ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ 2022 ರ ಸಪ್ಟೆಂಬರ್ 7 ರಂದು ಕನ್ಯಾಕುಮಾರಿಯಲ್ಲಿ (Kanyakumari) ಆರಂಭವಾದ ಭಾರತ್ ಜೋಡೋ ಯಾತ್ರೆ (Bharat Jodo Yatra) 136 ದಿನಗಳ ಬಳಿಕ ಜಮ್ಮು ಕಾಶ್ಮೀರದ (Jammu Kashmir) ಶ್ರೀನಗರದಲ್ಲಿ (Srinagar) ಸಮಾರೋಪಗೊಂಡಿದೆ. ಐದು ತಿಂಗಳ ಅವಧಿಯಲ್ಲಿ 12 ರಾಜ್ಯಗಳನ್ನೊಳಗೊಂಡ 4,000 ಕಿ.ಮೀ ಪಾದಯಾತ್ರೆ ಯಶಸ್ವಿಯಾಗಿ ಪೂರ್ಣಗೊಂಡಿತು. ಭಾರತ್ ಜೋಡೋ ಯಾತ್ರೆಯನ್ನು ಪಕ್ಷಕ್ಕಾಗಿ ಮಾಡಿಲ್ಲ ಎಂದು ತಿಳಿಸಿರುವ ರಾಹುಲ್ ಗಾಂಧಿ, ಈ ದೇಶದ ಜನರಿಗಾಗಿ ಮಾಡಿರುವೆ ಜೊತೆಗೆ ದೇಶದ ಅಡಿಪಾಯವನ್ನು ನಾಶ ಮಾಡಲು ಬಯಸುವ ಸಿದ್ಧಾಂತದ ವಿರುದ್ಧ ನಿಲ್ಲುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
ಚುನಾವಣೆಯನ್ನು ಉದ್ದೇಶವಾಗಿಟ್ಟುಕೊಂಡು ಕಾಂಗ್ರೆಸ್ ಯಾತ್ರೆಗೆ ಮುಂದಾಗಿದೆ ಎಂಬುದು ರಾಜಕೀಯ ಟೀಕಾಕಾರರ ಮಾತಾಗಿದ್ದರೂ ಯಾತ್ರೆಯು ಜನಜೀವನವನ್ನು ಸಮೀಪದಿಂದ ಅರ್ಥೈಸುವ ಗುರಿಯನ್ನು ಹೊಂದಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಹಾಗಿದ್ದರೆ ಈ ಯಾತ್ರೆಯು ಈ ಅಂಶಗಳನ್ನು ಪೂರೈಸಿದೆಯೇ? ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವಿನ ಪತಾಕೆಯನ್ನು ಹಾರಿಸಬಹುದೇ ಎಂಬುದನ್ನು ತಿಳಿದುಕೊಳ್ಳೋಣ…
ಯಾತ್ರೆಯ ಉದ್ದೇಶಗಳು
ರಾಹುಲ್ ಗಾಂಧಿಯೊಂದಿಗೆ ಹಾಗೂ ಅವರನ್ನು ಹೊರತುಪಡಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ಚುನಾವಣೆ ಎದುರಿಸಿದ ರಾಜ್ಯಗಳಲ್ಲಿ ಪರ್ಯಾಯವಾಗಿ ಹೋರಾಟವನ್ನು ಮುಂದುವರಿಸಿದೆ. ಆದರೆ ಯಾತ್ರೆಯ ಸಮಯದಲ್ಲಿ ಮತ ಹಂಚಿಕೆಯ ವಿಷಯದಲ್ಲಿ ಉಂಟಾದ ಕುಸಿತ ಕಾಂಗ್ರೆಸ್‌ನ ಬುಡಕ್ಕೆ ಪೆಟ್ಟುನೀಡಿದೆ. ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷವು (ಎಎಪಿ) ಕಾಂಗ್ರೆಸ್‌ನ ಹೆಚ್ಚಿನ ಮತಗಳನ್ನು ಕಸಿದುಕೊಂಡಿತು. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಆಡಳಿತ ವಿರೋಧಿ ಫಲಿತಾಂಶವು ಬಿಜೆಪಿಯನ್ನು ಎದುರಿಸಲು ಪಕ್ಷದ ಒಟ್ಟಾರೆ ಸಾಮರ್ಥ್ಯಕ್ಕೆ ಒಂದು ಅಪವಾದವಾಗಿ ಹೊರಹೊಮ್ಮಿತು.
Sheen Mubarak!😊
A beautiful last morning at the #BharatJodoYatra campsite, in Srinagar.❤️ ❄️ pic.twitter.com/rRKe0iWZJ9
— Rahul Gandhi (@RahulGandhi) January 30, 2023
ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ಥಾನದಂತಹ ರಾಜ್ಯಗಳಲ್ಲಿಯೂ ಸಹ, ಆಂತರಿಕ-ಪಕ್ಷದ ಸಂಘರ್ಷದ ಸ್ಥಿತಿ, ಮುರಿದ ಸಂಘಟನಾ ರಚನೆ, ಮುಂದಿನ ಚುನಾವಣಾ ಚಕ್ರಕ್ಕೆ (ಪೈಲಟ್-ಗೆಹ್ಲೋಟ್ ಜಗಳದ ನಡುವೆ) ಮುಖ್ಯಮಂತ್ರಿಯ ಮುಖದ ಅನುಪಸ್ಥಿತಿ ರಾಜ್ಯದಲ್ಲಿ ಪಕ್ಷದ ಸ್ವಂತ ಭವಿಷ್ಯದ ಬಗ್ಗೆ ಒಗ್ಗಟ್ಟಿನ ಕೊರತೆಯು ಎದ್ದುಕಾಣುತ್ತಿದೆ.
ಕಾಂಗ್ರೆಸ್ ಪುನಃ ಶಕ್ತಿ ಪಡೆದುಕೊಂಡಿದೆಯೇ?
ಬಿಜೆಪಿಯಂತಹ ಸಮರ್ಥ ಪಕ್ಷವನ್ನು ಎದುರಿಸಲು ಹಾಗೂ ಚುನಾವಣಾ ಕಣದಲ್ಲಿ ಸೋಲಿಸಲು ಕಾಂಗ್ರೆಸ್‌ನ ಈ ಯಾತ್ರೆ ಮುಖ್ಯ ವೇದಿಕೆಯಾಗಿ ಕಾರ್ಯನಿರ್ವಹಿಸಿದೆ ಎಂಬುದು ಕಾಂಗ್ರೆಸ್ ಸಂಸದರ ಮಾತಾಗಿದೆ. ಮತದಾರರನ್ನು ಒಗ್ಗಟ್ಟಿನಿಂದ ಒಗ್ಗೂಡಿಸಲು ಪ್ರಯತ್ನಿಸುತ್ತಿರುವಾಗ, ಅವನತಿಯಲ್ಲಿರುವ ಹಳೆಯ ಪಕ್ಷವನ್ನು ಪುನರುಜ್ಜೀವನಗೊಳಿಸಲು ಮಾಡಿದ ಯಾವುದೇ ಪ್ರಯತ್ನವು ಮೌಲ್ಯಯುತವಾದುದು ಎಂದು ಈ ದಿಸೆಯಲ್ಲಿ ಒಪ್ಪಿಕೊಳ್ಳಬೇಕು. ಆದರೆ, 150 ದಿನಗಳ ಪಾದಯಾತ್ರೆಯ ನಂತರವೂ, ಯಾತ್ರೆಯು ಇದನ್ನು ಸಾಧಿಸಲು ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬುದು ಪ್ರಶ್ನೆಯಾಗಿದೆ.
ಇದನ್ನೂ ಓದಿ: Narendra Modi-C Voter: ಈಗ ಚುನಾವಣೆ ನಡೆದ್ರೆ ಮೋದಿಯೇ ಪ್ರಧಾನಿ! ಸಿ ವೋಟರ್ ಸಮೀಕ್ಷೆ ಹೇಳಿದ್ದೇನು?
ಚುನಾವಣಾ ವೇದಿಕೆಯಲ್ಲಿ ಯಾತ್ರೆಯ ಯಶಸ್ಸಿನ ಉತ್ತರ ದೊರೆಯಬಹುದೇ?
ಯಾತ್ರೆಯ ಯಶಸ್ಸು ಅಥವಾ ವೈಫಲ್ಯವು ರಾಜಕೀಯವಾಗಿ ನಿರ್ಧರಿಸಲಾಗುತ್ತದೆ. ಯಾತ್ರೆ ಎಷ್ಟು ಹೃದಯ ಮತ್ತು ಮನಸ್ಸುಗಳನ್ನು ಪರಿವರ್ತಿಸುತ್ತದೆ ಎಂಬುದು ಪ್ರಶ್ನೆಯಾಗಿದೆ. ಯಾತ್ರೆ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಶಕ್ತಿ ತುಂಬಿರಬಹುದು. ಆದರೆ ಇದು ಪಕ್ಷಕ್ಕೆ ಹಿಂದಿನ ಅದೇ ವೇಗವನ್ನು ನೀಡಿದೆಯೇ ಎಂಬುದು ಸತ್ಯವಲ್ಲ. ಅದೇನಿದ್ದರೂ, ಕಾಂಗ್ರೆಸ್‌ನಲ್ಲಿನ ಗುಂಪುಗಾರಿಕೆ, ಪಕ್ಷಕ್ಕೆ ಉತ್ತಮ ಅವಕಾಶವಿರುವ ರಾಜ್ಯಗಳಾದ ರಾಜಸ್ಥಾನ ಮತ್ತು ಕರ್ನಾಟಕದಲ್ಲಿಯೂ ಸಹ ಕಾಂಗ್ರೆಸ್‌ನ ಸ್ಥಾನವನ್ನು ಕೆಳಮಟ್ಟಕ್ಕೆ ತಳ್ಳುತ್ತಿದೆ.
ಮಹಿಳೆಯರು ಹಾಗೂ ಯುವಕರ ಬೆಂಬಲ ಇತ್ತಾ?
ಕಾಂಗ್ರೆಸ್‌ಗೆ ಮತಹಾಕುವವರು ಯಾರು ಎಂಬುದು ಖಚಿತವಾಗಿ ತಿಳಿದಿಲ್ಲವಿರುವಾಗ ಮುಂಬರುವ ಚುನಾವಣೆಯಲ್ಲಿ ತಮ್ಮ ಚುನಾವಣಾ ಭವಿಷ್ಯಕ್ಕಾಗಿ ರಾಹುಲ್ ಗಾಂಧಿಯವರ ಯಾತ್ರೆಯು ಯಾವ ಪ್ರಾಮುಖ್ಯತೆಯನ್ನು ಹೊಂದಿದೆ ಎಂಬುದು ರಾಜಕೀಯ ಧುರೀಣರ ಪ್ರಶ್ನೆಯಾಗಿದೆ. ಭಾರತದಾದ್ಯಂತ ಎರಡು ಪ್ರಮುಖ ಗುಂಪುಗಳಾದ ಮಹಿಳೆಯರು ಹಾಗೂ ಯುವಕರು ಯಾತ್ರೆಯ ಸಮಯದಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಭಾಗವಹಿಸದೇ ಇರುವುದು ಕೂಡ ಯಾತ್ರೆ ಹಿನ್ನಡೆ ಕಂಡಿದೆಯೇ ಎಂಬ ಸಂದೇಹವನ್ನುಂಟು ಮಾಡುತ್ತದೆ.
ರಾಹುಲ್ ಗಾಂಧಿಯ ಸ್ಥಾನಕ್ಕಿರುವ ಅಭದ್ರತೆ
ಇನ್ನು ಕಾಂಗ್ರೆಸ್‌ನಲ್ಲಿ ರಾಹುಲ್‌ಗಿರುವ ಸ್ಥಾನದ ಬಗ್ಗೆಯೂ ಇಲ್ಲಿ ಚರ್ಚೆ ಆರಂಭವಾಗಿದೆ. ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನದಲ್ಲಿ ಖರ್ಗೆ ಇರುವಾಗ, ರಾಹುಲ್ ಗಾಂಧಿಯವರು ಅಧ್ಯಕ್ಷ ಪದವಿಗೆ ಹೇಗೆ ಆಯ್ಕೆಯಾಗುತ್ತಾರೆ ಎಂಬುದು ಇಲ್ಲಿ ಅಸ್ಪಷ್ಟವಾಗಿದೆ.
ಪಕ್ಷದೊಳಗಿನ ತಿಕ್ಕಾಟ ಒಮ್ಮೊಮ್ಮೆ ತಾರಕಕ್ಕೇರುತ್ತಿದೆ ಹಾಗೂ ಭುಗಿಲೇಳುತ್ತಿದೆ. ರಾಹುಲ್‌ಗಿರುವ ಸ್ಥಾನದ ಕುರಿತ ಅಭದ್ರತೆ ಪಕ್ಷವನ್ನು ಪುನರುಜ್ಜೀವನಗೊಳಿಸುವಲ್ಲಿ ವಿಶ್ವಾಸದ ಕೊರತೆಯನ್ನುಂಟು ಮಾಡುತ್ತದೆ.
ಪಕ್ಷದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೂಲಕ ರಾಹುಲ್ ಗಾಂಧಿ ಯಾತ್ರೆಯನ್ನು ಕೊನೆಗೊಳಿಸಿದ್ದು (2024 ರ ಚುನಾವಣೆ) ಇದಕ್ಕಾಗಿ ಎದುರು ನೋಡಬೇಕಾಗುತ್ತದೆ
ಆರೆಸ್ಸೆಸ್-ಬಿಜೆಪಿಗೆ ಯಾತ್ರೆಯಿಂದ ಧಕ್ಕೆಯುಂಟಾಗಿದೆಯೇ?
ಜನಬೆಂಬಲವನ್ನು ಹೆಚ್ಚಿಸಲು ಯಾತ್ರೆಯು ಸಫಲವಾಗಿದೆ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಬಿಜೆಪಿಯ ಆಳವಾದ ಸರ್ವಾಧಿಕಾರಿ, ಕೋಮುವಾದಿ ರಾಜಕೀಯವನ್ನು ನೇರವಾಗಿ ತೆಗೆದುಕೊಳ್ಳುವ ಮೂಲಕ, ರಾಹುಲ್ ಗಾಂಧಿಯವರ ಯಾತ್ರೆ ಮತ್ತು ಅವರ ಪತ್ರಿಕಾಗೋಷ್ಠಿಗಳು ಪರ್ಯಾಯ ರಾಜಕೀಯ ಮಾರ್ಗ/ಆಯ್ಕೆಯನ್ನು ಪ್ರಸ್ತುತಪಡಿಸಲು ಸಹಾಯ ಮಾಡಿದೆ.
ಯಾತ್ರೆಯ 'ಏಕತೆ'ಯ ಸಂದೇಶದ ನಿಜವಾದ ಪರೀಕ್ಷೆ, ಅದರ ಚುನಾವಣಾ ಅರ್ಥಕ್ಕಾಗಿ ಸಾಮಾಜಿಕ ಸಾಮರಸ್ಯವನ್ನು ಗ್ರಾಮೀಣ ಮತದಾರರು ಹೇಗೆ ಮತ ಚಲಾಯಿಸುತ್ತಾರೆ ಎಂಬುದರ ಮೇಲೆ ನಿರ್ಧರಿಸಬಹುದು.
ಇಲ್ಲಿಯವರೆಗೆ, ಯಾವುದೇ ಗಂಭೀರ ಚುನಾವಣಾ ಬದಲಾವಣೆಯನ್ನು ಉಂಟುಮಾಡಲು ಪಾದಯಾತ್ರೆಯು ಮತದಾರರಲ್ಲಿ ಪ್ರಚೋದಿಸಬಹುದಾದ ಯಾವುದೇ ಗಂಭೀರ ಅಂಶವನ್ನುಂಟು ಮಾಡಿಲ್ಲ ಎಂಬುದು ನಿಜವಾಗಿದೆ.
ಪ್ರಜ್ಞಾಪೂರ್ವಕ ಬದಲಾವಣೆಯಾಗಿಲ್ಲ
ಆದ್ದರಿಂದ, ಯಾತ್ರೆಯ ಯಶಸ್ಸು ಸಂಪೂರ್ಣ ಮತದಾರರ ಮೇಲೆ ಪರಿಣಾಮ ಬೀರುವುದಕ್ಕಿಂತ ಒಂದು ಭಾಗದ ಮೇಲೆ ಪ್ರಭಾವ ಬೀರುತ್ತದೆ ಎಂದು ತೋರುತ್ತದೆ.
ಈ ಜನರ ಬೆಂಬಲವು ರಾಹುಲ್ ಗಾಂಧಿಯವರೊಂದಿಗೆ ಯಾತ್ರೆಯಲ್ಲಿ ಕಂಡುಬಂದಿದೆ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಅವರನ್ನು ಹಾಗೂ ಯಾತ್ರೆಯನ್ನು ಬೆಂಬಲಿಸಿದರು.
ಒಟ್ಟಿನಲ್ಲಿ ರಾಹುಲ್ ಗಾಂಧಿಯವರ ಯಾತ್ರೆಯ ಮುಕ್ತಾಯದಿಂದ ಉಂಟಾದ ಯಾವುದೇ ಪರಿಣಾಮವು ಅಷ್ಟೊಂದು ಪ್ರಜ್ಞಾಪೂರ್ವಕ ಬದಲಾವಣೆಯನ್ನು ಉಂಟುಮಾಡಿಲ್ಲ ಎಂಬುದು ನಿಜವಾಗಿದೆ.
ಭಾರತೀಯರನ್ನು ಒಗ್ಗೂಡಿಸುವ ಗುರಿ
ಭಾರತ್ ಜೋಡೋ ಮೆರವಣಿಗೆಯು ಸಮಾಜದಲ್ಲಿ ಹರಡುತ್ತಿರುವ ದ್ವೇಷ ಮತ್ತು ಭಯದ ವಿರುದ್ಧ ಭಾರತೀಯರನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿದೆ ಎಂಬುದು ರಾಹುಲ್ ಗಾಂಧಿಯವರ ಮಾತಾಗಿದೆ.
2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಮುಕ್ತ ಪತನದಲ್ಲಿದ್ದ ಕಾಂಗ್ರೆಸ್ ಪಕ್ಷದ ಧ್ವಜದ ಉತ್ಸಾಹವನ್ನು ಪುನಃ ಗರಿಗೆದರಿಸುವ ಗುರಿಯನ್ನು ಇದು ಹೊಂದಿದೆ ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಯ ಅಂತ್ಯ
ಭಾರತ್ ಜೋಡೋ ಯಾತ್ರೆಯು ಅಂತಿಮವಾಗಿ ಶ್ರೀನಗರದ ಕ್ರೀಡಾಂಗಣದಲ್ಲಿ ರ‍್ಯಾಲಿಯೊಂದಿಗೆ ಕೊನೆಗೊಂಡಿತು. ನನ್ನ ಕುಟುಂಬ ಹಾಗೂ ಮಹಾತ್ಮ ಗಾಂಧಿಯವರು ನಿರ್ಭಯವಾಗಿ ಬದಲುಕಲು ತಿಳಿಸಿಕೊಟ್ಟಿದ್ದಾರೆ. ಭಯಭೀತರಾಗಿ ಬದುಕುವುದು ಜೀವನವಲ್ಲ ಎಂದು ರಾಹುಲ್ ಗಾಂಧಿ ಯಾತ್ರೆಯ ಮುಕ್ತಾಯ ಸಮಯದಲ್ಲಿ ತಿಳಿಸಿದ್ದಾರೆ.
ಯಾತ್ರೆಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂಬುದು ಕಾಂಗ್ರೆಸ್ ಸಂಸದರ ಅಭಿಮತವಾಗಿದೆ. ದೇಶವಾಸಿಗಳು ದೇಶದ ನಿಜವಾದ ಧ್ವನಿಯನ್ನು ಆಲಿಸಬೇಕು ಎಂಬುದು ನಮ್ಮ ಯಾತ್ರೆಯ ಉದ್ದೇಶವಾಗಿತ್ತು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಯಲ್ಲಿ ಜನರ ಶಕ್ತಿಯನ್ನು ನಾವು ಅರಿತುಕೊಂಡಿದ್ದೇವೆ ಎಂದು ತಿಳಿಸಿರುವ ರಾಹುಲ್ ಗಾಂಧಿಯವರು, ದೇಶದಲ್ಲಿ ರೈತರು ಹಾಗೂ ನಿರುದ್ಯೋಗಿಗಳು ಎದುರಿಸುತ್ತಿರುವ ಸಮಸ್ಯೆಯನ್ನು ಹತ್ತಿರದಿಂದ ತಿಳಿದುಕೊಂಡಿರುವುದಾಗಿ ಹೇಳಿದ್ದಾರೆ.
ಯಾತ್ರೆಯ ಶ್ರಮ ವ್ಯರ್ಥವಾಗುವುದೇ?
ಯಾತ್ರೆಯು ಆರಂಭಗೊಂಡು ಮುಕ್ತಾಯಗೊಂಡಿದೆ, ಆದರೆ ಇದು ಎಷ್ಟು ಯಶಸ್ವಿಯಾಗಿದೆ ಎಂಬುದು ಚುನಾವಣೆಯ ನಂತರ ತಿಳಿದುಕೊಳ್ಳಬಹುದಾದ ಮಾತಾಗಿದೆ. ಹೆಚ್ಚು ಸ್ಪಷ್ಟತೆಯಿಲ್ಲದ ಪ್ರಶ್ನೆಯನ್ನು ಯಾತ್ರೆಯು ಒಳಗೊಂಡಿದೆ ಎಂದೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ