Ganesh Festival: ಮನೆಯಲ್ಲಿ ಗಣೇಶನ ಪೂಜಿಸ್ತೀರಾ? ರೋಡಲ್ಲಿ ಗಣಪನ ಕೂರಿಸ್ತೀರಾ? ಹಾಗಿದ್ರೆ ಗೈಡ್‌ಲೈನ್ಸ್‌ ಬಗ್ಗೆ ತಿಳ್ಕೊಳ್ಳಿ

ಗಣೇಶೋತ್ಸವದ ಕುರಿತಂತೆ ಸರ್ಕಾರ ಗೈಡ್‌ಲೈನ್ ರಿಲೀಸ್ ಮಾಡಿದೆ. ಮತ್ತೊಂದೆಡೆ ಬಿಬಿಎಂಪಿ ಕೂಡ ರೂಲ್ಸ್‌ಗಳನ್ನು ನಿಗದಿಪಡಿಸಿದೆ. ಈ ರೂಲ್ಸ್ ಫಾಲೋ ಮಾಡಿ, ಮನೆ ಹಾಗೂ ಸಾರ್ವಜನಿಕವಾಗಿ ಗಣಪತಿ ಕೂರಿಸಬಹುದು. ಮತ್ತೇಕೆ ತಡ, ಈ ರೂಲ್ಸ್‌ನಲ್ಲಿ ಏನೇನಿದೆ ಅಂತ ತಿಳ್ಕೊಳ್ಳಿ, ಫಾಲೋ ಮಾಡಿ, ಗಣೇಶನ ಹಬ್ಬ ಮಾಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಗೌರಿ ಗಣೇಶ ಹಬ್ಬಕ್ಕೆ (Gowri Ganesh Festival) ದಿನಗಣನೆ ಆರಂಭವಾಗಿದೆ. ಇದೇ ತಿಂಗಳು 30, 31ಕ್ಕೆ ಗೌರಿ ಗಣೇಶ ಮನೆ ಮನೆಗೆ ಬರಲಿದ್ದಾರೆ. ಕರೋನಾ (Corona) ಅಬ್ಬರದಿಂದ ಕಳೆಗುಂದಿದ್ದ ಹಬ್ಬಕ್ಕೆ ಇದೀಗ ಮತ್ತೆ ಸಂಭ್ರಮ, ಅದ್ಧೂರಿತನ ತುಂಬಿದೆ. ಈ ಬಾರಿ ಬೆಂಗಳೂರಲ್ಲಿ (Bengaluru) ಅದ್ಧೂರಿ ಗಣೇಶೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನು ಗಣೇಶೋತ್ಸವದ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ (BBMP) ಗೈಡ್‌ಲೈನ್ ರಿಲೀಸ್ (Guideline Release) ಮಾಡಲಾಗಿದೆ. ಗಣೇಶ ಪ್ರತಿಷ್ಠಾಪನೆಗೆ ಅಗತ್ಯವಿರುವ ಸ್ಥಳ, ಪೆಂಡಾಲ್, ವಿದ್ಯುತ್‌ ಸಂಪರ್ಕ ಮುಂತಾದ ಪರವಾನಿಗೆಗಳನ್ನು ನೀಡಲು ಕಂದಾಯ, ಲೋಕೋಪಯೋಗಿ, ಇಂಧನ, ಅಗ್ನಿಶಾಮಕ ಮತ್ತು ಪೋಲಿಸ್ ಇಲಾಖೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸಂಯೋಜಿತವಾಗಿದೆ. ಗಣೇಶ ವಿಗ್ರಹ ಸ್ಥಾಪನೆಗೆ ಅಗತ್ಯವಿರುವ ಪರವಾನಗಿಯನ್ನು ಏಕಗವಾಕ್ಷಿ ಅಡಿಯಲ್ಲಿ ನೀಡಲು ಸೂಕ್ತ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ‌.

ಗಣೇಶ ಕೂರಿಸಲು ಅನುಮತಿ ಅಗತ್ಯ

ಗಣೇಶೋತ್ಸವದ ಕುರಿತಂತೆ ಸರ್ಕಾರ ಗೈಡ್‌ಲೈನ್ ರಿಲೀಸ್ ಮಾಡಿದೆ. ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಪ್ರತಿ ವಾರ್ಡ್‌ಗಳ ಮಟ್ಟದಲ್ಲಿ ಸಂಬಂಧಿಸಿದ ವಿವಿಧ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡಂತೆ ಏಕ ಗವಾಕ್ಷಿ ವ್ಯವಸ್ಥೆಯನ್ನು ಸ್ಥಾಪಿಸಬೇಕು. ಕಾರ್ಯಕ್ರಮದ ಆಯೋಜಕರು ನಿಗದಿತ ನಮೂನೆಯಲ್ಲಿ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಹಾಗೂ ಆಯೋಜಕರು ಸಲ್ಲಿಸುವ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳು ಜಂಟಿ ತಪಾಸಣೆ ಮಾಡಿ ಮೂರು ದಿನಗಳೊಳಗಾಗಿ ನಿಯಮಾನುಸಾರ ಪರವಾನಿಗೆಯನ್ನು ನೀಡಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ.

ಸರ್ಕಾರ ನೀಡಿದ ಸೂಚನೆಗಳೇನು?

ಪರವಾನಿಗೆ ನೀಡುವ ಮುನ್ನ ಆಯೋಜಕರಿಂದ ಕಾಲಕಾಲಕ್ಕೆ ನ್ಯಾಯಾಲಯದ ನಿರ್ದೇಶನಗಳನ್ನು ಹಾಗೂ ಸರ್ಕಾರದ ವಿವಿಧ ಇಲಾಖೆಗಳಿಂದ ನೀಡಿರುವ ಸೂಚನೆಗಳನ್ನು ಪಾಲಿಸುವ ಬಗ್ಗೆ ಮುಚ್ಚಳಿಕೆಯನ್ನು ಪಡೆಯಬೇಕು ಅಂತ ಸರ್ಕಾರ ಸೂಚಿಸಿದೆ.

ಮಾಲಿನ್ಯ ಉಂಟಾಗದಂತೆ ಕ್ರಮಕೈಗೊಳ್ಳಬೇಕು

ಸಾರ್ವಜನಿಕ ಸುರಕ್ಷತೆ ಹಾಗೂ ಪರಿಸರ ಮಾಲಿನ್ಯ ಉಂಟಾಗದ ರೀತಿ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಆಯೋಜಕರಿಂದ ಖಾತರಿಪಡಿಸಿಕೊಳ್ಳಬೇಕು. ಅಗತ್ಯವಿರುವ ಕಡೆ ಸಿ.ಸಿ.ಕ್ಯಾಮರಾಗಳನ್ನು ಅಳವಡಿಸುವಂತೆ ಆಯೋಜಕರಿಗೆ ಸೂಚಿಸಬೇಕು.

ಇದನ್ನೂ ಓದಿ: Ganesh Chaturthi: ಗಣೇಶನನ್ನು ನೀರಲ್ಲಿ ಮುಳುಗಿಸುವುದೇಕೆ? ಇಲ್ಲಿದೆ ನೋಡಿ ಮಾಹಿತಿ

ಹೈಟೆನ್ಶನ್ ತಂತಿ ಬಳಿ ಹೈಅಲರ್ಟ್ ಆಗಿರಬೇಕು

ವಿಶೇಷವಾಗಿ ಹೈ-ಟೆನ್ಶನ್ ತಂತಿ ಹಾದು ಹೋಗಿರುವ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಗಣೇಶ ಮೂರ್ತಿಯನ್ನು ಸ್ಥಾಪಿಸಲು ಅನುಮತಿ ನಿರ್ಬಂಧಿಸಬೇಕು ಅಂತ ಸೂಚಿಸಲಾಗಿದೆ.

ಕೋಮು ಸೌಹಾರ್ದ ಸಭೆ ನಡೆಸಲು ಸಲಹೆ

ಉತ್ಸವಕ್ಕೆ ಮುಂಚಿತವಾಗಿ ನಾಗರಿಕ ಸಮಿತಿ, ಮೊಹಲ್ಲಾ ಸಮಿತಿ, ಕಾವಲು ಸಮಿತಿ ಮತ್ತಿತರ ಎಲ್ಲಾ ಸಂಘಸಂಸ್ಥೆಗಳ ಮುಖ್ಯಸ್ಥರನ್ನು ಒಳಗೊಂಡಂತೆ ಕೋಮು ಸೌಹಾರ್ದ ಸಭೆಗಳನ್ನು ಆಯೋಜಿಸಲು ಕ್ರಮ ವಹಿಸಬೇಕು ಅಂತ ಸರ್ಕಾರ ಖಡಕ್ ಆಗಿ ಸೂಚನೆ ನೀಡಿದೆ.

ಗಣೇಶೋತ್ಸವಕ್ಕೆ ಬಿಬಿಎಂಪಿಯಿಂದಲೂ ಮಾರ್ಗಸೂಚಿ

ಇನ್ನು ಇತ್ತ ಬೆಂಗಳೂರಿನಲ್ಲಿ ಅದ್ಧೂರಿ ಗಣೇಶೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಗಣೇಶ ಕೂರಿಸಲು, ಗಣೇಶ ವಿಸರ್ಜನೆ ಮಾಡಲು ಬಿಬಿಎಂಪಿ ಮಾರ್ಗಸೂಚಿ ನಿಗದಿಗೊಳಿಸಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕೃತ ಗೈಡ್ ಲೈನ್ಸ್ ಬಿಡುಗಡೆ ಮಾಡಿದ್ದಾರೆ.

ಈ ಬಾರಿಯೂ ಪಿಒಪಿ ಗಣಪನಿಗಿಲ್ಲ ಪೂಜೆ!

ಈ ಬಾರಿಯೂ ಗಣೇಶನ ಮೂರ್ತಿಗಳು ಪರಿಸರ ಸ್ನೇಹಿಯಾಗಿರಬೇಕು ಅಂತ ಬಿಬಿಎಂಪಿ ಹೇಳಿದೆ. ರಾಸಾಯನಿಕ ಬಣ್ಣ, ಥರ್ಮಕೋಲ್, ಪಿಓಪಿ ಗಣೇಶನನ್ನು ಈ ಬಾರಿಯೂ ಬ್ಯಾನ್ ಮಾಡಲಾಗಿದೆ. ನಿಷೇಧಿತ ಗಣೇಶನ ಮೂರ್ತಿ ಬಳಸಿದರೆ ದಂಡ ಹಾಗೂ ಕ್ರಿಮಿನಲ್ ಮೊಕದ್ದಮೆ ಹೂಡಲು ನಿರ್ಧರಿಸಲಾಗಿದೆ. ಗಣೇಶಮೂರ್ತಿ ತಯಾರಿಸುವವರು ಪರಿಸರ ಸ್ನೇಹಿ ಮೂರ್ತಿಯನ್ನು ಮಾತ್ರ ತಯಾರಿಸಿ ಮಾರಾಟ ಮಾಡಬೇಕು ಅಂತ ಹೇಳಲಾಗಿದೆ.

ಮನೆಯಲ್ಲಿ ಕೂರಿಸುವ ಗಣೇಶ ಹೇಗಿರಬೇಕು?

ಮನೆಯಲ್ಲೂ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸಲಹೆ ನೀಡಲಾಗಿದೆ. ಮನೆಯಲ್ಲಿ ಕೂರಿಸುವ ಗಣೇಶನನ್ನು ಮನೆಯಲ್ಲೇ ವಿಸರ್ಜಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು. ಬಕೆಟ್, ಡ್ರಮ್ ಮುಂತಾದವುಗಳಿಗೆ ವಿಸರ್ಜಿಸುವುದಕ್ಕೆ ಸಲಹೆ ನೀಡಲಾಗಿದೆ.

ಗಣೇಶ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ

ಇನ್ನು ದೊಡ್ಡ ಗಾತ್ರದ ಗಣೇಶನ ಮೂರ್ತಿ ವಿಸರ್ಜನೆಯನ್ನು ಪಾಲಿಕೆ‌ ಗುರುತಿಸುವ ಜಾಗ ಅಥವಾ ಕಲ್ಯಾಣಿಯಲ್ಲೇ ಮಾಡುವುದು ಕಡ್ಡಾಯವಾಗಿದೆ. ಗಣೇಶನ ಮೂರ್ತಿ ವಿಸರ್ಜಿಸಲು ಏರ್ಪಡಿಸಲಾಗುವ ಕಲ್ಯಾಣಿ, ಕೆರೆಗಳಲ್ಲಿ ಬಿಬಿಎಂಪಿ ವತಿಯಿಂದಲೇ ನುರಿತ ಈಜುಗಾರರು ಹಾಗೂ NDRF ತಂಡ ನೇಮಕ ಮಾಡಲಾಗಿದೆ.

ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿ ನೇಮಕ

ಈ ಬಾರಿ ಗಣೇಶೋತ್ಸವ ಸುಸೂತ್ರವಾಗಿ ನಡೆಯಲು ಬಿಬಿಎಂಪಿಯಿಂದಲೇ ವಾರ್ಡ್‌ಗೆ ಒಬ್ಬರಂತೆ ನೋಡಲ್ ಅಧಿಕಾರಿಯ ನೇಮಕ ಮಾಡಲಾಗಿದೆ. ಗಣೇಶೋತ್ಸವ ಆಚರಣೆ ವೇಳೆಯಲ್ಲಿ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡುವಂತಿಲ್ಲ ಅಂತ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಬಿಬಿಎಂಪಿಯಿಂದ ತನ್ನ ವ್ಯಾಪ್ತಿಯಲ್ಲಿ 63 ಕೇಂದ್ರಗಳು ಓಪನ್

ಪಾಲಿಕೆಯ 8 ವ್ಯಾಪ್ತಿಯಲ್ಲಿ ಒಟ್ಟು 63 ಸಿಂಗಲ್ ವಿಂಡೋ ಕೇಂದ್ರ ಓಪನ್ ಮಾಡಲಾಗಿದೆ. ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆ ಮಾಡುವವರು ಈ ಕೇಂದ್ರಗಳಿಗೆ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದ್ದು, ಸಾರ್ವಜನಿಕರು ಅರ್ಜಿ ಸಲ್ಲಿಸಿ ಮೂರು ದಿನಗಳ ಒಳಗಾಗಿ ಅರ್ಜಿ ವಿಲೇವಾರಿ ಮಾಡಲಾಗುತ್ತದೆ.

ಗಣೇಶೋತ್ಸವಕ್ಕೆ ಅನುಮತಿ‌ ಕೇಂದ್ರಗಳು ಎಲ್ಲೆಲ್ಲಿವೆ?

ಯಲಹಂಕ ವಲಯದ ಯಲಹಂಕ ಬಿಬಿಎಂಪಿ ಕಚೇರಿ, ಕೊಡಿಗೆಹಳ್ಳಿ ಬಿಬಿಎಂಪಿ ಕಚೇರಿ, ಯಲಹಂಕ ಉಪನಗರ ಕಚೇರಿ, ಬ್ಯಾಟರಾಯನಪುರ ಕಚೇರಿ, ವಿದ್ಯಾರಣ್ಯಪುರ ಕಚೇರಿ, ಮಹದೇವಪುರ ವಲಯದ ಹೊರಮಾವು ಕಚೇರಿ, ಕೆಆರ್ ಪುರ ಕಚೇರಿ, HAL ಏರ್ಪೋರ್ಟ್ ವಾರ್ಡ್ ಕಚೇರಿ, ಹೂಡಿ ಬಿಬಿಎಂಪಿ ವಾರ್ಡ್ ಕಚೇರಿ, ವೈಟ್ ಫೀಲ್ಡ್ ವಾರ್ಡ್ ಕಚೇರಿ, ಮಾರತಹಳ್ಳಿ ವಾರ್ಡ್ ಕಚೇರಿಯಲ್ಲಿ ಅರ್ಜಿ ನೀಡಲಾಗುತ್ತದೆ.

ಇನ್ನು ದಾರಸಹಳ್ಳಿ ವಲಯದ ಶೆಟ್ಟಿಹಳ್ಳಿ ವಾರ್ಡ್ ಕಚೇರಿ, ಟಿ. ದಾಸರಹಳ್ಳಿ ವಾರ್ಡ್ ಕಚೇರಿ, ಪೀಣ್ಯ ಕೈಗಾರಿಕಾ ಕೇಂದ್ರ ವಾರ್ಡ್ ಕಚೇರಿ, ಹೆಗ್ಗನಹಳ್ಳಿ ವಾರ್ಡ್ ಕಚೇರಿ, ಆರ್ ಆರ್ ನಗರ ವಲಯದ ಆರ್ ಆರ್ ನಗರ ವಾರ್ಡ್ ಕಚೇರಿ, ಲಗ್ಗೆರೆ ವಾರ್ಡ್ ಕಚೇರಿ, ಗೊರಗುಂಟೆಪಾಳ್ಯ ವಾರ್ಡ್ ಕಚೇರಿ, ಯಶವಂತಪುರ ವಾರ್ಡ್ ಕಚೇರಿ, ಕೆಂಗೇರಿ ವಾರ್ಡ್ ಕಚೇರಿ, ಹೇರೋಹಳ್ಳಿ ವಾರ್ಡ್ ಕಚೇರಿಯಲ್ಲಿ ಅರ್ಜಿ ನೀಡಲಾಗುತ್ತೆದೆ.

ಇತ್ತ ಪಶ್ಚಿಮ ವಲಯದ ಮಹಾಲಕ್ಷ್ಮಿ ಲೇಔಟ್ ವಾರ್ಡ್ ಕಚೇರಿ, ನಾಗಪುರ ವಾರ್ಡ್ ಕಚೇರಿ, ಮತ್ತಿಕೆರೆ ವಾರ್ಡ್ ಕಚೇರಿ, ಮಲ್ಲೇಶ್ವರ ವಾರ್ಡ್ ಕಚೇರಿ, ರಾಜಾಜಿನಗರ ವಾರ್ಡ್ ಕಚೇರಿ, ಶ್ರೀರಾಮ ಮಂದಿರ ವಾರ್ಡ್ ಕಚೇರಿ, ಗಾಂಧಿನಗರ ವಾರ್ಡ್ ಕಚೇರಿ, ಕಾಟನ್ ಪೇಟೆ ವಾರ್ಡ್ ಕಚೇರಿ, ಜೆಜೆಆರ್ ನಗರ ವಾರ್ಡ್ ಕಚೇರಿ, ಚಾಮರಾಜಪೇಟೆ ವಾರ್ಡ್ ಕಚೇರಿ, ಗೋವಿಂದರಾಜನಗರ ವಾರ್ಡ್ ಕಚೇರಿ, ಚಂದ್ರಾಲೇಔಟ್ ವಾರ್ಡ್ ಕಚೇರಿಯಲ್ಲಿ ಅರ್ಜಿ ನೀಡಲಾಗುತ್ತದೆ.

ಇನ್ನು ದಕ್ಷಿಣ ವಲಯದ ಕೆಂಪೇಗೌಡ ನಗರ ವಾರ್ಡ್ ಕಚೇರಿ, ಹೊಂಬೇಗೌಡ ನಗರ ವಾರ್ಡ್ ಕಚೇರಿ, ವಿಜಯನಗರ ವಾರ್ಡ್ ಕಚೇರಿ, ಗಾಳಿಆಂಜನೇಯ ದೇವಸ್ಥಾನ ವಾರ್ಡ್ ಕಚೇರಿ, ಬಸವನಗುಡಿ ವಾರ್ಡ್ ಕಚೇರಿ, ಗಿರಿನಗರ ವಾರ್ಡ್ ಕಚೇರಿ, ಪದ್ಮನಾಭನಗರ ವಾರ್ಡ್ ಕಚೇರಿ, ಬನಶಂಕರಿ ವಾರ್ಡ್ ಕಚೇರಿ, ಬಿಟಿಎಂ ಲೇಔಟ್ ವಾರ್ಡ್ ಕಚೇರಿ, ಕೋರಮಂಗಲ ವಾರ್ಡ್ ಕಚೇರಿ, ಜಯನಗರ ವಾರ್ಡ್ ಕಚೇರಿ ಹಾಗೂ ಜೆಪಿನಗರ ವಾರ್ಡ್ ಕಚೇರಿಯಲ್ಲಿ ಮಾಹಿತಿ ಪಡೆಯಬಹುದು.

ಇನ್ನುಳಿದಂತೆ ಪೂರ್ವ ವಲಯದ ಹೆಬ್ಬಾಳ ವಾರ್ಡ್ ಕಚೇರಿ, ಜೆಸಿ ನಗರ ವಾರ್ಡ್ ಕಚೇರಿ, ಕೆಜೆ ಹಳ್ಳಿ ವಾರ್ಡ್ ಕಚೇರಿ, ಪುಲಿಕೇಶಿ ನಗರ ವಾರ್ಡ್ ಕಚೇರಿ, ಹೆಚ್ ಬಿಆರ್ ಲೇಔಟ್ ವಾರ್ಡ್ ಕಚೇರಿ, ಮಾರುತಿ ಸೇವಾನಗರ ವಾರ್ಡ್ ಕಚೇರಿ, ಜೀವನಭೀಮ ನಗರ ವಾರ್ಡ್ ಕಚೇರಿ, ಶಿವಾಜಿನಗರ ವಾರ್ಡ್ ಕಚೇರಿ, ದೊಮ್ಮಲೂರು ವಾರ್ಡ್ ಕಚೇರಿ, ಶಾಂತಿ ನಗರ ವಾರ್ಡ್ ಕಚೇರಿ, ಸಿವಿ ರಾಮನ್ ನಗರ ವಾರ್ಡ್ ಕಚೇರಿ, ವಸಂತ ನಗರ ವಾರ್ಡ್ ಕಚೇರಿಯಲ್ಲೂ ಅರ್ಜಿ ಲಭ್ಯವಿದೆ.

ಅತ್ತ ಬೊಮ್ಮನಹಳ್ಳಿ ವಲಯದ ಅರೆಕೆರೆ ವಾರ್ಡ್ ಕಚೇರಿ, ಹೆಚ್‌ಎಸ್‌ಆರ್ ವಾರ್ಡ್ ಕಚೇರಿ, ಬೇಗೂರು ವಾರ್ಡ್ ಕಚೇರಿ, ಅಂಜನಾಪುರ ವಾರ್ಡ್ ಕಚೇರಿ ಹಾಗೂ ಉತ್ತರ ಹಳ್ಳಿ ವಾರ್ಡ್ ಕಚೇರಿಯಲ್ಲಿ ಕೂಡ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Ganesh Festival: ಗಣೇಶನ ಮೂರ್ತಿಗಳಿಗೆ ಜೀವ ಕೊಡುವವರನ್ನು ನೋಡಿದ್ದೀರಾ? ಇಲ್ಲಿದೆ ನೋಡಿ ಅಂತಿಮ ಸ್ಪರ್ಶದ ಕ್ಷಣ

ತೀವ್ರ ಭದ್ರತೆಯಲ್ಲಿ ಗಣೇಶೋತ್ಸವ

ಇನ್ನು ಬಿಬಿಎಂಪಿ, ಪೊಲೀಸ್ ಇಲಾಖೆ,  ಬೆಸ್ಕಾಂ, ಅಗ್ನಿಶಾಮಕ ದಳ ಸಿಬ್ಬಂದಿಗಳು ಸೇರಿದಂತೆ ಸಮಿತಿ ರಚನೆ ಮಾಡಲಾಗಿದೆ. ಒಟ್ಟು ನಗರದ 63 ಕಡೆಗಳಲ್ಲಿ ಏಕಗವಾಕ್ಷಿ ಸಮಿತಿ ರಚಿಸಿದ್ದು, ಗಣೇಶೋತ್ಸವ ಸುಸೂತ್ರವಾಗಿ ನಡೆಯುವಂತೆ ಪ್ಲಾನ್ ರೂಪಿಸಲಾಗಿದೆ.
Published by:Annappa Achari
First published: