Rakesh Jhunjhunwala: 5 ಸಾವಿರದಿಂದ 5 ಬಿಲಿಯನ್ ದುಡ್ಡು ಮಾಡಿದ್ದ ಉದ್ಯಮಿ! ಷೇರು ಮಾರುಕಟ್ಟೆ ಶೇರ್ ಖಾನ್ ರಾಕೇಶ್ ಜುಂಜನ್ವಾಲಾ ಜೀವನಗಾಥೆ ಇಲ್ಲಿದೆ

ಬಿಲಿಯನೇರ್ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ 62ನೇ ವಯಸ್ಸಿಗೆ ತಮ್ಮ ಜೀವನದ ಪಯಣ ಮಗಿಸಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ತಮ್ಮ ಹೆಸರನ್ನು ಟ್ರೆಂಡ್ ಮಾಡಿಕೊಂಡಿದ್ದರು ರಾಕೇಶ್ ಜುಂಜುನ್ವಾಲಾ, ಷೇರುಪೇಟೆಯಲ್ಲಿ ಕಿಂಗ್ ಎನಿಸಿಕೊಂಡಿದ್ದರು. 5 ಸಾವಿರದಿಂದ ಬ್ಯುಸಿನೆಸ್ ಆರಂಭಿಸಿ 5 ಬಿಲಿಯನ್‌ವರೆಗೆ ಗಳಿಸಿದ 'ಭಾರತದ ವಾರೆನ್ ಬಫೆಟ್‌' ಕಥೆ ಇಲ್ಲಿದೆ ಓದಿ...

ಉದ್ಯಮಿ ರಾಕೇಶ್ ಜುಂಜುನ್ವಾಲಾ (ಕೃಪೆ: Internet)

ಉದ್ಯಮಿ ರಾಕೇಶ್ ಜುಂಜುನ್ವಾಲಾ (ಕೃಪೆ: Internet)

 • Share this:
  ದಿಗ್ಗಜ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ (Rakesh Jhunjhunwala) ಕೊನೆಯುಸಿರೆಳೆದಿದ್ದಾರೆ. ಬಿಲಿಯನೇರ್ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ 62ನೇ ವಯಸ್ಸಿಗೆ ತಮ್ಮ ಜೀವನದ ಪಯಣ ಮಗಿಸಿದ್ದಾರೆ. ಷೇರು ಮಾರುಕಟ್ಟೆಯಲ್ಲಿ (Share Market) ತಮ್ಮ ಹೆಸರನ್ನು ಟ್ರೆಂಡ್ (Trend) ಮಾಡಿಕೊಂಡಿದ್ದರ ರಾಕೇಶ್ ಜುಂಜುನ್ವಾಲಾ, ಷೇರುಪೇಟೆಯಲ್ಲಿ ಕಿಂಗ್ (Stock Market King) ಎನಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಷೇರು ಪೇಟೆಯಲ್ಲಿ ಹೂಡಿಕೆ ಮಾಡಿ, ಸಾಕಷ್ಟು ಹಣ, ಖ್ಯಾತಿ ಗಳಿಸಿದ್ದರು. ಭಾರತದ 36 ನೇ ಶ್ರೀಮಂತ (Rich) ವ್ಯಕ್ತಿ ಈ ರಾಕೇಶ್ ಜುಂಜನ್ವಾಲಾ. ಹಿರಿಯ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ. ಮಿಡಾಸ್ ಟಚ್ ಹೊಂದಿರುವ ಹೂಡಿಕೆದಾರರನ್ನು "ಭಾರತದ ವಾರೆನ್ ಬಫೆಟ್" ಎಂದು ಕರೆಯಲಾಗುತ್ತಿತ್ತು.

  ರಾಕೇಶ್ ಜುಂಜುನ್ವಾಲಾ ಜೀವನ
  ಜುಲೈ 5, 1960 ರಂದು ಜನಿಸಿದ ಜುಂಜುನ್ವಾಲಾ ಮುಂಬೈನಲ್ಲಿ ರಾಜಸ್ಥಾನಿ ಕುಟುಂಬದಲ್ಲಿ ಬೆಳೆದಿದ್ದರು, ಅಲ್ಲಿ ಅವರ ತಂದೆ ಆದಾಯ ತೆರಿಗೆ ಆಯುಕ್ತರಾಗಿ ಕೆಲಸ ಮಾಡಿದರು. ರಾಕೇಶ್ ಸೈಡೆನ್‍ಹ್ಯಾಮ್ ಕಾಲೇಜಿನಿಂದ ಪದವಿ ಪಡೆದಿದ್ದರು ಮತ್ತು ನಂತರ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಲ್ಲಿ ಸೇರಿಕೊಂಡಿದ್ದರು.

  ಭಾರತದಲ್ಲಿ 36ನೇ ಶ್ರೀಮಂತ ವ್ಯಕ್ತಿ
  ರಾಕೇಶ್ ಜುಂಜುನ್ವಾಲಾ ಅಂದಾಜು $5.5 ಶತಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದರಂತೆ. ಭಾರತದಲ್ಲಿ 36ನೇ ಶ್ರೀಮಂತ ವ್ಯಕ್ತಿ ಆಗಿದ್ದರು. ರಾಕೇಶ್ ಜುಂಜುನ್ವಾಲಾ, ಸಕ್ರಿಯ ಹೂಡಿಕೆದಾರರಲ್ಲದೆ, ಜುಂಜುನ್‍ವಾಲಾ ಆಪ್ಟೆಕ್ ಲಿಮಿಟೆಡ್ ಮತ್ತು ಹಂಗಾಮಾ ಡಿಜಿಟಲ್ ಮೀಡಿಯಾ ಎಂಟರ್‍ಟೈನ್‍ಮೆಂಟ್ ಪ್ರೈವೇಟ್ ಲಿಮಿಟೆಡ್‍ನ ಮುಖ್ಯಸ್ಥರಾಗಿದ್ದರು.

  ಹಲವು ಕಂಪನಿಗಳ ನಿರ್ದೇಶಕರ ಮಂಡಳಿಯಲ್ಲಿದ್ದರು
  ಪ್ರೈಮ್ ಫೋಕಸ್ ಲಿಮಿಟೆಡ್, ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್, ಬಿಲ್ಕೇರ್ ಲಿಮಿಟೆಡ್, ಪ್ರಜ್ ಇಂಡಸ್ಟ್ರೀಸ್ ಲಿಮಿಟೆಡ್, ಪ್ರೋವೋಗ್ ಇಂಡಿಯಾ ಲಿಮಿಟೆಡ್, ಕಾನ್ಕಾರ್ಡ್ ಬಯೋಟೆಕ್ ಲಿಮಿಟೆಡ್, ಇನ್ನೋವಸಿಂತ್ ಟೆಕ್ನಾಲಜೀಸ್ ಲಿಮಿಟೆಡ್, ಮಿಡ್ ಡೇ ಮಲ್ಟಿಮೀಡಿಯಾ ಲಿಮಿಟೆಡ್, ನಾಗಾರ್ಜುನ ಕನ್ಸ್‍ಟ್ರಕ್ಷನ್ ಕಂಪನಿ ಲಿಮಿಟೆಡ್ ಮತ್ತು ಟಾಪ್ಸ್ ಸೆಕ್ಯುರಿಟಿ ಲಿಮಿಟೆಡ್ ಕಂಪನಿಗಳ ನಿರ್ದೇಶಕರ ಮಂಡಳಿಯಲ್ಲಿದ್ದರು.

  ಇದನ್ನೂ ಓದಿ: Savitri Jindal: ಏಷ್ಯಾದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಜೀವನಗಾಥೆ ಇಲ್ಲಿದೆ

  'ಆಕಾಶ ಏರ್' ಹಾರಾಟ
  ಜನಪ್ರಿಯ ಉದ್ಯಮಿ ರಾಕೇಶ್ ಜುಂಜುನ್‍ವಾಲಾ ಮಾಲೀಕತ್ವದ 'ಆಕಾಶ ಏರ್' ತನ್ನ ಮೊದಲ ವಾಣಿಜ್ಯ ಹಾರಾಟವನ್ನು ಆಗಸ್ಟ್ 7ರಂದು ಕಂಡಿದೆ. ಮುಂಬೈ- ಅಹಮದಾಬಾದ್ ಮಾರ್ಗದಲ್ಲಿ ಮೊದಲ ವಿಮಾನ ಹಾರಾಟ ಯಶಸ್ವಿಯಾಗಿ ನಡೆಸಿದೆ. ಏವಿಯೇಷನ್ ರೆಗ್ಯುಲೇಟರ್ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಜುಲೈ 7ರಂದು ಆಕಾಶ ಏರ್‍ಗೆ ಅದರ ಏರ್ ಆಪರೇಟರ್ ಪ್ರಮಾಣಪತ್ರವನ್ನು ಪಡೆದುಕೊಂಡಿತ್ತು. ಆಗಸ್ಟ್‍ನಲ್ಲಿ ಡಿಜಿಸಿಎಯಿಂದ ಗ್ರೀನ್ ಸಿಗ್ನಲ್ ಪಡೆದ ನಂತರ 72 ಮ್ಯಾಕ್ಸ್ ವಿಮಾನಗಳನ್ನು ಖರೀದಿಸಲು ಆಕಾಶ್ ಏರ್ ಕಳೆದ ವರ್ಷ ನವೆಂಬರ್ 26ರಂದು ಬೋಯಿಂಗ್‍ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.

  ಆಕಾಶ ಏರ್ ರಾಕೇಶ್ ಜುಂಜುನ್‍ವಾಲಾ ಮತ್ತು ಮಾಜಿ ಜೆಟ್ ಏರ್‍ವೇಸ್ ಸಿಇಒ ವಿನಯ್ ದುಬೆ ಅವರಿಂದ ಸಹ-ಸ್ಥಾಪಿತವಾದ ಭಾರತೀಯ ವಿಮಾನಯಾನ ಸಂಸ್ಥೆಯಾಗಿದೆ. ಏರ್‍ಲೈನ್ ಪ್ರಸ್ತುತ 2 ವಿಮಾನಗಳನ್ನು ಹೊಂದಿದ್ದು, 70 ಹೆಚ್ಚಿನ ವಿಮಾನಗಳಿಗಾಗಿ ಹೆಚ್ಚುವರಿ ಆರ್ಡರ್ ಹೊಂದಿದೆ.

  5 ಸಾವಿರದಿಂದ 5 ಬಿಲಿಯನ್ ವರೆಗೆ
  ರಾಕೇಶ್ ಜುಂಜುನ್ವಾಲಾ ಅವರನ್ನು "ಬಿಗ್ ಬುಲ್ ಆಫ್ ಇಂಡಿಯಾ" ಮತ್ತು "ಕಿಂಗ್ ಆಫ್ ಬುಲ್ ಮಾರ್ಕೆಟ್" ಎಂದು ಪ್ರಖ್ಯಾತಿ ಹೊಂದಿದ್ದಾರೆ. ಅವರ ಷೇರು ಮಾರುಕಟ್ಟೆ ಮುನ್ಸೂಚನೆಗಳು ಮತ್ತು ಷೇರು ಮಾರುಕಟ್ಟೆಯ ಗೂಳಿಯ ದೃಷ್ಟಿಕೋನಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾಗಿದ್ದರು. 1985 ರಲ್ಲಿ ಕೇವಲ 5,000 ಬಂಡವಾಳದಿಂದ ಪ್ರಾರಂಭವಾದ ಅವರ ಹೂಡಿಕೆ ಇಂದು 5 ಬಿಲಿಯನ್ ವರೆಗೆ ಬೆಳೆದಿದೆ.

  ಮೊದಲ ದೊಡ್ಡ ಲಾಭ 5 ಲಕ್ಷ
  1986 ರಲ್ಲಿ ರಾಕೇಶ್ ಜುಂಜುನ್ವಾಲಾ ಅವರ ಮೊದಲ ದೊಡ್ಡ ಲಾಭ 5 ಲಕ್ಷ. 1986 ಮತ್ತು 1989 ರ ನಡುವೆ ಅವರು ಸುಮಾರು 20-25 ಲಕ್ಷ ಲಾಭ ಗಳಿಸಿದರು. 2021 ರ ಹೊತ್ತಿಗೆ, ಅವರ ದೊಡ್ಡ ಹೂಡಿಕೆಯು ಟೈಟಾನ್ ಕಂಪನಿಯಲ್ಲಿ 7,294.8 ಕೋಟಿ ಮೌಲ್ಯದ್ದಾಗಿದೆ. ಅವರು ಭಾರತದ ಇಂಟರ್‍ನ್ಯಾಶನಲ್ ಮೂವ್‍ಮೆಂಟ್ ಟು ಯುನೈಟ್ ನೇಷನ್ಸ್‍ನ ಸಲಹೆಗಾರರ ಮಂಡಳಿಯ ಸದಸ್ಯರಾಗಿದ್ದರು.

  ಇದನ್ನೂ ಓದಿ: US Recession: ಅಮೆರಿಕದ ಆರ್ಥಿಕ ಹಿನ್ನಡೆ ಭಾರತದ ಐಟಿ ಉದ್ಯಮಕ್ಕೆ ಕೊಡಲಿಪೆಟ್ಟು ಕೊಡುತ್ತಾ?

  2013ರಲ್ಲಿ ಜುಂಜುನ್‍ವಾಲಾ ಅವರು ಮಲಬಾರ್ ಹಿಲ್‍ನಲ್ಲಿರುವ ರಿಡ್ಜ್‍ವೇ ಅಪಾರ್ಟ್‍ಮೆಂಟ್‍ಗಳ 12 ಘಟಕಗಳಲ್ಲಿ 6 ಅನ್ನು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‍ನಿಂದ 176 ಕೋಟಿ ರೂ.ಗೆ ಖರೀದಿಸಿದ್ದರು. ನಂತರ 2017ರಲ್ಲಿ ಕಟ್ಟಡದಲ್ಲಿರುವ ಇತರ 6 ಅಪಾರ್ಟ್‍ಮೆಂಟ್‍ಗಳನ್ನು ಎಚ್‍ಎಸ್‍ಬಿಸಿ ಬ್ಯಾಂಕ್‍ನಿಂದ 195 ಕೋಟಿ ರೂ.ಗೆ ಖರೀದಿಸಿದ್ದರು. 2021 ರಲ್ಲಿ ಅವರು ಹಳೆಯ ಕಟ್ಟಡವನ್ನು ಕೆಡವಿದ ನಂತರ ತಮ್ಮ ಹೊಸ 70000 ಚದರ ಅಡಿ 13 ಅಂತಸ್ತಿನ ಮನೆಯ ನಿರ್ಮಾಣವನ್ನು ಪ್ರಾರಂಭಿಸಿದರು.
  Published by:Savitha Savitha
  First published: