• Home
  • »
  • News
  • »
  • explained
  • »
  • Explained: ತಾಯಿಯ ಗರ್ಭದಲ್ಲಿರುವಾಗಲೇ ರುಚಿ, ವಾಸನೆ ಗ್ರಹಿಸುತ್ತೆ ಶಿಶು: ಹೇಗೆ ಅಂತೀರಾ ಇಲ್ಲಿದೆ ವಿವರ

Explained: ತಾಯಿಯ ಗರ್ಭದಲ್ಲಿರುವಾಗಲೇ ರುಚಿ, ವಾಸನೆ ಗ್ರಹಿಸುತ್ತೆ ಶಿಶು: ಹೇಗೆ ಅಂತೀರಾ ಇಲ್ಲಿದೆ ವಿವರ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಶಿಶುಗಳು ತಾಯಿಯ ಗರ್ಭದಲ್ಲಿರುವಾಗಲೇ ತಮ್ಮ ಮುಖಭಾವಗಳನ್ನು ಗಮನಿಸುವ ಮೂಲಕ ವಿಭಿನ್ನ ವಾಸನೆಗಳು ಮತ್ತು ಅಭಿರುಚಿಗಳಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತವೆ ಎಂಬುದಕ್ಕೆ ವಿಜ್ಞಾನಿಗಳು ಮೊದಲ ನೇರ ಪುರಾವೆಯನ್ನು ಕಂಡು ಹಿಡಿದಿದ್ದಾರೆ.

  • Share this:

ಸಾಮಾನ್ಯವಾಗಿ ನಾವೆಲ್ಲಾ ಈ ನವಜಾತ ಶಿಶುಗಳು (Baby) ಬೆಳೆದು ಎರಡು ಮೂರು ವರ್ಷದವರಾಗುವವರೆಗೆ ಅವುಗಳಿಗೆ ಈ ರುಚಿ ಮತ್ತು ವಾಸನೆ ಎಲ್ಲಾ ಗೊತ್ತಾಗುವುದಿಲ್ಲ, ನಂತರ ನಿಧಾನವಾಗಿ ಗೊತ್ತಾಗಲು ಶುರುವಾಗುತ್ತದೆ ಅಂತ ಅಂದು ಕೊಂಡಿದ್ದೇವೆ. ಆದರೆ ಇಲ್ಲಿ ಸಂಶೋಧಕರು ಹೇಳುವ ಮಾತು ಕೇಳಿದರೆ ನಿಮಗೆ ಆಶ್ಚರ್ಯವಾಗುವುದಂತೂ ಗ್ಯಾರೆಂಟಿ. ಹೌದು.. ಸಂಶೋಧಕರು (Researchers) ಬೇರೆನೆ ಹೇಳುತ್ತಿದ್ದಾರೆ ನೋಡಿ. ಶಿಶುಗಳು ತಾಯಿಯ ಗರ್ಭದಲ್ಲಿರುವಾಗಲೇ (Womb) ತಮ್ಮ ಮುಖಭಾವಗಳನ್ನು ಗಮನಿಸುವ ಮೂಲಕ ವಿಭಿನ್ನ ವಾಸನೆಗಳು ಮತ್ತು ಅಭಿರುಚಿಗಳಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತವೆ ಎಂಬುದಕ್ಕೆ ವಿಜ್ಞಾನಿಗಳು ಮೊದಲ ನೇರ ಪುರಾವೆಯನ್ನು (Proof) ಕಂಡು ಹಿಡಿದಿದ್ದಾರೆ.


ಏನು ಹೇಳುತ್ತದೆ ಈ ಅಧ್ಯಯನ ನೋಡಿ..
ಡರ್ಹಾಮ್ ವಿಶ್ವವಿದ್ಯಾಲಯದ ಭ್ರೂಣ ಮತ್ತು ನವಜಾತ ಶಿಶು ಸಂಶೋಧನಾ ಪ್ರಯೋಗಾಲಯ, ಯುಕೆ ನೇತೃತ್ವದ ಅಧ್ಯಯನ ತಂಡವು, 100 ಗರ್ಭಿಣಿಯರ 4ಡಿ ಅಲ್ಟ್ರಾಸೌಂಡ್ ಸ್ಕ್ಯಾನ್ ಗಳನ್ನು ತೆಗೆದುಕೊಂಡಿದ್ದು, ತಮ್ಮ ತಾಯಂದಿರು ತಿನ್ನುವ ಆಹಾರದಿಂದ ರುಚಿಗೆ ಒಡ್ಡಿಕೊಂಡ ನಂತರ ತಮ್ಮ ಹುಟ್ಟಲಿರುವ ಶಿಶುಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂದು ನೋಡುವುದಕ್ಕೆ ಇವುಗಳನ್ನು ಬಳಸಿಕೊಂಡಿದೆ ಎಂದು ಹೇಳಲಾಗಿದೆ.


ತಾಯಂದಿರು ರುಚಿಗಳನ್ನು ಸೇವಿಸಿದ ಸ್ವಲ್ಪ ಸಮಯದ ನಂತರ ಕ್ಯಾರೆಟ್ ಅಥವಾ ಎಲೆಕೋಸು ಪರಿಮಳಗಳಿಗೆ ಭ್ರೂಣಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂದು ಸಂಶೋಧಕರು ನೋಡಿದರು. ಕ್ಯಾರೆಟ್ ಗೆ ಒಡ್ಡಲ್ಪಟ್ಟ ಭ್ರೂಣಗಳು ಹೆಚ್ಚು "ನಗು ಮುಖ" ಪ್ರತಿಕ್ರಿಯೆಗಳನ್ನು ತೋರಿಸಿದರೆ, ಎಲೆಕೋಸಿಗೆ ಒಡ್ಡಿಕೊಂಡವರು ಹೆಚ್ಚು "ಅಳು ಮುಖ" ಪ್ರತಿಕ್ರಿಯೆಗಳನ್ನು ತೋರಿಸಿದರು. ಈ ಆವಿಷ್ಕಾರಗಳು ಮಾನವನ ರುಚಿ ಮತ್ತು ವಾಸನೆ ಗ್ರಹಿಕೆಗಳ ಅಭಿವೃದ್ಧಿಯ ಬಗ್ಗೆ ನಮ್ಮ ತಿಳುವಳಿಕೆಯನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ: Frogs: ಕಪ್ಪೆಗಳ ಸಾವಿನಿಂದ ಮನುಷ್ಯನ ಜೀವಕ್ಕೂ ಕುತ್ತು ಬರುತ್ತಿದೆಯಂತೆ! ತಜ್ಞರು ಕೊಟ್ಟಿದ್ದಾರೆ ಶಾಕಿಂಗ್ ನ್ಯೂಸ್


ಗರ್ಭಿಣಿಯರು ಏನು ತಿನ್ನುತ್ತಾರೆ ಎಂಬುದು ಜನನದ ನಂತರ ಶಿಶುಗಳ ರುಚಿಯ ಆದ್ಯತೆಗಳ ಮೇಲೆ ಪ್ರಭಾವ ಬೀರಬಹುದು ಮತ್ತು ಆರೋಗ್ಯಕರ ಆಹಾರ ಪದ್ಧತಿಗಳನ್ನು ಸ್ಥಾಪಿಸುವಲ್ಲಿ ಸಂಭಾವ್ಯ ಪರಿಣಾಮಗಳನ್ನು ಬೀರುತ್ತದೆ ಎಂದು ಸಂಶೋಧಕರು ನಂಬಿದ್ದಾರೆ. ಸೈಕಲಾಜಿಕಲ್ ಸೈನ್ಸ್ ಜರ್ನಲ್ ನಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ. ರುಚಿ ಮತ್ತು ವಾಸನೆಯ ಸಂಯೋಜನೆಯ ಮೂಲಕ ಮಾನವರು ಪರಿಮಳವನ್ನು ಅನುಭವಿಸುತ್ತಾರೆ. ಭ್ರೂಣಗಳಲ್ಲಿ ಗರ್ಭದಲ್ಲಿರುವ ಆಮ್ನಿಯೋಟಿಕ್ ದ್ರವವನ್ನು ಉಸಿರಾಡುವ ಮೂಲಕ ಮತ್ತು ನುಂಗುವ ಮೂಲಕ ಇದು ಸಂಭವಿಸಬಹುದು ಎಂದು ಭಾವಿಸಲಾಗಿದೆ.


ಶಿಶುಗಳ ಜನನದ ಮೊದಲೇ ಪ್ರತಿಕ್ರಿಯೆಗಳನ್ನು ಗಮನಿಸಿದ ಅಧ್ಯಯನ
ಡರ್ಹಾಮ್ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಭ್ರೂಣ ಮತ್ತು ನವಜಾತ ಶಿಶು ಸಂಶೋಧನಾ ಪ್ರಯೋಗಾಲಯದಲ್ಲಿ ಸ್ನಾತಕೋತ್ತರ ಸಂಶೋಧಕರಾಗಿರುವ ಪ್ರಮುಖ ಸಂಶೋಧಕ ಬೆಯ್ಜಾ ಉಸ್ತೂನ್ ಅವರು "ಹಲವಾರು ಅಧ್ಯಯನಗಳು ಶಿಶುಗಳು ಗರ್ಭದಲ್ಲಿ ರುಚಿ ನೋಡಬಹುದು ಮತ್ತು ವಾಸನೆ ಗ್ರಹಿಸಬಹುದು ಎಂದು ಸೂಚಿಸಿವೆ, ಆದರೆ ಅವು ಜನನದ ನಂತರದ ಫಲಿತಾಂಶಗಳನ್ನು ಆಧರಿಸಿವೆ, ಆದರೆ ನಮ್ಮ ಅಧ್ಯಯನವು ಜನನಕ್ಕೆ ಮೊದಲು ಈ ಪ್ರತಿಕ್ರಿಯೆಗಳನ್ನು ನೋಡಿದ ಮೊದಲ ಅಧ್ಯಯನವಾಗಿದೆ.


ಇದರ ಪರಿಣಾಮವಾಗಿ, ಜನನದ ಮೊದಲು ರುಚಿಗಳಿಗೆ ಪದೇ ಪದೇ ಒಡ್ಡಿಕೊಳ್ಳುವುದು ಜನನದ ನಂತರ ಆಹಾರದ ಆದ್ಯತೆಗಳನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ, ಆರೋಗ್ಯಕರ ಆಹಾರದ ಬಗ್ಗೆ ಸಂದೇಶ ಕಳುಹಿಸುವುದು ಮತ್ತು ಹಾಲುಣಿಸುವಾಗ 'ಆಹಾರ-ಗಡಿಬಿಡಿ' ಯನ್ನು ತಪ್ಪಿಸುವ ಸಾಮರ್ಥ್ಯದ ಬಗ್ಗೆ ಯೋಚಿಸುವಾಗ ಇದು ಮುಖ್ಯವಾಗಬಹುದು.


ಸ್ಕ್ಯಾನ್ ಸಮಯದಲ್ಲಿ ಕೇಲ್ ಅಥವಾ ಕ್ಯಾರೆಟ್ ಫ್ಲೇವರ್ ಗಳಿಗೆ ಹುಟ್ಟಲಿರುವ ಶಿಶುಗಳ ಪ್ರತಿಕ್ರಿಯೆಯನ್ನು ನೋಡುವುದು ಮತ್ತು ಆ ಕ್ಷಣಗಳನ್ನು ಅವರ ಪೋಷಕರೊಂದಿಗೆ ಹಂಚಿಕೊಳ್ಳುವುದು ನಿಜವಾಗಿಯೂ ಅದ್ಭುತವಾಗಿತ್ತು" ಎಂದು ಹೇಳುತ್ತಾರೆ.


ಅಧ್ಯಯನ ಹೇಗೆ ನಡೆಯಿತು ನೋಡಿ
ಯುಕೆಯ ಬರ್ಮಿಂಗ್‌ಹ್ಯಾಮ್ ನ ಆಸ್ಟನ್ ವಿಶ್ವವಿದ್ಯಾಲಯ ಮತ್ತು ಫ್ರಾನ್ಸ್ ನ ಬರ್ಗ್ಯಾಂಡಿಯ ನ್ಯಾಷನಲ್ ಸೆಂಟರ್ ಫಾರ್ ಸೈಂಟಿಫಿಕ್ ರಿಸರ್ಚ್ ಯೂನಿವರ್ಸಿಟಿಯ ವಿಜ್ಞಾನಿಗಳನ್ನು ಒಳಗೊಂಡ ಸಂಶೋಧನಾ ತಂಡವು ಗರ್ಭಧಾರಣೆಯ 32 ವಾರಗಳು ಮತ್ತು 36 ವಾರಗಳಲ್ಲಿ 18 ರಿಂದ 40 ವರ್ಷ ವಯಸ್ಸಿನ ತಾಯಂದಿರನ್ನು ಸ್ಕ್ಯಾನ್ ಮಾಡಿ, ಎಲೆಕೋಸು ಮತ್ತು ಕ್ಯಾರೆಟ್ ಫ್ಲೇವರ್ ಗಳಿಗೆ ಭ್ರೂಣದಲ್ಲಿ ಶಿಶುವಿನ ಮುಖದ ಪ್ರತಿಕ್ರಿಯೆಗಳನ್ನು ನೋಡಿದರು.


ಇದನ್ನೂ ಓದಿ: Pregnant Woman: ಇದೇ ಕಾರಣಕ್ಕೆ ಗರ್ಭಿಣಿಯರು ಹೀಲ್ಸ್ ಧರಿಸಬಾರ್ದಂತೆ


ಪ್ರತಿ ಸ್ಕ್ಯಾನ್ ಗೆ 20 ನಿಮಿಷಗಳ ಮೊದಲು ತಾಯಂದಿರಿಗೆ ಸುಮಾರು 400 ಮಿಲಿ ಗ್ರಾಂ ಕ್ಯಾರೆಟ್ ಅಥವಾ 400 ಮಿಲಿ ಗ್ರಾಂ ಎಲೆಕೋಸು ಪೌಡರ್ ಹೊಂದಿರುವ ಒಂದೇ ಕ್ಯಾಪ್ಸೂಲ್ ಅನ್ನು ನೀಡಲಾಯಿತು. ಸ್ಕ್ಯಾನ್ ಮಾಡುವ ಒಂದು ಗಂಟೆ ಮೊದಲು ಯಾವುದೇ ಆಹಾರ ಅಥವಾ ಸುವಾಸನೆಯುಕ್ತ ಪಾನೀಯಗಳನ್ನು ಸೇವಿಸದಂತೆ ಅವರಿಗೆ ತಿಳಿಸಲಾಯಿತು. ಭ್ರೂಣದ ಪ್ರತಿಕ್ರಿಯೆಗಳ ಮೇಲೆ ಪರಿಣಾಮ ಬೀರುವ ಅಂಶಗಳನ್ನು ನಿಯಂತ್ರಿಸಲು ತಾಯಂದಿರು ತಮ್ಮ ಸ್ಕ್ಯಾನ್ ಮಾಡಿದ ದಿನದಂದು ಕ್ಯಾರೆಟ್ ಅಥವಾ ಎಲೆಕೋಸನ್ನು ಹೊಂದಿರುವ ಏನನ್ನೂ ತಿನ್ನಲಿಲ್ಲ ಅಥವಾ ಕುಡಿಯಲಿಲ್ಲ.


ಎರಡೂ ಗುಂಪುಗಳಲ್ಲಿ ಕಂಡು ಬರುವ ಮುಖದ ಪ್ರತಿಕ್ರಿಯೆಗಳು, ಯಾವುದೇ ಪರಿಮಳಕ್ಕೆ ಒಡ್ಡಿಕೊಳ್ಳದ ನಿಯಂತ್ರಣ ಗುಂಪಿನಲ್ಲಿರುವ ಭ್ರೂಣಗಳಿಗೆ ಹೋಲಿಸಿದರೆ, ಕೇವಲ ಸಣ್ಣ ಪ್ರಮಾಣದ ಕ್ಯಾರೆಟ್ ಅಥವಾ ಕೇಲ್ ಫ್ಲೇವರ್ ಗೆ ಒಡ್ಡಿಕೊಳ್ಳುವುದು ಪ್ರತಿಕ್ರಿಯೆಯನ್ನು ಉತ್ತೇಜಿಸಲು ಸಾಕಾಗುತ್ತದೆ ಎಂದು ತೋರಿಸುತ್ತದೆ.


ಅಧ್ಯಯನದ ಬಗ್ಗೆ ಸಂಶೋಧಕರು ಹೇಳುವುದೇನು?
ಡರ್ಹಾಮ್ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಭ್ರೂಣ ಮತ್ತು ನವಜಾತ ಶಿಶು ಸಂಶೋಧನಾ ಪ್ರಯೋಗಾಲಯದ ಮುಖ್ಯಸ್ಥ ಪ್ರೊಫೆಸರ್ ನಾಡ್ಜಾ ರೀಸ್ಲ್ಯಾಂಡ್ ಅವರು ಬೆಯ್ಜಾ ಉಸ್ಟನ್ ಅವರ ಸಂಶೋಧನೆಯ ಮೇಲ್ವಿಚಾರಣೆಯನ್ನು ನೋಡಿಕೊಂಡರು. ಅವರು "ನನ್ನ ಪ್ರಯೋಗಾಲಯದಲ್ಲಿ ನಡೆಸಲಾದ ಹಿಂದಿನ ಸಂಶೋಧನೆಯು 4ಡಿ ಅಲ್ಟ್ರಾಸೌಂಡ್ ಸ್ಕ್ಯಾನ್ ಗಳು ಧೂಮಪಾನದಂತಹ ತಾಯಿಯ ಆರೋಗ್ಯ ನಡವಳಿಕೆಗಳಿಗೆ ಮತ್ತು ಒತ್ತಡ, ಖಿನ್ನತೆ ಮತ್ತು ಆತಂಕ ಸೇರಿದಂತೆ ಅವರ ಮಾನಸಿಕ ಆರೋಗ್ಯಕ್ಕೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಭ್ರೂಣದ ಪ್ರತಿಕ್ರಿಯೆಗಳನ್ನು ಮೇಲ್ವಿಚಾರಣೆ ಮಾಡುವ ಒಂದು ಮಾರ್ಗವಾಗಿತ್ತು" ಎಂದು ಹೇಳಿದರು.


ಇದನ್ನೂ ಓದಿ: Pregnant Woman: ನವರಾತ್ರಿಯ ಸಮಯದಲ್ಲಿ ಉಪವಾಸ ಮಾಡಬೇಕು ಎನ್ನುವ ಗರ್ಭಿಣಿಯರಿಗೆ ಇಲ್ಲಿದೆ ಸಲಹೆ


ಮುಂದುವರೆಯುತ್ತ ಅವರು "ಈ ಇತ್ತೀಚಿನ ಅಧ್ಯಯನವು ತಮ್ಮ ತಾಯಂದಿರು ಸೇವಿಸುವ ಆಹಾರಗಳಿಂದ ವಿಭಿನ್ನ ರುಚಿಗಳು ಮತ್ತು ವಾಸನೆಗಳನ್ನು ಗ್ರಹಿಸುವ ಮತ್ತು ಬೇರ್ಪಡಿಸುವ ಭ್ರೂಣದ ಸಾಮರ್ಥ್ಯಗಳಿಗೆ ಆರಂಭಿಕ ಪುರಾವೆಗಳನ್ನು ಅರ್ಥಮಾಡಿಕೊಳ್ಳಲು ಪ್ರಮುಖ ಪರಿಣಾಮಗಳನ್ನು ಬೀರಬಹುದು" ಎಂದು ಹೇಳಿದರು. ಫ್ರಾನ್ಸ್ ನ ಬರ್ಗ್ಯಾಂಡಿಯ ನ್ಯಾಷನಲ್ ಸೆಂಟರ್ ಫಾರ್ ಸೈಂಟಿಫಿಕ್ ರಿಸರ್ಚ್ ಯೂನಿವರ್ಸಿಟಿಯ ಸಹ ಲೇಖಕ ಮತ್ತು ಪ್ರೊಫೆಸರ್ ಬೆನೊಯಿಸ್ಟ್ ಶಾಲ್ ಅವರು "ಭ್ರೂಣಗಳ ಮುಖದ ಪ್ರತಿಕ್ರಿಯೆಗಳನ್ನು ನೋಡಿದರೆ, ರಾಸಾಯನಿಕ ಪ್ರಚೋದಕಗಳ ಶ್ರೇಣಿಯು ತಾಯಿಯ ಆಹಾರದ ಮೂಲಕ ಭ್ರೂಣದ ಪರಿಸರಕ್ಕೆ ಹಾದು ಹೋಗುತ್ತದೆ ಎಂದು ನಾವು ಊಹಿಸಬಹುದು.


ಇದು ನಮ್ಮ ರುಚಿ ಮತ್ತು ವಾಸನೆ ಗ್ರಹಿಕೆಯ ಅಭಿವೃದ್ಧಿ ಮತ್ತು ಸಂಬಂಧಿತ ಗ್ರಹಿಕೆ ಮತ್ತು ಸ್ಮರಣೆಯ ಬಗ್ಗೆ ನಮ್ಮ ತಿಳುವಳಿಕೆಗೆ ಪ್ರಮುಖ ಪರಿಣಾಮಗಳನ್ನು ಬೀರಬಹುದು" ಎಂದು ಹೇಳಿದ್ದಾರೆ. ಗರ್ಭಾವಸ್ಥೆಯಲ್ಲಿ ರುಚಿ ಮತ್ತು ಆರೋಗ್ಯಕರ ಆಹಾರದ ಪ್ರಾಮುಖ್ಯತೆಯ ಬಗ್ಗೆ ತಾಯಂದಿರಿಗೆ ನೀಡಿದ ಮಾಹಿತಿಗೆ ಅವರ ಆವಿಷ್ಕಾರಗಳು ಸಹಾಯ ಮಾಡಬಹುದು ಎಂದು ಸಂಶೋಧಕರು ಹೇಳುತ್ತಾರೆ.


ಮತ್ತೊಂದು ಹೊಸ ಅಧ್ಯಯನ ಶುರುವಾಗಿದೆ
ಗರ್ಭದಲ್ಲಿ ಅವರು ಅನುಭವಿಸಿದ ಸುವಾಸನೆಗಳ ಪ್ರಭಾವವು ವಿಭಿನ್ನ ಆಹಾರಗಳನ್ನು ಸ್ವೀಕರಿಸುವುದರ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ನೋಡಲು ಅವರು ಈಗ ಜನನದ ನಂತರ ಅದೇ ಶಿಶುಗಳೊಂದಿಗೆ ಅನುಸರಣಾ ಅಧ್ಯಯನವನ್ನು ಪ್ರಾರಂಭಿಸಿದ್ದಾರೆ.


ಆಸ್ಟನ್ ವಿಶ್ವವಿದ್ಯಾಲಯದ ಸಂಶೋಧನಾ ಸಹ ಲೇಖಕ ಮತ್ತು ಪ್ರೊಫೆಸರ್ ಜಾಕಿ ಬ್ಲಿಸೆಟ್ ಅವರು "ಪುನರಾವರ್ತಿತ ಪ್ರಸವ ಪೂರ್ವ ಸುವಾಸನೆಯ ಎಕ್ಸ್ ಪೋಶರ್ ಗಳು ಪ್ರಸವ ನಂತರ ಅನುಭವಿಸಿದ ಸುವಾಸನೆಗಳಿಗೆ ಆದ್ಯತೆಗಳಿಗೆ ಕಾರಣವಾಗಬಹುದು ಎಂದು ವಾದಿಸಬಹುದಾಗಿದೆ" ಎಂದಿದ್ದಾರೆ.


ಇದನ್ನೂ ಓದಿ: Cancer from Mobile: ಕುಂತ್ರೂ, ನಿಂತ್ರೂ ಮಲಗಿದ್ರೂ ಮೊಬೈಲ್ ನೋಡ್ತೀರಾ? ಹಾಗಿದ್ರೆ ಕ್ಯಾನ್ಸರ್‌ ಬರಬಹುದು ಹುಷಾರ್!


"ಭ್ರೂಣಗಳು ಕಾಲಾನಂತರದಲ್ಲಿ ಈ ಸುವಾಸನೆಗಳಿಗೆ ಕಡಿಮೆ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ತೋರಿಸುತ್ತವೆಯೇ ಎಂದು ಪರಿಶೀಲಿಸುವುದು ಮುಂದಿನ ಹಂತವಾಗಿದೆ, ಇದರ ಪರಿಣಾಮವಾಗಿ ಶಿಶುಗಳು ಮೊದಲು ಗರ್ಭದ ಹೊರಗೆ ಅವುಗಳನ್ನು ಸವಿಯುವಾಗ ಆ ಸುವಾಸನೆಗಳನ್ನು ಹೆಚ್ಚು ಸ್ವೀಕರಿಸುತ್ತವೆ" ಎಂದು ಜಾಕಿ ಹೇಳಿದರು.

Published by:Ashwini Prabhu
First published: