ಅಡಿಕೆ ಬೆಳೆಗಾರರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ಕೆಲ ದಿನಗಳಿಂದ ಓಡಾಡುತ್ತಿದ್ದ ಅಡಿಕೆಗೆ ಭವಿಷ್ಯ (Arecanut Future) ಇಲ್ಲ, ಅಡಿಕೆ ಬ್ಯಾನ್ ಆಗುತ್ತೆ ಎಂಬ ಗುಸುಗುಸು ಪಿಸುಮಾತುಗಳು ಹರಿದಾಡುತ್ತಿದ್ದವು. ಆದ್ರೆ ಈ ಎಲ್ಲ ಆತಂಕಕ್ಕೆ ಪೂರ್ಣವಿರಾಮ ಸಿಕ್ಕಿದೆ. ಮಲೆನಾಡು-ಕರಾವಳಿಯ ಅಡಿಕೆ (Malnad And Coastal Karnataka Farmers) ಬೆಳೆಗಾರರು ಇತ್ತೀಚಿಗೆ ಸರಿಯಾಗಿ ನಿದ್ದೆ ಮಾಡಿಲ್ಲ! ಇದ್ದಕ್ಕೆ ಕಾರಣ ಒಂದೆರಡಲ್ಲ, ಎಲೆಚುಕ್ಕಿ ರೋಗ, ಅಡಿಕೆ ನಿಷೇಧದ (Arecanut Ban) ವದಂತಿ, ವಿದೇಶಿ ಅಡಿಕೆ ಆಮದಿನಿಂದ (Arecanut Price) ದರ ಕುಸಿತ, ಜೊತೆಗೆ ಉತ್ತರ ಕರ್ನಾಟಕದಲ್ಲಿ (Uttara Karnataka) ಹೆಚ್ಚುತ್ತಿರುವ ಬೆಳೆ. ಆದರೆ ಇದಕ್ಕೆಲ್ಲ ಫುಲ್ ಸ್ಟಾಪ್ ಇಡುವಂತಹ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ.
ಅಡಿಕೆ ಕ್ಯಾನ್ಸರ್ ಕಾರಕ (Arecanut Health Issues) ಅಲ್ಲ, ಬದಲಾಗಿ ಅಡಿಕೆಯಲ್ಲಿ ಔಷಧೀಯ ಗುಣ ಇದೆ ಎಂದು ಸಂಶೋಧನಾ ವರದಿ ಬಂದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanedra) ಅಧಿಕೃತವಾಗಿ ತಿಳಿಸಿದ್ದಾರೆ.
ಕೇಂದ್ರದಿಂದ ವೈಜ್ಞಾನಿಕ ತಂಡ
ಕೇಂದ್ರದಿಂದ ವೈಜ್ಞಾನಿಕ ತಂಡ ಎಲೆ ಚುಕ್ಕಿ ರೋಗ ವ್ಯಾಪಕವಾಗಿ ಹರಡಿದೆ. ಈ ರೋಗವನ್ನು ನಿಯಂತ್ರಣ ಮಾಡುವ ಪ್ರಯತ್ನ ನಡೆದಿದೆ. ಅಡಿಕೆ ಬೆಳೆಗಾರರ ನೆಮ್ಮದಿ ಕೆಡಿಸಿದ ಎಲೆಚುಕ್ಕಿ ರೋಗದ ಬಗ್ಗೆ ಕೇಂದ್ರಕ್ಕೆ ರಾಜ್ಯ ನಿಯೋಗ ಭೇಟಿ ಕೊಟ್ಟಿದೆ. ಕೇಂದ್ರದಿಂದ ವೈಜ್ಞಾನಿಕ ತಂಡ ಆಗಮಿಸಿದೆ. ರೋಗ ನಿಯಂತ್ರಣದ ಬಗ್ಗೆ ರೈತರಿಗೆ ತರಬೇತಿ ನೀಡಲಾಗಿದೆ.
ಸಂರಕ್ಷಣಾ ಔಷಧ ಖರೀದಿಸಲು ಹೆಕ್ಟೇರ್ಗೆ 4000 ರೂ.
ಸಸ್ಯ ಸಂರಕ್ಷಣೆ ಔಷಧಿಗಳನ್ನು ಖರೀದಿಸಲು ಪ್ರತಿ ಹೆಕ್ಟೇರ್ಗೆ 4000 ರೂ. ಕೊಡಲಾಗುತ್ತಿದೆ. ಗುಟಕಾ ಬ್ಯಾನ್ ಮಾಡಿದ್ರೆ ಅಡಿಕೆ ಬೆಲೆ ಕುಸಿತ ಆಗುತ್ತದೆ. ಈಗ ಸದ್ಯ ಅಡಿಕೆ ಬೆಲೆ ಇದೆ. ಇಳುವರಿಯ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಣೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕೊರೊನಾ ಸೋಂಕಿಗೇ ಔಷಧ ಸಿಕ್ಕಿದೆ, ಎಲೆಚುಕ್ಕಿ ರೋಗಕ್ಕೆ ಸಿಗಲ್ವಾ?
ಅಡಿಕೆ ಉತ್ಪನ್ನ ಆರೋಗ್ಯಕ್ಕೆ ಪೂರಕ ಎಂದು ಸಾಬೀತು ಪಡಿಸಲು ಸಂಶೋಧನೆ ನಡೆಯುತ್ತಿದೆ. ಎಲೆಚುಕ್ಕಿ ರೋಗಕ್ಕೆ ಔಷಧಿ ಕಂಡು ಹಿಡಿಯುವ ಕೆಲಸ ನಡೆಸಲಾಗುತ್ತಿದೆ. ಕೋವಿಡ್ 19ಕ್ಕೆ ಔಷಧಿ ಕಂಡು ಹಿಡಿದಿದ್ದೇವೆ. ಈ ರೋಗಕ್ಕೂ ಔಷಧಿ ಕಂಡು ಹಿಡಿಯುವ ಕೆಲಸ ಆಗುತ್ತದೆ. ಅಡಿಕೆಯ ಮೇಲೆ 50 ಲಕ್ಷ ಜನರು ಜೀವನ ಕಟ್ಟಿಕೊಂಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.
ಎಂ.ಎಸ್ ರಾಮಯ್ಯ ತಾಂತ್ರಿಕ ವಿವಿ ಸಂಶೋಧನೆಯಲ್ಲಿ ಸತ್ಯ ಬಹಿರಂಗ
ಒಂದು ವರ್ಷದ ಹಿಂದೆ ನಾವು ಎಂ.ಎಸ್ ರಾಮಯ್ಯ ತಾಂತ್ರಿಕ ವಿವಿಗೆ ಅಡಿಕೆ ಕುರಿತು ಸಂಶೋಧನೆ ನಡೆಸಲು ಸೂಚಿಸಲಾಗಿತ್ತು. ಆ ಸಂಶೋಧನಾ ವರದಿ ಈಗ ಹೊರಬಂದಿದೆ. ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ, ಬದಲಾಗಿ ಅಡಿಕೆಯಲ್ಲಿ ಔಷಧಿ ಗುಣ ಇದೆ ಎಂದು ಸಂಶೋಧನಾ ವರದಿ ಬಂದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ವಿದೇಶಿ ಅಡಿಕೆ ಆಮದಿನ ಭೀತಿ
ಅಲ್ಲದೇ, ವಿದೇಶಗಳಿಂದ ರಫ್ತು ಮಾಡಿಕೊಳ್ಳುತ್ತಿದ್ದ ಅಡಿಕೆಯಿಂದ ದೇಶೀ ಅಡಿಕೆಯ ಬೆಲೆ ಕುಸಿತದ ಭೀತಿ ಎದುರಾಗಿತ್ತು. ವಿದೇಶಿ ಅಡಿಕೆ ಆಮದಿನ ಬೆಲೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಅಡಿಕೆಯ ಆಮದಿನ ಕನಿಷ್ಠ ದರವನ್ನು ಪ್ರತಿ ಕೆ. ಜಿ. ಗೆ ₹251ಯಿಂದ ₹351ಕ್ಕೆ ಹೆಚ್ಚಿಸಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಂಗಳವಾರ ಆದೇಶ ಹೊರಡಿಸಿದೆ.
ಆಮದಿನ ಪ್ರಮಾಣ ಗಣನೀಯ ಏರಿಕೆಇನ್ಮೇಲೆ ವಿದೇಶದಿಂದ ಅಡಿಕೆ ಆಮದು ಮಾಡಿಕೊಳ್ಳಲು ಕೆಜಿ ಅಡಿಕೆಗೆ ರೂ. 350ಕ್ಕಿಂತ ಹೆಚ್ಚು ದರ ಪಾವತಿಸಬೇಕಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಡಿಕೆ ಆಮದು ಪ್ರಮಾಣ ಗಣನೀಯವಾಗಿ ಹೆಚ್ಚಳ ಆಗಿದೆ. 2022–23ರ ಆರ್ಥಿಕ ವರ್ಷದ ನವೆಂಬರ್ ಅಂತ್ಯದವರೆಗೆ 61,450 ಟನ್ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ.
ಭಾರತಕ್ಕೆ ಈ ದೇಶಗಳಿಂದ ಆಮದಾಗುತ್ತೆ ಅಡಿಕೆ
ಭಾರತವೇ ಅಡಿಕೆಯ ಪ್ರಮುಖ ಉತ್ಪಾದಕ ಮತ್ತು ಬಳಕೆದಾರ ಎರಡೂ ಹೌದು. ಭಾರತಕ್ಕೆ ಇತರ ದೇಶಗಳಿಂದ ಆಮದಾಗುವ ಅಡಿಕೆ ನಮ್ಮ ಅಡಿಕೆ ಬೆಳಗಾರರ ನಿದ್ದೆ ಕದ್ದಿದೆ. ಹಾಗಾದರೆ ಭಾರತಕ್ಕೆ ಯಾವ ದೇಶಗಳಿಂದ ಅಡಿಕೆ ಆಮದಾಗುತ್ತೆ? ಎಷ್ಟು ಅಡಿಕೆ ಆಮದಾಗುತ್ತೆ? ಇಲ್ಲಿದೆ ನೋಡಿ ಎಲ್ಲ ವಿವರ.
ಇದನ್ನೂ ಓದಿ: Explained: ಕಣಿವೆ ನಾಡಿನಲ್ಲಿ 'ಖಜಾನೆ'! ಬದಲಾಗುತ್ತಾ ಭಾರತದ ಅದೃಷ್ಟ? ಏನಿದು ಲಿಥಿಯಂ?
ಕೆನಡಾ, ಇಂಡೋನೇಷ್ಯಾ, ಮಾಲ್ಡೀವ್ಸ್, ಬರ್ಮಾ, ಸಿಂಗಪುರ, ಶ್ರೀಲಂಕಾ, ತಾಂಜಾನಿಯಾ, ವಿಯೆಟ್ನಾಂ ಭಾರತಕ್ಕೆ ಅಡಿಕೆ ಆಮದು ಮಾಡುವ ಪ್ರಮುಖ ದೇಶಗಳು. ಈ ದೇಶಗಳಿಂದ ಅಡಿಕೆ ಆಮದಾದ ವಿವರ ಹೀಗಿದೆ.
ವರ್ಷ | ಆಮದು ಆದ ಅಡಿಕೆ (ಟನ್ಗಳಲ್ಲಿ) |
2019–20 | 4,975 |
2020–21 | 9,98 |
22021–22 | 7,698 |
2022–23 | 25,891 |
ವರ್ಷ | ಆಮದು ಆದ ಅಡಿಕೆ (ಟನ್ಗಳಲ್ಲಿ) |
2019–20 | 11,855 |
2020–21 | 13,998 |
2021–22 | 18,274 |
2022–23 | 35,559 |
ಇದನ್ನೂ ಓದಿ: Lookout Notice: ಲುಕ್ ಔಟ್ ನೋಟಿಸ್ ಎಂದರೇನು? ಯಾವಾಗ, ಯಾರ ವಿರುದ್ಧ ಇದನ್ನು ಹೊರಡಿಸಲಾಗುತ್ತದೆ?
ಒಟ್ಟಾರೆ ಎಲೆ ಚುಕ್ಕಿ ರೋಗಕ್ಕೆ ಔಷಧ ಕಂಡುಕೊಳ್ಳುವ ಭರವಸೆ, ವಿದೇಶಿ ಅಡಿಕೆ ಆಮದಿನ ದರ ಕನಿಷ್ಠ ದರವನ್ನು ಪ್ರತಿ ಕೆ. ಜಿ. ಗೆ ₹251ಯಿಂದ ₹351ಕ್ಕೆ ಹೆಚ್ಚಿಸಿರೋದು ಅಡಿಕೆ ಬೆಳೆಗಾರರಲ್ಲಿ ಭರವಸೆ ಮೂಡಿಸುತ್ತಿದೆ. ಜೊತೆಗೆ ಮಲೆನಾಡಿನ ಬೆಳೆ ಬಯಲುಸೀಮೆಯತ್ತ ದಾಪುಗಾಲಿಡುತ್ತಿರುವುದು ಅಡಿಕೆ ಭವಿಷ್ಯದ ಮೇಲೆ ಯಾವ ಪರಿಣಾಮ ಬೀರಲಿದೆ ಕಾದುನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ