Bubonic Plague: ಯೂರೋಪ್‍ನಲ್ಲಿ 20 ಮಿಲಿಯನ್ ಜನರನ್ನು ಬಲಿ ಪಡೆದಿದ್ದ ಬ್ಲಾಕ್‍ಡೆತ್‍ನ  ರಹಸ್ಯ ರಿವೀಲ್! ಏನದು? ಇಲ್ಲಿದೆ ನೋಡಿ

14ನೇ ಶತಮಾನದಲ್ಲಿ ಬುಬೋನಿಕ್ ಪ್ಲೇಗ್‍ನಿಂದ ಸಾವನ್ನಪ್ಪಿರುವವರ ಡಿಎನ್‍ಎ ಈ ವಿಜ್ಞಾನಿಗಳಿಗೆ ದೊರೆತಿದ್ದಾದರೂ ಎಲ್ಲಿ? ಮಧ್ಯ ಏಷ್ಯಾದ ಹಳೆಯ ಸಿಲ್ಕ್ ರೋಡ್ ವ್ಯಾಪಾರ ಮಾರ್ಗದಲ್ಲಿನ ಸ್ಮಶಾನಗಳ ಸಮಾಧಿಗಳಲ್ಲಿ. ಹೌದು, ಆ ಸಮಾಧಿಗಳ ಒಳಗಿರುವ ಬುಬೋನಿಕ್ ಪ್ಲೇಗ್ ಬಲಿಪಶುಗಳ ಡಿಎನ್‍ಎ ವಿಶ್ಲೇಷಣೆಯನ್ನು ಮಾಡಿದ್ದಾರೆ ವಿಜ್ಞಾನಿಗಳು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಯೂರೋಪ್‍ನಲ್ಲಿ (Europe) 14ನೇ ಶತಮಾನದಲ್ಲಿ ಕಾಣಿಸಿಕೊಂಡಿದ್ದ ಬುಬೋನಿಕ್ ಪ್ಲೇಗ್ (Bubonic Plague) ರೋಗ, ಆಗ ಅಲ್ಲಿನ ಸುಮಾರು ಅರ್ಧದಷ್ಟು ಜನಸಂಖ್ಯೆಯನ್ನು ಸಾವಿನ ಕೂಪಕ್ಕೆ ತಳ್ಳಿತ್ತು. ಇದೀಗ ಆ ಮಾರಣಾಂತಿಕ ಘಟನೆಯ ಮೂಲವನ್ನು ತಾವು ಗುರುತಿಸಿರುವುದಾಗಿ ವಿಜ್ಞಾನಿಗಳು (Scientist) ಹೇಳಿಕೊಂಡಿದ್ದಾರೆ. ಆಗ ಸಾವನ್ನಪ್ಪಿದ್ದ ವ್ಯಕ್ತಿಗಳ ಡಿಎನ್‍ಎ (DNA) ವಿಶ್ಲೇಷಣೆಯ ಮೂಲಕ ಇದು ಸಾಧ್ಯವಾಗಿದೆ ಎಂಬುವುದು ವಿಜ್ಞಾನಿಗಳ ಮಾತು. ಹಾಗಾದರೆ, 14ನೇ ಶತಮಾನದಲ್ಲಿ ಬುಬೋನಿಕ್ ಪ್ಲೇಗ್‍ನಿಂದ ಸಾವನ್ನಪ್ಪಿರುವವರ ಡಿಎನ್‍ಎ ಈ ವಿಜ್ಞಾನಿಗಳಿಗೆ ದೊರೆತಿದ್ದಾದರೂ ಎಲ್ಲಿ? ಮಧ್ಯ ಏಷ್ಯಾದ ಹಳೆಯ ಸಿಲ್ಕ್ ರೋಡ್ ವ್ಯಾಪಾರ ಮಾರ್ಗದಲ್ಲಿನ ಸ್ಮಶಾನಗಳ ಸಮಾಧಿಗಳಲ್ಲಿ. ಹೌದು, ಆ ಸಮಾಧಿಗಳ ಒಳಗಿರುವ ಬುಬೋನಿಕ್ ಪ್ಲೇಗ್ ಬಲಿಪಶುಗಳ ಡಿಎನ್‍ಎ ವಿಶ್ಲೇಷಣೆಯನ್ನು ಮಾಡಿದ್ದಾರೆ ವಿಜ್ಞಾನಿಗಳು.

ಅನುವಂಶಿಕ ಬೆರಳಚ್ಚುಗಳನ್ನು ಪತ್ತೆಹಚ್ಚಿದ ವಿಜ್ಞಾನಿಗಳು
ಆ ಸಮಾಧಿಗಳೊಳಗೆ ಹೂಳಲ್ಪಟ್ಟ ಶವಗಳಲ್ಲಿ , ಯೆರ್ಸಿನಿಯಾ ಪೆಸ್ಟಿಸ್ ಎಂಬ ಬ್ಯಾಕ್ಟೀರಿಯಾದ ಅನುವಂಶಿಕ ಬೆರಳಚ್ಚುಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈಗಿನ ಕಿರ್ಗಿಸ್ಥಾನದ ಇಸ್ಸಿಕುಲ್ ಸರೋವರದ ಪ್ರದೇಶಲ್ಲಿರುವ “ಪಿಡುಗು” ಎಂದು ಇದನ್ನು ಉಲ್ಲೇಖಿಸಲಾಗಿದೆ. ಈ ರೋಗದಿಂದ ಮೃತಪಟ್ಟ ಮೂವರು ಮಹಿಳೆಯರ ಹಲ್ಲುಗಳಿಂದ ಈ ಬ್ಯಾಕ್ಟೀರಿಯಾವನ್ನು ಮರು ಪಡೆಯಲಾಗಿದ್ದು, ಆ ಮಹಿಳೆಯರು ಟಿಯಾನ್ ಶಾನ್ ಪರ್ವತಗಳ ತಪ್ಪಲಿನಲ್ಲಿರುವ ಮಧ್ಯಕಾಲೀನ ನೆಸ್ಟೋರಿಯನ್ ಸಮುದಾಯದಲ್ಲಿ ಸಮಾಧಿ ಮಾಡಲ್ಪಟ್ಟಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Explained: ಬ್ಲ್ಯೂ ಬೇಬಿ ಸಿಂಡ್ರೋಮ್ ಎಂದರೇನು? ಚರ್ಮ ನೀಲಿ ಬಣ್ಣಕ್ಕೆ ತಿರುಗುವ ಹಿಂದಿದೆ ಈ ಕಾರಣ!

ಈ ಮಹಿಳೆಯರು 1338 – 1339ರ ಅವಧಿಯಲ್ಲಿ ಸಾವನ್ನಪ್ಪಿರುವ ಸಾಧ್ಯತೆ ಇದೆ. ಈ ಸಾಂಕ್ರಾಮಿಕ ರೋಗದಿಂದ , ಬೇರೆ ಜಾಗಗಳಲ್ಲಿ ಮೊದಲ ಸಾವು 1346ರಲ್ಲಿ ಆಗಿದೆ ಎಂದು ದಾಖಲಾಗಿದೆ. ಈ ಡಿಎನ್‍ಎ ವಿಶ್ಲೇಷಣೆಯು , ಸ್ಕಾಟ್‍ಲ್ಯಾಂಡ್‍ನ ಸ್ಟಿರ್ಲಿಂಗ್ ವಿಶ್ವ ವಿದ್ಯಾನಿಲಯದ ಇತಿಹಾಸಕಾರ, ಫಿಲ್ ಸ್ಲಾವಿನ್ ಅವರ ಕೃತಿಗಳನ್ನು ಆಧರಿಸಿದೆ. ಅವರು, 1338 -1339 ರಲ್ಲಿ ಮಧ್ಯ ಏಷ್ಯಾದ ಪಟ್ಟಣವೊಂದರಲ್ಲಿ ಸಾವಿನ ಸಂಖ್ಯೆಯಲ್ಲಿ ಅಸಾಮಾನ್ಯ ಹೆಚ್ಚಳವಾಗಿದ್ದ ಸಂಗತಿಯನ್ನು ಈ ಕಾಯಿಲೆಯ ಉದ್ಭವಕ್ಕೆ ಸಂಬಂಧ ಕಲ್ಪಿಸಬಹುದು ಎಂದು ಸಲಹೆ ನೀಡಿದ್ದರು.

ಮನುಷ್ಯನ ಇತಿಹಾಸದಲ್ಲೇ ಅತಿ ದೊಡ್ಡ ಸಾಂಕ್ರಾಮಿಕ ರೋಗ ದುರಂತ
ಯೈ ಪೆಸ್ಟಿಸ್ ಬ್ಯಾಕ್ಟೀರಿಯದಿಂದ ಉಂಟಾದ ಸಾವು , ಸುಮಾರು 500 ವರ್ಷಗಳ ಸುದೀರ್ಘ ಅವಧಿಯ ಸಾಂಕ್ರಮಿಕ ರೋಗದ ಆರಂಭಿಕ ಅಲೆಯಾಗಿತ್ತು ಮತ್ತು ಮನುಷ್ಯನ ಇತಿಹಾಸದಲ್ಲೇ ಅತಿ ದೊಡ್ಡ ಸಾಂಕ್ರಾಮಿಕ ರೋಗ ದುರಂತಗಳಲ್ಲಿ ಒಂದಾಗಿದೆ ಎಂದು ನೇಚರ್ ಜರ್ನಲ್‍ನಲ್ಲಿ ಪ್ರಕಟವಾದ ಸಂಶೋಧನೆಗಳ ವಿವರಗಳಲ್ಲಿ ಉಲ್ಲೇಖಿಸಲಾಗಿದೆ.

ಬ್ಲಾಕ್ ಡೆತ್ ಎಂದರೇನು?
ಬ್ಲಾಕ್ ಡೆತ್, ಅಂದರೆ ಈ ಮಹಾಮಾರಿ ರೋಗದ ಎಂಟು ವರ್ಷಗಳ ಅವಧಿಯ ವರೆಗೆ ಪಾಶ್ಚಿಮಾತ್ಯ ಜನಸಂಖ್ಯೆಯನ್ನು ಕಾಡಿತ್ತು. ಅದು ಅಲ್ಲಿನ ಜನಸಂಖ್ಯೆಯ ಶೇಕಡಾ 60ರಷ್ಟು ಮಂದಿಯನ್ನು ಸಾವಿನ ದವಡೆಗೆ ದೂಡಿತು ಮಾತ್ರವಲ್ಲ, ಆ ಪ್ರದೇಶದ ಜನಸಂಖ್ಯೆ ಮತ್ತು ಸಾಮಾಜಿಕ – ಆರ್ಥಿಕ ಅಂಶಗಳ ಮೇಲೆ ಅತ್ಯಧಿಕ ಪ್ರಭಾವವನ್ನು ಕೂಡ ಬೀರಿತು. ಈ ವಿಷಯದ ಬಗ್ಗೆ ತೀವ್ರವಾದ ಸಾಕಷ್ಟು ಸಂಶೋಧನೆಗಳನ್ನು ನಡೆಸಿದ್ದರೂ ಕೂಡ, ಎರಡನೇ ಪ್ಲೇಗ್ ಸಾಂಕ್ರಾಮಿಕದ ಭೌಗೋಳಿಕ ಮೂಲವನ್ನು ಸ್ಪಷ್ಟವಾಗಿ ಪತ್ತೆಹಚ್ಚಲು ಇಂದಿಗೂ ಸಾಧ್ಯವಾಗಿಲ್ಲ.

ಇಲಿಗಳ ಮೂಲಕ ಹಾರಾಡುತ್ತಿದ್ದ ರೋಗ
ಸಿಲ್ಕ್ ರೋಡ್, ಚೀನಾದಿಂದ ಮಧ್ಯ ಏಷ್ಯಾದ ಶ್ರೀಮಂತ ನಗರಗಳ ಮೂಲಕ, ಬೈಜಾಂಟೈನ್ ರಾಜಧಾನಿ ಕಾನ್ಸ್ಟಾಂಟಿನೋಪಲ್ ಮತ್ತು ಪರ್ಷಿಯಾ ಸೇರಿದಂತೆ ವಿವಿಧ ಸ್ಥಳಗಳಿಗೆ, ಸರಕುಗಳನ್ನು ಸಾಗಿಸುವ ವರ್ತಕರ ಕಾರವಾನ್‍ಗಳಲ್ಲಿ ಮತ್ತು ಗುಂಪುಗಳಿಗೆ ಭೂಮಾರ್ಗವಾಗಿತ್ತು. ರೋಗಕ್ಕೆ ತುತ್ತಾದವರು ಈ ಕಾರವಾನ್‍ಗಳಲ್ಲಿ ಪ್ರಯಾಣಿಸಿದ್ದರೆ, ಸಿಲ್ಕ್ ಮಾರ್ಗ ಕೂಡ ಸಾವಿನ ಮಾರ್ಗವಾಗಿ ಕಾರ್ಯ ನಿರ್ವಹಿಸಿರುವ ಸಾಧ್ಯತೆ ಇದೆ.

ಇದನ್ನೂ ಓದಿ: Explained: ಜಸ್ಟಿನ್ ಬೀಬರ್‌ಗೆ ಬಂದಿರುವ ರಾಮ್ಸೆ ಹಂಟ್​ ಸಿಂಡ್ರೋಮ್​ ಎಂದರೇನು? ಈ ಕಾಯಿಲೆಯ ಲಕ್ಷಣಗಳೇನು?

ಇಲಿಗಳು ಮತ್ತು ಅವುಗಳ ರಕ್ತ ಹೀರುತ್ತಿದ್ದ ಚಿಗಟಗಳ ಮೂಲಕ ಹರಡುತ್ತಿದ್ದ ಈ ರೋಗ, ಅಂತಿಮವಾಗಿ 1347 ರಲ್ಲಿ ಕಪ್ಪು ಸಮುದ್ರದ ಮೂಲಕ ಆಗಮಿಸಿದ್ದ ವ್ಯಾಪಾರ ಹಡಗುಗಳಿಂದ ಸಿಸಿಲಿಯನ್ ಬಂದರು ಮೆಸ್ಸಿನಾಗೆ ತಲುಪಿತ್ತು ಎಂದು ಹೇಳಲಾಗುತ್ತದೆ.
ಬುಬೋನಿಕ್ ಪ್ಲೇಗ್‍ಗೆ ಆಗ ಚಿಕಿತ್ಸೆ ಇರಲಿಲ್ಲ, ಆದರೆ ಈಗ ಅದನ್ನು ಆ್ಯಂಟಿ ಬಯಾಟಿಕ್ಸ್‍ಗಳ ಮೂಲಕ ಗುಣಪಡಿಸಲು ಸಾಧ್ಯವಿದೆ.
Published by:Ashwini Prabhu
First published: