ್ ಎಡ್ವರ್ಡ್.

  ರಾಜನ ಪಟ್ಟವೇರಲಿದ್ದಾರೆ ರಾಜಕುಮಾರ ಚಾರ್ಲ್ಸ್

  ರಾಣಿ ಎಲಿಜಬೆತ್ II ರ ಮರಣದ ನಂತರ, ಬ್ರಿಟನ್‌ನ ರಾಜ ಸಿಂಹಾಸನದ ಜವಾಬ್ದಾರಿಯು ಹಿರಿಯ ಮಗ ಚಾರ್ಲ್ಸ್‌ಗೆ ಸಲ್ಲುತ್ತದೆ. ಚಾರ್ಲ್ಸ್ 1948 ರಲ್ಲಿ ಜನಿಸಿದರು. ಚಾರ್ಲ್ಸ್ ಜುಲೈ 29, 1981 ರಂದು ಲೇಡಿ ಡಯಾನಾ ಸ್ಪೆನ್ಸರ್ ಅವರನ್ನು ವಿವಾಹವಾದರು. ಇಬ್ಬರಿಗೆ ವಿಲಿಯಂ ಮತ್ತು ಹ್ಯಾರಿ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

  1996 ರಲ್ಲಿ, ಚಾರ್ಲ್ಸ್ ಮತ್ತು ಡಯಾನಾ ಇಬ್ಬರೂ ಬೇರೆಯಾದರು. ಚಾರ್ಲ್ಸ್ ನಂತರ ಏಪ್ರಿಲ್ 9, 2005 ರಂದು ಕೆಮಿಲ್ಲಾ ಪಾರ್ಕರ್ ಅವರನ್ನು ವಿವಾಹವಾದರು. ರಾಣಿ ಎಲಿಜಬೆತ್ II ರ ಮರಣದ ನಂತರ ಚಾರ್ಲ್ಸ್ ರಾಜನಾದರೆ ಅವರ ಹಿರಿಯ ಮಗ, ಡ್ಯೂಕ್ ಆಫ್ ಕೇಂಬ್ರಿಡ್ಜ್, ಪ್ರಿನ್ಸ್ ವಿಲಿಯಂ, ಈಗ ಪ್ರಿನ್ಸ್ ಆಫ್ ವೇಲ್ಸ್ ಎಂದು ಕರೆಯಲ್ಪಡುತ್ತಾನೆ.

  ಚಾರ್ಲ್ಸ್ ನಂತರ ವಿಲಿಯಮ್ಸ್ ಸಿಂಹಾಸನವೇರುತ್ತಾರೆ!

  ಪ್ರಿನ್ಸ್ ಚಾರ್ಲ್ಸ್ ಅವರಿಗೆ 73 ವರ್ಷ ವಯಸ್ಸು. ಚಾರ್ಲ್ಸ್ ಅವರನ್ನು ಬ್ರಿಟನ್‌ನ ಹೊಸ ರಾಜ ಎಂದು ಘೋಷಿಸಲಾಗಿದೆ. ಚಾರ್ಲ್ಸ್ ನಂತರ ಸಿಂಹಾಸನದ ಉತ್ತರಾಧಿಕಾರಿ ಅವರ ಮಗ ಪ್ರಿನ್ಸ್ ವಿಲಿಯಮ್ಸ್. 1982 ರಲ್ಲಿ ಜನಿಸಿದ ವಿಲಿಯಂ ಈಗ ಕೇಂಬ್ರಿಡ್ಜ್ ಡ್ಯೂಕ್ ಆಗಿದ್ದಾರೆ. ಅವರ ಪತ್ನಿ ಕೇಂಬ್ರಿಡ್ಜ್‌ನ ಡಚೆಸ್ ಕೇಟ್ ಮಿಡಲ್‌ಟನ್. 2011 ರಲ್ಲಿ ಇಬ್ಬರೂ ವಿವಾಹವಾದರು.

  ರಾಣಿ ಎಲಿಜಬೆತ್ II ರ ಮರಣದ ನಂತರ ವೇಲ್ಸ್ ರಾಜಕುಮಾರ ಚಾರ್ಲ್ಸ್ ಅನ್ನು ರಾಜ ಎಂದು ಘೋಷಣೆ ಮಾಡಲಾಯಿತು. ಹಾಗಾಗಿ ಈಗ ಚಾರ್ಲ್ಸ್ ಸ್ಥಾನದಲ್ಲಿ ವಿಲಿಯಂ ಕೂಡ ವೇಲ್ಸ್ ರಾಜಕುಮಾರನಾಗಲಿದ್ದಾರೆ.

  ಪ್ರಿನ್ಸ್ ವಿಲಿಯಮ್ಸ್ ಅವರ ಕುಟುಂಬ

  ಚಾರ್ಲ್ಸ್ ರಾಜನಾದ ನಂತರ, ಅವರ ಮಗ ವಿಲಿಯಂ ವೇಲ್ಸ್ ರಾಜಕುಮಾರನಾಗುತ್ತಾನೆ. ಜುಲೈ 22, 2013 ರಂದು ಜನಿಸಿದಪ್ರಿನ್ಸ್ ವಿಲಿಯಂಗೆ ಮೂವರು ಮಕ್ಕಳಿದ್ದಾರೆ. ಹಿರಿಯ ಕೇಂಬ್ರಿಡ್ಜ್ ರಾಜಕುಮಾರ ಜಾರ್ಜ್ ಅಜ್ಜ ಮತ್ತು ತಂದೆಯ ನಂತರ ರಾಜಮನೆತನದ ಉತ್ತರಾಧಿಕಾರಿಗಳ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

  ಇದನ್ನೂ ಓದಿ: 70 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯ, ರಾಜನಾದ ಪ್ರಿನ್ಸ್ ಚಾರ್ಲ್ಸ್!

  ಪ್ರಿನ್ಸ್ ವಿಲಿಯಂ ಅವರ ಎರಡನೇ ಮಗು ರಾಜಕುಮಾರಿ ಷಾರ್ಲೆಟ್. ರಾಜಕುಮಾರಿ ಮೇ 2, 2015 ರಂದು ಜನಿಸಿದರು. ಷಾರ್ಲೆಟ್ ರಾಜಮನೆತನದ ಉತ್ತರಾಧಿಕಾರದ ಸಾಲಿನಲ್ಲಿ ನಾಲ್ಕನೆಯವರು. ಲೂಯಿಸ್ ಪ್ರಿನ್ಸ್ ವಿಲಿಯಂನ ಮೂರನೇ ಮಗು ಮತ್ತು ಎರಡನೇ ಮಗ. ಲೆವಿಸ್ ಏಪ್ರಿಲ್ 23, 2018 ರಂದು ಜನಿಸಿದರು. ರಾಜಮನೆತನದ ಉತ್ತರಾಧಿಕಾರಿಗಳ ಸಾಲಿನಲ್ಲಿ ಲೆವಿಸ್ ಐದನೇ ಸ್ಥಾನದಲ್ಲಿದ್ದಾರೆ.
  Published by:renukadariyannavar
  First published: