• Home
  • »
  • News
  • »
  • explained
  • »
  • Explained: BJP ಹುಟ್ಟಿ 42 ವರ್ಷ! ಭಾರತದ ಅತಿದೊಡ್ಡ ರಾಜಕೀಯ ಪಕ್ಷದ ಇತಿಹಾಸ, ಸಾಧನೆ, ವೈಫಲ್ಯಗಳೇನು?

Explained: BJP ಹುಟ್ಟಿ 42 ವರ್ಷ! ಭಾರತದ ಅತಿದೊಡ್ಡ ರಾಜಕೀಯ ಪಕ್ಷದ ಇತಿಹಾಸ, ಸಾಧನೆ, ವೈಫಲ್ಯಗಳೇನು?

ಬಿಜೆಪಿ

ಬಿಜೆಪಿ

ಬಿಜೆಪಿಯು ತನ್ನ ಪ್ರಾರಂಭಿಕ ಹಂತದಲ್ಲಿ ಹಿಂದೂ ರಾಷ್ಟ್ರೀಯತೆಯ ಬಗ್ಗೆ ಮೃದುವಾದ ನಿಲುವನ್ನು ಉಳಿಸಿಕೊಂಡಿತ್ತು, ಪಕ್ಷದ ಅಧ್ಯಕ್ಷ ಅಟಲ್ ಬಿಹಾರಿ ವಾಜಪೇಯಿ ಅವರ ಅಡಿಯಲ್ಲಿ ಗಾಂಧಿವಾದಿ ಸಮಾಜವಾದದಲ್ಲಿ ತನ್ನ ಸೈದ್ಧಾಂತಿಕ ನೆಲೆಯನ್ನು ಅದು ಸ್ಥಾಪಿಸಿತು.

  • Share this:

ಪ್ರಸ್ತುತ ಭಾರತದ ಅತಿದೊಡ್ಡ ರಾಜಕೀಯ ಪಕ್ಷವಾಗಿರುವ ಬಿಜೆಪಿ.  ಸಂಸತ್ತಿನಲ್ಲಿ(Parliament) ಪ್ರಾತಿನಿಧ್ಯದ ದೃಷ್ಟಿಯಿಂದ ಮತ್ತು ಪಕ್ಷದ ಸದಸ್ಯತ್ವದ ದೃಷ್ಟಿಯಿಂದ ನೋಡಿದಾಗ ಈ ಹಿಂದೆ ಅಂದರೆ 1980 ರ ದಶಕದ ಆರಂಭದಲ್ಲಿ ತಾನಿದ್ದ ಮೂಲ ಸ್ಥಿತಿಯಿಂದ ಈಗ ಬಹಳ ದೂರ ಸಾಗಿ ಬಂದಿದೆ. ಭಾರತೀಯ ಜನತಾ ಪಕ್ಷ (BJP)  42ನೇ ಸಂಸ್ಥಾಪನಾ ದಿನವನ್ನು (BJP Foundation Day) ಆಚರಿಸುತ್ತಿರುವ ಈ ಪಕ್ಷ ಹಲವಾರು ಅಡೆತಡೆಗಳು ಮತ್ತು ವೈಫಲ್ಯಗಳನ್ನು ನಿವಾರಿಸಿಕೊಂಡು, ಬಿಜೆಪಿ ಪ್ರಸ್ತುತ ಭಾರತೀಯ ರಾಜಕೀಯ (Indian Politics) ಸನ್ನಿವೇಶದಲ್ಲಿ ದೃಢವಾದ ನೆಲೆಯನ್ನು ರೂಪಿಸಿಕೊಂಡಿದೆ. ದೀರ್ಘಕಾಲದವರೆಗೆ ಭಾರತದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನೀತಿಗಳನ್ನು (International Policy) ಮುನ್ನಡೆಸುವ ಸೈದ್ಧಾಂತಿಕ ಚೌಕಟ್ಟನ್ನು ಗಮನಾರ್ಹವಾಗಿ ಪೋಣಿಸಿದೆ.


ಬಿಜೆಪಿಯು ಏಪ್ರಿಲ್ 6, 1980 ರಂದು ರಚನೆಯಾಗಿದ್ದರೂ, ಅದರ ಸೈದ್ಧಾಂತಿಕ ಮೂಲವು 1951 ರಲ್ಲಿ ಕಾಂಗ್ರೆಸ್ ರಾಜಕಾರಣಿ ಶ್ಯಾಮ ಪ್ರಸಾದ್ ಮುಖರ್ಜಿ ಅವರು ನೆಹರೂ ಅವರ ನಾಯಕತ್ವದಿಂದ ಹೊರಬಂದು ಭಾರತೀಯ ಜನಸಂಘ (ಬಿಜೆಎಸ್) ಅನ್ನು ರಚಿಸಿದಾಗ ಹೊಂದಿದ್ದ ಸಿದ್ಧಾಂತಕ್ಕೆ ಕೊಂಡೊಯ್ಯುತ್ತದೆ. ಕಾಂಗ್ರೆಸ್ ರಾಜಕೀಯ ಆಚರಣೆಗಳಿಗೆ ವಿರೋಧವಾಗಿ ಹಿಂದೂ ರಾಷ್ಟ್ರೀಯತಾವಾದಿ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸಹಯೋಗದೊಂದಿಗೆ ಪಕ್ಷವನ್ನು ರಚಿಸಲಾಯಿತು.


ಆರಂಭಿಕ ವರ್ಷಗಳಲ್ಲಿ ಸಕ್ಸಸ್ ಸಿಕ್ಕಿರಲಿಲ್ಲ!
ಬಿಜೆಪಿಯ ಜನಾದೇಶವೆಂದರೆ ಹಿಂದೂ ಅಸ್ಮಿತೆ ಮತ್ತು ಸಂಸ್ಕೃತಿಯ ಸಂರಕ್ಷಣೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಾಯೋಗಿಕವಾಗಿ ಭಾರತೀಯ ರಾಜಕೀಯದ ಮುಖವಾಗಿದ್ದ ಸಮಯದಲ್ಲಿ ಸ್ಥಾಪಿತವಾದ ಬಿಜೆ‍ಎಸ್ ಪಕ್ಷ ತನ್ನ ಆರಂಭಿಕ ವರ್ಷಗಳಲ್ಲಿ ಅಷ್ಟೊಂದು ಯಶಸ್ವಿಯಾಗಲಿಲ್ಲ. 1952 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಎಸ್ ಕೇವಲ 3 ಲೋಕಸಭಾ ಸ್ಥಾನಗಳನ್ನು ಮಾತ್ರ ಗೆದ್ದಿತ್ತು.


ಜನತಾ ಪಕ್ಷ ವಿಸರ್ಜನೆ!
1975ರಲ್ಲಿ ಪ್ರಧಾನಿ ಇಂದಿರಾಗಾಂಧಿಯವರು ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದಾಗ ಬಿಜೆಎಸ್‌ ಸದಸ್ಯರು ಕಾಂಗ್ರೆಸ್‌ ಆಡಳಿತದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದರು. ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಂಡ ನಂತರ, ಬಿಜೆ‍ಎಸ್ ಹಲವಾರು ಇತರ ಪಕ್ಷಗಳೊಂದಿಗೆ ಸಹಕರಿಸಿ ಜನತಾ ಪಕ್ಷವನ್ನು ರಚಿಸಿತು. 1977 ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದಾಗ, ಜನತಾ ಪಕ್ಷವು ಬಹುಮತವನ್ನು ಗಳಿಸಿತು.


ಮೊರಾರ್ಜಿ ದೇಸಾಯಿ ಪ್ರಧಾನ ಮಂತ್ರಿಯಾಗಿ ಕೇಂದ್ರದಲ್ಲಿ ಸರ್ಕಾರವನ್ನು ರಚಿಸಿದ್ದರು. ಆದರೂ, ಪಕ್ಷದೊಳಗಿನ ರಾಜಕೀಯ ಭಿನ್ನಾಭಿಪ್ರಾಯಗಳಿಂದಾಗಿ, ಮೊರಾರ್ಜಿ ದೇಸಾಯಿ 1980 ರಲ್ಲಿ ರಾಜೀನಾಮೆ ನೀಡಬೇಕಾಯಿತು ಮತ್ತು ಹೊಸದಾಗಿ ಚುನಾವಣೆಗಳನ್ನು ನಡೆಸಲಾಯಿತು. ಜನತಾ ಪಕ್ಷವು ಶೀಘ್ರದಲ್ಲೇ ವಿಸರ್ಜನೆಯಾಯಿತು. ಹಿಂದೆ ಬಿಜೆ‍ಎಸ್ ಸದಸ್ಯರಾಗಿದ್ದ ಅದರ ಹೆಚ್ಚಿನ ಸಂಖ್ಯೆಯ ಸದಸ್ಯರು ಬಿಜೆಪಿಯನ್ನು ರಚಿಸಿದರು. ಹೀಗೆ ಬಿಜೆಪಿ ಪ್ರವರ್ಧಮಾನಕ್ಕೆ ಬಂದಿತು.


ರಾಜಕೀಯ ಸಿದ್ಧಾಂತಕ್ಕೆ ಬೆಳವಣಿಗೆ ಹೇಗಾಯ್ತು?
ಬಿಜೆಪಿಯು ತನ್ನ ಪ್ರಾರಂಭಿಕ ಹಂತದಲ್ಲಿ ಹಿಂದೂ ರಾಷ್ಟ್ರೀಯತೆಯ ಬಗ್ಗೆ ಮೃದುವಾದ ನಿಲುವನ್ನು ಉಳಿಸಿಕೊಂಡಿತ್ತು, ಪಕ್ಷದ ಅಧ್ಯಕ್ಷ ಅಟಲ್ ಬಿಹಾರಿ ವಾಜಪೇಯಿ ಅವರ ಅಡಿಯಲ್ಲಿ ಗಾಂಧಿವಾದಿ ಸಮಾಜವಾದದಲ್ಲಿ ತನ್ನ ಸೈದ್ಧಾಂತಿಕ ನೆಲೆಯನ್ನು ಅದು ಸ್ಥಾಪಿಸಿತು. ಆದರೂ, 1984 ರ ಚುನಾವಣೆಯಲ್ಲಿ ಪಕ್ಷದ ಭಾರಿ ಸೋಲಿನ ನಂತರ, ಬಿಜೆಪಿ ತನ್ನ ರಾಜಕೀಯ ಸಿದ್ಧಾಂತಕ್ಕೆ ತಿದ್ದುಪಡಿ ಮಾಡಲು ನಿರ್ಧರಿಸಿತು.‘


ರಾಮ ಜನ್ಮಭೂಮಿ ಆಂದೋಲನದ ಪ್ರಭಾವ
1980 ರ ದಶಕವು ದೇಶದಲ್ಲಿ ತೀವ್ರವಾದ ಹಿಂದೂ-ಮುಸ್ಲಿಂ ಘರ್ಷಣೆಗಳ ಸಮಯವಾಗಿತ್ತು, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಪ್ರಾರಂಭಿಸಿದ ರಾಮ ಜನ್ಮಭೂಮಿ ಆಂದೋಲನದಲ್ಲಿ ಪಕ್ಷವು ತನ್ನ ರಾಜಕೀಯ ಆದೇಶವನ್ನಾಗಿ ಇದನ್ನು ಎತ್ತಿಕೊಂಡಿತು.


ಇದನ್ನೂ ಓದಿ:  Explained: ಭಾರತದಲ್ಲಿ ಅಲ್ಪಸಂಖ್ಯಾತರು ಯಾರು? ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಬಹುದೇ?


ಡಿಸೆಂಬರ್ 6, 1992 ರಂದು, ಬಿಜೆಪಿಯು ವಿಎಚ್‌ಪಿಯೊಂದಿಗೆ ಉತ್ತರ ಪ್ರದೇಶದಲ್ಲಿ ಬೃಹತ್ ರ್‍ಯಾಲಿಯನ್ನು ಆಯೋಜಿಸಿತು. ಈ ಮಧ್ಯದಲ್ಲಿ ಅಯೋಧ್ಯೆಯಲ್ಲಿ 16 ನೇ ಶತಮಾನದ ಮಸೀದಿಯನ್ನು ಕೆಡವಲಾಯಿತು. ಈ ಘಟನೆಯು ದೊಡ್ಡ ಪ್ರಮಾಣದ ಕೋಮುಗಲಭೆಗಳನ್ನು ದೇಶದೆಲ್ಲೆಡೆ ಹುಟ್ಟುಹಾಕಿತು ಮತ್ತು ಇಲ್ಲಿಯವರೆಗೆ ರಾಜ್ಯ ಮತ್ತು ದೇಶದಲ್ಲಿ ಕೋಮು ಧ್ರುವೀಕರಣಕ್ಕೆ ಇದು ಭಾರಿ ಪ್ರಚೋದಕವಾಗಿದೆ.


ಕಟ್ಟರ್ ಎಂದು ಹೇಳಲಾಗುವ ಹಿಂದುತ್ವದ ರಾಜಕೀಯ ಸಿದ್ಧಾಂತ, ಅದರಲ್ಲೂ ನಿರ್ದಿಷ್ಟವಾಗಿ ಅಯೋಧ್ಯೆಯ ರಾಮಮಂದಿರ ವಿಚಾರವು ಪಕ್ಷಕ್ಕೆ ಬಲವಾದ ಪ್ರಚೋದನೆಯನ್ನು ನೀಡಿತು ಮತ್ತು ಸಮಯ ಕಳೆದಂತೆ ದೇಶಾದ್ಯಂತ ಭಾರೀ ಲಾಭವನ್ನು ಸಾಧಿಸುವಲ್ಲಿ ಇದು ಸಾಕಷ್ಟು ಯಶಸ್ವಿಯಾಯಿತು. 2014 ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದಾಗ, ಬಿಜೆಪಿ ತನ್ನ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿಯವರ ಇಮೇಜ್ ಅನ್ನು ಎತ್ತಿಹಿಡಿದು ಗುಜರಾತ್‌ನಲ್ಲಿ ತನ್ನ ಮುಖ್ಯಮಂತ್ರಿಯಾಗಿ ಸಾಧಿಸಿದ ಯಶಸ್ಸನ್ನು ಎಲ್ಲೆಡೆ ಪ್ರಚುರಪಡಿಸಿತು.


ಇದನ್ನೂ ಓದಿ: Explained: ಪಂಜಾಬ್‌ ಗೆಲುವಿನ ಬಳಿಕ ಜನಪ್ರಿಯವಾಗುತ್ತಿದೆಯಾ ಆಮ್ ಆದ್ಮಿ? ಕರ್ನಾಟಕದಲ್ಲೂ ಎಲ್ಲ ಪಕ್ಷಗಳನ್ನು ಗುಡಿಸಿ ಹಾಕುತ್ತಾ 'ಪೊರಕೆ'?


ಪ್ರಸ್ತುತ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಪಕ್ಷವು ನಿರ್ವಹಿಸುತ್ತಿರುವ ಭದ್ರಕೋಟೆಯು ಪ್ರಧಾನ ಮಂತ್ರಿಯ ಜನಪ್ರಿಯತೆಯಿಂದ ಹೆಚ್ಚಾಗಿ ಹುಟ್ಟಿಕೊಂಡಿದೆ ಅಂತಲೇ ಹೇಳಬಹುದಾಗಿದ್ದು, ಇದನ್ನೇ ಇನ್ನೊಂದು ಪದದಲ್ಲಿ 'ಮೋದಿ ಅಲೆ' ಎಂದೂ ಸಹ ಕರೆಯಲಾಗುತ್ತದೆ.

Published by:ಗುರುಗಣೇಶ ಡಬ್ಗುಳಿ
First published: