Explained: ಅಮುಲ್ ಇಸಾಬ್ಗೋಲ್ ಐಸ್​ಕ್ರೀಮ್ ರುಚಿ ಹೇಗಿದೆ? ಹೊಸ ಟೇಸ್ಟ್ ಟೀಕೆಗೆ ಗುರಿ ಆಗಿದ್ದೇಕೆ?

ಐಸ್​ಕ್ರೀಂನಲ್ಲಿನ ವಿವಿಧ ರುಚಿಗಳು ಮತ್ತು ಬೀಜಗಳ ಮಿಶ್ರಣಗಳು ಐಸ್ ಕ್ರೀಮ್ ಪ್ರಿಯರನ್ನು ಆಕರ್ಷಿಸಲು ಎಂದಿಗೂ ವಿಫಲವಾಗುವುದಿಲ್ಲ. ಆದರೆ ಈ ಫ್ಲೇವರ್ ಗೆ ಯಾವುದೇ ಅದ್ಭುತ ರೆಸ್ಪಾನ್ಸ್ ಸಿಕ್ಕಿಲ್ಲ ಬದಲಾಗಿ ಟ್ವಿಟ್ಟರ್ ನಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿವೆ.

ಅಮುಲ್ ಇಸಾಬ್ಗೋಲ್ ಕಾಜು ಮತ್ತು ಅಂಜೂರ್

ಅಮುಲ್ ಇಸಾಬ್ಗೋಲ್ ಕಾಜು ಮತ್ತು ಅಂಜೂರ್

  • Share this:
ಭಾರತದ ಡೈರಿ ಸಹಕಾರ ಸಂಸ್ಥೆ ಅಮೂಲ್ (Amul) ತನ್ನ ರುಚಿಕರ ಉತ್ಪನ್ನಗಳಿಂದಲೇ ಜನಮನ ಗೆದ್ದಿದೆ. ಅದರಲ್ಲೂ ಐಸ್ ಕ್ರೀಮ್ (Ice Cream) ಉತ್ಪನ್ನಗಳು ಇತರೆ ಬ್ರ್ಯಾಂಡ್ ಗಳಜೊತೆಗಿನ ಪ್ರಬಲ ಸ್ಪರ್ಧಿಯಾಗಿವೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಹೊಸ ಫ್ಲೇವರ್ ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಕಂಪನಿ ಹೊರ ತರುವ ಎಲ್ಲಾ ರುಚಿಗಳು ಚೆನ್ನಾಗಿರುತ್ತವೇ ಅಂತೇನಿಲ್ಲಾ, ಕೆಲ ರುಚಿಗಳು ಇಷ್ಟವಾಗಬಹುದು ಇನ್ನು ಕೆಲವುಗಳಿಗೆ ಹಲವಾರು ಟೀಕೆಗಳು ವ್ಯಕ್ತವಾಗಬಹುದು. ಗುಣಮಟ್ಟದ ಡೈರಿ ಉತ್ಪನ್ನಗಳಿಗೆ (Dairy Products) ಯಾವಾಗಲೂ ಹೆಸರುವಾಸಿಯಾಗಿರುವ ಅಮೂಲ್ ಇತ್ತೀಚೆಗೆ ಗೋಡಂಬಿ ಮತ್ತು ಅಂಜೂರದ ಹೊಸ ಇಸಾಬ್ಗೋಲ್ ಐಸ್‌ಕ್ರೀಮ್‌ನ ರೂಪಾಂತರವನ್ನು ಪರಿಚಯಿಸಿತ್ತು.

ಹೊಸ ಇಸಾಬ್ಗೋಲ್ ಕಾಜು ಮತ್ತು ಅಂಜೂರ್
ಐಸ್ ಕ್ರೀಂನಲ್ಲಿನ ವಿವಿಧ ರುಚಿಗಳು ಮತ್ತು ಬೀಜಗಳ ಮಿಶ್ರಣಗಳು ಐಸ್ ಕ್ರೀಮ್ ಪ್ರಿಯರನ್ನು ಆಕರ್ಷಿಸಲು ಎಂದಿಗೂ ವಿಫಲವಾಗುವುದಿಲ್ಲ. ಆದರೆ ಈ ಫ್ಲೇವರ್ ಗೆ ಯಾವುದೇ ಅದ್ಭುತ ರೆಸ್ಪಾನ್ಸ್ ಸಿಕ್ಕಿಲ್ಲ. ಬದಲಾಗಿ ಟ್ವಿಟ್ಟರ್​ನಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿವೆ.

ಡೈರಿ ಬ್ರಾಂಡ್ ಅಮುಲ್ ಹೊಸ ಬಗೆಯ ಗುಡ್ ನೆಸ್ ಆ್ಯಪ್ ಇಸಾಬ್ಗೋಲ್ ವಿತ್ ಕ್ಯಾಶೂ, ಫಿಗ್ ಐಸ್ ಕ್ರೀಮ್ ಅನ್ನು  ಬಿಡುಗಡೆ ಮಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಅಮೂಲ್ ಸಂಸ್ಥೆ “ಹೊಸ ಇಸಾಬ್ಗೋಲ್ ಕಾಜು ಮತ್ತು ಅಂಜೂರ್ ಅನ್ನು ಪರಿಚಯಿಸುತ್ತಿದ್ದೇವೆ. ಇದು ನಿಮ್ಮ ಹಲ್ಲು ಮತ್ತು ಹೊಟ್ಟೆಗೆ ರಾಯಲ್ ಟ್ರೀಟ್ ನೀಡಲಿದೆ." ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿತ್ತು.

ಕಂಪನಿಯ ಕಾಲೆಳೆದ ಐಸ್ ಕ್ರೀಮ್ ಪ್ರಿಯರು
ಅಮೂಲ್ ತನ್ನ ಹೊಸ ರುಚಿಯನ್ನು ಪರಿಚಯಿಸುತ್ತಿದ್ದಂತೆ ಹಲವಾರು ಐಸ್ ಕ್ರೀಮ್ ಪ್ರಿಯರು ಕಂಪನಿಯ ಕಾಲೆಳೆದಿದ್ದಾರೆ. ಈ ಸಿಹಿ ಮತ್ತು ವಿಲಕ್ಷಣ ಸಂಯೋಜನೆಯ ಬಗ್ಗೆ ಜನರು ಭಾರಿ ಟೀಕೆ ಮಾಡಿದ್ದಾರೆ. ಇಸಾಬ್ಗೋಲ್ ಅನ್ನು ಸಾಮಾನ್ಯವಾಗಿ ಮಲಬದ್ಧತೆ ನಿವಾರಿಸಲು ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡಲು ಬಳಸಲಾಗುತ್ತದೆ. ಆದರೆ ಕಂಪನಿ ಇದನ್ನು ಐಸ್ ಕ್ರೀಮ್ನಲ್ಲಿ ಪರಿಚಯಿಸಿದ್ದರಿಂದ ಇದು ಭಿನ್ನವಾಗಿದೆ ಮತ್ತು ಟೀಕೆಗೊಳಗಾಗಿದೆ.

ಹೊಸ ಫ್ಲೇವರ್ ಗೆ ಭಾರಿ ಟೀಕೆ
ಒಬ್ಬರು ಚೆನ್ನಾಗಿದೆ ಥ್ಯಾಂಕ್ಸ್ ಎಂದು ಮತ್ತೆ ಆದರೂ ನೋ ಥ್ಯಾಕ್ಸ್ ಎಂದು ಹೇಳಿದ್ದಾರೆ. ಟ್ವಿಟ್ಟರ್ ಬಳಕೆದಾರರಾದ ನಂದಿತಾ ಅಯ್ಯರ್ ಅವರು ಅಮುಲ್‌ನ ಇಸಾಬ್‌ಗೋಲ್‌ನ ಸ್ಕ್ರೀನ್‌ಶಾಟ್ ಅನ್ನು "ಇಲ್ಲ ಧನ್ಯವಾದಗಳು" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ ಮತ್ತು ಟ್ವಿಟ್ಟರ್ ಬಳಕೆದಾರರು ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಲು ಅದನ್ನೇ ರೀ ಟ್ವೀಟ್ ಮಾಡಿ ಎಲ್ಲರೂ ಹೊಸ ರುಚಿಗೆ ಅಸಮ್ಮತಿ ಸೂಚಿಸಿದ್ದಾರೆ.

ಇದನ್ನೂ ಓದಿ:  Chips and Sandwich: 23 ವರ್ಷದಿಂದ ಚಿಪ್ಸ್ ಸ್ಯಾಂಡ್‍ವಿಚ್ ಬಿಟ್ಟು ಬೇರೇನೂ ತಿಂದಿಲ್ಲ ಈಕೆ! ಹೇಗಿದ್ದಾಳೆ ನೋಡಿ

ಇನ್ನೊಬ್ಬರು "ಆಶಾದಾಯಕವಾಗಿ ಕಂಪನಿ ಅದನ್ನು ಔಷಧಾಲಯದಲ್ಲಿ ಮಾರಾಟ ಮಾಡುವುದಿಲ್ಲ” ಎಂದು, ಒಬ್ಬರು ರೀ ಟ್ವೀಟ್ ಮಾಡಿದ್ದಾರೆ. ಮಲಬದ್ಧತೆ ಸಮಸ್ಯೆ ಇರುವವರೂ ಇದನ್ನು ಸೇವಿಸಿ ಎಂದು ಮತ್ತೊಬ್ಬರು ವ್ಯಂಗ್ಯ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು "ಇದು ಯಾರ ಕೊಳಕು ಕಲ್ಪನೆ” ಎಂದು ಬರೆದಿದ್ದಾರೆ.


"ವಾಸ್ತವವಾಗಿ.. ಈ ಐಸ್ ಕ್ರೀಂನ ಸುವಾಸನೆಯು ನಿಜವಾಗಿಯೂ ಉತ್ತಮವಾಗಿದೆ. ಇದು ಕೇವಲ 2% ಇಸಾಬ್ಗೋಲ್ ಅನ್ನು ಹೊಂದಿದೆ. ಆದ್ದರಿಂದ ಮೂಲಭೂತವಾಗಿ ಇದು ಕೇವಲ ಅದರ ರೋಗನಿರೋಧಕ ಅಂಶದ ಮೇಲಿನ ಮಾರ್ಕೆಟಿಂಗ್ ತಂತ್ರವಾಗಿದೆ” ಎಂದಿದ್ದಾರೆ.

ಇಸಾಬ್ಗೋಲ್ ಎಂದರೇನು?
ಇಸಾಬ್ಗೋಲ್ ಭಾರತೀಯರು ಬಳಸುವ ಸಾಮಾನ್ಯ ಪದಾರ್ಥವಾಗಿದೆ.ಇಸಾಬ್ಗೋಲ್ ಸೈಲಿಯಮ್ ಹೊಟ್ಟು ಮತ್ತು ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಸರಿಯಾದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಮಲಬದ್ಧತೆಯನ್ನು ನಿವಾರಿಸಲು ಇದನ್ನು ಬಳಸಲಾಗುತ್ತದೆ. ಇಸಾಬ್ಗೋಲ್‌ನಲ್ಲಿರುವ ಕರಗದ ಫೈಬರ್ ಮಲವನ್ನು ಮೃದುಗೊಳಿಸಲು ಮತ್ತು ವಿಸ್ತರಿಸಲು ಕಾರಣವಾಗುತ್ತದೆ, ಇದರಿಂದಾಗಿ ಕರುಳಿನ ಚಲನೆ ಸುಧಾರಿಸುತ್ತದೆ.

ಇದನ್ನೂ ಓದಿ: Veg Fish: ಸಸ್ಯಹಾರಿಗಳಿಗಾಗಿ ಈ ರೆಸ್ಟೋರೆಂಟ್​ನಲ್ಲಿ ಸಿಗುತ್ತೆ ವೆಜ್​ ಫಿಶ್​! ಟ್ರೈ ಮಾಡಿ ನೋಡಿ

ಈ ಬೀಜಗಳು ಆರೋಗ್ಯಕರವಾಗಿದ್ದರೂ ಸಹ ಕ್ಯಾಶೂ, ಅಂಜೂರ ಮತ್ತು ಇಸಾಬ್ಗೋಲ್‌ ಗಳ ಸಂಯೋಜನೆಗೆ ಮಾತ್ರ ಭಾರಿ ಲೇವಡಿ ಮಾಡಲಾಗಿದೆ. ನೆಟಿಜನ್‌ಗಳು ಈ ಕಲ್ಪನೆಯನ್ನು ಸಂಪೂರ್ಣವಾಗಿ ಅನಪೇಕ್ಷಿತವೆಂದು ಕಂಡುಕೊಂಡಿದ್ದಾರೆ. “ನಾವು ಈ ಐಸ್ ಕ್ರೀಮ್ ನಲ್ಲಿ ಇಸಾಬ್ಗೋಲ್ ಅನ್ನು ಏಕೆ ಹೊಂದಿದ್ದೇವೆ? ಅಮುಲ್ ಬುದ್ದಿಹೀನ ರುಚಿಗಳನ್ನು (sic) ಪ್ರಾರಂಭಿಸಲು ದಯವಿಟ್ಟು ಹತಾಶರಾಗಬೇಡಿ, ”ಎಂದು ಟ್ವಿಟ್ಟರ್ ಬಳಕೆದಾರರು ಬರೆದಿದ್ದಾರೆ.
Published by:Ashwini Prabhu
First published: