Elephant: ಹೆಣ್ಣಾನೆ ಬಳಸಿ ಕಾಡಾನೆಗೆ ಖೆಡ್ಡಾ! ಭಾನುಮತಿ ನಿನ್ನ ನಂಬಿದ್ರೆ ಫಜೀತಿ ಅಂತ ಒಂಟಿ ಸಲಗ ಎಸ್ಕೇಪ್!

ಒಂಟಿ ಸಲಗಳನ್ನು (Single Elephant) ಹಿಡಿಯಲು ಹೆಣ್ಣಾನೆ (Female Elephant) ಬಳಸಿ ಹನಿ ಟ್ರ್ಯಾಪಿಂಗ್ (Honeytrap) ಮಾಡುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಆನೆಗಳೂ ಈಗೀಗ ಬುದ್ಧಿವಂತರಾಗುತ್ತಿವೆ. ಈ ರೀತಿಯ ಹನಿ ಟ್ರ್ಯಾಪಿಂಗ್ಗೆ ಕಾಡಾನೆಗಳು ಬಗ್ಗೋದಿಲ್ಲ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಭೂಗತ ಪಾತಕಿಗಳನ್ನು, ಅಂಡರ್‌ವರ್ಲ್ಡ್ ಡಾನ್‌ಗಳನ್ನು (Underworld Don) ಹಿಡಿಯಲು ಅವರ ಪ್ರೇಯಸಿಯನ್ನು (Lovers) ಬಳಸಿಕೊಳ್ಳುವುದು ಪೊಲೀಸರು (Police) ಈ ಹಿಂದೆ ಉಪಯೋಗಿಸುತ್ತಿದ್ದ ಟ್ರಿಕ್ಸ್ (Tricks). ಕೆಲವೊಮ್ಮೆ ಪ್ರಾಣಿಗಳನ್ನು (Animals) ಹಿಡಿಯಲು ಅದನ್ನು ಅರಣ್ಯಾಧಿಕಾರಿಗಳು (Forest Officers) ಬಳಸುತ್ತಿದ್ದರು. ಮುಖ್ಯವಾಗಿ ಕಾಡಾನೆಗಳನ್ನು (Wild Elephant), ಅದರಲ್ಲೂ ಒಂಟಿ ಸಲಗಳನ್ನು (Single Elephant) ಹಿಡಿಯಲು ಹೆಣ್ಣಾನೆ (Female Elephant) ಬಳಸಿ ಹನಿ ಟ್ರ್ಯಾಪಿಂಗ್ (Honey trap) ಮಾಡುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಆನೆಗಳೂ ಈಗೀಗ ಬುದ್ಧಿವಂತರಾಗುತ್ತಿವೆ. ಈ ರೀತಿಯ ಹನಿ ಟ್ರ್ಯಾಪಿಂಗ್‌ಗೆ ಕಾಡಾನೆಗಳು ಬಗ್ಗೋದಿಲ್ಲ. ಇತ್ತೀಚಿಗಷ್ಟೇ ಕಾಡಾನೆಯನ್ನು ಹಿಡಿಯಲು ಭಾನುಮತಿ ಎಂಬ ಹೆಣ್ಣಾನೆಯನ್ನು ಬಳಸಲಾಗಿತ್ತು. ಆದರೀಗ ಭಾನುಮತಿಯನ್ನು ಬಳಸಿ ಹನಿಟ್ರ್ಯಾಪ್ ಮಾಡುವ ಅರಣ್ಯ ಅಧಿಕಾರಿಗಳ ಪ್ರಯತ್ನ ವ್ಯರ್ಥವಾಗಿದೆ.

ಚಿಕ್ಕಮಗಳೂರು, ಹಾಸನ ಭಾಗದಲ್ಲಿ ನಿರಂತರ ಕಾಡಾನೆ ದಾಳಿ

ಚಿಕ್ಕಮಗಳೂರು ಹಾಗೂ ಹಾಸನದ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಯಾವಾಗಲೂ ಜಾಸ್ತಿಯೇ. ಹಾಸನದ ಸಕಲೇಶಪುರ ಭಾಗದಲ್ಲಂತೂ ಬೆಳಗ್ಗೆ ವಾಕಿಂಗ್‌ಗೆ ಬಂದ ಹಾಗೆಯೇ ಆನೆಗಳು ಪರೇಡ್ ನಡೆಸುತ್ತದೆ. ಚಿಕ್ಕಮಗಳೂರು ಹಾಗೂ ಹಾಸನ ಭಾಗದಲ್ಲಿ ಅದೆಷ್ಟೋ ಮಂದಿ ಆನೆ ದಾಳಿಯಿಂದ ಪ್ರಾಣವನ್ನೂ ಕಳೆದುಕೊಂಡಿದ್ದಾರೆ.

ಕಷ್ಟಪಟ್ಟು ಬೆಳೆದ ಬೆಳೆ ಆನೆಗಳ ಪಾಲು

ಇನ್ನು ಆಗಾಗ ಊರಿಗೆ ನುಗ್ಗುವ ಕಾಡಾನೆಗಳು ನೇರವಾಗಿ ರೈತರ ಹೊಲ, ತೋಟಗಳ ಮೇಲೆ ದಾಳಿ ಮಾಡುತ್ತದೆ. ಕಾಫಿ, ಬಾಳೆ ಸೇರಿದಂತೆ ಇನ್ನಿತರ ಬೆಳೆಗಳನ್ನು ತಿಂದಿದ್ದಲ್ಲದೇ, ಅದನ್ನು ಬುಡ ಸಮೇತ ಕೆಡವಿ ಹಾಳು ಮಾಡುತ್ತವೆ. ಹೀಗಾಗಿ ಕಷ್ಟ ಪಟ್ಟು ಬೆಳೆ ಬೆಳದರೂ ಅದರ ಲಾಭ ಮಾತ್ರ ರೈತರಿಗೆ ಸಿಗುವುದು ಅಸಾಧ್ಯ ಎನ್ನುವ ಪರಿಸ್ಥಿತಿ ಇದೆ.

ಕಾಡಾನೆ ಖೆಡ್ಡಾಕ್ಕೆ ಕೆಡವಲು ಹನಿಟ್ರ್ಯಾಪ್ ತಂತ್ರ

ಕಾಡಾನೆಗಳು ಸಾಮಾನ್ಯವಾಗಿ ಹೆಣ್ಣಾನೆಗಳನ್ನು ಮೋಹಿಸಿ, ಆನೆ ಶಿಬಿರಕ್ಕೂ ಬರುತ್ತವೆ. ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳುವ ಅರಣ್ಯ ಅಧಿಕಾರಿಗಳು, ಆನೆ ತಜ್ಞರು ಪಳಗಿಸಿದ ಹೆಣ್ಣಾನೆಗಳನ್ನು ಹಿಡಿಯಲು ಹನಿಟ್ರ್ಯಾಪ್ ತಂತ್ರ ಉಪಯೋಗಿಸುತ್ತಾರೆ. ಹನಿ ಟ್ರ್ಯಾಪ್‌ಗಳು ಸಾಕಷ್ಟು ಅಪಾಯಕಾರಿ ಮತ್ತು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲ್ಪಟ್ಟಿವೆ. ಆದರೆ 'ಹನಿ ಟ್ರ್ಯಾಪ್' ಅನ್ನು ಕೊನೆಯ ಉಪಾಯವಾಗಿ ಬಳಸಲಾಗುತ್ತಿದೆ.

ಇದನ್ನೂ ಓದಿ: Eggs: ಮೈಮೇಲೆ ಎಗ್ ಎಸೆದು ಹಾಳು ಮಾಡ್ತೀರಾ? ಹಾಗಿದ್ರೆ ನಿಮಗೆ ಗೊತ್ತಿರಲೇ ಬೇಕು ಒಂದು ಮೊಟ್ಟೆಯ ಕಥೆ!

ಅರಣ್ಯಾಧಿಕಾರಿಗಳಿಗೆ ಟಕ್ಕರ್ ಕೊಡುತ್ತಿರುವ ಟಸ್ಕರ್

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೇಗೂರು ಸುತ್ತಮುತ್ತ ಹಲವು ದಿನಗಳಿಂದ ಹಾವೇರಿ ಟಸ್ಕರ್ ಎಂಬ ಪುಂಡಾನೆಯದ್ದೇ ದರ್ಬಾರ್ ನಡೆಯುತ್ತಿದೆ. ಈ ಹಾವೇರಿ ಟಸ್ಕರ್‌ ಕಾಟಕ್ಕೆ ರೈತರು ಬೇಸತ್ತು ಹೋಗಿದ್ದಾರೆ. ಪುಂಡಾನೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿದ ಹಿನ್ನೆಲೆ ಶುಕ್ರವಾರದಿಂದ ಶಿವಮೊಗ್ಗದ ಬಾಬಣ್ಣ, ಸೋಮಣ್ಣ, ಬಹದ್ದೂರ್‌, ಸಾಗರ್‌ ಎಂಬ ಸಾಕಾನೆಗಳ ಮೂಲಕ ಆಪರೇಷನ್‌ ಹಾವೇರಿ ಟಸ್ಕರ್‌ ಆರಂಭಿಸಲಾಗಿದೆ. ಯಾವ ಆನೆಗಳಿಗೂ ಈ ಒಂಟಿ ಸಲಗ ಬಗ್ಗುತ್ತಿಲ್ಲ ಎನ್ನಲಾಗಿದೆ.

ಹಿಂದೊಮ್ಮೆ ಭಾನುಮತಿ ಬಳಸಿ ಆನೆಗೆ ಖೆಡ್ಡಾ

ಶಿವಮೊಗ್ಗ ಆನೆ ಬಿಡಾರದಲ್ಲಿ ಭಾನುಮತಿ ಎಂಬ 30 ವರ್ಷ ವಯಸ್ಸಿನ ಹೆಣ್ಣಾನೆಯೊಂದಿದೆ. ಅದನ್ನು ಈಗಾಗಲೇ ಹಲವು ಬಾರಿ ಆನೆ ಹಿಡಿಯುವ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು. ಅದೇ ಹಿನ್ನೆಸೆಯಲ್ಲಿ ಕಳೆದ 7 ತಿಂಗಳ ಹಿಂದೆ ಇದೇ ಹಾವೇರಿ ಟಸ್ಕರ್ ಹಿಡಿಯಲು ಭಾನುಮತಿಯನ್ನು ಬಳಸಿಕೊಳ್ಳಲಾಗಿತ್ತು. ಆಗ ಈ 10 ವರ್ಷದ ಒಂಟಿ ಸಲಗವು ಭಾನುಮತಿ ಮೋಹಕ್ಕೆ ಒಳಗಾಗಿತ್ತು. ಅದನ್ನೇ ಅನುಸರಿಸಿಕೊಂಡು ಬಂದ ಟಸ್ಕರ್, ಆನೆ ಶಿಬಿರಕ್ಕೂ ಬಂದಿತ್ತು.

ತಪ್ಪಿಸಿಕೊಂಡು ಹೋಗಿದ್ದ ಒಂಟಿ ಸಲಗ

ಹಾವೇರಿ ಆನೆಯನ್ನು ರೇಡಿಯೋ ಕಾಲರ್ ಅಳವಡಿಸಿ ನಂತರ ತಣಿಗೆಬೈಲು ಅರಣ್ಯಕ್ಕೆ ಪುನರ್ವಸತಿ ಕಲ್ಪಿಸಲಾಯಿತು. ಆದರೆ ಇನ್ನೇನು ಅದನ್ನು ಪಳಗಿಸಿ, ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಬೇಕು ಅಂತ ಅರಣ್ಯಾಧಿಕಾರಿಗಳು ಪ್ಲಾನ್ ಮಾಡಿದ್ದರು. ಆಗ ಅಪಾಯದ ಬಗ್ಗೆ ಅರಿತ ಒಂಟಿ ಸಲಗ ಅಲ್ಲಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿತ್ತು.

ಈಗ ಮತ್ತೊಮ್ಮೆ ಭಾನುಮತಿ ಬಳಸಿ ಆನೆಗೆ ಖೆಡ್ಡಾ

ನಾಲ್ಕು ಗಂಡು ಗಜಪಡೆಗೂ ಪುಂಡಾನೆ ಹಾವೇರಿ ಟಸ್ಕರ್‌ ಡೋಂಟ್‌ ಕೇರ್ ಎಂದಿದೆ. ‌ ಪರಿಣಾಮ ಪುಂಡಾನೆ ಸೆರೆಗೆ ಅರಣ್ಯ ಇಲಾಖೆ ಶನಿವಾರ ಬೆಳಗ್ಗೆಯಿಂದ ಭಾನುಮತಿ ಮೂಲಕ ಹನಿಟ್ರ್ಯಾಪ್‌ ಕಾರ್ಯಾಚರಣೆಗೆ ಮುಂದಾಗಿತ್ತು. 8ರಿಂದ 10 ವರ್ಷ ಪ್ರಾಯದ ಹಾವೇರಿ ಟಸ್ಕರ್‌ ಮತ್ತೆ 30ರ ಭಾನುಮತಿ ಮೋಹಕ್ಕೆ ಒಳಗಾಗಿ ಬರುತ್ತದೆ ಎನ್ನುವುದು ಅರಣ್ಯಾಧಿಕಾರಿಗಳ ಲೆಕ್ಕಾಚಾರವಾಗಿತ್ತು.

ಅರಣ್ಯಾಧಿಕಾರಿಗಳ ಲೆಕ್ಕಾಚಾರ ಉಲ್ಟಾ ಮಾಡಿದ ಒಂಟಿ ಸಲಗ

ಆದರೆ ಈ ಬಾರಿ ಅರಣ್ಯಾಧಿಕಾರಿಗಳ ಲೆಕ್ಕಾಚಾರವನ್ನೇ ಈ ಒಂಟಿಸಲಗ ಉಲ್ಟಾ ಮಾಡಿದೆ. ಹಿಂದೊಮ್ಮೆ ಹೆಣ್ಣಾನೆ ಭಾನುಮತಿ ಮೋಹಕ್ಕೆ ಬಿದ್ದು ಖೆಡ್ಡಾಕ್ಕೆ ಕೆಡವಿದ್ದ ಘಟನೆ ಆನೆ ಇನ್ನೂ ಮರೆತಂತೆ ಕಾಣುತ್ತಿಲ್ಲ. ಹೀಗಾಗಿಯೇ ಈ ಬಾರಿ ಭಾನುಮತಿ ಬಂದು ಬಿನ್ನಾಣ ತೋರಿದರೂ ಆನೆ ಅದರ ಹತ್ತಿರಕ್ಕೂ ಸುಳಿಯುತ್ತಿಲ್ಲವಂತೆ. ಎಷ್ಟೇ ದಿನ ಕಳೆದರೂ 30ರ ವಯಸ್ಸಿನ ಭಾನುಮತಿ ಕಡೆಗೆ ತಿರುಗಿಯೂ ನೋಡಿಲ್ಲ. ಇದು ಸೆರೆಹಿಡಿಯಲು ಬಂದ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.

ಕಾರ್ಯಾಚರಣೆಗೆ ಅಡ್ಡಿಮಾಡುತ್ತಿರುವ ಮಳೆ

ಕಾಡಿನ ನಂಟು ಹೊಂದಿದ ಪುಂಡಾನೆಯ ಮೇಲೆ ವರುಣನ ಕೃಪೆಯೂ ಇದ್ದಂತಿದೆ. ಐದು ಆನೆಗಳು, 11 ಮಾವುತರು, 5 ಸಾಕಾನೆಗಳು, ಆಎಫ್‌ಒ, ಡಿಆರ್‌ಎಫ್‌ಒ, ಅರಣ್ಯ ರಕ್ಷಕರು, ವಾಚರ್‌ಗಳು ಸೇರಿದಂತೆ 30ಕ್ಕೂ ಹೆಚ್ಚು ಜನರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಭಾನುವಾರ ನಿರಂತರ ಮಳೆ ಕಾರಣ ಕಾರ್ಯಾಚರಣೆಗೆ ಹಿನ್ನೆಡೆಯಾಗಿದೆ.

ಇದನ್ನೂ ಓದಿ: Shivamogga Clash: ಮಲೆನಾಡಿನ ಕೋಮು ಸಂಘರ್ಷಕ್ಕೆ ಕಾರಣವೇನು? ನೆಪಮಾತ್ರವಾಯ್ತಾ ಸಾವರ್ಕರ್, ಟಿಪ್ಪು ಫ್ಲೆಕ್ಸ್?

ಅಸಹಾಯಕರಾದ ಅಧಿಕಾರಿಗಳು

ರಾತ್ರಿ ಇಡೀ ಜಮೀನುಗಳ ಮೇಲೆ ದಾಳಿ ಮಾಡಿ ಹೊಟ್ಟೆ ತುಂಬಿಸಿಕೊಂಡು ಎಲೆಮಡಲು ಬೆಟ್ಟ ಏರುವ ಹಾವೇರಿ ಟಸ್ಕರ್‌ ಅನ್ನು ಖೆಡ್ಡಾಕ್ಕೆ ಬೀಳಿಸುವುದು ಹರಸಾಹಸವಾಗಿದೆ. ರೇಡಿಯೊ ಕಾಲರ್‌ ಅಳವಡಿಸಿದ್ದರಿಂದ ಪುಂಡಾನೆ ಇರುವ ಜಾಗ ಗೊತ್ತಾಗುತ್ತಿದೆ. ಆದರೆ, ಬೆಟ್ಟದ ಇನ್ನೊಂದು ಬದಿ ಪ್ರಪಾತ ಇರುವ ಕಾರಣ ಆನೆಗೆ ತೊಂದರೆಯಾಗುವ ಭೀತಿಯಲ್ಲಿ ಅರಣ್ಯ ಇಲಾಖೆಯವರು ಓಡಿಸಲು ಮುಂದಾಗುತ್ತಿಲ್ಲ.
Published by:Annappa Achari
First published: