• ಹೋಂ
  • »
  • ನ್ಯೂಸ್
  • »
  • Explained
  • »
  • Brain: ದೊಡ್ಡ ಮೆದುಳಿದ್ದವರು ಬುದ್ದಿವಂತರಾಗ್ತಾರಾ? ಪಕ್ಷಿಗಳ ಮೇಲೆ ನಡೆದಿದೆ ವಿಶೇಷ ಅಧ್ಯಯನ!

Brain: ದೊಡ್ಡ ಮೆದುಳಿದ್ದವರು ಬುದ್ದಿವಂತರಾಗ್ತಾರಾ? ಪಕ್ಷಿಗಳ ಮೇಲೆ ನಡೆದಿದೆ ವಿಶೇಷ ಅಧ್ಯಯನ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈ ಭೂಮಿಯ ಮೇಲಿರುವ ಸಕಲ ಜೀವರಾಶಿಗಳಲ್ಲಿ ಮಾನವ ಅತಿ ಪ್ರಧಾನವಾದ ಜೀವಿ ಅಥವಾ ಪ್ರಾಣಿ ಎಂದರೆ ತಪ್ಪಾಗಲಾರದು. ಮನುಷ್ಯನು ವೈಜ್ಞಾನಿಕವಾಗಿ ಒಂದು ಪ್ರಾಣಿಯೇ ಆಗಿದ್ದಾನೆ, ಹೀಗಿರುವಾಗ ಅಧ್ಯಯನದ ಪ್ರಕಾರ ಮೆದುಳಿನ ವಿಕಸನ ಎಂಬುದು ಪೋಷಕರ ಉತ್ತಮ ಆರೈಕೆಯ ಮೇಲೆಯೂ ಸಂಬಂಧಿಸಿದೆ ಎಂದು ತಿಳಿದು ಬಂದಿದೆ.

ಮುಂದೆ ಓದಿ ...
  • Trending Desk
  • 3-MIN READ
  • Last Updated :
  • Share this:

    ಈ ಭೂಮಿಯ (Earth) ಮೇಲಿರುವ ಸಕಲ ಜೀವರಾಶಿಗಳಲ್ಲಿ (Biomass) ಮಾನವ ಅತಿ ಪ್ರಧಾನವಾದ ಜೀವಿ ಅಥವಾ ಪ್ರಾಣಿ (Animal) ಎಂದರೆ ತಪ್ಪಾಗಲಾರದು. ಮನುಷ್ಯನು ವೈಜ್ಞಾನಿಕವಾಗಿ (Scientific) ಒಂದು ಪ್ರಾಣಿಯೇ ಆಗಿದ್ದಾನೆ. ಆದರೆ ನಮ್ಮಲ್ಲಿರುವ ಒಂದು ಅಮೋಘ ವಸ್ತುವಿನಿಂದಾಗಿ ನಾವು ಮನುಷ್ಯರಾಗಿ (Human) ಪ್ರಾಣಿಗಳಿಗಿಂತ ಭಿನ್ನವಾದ ಹಾಗೂ ಎತ್ತರವಾದ ಸ್ಥಾನದಲ್ಲಿ ನಿಲ್ಲುತ್ತೇವೆ. ಮನುಷ್ಯನಲ್ಲಿರುವ ಮಸ್ತಿಷ್ಕ ಅಥವಾ ಮೆದುಳು (Brain) ಎಂಬ ಸೂಕ್ಷ್ಮ ಅಂಗವು ಮಾನವನ ವಿಕಸನದಲ್ಲಿ ಬಲು ಮಹತ್ತರದ ಪಾತ್ರವಹಿಸಿದೆ.


    ಅಷ್ಟಕ್ಕೂ ನಾವು ಈ ಮೆದುಳು ಹೆಚ್ಚಾಗಿ ವಿಕಸನಗೊಳ್ಳಲು ನಮ್ಮಲ್ಲಿ ಒಡಮೂಡಿದ ಅರಿವಿನ ಜ್ಞಾನ, ಕೆಲಸ ಮಾಡಬಲ್ಲ ಸಾಮರ್ಥ್ಯ ಹಾಗೂ ಸಾಮಾಜಿಕ ಸಂವಹನಗಳೆ ಮುಖ್ಯವಾದ ಕಾರಣಗಳೆಂದು ತಿಳಿದಿದ್ದೇವೆ.


    ಮೆದುಳಿನ ಗಾತ್ರ


    ಆದರೆ ನಮ್ಮ ಈ ಜ್ಞಾನ ಸರಿಯಾಗಿಲ್ಲ ಎಂಬಂತೆ ನಿರೂಪಿಸುವ ಅಧ್ಯಯನದ ಫಲಿತಾಂಶವೊಂದನ್ನು ಈಗ ಕೆಲ ಸಂಶೋಧಕರು ಹೊರಹಾಕಿದ್ದಾರೆ. ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ನಲ್ಲಿ ಪ್ರಕಟಗೊಂಡಿರುವ ಇತ್ತೀಚಿನ ಸಂಶೋಧನಾ ವರದಿಯು ಈ ಹಿಂದೆ ನಮ್ಮ ಮೆದುಳು ವಿಕಸನಗೊಳ್ಳಲು ಕಾರಣವಾಗಿದ್ದ ಅಂಶಗಳು ಇವು ಎಂಬ ತಿಳಿವಳಿಕೆಗೆ ಸವಾಲೆಸೆದಂತಿದೆ.


    Are people with big brains smarter? A special study on birds!
    ಸಾಂಕೇತಿಕ ಚಿತ್ರ


    ಇತರೆ ಜೈವಿಕ ಹಾಗೂ ಪ್ರಾಕೃತಿಕ ಅಂಶಗಳನ್ನು ಜೊತೆಯಾಗಿ ಪರಿಗಣನೆಗೆ ತೆಗೆದುಕೊಂಡಾಗ ಅರಿವು ಹಾಗೂ ಸಾಮಾಜಿಕ ಅಂಶಗಳು ಮೆದುಳಿನ ಗಾತ್ರವನ್ನು ಹೆಚ್ಚಿಸುವುದರಲ್ಲಿದ್ದ ತಮ್ಮ ಪಾತ್ರದ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತ ಸಾಗುತ್ತವೆ. ಬದಲಿಗೆ ಸಂತಾನಕ್ಕೆ ಅದರ ಪೋಷಕರು ತೋರುವ ಪ್ರೀತಿ ಹಾಗೂ ಆರೈಕೆಯ ಮಟ್ಟ ಮೆದುಳಿನ ಗಾತ್ರ ಹೆಚ್ಚಿಸಲು ಹೆಚ್ಚು ಸಹಕಾರಿಯಾಗಿವೆ.


    ಮೆದುಳು ಅಮೂಲ್ಯ


    ದೇಹದ ಅಂಗಾಂಗಗಳಲ್ಲಿ ಅತಿ ಹೆಚ್ಚು ಬೆಲೆಯುಳ್ಳ ಅಂಗಾಂಗವೆಂದರೆ ಅದು ಮೆದುಳು ಎಂದು ಹೇಳಬಹುದಾಗಿದೆ. ನಮ್ಮ ದೇಹದ ಸಮಗ್ರ ನರ ಅವಲಂಬಿತ ಚಟುವಟಿಕೆಗಳು ಸರಾಗವಾಗಿ ನಡೆಯಲು ಮೆದುಳಿಗೆ ಹೆಚ್ಚಿನ ಶಕ್ತಿಯ ಅವಶ್ಯಕತೆ ಇರುತ್ತದೆ. ಮೆದುಳು ದೊಡ್ಡದಿದ್ದಷ್ಟು ತನ್ನನ್ನು ತಾನು ಸುಸ್ಥಿರವಾಗಿರಿಸಿಕೊಳ್ಳಲು ಅದಕ್ಕೆ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ.


    ಅವುಗಳಲ್ಲಿ ಕೆಲ ಪ್ರಯೋಜನಗಳೆಂದರೆ ಅರಿವಿನ ಜ್ಞಾನ, ಸಮಸ್ಯೆಗಳನ್ನು ಪರಿಹರಿಸುವ ಕಲೆ ಹಾಗೂ ಸಂಕೀರ್ಣ ಸಾಮಾಜಿಕ ಸಂವಹನಗಳಲ್ಲಿ ತೊಡಗಿಸಿಕೊಳ್ಳುವಿಕೆ ಎಂಬುದಾಗಿತ್ತು.


    ಮಾನವರಂತೆಯೇ ಕಾಣುವ ಮಂಗಗಳನ್ನು ಅಧ್ಯಯನಿಸಿದಾಗ ಈ ಮೇಲಿನ ವಿಷಯಗಳಿಗೆ ನಿಕಟತೆ ಇರುವುದು ಕಂಡುಬಂದಿತ್ತು. ನಾವು ನಮ್ಮ ದೊಡ್ಡದಾದ ಮೆದುಳನ್ನು ಆಗಾಗ ಸಂದಭಕ್ಕನುಸಾರವಾಗಿ ಸೃಜನಾತ್ಮಕತೆಗಾಗಿಯೋ ಅಥವಾ ದೊಡ್ಡ ಗುಂಪುಗಳಲ್ಲಿದ್ದಾಗ ಸಾಮಾಜಿಕ ಏಕತೆಯನ್ನು ಕಾಪಾಡಿಕೊಳ್ಳಲೋ ಬಳಸುತ್ತೇವೆ.


    ಆದರೆ ಈ ವಿಷಯದಲ್ಲಿ ಒಂದು ಸಮಸ್ಯೆ ಇರುವುದನ್ನು ಗುರುತಿಸಬಹುದು. ಅದೇನೆಂದರೆ, ಮೆದುಳು ದೊಡ್ಡಾದಾಗಿ ಬೆಳೆಯಲು ಅಪಾರವಾದ ಸಮಯ ತೆಗೆದುಕೊಳ್ಳುತ್ತದೆ ಹಾಗೂ ಈ ಬೆಳೆಯುವಿಕೆಯ ಹಂತದಲ್ಲೂ ಅದಕ್ಕೆ ಸಾಕಷ್ಟು ಶಕ್ತಿಯ ಅವಶ್ಯಕತೆ ಇರುತ್ತದೆ.


    ಅಲ್ಲದೆ ಮೆದುಳು ತನ್ನ ಪೂರ್ಣ ಪ್ರಮಾಣದ ಗಾತ್ರವನ್ನು ತಲಪುವವರೆಗೂ ಕಡಿಮೆ ಶಕ್ತಿಯನ್ನು ಹೊಂದಿರುತ್ತದೆ. ಹಾಗಾಗಿ ಬೆಳೆಯುತ್ತಿರುವ ಪ್ರಾಣಿಗಳು ತಮ್ಮ ಬೆಳೆಯುತ್ತಿರುವ ಮೆದುಳಿಗಾಗಿ ಬೆಲೆಯನ್ನು ತೆರಬೇಕಾಗುತ್ತವೆ.


    ಅದು ಹೇಗೆಂದರೆ ಮೆದುಳು ಪೂರ್ಣ ಪ್ರಮಾಣ ತಲುಪುವ ತನಕ ಅದರ ಶಕ್ತಿಯ ಸದುಪಯೋಗವನ್ನು ಅವುಗಳಿಗೆ ಬಳಸಿಕೊಳ್ಳಲು ಸಾಧ್ಯವಾಗದು.


    ಪಕ್ಷಿಗಳ ಮೇಲೆ ಸಂಶೋಧನೆ


    ಮೇಲಿನ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಸಂಶೋಧಕರು ಈ ಬಾರಿ ಸಾಮಾನ್ಯವಾಗಿ ಮೆದುಳಿನ ಕುರಿತಾದ ಅಧ್ಯಯನಕ್ಕೆಂದು ಅಭ್ಯಸಿಸುತ್ತಿದ್ದ ಪ್ರಾಣಿಗಳ ಬದಲಾಗಿ ಪಕ್ಷಿಗಳ ಮೊರೆ ಹೋಗಲು ತೀರ್ಮಾನಿಸಿದರು.


    ವಿಕಸನದ ದೃಷ್ಟಿಯಿಂದ ನೋಡಿದಾಗ ಪಕ್ಷಿಗಳು ಸಾಕಷ್ಟು ರೋಚಕತೆಯಿಂದ ಕೂಡಿರುವ ಜೀವಿಗಳಾಗಿವೆ ಎನ್ನಬಹುದು.


    ಪಕ್ಷಿಗಳು ಸಾಕಷ್ಟು ವೈವಿಧ್ಯತೆಯನ್ನು ಪ್ರದರ್ಶಿಸುತ್ತವೆ. ಕೋಳಿಗಳ ಅತಿ ಚಿಕ್ಕ ಮೆದುಳನ್ನು ಹಿಡಿದು ಚತುರತೆಗೆ ಹೆಸರಾದ ಗೀಳಿಗಳ ಮೆದುಳುಗಳು ಚಿಕ್ಕದಾಗಿರುವುದನ್ನು ಗಮನಿಸಬಹುದು. ಇಲ್ಲಿ ಜೀವಿಯೊಂದರ ಶರೀರಕ್ಕೆ ಸಂಬಂಧಿಸಿದಂತೆ ಅದರ ಮೆದುಳಿನ ಗಾತ್ರದ ವಿಶೇಷತೆಯನ್ನಷ್ಟೆ ಅಭ್ಯಸಿಸಲಾಗುತ್ತಿತ್ತು.


    ಈ ರೀತಿಯಾಗಿ ಸಂಶೋಧಕರು ತಮ್ಮ ಅಧ್ಯಯನದಲ್ಲಿ ಒಂದು ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯ ಪಕ್ಷಿಗಳನ್ನು ಅಧ್ಯಯನಕ್ಕೊಳಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪಕ್ಷಿಗಳ ಮೇಲೆ ಪ್ರಭಾವ ಬೀರುವ ಎಲ್ಲ ರೀತಿಯ ಮಾಹಿತಿಯನ್ನು ಸಂಗ್ರಹಿಸಿದರು.


    ಆಸಕ್ತಿಕರವಾಗಿ ಅವರಿಗೆ ಪಕ್ಷಿಗಳು ತಮ್ಮ ಸಾಮಾಜಿಕ ಜೀವನ ಹೇಗೆ ನಿಭಾಯಿಸುತ್ತವೆ ಹಾಗೂ ತಮ್ಮ ಮರಿಗಳ ಬಗ್ಗೆ ಯಾವ ರೀತಿಯ ಆರೈಕೆ ಹೊಂದಿರುತ್ತವೆ ಎಂಬುದರ ಬಗ್ಗೆ ಸಾಕಷ್ಟು ವಿಷಯಗಳು ಸಂಶೋಧಕರಿಗೆ ಲಭ್ಯವಾಯಿತು.


    ಇದನ್ನೂ ಓದಿ:Brain Health: ಮೆದುಳಿನ ಆರೋಗ್ಯ ವೃದ್ಧಿಗೆ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ!


    ಗೂಡಿನಿಂದಲೇ ಆರೈಕೆ


    ಸಂಶೋಧಕರಿಗೆ ತಿಳಿದುಬಂದ ವಿಷಯವೆಂದರೆ ಮೆದುಳಿನ ಗಾತ್ರ ಎಂಬುದು ಸಾಮಾಜಿಕ ಅಂಶಗಳ ಮೇಲೆ ಅವಲಂಬಿತವಾಗಿಲ್ಲ.


    ಅಲ್ಲದೆ ದೊಡ್ಡ ದೊಡ್ಡ ಗುಂಪುಗಳಲ್ಲಿ ಏಕತೆಯಿಂದ ಬದುಕುವ ಗುಣದಿಂದ ಮೆದುಳಿನ ಗಾತ್ರವು ಸಂಬಂಧಿಸಿಲ್ಲ ಎಂಬಂಶವೂ ಈ ಅಧ್ಯಯನದಲ್ಲಿ ಸಂಶೋಧಕರಿಗೆ ತಿಳಿದು ಬಂದಿದೆ ಎಂಬ ಅಭಿಪ್ರಾಯ ಅವರು ವ್ಯಕ್ತಪಡಿಸಿದ್ದಾರೆ.


    ಆದರೆ ಈ ಎಲ್ಲ ಅಂಶಗಳನ್ನು ಅವಲೋಕಿಸಿದಾಗ ಸಂಶೋಧಕರಿಗೆ ಪ್ರಧಾನವಾಗಿ ತಿಳಿದ ವಿಷಯವೆಂದರೆ ಮೆದುಳಿನ ಗಾತ್ರ ಎಂಬುದು ಪೋಷಕರು ತಮ್ಮ ಸಂತಾನದ ಬಗ್ಗೆ ಎಷ್ಟು ಕಾಳಜಿ ಹೊಂದಿದ್ದಾರೆ ಹಾಗೂ ಯಾವ ರೀತಿ ಆರೈಕೆ ಮಾಡುತ್ತಾರೆ ಎಂಬುದರ ಮೇಲೆ ಹೆಚ್ಚು ನಿರ್ಭರವಾಗಿದೆಯಂತೆ.


    ಅವರ ಅಧ್ಯಯನದಲ್ಲಿ ಯಾವ ಪಕ್ಷಿಗಳು ತಮ್ಮ ಮರಿಗಳಿಗೆ ಹೆಚ್ಚು ಆರೈಕೆ ಮಾಡುತ್ತ ಅವುಗಳಿಗೆ ದೀರ್ಘ ಕಾಲದವರೆಗೆ ಆಹಾರ ತಿನ್ನುಸುತ್ತಿದ್ದವೋ ಅವು ದೊಡ್ಡದಾದ ಮೆದುಳಿನ ಗಾತ್ರ ಹೊಂದಿದ್ದವೆಂಬುದು ಕಂಡುಬಂದಿದೆ.


    ಇಲ್ಲಿ ಅಧ್ಯಯನಕಾರರು ಎರಡು ಬಗೆಯ ಪಕ್ಷಿಗಳನ್ನು ಅಭ್ಯಸಿಸಿದ್ದಾರೆ. ಒಂದು ಒಂದು ಪ್ರಿಕೊಷಿಯಲ್ ಪಕ್ಷಿಗಳು ಅಂದರೆ ಇವುಗಳ ಮರಿಗಳು ಹೆಚ್ಚುಕಡಿಮೆ ಬೆಳವಣಿಗೆ ಹೊಂದಿ ಮೊಟ್ಟೆಗಳಿಂದ ಹೊರಬರುತ್ತವೆ. ಉದಾಹರಣೆಗೆ ಕೋಳಿ ಹಾಗೂ ಬಾತುಕೋಳಿಗಳು.




    ಇನ್ನೊಂದು ಬಗೆಯ ಪಕ್ಷಿಗಳು ಎಂದರೆ ಅಲ್ಟ್ರಿಷಿಯಲ್ ಪಕ್ಷಿಗಳು. ಇವುಗಳ ಮರಿಗಳು ಮೊಟ್ಟೆಯೊಡೆದು ಹೊರಬಂದಾಗಲೂ ಪೋಷಕರ ಮೇಲೆಯೇ ಸಂಪೂರ್ಣವಾಗಿ ಅವಲಂಬಿತವಾಗಿರುತ್ತವೆ. ಉದಾಹರಣೆಗೆ ಗುಬ್ಬಚ್ಚಿ, ಫಿಂಚ್, ರಾಬಿನ್ ಇತ್ಯಾದಿ ಪಕ್ಷಿಗಳು.


    ಇಲ್ಲಿ ಸಂಶೋಧಕರು ಅಂದುಕೊಂಡಂತೆಯೇ ಅಲ್ಟ್ರಿಷಿಯಲ್ ಮರಿಗಳಿಗೆ ಅವುಗಳ ಪೋಷಕರು ಆರೈಕೆ ಮಾಡಿದಂತೆ ಮೆದುಳಿನ ಗಾತ್ರ ಹೆಚ್ಚಾಗುತ್ತಿರುವ ಬಗ್ಗೆ ಸಾಕಷ್ಟು ಪುರಾವೆ ಬೆಂಬಲ ದೊರೆತಿದೆ ಎಂದಾಗಿದೆ.


    ಒಟ್ಟಿನಲ್ಲಿ ಈ ವಿಷಯದ ಬಗ್ಗೆ ಇನ್ನಷ್ಟು ಸುದೀರ್ಘವಾದ ಅಭ್ಯಾಸ ನಡೆಯಬೇಕಾದ ಅವಶ್ಯಕತೆಯಿದೆ ಎಂದಷ್ಟೇ ಹೇಳಬಹುದು.

    Published by:Gowtham K
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು