• Home
  • »
  • News
  • »
  • explained
  • »
  • Explained: ದೀಪಾವಳಿ ಹಬ್ಬದಲ್ಲಿ ಕೋವಿಡ್ ಬಗ್ಗೆ ಇರಲಿ ಎಚ್ಚರ! ಸೋಂಕಿನಿಂದ ರಕ್ಷಿಸಿಕೊಳ್ಳುವುದು ಹೇಗೆ?

Explained: ದೀಪಾವಳಿ ಹಬ್ಬದಲ್ಲಿ ಕೋವಿಡ್ ಬಗ್ಗೆ ಇರಲಿ ಎಚ್ಚರ! ಸೋಂಕಿನಿಂದ ರಕ್ಷಿಸಿಕೊಳ್ಳುವುದು ಹೇಗೆ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪ್ರಸ್ತುತ, ಭಾರತದಲ್ಲಿ ಕೋವಿಡ್ ಪ್ರಕರಣಗಳು ತುಂಬಾ ಕಡಿಮೆ, ಆದರೆ ಈ ನಿರ್ದಿಷ್ಟ ರೂಪಾಂತರವು ಹರಡಿದರೆ ಆ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಅಂತ ಹೇಳುತ್ತಾ ಇದ್ದಾರೆ ತಜ್ಞರು. ಇನ್ನೂ ದೀಪಾವಳಿ ಹಬ್ಬ ಸಹ  ಶುರುವಾಗಲಿದ್ದು, ಎರಡು ವರ್ಷಗಳ ನಂತರ, ಅನೇಕರು ದೀಪಗಳ ಹಬ್ಬವನ್ನು ಪೂರ್ಣ ಉತ್ಸಾಹದಿಂದ ಆಚರಿಸಲು ಸಜ್ಜಾಗಿದ್ದಾರೆ.

ಮುಂದೆ ಓದಿ ...
  • Share this:

ಸುಮಾರು ಎರಡೂವರೆ ವರ್ಷಗಳಿಂದ ಇಡೀ ಜಗತ್ತನ್ನೇ ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಕಾಯಿಲೆ ಎಂದರೆ ಕೋವಿಡ್-19 (COVID-19) ಸಾಂಕ್ರಾಮಿಕ ರೋಗ. ಹೌದು.. ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿ ಶುರುವಾದಾಗಿನಿಂದಲೂ ‘ಇನ್ನೇನು ಮುಗೀತು ವೈರಸ್ (Virus) ಅಟ್ಟಹಾಸ’ ಅಂತ ಎಲ್ಲರೂ ಮಾತಾಡಿದ್ದೆ ಮಾತಾಡಿದ್ದು. ಆದರೆ ಇದರ ಅಟ್ಟಹಾಸ ಮಾತ್ರ ಹಾಗೆಯೇ ಮುಂದುವರೆದಿದೆ. ಕೋವಿಡ್-19 ವೈರಸ್ ನ ಸುಮಾರು ರೂಪಾಂತರಗಳು ಹುಟ್ಟಿಕೊಂಡವು, ಅದರಲ್ಲಿ ಕೆಲವು ಕೋವಿಡ್-19 ಲಸಿಕೆಯ (Vaccine) ಮುಂದೆ ಮಂಕಾದರೆ, ಇನ್ನೂ ಕೆಲವು ರೂಪಾಂತರಗಳು ಇನ್ನೂ ಬೇರೆ ಬೇರೆ ರೀತಿಯ ಲಸಿಕೆಗಳನ್ನು ಕಂಡು ಹಿಡಿಯಲು ಪ್ರೇರೆಪಿಸಿವೆ.


ಕೋವಿಡ್ ಸೋಂಕಿನ ಹೊಸ ರೂಪಾಂತರ
ಮಧ್ಯೆ ಸ್ವಲ್ಪ ದಿನಗಳ ಕಾಲ ಕೋವಿಡ್-19 ಸೋಂಕಿನ ಅಟ್ಟಹಾಸ ಕಡಿಮೆ ಆಗುತ್ತಿದ್ದಂತೆ ಎಲ್ಲಾ ಶಾಲಾ ಕಾಲೇಜುಗಳು ಪುನರಾರಂಭವಾದವು ಮತ್ತು ಬಹುತೇಕರು ಕೋವಿಡ್ ಲಸಿಕೆಯ ಎರಡು ಡೋಸ್ ಗಳನ್ನು ಹಾಕಿಸಿಕೊಂಡರು. ಹೀಗಾಗಿ ಕೋವಿಡ್ ಪರಿಣಾಮ ಅಷ್ಟಾಗಿ ಕಂಡು ಬಂದಿರಲಿಲ್ಲ. ಆದರೆ ಮತ್ತೆ ಕೋವಿಡ್ ಸೋಂಕಿನ ಹೊಸ ರೂಪಾಂತರಗಳಾದ ಓಮಿಕ್ರಾನ್ ಬಿಎಫ್.7 ಪ್ರಕರಣಗಳು ಈಗಾಗಲೇ ಭಾರತದಲ್ಲಿ ಪತ್ತೆಯಾಗಿದೆ.


ಈ ಉಪ ರೂಪಾಂತರವು ಇತರ ಓಮಿಕ್ರಾನ್ ರೂಪಾಂತರಗಳಿಗಿಂತ ಹೆಚ್ಚು ಸಾಂಕ್ರಾಮಿಕವಾಗಿದೆ, ಇದು ಆರಂಭದಲ್ಲಿ ಸಾಕಷ್ಟು ಸಾಂಕ್ರಾಮಿಕವಾಗಿತ್ತು. ಪ್ರಸ್ತುತ, ಭಾರತದಲ್ಲಿ ಕೋವಿಡ್ ಪ್ರಕರಣಗಳು ತುಂಬಾ ಕಡಿಮೆ, ಆದರೆ ಈ ನಿರ್ದಿಷ್ಟ ರೂಪಾಂತರವು ಹರಡಿದರೆ ಆ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಅಂತ ಹೇಳುತ್ತಾ ಇದ್ದಾರೆ ತಜ್ಞರು. ಇನ್ನೂ ದೀಪಾವಳಿ ಹಬ್ಬ ಸಹ  ಶುರುವಾಗಲಿದ್ದು, ಎರಡು ವರ್ಷಗಳ ನಂತರ, ಅನೇಕರು ದೀಪಗಳ ಹಬ್ಬವನ್ನು ಪೂರ್ಣ ಉತ್ಸಾಹದಿಂದ ಆಚರಿಸಲು ಸಜ್ಜಾಗಿದ್ದಾರೆ. ಆದಾಗ್ಯೂ, ಕೋವಿಡ್ ಸೋಂಕಿನ ಹೊಸ ರೂಪಾಂತರಗಳ ಬಗ್ಗೆ ತಜ್ಞರು ಮುಂಬರುವ ದಿನಗಳಲ್ಲಿ ಸಂಭಾವ್ಯ ಹೊಸ ಕೋವಿಡ್ ಅಲೆಯ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.


'ಓಮಿಕ್ರಾನ್ ಸ್ಪಾನ್' ಎಂದು ಕರೆಯಲ್ಪಡುವ ಹೊಸ ರೂಪಾಂತರವು ತಾಂತ್ರಿಕವಾಗಿ ಬಿಎ.5.1.7 ಮತ್ತು ಬಿಎಫ್ 7 ಹೆಚ್ಚು ಸಾಂಕ್ರಾಮಿಕ ಮತ್ತು ಬೇಗನೆ ಹರಡಬಲ್ಲದು ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ಭಾರತದಲ್ಲಿ ಬಿಎಫ್.7 ರ ಮೊದಲ ಪ್ರಕರಣವನ್ನು ಗುಜರಾತ್ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರವು ಪತ್ತೆ ಹಚ್ಚಿದೆ.


ತಜ್ಞರು ಏನ್ ಎಚ್ಚರಿಕೆ ನೀಡಿದ್ದಾರೆ ನೋಡಿ..
ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆಫ್ ಇಮ್ಮ್ಯೂನೈಜೇಶನ್ (ಎನ್‌ಟಿಎಜಿಐ) ಅಧ್ಯಕ್ಷ ಡಾ.ಎನ್.ಕೆ.ಅರೋರಾ ಅವರು "ಮುಂದಿನ ಎರಡು ಅಥವಾ ಮೂರು ವಾರಗಳು ತುಂಬಾನೇ ನಿರ್ಣಾಯಕವಾಗಿವೆ. ಕೋವಿಡ್-19 ನ ಹೊಸ ರೂಪಾಂತರದ ಪ್ರಕರಣಗಳು ವಿಶ್ವದ ವಿವಿಧ ಭಾಗಗಳಲ್ಲಿ ವರದಿಯಾಗುತ್ತಿವೆ. ನಿಸ್ಸಂಶಯವಾಗಿ, ನಾವು ಅದರಿಂದ ದೂರವಿರಲು ಸಾಧ್ಯವಿಲ್ಲ. ಆದ್ದರಿಂದ, ಈ ಹಬ್ಬಗಳ ಸಂದರ್ಭದಲ್ಲಿ ನಾವು ಜಾಗರೂಕರಾಗಿರಬೇಕು" ಎಂದು ಅವರು ಹೇಳಿದರು.


ಇದನ್ನೂ ಓದಿ: Explained: ದೀಪಾವಳಿ ಬಳಿಕ ಇದ್ಯಾ ಕೋವಿಡ್ ಮಾರಿ ಅಬ್ಬರ? ಭಾರತಕ್ಕೂ ಕಾಲಿಟ್ಟಿದೆ ಡೇಂಜರಸ್ ಓಮಿಕ್ರಾನ್‌ ರೂಪಾಂತರಿ ವೈರಸ್!


ಈ ದೀಪಾವಳಿ ಹಬ್ಬದಲ್ಲಿ ನೀವು ತುಂಬಾನೇ ಜಾಗರೂಕತೆಯಿಂದ ಇರುವುದು ಒಳ್ಳೆಯದು. ಈ ಕೋವಿಡ್-19ರ ಹೊಸ ರೂಪಾಂತರದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಏನೆಲ್ಲಾ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಅಂತ ಇಲ್ಲಿ ತಿಳಿದುಕೊಳ್ಳಿ.


ನಿಮ್ಮ ರೋಗಲಕ್ಷಣಗಳನ್ನು ಮೊದಲು ತಿಳಿದುಕೊಳ್ಳಿ
ಯುಕೆಯ ಜೋ ಕೋವಿಡ್ ಸ್ಟಡಿ ಅಪ್ಲಿಕೇಶನ್ ಪ್ರಕಾರ "ಮೊದಲ ಐದು ರೋಗಲಕ್ಷಣಗಳು" ಎಂದರೆ ಮೂಗು ಸೋರುವುದು, ತಲೆನೋವು, ಸೀನುವುದು, ಗಂಟಲು ನೋವು ಮತ್ತು ನಿರಂತರ ಕೆಮ್ಮು ಸೇರಿವೆ. "ಈಗಾಗಲೇ ಕೋವಿಡ್ ಲಸಿಕೆಯನ್ನು ಪಡೆದವರು ಕಡಿಮೆ ಅವಧಿಯಲ್ಲಿ ಕಡಿಮೆ ರೋಗಲಕ್ಷಣಗಳನ್ನು ವರದಿ ಮಾಡಿದ್ದಾರೆ" ಎಂದು ತಜ್ಞರು ಹೇಳಿದ್ದಾರೆ, ಇದರರ್ಥ ಲಸಿಕೆ ಪಡೆದ ಜನರು "ಕಡಿಮೆ ಗಂಭೀರ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಮತ್ತು ಶೀಘ್ರವಾಗಿ ಗುಣಮುಖರಾಗುತ್ತಿದ್ದಾರೆ".


ವಾಸನೆ ನಷ್ಟ, ಉಸಿರಾಟದ ತೊಂದರೆ ಮತ್ತು ಜ್ವರದಂತಹ ಕೋವಿಡ್ ರೋಗಲಕ್ಷಣಗಳು ಆಗಾಗ್ಗೆ ಕಂಡು ಬರುತ್ತವೆ, ಆದರೆ "ನೀವು ಎರಡು ಲಸಿಕೆ ಡೋಸ್ ಗಳನ್ನು ಪಡೆದಿದ್ದರೆ ಈ ರೋಗ ಲಕ್ಷಣಗಳ ಪರಿಣಾಮ ನಿಮ್ಮ ಮೇಲೆ ಅಷ್ಟಾಗಿ ಕಂಡು ಬರುವುದಿಲ್ಲ" ಎಂದು ಸಂಶೋಧಕರು ಹೇಳಿದರು. ಈ ಕೋವಿಡ್ ರೋಗಲಕ್ಷಣಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು, ಈ ದೀಪಾವಳಿ ಹಬ್ಬದಂದು ನೀವು ಗಮನ ಹರಿಸಬೇಕಾದ ಕೆಲವು ವಿಷಯಗಳು ಇಲ್ಲಿವೆ ನೋಡಿ.


1. ಜಾಸ್ತಿ ಜನ ಸೇರಿರುವ ಕೂಟಗಳಿಗೆ ಮತ್ತು ಮನೆಯ ಪಾರ್ಟಿಗಳಿಂದ ದೂರವಿರಿ
ಕೋವಿಡ್ -19 ಸಾಂಕ್ರಾಮಿಕ ರೋಗವು ನಮ್ಮ ಜೀವನದ ಪದ್ದತಿಯನ್ನೇ ಬದಲಾಯಿಸಿತು ಎಂದು ಹೇಳಬಹುದು, ಇದರಲ್ಲಿ ನಾವು ಹಬ್ಬಗಳನ್ನು ಹೇಗೆ ಆಚರಿಸುತ್ತಿದ್ದೇವೆ ಎಂಬುದನ್ನು ಒಳಗೊಂಡಿದೆ. ಕೋವಿಡ್ ಬರುವ ಮುಂಚೆ ನಮ್ಮಲ್ಲಿ ಹೆಚ್ಚಿನವರು ಹಬ್ಬಕ್ಕೆ ಮನೆಯಲ್ಲಿ ಒಟ್ಟಿಗೆ ಸೇರುತ್ತಿದ್ದೆವು, ಕುಟುಂಬ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆವು ಮತ್ತು ಭವ್ಯವಾದ ಪಾರ್ಟಿಗಳು ಮತ್ತು ಕೂಟಗಳನ್ನು ಆಯೋಜಿಸುತ್ತಿದ್ದೆವು. ಆದರೆ ಕೋವಿಡ್ ನಂತರ ಮತ್ತು ಈಗಲೂ ಸಹ, ವಿಷಯಗಳು ತುಂಬಾನೇ ಬದಲಾಗಿವೆ.


ಇದನ್ನೂ ಓದಿ:  Baby Care: ನಿಮ್ಮ ಮಗು ಚೆನ್ನಾಗಿ ಊಟ ಮಾಡುತ್ತಿಲ್ಲವೇ? ಇಲ್ಲಿದೆ ಸಲಹೆ


ಕೋವಿಡ್ ಇನ್ನೂ ನಮ್ಮ ನಡುವೆಯೇ ಇದೆ, ಜನರಿಗೆ ಸೋಂಕು ತಗುಲಿಸುತ್ತದೆ ಮತ್ತು ಹೆಚ್ಚಿನ ಅಪಾಯದ ವರ್ಗಕ್ಕೆ ಸೇರುವವರಿಗೆ ದೊಡ್ಡ ಅಪಾಯವನ್ನು ಒಡ್ಡುತ್ತದೆ. ಹಬ್ಬದ ದಿನ ಆಚರಣೆ ಮುಖ್ಯವಾಗಿದ್ದರೂ ಸಹ ನೀವು ದೊಡ್ಡ ಒಳಾಂಗಣ ಕೂಟಗಳನ್ನು ಆಯೋಜಿಸುವುದನ್ನು ಅಥವಾ ಭಾಗವಹಿಸುವುದನ್ನು ತಪ್ಪಿಸಿಕೊಂಡರೆ ಒಳ್ಳೆಯದು. ನಿಮಗೆ ಈಗಾಗಲೇ ಶೀತ, ಜ್ವರ ಅಥವಾ ಕೋವಿಡ್ ಗೆ ಸಂಬಂಧಿಸಿದ ರೋಗಲಕ್ಷಣಗಳಿದ್ದರೆ ನೀವು ಬೇರೆಯವರೊಂದಿಗೆ ಅಂತರವನ್ನು ಕಾಯ್ದುಕೊಳ್ಳುವುದು ಒಳ್ಳೆಯದು.


2. ಮಾಸ್ಕ್ ಧರಿಸಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ
ಮನೆಯಿಂದ ಎಲ್ಲೆ ಹೊರಗೆ ಹೋದರೂ ಮಾಸ್ಕ್ ಧರಿಸುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಇನ್ನೂ ಕೋವಿಡ್-19 ನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಇರುವ ಎರಡು ಅತ್ಯುತ್ತಮ ಮಾರ್ಗಗಳಾಗಿವೆ ಎಂದು ಹೇಳಬಹುದು. ಉತ್ತಮ ಗುಣಮಟ್ಟದ ಫೇಸ್ ಮಾಸ್ಕ್ ಗಳು ಜ್ವರದಂತಹ ರೋಗಲಕ್ಷಣಗಳಿಂದ ನಿಮ್ಮನ್ನು ರಕ್ಷಿಸಬಹುದು.


3. ಶೀತ, ಫ್ಲೂ ರೋಗಲಕ್ಷಣಗಳನ್ನು ಹೊಂದಿರುವವರಿಂದ ಸ್ವಲ್ಪ ದೂರವಿರಿ
ಈಗಾಗಲೇ ನಮಗೆ ತಿಳಿದಿರುವಂತೆ, ಎಸ್ಎಆರ್-ಕೋವ್-2 ವೈರಸ್ ಹೆಚ್ಚು ಸಾಂಕ್ರಾಮಿಕ, ಬೇಗನೆ ಹರಡಬಲ್ಲ ವೈರಸ್ ಆಗಿದ್ದು, ಇದು ಮೂಗು ಅಥವಾ ಬಾಯಿಯಿಂದ ಹೊರ ಬೀಳುವ ಸಣ್ಣ ಹನಿಗಳ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಮಾತನಾಡುವಾಗ, ಸೀನುವಾಗ, ಕೆಮ್ಮುವಾಗ ಅಥವಾ ನಗುವಾಗ ಸ್ವಲ್ಪ ಹುಷಾರಾಗಿರುವುದು ಒಳ್ಳೆಯದು.


ಶೀತ, ಫ್ಲೂ ತರಹದ ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯನ್ನು ನೀವು ಗಮನಿಸಿದರೆ, ಅವರಿಂದ ಸ್ವಲ್ಪ ದೂರವಿರುವುದು ಒಳ್ಳೆಯದು. ಎಂದರೆ ಅವರಿಂದ ಸ್ವಲ್ಪ ಅಂತರವನ್ನು ಕಾಪಾಡಿಕೊಳ್ಳಿ. ಮತ್ತೆ ನಿಮಗೆ ಚೆನ್ನಾಗಿ ಹೊಂದಿಕೊಳ್ಳುವ ಮಾಸ್ಕ್ ಅನ್ನು ಸಹ ಧರಿಸುವುದನ್ನು ಮರೆಯಬೇಡಿ.


4. ಕೈಗಳನ್ನು ತೊಳೆಯುವ ಅಥವಾ ಸ್ಯಾನಿಟೈಸ್ ಮಾಡುವ ಮೊದಲು ನಿಮ್ಮ ಮುಖವನ್ನು ಮುಟ್ಟಿಕೊಳ್ಳಬೇಡಿ
ಹೆಚ್ಚಿನ ಕೀಟಾಣುಗಳು ಮತ್ತು ವೈರಸ್ ಗಳು ನಮ್ಮ ದೇಹಕ್ಕೆ ನಮ್ಮ ಬಾಯಿ, ಕಣ್ಣುಗಳು ಮತ್ತು ಮೂಗಿನ ಮೂಲಕ ಹೋಗುತ್ತವೆ. ಅದಕ್ಕಾಗಿಯೇ ನಾವು ಕಲುಷಿತ ಮತ್ತು ಅನೈರ್ಮಲ್ಯ ಕೈಗಳಿಂದ ನಮ್ಮ ಮುಖಗಳನ್ನು ಮುಟ್ಟಿಕೊಳ್ಳಬಾರದು. ನಾವು ನಮ್ಮ ಕೈಗಳ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ವೈರಸ್ ಗಳಿಗೆ ಸಂಭಾವ್ಯ ಸಂತಾನೋತ್ಪತ್ತಿ ತಾಣವಾಗಬಹುದಾದ ಮೇಲ್ಮೈಗಳನ್ನು ಮುಟ್ಟಿದ ನಂತರ ನಿಮ್ಮ ಕೈಗಳನ್ನು ಸಾಬೂನಿನಿಂದ ತೊಳೆಯಿರಿ ಅಥವಾ ಸೋಂಕುರಹಿತಗೊಳಿಸಿ.


5. ರೋಗಲಕ್ಷಣಗಳು ಜಾಸ್ತಿಯಾದರೆ, ನಿಮ್ಮನ್ನು ನೀವು ಪ್ರತ್ಯೇಕಿಸಿಕೊಳ್ಳಿ
ಫ್ಲೂ ತರಹದ ಯಾವುದೇ ರೋಗಲಕ್ಷಣಗಳ ಸಂದರ್ಭದಲ್ಲಿ ನಿಮ್ಮನ್ನು ನೀವು ಪ್ರತ್ಯೇಕಿಸಿಕೊಳ್ಳುವುದು ಅತ್ಯಂತ ನಿರ್ಣಾಯಕವಾಗಿದೆ. ನಿಮಗೆ ಶೀತ, ಜ್ವರ ಅಥವಾ ಕೋವಿಡ್ ಇದ್ದರೂ, ಹೊರಗೆ ಹೋಗಿ ಜನರೊಂದಿಗೆ ಬೆರೆಯುವುದು ಅವರನ್ನು ಸೋಂಕಿನ ಅಪಾಯಕ್ಕೆ ತಳ್ಳುತ್ತದೆ.


ಇದನ್ನೂ ಓದಿ:  Explained: ಮಕ್ಕಳಿಗೆ ಪಾಠದೊಂದಿಗೆ ಆಟವೂ ಇರಬೇಕಾ? ಆರು ವರ್ಷದೊಳಗಿನ ಮಕ್ಕಳ ಶಿಕ್ಷಣ ಹೇಗಿರಬೇಕು?


ಕೋವಿಡ್ ಲಸಿಕೆಗಳು ಏಕೆ ಮುಖ್ಯ?
ನಿಮ್ಮ ಕೋವಿಡ್ ಲಸಿಕೆಗಳು ಅಥವಾ ಬೂಸ್ಟರ್ ಶಾಟ್ ಅನ್ನು ಪಡೆಯುವುದರ ಜೊತೆಗೆ, ನೀವು ನಿಮ್ಮ ಫ್ಲೂ ಲಸಿಕೆಗಳನ್ನು ಸಹ ಪಡೆಯುವುದು ಒಳ್ಳೆಯದು. ಉಸಿರಾಟದ ಸೋಂಕುಗಳು ಹೆಚ್ಚು ಸಾಂಕ್ರಾಮಿಕವಾಗಿರುತ್ತವೆ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಬೇಗನೆ ಹರಡಬಹುದು. ಆದ್ದರಿಂದ ಎಸ್ಎಆರ್-ಕೋವ್-2 ಮತ್ತು ಇನ್ಫ್ಲುಯೆನ್ಸಾ ವೈರಸ್ ವಿರುದ್ಧ ಸಹ ಲಸಿಕೆ ಪಡೆಯುವುದು ಉತ್ತಮ.

Published by:Ashwini Prabhu
First published: