Explained: ಅಮೆರಿಕದಲ್ಲಿ ಮಕ್ಕಳ ಪೌಷ್ಠಿಕ ಆಹಾರದ ಕೊರತೆ! ಬೇಬಿ ಫಾರ್ಮುಲಾ ತಯಾರಿಕೆಗೆ 'ದೊಡ್ಡಣ್ಣ' ಏನು ಮಾಡ್ತಾನೆ?

ಬೇಬಿ ಫಾರ್ಮುಲಾ ಎಂಬುದು ಹಸುಗೂಸುಗಳಿಗೆ ನೀಡಲಾಗುವ ಒಂದು ಪೌಷ್ಟಿಕ ಆಹಾರ.  12 ತಿಂಗಳುಗಳೊಳಗಿನ ಶಿಷುಗಳಿಗೆಂದೇ ಫೀಡ್ ಮಾಡಲು ವಿನ್ಯಾಸಗೊಳಿಸಲಾದ ಒಂದು ಪೌಷ್ಟಿಕ ಹಾಲು ಉತ್ಪನ್ನದ ಹೆಸರು ಬೇಬಿ ಫಾರ್ಮುಲಾ. ಇದು ಅಮೆರಿಕದಲ್ಲಿ ಮಕ್ಕಳಿಗೆ ನೀಡಲಾಗುವ ಜನಪ್ರೀಯ ಹಾಲು ಉತ್ಪನ್ನ ಎಂದು ಹೇಳಬಹುದು. ಸದ್ಯ ಈ ಬೇಬಿ ಫಾರ್ಮುಲಾದ ಕೊರತೆ ಉಂಟಾಗಿದ್ದು ಶಿಷುಗಳ ಪೋಷಕರಿಗೆ ಆತಂಕದ ವಾತಾವರಣ ಉಂಟು ಮಾಡಿದೆ.

ಅಮೆರಿಕದಲ್ಲಿ ಬೇಬಿ ಫಾರ್ಮುಲಾದ ಕೊರತೆ

ಅಮೆರಿಕದಲ್ಲಿ ಬೇಬಿ ಫಾರ್ಮುಲಾದ ಕೊರತೆ

  • Share this:
ಬೇಬಿ ಫಾರ್ಮುಲಾ (Baby formula) ಎಂಬುದು ಹಸುಗೂಸುಗಳಿಗೆ ನೀಡಲಾಗುವ ಒಂದು ಪೌಷ್ಟಿಕ ಆಹಾರ.  12 ತಿಂಗಳುಗಳೊಳಗಿನ ಶಿಷುಗಳಿಗೆಂದೇ (Baby) ಫೀಡ್ (Feed) ಮಾಡಲು ವಿನ್ಯಾಸಗೊಳಿಸಲಾದ ಒಂದು ಪೌಷ್ಟಿಕ ಹಾಲು ಉತ್ಪನ್ನದ (Nutritional milk product) ಹೆಸರು ಬೇಬಿ ಫಾರ್ಮುಲಾ. ಇದು ಅಮೆರಿಕದಲ್ಲಿ (America) ಮಕ್ಕಳಿಗೆ ನೀಡಲಾಗುವ ಜನಪ್ರಿಯ ಹಾಲು (Milk)  ಉತ್ಪನ್ನ ಎಂದು ಹೇಳಬಹುದು. ಸದ್ಯ ಈ ಬೇಬಿ ಫಾರ್ಮುಲಾದ ಕೊರತೆ ಉಂಟಾಗಿದ್ದು ಶಿಶುಗಳ ಪೋಷಕರಿಗೆ (Parents) ಆತಂಕದ ವಾತಾವರಣ ಉಂಟು ಮಾಡಿದೆ. ಹಾಗಾಗಿ ಈ ಆತಂಕ ನಿವಾರಿಸಲು ಮತ್ತು ಬೇಬಿ ಫಾರ್ಮುಲಾ ಲಭ್ಯವಾಗುವಂತೆ ಮಾಡಲು ಅಮೆರಿಕ ಇದನ್ನು ಹೆಚ್ಚು ಹೆಚ್ಚು ಅಮದು ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ. ಇದಕ್ಕೆ ಸಂಬಂಧಿಸಿದಂತೆ ಆಮದು ಮಾಡಿಕೊಳ್ಳುವ ಬಗ್ಗೆ ಅಧಿಕೃತ ಹೇಳಿಕೆಯನ್ನು ಹೊರಡಿಸಲಾಗಿದೆ.

ಅಮೆರಿಕದಲ್ಲಿ ಈ ಬೇಬಿ ಫಾರ್ಮುಲಾ ಹಾಲಿನ ಪೌಡರ್ ತಯಾರಿಸುವ ದಿಗ್ಗಜ ಅಬ್ಬೋಟ್ ನ್ಯೂಟ್ರಿಷನ್ ಮತ್ತೆ ತನ್ನ ಉತ್ಪನ್ನ ಸಿದ್ಧಪಡಿಸಲು ಅನುಮತಿ ಪಡೆದ ನಂತರ ಈ ಹೇಳಿಕೆ ಅಧಿಕೃತವಾಗಿ ಬಂದಿದೆ. ಅಷ್ಟಕ್ಕೂ ಕಳೆದ ಫೆಬ್ರುವರಿಯಲ್ಲಿ ಅಬ್ಬೋಟ್ ಸಂಸ್ಥೆ ತನ್ನ ಉತ್ಪನ್ನ ಸಿದ್ಧಪಡಿಸುವ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಹೇಳಲಾಗಿತ್ತು. ಆ ಸಂದರ್ಭದಲ್ಲಿ ಸಂಸ್ಥೆಯ ಉತ್ಪನ್ನ ಕಲುಶಿತಗೊಂಡ ಸಮಸ್ಯೆ ಎದುರಿಸಿದಾಗ ಅದು ತನ್ನ ಕಾರ್ಯಾಚರಣೆ ನಿಲ್ಲಿಸುವಂತೆ ಹೇಳಲಾಗಿತ್ತು. ಸದ್ಯ ಈಗ ಮತ್ತೆ ಅದು ಉತ್ಪನ್ನ ತಯಾರಿಕೆ ಪುನರಾರಂಭಿಸುವಂತೆ ಹೇಳಲಾಗಿದೆ ಎನ್ನಲಾಗಿದೆ.

ಅಮೆರಿಕದಲ್ಲಿ ಬೇಬಿ ಫಾರ್ಮುಲಾ ಕೊರತೆ
ಇದಕ್ಕೂ ಮುಂಚೆ ಅಮೆರಿಕದ ನಾಲ್ಕು ಮಕ್ಕಳಲ್ಲಿ ಬ್ಯಾಕ್ಟೀರಿಯಾ ಸೋಂಕು ಪತ್ತೆಯಾದ ಸಂದರ್ಭದಲ್ಲಿ ಅಬ್ಬೋಟ್ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು ಎಂದು ತಿಳಿದುಬಂದಿದೆ. ಫೆಬ್ರುವರಿಯಲ್ಲಿ ಗಂಭೀರ ಸ್ವರೂಪದ ಬ್ಯಾಕ್ಟೀರಿಯಾ ಉಪಸ್ಥಿತಿಯ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಸಿಮಿಲ್ಯಾಕ್ ಶಿಷು ಆಹಾರ ತಯಾರಿಸುತ್ತಿದ್ದ ಅಬ್ಬೋಟ್ ಲ್ಯಾಬೊರೇಟರೀಸ್ ತನ್ನ ಸ್ಟುರ್ಗಿಸ್ ಹಾಗೂ ಮಿಶಿಗನ್ ನಲ್ಲಿರುವ ಉತ್ಪಾದನಾ ಘಟಕಗಳನ್ನು ಮುಚ್ಚಿತ್ತು.

ಅಮೆರಿಕದ ಆರೋಗ್ಯ ಪ್ರಾಧಿಕಾರದಿಂದ ಅಬ್ಬೋಟ್ ಸಮೀಕ್ಷೆ
ಮಾಧ್ಯಮಗಳಲ್ಲಿ ಸೋಂಕಿನ ಬ್ಯಾಕ್ಟೀರಿಯಾ ಉಪಸ್ಥಿತಿಯ ವರದಿಗಳ ನಂತರ ಅಮೆರಿಕದ ಫುಡ್ ಆಂಡ್ ಡ್ರಗ್ ಪ್ರಾಧಿಕಾರವು ಅಬ್ಬೋಟ್ ಉತ್ಪಾದನಾ ಘಟಕಗಳ ಸಮೀಕ್ಷೆ ಮಾಡಿತ್ತು. ಈ ಸಂದರ್ಭದಲ್ಲಿ ಪ್ರಾಧಿಕಾರ ಅಲ್ಲಿ ಕೆಲ ಆಹಾರ ಮಾದರಿಗಳನ್ನು ಸಂಗ್ರಹಿಸಿತ್ತು ಮತ್ತು ಅಲ್ಲಿ ಅದಕ್ಕೆ ಕ್ರೋನೋಬ್ಯಾಕ್ಟರ್ ಸಾಕಾಜಾಕಿ ಪತ್ತೆಯಾಗಿರುವುದು ಕಂಡುಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಅಬ್ಬೋಟ್ ಇದು "ಉತ್ಪನ್ನೇತರ ಸಂಪರ್ಕ ಪ್ರದೇಶಗಳಲ್ಲಿ" ಮಾತ್ರ ಸಿಕ್ಕಿರುವುದಾಗಿ ಹೇಳಿಕೆ ನೀಡಿತ್ತು. ಆದಾಗ್ಯೂ ಮಾದರಿಗಳನ್ನು ಪರೀಕ್ಷಿಸಿದ ತರುವಾಯ ಅದರಲ್ಲಿ ಯಾವುದೇ ಬ್ಯಾಕ್ಟೀರಿಯಾ ಸಿಕ್ಕಿರಲಿಲ್ಲ ಎಂದು ರೈಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

ಇದನ್ನೂ ಓದಿ:  Baby Care: ಮಗು ಒಂದೇ ಸಮನೇ ಅಳುವುದು ಈ ಕಾರಣಕ್ಕಾಗಿ ಆಗಿರಬಹುದು, ಹೀಗೆ ಆರೈಕೆ ಮಾಡಿ

ಏತನ್ಮಧ್ಯೆ ಅಮೆರಿಕದ ವೈದ್ಯಕೀಯ ಸಂಸ್ಥೆ ಬ್ಯಾಕ್ಟೀರಿಯಾ ಪತ್ತೆಯಾಗಿದ್ದ ಮಕ್ಕಳಿಗೆ ಸಂಬಂಧಿಸಿದ ಮಾದರಿಗಳನ್ನು ಪರೀಕ್ಷಿಸಿದಾಗ ಅದು ಅಬ್ಬೋಟ್ ಘಟಕದಲ್ಲಿ ಪತ್ತೆಯಾದ ಸೋಂಕಿನೊಂದಿಕೆ ಹೊಂದಾಣಿಕೆಯಾಗಿರಲಿಲ್ಲ ಎಂದು ತಿಳಿದುಬಂದಿದೆ. ಈ ಮಧ್ಯೆ ಅಬ್ಬೋಟ್ ಉಂಟಾಗಿರುವ ಮಕ್ಕಳ ಆರೋಗ್ಯ ಸಮಸ್ಯೆ ಹಾಗೂ ಸಾವುಗಳಿಗೆ ತಮ್ಮ ಉತ್ಪನ್ನಗಳನ್ನು ದೂಷಿಸಲಾಗದು ಎಂದು ಹೇಳಿತ್ತು. ಅಲ್ಲದೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕದ ಎಫ್‍ಡಿಎ ಅಧಿಕಾರಿಗಳು ಈ ಎಲ್ಲ ಅವಘಡಕ್ಕೆ ಅಬ್ಬೋಟ್ ಕಾರಣ ಎಂದು ಹೇಳುವುದು ಸಮಯೋಚಿತವಾಗಿಲ್ಲ ಎಂದು ಹೇಳಿದ್ದಾರೆ.

ಎಫ್‍ಡಿಎನೊಂದಿಗೆ ಒಪ್ಪಂದದ ನಂತರ ಅಬ್ಬೋಟ್ ಉತ್ಪಾದನೆಯನ್ನು ಪುನರಾರಂಭಿಸುತ್ತದೆ
ಸೋಮವಾರದಂದು ತನ್ನ ಉತ್ಪನ್ನಗಳ ಉತ್ಪಾದನೆಯನ್ನು ಪುನರಾರಂಭಿಸಲು ಅಬ್ಬೋಟ್ ಅಮೆರಿಕದ ಆರೋಗ್ಯ ನಿಯಂತ್ರಕದೊಂದಿಗೆ ಒಪ್ಪಂದವೊಂದಕ್ಕೆ ಬಂದಿರುವುದಾಗಿ ತಿಳಿದುಬಂದಿದೆ. ಒಪ್ಪಂದದ ಪ್ರಕಾರ, ಅಬ್ಬೋಟ್ ಹೊರಗಿನ ತಜ್ಞರನ್ನು ನೇಮಿಸಿಕೊಳ್ಳಬೇಕು, ಅವರು ಕಂಪನಿಯು ಎಫ್ಡಿಎ ಮಾನದಂಡಗಳಿಗೆ ಅನುಗುಣವಾಗಿ ತೆಗೆದುಕೊಳ್ಳುವ ಯಾವುದೇ ಕ್ರಮಗಳು ಅನುಷ್ಠಾನಗೊಂಡಿರುವಂತೆ ಖಚಿತಪಡಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:  Children Food: ಮಕ್ಕಳಿಗೆ ಈ ಸಿಹಿ ತಿನಿಸುಗಳನ್ನು ಕೊಡಬಹುದು! ಇದರ ಬಗ್ಗೆ ತಜ್ಞರು ಹೇಳಿದ್ದೇನು?

ಅಲ್ಲದೆ, ಅಬ್ಬೋಟ್ ಸಹ ತನ್ನ ಸಮರ್ಥ್ಯಾನುಸಾರ ಸರಿಪಡಿಸುವ ಹಲವು ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಕಾನೂನಿನ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಸ್ಟರ್ಗಿಸ್ ಸೌಲಭ್ಯದ ಕಾರ್ಯಾಚರಣೆಗಳನ್ನು ಪರಿಶೀಲಿಸಲು ಸ್ವತಂತ್ರ ತಜ್ಞರನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಒಪ್ಪಂದದಲ್ಲಿ ಹೇಳಲಾಗಿದೆ ಎಂದು AFP ಮಾಧ್ಯಮವು ಅಧಿಕೃತ ಹೇಳಿಕೆಯೊಂದನ್ನು ಉಲ್ಲೇಖಿಸಿ ವರದಿ ಮಾಡಿದೆ. ಒಪ್ಪಂದದಾನುಸಾರ ಅಬ್ಬೋಟ್ ತನ್ನ ಉತ್ಪನ್ನಗಳಲ್ಲಿ ಯಾವುದೇ ಮಾಲಿನ್ಯ ಪತ್ತೆಯಾದರೆ ಕೂಡಲೆ ಅದು ಉತ್ಪಾದನೆಯನ್ನು ನಿಲ್ಲಿಸಿ ಆ ಕುರಿತು ಎಫ್‌ಡಿಎಗೆ ತಕ್ಷಣವೇ ಸೂಚಿಸಬೇಕು ಎಂದು ಹೇಳಲಾಗಿದೆ.

ಕೊರತೆ ಉಂಟಾಗಲು ಕಾರಣ
ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಗ್ರಾಹಕರು ಬೇಬಿ ಫಾರ್ಮುಲಾ ಆಹಾರವನ್ನು ದಾಸ್ತಾನು ಮಾಡಿದ್ದರಿಂದ ಕೊರತೆ ಉಂಟಾಗಲು ಕಾರಣವಾಗಿರಬಹುದು ಎಂದು ನಂಬಲಾಗಿದೆ. ಅಷ್ಟಕ್ಕೂ ಫಾರ್ಮುಲಾ ತಯಾರಕರು ಉತ್ಪಾದನೆಯನ್ನು ಹೆಚ್ಚಿಸಿದರು ಆದರೆ 2021 ರಲ್ಲಿ ಬೇಡಿಕೆ ನಿಧಾನವಾದ ಕಾರಣ ಮತ್ತೆ ಅದನ್ನು ಕಡಿತಗೊಳಿಸಿದರು.

ಕೊರತೆ ಎಲ್ಲಿಯವರೆಗೆ?
ಶ್ವೇತಭವನವು ಸರಬರಾಜುಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದರೂ ಕೊರತೆಯು ಇನ್ನೂ ಎರಡರಿಂದ ನಾಲ್ಕು ತಿಂಗಳವರೆಗೆ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ. ಸೌಲಭ್ಯವನ್ನು ಮರುಪ್ರಾರಂಭಿಸಿದ ನಂತರ ತಯಾರಿಕೆಗೆ ಪೂರಕವಾದ ಸೂತ್ರವನ್ನು ಪಡೆಯಲು ಆರರಿಂದ ಎಂಟು ವಾರಗಳಷ್ಟು ಸಮಯ ಬೇಕಾಗುತ್ತದೆ ಎಂದು ಅಬ್ಬೋಟ್ ಹೇಳಿದೆ. ಯುಎಸ್ ಆಹಾರ ಸುರಕ್ಷತಾ ವಕೀಲ ಬಿಲ್ ಮಾರ್ಲರ್ ರಾಯಿಟರ್ಸ್ಗೆ ಮುಂದಿನ ಎರಡು ವಾರಗಳಲ್ಲಿ ಉತ್ಪನ್ನಗಳು ಮತ್ತೆ ಮಾರುಕಟ್ಟೆಗೆ ಬಂದರೂ ಇನ್ನೂ 30-60 ದಿನಗಳವರೆಗೆ ಕೊರತೆ ಇರಲಿದೆ ಎಂದು ಹೇಳಿದ್ದಾರೆ.
Published by:Ashwini Prabhu
First published: