• Home
 • »
 • News
 • »
 • explained
 • »
 • Economic Recession: ಜಗತ್ತನ್ನೇ ಹಿಂಡಿ ಹಿಪ್ಪೆ ಮಾಡುತ್ತಿದೆ ಆರ್ಥಿಕ ಹಿಂಜರಿತ! ಭಾರತದ ಪಾಲಿಗೆ ಹೇಗಿದೆ ಭವಿಷ್ಯ?

Economic Recession: ಜಗತ್ತನ್ನೇ ಹಿಂಡಿ ಹಿಪ್ಪೆ ಮಾಡುತ್ತಿದೆ ಆರ್ಥಿಕ ಹಿಂಜರಿತ! ಭಾರತದ ಪಾಲಿಗೆ ಹೇಗಿದೆ ಭವಿಷ್ಯ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉದ್ಯೋಗ ನಷ್ಟವು 2019 ರಲ್ಲಿ ಪ್ರಾರಂಭವಾದ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಜಗತ್ತನ್ನು ಆಕ್ರಮಿಸಿದ ದೊಡ್ಡ ಬಿಕ್ಕಟ್ಟುಗಳಲ್ಲಿ ಒಂದಾಗಿದೆ. ಹಾಗಾದ್ರೆ ಈ ಸಂದಿಗ್ಧ ಸ್ಥಿತಿಯಲ್ಲಿ ಭಾರತದ ಪರಿಸ್ಥಿತಿ ಏನು?

 • Share this:

  ಸಾಂಕ್ರಾಮಿಕ (pandemic) ಸಮಯದಲ್ಲಿ ಕುಸಿದು ಬಿದ್ದ ಆರ್ಥಿಕತೆ (economy) ಇದುವರೆಗೂ ಚೇತರಿಕೆಯನ್ನು ಕಂಡಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಉದ್ಯೋಗ ಕಡಿತಗಳು (Job cuts) ಟೆಕ್ ವಲಯದಲ್ಲಿ (tech sector) ನಡೆಯುತ್ತಿದೆ. ಯುದ್ಧದಿಂದ (War) ಉಂಟಾದ ಪರಿಣಾಮಗಳಿಂದ ಹಣದುಬ್ಬರ ಸಮಸ್ಯೆಗಳು ತಲೆದೋರಿದವು, ಒಂದು ರೀತಿಯ ಆರ್ಥಿಕ ಹಿಂಜರಿತವೇ (recession) ಏರ್ಪಟ್ಟಿತು. ವಿಶ್ವವೇ ಕಂಗೆಟ್ಟ ಪರಿಸ್ಥಿತಿ ಉಂಟಾಯಿತು. ಭಾರತದಲ್ಲಿ ಹೊಸ ಯುಗದ ಸ್ಟಾರ್ಟಪ್ ಸಂಸ್ಥೆಗಳು ನಿಧಿಯ ಕೊರತೆಯಿಂದ ಉದ್ಯೋಗಿಗಳನ್ನು ಕಡಿತಗೊಳಿಸಿದ್ದು ಟಾಟಾದಂತಹ ಪ್ರಮುಖ ಸಂಸ್ಥೆಗಳು ಮೆಟಾ ಟ್ವಿಟರ್‌ನಿಂದ ವಜಾಗೊಂಡ ಉದ್ಯೋಗಿಗಳನ್ನು ತಮ್ಮ ಸಂಸ್ಥೆಗಳಿಗೆ ಸೇರಿಸಿಕೊಳ್ಳುತ್ತಿದೆ.


  ಉದ್ಯೋಗ ನಷ್ಟ ದೊಡ್ಡ ಬಿಕ್ಕಟ್ಟಾಗಿದೆ ಹೇಗೆ?


  ಉದ್ಯೋಗ ನಷ್ಟವು 2019 ರಲ್ಲಿ ಪ್ರಾರಂಭವಾದ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಜಗತ್ತನ್ನು ಆಕ್ರಮಿಸಿದ ದೊಡ್ಡ ಬಿಕ್ಕಟ್ಟುಗಳಲ್ಲಿ ಒಂದಾಗಿದೆ. ದುರದೃಷ್ಟಕರ ಭಾಗವೆಂದರೆ, ಹಲವಾರು ವಲಯಗಳಲ್ಲಿ, ಸುಮಾರು ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಈ ಅಧೋಗತಿ ಇನ್ನೂ ನಿಂತಿಲ್ಲ. ಪ್ರಪಂಚದಾದ್ಯಂತದ ಸರ್ಕಾರಗಳು ಒದಗಿಸಿರುವ ಭರವಸೆಗಳ ಹೊರತಾಗಿಯೂ ಸಾಂಕ್ರಾಮಿಕ-ಪೂರ್ವ ಮಟ್ಟಕ್ಕೆ ಹಿಂತಿರುಗುತ್ತಿದ್ದೇವೆ ಎಂಬ ಅನಿಸಿಕೆಯನ್ನು ಈ ಉದ್ಯೋಗಿ ವಜಾಗೊಳಿಸುವಿಕೆ ಉಂಟುಮಾಡುತ್ತಿದೆ.


  ಟೆಕ್ ವಲಯಗಳಲ್ಲಿ ಆರಂಭವಾದ ಉದ್ಯೋಗ ಕಡಿತ


  ರಿಟೇಲ್ ಶಾಪಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಎರಡು ದೊಡ್ಡ ಹೆಸರುಗಳಾದ ವಾಲ್‌ಮಾರ್ಟ್ ಮತ್ತು ಅಲಿಬಾಬಾ, ಕಳೆದ ಎರಡು ದಿನಗಳಲ್ಲಿ ಸಂಸ್ಥೆಗಳ ಹಲವಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಚಿಲ್ಲರೆ ದೈತ್ಯ ತನ್ನ ವಜಾಗಳನ್ನು 200 ಕ್ಕೆ ಸೀಮಿತಗೊಳಿಸಿದರೆ, ವಿವಿಧ ಮಾಧ್ಯಮ ವರದಿಗಳ ಪ್ರಕಾರ ಚೀನೀ ಟೆಕ್ ಸಂಸ್ಥೆಯು ಸಂಖ್ಯೆ 10,000 ಕ್ಕೆ ಕಡಿತಗೊಳಿಸಿದೆ.


  ಆರ್ಥಿಕ ಹಿಂಜರಿತದ ತಲೆನೋವಿನಿಂದ ಹೊರಬರುವುದು ಹೇಗೆ?


  ಭಾರತೀಯ ಐಟಿ ಸಂಸ್ಥೆಗಳು ಕೂಡ ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ಕರೆಸಿಕೊಳ್ಳುತ್ತಿವೆ, ಆದರೆ ವರ್ಕ್ ಫ್ರಮ್ ಹೋಮ್‌ನಿಂದ ಉಂಟಾದ ಪ್ರವೃತ್ತಿಯಿಂದ ಹೊರಹೊಮ್ಮಿದ ಮೂನ್‌ಲೈಟಿಂಗ್‌ ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಈ ಬೆಳವಣಿಗೆಯು ಭಾರತವು ಕೇವಲ ಭಾಗಶಃ ಆರ್ಥಿಕ ಹಿಂಜರಿತವನ್ನು ಎದುರಿಸಲಿದೆ ಎಂಬುದು ನಿಜವಾಗುತ್ತಿದೆ. 2008ರಲ್ಲಿಯೂ, ಯುಎಸ್ ಮಾರುಕಟ್ಟೆಯು ಕುಸಿದಾಗ ಜಗತ್ತನ್ನು ಬಿಕ್ಕಟ್ಟಿನಿಂದ ತತ್ತರಿಸಿದಾಗ, ಬಡ್ಡಿದರಗಳನ್ನು ಕಡಿಮೆ ಮಾಡಿ ಮತ್ತು ಹಣಕಾಸಿನ ವೆಚ್ಚವನ್ನು ಹೆಚ್ಚಿಸುವ ಮೂಲಕ ಭಾರತವು ನೆಲೆನಿಂತಿತು.


  ಆರ್‌ಬಿಐ ಹೇಗೆ ವಿಭಿನ್ನವಾಗಿ ಕೆಲಸ ಮಾಡುತ್ತಿದೆ


  ಪ್ರಸ್ತುತ ವಾತಾವರಣದಲ್ಲಿ, US ಫೆಡರಲ್ ರಿಸರ್ವ್ ಬೇಡಿಕೆ ಮತ್ತು ಆದ್ದರಿಂದ ಬೆಲೆಗಳನ್ನು ಕಡಿಮೆ ಮಾಡಲು ನಗದು ಹರಿವನ್ನು ನಿಯಂತ್ರಿಸಲು ಬಡ್ಡಿದರಗಳನ್ನು ಆಕ್ರಮಣಕಾರಿಯಾಗಿ ಹೆಚ್ಚಿಸುತ್ತಿದೆ. ಆದರೆ ಇದು ಸಾಲವನ್ನು ಹೆಚ್ಚು ದುಬಾರಿಯನ್ನಾಗಿ ಮಾಡುತ್ತಿದ್ದು ಬಂಡವಾಳ ವೆಚ್ಚ ಮತ್ತು ಹೂಡಿಕೆಯ ಮೇಲೆ ಪರಿಣಾಮ ಬೀರುವ ಮೂಲಕ ವ್ಯಾಪಾರ ಬೆಳವಣಿಗೆಯ ಮೇಲೆ ನಿಯಂತ್ರಣ ಸಾಧಿಸುತ್ತಿದೆ. ಅನಿಯಂತ್ರಿತ ಹಣದುಬ್ಬರ ಮತ್ತು ದೀರ್ಘ ಆರ್ಥಿಕ ಹಿಂಜರಿತದಿಂದಾಗಿ ಹೆಚ್ಚಿನ ಬೆಲೆಗಳ ನಡುವೆ ಈ ಆಯ್ಕೆ ಕಂಡುಬಂದಿದೆ.


  ಇದನ್ನೂ ಓದಿ: Cooker Bomb: ಕುಕ್ಕರ್ ಬಾಂಬ್ ಅಂದರೆ ಏನು ಗೊತ್ತಾ? ಇಲ್ಲಿದೆ ‘ಸ್ಫೋಟ’ಕ ಮಾಹಿತಿ!


  ಪರಿಣಿತರು ಏನು ಹೇಳುತ್ತಾರೆ?


  ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮತ್ತು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರಂತಹ ಭಾರತದ ಅಧಿಕಾರಿಗಳು, ಭಾರತವು ಹಣದುಬ್ಬರದ ಅಪಾಯವನ್ನು ಕಡಿಮೆ ಹೊಂದಿದೆ ಮತ್ತು 7% ದಷ್ಟು ಬೆಳವಣಿಗೆಯಾಗಲಿದೆ ಎಂದು ತಿಳಿಸಿದ್ದಾರೆ. ಈ ಹೊರತಾಗಿಯೂ, ದೇಶದ ಬೆಳವಣಿಗೆಯ ಮುನ್ಸೂಚನೆಯನ್ನು ಕಡಿತಗೊಳಿಸಿದ್ದರೂ ಸಹ, ಈ ಬಿಕ್ಕಟ್ಟಿನಲ್ಲಿ ಭಾರತವು ಹೆಚ್ಚಿನ ಅಭಿವೃದ್ಧಿ ಹೊಂದಿದ ಆರ್ಥಿಕ ದೇಶಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಜಾಗತಿಕ ವಿತ್ತೀಯ ಸಂಸ್ಥೆ IMF ಹೇಳಿದೆ. ಹಣದುಬ್ಬರವನ್ನು ನಿಯಂತ್ರಿಸಲು ರಷ್ಯಾದಿಂದ ರಿಯಾಯಿತಿ ತೈಲವನ್ನು ಖರೀದಿಸಲು ಒತ್ತಡವನ್ನು ಧಿಕ್ಕರಿಸುವಂತಹ ಕ್ರಮಗಳು ಇದಕ್ಕೆ ಕೊಡುಗೆ ನೀಡಿರಬಹುದು.


  ಉನ್ನತ ಕಂಪನಿಗಳಲ್ಲಿ ಸಿಬ್ಬಂದಿ ವಜಾ


  ಲಿಡೋ ಲರ್ನಿಂಗ್ - 200 ಉದ್ಯೋಗಿಗಳು


  ಮೈಕ್ರೋಸಾಫ್ಟ್ - 1800 ಉದ್ಯೋಗಿಗಳು


  ವಾಲ್ಮಾರ್ಟ್ - 200 ಉದ್ಯೋಗಿಗಳು (WSJ ವರದಿ)


  ಅಲಿಬಾಬಾ - 10,000 ಉದ್ಯೋಗಿಗಳು (ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್)


  ನೆಟ್ಫ್ಲಿಕ್ಸ್ - 450 ಉದ್ಯೋಗಿಗಳು


  ಟ್ವಿಟರ್ – 100 ಉದ್ಯೋಗಿಗಳು


  ಬ್ಲುಸ್ಟಾಕ್ಸ್ - 60+ ಉದ್ಯೋಗಿಗಳು


  ಅನಾಕಾಡೆಮಿ - 600 ಉದ್ಯೋಗಿಗಳು


  ವೇದಾಂತು - 624 ಉದ್ಯೋಗಿಗಳು


  ಕಾರ್ಸ್ 24 - 600 ಉದ್ಯೋಗಿಗಳು


  ಮೀಶೋ - 150 ಉದ್ಯೋಗಿಗಳು


  ಬೆಟರ್.ಕಾಮ್ - 3000 ಉದ್ಯೋಗಿಗಳು


  ಬ್ಲಿಂಕಿಟ್ - ಉದ್ಯೋಗಿಗಳ 5%


  ಓಕೆಕ್ರೆಡಿಟ್ - 40 ಉದ್ಯೋಗಿಗಳು


  ಫರ್ಲೆಂಕೊ - 200 ಉದ್ಯೋಗಿಗಳು


  ಟ್ರೆಲ್ - 300 ಉದ್ಯೋಗಿಗಳು


  ಫೋರ್ಡ್ - 580 ಉದ್ಯೋಗಿಗಳು


  ನೂಮ್ - 500 ಉದ್ಯೋಗಿಗಳು


  ರಾಬಿನ್ಹುಡ್ - 300 ಉದ್ಯೋಗಿಗಳು


  ನೆಸ್ಲೆ - 104 ಉದ್ಯೋಗಿಗಳು


  ಟೆಸ್ಕೊ - 1600 ಉದ್ಯೋಗಿಗಳು


  ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ - 1500 ಉದ್ಯೋಗಿಗಳು


  ಎಮ್‌ಫೈನ್ - 500 ಉದ್ಯೋಗಿಗಳು


  ಕ್ಲಾರ್ನಾ - 700 ಉದ್ಯೋಗಿಗಳು


  ಸಿನೆಪ್ಲೆಕ್ಸ್ ಎಂಟರ್ಟೈನ್ಮೆಂಟ್ - 5000 ಉದ್ಯೋಗಿಗಳು


  ಪ್ರೈಮಾರ್ಕ್ - 400 ಉದ್ಯೋಗಿಗಳು


  ರಾಯಲ್ ಮೇಲ್ - 700 ಉದ್ಯೋಗಿಗಳು


  ಡಿಡಿ - 3000 ಉದ್ಯೋಗಿಗಳು


  ಕಾಂಡೆ'ನಾಸ್ಟ್ – 90% ದಷ್ಟು ಉದ್ಯೋಗಿಗಳು


  ರೂಪಾಯಿಕ್ - 200 ಉದ್ಯೋಗಿಗಳು


  ಕಾಯಿನ್‌ಬೇಸ್ - 1100 ಉದ್ಯೋಗಿಗಳು


  ಸಿಟಿಮಾಲ್ - 191 ಉದ್ಯೋಗಿಗಳು


  ಬೈಜುಸ್ - 2500 ಉದ್ಯೋಗಿಗಳು


  ಟೆಸ್ಲಾ - 200 ಉದ್ಯೋಗಿಗಳು


  ಮೆಟಾ


  ನವೆಂಬರ್ 9 ರಂದು, ಫೇಸ್‌ಬುಕ್‌ನ ಪೋಷಕ ಕಂಪನಿ ಮೆಟಾ ತನ್ನ 11,000 ಉದ್ಯೋಗಿಗಳನ್ನು ವಜಾಗೊಳಿಸುವ ಯೋಜನೆಯನ್ನು ಪ್ರಕಟಿಸಿತು ಇದು ಸಂಸ್ಥೆಯ ಕಾರ್ಯ ಪಡೆಯ 13% ದಷ್ಟು ಎಂಬುದಾಗಿ ಅಂದಾಜಿಸಲಾಗಿದೆ.


  ಈ ಕುರಿತು ಕಂಪನಿ ಸಿಇಒ ಮಾರ್ಕ್ ಜುಕರ್‌ಬರ್ಗ್ ಬ್ಲಾಗ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಮೆಟಾದ ಇತಿಹಾಸದಲ್ಲಿಯೇ ಅತ್ಯಂತ ಕಷ್ಟಕರವಾದ ಬದಲಾವಣೆಯನ್ನು ನಾವು ಕೈಗೊಂಡಿರುವೆವು. ತಮ್ಮ ತಂಡದ ಗಾತ್ರವನ್ನು ಕಡಿಮೆ ಮಾಡಲು ನಿರ್ಧರಿಸಿರುವುದಾಗಿ ಮಾರ್ಕ್ ಹೇಳಿಕೊಂಡಿದ್ದು ವರ್ಕ್‌ಫೋರ್ಸ್‌ನ 13% ದಷ್ಟು ಉದ್ಯೋಗಿಗಳು ವಜಾಗೊಳಿಸುವಿಕೆಯ ಪರಿಣಾಮಕ್ಕೊಳಗಾಗಲಿದ್ದಾರೆ ಎಂದು ತಿಳಿಸಿದ್ದರು. ಅಂದರೆ ಸಂಸ್ಥೆಯ 11,000 ಬುದ್ಧಿವಂತ ಉದ್ಯೋಗಿಗಳು ಕಂಪನಿಯನ್ನು ಬಿಟ್ಟು ಹೊರನಡೆಯಬೇಕಾಗಿದೆ ಎಂದೇ ಸೂಚಿಸಿದ್ದರು.


  ಅಮೆಜಾನ್


  ಇತ್ತೀಚಿನ ವರದಿಯ ಪ್ರಕಾರ ಅಮೆಜಾನ್ ಕೂಡ ತನ್ನ ಕಾರ್ಪೋರೇಟ್ ಹಾಗೂ ತಂತ್ರಜ್ಞಾನ ವಲಯದಿಂದ 10,000 ಜನರನ್ನು ವಜಾಗೊಳಿಸುವ ತೀರ್ಮಾನದಲ್ಲಿದೆ ಎಂಬುದು ವರದಿಯಾಗಿದೆ. ಇದು ಕೂಡ ಕಂಪನಿಯ ಇತಿಹಾಸದಲ್ಲಿ ಅತಿದೊಡ್ಡ ಉದ್ಯೋಗಿ ಕಡಿತ ಎಂದೆನಿಸಲಿದೆ.


  ಟ್ವಿಟರ್


  ಟ್ವಿಟರ್‌ನಲ್ಲಿ ಎಲೋನ್ ಮಸ್ಕ್, 7,500 ಉದ್ಯೋಗಿಗಳನ್ನು ವಜಾಗೊಳಿಸಿದ್ದು ತಮ್ಮ ಕಾರ್ಯಪಡೆಯ 50% ದಷ್ಟು ಎಂಬುದಾಗಿ ವರದಿಯಾಗಿದ್ದು ವಜಾಗೊಂಡವರಲ್ಲಿ ಕಂಪನಿಯ ಸಿಇಒ ಪರಾಗ್ ಅಗರ್‌ವಾಲ್, ಸಿಎಫ್‌ಒ ನೆಡ್ ಸೇಗಲ್ ಹಾಗೂ ಟ್ರಸ್ಟ್ ಹಾಗೂ ಸೇಫ್ಟಿ ಹೆಡ್ ವಿಜಯ ಗಡ್ಡೆ, ಭಾರತದಲ್ಲಿ 90%ದಷ್ಟು ಟ್ವಿಟರ್ ಉದ್ಯೋಗಿಗಳು ವಾರಾಂತ್ಯದಲ್ಲಿ ನಡೆದ ಲೇಆಫ್‌ನಲ್ಲಿ ಉದ್ಯೋಗ ಕಳೆದುಕೊಂಡಿರುವುದನ್ನು ದೃಢೀಕರಿಸಲಾಗಿದೆ.


  ಸ್ನ್ಯಾಪ್


  ಸ್ನ್ಯಾಪ್ ತನ್ನ ಜಾಗತಿಕ ಕಾರ್ಯಪಡೆಯ ಸುಮಾರು 20% ರಷ್ಟು ಅಥವಾ 6,400 ಉದ್ಯೋಗಿಗಳಲ್ಲಿ ಸುಮಾರು 1,300 ಉದ್ಯೋಗಿಗಳನ್ನು ಆಗಸ್ಟ್ 2022 ರಲ್ಲಿ ವಜಾಗೊಳಿಸಿದೆ ಎಂಬುದು ವರದಿಯಾಗಿದೆ.


  ಬೈಜೂಸ್


  ಎಜ್ಯುಟೆಕ್ ಕಂಪನಿ ಬೈಜೂಸ್ ಕೂಡ ತನ್ನ 2,500 ಉದ್ಯೋಗಿಗಳನ್ನು ಮುಂದಿನ ಆರು ತಿಂಗಳಲ್ಲಿ ಮನೆಗೆ ಕಳುಹಿಸುವ ನಿರ್ಧಾರ ಕೈಗೊಂಡಿದೆ ಎಂಬ ಮಾಹಿತಿ ಸೋರಿಕೆಯಾಗಿದೆ ಹಾಗೂ 2023 ರಲ್ಲಿ ತನ್ನ ಲಾಭವನ್ನು ವರ್ಧಿಸುವ ನಿಟ್ಟಿನಲ್ಲಿ ಉದ್ಯೋಗಿ ಕಡಿತ ಎಂಬ ಹೇಳಿಕೆಯನ್ನು ನೀಡಿದೆ.


  ಇದನ್ನೂ ಓದಿ: Explained: ಚುನಾವಣಾ ಹೊಸ್ತಿಲಲ್ಲಿ ಭುಗಿಲೆದ್ದ ಮತದಾರರ ವೈಯಕ್ತಿಕ ಮಾಹಿತಿ ಕಳ್ಳತನದ ವಿವಾದ: ಏನಿದು 'ಚಿಲುಮೆ' ಅಕ್ರಮ?


  ಕಂಪನಿಗಳು ಉದ್ಯೋಗಿ ಕಡಿತಗಳನ್ನು ಮಾಡುತ್ತಿರುವ ಉದ್ದೇಶವೇನು?


  ಫೋರ್ಬ್ಸ್ ವರದಿಯ ಪ್ರಕಾರ ಆರ್ಥಿಕ ಹೊಡೆತ ಕಾರಣವಾದರೆ ಇನ್ನೊಂದು ಕೋವಿಡ್‌ನಿಂದ ಜಾರಿಗೆ ಬಂದಿರುವ ನ್ಯೂ ನಾರ್ಮಲ್ ನೀತಿ ಎಂದಾಗಿದೆ. ಕೆಲಸದ ಸ್ಥಳಗಳಲ್ಲಿ ಉನ್ನತ ಮಟ್ಟದ ಯಾಂತ್ರೀಕೃತಗೊಂಡ ಪ್ರವೃತ್ತಿಯು ಉದ್ಯೋಗಿ ಕಡಿತಕ್ಕೆ ಕಾರಣವಾಗಿದೆ ಎಂಬುದು ವರದಿ ತಿಳಿಸಿರುವ ಮಾಹಿತಿಯಾಗಿದೆ. ಮಾನವ ಕಾರ್ಮಿಕರ ಅಗತ್ಯವಿಲ್ಲದೆಯೇ ಯಾಂತ್ರೀಕೃತ ವ್ಯವಸ್ಥೆಯು ಕಾರ್ಮಿಕರ ಕೆಲಸವನ್ನು ನಡೆಸುತ್ತಿರುವುದು ಉದ್ಯೋಗಿ ವಜಾಗೊಳಿಸುವಿಕೆಗೆ ಕಾರಣವಾಗಿದೆ.

  Published by:Annappa Achari
  First published: