Explained: ನಿದ್ದೆ ಮಾಡುವಾಗ ಉಸಿರಾಟದ ತೊಂದರೆಯೇ? ಕ್ಯಾನ್ಸರ್ ಇರಬಹುದು ಹುಷಾರ್!

ಅಬ್ಸ್‌ಟ್ರಕ್ಟಿವ್‌ ಸ್ಲೀಪ್ ಆಪ್ನಿಯಾ (obstructive sleep apnea - OSA) ಹೊಂದಿರುವ ಜನರು ಕ್ಯಾನ್ಸರ್ ಅಪಾಯಕ್ಕೆ ತುತ್ತಾಗುವ ಸಂಭವ ಹೆಚ್ಚು ಎಂದು ಸ್ಪೇನ್‌ನ ಬಾರ್ಸಿಲೋನಾದಲ್ಲಿ ಯುರೋಪಿಯನ್ ರೆಸ್ಪಿರೇಟರಿ ಸೊಸೈಟಿ (ERS) ಇಂಟರ್ನ್ಯಾಷನಲ್ ಕಾಂಗ್ರೆಸ್‌ನಲ್ಲಿ ಪ್ರಸ್ತುತಪಡಿಸಿದ ದೊಡ್ಡ ಅಧ್ಯಯನದಲ್ಲಿ ಹೇಳಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸ್ಲೀಪ್ ಆಪ್ನಿಯ (Sleep apnea) ಎನ್ನುವುದು ನಿದ್ರೆಗೆ ಸಂಬಂಧಿಸಿದ ಒಂದು ರೀತಿಯ ತೊಂದರೆ ಆಗಿದೆ. ನಿದ್ರೆಯ ಸಮಯದಲ್ಲಿ ಉಸಿರು ಹಲವು ಬಾರಿ ಕಟ್ಟುತ್ತದೆ ಮತ್ತು ಇದರಿಂದ ಉಸಿರಾಡಲು ತೊಂದರೆಯಾಗುತ್ತದೆ. ಅಬ್ಸ್‌ಟ್ರಕ್ಟಿವ್‌ ಸ್ಲೀಪ್ ಆಪ್ನಿಯಾ (obstructive sleep apnea - OSA) ಹೊಂದಿರುವ ಜನರು ಕ್ಯಾನ್ಸರ್ (Cancer) ಅಪಾಯಕ್ಕೆ ತುತ್ತಾಗುವ ಸಂಭವ ಹೆಚ್ಚು ಎಂದು ಸ್ಪೇನ್‌ನ ಬಾರ್ಸಿಲೋನಾದಲ್ಲಿ ಯುರೋಪಿಯನ್ ರೆಸ್ಪಿರೇಟರಿ ಸೊಸೈಟಿ (ERS) ಇಂಟರ್ನ್ಯಾಷನಲ್ ಕಾಂಗ್ರೆಸ್‌ನಲ್ಲಿ ಪ್ರಸ್ತುತಪಡಿಸಿದ ದೊಡ್ಡ ಅಧ್ಯಯನದಲ್ಲಿ (Study) ಹೇಳಲಾಗಿದೆ. ಎರಡನೆಯ ಅಧ್ಯಯನವು OSA ದಿಂದ ವಯಸ್ಸಾದವರಲ್ಲಿ ಶಕ್ತಿಯು ಹಂತ-ಹಂತವಾಗಿ ಕುಂದುತ್ತಾ ಹೋಗುತ್ತದೆ ಎಂದು ಹೇಳಿದೆ. 

ನಿರ್ದಿಷ್ಟವಾಗಿ, 74 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಮತ್ತು ಪುರುಷರು ಕೆಲವು ಜ್ಞಾಪಕಕ್ಕೆ ಸಂಬಂಧಪಟ್ಟ ಪರೀಕ್ಷೆಗಳಲ್ಲಿ ಹೆಚ್ಚಿನ ಶಕ್ತಿಯು ಕಡಿಮೆಯಾಗುವದನ್ನು ತೋರಿಸಿದ್ದಾರೆ. ಇನ್ನು ಮೂರನೇ ಅಧ್ಯಯನದಲ್ಲಿ ಹೆಚ್ಚು ತೀವ್ರವಾದ OSA ದಿಂದ ಬಳಲುತ್ತಿರುವ ರೋಗಿಗಳ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯು ಹೆಚ್ಚಾಗುವ ಅಪಾಯವನ್ನು ಹೊಂದುತ್ತಾರೆ ಎಂದು ಕಂಡುಹಿಡಿಯಲಾಗಿದೆ. ಈ ಅಪಾಯವು ಮನುಷ್ಯನ ಸಂಭಾವ್ಯ ಮಾರಣಾಂತಿಕ ಸ್ಥಿತಿಯಾಗಿದೆ.

OSA ಒಂದು ಸಾಮಾನ್ಯ ನಿದ್ರೆಯ ಅಸ್ವಸ್ಥತೆಯಾಗಿದ್ದು, ಜನರು ನಿದ್ರೆಯ ಸಮಯದಲ್ಲಿ ಶ್ವಾಸನಾಳ ಕಟ್ಟಿದ ಅನುಭವವನ್ನು ಹೊಂದುತ್ತಾರೆ. ಇದರಿಂದ ವ್ಯಕ್ತಿಯು ಹೆಚ್ಚು ಗೊರಕೆ ಹೊಡೆಯುತ್ತಾರೆ. ಈ ತೊಂದರೆ ಸಾಮಾನ್ಯ ರೂಪವಾಗಿದೆ. ಈ ತೊಂದರೆಯಿಂದ ಬಳಲುತ್ತಿರುವವರು ರಾತ್ರಿಯಲ್ಲಿ ಹಲವಾರು ಬಾರಿ ಉಸಿರಾಟದ ತೊಂದರೆಯನ್ನು ಅನುಭವಿಸುತ್ತಾರೆ. ಇದು ಕನಿಷ್ಠ 7-13% ರಷ್ಟು ಜನರನ್ನು ತೀವ್ರವಾಗಿ ಕಾಡುತ್ತಿರುವ ಸಮಸ್ಯೆಯಾಗಿದೆ. ಇದಕ್ಕೆ ಬೇಗನೆ ತುತ್ತಾಗುವವರು ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವವರು, ಮಧುಮೇಹ ಹೊಂದಿರುವವರು ಅಥವಾ ಧೂಮಪಾನ ಮಾಡುವವರು ಅಥವಾ ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸುವವರು OSA ದಿಂದ ಹೆಚ್ಚಿನ ಅಪಾಯಕ್ಕೆ ತುತ್ತಾಗುತ್ತಾರೆ.

ಮೊದಲ ಅಧ್ಯಯನ:
ಮೊದಲ ಅಧ್ಯಯನವನ್ನು ಪ್ರಸ್ತುತಪಡಿಸಿದ ಸ್ವೀಡನ್‌ನ ಉಪ್ಸಲಾ ವಿಶ್ವವಿದ್ಯಾಲಯದ ಸಂಶೋಧಕ ಮತ್ತು ಹಿರಿಯ ಸಲಹೆಗಾರ ಡಾ. ಆಂಡ್ರಿಯಾಸ್ ಪಾಮ್ ಅವರು " OSA ನಿದ್ರಾ ತೊಂದರೆಯನ್ನು ಅನುಭವಿಸುತ್ತಿರುವ ರೋಗಿಗಳಿಗೆ ನಿದ್ರೆಯಲ್ಲಿ ಹೆಚ್ಚು ಉಸಿರುಕಟ್ಟುವಿಕೆಯಿಂದ ಮುಂದೆ ಭವಿಷ್ಯದಲ್ಲಿ ರೋಗಿಗಳಿಗೆ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ಹೇಳಲಾಗುತ್ತಿದೆ, ಆದರೆ, ಅದು ಇನ್ನು ದೃಡೀಕರಣಗೊಂಡಿಲ್ಲ. OSA ತೊಂದರೆ ಕಾಣಿಸಿಕೊಳ್ಳುವುದು ಸ್ಥೂಲಕಾಯತೆ, ಕಾರ್ಡಿಯೋಮೆಟಾಬಾಲಿಕ್ ಕಾಯಿಲೆ ಮತ್ತು ಜೀವನಶೈಲಿಯ ಅಂಶಗಳಿಂದಲೇ ಈ ನಿದ್ರಾ ತೊಂದರೆ ಬಂದು ನಂತರ ಕ್ಯಾನ್ಸರ್‌ ಆಗಿ ಬದಲಾಗುತ್ತದೆ. OSA ಯಿಂದ ಉಂಟಾಗುವ ಆಮ್ಲಜನಕದ ಕೊರತೆಯು ಕೂಡ ಕ್ಯಾನ್ಸರ್‌ಗೆ ನೇರವಾದ ಸಂಬಂಧವನ್ನು ಹೊಂದಿದೆ ಎಂದು ನಮ್ಮ ಸಂಶೋಧನೆಗಳಿಂದ ವರದಿ ಆಗಿದೆ” ಎಂದು ಹೇಳಿದರು.

ಇದನ್ನೂ ಓದಿ:  Depression: ಖಿನ್ನತೆ ಬಗ್ಗೆ ನಿರ್ಲಕ್ಷ್ಯ ಬೇಡ; ಕಾರಣ, ಚಿಕಿತ್ಸೆ ಬಗ್ಗೆ ಇರಲಿ ಮಾಹಿತಿ

ಡಾ.ಪಾಮ್ ಮತ್ತು ಸಹೋದ್ಯೋಗಿಗಳು ಸ್ವೀಡನ್‌ನಲ್ಲಿ OSA ಗೆ ಚಿಕಿತ್ಸೆ ನೀಡುವ ಮೊದಲ ಐದು ವರ್ಷಗಳ ಮುಂಚೆ 62,811 ರೋಗಿಗಳ ಡೇಟಾವನ್ನು ಪರಿಶೀಲಿಸಿದ್ದಾರೆ. ಜುಲೈ 2010 ಮತ್ತು ಮಾರ್ಚ್ 2018 ರ ನಡುವೆ, ರೋಗಿಗಳಿಗೆ ಕಂಟಿನ್ಯೂಅಸ್‌ ಪಾಸಿಟಿವ್‌ ಏರ್‌ವೇ ಪ್ರೆಷರ್‌ (ಸಿ.ಪಿ.ಎ.ಪಿ) ಯೊಂದಿಗೆ ಚಿಕಿತ್ಸೆ ನೀಡಲಾಯಿತು. ಇದು ನಿದ್ರೆಯ ಸಮಯದಲ್ಲಿ ಶ್ವಾಸನಾಳಕ್ಕೆ ಮೂಗಿನ ಮೂಲಕ ಗಾಳಿಯ ಹರಿವು ಉತ್ತಮಗೊಳಿಸುತ್ತದೆ. ಸಂಶೋಧಕರು ಈ ಡೇಟಾವನ್ನು ಸ್ವೀಡಿಷ್ ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಮತ್ತು ಅಂಕಿಅಂಶದಿಂದ ಪಡೆದು ಸಾಮಾಜಿಕ-ಆರ್ಥಿಕ ಡೇಟಾದೊಂದಿಗೆ ಲಿಂಕ್ ಮಾಡಿದ್ದಾರೆ.

ಎರಡನೇ ಅಧ್ಯಯನ
ಎರಡನೇ ಅಧ್ಯಯನದಲ್ಲಿ, ಸ್ವಿಟ್ಜರ್ಲೆಂಡ್‌ನ ಲೌಸನ್ನೆ ವಿಶ್ವವಿದ್ಯಾಲಯದಲ್ಲಿ ಸೆಂಟರ್ ಫಾರ್ ಇನ್ವೆಸ್ಟಿಗೇಶನ್ ಅಂಡ್ ರಿಸರ್ಚ್ ಆನ್ ಸ್ಲೀಪ್ (CIRS) ನ ನಿರ್ದೇಶಕ ಪ್ರೊಫೆಸರ್ ರಾಫೆಲ್ ಹೈಂಜರ್ ಅವರು ಸಹೋದ್ಯೋಗಿ ಡಾ. ನಿಕೋಲಾ ಮಾರ್ಚಿ ಅವರೊಂದಿಗೆ ನಡೆಸಿದ ಅಧ್ಯಯನವು OSA ಗೆ ಸಂಬಂಧಿಸಿದೆ ಎಂದು ತಿಳಿಸಿದೆ. 5 ವರ್ಷಗಳ ಡೇಟಾಗಳ ಆಧಾರದ ಮೇಲೆ OSA ದಿಂದ ಮಾನಸಿಕ ಶಕ್ತಿಯು ಕುಂದುತ್ತದೆ ಎಂದು ಇದರಲ್ಲಿ ತಿಳಿಸಲಾಗಿದೆ.

ಈ ಅಧ್ಯಯನದಲ್ಲಿ, 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 358 ಜನರನ್ನು ಪ್ರೊಫೆಸರ್ ಹೈಂಜರ್ ಅವರು ಅಧ್ಯಯನ ಮಾಡಿದ್ದಾರೆ. ಈ ಸಂಶೋಧನಾಧ್ಯಯನದಲ್ಲಿ OSA ಯ ಉಪಸ್ಥಿತಿ ಮತ್ತು ತೀವ್ರತೆಯನ್ನು ಪರೀಕ್ಷಿಸಲು ನಿದ್ರೆಯ ಪರೀಕ್ಷೆಯನ್ನು ತೆಗೆದುಕೊಳ್ಳಲಾಗಿದೆ. 2009 ಮತ್ತು 2013 ರ ನಡುವಿನ ಮೊದಲ ಅನುಸರಣೆಯ ಸಮಯದಲ್ಲಿ, ಅವರ ಮಾನಸಿಕ ಪ್ರಕ್ರಿಯೆಯ ಸಾಮರ್ಥ್ಯಗಳನ್ನು ಸಹ ಪರೀಕ್ಷಿಸಲಾಯಿತು.

ಐದು ವರ್ಷಗಳ ನಂತರ ಎರಡನೇ ಅನುಸರಣೆಯ ಸಮಯದಲ್ಲಿ ಮತ್ತೊಂದು ಅರಿವಿನ ಮೌಲ್ಯಮಾಪನವು ನಡೆಯಿತು. ಆಗ ತಿಳಿದು ಬಂದ ವರದಿಯೆಂದರೆ, ನಿದ್ರೆಯ ಕೊರತೆಯಿಂದ ವಯಸ್ಸಾದವರಲ್ಲಿ ನೆನಪಿನ ಶಕ್ತಿ ಮತ್ತು ಮಾನಸಿಕ ಶಕ್ತಿಯು ಸಹ ಕುಂದುತ್ತಾ ಹೋಗುತ್ತದೆ. ಕೆಲವು ನಿರ್ದಿಷ್ಟ ಅರಿವಿನ ಪರೀಕ್ಷೆಗಳಲ್ಲಿ 74 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ಮತ್ತು ಪುರುಷರು ನಿದ್ರೆಯಲ್ಲಿ ಉಸಿರುಕಟ್ಟುವಿಕೆಯ ಹೆಚ್ಚಿನ ಅಪಾಯವನ್ನು ಹೊಂದಿದ್ದರು ಎಂಬುದನ್ನು ಅಧ್ಯಯನ ತಿಳಿಸಿದೆ.

ಮೂರನೇ ಅಧ್ಯಯನ
ಫ್ರಾನ್ಸ್‌ನ ಆಂಗರ್ಸ್ ಯೂನಿವರ್ಸಿಟಿ ಹಾಸ್ಪಿಟಲ್‌ನಿಂದ ಪ್ರೊಫೆಸರ್ ವೊಜ್ಸಿಕ್ ಟ್ರೆಜೆಪಿಜುರ್ ಅವರು ಪ್ರಸ್ತುತಪಡಿಸಿದ ಮೂರನೇ ಅಧ್ಯಯನವು, AHI ಮತ್ತು ರಾತ್ರಿಯ ಆಮ್ಲಜನಕದ ಕೊರತೆಯ ಗುರುತುಗಳಿಂದ ಅಳೆಯಲಾದ ಹೆಚ್ಚು ತೀವ್ರವಾದ OSA ಹೊಂದಿರುವ ರೋಗಿಗಳು ವೆನೊಸ್‌ ಥ್ರಂಬೋ ಎಂಬೊಲಿಸಮ್ (VTE) ಅನ್ನು ಅಭಿವೃದ್ಧಿಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ತೋರಿಸಿದೆ. ಈ ಸಮಸ್ಯೆ ಇರುವವರು ರಾತ್ರಿಯ ಸಮಯದಲ್ಲಿ 6% ಕ್ಕಿಂತ ಹೆಚ್ಚು ಸಮಯ ರಕ್ತದಲ್ಲಿ ಆಮ್ಲಜನಕದ ಮಟ್ಟವು 90% ಕ್ಕಿಂತ ಕಡಿಮೆ ಆಗಿದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ ಎಂದು ಹೇಳಿದ್ದಾರೆ.

ಹಾಗಿದ್ರೆ ಸ್ಲೀಪ್‌ ಆಪ್ನಿಯಾದ ಗುಣಲಕ್ಷಣಗಳೇನು?
ಸ್ಲೀಪ್‌ ಆಪ್ನಿಯಾ ಸಮಸ್ಯೆ ಇರುವವರು ತಮಗೆ ಸಮಸ್ಯೆಯಿದೆ ಎಂಬುದನ್ನು ಗುರುತಿಸುವುದು ಕಷ್ಟ. ಯಾಕೆಂದರೆ ನಿದ್ರೆಯ ಸಮಯದಲ್ಲಿ ಮಾತ್ರ ಇದರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದಾಗ್ಯೂ, ಕೆಲವು ಸಾಮಾನ್ಯ ಲಕ್ಷಣಗಳು ಹೀಗಿರುತ್ತವೆ:

ಇದನ್ನೂ ಓದಿ:  Digital Rape: ಡಿಜಿಟಲ್‌ ರೇಪ್ ಎಂದರೇನು? ಭಾರತದಲ್ಲಾದ ಅತ್ಯಾಚಾರ ಪ್ರಕರಣಗಳ ಬಗ್ಗೆ ತಿಳಿಯಿರಿ

  • ಹಗಲಿನಲ್ಲಿ ತೂಕಡಿಕೆ: ರಾತ್ರಿ ಸರಿಯಾಗಿ ನಿದ್ರೆ ಮಾಡಿದ್ದರೂ ಹಗಲಿನಲ್ಲಿ ತೂಕಡಿಕೆಯ ಅನುಭವ ತೀವ್ರವಾಗಿ ಉಂಟಾಗಿದ್ದರೆ, ವ್ಯಕ್ತಿಗೆ ಗೊತ್ತಿಲ್ಲದಂತೆಯೇ ನಿದ್ರೆಯ ಸಮಯದಲ್ಲಿ ಉಸಿರಾಟದ ಸಮಸ್ಯೆಯಿಂದ ಕಷ್ಟಪಡುತ್ತಿದ್ದಾರೆ ಎಂದರ್ಥ.

  • ನಿದ್ರೆ ವೇಳೆ ಉಸಿರು ನಿಂತಂತ ಅನುಭವ: ಉಸಿರು ಕಟ್ಟಿದಂತಾಗಿ ರಾತ್ರಿ ವೇಳೆ ನಿದ್ರೆಯಿಂದ ಎಚ್ಚರಾಗಬಹುದು ಅಥವಾ ವ್ಯಕ್ತಿ ಉಸಿರಾಡಲು ಕಷ್ಟಪಡುತ್ತಿದ್ದರು ಎಂದು ಅವರ ಮನೆಯವರು ಹೇಳಬಹುದು.

  • ಬೆಳಗಿನ ತಲೆನೋವು, ಬಾಯಿ ಒಣಗುವುದು: ನಿತ್ಯವೂ ಏಳುವಾಗ ತಲೆನೋವು, ಬಾಯಿ ಒಣಗಿರುವಂತ ಅನಿಸಿಕೆ ಅಥವಾ ಗಂಟಲು ನೋವು ಇರಬಹುದು; ಇದರಿಂದ ನಿದ್ರೆ ಮಾಡುವ ಸಮಯದಲ್ಲಿ ಉಸಿರಾಟದ ತೊಂದರೆ ಇರಬಹುದು ಎಂದು ಸೂಚಿಸುತ್ತದೆ.

  • ದೊಡ್ಡದಾದ ಗೊರಕೆ: ನಿತ್ಯವೂ ವ್ಯಕ್ತಿ ದೊಡ್ಡದಾಗಿ ಗೊರಕೆ ಹೊಡೆಯುತ್ತಾರೆ ಎಂದು ಮನೆಯವರು ಹೇಳಬಹುದು.

  • ಕಿರಿಕಿರಿಯಾಗುವುದು ಮತ್ತು ಮೂಡಿಯಾಗಿರುವುದು: ವ್ಯಕ್ತಿಯಲ್ಲಿ ಕಿರಿಕಿರಿಯ ಭಾವ ಹೆಚ್ಚಾಗಬಹುದು ಮತ್ತು ಚಂಚಲ ಸ್ವಭಾವ ವ್ಯಕ್ತಪಡಿಸಬಹುದು. ಇದು ನಿದ್ರೆಯ ಸಮಸ್ಯೆಯ ಕಾರಣದಿಂದ ಉಂಟಾಗಿರಬಹುದು. ನಿತ್ಯವೂ ದೊಡ್ಡದಾಗಿ ಗೊರಕೆ ಹೊಡೆಯುವವರನ್ನು ನೀವು ಗಮನಿಸಿದರೆ ಅಥವಾ ಉಸಿರು ಕಟ್ಟಿದ ಅನುಭವವಾಗಿ ಎದ್ದೇಳುವುದನ್ನು ಕಂಡರೆ ನೀವು ಅವರ ಜತೆ ಸ್ಲೀಪ್ ಆಪ್ನಿಯಾ ಬಗ್ಗೆ ಮಾತನಾಡಿ ಮತ್ತು ವೈದ್ಯರ ಸಹಾಯ ಪಡೆಯುವಂತೆ ಅವರಿಗೆ ಸಲಹೆ ನೀಡಬಹುದು.


ಸ್ಲೀಪ್‌ ಆಪ್ನಿಯಾಗೆ ಕಾರಣಗಳೇನು?
ಅಬ್ಸ್‌ಟ್ರಕ್ಟಿವ್‌ ಸ್ಲೀಪ್ ಆಪ್ನಿಯ ಅತಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ನಿದ್ರೆಯ ತೊಂದರೆ. ಶ್ವಾಸನಾಳದ ಮೇಲ್ಭಾಗದ ಸ್ನಾಯ ವಿಶ್ರಾಂತಿ ಪಡೆದುಕೊಳ್ಳುವಾಗ ಮತ್ತು ನೀವು ಉಸಿರನ್ನು ಒಳಗೆಳೆದುಕೊಳ್ಳುವಾಗ ನಾಲಿಗೆ ಹಿಂದೆ ಚಾಚಿ ಗಾಳಿಯನ್ನು ಒಳಗೆಳೆದುಕೊಳ್ಳುವ ಪ್ರಮಾಣ ಕಡಿಮೆಯಾಗುವಂತೆ ಮಾಡುತ್ತದೆ.

ಬಹುತೇಕ ಪ್ರಕರಣದಲ್ಲಿ, ಹೆಚ್ಚುವರಿ ಒತ್ತಡದಿಂದಾಗಿ ಗಂಟಲಿನ ಹಿಂಭಾಗದ ಅಂಗಾಂಶಗಳು ಕಂಪಿಸುವುದರಿಂದ ವ್ಯಕ್ತಿಯು ಗೊರಕೆ ಹೊಡೆಯುವ ಶಬ್ದ ಕೇಳುತ್ತದೆ. ಇದರಿಂದ ಉಸಿರು ಕಟ್ಟಿದ ಅನುಭವವೂ ಆಗಿ ಎದ್ದೇಳಬಹುದು. ಕತ್ತಿನಲ್ಲಿ ಹೆಚ್ಚುವರಿ ಕೊಬ್ಬಿನಾಂಶವನ್ನು ಹೊಂದಿರುವವರಲ್ಲಿ ಈ ತೊಂದರೆ ಕಾಣಿಸಿಕೊಳ್ಳಬಹುದು. ಇದರಿಂದ ಶ್ವಾಸನಾಳದ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತದೆ. ಧೂಮಪಾನಿಗಳೂ ಕೂಡ ಅಬ್ಸ್‌ಟ್ರಕ್ಟಿವ್‌ ಸ್ಲೀಪ್ ಆಪ್ನಿಯ ತೊಂದರೆಯಿಂದ ಬಳಲಬಹುದು.

ಅಧಿಕ ರಕ್ತದೊತ್ತಡ, ಅತಿಯಾದ ತೂಕ ಮತ್ತು ವೃದ್ಧಾಪ್ಯ ಮುಂತಾದವು ಅಬ್ಸ್‌ಟ್ರಕ್ಟಿವ್‌ ಸ್ಲೀಪ್ ಆಪ್ನಿಯಗೆ ಕಾರಣವಾಗುವ ಇತರ ಅಂಶಗಳು. ಅಬ್ಸ್‌ಟ್ರಕ್ಟಿವ್‌ ಸ್ಲೀಪ್ ಆಪ್ನಿಯಗಿಂತ ಸೆಂಟ್ರಲ್‌ ಸ್ಲೀಪ್‌ ಆಪ್ನಿಯ ಕಾಣಿಸಿಕೊಳ್ಳುವ ಪ್ರಮಾಣ ಕಡಿಮೆ. ಸೆಂಟ್ರಲ್ ಸ್ಲೀಪ್ ಆಪ್ನಿಯ ವೃದ್ಧಾಪ್ಯದಲ್ಲಿ ಕಾಣಿಸಿಕೊಳ್ಳಬಹುದು. ಆದರೆ ಈ ತೊಂದರೆಯಿಂದ ಹೃದಯ ವೈಫಲ್ಯ, ಹೃದಯಾಘಾತ ಮತ್ತು ಕೆಲವು ನರ ಸಂಬಂಧೀ ರೋಗಗಳು ಕಾಣಿಸಿಕೊಳ್ಳುತ್ತವೆ. ಈ ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿ ತಮ್ಮ ಸಮಸ್ಯೆಯ ಬಗ್ಗೆ ಅರಿವಿರುತ್ತದೆ.

ಸ್ಲೀಪ್ ಅಪ್ನಿಯಾಗೆ ಚಿಕಿತ್ಸೆ ಹೇಗೆ?
ಸಣ್ಣ ಪ್ರಮಾಣದ ಸ್ಲೀಪ್‌ ಅಪ್ನಿಯಾಗೆ ವೈದ್ಯರು ಜೀವನಶೈಲಿಯಲ್ಲಿ ಬದಲಾವಣೆ, ದೇಹದ ತೂಕ ಕಡಿಮೆಮಾಡುವುದು, ಅಥವಾ ಧೂಮಪಾನ ಮತ್ತು ಮದ್ಯ ಸೇವನೆಯನ್ನು ಕಡಿಮೆ ಮಾಡಿಕೊಳ್ಳಲು ಸೂಚಿಸಬಹುದು. ಮೇಲ್ಮುಖವಾಗಿ ಮಲಗಿ ನಿದ್ರಿಸುವವರಲ್ಲಿ ಈ ಸಮಸ್ಯೆ ಕಾಣಿಸಿಕೊಂಡಲ್ಲಿ ವೈದ್ಯರು ಮಗ್ಗುಲಾಗಿ ಮಲಗಿ ನಿದ್ರಿಸುವಂತೆ ಸೂಚಿಸಿ ಇದಕ್ಕೆ ಸಂಬಂಧಿಸಿದ ಥೆರಪಿಯನ್ನು ಶಿಫಾರಸು ಮಾಡಬಹುದು. ಸ್ಲೀಪ್‌ ಆಪ್ನಿಯಾದ ಗಂಭೀರ ಪ್ರಕರಣಗಳಿಗೆ ಕೆಲವು ಚಿಕಿತ್ಸೆಗಳನ್ನು ನೀಡಲಾಗುತ್ತದೆ:

ಇದನ್ನೂ ಓದಿ:  ಸುಮ್ಮಸುಮ್ಮನೆ ಗಾಬರಿ ಆಗೋ ಸಮಸ್ಯೆ ‘ಪ್ಯಾನಿಕ್ ಅಟ್ಯಾಕ್’, ಆಲಿಯಾ ಭಟ್ ಸಹೋದರಿಗೂ ಇದೆ ಈ ಖಾಯಿಲೆ

  • ಕಂಟಿನ್ಯೂವಸ್‌ ಪಾಸಿಟಿವ್‌ ಏರ್‌ವೇ ಪ್ರೆಷರ್‌ (ಸಿ.ಪಿ.ಎ.ಪಿ): ಈ ಚಿಕಿತ್ಸೆಯಲ್ಲಿ, ಶ್ವಾಸನಾಳ ಎಂದೂ ತೆರೆದೇ ಇರುವಂತೆ ಮಾಡುವುದಕ್ಕೆ ನಿರಂತರವಾಗಿ ಗಾಳಿಯ ಪ್ರವಾಹವನ್ನು ಬಳಸುವ ಒಂದು ಮುಖವಾಡವನ್ನು ವ್ಯಕ್ತಿಗೆ ನೀಡಲಾಗುತ್ತದೆ. ಇದರಿಂದ ವ್ಯಕ್ತಿ ರಾತ್ರಿಯ ನಿದ್ರೆಯನ್ನು ಅನುಕೂಲಕರವಾಗಿ ಮಾಡಬಹುದು. ಆದರೆ ಮಾಸ್ಕ್‌ ಧರಿಸಿ ನಿದ್ರೆ ಮಾಡುವುದನ್ನು ರೂಢಿ ಮಾಡಿಕೊಳ್ಳಲು ವ್ಯಕ್ತಿಗೆ ಸಮಯ ಹಿಡಿಯಬಹುದು.

  • ಮೌಖಿಕ ಸಾಧನಗಳು: ಕೆಲವು ಬಾರಿ ವೈದ್ಯರು ಮೌಖಿಕ ಸಾಧನಗಳನ್ನು ನೀಡಬಹುದು. ಇದು ದಂತಧಾರಕಗಳ ರೀತಿ ಇರುತ್ತದೆ. ಈ ಸಾಧನಗಳು ನಾಲಿಗೆಯನ್ನು ಮೇಲೆ ಎತ್ತಿ ಹಿಡಿದು ದವಡೆಯನ್ನು ಸರಿಯಾದ ಸ್ಥಾನದಲ್ಲಿ ಇರಿಸಲು ಸಹಾಯ ಮಾಡುತ್ತವೆ.

  • ಶಸ್ತ್ರಚಿಕಿತ್ಸೆ: ನಿದ್ರೆ ವೇಳೆಯಲ್ಲಿ ಶ್ವಾಸನಾಳವನ್ನು ಕಟ್ಟದಂತೆ ತಡೆಯಲು ಗಂಟಲಿನ ಹಿಂಭಾಗದಲ್ಲಿನ ಅಂಗಾಂಶವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆಯಲಾಗುತ್ತದೆ ಅಥವಾ ಕಡಿಮೆ ಮಾಡಲಾಗುತ್ತದೆ. ಕೆಲವು ಪ್ರಕರಣಗಳಲ್ಲಿ, ನಾಲಿಗೆಯ ಹಿಂಬದಿಯಲ್ಲಿ ಉಸಿರಾಟಕ್ಕೆ ಸಾಕಷ್ಟು ಸ್ಥಳಾವಕಾಶ ಸಿಗುವುದಕ್ಕಾಗಿ ದವಡೆಯನ್ನು ಮರು ಹೊಂದಿಸಲಾಗುತ್ತದೆ.

Published by:Ashwini Prabhu
First published: