Explained: ಏನಿದು Bulli Bai ಅಪ್ಲಿಕೇಶನ್? ಮುಸ್ಲಿಂ ಮಹಿಳೆಯರು ಇದರ ವಿರುದ್ಧ ಸಿಡಿದೆದ್ದಿರೋದು ಯಾಕೆ?

ಈ ಬಗ್ಗೆ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಬುಲ್ಲಿ ಬಾಯಿ ಹಿಂದೆ ಗಿಟ್‌ಹಬ್ ಕುರಿತು ಟ್ವೀಟ್ ಮಾಡಿದ್ದಾರೆ. ಅಪ್ಲಿಕೇಶನ್ ಅನ್ನು ನಿರ್ಬಂಧಿಸಲಾಗಿದೆ ಮತ್ತು ಮುಂದಿನ ಕ್ರಮ ವನ್ನು ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಸದ್ಯ ಎಲ್ಲೆಡೆ ಬುಲ್ಲಿ ಬಾಯಿ (Bulli Bai) ಅಪ್ಲಿಕೇಶನ್ (Application) ಬಗ್ಗೆ ಭಾರಿ ಚರ್ಚೆ ನಡೆಯುತ್ತಿದ್ದು, ಆಪ್ ನಲ್ಲಿ ಮುಸ್ಲಿಂ ಮಹಿಳೆಯರ (Muslim women) ವಿರುದ್ಧ ಅಸಭ್ಯ ಟೀಕೆಗಳನ್ನು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಹೌದು ಹರಾಜಿನ (Auction) ಮೂಲಕ ಮುಸ್ಲಿಂ ಮಹಿಳೆಯರಿಗೆ ಕಿರುಕುಳ ನೀಡುವುದು ಹಾಗೂ ಅವರ ಅವಮಾನಿಸಲು (Harassing) ಫೋಟೋಗಳನ್ನು ಹಾಕುತ್ತಿವೆ ಎಂದು ಅಪ್ಲಿಕೇಶನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ(Social Network) ಕೆಂಡಕಾರಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಇದು ಎರಡನೇ ಬಾರಿಗೆ ಇಂತಹ ಅಪ್ಲಿಕೇಶನ್ ಅನ್ನು ರಚಿಸಲಾಗಿದೆ ಎಂದು ತಿಳಿದು ಬಂದಿದೆ.

  ಮುಸ್ಲಿಂ ಮಹಿಳೆಯರ ಬಗ್ಗೆ ಅಸಭ್ಯ ಟೀಕೆ

  ಕಳೆದ ಜುಲೈನಲ್ಲಿ, ಸುಲ್ಲಿ ಡೀಲ್ಸ್ ಎಂಬ ಅಪ್ಲಿಕೇಶನ್ ನೂರಾರು ಮುಸ್ಲಿಂ ಮಹಿಳೆಯರ ಚಿತ್ರಗಳನ್ನು "ಆನ್‌ಲೈನ್ ಹರಾಜಿಗಾಗಿ" ಪೋಸ್ಟ್ ಮಾಡಿತ್ತು. "ಸುಲ್ಲಿ" ಎಂಬುದು ಮುಸ್ಲಿಂ ಮಹಿಳೆಯರನ್ನು ಉಲ್ಲೇಖಿಸಲು ಬಳಸುವ ಅವಹೇಳನಕಾರಿ ಪದವಾಗಿದೆ. ಇದೀಗ ಬುಲ್ಲಿ ಬಾಯ್' ಅಪ್ಲಿಕೇಶನ್ ಸದ್ದು ಮಾಡುತ್ತಿದ್ದು, ಈ ಆಪ್‌ ವಿರುದ್ಧ ಮುಸ್ಲಿಂ ಮಹಿಳೆಯರು ಸಿಡಿದೆದ್ದಿದ್ದಾರೆ. ಅಷ್ಟೆಅಲ್ಲದೇ ಆಪ್ ನಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಅಸಭ್ಯ ಟೀಕೆಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಅವರ ಚಿತ್ರಗಳನ್ನು ಡೀಲ್ ಮಾಡಲಾಗುತ್ತಿದೆ. ಚಿತ್ರಗಳ ಮೇಲೆ ಸ್ತ್ರೀದ್ವೇಷದ ಪಠ್ಯಗಳನ್ನು ಬರೆಯಲಾಗುತ್ತಿದೆ. ಈಗ ಇತ್ತೀಚಿನ ಪ್ರಕರಣವು ಮಹಿಳಾ ಪತ್ರಕರ್ತೆಯ ಚಿತ್ರಗಳನ್ನು ಆಕ್ಷೇಪಾರ್ಹ ವಿಷಯದೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಆರೋಪಗಳು ಕೇಳಿ ಬಂದಿದೆ.

  ಇದನ್ನೂ ಓದಿ: Viral News: ಮುಸ್ಲಿಂ ಯುವತಿ ಜೀನ್ಸ್‌ ಪ್ಯಾಂಟ್‌ ಧರಿಸಿದ್ದಕ್ಕೆ ಅಂಗಡಿಯಿಂದ ಹೊರ ಹಾಕಿದ ಮಾಲೀಕ!

  ಚುರುಕುಕೊಂಡ ತನಿಖೆ

  ಸೋಷಿಯಲ್‌ ಮಿಡಿಯಾದಲ್ಲಿ ಬುಲ್ಲಿ ಬಾಯಿ ಎಂಬ ಹ್ಯಾಷ್ ಟ್ಯಾಗ್ ಕೂಡ ಬಳಕೆಯಾಗುತ್ತಿದೆ. ಅವಹೇಳನಕಾರಿ ಟೀಕೆಗಳೊಂದಿಗೆ ಚಿತ್ರಗಳನ್ನು ಹಂಚಿಕೊಂಡವರ ಹೆಸರಿನೊಂದಿಗೆ ಅದನ್ನು ಸೇರಿಸಲಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಇದೀಗ ಆ ಪತ್ರಕರ್ತೆಗೂ ಅಂಥದ್ದೇ ಸ್ಥಿತಿ ಎದುರಾದ ಕಾರಣ ಅದನ್ನು ಅವರು ಟ್ವೀಟ್ ಮಾಡುವ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ವಿರುದ್ಧ ಪೊಲೀಸರಿಗೆ ದೂರು ಕೂಡ ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸರು ಇನ್ನೂ ತನಿಖೆ ಆರಂಭಿಸಿದ್ದಾರೆ.

  ಮುಸ್ಲಿಂ ಮಹಿಳೆಯಾಗಿ ನಾವು ನಮ್ಮ ಹೊಸ ವರ್ಷವನ್ನು ಭಯದಿಂದ ಪ್ರಾರಂಭಿಸಬೇಕಾದದ್ದು ಎಷ್ಟು ದುಃಖವಾಗಿದೆ ಎಂದು ಬರೆಯಲಾಗಿದೆ. ಈ #ಸುಲ್ಲಿಡೀಲ್ಸ್ ನನ್ನನ್ನು ಮಾತ್ರ ಗುರಿಯಾಗಿಸಿಕೊಂಡಿಲ್ಲ ಎಂದು ನನಗೆ ಖಾತ್ರಿಯಿದೆ. ಈಗ ಮಾಹಿತಿಗಾಗಿ, ಬುಲ್ಲಿ ಬಾಯಿಯಂತೆ, ಸುಲ್ಲಿ ಡೀಲ್ ಕೂಡ ಮುಸ್ಲಿಂ ಮಹಿಳೆಯರ ಚಿತ್ರಗಳನ್ನು ಹಂಚಿಕೊಳ್ಳುವ ಅಪ್ಲಿಕೇಶನ್ ಆಗಿದೆ. ಅವರ ಚಿತ್ರಗಳನ್ನು ಅವಹೇಳನಕಾರಿಯಾಗಿ ಬರೆಯುವ ಮೂಲಕ ವ್ಯವಹರಿಸಲಾಗಿದೆ ಎಂದು ಹೇಳಲಾಗುತ್ತಿದೆ.

  ತಲ್ಲಣ ಮೂಡಿಸಿದ ವಿಚಾರ

  ಸುಲ್ಲಿ ಡೀಲ್ ಮತ್ತು ಬುಲ್ಲಿ ಬಾಯಿ ಅಪ್ಲಿಕೇಶನ್ ಎರಡನ್ನೂ ಗಿಟ್‌ಹಬ್‌ನಲ್ಲಿ ನಿರ್ಮಿಸಲಾಗಿದೆ ಎಂಬ ಅಂಶವೂ ಮುನ್ನೆಲೆಗೆ ಬಂದಿದೆ. ಇದು ಹೋಸ್ಟಿಂಗ್ ಪ್ಲಾಟ್‌ಫಾರ್ಮ್ ಆಗಿದ್ದು ಅಲ್ಲಿ ಓಪನ್ ಸೋರ್ಸ್ ಕೋಡ್‌ನ ರೆಪೊಸಿಟರಿ ಇದೆ. ಆದರೆ ಈಗ GitHub ಮತ್ತು ಅದರ ಮೇಲೆ ನಿರ್ಮಿಸಲಾದ ಅಂತಹ ಅಪ್ಲಿಕೇಶನ್‌ಗಳ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಪತ್ರಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದಾಗಿನಿಂದ ರಾಜಕೀಯ ವಲಯದಲ್ಲಿ ಚರ್ಚೆ ತೀವ್ರಗೊಂಡು ತಲ್ಲಣ ಮೂಡಿಸಿದೆ.

  ಅಪ್ಲಿಕೇಶನ್ ನಿರ್ಬಂಧ

  ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಈ ಬಗ್ಗೆ ಮುಂಬೈ ಡಿಸಿಪಿ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ತಕ್ಷಣವೇ ತನಿಖೆ ನಡೆಸಬೇಕು ಎಂದು ಅವರ ಕಡೆಯಿಂದ ಮನವಿ ಮಾಡಲಾಗಿದೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಈ ಘಟನೆ ನಾಚಿಕೆಗೇಡಿನ ಸಂಗತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಮಹಿಳೆಯರನ್ನು ಬಲಪಂಥೀಯ ಉಗ್ರಗಾಮಿಗಳು ಹರಾಜು ಮಾಡಿದ ಮೇಲೆ ಎಲ್ಲೆಡೆ ಭಾರಿ ಟೀಕೆ ವ್ಯಕ್ತವಾಗಿದೆ. ಈ ಬಗ್ಗೆ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಬುಲ್ಲಿ ಬಾಯಿ ಹಿಂದೆ ಗಿಟ್‌ಹಬ್ ಕುರಿತು ಟ್ವೀಟ್ ಮಾಡಿದ್ದಾರೆ. ಅಪ್ಲಿಕೇಶನ್ ಅನ್ನು ನಿರ್ಬಂಧಿಸಲಾಗಿದೆ ಮತ್ತು ಮುಂದಿನ ಕ್ರಮ ವನ್ನು ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.

  ಇದನ್ನೂ ಓದಿ: Tejasvi Surya: ಮರು ಮತಾಂತರ-ಘರ್ ವಾಪ್ಸಿ ಬಗ್ಗೆ ನನ್ನ ಮಾತಿನಿಂದ ಅನವಶ್ಯಕ ವಿವಾದವೆದ್ದಿದೆ - ಮಾತು ಹಿಂಪಡೆದಿದ್ದೇನೆ

  ಎಫ್‌ಐಆರ್‌ ದಾಖಲು

  ಶಿವಸೇನೆಯ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ನಿನ್ನೆ ಶ್ರೀ ವೈಷ್ಣವ್ ಅವರನ್ನು ಟ್ಯಾಗ್ ಮಾಡಿದ ಮನವಿಗೆ ಪ್ರತಿಕ್ರಿಯೆಯಾಗಿ ಅತಿರೇಕದ ಸ್ತ್ರೀದ್ವೇಷ ಮತ್ತು ಮಹಿಳೆಯರ ಮೇಲೆ ಕೋಮುವಾದ ಗುರಿಯಾಗಿಸುವ" ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದೆ ಎಂದು ಹೇಳಿದ್ದಾರೆ. GitHub ಬಳಕೆದಾರರನ್ನು ನಿರ್ಬಂಧಿಸುವುದನ್ನು ಖಚಿತಪಡಿಸಿದೆ. CERT (ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಚೇರಿ, ಅಥವಾ MEITY) ಮತ್ತು ಪೊಲೀಸ್ ಅಧಿಕಾರಿಗಳು ಮುಂದಿನ ಕ್ರಮವನ್ನು ಕೈಗೊಳ್ಳಲಿದ್ದಾರೆ ಎಂದು ವೈಷ್ಣವ್ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಪ್ರಕರಣದ ಸಂಬಂಧ ಎಫ್‌ಐಆರ್‌ ದಾಖಲಿಸಿ ತನಿಖೆ ತೀವ್ರಗೊಳಿಸಲಾಗಿದೆ.
  Published by:vanithasanjevani vanithasanjevani
  First published: