• ಹೋಂ
 • »
 • ನ್ಯೂಸ್
 • »
 • Explained
 • »
 • Explained: ಅಮೃತಪಾಲ್ ಸಿಂಗ್ ಆಪ್ತ ಸಹಾಯಕ ಲವ್‌ಪ್ರೀತ್ ಜೈಲಿನಿಂದ ಬಿಡುಗಡೆ! ಯಾರೀತ? ಏನಿವನ ಹಿನ್ನೆಲೆ?

Explained: ಅಮೃತಪಾಲ್ ಸಿಂಗ್ ಆಪ್ತ ಸಹಾಯಕ ಲವ್‌ಪ್ರೀತ್ ಜೈಲಿನಿಂದ ಬಿಡುಗಡೆ! ಯಾರೀತ? ಏನಿವನ ಹಿನ್ನೆಲೆ?

ಅಮೃತಪಾಲ್ ಸಿಂಗ್ ಆಪ್ತ ಸಹಾಯಕ ಲವ್‌ಪ್ರೀತ್

ಅಮೃತಪಾಲ್ ಸಿಂಗ್ ಆಪ್ತ ಸಹಾಯಕ ಲವ್‌ಪ್ರೀತ್

ನ್ಯಾಯಾಲಯದ ಆದೇಶದಂತೆ ಲವ್‌ಪ್ರೀತ್ ಸಿಂಗ್ ಅಲಿಯಾಸ್ ತೂಫಾನ್‌ನನ್ನು ಬಿಡುಗಡೆ ಮಾಡಲಾಗಿದೆ. ಅಮೃತಪಾಲ್ ಸಿಂಗ್ ಬೆಂಬಲಿಗರು ಕತ್ತಿ ಮತ್ತು ಬಂದೂಕು ಹಿಡಿದು ಬ್ಯಾರಿಕೇಡ್‌ಗಳನ್ನು ಎಳೆದಾಡಿ ಅಜ್ನಾಲಾ ಪೊಲೀಸ್ ಠಾಣೆಗೆ ನುಗ್ಗಿ ಅಪಹರಣ ಪ್ರಕರಣದ ಆರೋಪಿ ಲವ್‌ಪ್ರೀತ್ ಸಿಂಗ್‌ನನ್ನು ಬಿಡುಗಡೆ ಮಾಡಬೇಕೆಂದು ಬೆದರಿಸಿದ್ದಾರೆ.

ಮುಂದೆ ಓದಿ ...
 • Trending Desk
 • 2-MIN READ
 • Last Updated :
 • Share this:

  ಚಂಡೀಗಢ: ಪಂಜಾಬ್‌ನ (Punjab) ಅಮೃತಸರದ ಅಜ್ನಾಲಾ ಪೊಲೀಸ್ ಠಾಣೆಗೆ ಖಲಿಸ್ತಾನ್ ಪರ ಸಂಘಟನೆಯೊಂದು ಮುತ್ತಿಗೆ ಹಾಕಿದ ಹಿನ್ನೆಲೆ ವಾರಿಸ್ ಪಂಜಾಬ್‌ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್ (Waris Punjab De chief Amritpal Singh) ಆಪ್ತ ಸಹಾಯಕ ಲವ್‌ಪ್ರೀತ್ ಸಿಂಗ್‌ನನ್ನು (Lovepreet Singh) ಪಂಜಾಬ್‌ನ ಅಜ್ನಾಲಾ ನ್ಯಾಯಾಲಯವು ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿತ್ತು. ನ್ಯಾಯಾಲಯದ ಆದೇಶದಂತೆ ಲವ್‌ಪ್ರೀತ್ ಸಿಂಗ್ ಅಲಿಯಾಸ್ ತೂಫಾನ್‌ನನ್ನು ಬಿಡುಗಡೆ ಮಾಡಲಾಗಿದೆ. ಅಮೃತಪಾಲ್ ಸಿಂಗ್ ಬೆಂಬಲಿಗರು ಕತ್ತಿ ಮತ್ತು ಬಂದೂಕು ಹಿಡಿದು ಬ್ಯಾರಿಕೇಡ್‌ಗಳನ್ನು ಎಳೆದಾಡಿ ಅಜ್ನಾಲಾ ಪೊಲೀಸ್ ಠಾಣೆಗೆ ನುಗ್ಗಿ ಅಪಹರಣ ಪ್ರಕರಣದ ಆರೋಪಿ ಲವ್‌ಪ್ರೀತ್ ಸಿಂಗ್‌ನನ್ನು ಬಿಡುಗಡೆ ಮಾಡಬೇಕೆಂದು ಬೆದರಿಸಿದ್ದಾರೆ. ಇದಕ್ಕೂ ಮೊದಲು, ದುಬೈನಿಂದ ಹಿಂದಿರುಗಿದ ಅಮೃತಪಾಲ್ ಸಿಂಗ್ ಬೆಂಬಲಿಗ ಲವ್‌ಪ್ರೀತ್ ಸಿಂಗ್ ಬಿಡುಗಡೆಗೆ ಸುಗ್ರೀವಾಜ್ಞೆ ನೀಡಿದ್ದರು. ಹೀಗೆ ಹಲವು ವಿಚಾರಗಳಿಂದ ಸುದ್ದಿಯಲ್ಲಿರುವ ಲವ್‌ಪ್ರೀತ್ ಸಿಂಗ್‌ ಬಗ್ಗೆ ಹಲವರಿಗೆ ತಿಳಿದೇ ಇಲ್ಲ. ಇಷ್ಟೆಲ್ಲಾ ಹವಾ ಮಾಡುತ್ತಿರುವ ಈತ ಯಾರು? ಹಿನ್ನೆಲೆ ಏನು ಎಂಬ ವಿವರ ಇಲ್ಲಿದೆ.


  ಲವ್‌ಪ್ರೀತ್ ಸಿಂಗ್ ಯಾರು?
  ಲವ್‌ಪ್ರೀತ್ ಸಿಂಗ್ ಅಲಿಯಾಸ್‌ ತೂಫಾನ್ ಸಿಂಗ್ ಪಂಜಾಬ್‌ನ ಗುರುದಾಸ್‌ಪುರದವರು. ಅಪಹರಣ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿತ್ತು. ಲವ್‌ಪ್ರೀತ್ ಸಿಂಗ್ ವಾರಿಸ್ ಪಂಜಾಬ್ ದೇ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು ಮತ್ತು ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್ ಅವರ ಆಪ್ತ ಸಹಾಯಕರಾಗಿ ಕಾರ್ಯ ನಿರ್ವಹಹಿಸುತ್ತಿದ್ದನು. ಫೆಬ್ರವರಿ 16 ರಂದು ಅಜ್ನಾಲಾ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಎಫ್‌ಐಆರ್‌ನಲ್ಲಿ ಅಮೃತಪಾಲ್ ಸಿಂಗ್ ಮತ್ತು ಇತರ ಐವರನ್ನು ಹೆಸರಿಸಲಾಗಿದೆ ಮತ್ತು ಅವರ ವಿರುದ್ಧ ಅಪಹರಣ, ಕಳ್ಳತನ, ಹಲ್ಲೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


  ಅಮೃತಪಾಲ್ ಸಿಂಗ್ ಯಾರು?
  ದೀಪ್ ಸಿಧು ಆರಂಭಿಸಿದ ಪ್ರತ್ಯೇಕತಾವಾದಿ ಸಂಘಟನೆ ವಾರಿಸ್ ಪಂಜಾಬ್ ದೇ ಮುಖ್ಯಸ್ಥನೇ ಈ ಅಮೃತಪಾಲ್ ಸಿಂಗ್. ಅಮೃತಪಾಲ್ ಸಿಂಗ್ ಕಳೆದ ವರ್ಷ ದುಬೈನಿಂದ ಹಿಂತಿರುಗಿ ಪಂಜಾಬ್‌ನ ಮೊಗಾ ಜಿಲ್ಲೆಯ ಜರ್ನೈಲ್ ಸಿಂಗ್ ಭಿಂದ್ರವಾಲೆ ಎಂಬ ಹಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರನ್ನು ಇತ್ತೀಚೆಗೆ ವಾರಿಸ್ ಪಂಜಾಬ್ ದೇ ಮುಖ್ಯಸ್ಥರನ್ನಾಗಿ ಮಾಡಲಾಯಿತು. ಅಮೃತ್‌ಪಾಲ್‌ ಸಿಂಗ್‌ ಯುವಜನತೆಗೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಅವರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ.


  ಅಮೃತಪಾಲ್ ಸಿಂಗ್ ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಗತಿಯೇ ಶಾ ಅವರಿಗೆ ಬರಲಿದೆ ಎಂದು ಸಿಂಗ್‌ ಹೇಳಿಕೆ ನೀಡಿದ್ದರು.


  ಇದನ್ನೂ ಓದಿ: Explained: ಏಕರೂಪ ನಾಗರಿಕ ಸಂಹಿತೆ ಎಂದರೇನು? ಮೋದಿ ಸರ್ಕಾರಕ್ಕೆ ಬಿಗ್ ಚಾಲೆಂಜ್ ಆಗಿದ್ದು ಹೇಗೆ?


  30 ಬೆಂಬಲಿಗರ ವಿರುದ್ಧ ಕೇಸ್


  ಅಮೃತಪಾಲ್ ಸಿಂಗ್ ಮತ್ತು ಅವರ 30 ಬೆಂಬಲಿಗರ ವಿರುದ್ಧ ರೂಪನಗರ ಜಿಲ್ಲೆಯ ಚಮ್ಕೌರ್ ಸಾಹಿಬ್ ನಿವಾಸಿ ಅಮೃತ ಪಾಲ್ ಅವರ ಮಾಜಿ ಬೆಂಬಲಿಗ, ಸಿಖ್ ಬೋಧಕ ಬರೀಂದರ್ ಸಿಂಗ್ ಎಂಬವರನ್ನು ಅಪಹರಿಸಿ ಥಳಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನಟ, ಕಾರ್ಯಕರ್ತ ದೀಪ್ ಸಿಧು ಅವರು ಸ್ಥಾಪಿಸಿದ ‘ವಾರಿಸ್ ಪಂಜಾಬ್ ದೇ’ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ ಅಮೃತಪಾಲ್ ಸಿಂಗ್.


  ಫೆಬ್ರವರಿ 23 ರಂದು ಅಜ್ನಾಲಾ ಪೊಲೀಸ್ ಠಾಣೆಯಲ್ಲಿ ನಡೆದಿದ್ದೇನು?
  ಫೆಬ್ರವರಿ 16 ರಂದು ಲವ್‌ಪ್ರೀತ್ ಸಿಂಗ್ ಬಂಧನದ ನಂತರ, ಅಮೃತಪಾಲ್ ಸಿಂಗ್ ಲವ್‌ಪ್ರೀತ್ ಸಿಂಗ್‌ನನ್ನು ಬಿಡುಗಡೆ ಮಾಡುವಂತೆ ಪೊಲೀಸರಿಗೆ ಎಚ್ಚರಿಕೆ ನೀಡಿದನು. ಬಿಡುಗಡೆ ಮಾಡದಿದ್ದರೆ ಫೆಬ್ರವರಿ 23 ರಂದು ಪೊಲೀಸ್‌ ರಾಣೆಗೆ ನುಗ್ಗಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದರು. ಫೆಬ್ರವರಿ 23 ರಂದು ಠಾಣೆಗೆ ನುಗ್ಗಿದ ಅಮೃತ್‌ಪಾಲ್‌ ಸಿಂಗ್‌ ಬೆಂಬಲಿಗರು ಆಯುಧಗಳನ್ನು ಹಿಡಿದು ಠಾಣೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಅಜ್ನಾಲಾ ಪೊಲೀಸ್ ಪೋಸ್ಟ್‌ನಲ್ಲಿ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವಾರು ಪೊಲೀಸರ ಮೇಲೆ ಅಮೃತಪಾಲ್ ಸಿಂಗ್ ಮತ್ತು ಅವರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.


  ಪ್ರತಿಭಟನಾಕಾರರು ಗುರು ಗ್ರಂಥ ಸಾಹಿಬ್‌ನ ಪಾಲ್ಕಿ ಸಾಹಿಬ್ ಅನ್ನು ಬ್ಯಾರಿಕೇಡ್ ಅನ್ನು ಮುರಿಯಲು ಗುರಾಣಿಯಾಗಿ ಬಳಸಿಕೊಂಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಪಂಜಾಬ್ ಡಿಜಿಪಿ ಗೌರವ್ ಯಾದವ್ ಮಾತನಾಡಿ, ಗುರು ಗ್ರಂಥ ಸಾಹಿಬ್ ಅವರ ಪಾಲ್ಕಿ ಸಾಹಿಬ್ ಅವರ ನೆಪದಲ್ಲಿ ಪೊಲೀಸರ ಮೇಲೆ ಹೇಡಿತನದ ರೀತಿಯಲ್ಲಿ ದಾಳಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಒಂದು ವೇಳೆ ಪೊಲೀಸರು ಗುಂಡು ಹಾರಿಸಿದ್ದರೆ ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತಿತ್ತು. ಪವಿತ್ರ ಗುರು ಗ್ರಂಥ ಸಾಹಿಬ್ ಇರುವ ಕಾರಣ ನಾವು ಸಂಯಮದಿಂದ ವರ್ತಿಸಿದ್ದೇವೆ ಎಂದು ಯಾದವ್ ತಿಳಿಸಿದರು.


  ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್‌
  ಫೆಬ್ರವರಿ 16 ರಂದು ದಾಖಲಾದ ಪ್ರಕರಣದಲ್ಲಿ ಅಮೃತಪಾಲ್ ಅವರನ್ನು ಆರೋಪಿ ನಂ. 1 ಎಂದು ಹೆಸರಿಸಲಾಗಿದ್ದರೂ, ಪೊಲೀಸರು ಅವರನ್ನು ಮತ್ತು ಎಫ್‌ಐಆರ್‌ನಲ್ಲಿ ಹೆಸರಿಸದ ಇನ್ನಿಬ್ಬರನ್ನು ಸಹ ಬಂಧಿಸಲಿಲ್ಲ. ಅವರಲ್ಲಿ ಒಬ್ಬನನ್ನು ಪ್ರಾಥಮಿಕ ತನಿಖೆಯ ನಂತರ ಬಿಡುಗಡೆಗೊಳಿಸಿದರೆ, ಎರಡನೆಯವನಾದ ಲವ್‌ಪ್ರೀತ್ ಸಿಂಗ್‌ನನ್ನು ಒಂದು ದಿನದ ಪೊಲೀಸ್ ಕಸ್ಟಡಿ ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.
  ಅಮೃತಪಾಲ್‌ ಸಿಂಗ್‌ ಅವರ ಬೆಂಬಲಿಗರ ವರ್ತನೆಯ ಬೆನ್ನಲ್ಲೇ ಅಜ್ನಾಲಾ ಪೊಲೀಸರು ಎಫ್‌ಐಆರ್ ದಾಖಲಿಸಿ, ವಿಶೇಷ ತನಿಖಾ ತಂಡವನ್ನು ರಚಿಸಲು ಪಂಜಾಬ್ ಪೊಲೀಸರು ನಿರ್ಧರಿಸಿದ್ದಾರೆ. ನಂತರ ಪೊಲೀಸರು ಸಲ್ಲಿಸಿದ ಅರ್ಜಿಯ ಆಧಾರದಲ್ಲಿ ಅಜ್ನಾಲಾ ನ್ಯಾಯಾಲಯ ಬಿಡುಗಡೆ ಆದೇಶ ಹೊರಡಿಸಿತು. ನಂತರ ಲವ್‌ಪ್ರೀತ್ ಸಿಂಗ್ ಅವರನ್ನು ಶುಕ್ರವಾರ ಸಂಜೆ 4 ಗಂಟೆಗೆ ಬಿಡುಗಡೆ ಮಾಡಲಾಯಿತು.


  ಶುಕ್ರವಾರ ಪೊಲೀಸ್ ಠಾಣೆ ಮತ್ತು ಅಜ್ನಾಲಾ ಪಟ್ಟಣದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಲವ್‌ಪ್ರೀತ್‌ ಸಿಂಗ್‌ ಜೈಲಿನಿಂದ ಹೊರಬರುತ್ತಿದ್ದಂತೆ ಬೆಂಬಲಿಗರು ಹೂವಿನ ಹಾರ ಹಾಕಿ ಸ್ವಾಗತಿಸಿದರು.
  ಪಂಜಾಬ್‌ ಸರ್ಕಾರದ ವಿರುದ್ಧ ಆಕ್ರೋಶ


  ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಪಂಜಾಬ್‌ಗೆ ಹೂಡಿಕೆಗಳನ್ನು ಆಹ್ವಾನಿಸುತ್ತಿರುವ ಸಮಯದಲ್ಲಿ ಪಂಜಾಬ್‌ನಲ್ಲಿ ಈ ಘಟನೆ ನಡೆದಿದೆ. ಘಟನೆಯ ಬಳಿಕ ಸರಕಾರ ಯಾಕೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿಲ್ಲ ಎಂಬ ಪ್ರಶ್ನೆ ಎದ್ದಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಸ್ವಯಂಘೋಷಿತ ಸಿಖ್ ಬೋಧಕರು ಗುರು ಗ್ರಂಥ ಸಾಹಿಬ್‌ ಅವರ ಪ್ರತಿಯನ್ನು ಪೊಲೀಸ್ ಠಾಣೆಗೆ ತಂದಿದ್ದರಿಂದ ಘರ್ಷಣೆಯ ಸಮಯದಲ್ಲಿ ಪೊಲೀಸರು ತಮ್ಮನ್ನು ತಾವು ತಡೆಹಿಡಿದಿದ್ದಾರೆ ಎಂದು ಎಎಪಿ ಸಚಿವರು ಸ್ಪಷ್ಟನೆ ನೀಡಿದ್ದಾರೆ.

  Published by:Annappa Achari
  First published: