ಒಮ್ಮೆ ಬಿಸಿಮಾಡಿದ (Reheating Food) ಆಹಾರ ಪದಾರ್ಥಗಳನ್ನು ಬಿಸಿಮಾಡುವುದು ಆಹಾರದಲ್ಲಿರುವ ಪೌಷ್ಟಿಕಾಂಶಗಳನ್ನು (Prptein) ನಷ್ಟಗೊಳಿಸುವುದರ ಜೊತೆಗೆ ಆಹಾರವನ್ನು ವಿಷಕಾರಿಯಾಗಿಸುತ್ತವೆ ಎಂದು ಪೌಷ್ಟಿಕ ತಜ್ಞರು ಸೂಚಿಸಿದ್ದಾರೆ. ಇದು ಆರೋಗ್ಯಕ್ಕೆ (Health) ಅಪಾಯವನ್ನೊಡ್ಡುವುದು ಮಾತ್ರವಲ್ಲದೆ ಆಹಾರದಲ್ಲಿರುವ ಆರೋಗ್ಯಕಾರಿ ಪೌಷ್ಟಿಕಾಂಶಗಳ ನಷ್ಟಕ್ಕೆ ಕಾರಣವಾಗುತ್ತವೆ ಎಂಬುದು ತಜ್ಞರ ಕಿವಿಮಾತಾಗಿದೆ. ಒಮ್ಮೆ ಬಿಸಿಮಾಡಿದ ಆಹಾರವನ್ನು ಮೈಕ್ರೋವೇವ್ ನಲ್ಲಿ (Microwave) ಬಿಸಿ ಮಾಡಿದಾಗ ಅದು ಆಹಾರದಲ್ಲಿರಬೇಕಾದ ಉತ್ತಮ ಅಂಶಗಳನ್ನು ಕಳೆದುಕೊಳ್ಳುತ್ತವೆ ಎಂದು ಪೌಷ್ಟಿಕ ತಜ್ಞರು ತಿಳಿಸಿದ್ದಾರೆ.
ಆಹಾರ ಬಿಸಿಮಾಡುವುದು ವಿಷಕಾರಿಯನ್ನಾಗಿಸುತ್ತದೆ
ಇನ್ನು ಆಹಾರವನ್ನು ಪುನಃ ಪುನಃ ಬಿಸಿಮಾಡುವುದು ಅದನ್ನು ವಿಷಕಾರಿಯಾಗಿಸುತ್ತವೆ ಎಂಬ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ. ಹಾಗಿದ್ದರೆ ಯಾವೆಲ್ಲಾ ಆಹಾರಗಳನ್ನು ಪುನಃ ಬಿಸಿಮಾಡಬಾರದು ಎಂಬುದನ್ನು ಅರಿತುಕೊಳ್ಳೋಣ
ಈಗಾಗಲೇ ಬಿಸಿಮಾಡಿರುವ ಆಹಾರ ಪದಾರ್ಥಗಳನ್ನು ಪುನಃ ಬಿಸಿಮಾಡುವುದು
ಆಹಾರವನ್ನು ಹೆಚ್ಚು ಹೆಚ್ಚು ಬಿಸಿಮಾಡುವುದು ಒಮ್ಮೊಮ್ಮೆ ಆಹಾರ ಪದಾರ್ಥಗಳನ್ನು ಅರ್ಧಕ್ಕರ್ಧ ಮಾತ್ರ ಬಿಸಿಯಾಗಿಸುತ್ತವೆ. ಈ ಸಮಯದಲ್ಲಿ ಅದು ವಿಷಕಾರಿಯಾಗುತ್ತವೆ ಇಲ್ಲದಿದ್ದರೆ ಅದರ ಸತ್ವಗಳನ್ನು ಕಳೆದುಕೊಳ್ಳುತ್ತವೆ.
ಎಣ್ಣೆಯನ್ನು ಪುನಃ ಏಕೆ ಬಿಸಿಮಾಡಬಾರದು?
ಅಡುಗೆ ಎಣ್ಣೆಯನ್ನು ಪುನಃ ಬಿಸಿಮಾಡುವುದು ವಿಷಕಾರಿ ಹಾಗೂ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಎಣ್ಣೆಯನ್ನು ಬಿಸಿಮಾಡಿದಾಗ ಅದರಲ್ಲಿರುವ ಟ್ರಾನ್ಸ್-ಫ್ಯಾಟ್ ಅಂಶವು ಹೆಚ್ಚಾಗುತ್ತದೆ. ಈ ಟ್ರಾನ್ಸ್-ಫ್ಯಾಟ್‌ಗಳು ಅಪರ್ಯಾಪ್ತ ಕೊಬ್ಬಿನ ಒಂದು ರೂಪವಾಗಿದೆ. ಇವು ನೈಸರ್ಗಿಕ ಹಾಗೂ ಕೃತಕ ಎರಡೂ ರೂಪಗಳಲ್ಲಿವೆ. ಪ್ರಾಣಿಗಳ ಮಾಂಸಗಳು ನೈಸರ್ಗಿಕ ಕೊಬ್ಬಾಗಿದ್ದು ಕೃತಕ ಕೊಬ್ಬುಗಳೆಂದರೆ ಹೈಡ್ರೋಜನೀಕರಿಸಿದ ಕೊಬ್ಬುಗಳು ಆರೋಗ್ಯಕ್ಕೆ ಅಪಾಯಕಾರಿಯಾಗಿವೆ.
ರೂಮ್ ಟೆಂಪರೇಚರ್‌ನಲ್ಲಿ ಸಸ್ಯಜನ್ಯ ಎಣ್ಣೆಯನ್ನು ರಾಸಾಯನಿಕವಾಗಿ ಬದಲಾಯಿಸಿದಾಗ ಈ ಕೊಬ್ಬುಗಳು ಬಿಡುಗಡೆಯಾಗುತ್ತವೆ ಇದು ಹೆಚ್ಚುಕಾಲ ಬಾಳ್ವಿಕೆ ಬರುತ್ತವೆ. ಕೃತಕ ಟ್ರಾನ್ಸ್ ಕೊಬ್ಬುಗಳು ನಿಮ್ಮ ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸಬಹುದು.
ಆಲೂಗಡ್ಡೆ
ಆಲೂಗಡ್ಡೆಯನ್ನು ಮತ್ತೆ ಬಿಸಿಮಾಡಿದಾಗ ಅದು ಪೌಷ್ಟಿಕಾಂಶದ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ವಾಕರಿಕೆ ಇನ್ನಿತರ ಅನಾರೋಗ್ಯ ಸಂಭವಿಸಬಹುದು ಜೊತೆಗೆ ವಿಷಕಾರಿಯಾಗಬಹುದು.
ಅನ್ನ
ಹಸಿ ಅಕ್ಕಿಯಲ್ಲಿರುವ ಬ್ಯಾಕ್ಟೀರಿಯಾ ಅಕ್ಕಿ ಬೆಂದು ಅನ್ನವಾದ ನಂತರವೂ ಹಾಳಾಗುವುದಿಲ್ಲ. ಬೇಯಿಸಿದ ಅನ್ನವನ್ನು ರೂಮ್ ಟೆಂಪರೇಚರ್‌ನಲ್ಲಿರಿಸಿದಾಗ ಈ ಅಂಶಗಳು ದ್ವಿಗುಣಗೊಳ್ಳಬಹುದು ಹಾಗೂ ಅತಿಸಾರ ಮತ್ತು ವಾಂತಿಗೆ ಕಾರಣವಾಗಬಹುದಾದ ಅನಾರೋಗ್ಯವನ್ನುಂಟು ಮಾಡಬಹುದು.
ಮೊಟ್ಟೆ
ಹೆಚ್ಚು ತಾಪಮಾನದಲ್ಲಿ ಮೊಟ್ಟೆಯನ್ನು ಬಿಸಿಮಾಡುವುದು ಜೀರ್ಣಾಂಗದಲ್ಲಿ ಹಾನಿಯನ್ನುಂಟು ಮಾಡುವ ವಿಷಕಾರಿಯಾಗಿ ಮಾರ್ಪಾಡಾಗುತ್ತದೆ. ಮೊಟ್ಟೆಯನ್ನು ಪುನಃ ಬಿಸಿಮಾಡುವುದು ಅದರಲ್ಲಿರುವ ಪೌಷ್ಟಿಕಾಂಶಗಳ ನಷ್ಟಕ್ಕೂ ಕಾರಣವಾಗುತ್ತವೆ.
ಚಿಕನ್
ಅಣಬೆಗಳಂತೆ, ಕೋಳಿ ಮಾಂಸವು ಪ್ರೋಟೀನ್‌ಗಳಲ್ಲಿ ಹೆಚ್ಚು ಸಮೃದ್ಧವಾಗಿದೆ ಆದರೆ ಇದನ್ನು ಬಿಸಿಮಾಡುವುದು ಹಾನಿಕಾರಕ ಪರಿಣಾಮವನ್ನು ಬೀರುತ್ತದೆ. ಜೀರ್ಣಕ್ರಿಯೆಗೆ ತೊಂದರೆಯನ್ನೊಡ್ಡಬಹುದು.
ಪಾಲಕ್ ಸೊಪ್ಪು
ಇತರ ಹಸಿರು ಸೊಪ್ಪು ತರಕಾರಿಗಳಂತೆ ಪಾಲಕ್ ನೈಟ್ರೇಟ್ ಹಾಗೂ ಕಬ್ಬಿಣದ ಅಂಶಗಳಿಂದ ಸಮೃದ್ಧವಾಗಿವೆ. ಇವುಗಳನ್ನು ಪುನಃ ಬಿಸಿಮಾಡುವುದು ಇದು ಕಾರ್ಸಿನೋಜೆನ್‌ಗಳಾಗಿ ಬದಲಾಗಬಹುದು. ಅನಾರೋಗ್ಯಕ್ಕೆ ಕಾರಣವಾಗಬಹುದು.
ಸ್ಪ್ರಿಂಗ್ ರೋಲ್ಸ್
ಈಗಾಗಲೇ ಕಾಯಿಸಿರುವ ಸ್ಪ್ರಿಂಗ್ ರೋಲ್‌ಗಳನ್ನು ಪುನಃ ಬಿಸಿಮಾಡುವುದು ಅನಾರೋಗ್ಯವನ್ನುಂಟು ಮಾಡಬಹುದು. ಇದು ಮತ್ತೆ ಕುರುಕಲಾಗುವುದಿಲ್ಲ ಹಾಗೂ ಮೊದಲಿನ ಅದೇ ರುಚಿಯನ್ನು ನೀಡುವುದಿಲ್ಲ.
ಅಣಬೆ
ಅಣಬೆ ಪ್ರೋಟೀನ್ ಸಮೃದ್ಧಿತವಾಗಿವೆ. ಅವುಗಳನ್ನು ಬೇಯಿಸಿದ ದಿನವೇ ಸೇವಿಸಬೇಕು. ಪ್ರೋಟೀನ್ ಸಮೃದ್ಧವಾಗಿರುವುದರಿಂದ ಅಣಬೆಯನ್ನು ಪುನಃ ಪುನಃ ಬಿಸಿಮಾಡುವುದು ಅವುಗಳ ರಚನೆಯನ್ನು ಬದಲಾಯಿಸಬಹುದು ಹಾಗೂ ಇದರಿಂದ ದೇಹಕ್ಕೆ ಹಾನಿಯುಂಟಾಗುತ್ತದೆ.
ಬೀಟ್‌ರೂಟ್
ಪಾಲಕ್‌ನಂತೆಯೇ ಬೀಟ್‌ರೂಟ್‌ಗಳು ಕೂಡ ಹೆಚ್ಚು ಪ್ರಮಾಣದ ನೈಟ್ರೇಟ್‌ಗಳನ್ನು ಒಳಗೊಂಡಿವೆ. ನೈಟ್ರೇಟ್‌ಗಳನ್ನು ಪುನಃ ಬಿಸಿಮಾಡುವುದು ಹಲವಾರು ಆರೋಗ್ಯ ಸಮಸ್ಯೆಗಳನ್ನುಂಟು ಮಾಡಬಹುದು.
ಸೆಲರಿ
ಸೆಲರಿಯಲ್ಲಿ ಹೆಚ್ಚಿನ ನೈಟ್ರೇಟ್ ಅಂಶವಿದೆ, ಆದ್ದರಿಂದ ನೀವು ಅದನ್ನು ಮತ್ತೆ ಬಿಸಿ ಮಾಡಿದರೆ ಅದು ವಿಷಕಾರಿಯಾಗಬಹುದು. ಹೆಚ್ಚಿನ ನೈಟ್ರೈಟ್‌ಗಳು ದೇಹವನ್ನು ಪ್ರವೇಶಿಸಿದಾಗ, ಇದು ಮೆಥೆಮೊಗ್ಲೋಬಿನೆಮಿಯಾ ಅಪಾಯವನ್ನು ಹೆಚ್ಚಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ