• Home
  • »
  • News
  • »
  • explained
  • »
  • Murder Case: ಬೆಂಗಳೂರಿನ ಮಹಿಳೆ ಕೊಲೆ ಪ್ರಕರಣ! ಸಿನಿಮೀಯ ಶೈಲಿಯಲ್ಲಿ ಸಿಕ್ಕಿಬಿದ್ದ ದಂಪತಿ

Murder Case: ಬೆಂಗಳೂರಿನ ಮಹಿಳೆ ಕೊಲೆ ಪ್ರಕರಣ! ಸಿನಿಮೀಯ ಶೈಲಿಯಲ್ಲಿ ಸಿಕ್ಕಿಬಿದ್ದ ದಂಪತಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಬೈಕ್ ಮೇಲೆ ಕೊಲೆ ಮಾಡಿದ ಮಹಿಳೆಯ ಮೃತ ದೇಹವನ್ನು ಇರಿಸಿಕೊಂಡು ಹೋಗಬೇಕಾದರೆ ಅವರ ಬೈಕ್ ರಸ್ತೆ ಮಧ್ಯದಲ್ಲಿ ಇರುವಂತಹ ಸ್ಪೀಡ್ ಬ್ರೇಕರ್ ಗೆ ಜೋರಾಗಿ ಅಪ್ಪಳಿಸಿ ಅಪಘಾತವಾದಾಗ ಇವರು ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

  • Share this:

ಕೆಲವೊಮ್ಮೆ ಈ ಅಪರಾಧಗಳು ಹೇಗೆ ಪೊಲೀಸರ (Police) ಕಣ್ಣಿಗೆ ಬೀಳುತ್ತವೆ ಎಂದು ಊಹಿಸುವುದಕ್ಕೂ ಸಾಧ್ಯವಾಗುವುದಿಲ್ಲ. ಎಂತಹ ಯೋಜನೆ ಹಾಕಿಕೊಂಡು ಅಪರಾಧ (Crime) ಮಾಡಿದರೂ ಸಹ ಅಪರಾಧ ಮಾಡಿದವರು ಹೇಗೋ ಒಂದು ರೀತಿಯಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವುದನ್ನು ನಾವು ಅನೇಕ ಬಾರಿ ನೋಡಿರುತ್ತೇವೆ ಮತ್ತು ಕೇಳಿರುತ್ತೇವೆ. ಇಲ್ಲಿಯೂ ಸಹ ಒಂದು ಅಪರಾಧ ತುಂಬಾನೇ ವಿಚಿತ್ರವಾದ ರೀತಿಯಲ್ಲಿ ಬೆಳಕಿಗೆ ಬಂದಿದೆ ನೋಡಿ. ನೀವು ಇದನ್ನು ಕೇಳಿದರೆ ಒಂದು ಕ್ಷಣ ಶಾಕ್ ಆಗುವುದು ಗ್ಯಾರಂಟಿ. ಏಕೆಂದರೆ ಇಲ್ಲಿ ಬೈಕ್ (Bike) ಮೇಲೆ ಕೊಲೆ ಮಾಡಿದ ಮಹಿಳೆಯ (Women) ಮೃತ ದೇಹವನ್ನು (Dead Body) ಇರಿಸಿಕೊಂಡು ಹೋಗಬೇಕಾದರೆ ಅವರ ಬೈಕ್ ರಸ್ತೆ ಮಧ್ಯದಲ್ಲಿ ಇರುವಂತಹ ಸ್ಪೀಡ್ ಬ್ರೇಕರ್ ಗೆ ಜೋರಾಗಿ ಅಪ್ಪಳಿಸಿ ಅಪಘಾತವಾದಾಗ ಇವರು ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.


ನಿರ್ಜನ ಪ್ರದೇಶದಲ್ಲಿ ಮಹಿಳೆಯ ಶವ ಪತ್ತೆ!


ಬೆಂಗಳೂರಿನಿಂದ 60 ಕಿಲೋ ಮೀಟರ್ ದೂರದಲ್ಲಿರುವ ಚನ್ನಪಟ್ಟಣದ ನಿರ್ಜನ ಪ್ರದೇಶದಲ್ಲಿ 21 ವರ್ಷದ ಮಹಿಳೆಯ ಶವವನ್ನು ತೆಗೆದುಕೊಂಡು ಹೋಗಿ ಸುಡಲು ನಿರ್ಧರಿಸಿದ ದಂಪತಿಗಳಿಬ್ಬರು ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ.


ಇದನ್ನೂ ಓದಿ:  Explained: ಬೆಂಗಳೂರಿನಲ್ಲಿ ಬದುಕು ಜಟಕಾ 'ಗುಂಡಿ’! ರಾಜಧಾನಿ ರಸ್ತೆಯಲ್ಲಿರೋದು 10,282 ಹೊಂಡ!


ಬೆಂಗಳೂರಿನ ಆರ್.ಆರ್.ನಗರದ ನಿವಾಸಿ ಸೌಮ್ಯಾ ಎಂಬಾಕೆ ತನ್ನ ನೆರೆಹೊರೆಯ ದಂಪತಿಗಳಾದ ರಘು (30) ಮತ್ತು ದುರ್ಗಾ (28) ಅವರಿಂದ ಎರವಲು ಪಡೆದ ಹಣದ ಬಗ್ಗೆ ಜಗಳ ಆಗಿದ್ದರಿಂದ ಸೋಮವಾರ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಸೌಮ್ಯಾ ಮತ್ತು ರಘು ಈ ಹಿಂದೆಯೂ ಇದೇ ವಿಷಯಕ್ಕಾಗಿ ಜಗಳವಾಡಿದ್ದರು ಎಂದು ಆರೋಪಿಸಲಾಗಿದೆ. ಸೋಮವಾರ, ರಘು ಅವಳ ಕಪಾಳಕ್ಕೆ ಹೊಡೆದಿದ್ದಾನೆ ಮತ್ತು ಅವಳು ಸ್ಥಳದಲ್ಲಿಯೇ ಸಾವನ್ನಪ್ಪಿದಳು ಎಂದು ಆರೋಪಿಸಲಾಗಿದೆ.


ಎಂಟು ಗಂಟೆಗಳ ಕಾಲ ಶವವನ್ನು ಮನೆಯೊಳಗೆ ಇಟ್ಟುಕೊಂಡ ದಂಪತಿಗಳು
ಇದರಿಂದ ಭಯಭೀತರಾದ ದಂಪತಿಗಳು ಕನಿಷ್ಠ ಎಂಟು ಗಂಟೆಗಳ ಕಾಲ ಆ ಮಹಿಳೆಯ ಶವವನ್ನು ತಮ್ಮ ಮನೆಯೊಳಗೆ ಇಟ್ಟುಕೊಂಡು ಚನ್ನಪಟ್ಟಣದ ನಿರ್ಜನ ಪ್ರದೇಶದ ಬಳಿ ಶವವನ್ನು ಸುಡಲು ನಿರ್ಧರಿಸಿದರು ಎಂದು ಆರೋಪಿಸಲಾಗಿದೆ. ನಂತರ ದಂಪತಿಗಳು ತಮ್ಮ ಸ್ನೇಹಿತರಾದ ನಾಗರಾಜ್ (18) ಮತ್ತು ವಿನೋದ್ (19) ಅವರ ಸಹಾಯವನ್ನು ಕೋರಿದರು ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ತಡರಾತ್ರಿ ಅವರು ಎರಡು ಬೈಕ್ ಗಳಲ್ಲಿ ಚನ್ನಪಟ್ಟಣಕ್ಕೆ ಪ್ರಯಾಣ ಬೆಳೆಸಿದರು. ದಂಪತಿಗಳಿಬ್ಬರು ಒಂದು ಬೈಕ್ ಮೇಲೆ ಮತ್ತು ಇನ್ನೊಂದು ಬೈಕ್ ಮೇಲೆ ವಿನೋದ್ ಮತ್ತು ನಾಗರಾಜ್ ಆ ಶವದೊಂದಿಗೆ ಹೊರಟರು ಎಂದು ಹೇಳಲಾಗಿದೆ.


ಸುಮಾರು 40 ಕಿಲೋ ಮೀಟರ್ ಪ್ರಯಾಣಿಸಿದ ನಂತರ, ಅವರು ರಾಮನಗರ ನಗರದ ಉಪ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಬೆಳಿಗ್ಗೆ 2 ಗಂಟೆ ಸುಮಾರಿಗೆ ಆಗಮಿಸಿದಾಗ, ವಿನೋದ್ ರಸ್ತೆಯಲ್ಲಿರುವ ಸ್ಪೀಡ್ ಬ್ರೇಕರ್ ನೋಡದೆ ಹಾಗೆ ಬೈಕ್ ಚಲಾಯಿಸಿದ್ದಾನೆ. ಬೈಕ್ ಅಪಘಾತಕ್ಕೆ ಈಡಾಗಿದ್ದು, ವಿನೋದ್ ಮತ್ತು ನಾಗರಾಜ್ ಅವರ ಮಧ್ಯ ಇರುವ ಸೌಮ್ಯಾ ಅವರ ಮೃತ ದೇಹವು ರಸ್ತೆಯ ಮೇಲೆ ಬಿದ್ದಿತು. ದಾರಿಹೋಕರು ಮತ್ತು ಗಸ್ತು ತಿರುಗುತ್ತಿದ್ದ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ ಈ ಇಬ್ಬರನ್ನು ಮತ್ತು ಆ ಮೃತ ದೇಹವನ್ನು ರಾಮನಗರದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಅಪಘಾತದ ಬಗ್ಗೆ ಅರಿವಿಲ್ಲದ ರಘು ಮತ್ತು ದುರ್ಗಾ ಅವರ ಸ್ನೇಹಿತರಿಗಾಗಿ ಚನ್ನಪಟ್ಟಣದ ಬಳಿ ಹಾಗೆ ಕಾಯುತ್ತಾ ನಿಂತಿದ್ದರಂತೆ ಎಂದು ಹೇಳಲಾಗಿದೆ.


ವೈದ್ಯರಿಂದ ಬಹಿರಂಗವಾಯಿತು ಅಸಲಿ ಸತ್ಯ
ಕರ್ತವ್ಯನಿರತ ವೈದ್ಯರು ಸೌಮ್ಯಳ ದೇಹವನ್ನು ಪರೀಕ್ಷಿಸಿದಾಗ ಅವಳು ಎಂಟು ಗಂಟೆಗಳ ಹಿಂದೆ ಮೃತಪಟ್ಟಿದ್ದಾಳೆ ಎಂದು ಪೊಲೀಸರಿಗೆ ತಿಳಿಸಲಾಯಿತು. ಆಗ ಪೊಲೀಸರು ವಿನೋದ್ ಮತ್ತು ನಾಗರಾಜ್ ಅವರನ್ನು ಹಿಡಿದು ವಿಚಾರಣೆ ಮಾಡಿದಾಗ ಆ ದಂಪತಿಗಳು ಇರುವ ಸ್ಥಳವನ್ನು ತಿಳಿದುಕೊಂಡು ಅವರನ್ನು ಬಂಧಿಸಿದರು.


ಇದನ್ನೂ ಓದಿ:  Explained: 22 ನಾಯಿಗಳ ಮಧ್ಯೆ 2 ವರ್ಷ ಕೋಣೆಯಲ್ಲಿ ಬಂಧಿಯಾಗಿದ್ದ ಬಾಲಕ! ಪಾಪಿ ತಂದೆ-ತಾಯಿ ಈ ಶಿಕ್ಷೆ ಕೊಟ್ಟಿದ್ದೇಕೆ?


ಸೌಮ್ಯಾ ಹಣವನ್ನು ಎರವಲು ಪಡೆದಿದ್ದಾಳೆಯೇ ಅಥವಾ ಅದನ್ನು ಕದ್ದಿದ್ದಾಳೆಯೇ ಎಂದು ಪೊಲೀಸರು ಇನ್ನೂ ಕಂಡು ಹಿಡಿಯಬೇಕಾಗಿದೆ. ಆಕೆಯ ಪೋಷಕರು ಅವಳನ್ನು ಹುಡುಕುತ್ತಿರುವಾಗ, ರಘು ಮತ್ತು ದುರ್ಗಾ ಅವರು ಆಕೆಯ ಮೃತ ದೇಹ ತಮ್ಮ ಕೋಣೆಯೊಳಗೆ ಬಿದ್ದಿದ್ದರೂ ಸಹ, ಅವಳು ಎಲ್ಲಿದ್ದಾಳೆಂದು ತಮಗೆ ತಿಳಿದಿಲ್ಲ ಎಂದು ನಟಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

Published by:Ashwini Prabhu
First published: