• Home
  • »
  • News
  • »
  • explained
  • »
  • Explainer: ಅಯೋಧ್ಯೆಯಲ್ಲಿಯ ಉದ್ಯಾನವನಕ್ಕೆ ಕೊರಿಯಾ ರಾಣಿ ಹೆಸರು ಇಡುತ್ತಿರೋದು ಯಾಕೆ ಗೊತ್ತಾ?

Explainer: ಅಯೋಧ್ಯೆಯಲ್ಲಿಯ ಉದ್ಯಾನವನಕ್ಕೆ ಕೊರಿಯಾ ರಾಣಿ ಹೆಸರು ಇಡುತ್ತಿರೋದು ಯಾಕೆ ಗೊತ್ತಾ?

ಹಿಯೋ ಹ್ವಾಂಗ್ - ಓಕೆ

ಹಿಯೋ ಹ್ವಾಂಗ್ - ಓಕೆ

ಈ ಜಾಗವನ್ನು ನವೆಂಬರ್‌ 4ರಂದು ಉದ್ಘಾಟನೆ ಮಾಡಲಿದ್ದು, ಇದಕ್ಕೆ ಕೊರಿಯಾದ ರಾಣಿ ಹಿಯೋ ಹ್ವಾಂಗ್-ಓಕೆಯ ಹೆಸರಿಡಲಾಗುತ್ತಿದೆ ಎಂದು ತಿಳಿದುಬಂದಿದೆ. ಹೌದು, ಈ ಹಸಿರಿನ ಸೌಂದರ್ಯಕ್ಕೆ ರಾಣಿ ಹಿಯೋ ಹ್ವಾಂಗ್-ಓಕೆ ಸ್ಮಾರಕ (Queen Heo Hwang-ok Memorial Park) ಉದ್ಯಾನವನ ಎಂದು ಕರೆಯಲಾಗುತ್ತದೆ.

ಮುಂದೆ ಓದಿ ...
  • Share this:

ಅಯೋಧ್ಯೆ(Ayodhya)ಯ ಸರಯೂ ನದಿಯ ದಡದಲ್ಲಿ, ರಾಮ್ ಕಥಾ ಪಾರ್ಕ್ ( Ram Katha Park) ಎಂದು ಕರೆಯಲ್ಪಡುವ ಎಕರೆಗಟ್ಟಲೆ ಹಸಿರು ಜಾಗವಿದ್ದು, ಇದನ್ನು ಸುಂದರಗೊಳಿಸಲಾಗುತ್ತಿದೆ. ಈ ಜಾಗವನ್ನು ನವೆಂಬರ್‌ 4ರಂದು ಉದ್ಘಾಟನೆ ಮಾಡಲಿದ್ದು, ಇದಕ್ಕೆ ಕೊರಿಯಾದ ರಾಣಿ ಹಿಯೋ ಹ್ವಾಂಗ್-ಓಕೆಯ ಹೆಸರಿಡಲಾಗುತ್ತಿದೆ ಎಂದು ತಿಳಿದುಬಂದಿದೆ. ಹೌದು, ಈ ಹಸಿರಿನ ಸೌಂದರ್ಯಕ್ಕೆ ರಾಣಿ ಹಿಯೋ ಹ್ವಾಂಗ್-ಓಕೆ ಸ್ಮಾರಕ (Queen Heo Hwang-ok Memorial Park) ಉದ್ಯಾನವನ ಎಂದು ಕರೆಯಲಾಗುತ್ತದೆ. ಯಾಕೆಂದರೆ ಕೊರಿಯಾದ ರಾಣಿ ಭಾರತೀಯ ಬೇರುಗಳನ್ನು ಹೊಂದಿದ್ದಾರೆ.


ಈ ತಿಂಗಳ ಆರಂಭದಲ್ಲಿ, ದೆಹಲಿ ಮೂಲದ ಕೊರಿಯನ್ ಸೆಂಟರ್ ಫಾರ್ ಕಲ್ಚರ್, ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ಸಹಯೋಗದೊಂದಿಗೆ ಕಮಾನಿ ಆಡಿಟೋರಿಯಂನಲ್ಲಿ ರಾಣಿಯ ಕಥೆಯನ್ನು ಚಿತ್ರಿಸುವ ಸಂಗೀತ ಕಾರ್ಯಕ್ರಮ ಮಾಡಿತ್ತು.. ನಟ ಮತ್ತು ನಿರ್ದೇಶಕ ಇಮ್ರಾನ್ ಖಾನ್ ನಿರ್ದೇಶಿಸಿದ ‘ದಿ ಲೆಜೆಂಡ್ ಆಫ್ ಪ್ರಿನ್ಸೆಸ್ ಶ್ರೀರತ್ನ’ ಮ್ಯೂಸಿಕಲ್‌ ಅನ್ನು ಅಯೋಧ್ಯೆಯಲ್ಲಿ ಉದ್ಯಾನವನವನ್ನು ಪೂರ್ಣಗೊಳಿಸಿದ ನೆನಪಿಗಾಗಿ ರಚಿಸಲಾಯಿತು.


ರಾಣಿ ಹಿಯೋ ಹ್ವಾಂಗ್-ಓಕೆ ಯಾರು..?


ರಾಜ ಪದ್ಮಸೇನ್ ಮತ್ತು ಇಂದುಮತಿಯ ಮಗಳಾಗಿ ಅಯೋಧ್ಯೆಯ ರಾಜಕುಮಾರಿ ಸೂರಿರತ್ನ ಜನಿಸಿದರು ಎಂದು ನಂಬಲಾಗಿದೆ. ಈ ಸೂರಿರತ್ನ ಕೊರಿಯಾದಲ್ಲಿ ರಾಜ ಕಿಮ್‌ ಸುರೋರನ್ನು ಮದುವೆಯಾದ ಬಳಿಕ ಆಕೆಗೆ ಹಿಯೋ ಹ್ವಾಂಗ್-ಓಕೆ ಎಂದು ಹೆಸರಿಡಲಾಗಿದೆ ಎಂದು ಹೇಳಲಾಗುತ್ತದೆ. ಈಕೆ ಕೊರಿಯಾದ ರಾಣಿಯಾಗಿದ್ದರು. ಪದ್ಮಸೇನ್ ಪ್ರಾಚೀನ ರಾಜ್ಯವಾದ ಕೌಸಲವನ್ನು ಆಳಿದರು, ಇದು ಇಂದಿನ ಯುಪಿಯಿಂದ ಒಡಿಶಾದವರೆಗೆ ವಿಸ್ತರಿಸಿದೆ.


ಇದನ್ನೂ ಓದಿ:  Explainer: ಝೈಕೋವ್-ಡಿ ವ್ಯಾಕ್ಸಿನ್​​ ಹೇಗೆ ಕಾರ್ಯನಿರ್ವಹಿಸುತ್ತದೆ? ಇದು ಬೇರೆ ಲಸಿಕೆಗಳಿಗಿಂತ ಹೇಗೆ ಭಿನ್ನವಾಗಿದೆ ಗೊತ್ತೇ?

ಆಕೆಯ ಕಥೆಯನ್ನು 13ನೇ ಶತಮಾನದ ದಂತಕಥೆಗಳು, ಜಾನಪದ ಕಥೆಗಳು ಮತ್ತು ಕೊರಿಯಾದ ಮೂರು ರಾಜ್ಯಗಳಾದ ಗೊಗುರಿಯೊ, ಬೇಕ್ಜೆ ಮತ್ತು ಸಿಲ್ಲಾ - ಮತ್ತು ಇತರ ಕೆಲವು ಪ್ರದೇಶಗಳ ಸಂಗ್ರಹವಾದ ಸ್ಯಾಮ್ಗುಕ್ ಯುಸಾ (Samguk Yusa)(ಮೂರು ಸಾಮ್ರಾಜ್ಯಗಳ ಸ್ಮಾರಕ) ನಲ್ಲಿ ವಿವರಿಸಲಾಗಿದೆ.


48 BCಯಲ್ಲಿ, ರಾಜಕುಮಾರಿ, 16 ವರ್ಷದವಳಾಗಿದ್ದಾಗ, ಪ್ರಾಚೀನ ಭೂಮಿ 'ಆಯುತಾ'ದಿಂದ ಕೊರಿಯಾಕ್ಕೆ ಪ್ರಯಾಣ ಬೆಳೆಸಿದರು ಮತ್ತು ಆಗ್ನೇಯ ಕೊರಿಯಾದ ಗ್ಯುಮ್ಗ್ವಾನ್ ಗಯಾದ ಸಂಸ್ಥಾಪಕ ಮತ್ತು ರಾಜ ಕಿಮ್ ಸುರೊರನ್ನು ವಿವಾಹವಾದರು. ಆಕೆ ತನ್ನ ತಂದೆಯಿಂದ ಕಳುಹಿಸಲ್ಪಟ್ಟ ಪರಿವಾರದ ಜೊತೆಗೆ ದೋಣಿಯಲ್ಲಿ ಪ್ರಯಾಣಿಸಿದರು., ಅವಳು ಸುರೋನನ್ನು ಮದುವೆಯಾಗುವ ಕನಸು ಕಂಡಿದ್ದಳು ಎಂದು ಹೇಳಲಾಗುತ್ತದೆ. ಅವರು ಗ್ಯುಮ್ಗ್ವಾನ್ ಗಯಾದ ಮೊದಲ ರಾಣಿಯಾದರು, ಇದು ದಕ್ಷಿಣ ಜಿಯೋನ್ಸಾಂಗ್ ಪ್ರಾಂತ್ಯದ ಆಧುನಿಕ ದಿನದ ಗಿಮ್ಹೇ ನಗರದ ಸುತ್ತಲೂ ಇದೆ ಎಂದು ನಂಬಲಾಗಿದೆ. ಅಲ್ಲದೆ, ಆ ದಂಪತಿಗೆ 12 ಮಕ್ಕಳಿದ್ದರು ಎನ್ನಲಾಗಿದೆ.


ಇದನ್ನೂ ಓದಿ:  Explainer: ಖಾದ್ಯ ಸಸ್ಯಗಳನ್ನು ಲಸಿಕೆಗಳಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿರುವ ವಿಜ್ಞಾನಿಗಳು..!

ದಕ್ಷಿಣ ಕೊರಿಯಾ ರಾಣಿಯ ಪರಂಪರೆ ಏನು..?


6 ಮಿಲಿಯನ್‌ಗೂ ಅಧಿಕ ಇಂದಿನ ಕೊರಿಯನ್ನರು ತಮ್ಮ ವಂಶಾವಳಿಯನ್ನು ಹಿಯೋ ಹ್ವಾಂಗ್-ಓಕೆಗೆ ಗುರುತಿಸುತ್ತಾರೆ. ಅವರು ಗಿಮ್ಹೇ ಕಿಮ್, ಹಿಯೋ (ರಾಣಿ ತಮ್ಮ ಇಬ್ಬರು ಪುತ್ರರಿಗೆ ತನ್ನ ಮೊದಲ ಹೆಸರನ್ನು ಇಡಬೇಕೆಂದು ರಾಜನನ್ನು ಕೇಳಿದ್ದರು) ಮತ್ತು ಲೀ ಮುಂತಾದ ಕುಲಗಳಿಗೆ ಸೇರಿದವರು. ಆಕೆಯ ನೇರ ವಂಶಸ್ಥರಲ್ಲಿ ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ಲೀ ಮ್ಯುಂಗ್-ಬಾಕ್ ಪತ್ನಿ ಕಿಮ್ ಯೂನ್-ಓಕ್ ಸೇರಿದ್ದಾರೆ. ಕಿಂಗ್ ಕಿಮ್ ಸುರೋ ಮತ್ತು ರಾಣಿ ಹಿಯೋ ಹ್ವಾಂಗ್-ಓಕ್ ಅವರು ಕರಕ್ ರಾಜವಂಶವನ್ನು ಹುಟ್ಟುಹಾಕಿದರು. ಅವರ ವಂಶಸ್ಥರು ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ಕಿಮ್ ಡೇ-ಜಂಗ್ ಮತ್ತು ಮಾಜಿ ಪ್ರಧಾನಿ ಕಿಮ್ ಜೊಂಗ್-ಪಿಲ್ ಎಂದೂ ಹೇಳಲಾಗುತ್ತದೆ.


ಈಗ ಕೆಲ ವರ್ಷಗಳಿಂದ, ಅನೇಕ ಕೊರಿಯನ್ನರು ರಾಣಿಯ ಪೂರ್ವಜರ ಮನೆಗೆ ಗೌರವ ಸಲ್ಲಿಸಲು ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ದಕ್ಷಿಣ ಕೊರಿಯಾದ ಗಿಮ್ಹೆಯಲ್ಲಿ, ಕಿಮ್ ಸುರೊ ಮತ್ತು ರಾಣಿ ಹಿಯೋ ಹ್ವಾಂಗ್-ಓಕ್ ಅವರದ್ದು ಎಂದು ನಂಬಲಾದ ಎರಡು ಸಮಾಧಿಗಳನ್ನು ಸ್ಮಾರಕ ಉದ್ಯಾನವನವಾಗಿ ನಿರ್ವಹಿಸಲಾಗಿದೆ. ಸಾಗರ ದೇವತೆಗಳನ್ನು ಶಾಂತಗೊಳಿಸಲು ಭಾರತದಿಂದ ರಾಣಿ ತಂದರು ಎಂದು ನಂಬಲಾದ ಪಗೋಡಾವನ್ನು ಸಮಾಧಿಯ ಪಕ್ಕದಲ್ಲಿ ಇರಿಸಲಾಗಿದೆ. ಸಾಂಸ್ಕೃತಿಕವಾಗಿ, ರಾಣಿಯು ಕೊರಿಯಾದ ಜನಪ್ರಿಯ ಸಂಸ್ಕೃತಿಯ ಭಾಗವಾಗಿದೆ, ಅನೇಕ ನಾಟಕಗಳು ಮತ್ತು ಸಂಗೀತ ಕಾರ್ಯಕ್ರಮಗಳು ಅವಳನ್ನು ಆಧರಿಸಿವೆ.


ಅಯೋಧ್ಯೆಯಲ್ಲಿ ಸ್ಮಾರಕ ಉದ್ಯಾನವನವನ್ನು ಸ್ಥಾಪಿಸಲು ಕಾರಣವೇನು..?


2000ರಲ್ಲಿ, ಭಾರತ ಮತ್ತು ದಕ್ಷಿಣ ಕೊರಿಯಾ ಅಯೋಧ್ಯೆ ಮತ್ತು ಗಿಮ್ಹೇ ಅನ್ನು ಸಹೋದರ ನಗರಗಳಾಗಿ ಅಭಿವೃದ್ಧಿಪಡಿಸುವ ಒಪ್ಪಂದಕ್ಕೆ ಸಹಿ ಹಾಕಿದವು. ಸ್ಮಾರಕ ಸ್ಥಳವನ್ನು 2001ರಲ್ಲಿ ಅನಾವರಣಗೊಳಿಸಲಾಯಿತು. 2016ರಲ್ಲಿ, ಅಸ್ತಿತ್ವದಲ್ಲಿರುವ ಸ್ಮಾರಕವನ್ನು ನವೀಕರಿಸಲು ದಕ್ಷಿಣ ಕೊರಿಯಾದ ನಿಯೋಗದಿಂದ ಪ್ರಸ್ತಾವನೆ ಕಳುಹಿಸಲಾಯಿತು. ನಂತರ, ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಮತ್ತು ದಕ್ಷಿಣ ಕೊರಿಯಾಅಧ್ಯಕ್ಷ ಮೂನ್ ಜೇ-ಇನ್ (South Korean President Moon Jae-in) ಅವರು ಸ್ಮಾರಕವನ್ನು ಅಭಿವೃದ್ಧಿಪಡಿಸುವ ಒಪ್ಪಂದಕ್ಕೆ ಸಹಿ ಹಾಕಿದರು. ದಕ್ಷಿಣ ಕೊರಿಯಾದ ಪ್ರಥಮ ಮಹಿಳೆ ಕಿಮ್ ಜಂಗ್-ಸೂಕ್ 2018ರಲ್ಲಿ ಸೌಂದರ್ಯೀಕರಣ ಕಾಮಗಾರಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.


ಸ್ಮಾರಕವು ಈಗ ರಾಣಿ ಮತ್ತು ರಾಜ ಮಂಟಪಗಳನ್ನು ಒಳಗೊಂಡಿದ್ದು, ಆ ಸ್ಥಳದಲ್ಲಿ ಅವರ ಪ್ರತಿಮೆಗಳು ಮತ್ತು ರಾಜಕುಮಾರಿ ಸೂರಿರತ್ನ ಅವರ ಪ್ರಯಾಣವನ್ನು ಪ್ರತಿನಿಧಿಸಲು ಒಂದು ಕೊಳವಿದೆ. ದಂತಕಥೆಯ ಪ್ರಕಾರ, ರಾಜಕುಮಾರಿಯು ಕೊರಿಯಾಕ್ಕೆ ಚಿನ್ನದ ಮೊಟ್ಟೆಯನ್ನು ತೆಗೆದುಕೊಂಡು ಹೋಗಿದ್ದಳು. ಇದೇ ರೀತಿ ಉದ್ಯಾನವನವು ಗ್ರಾನೈಟ್‌ನಿಂದ ಮಾಡಿದ ಮೊಟ್ಟೆಯನ್ನು ಒಳಗೊಂಡಿದೆ.


ಆಕೆಯ ಭಾರತೀಯ ಸಂಬಂಧವು ಸತ್ಯ ಎಂದು ಸ್ಥಾಪಿತವಾಗಿದೆಯೇ..?


ಈ ಕಥೆಯು ಭಾರತ ಮತ್ತು ದಕ್ಷಿಣ ಕೊರಿಯಾ ನಡುವಿನ ಸಂಬಂಧವನ್ನು ಹೆಚ್ಚಿಸಲು ಸಹಾಯ ಮಾಡಿದೆ. ಆದರೆ ಆಕೆಯ ಭಾರತೀಯ ಮೂಲದ ಬಗ್ಗೆ ಕೆಲವು ಚರ್ಚೆಗಳಿವೆ. ಒಂದೇ ಕಥೆಯ ಹಲವು ಆವೃತ್ತಿಗಳಿವೆ. ಸಮ್ಗುಕ್ ಯುಸಾ ದೂರದ ಆಯುತಾ ಎಂಬ ಹೆಸರಿನ ರಾಣಿಯ ಬಗ್ಗೆ ಮಾತನಾಡುತ್ತಾರೆ ಮತ್ತು ಜನಪ್ರಿಯ ಸಂಸ್ಕೃತಿಯು ಅದನ್ನು ಅಯೋಧ್ಯೆ ಎಂದು ಪರಿಗಣಿಸುತ್ತದೆ. ಆದರೆ, ಯಾವುದೇ ಭಾರತೀಯ ದಾಖಲೆ ಅಥವಾ ಧರ್ಮಗ್ರಂಥಗಳು ರಾಣಿಯ ಬಗ್ಗೆ ಯಾವುದೇ ದಾಖಲೆಯನ್ನು ಹೊಂದಿಲ್ಲ. ಕೆಲವು ಇತಿಹಾಸಕಾರರು ರಾಜಕುಮಾರಿಯು ವಾಸ್ತವವಾಗಿ ಥೈಲ್ಯಾಂಡ್‌ನ ಅಯುತ್ಥಾಯಾ ಸಾಮ್ರಾಜ್ಯದವರು ಎಂದು ನಂಬುತ್ತಾರೆ. ಆದರೆ ಥೈಲ್ಯಾಂಡ್‌ನಲ್ಲಿ ಸಾಮ್ರಾಜ್ಯವು 1350ರಲ್ಲಿ ಪ್ರಾರಂಭವಾಗಿದೆ. ಆದರೆ, ಆ ಸಾಮ್ರಾಜ್ಯ ಸ್ಥಾಪನೆಗೂ ಹಲವು ವರ್ಷಗಳ ಮುನ್ನವೇ ಸ್ಯಾಮ್ಗುಕ್ ಯುಸಾ ಕೃತಿಯನ್ನು ಬರೆಯಲಾಗಿದೆ.

Published by:Mahmadrafik K
First published: