• Home
  • »
  • News
  • »
  • explained
  • »
  • Explainer: ಟೆಕ್ ಕಂಪನಿಗಳಲ್ಲಿ ಉದ್ಯೋಗ ಕಡಿತದ ಪರ್ವ; ದೈತ್ಯ ಕಂಪನಿಗಳು ಸಿಬ್ಬಂದಿಗಳನ್ನು ವಜಾ ಮಾಡ್ತಿರೋದೇಕೆ? ಹಿಂದಿರುವ ಕಾರಣಗಳೇನು?

Explainer: ಟೆಕ್ ಕಂಪನಿಗಳಲ್ಲಿ ಉದ್ಯೋಗ ಕಡಿತದ ಪರ್ವ; ದೈತ್ಯ ಕಂಪನಿಗಳು ಸಿಬ್ಬಂದಿಗಳನ್ನು ವಜಾ ಮಾಡ್ತಿರೋದೇಕೆ? ಹಿಂದಿರುವ ಕಾರಣಗಳೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2023 ಟೆಕ್ ಕ್ಷೇತ್ರಗಳಿಗೆ ಶುಭ ಸೂಚಕವಾಗಿಲ್ಲವೇ? ಯಾವ ಯಾವ ಕಂಪನಿಗಳು ಎಷ್ಟು ಉದ್ಯೋಗಿಗಳನ್ನ ಕಡಿತಗೊಳಿಸಿವೆ. ಉದ್ಯೋಗಿಗಳನ್ನು ವಜಾಗೊಳಿಸಲು ಕಾರಣವೇನು? ಗೂಗಲ್​ ಸಿಇಒ ಹೇಳಿದ್ದೇನು? ಗೂಗಲ್ ಉದ್ಯೋಗಿಗಳಿಗೆ ನೀಡಿದ ಪರಿಹಾರವೇನು?

  • Trending Desk
  • 5-MIN READ
  • Last Updated :
  • Share this:

ಜಾಗತಿಕ ಆರ್ಥಿಕ ಹಿಂಜರಿತ (Global Recession) ಹಾಗೂ ಆರ್ಥಿಕ ಪ್ರಗತಿ ನಿಧಾನಗತಿಯಲ್ಲಿರುವ ಈ ಸಮಯದಲ್ಲೇ ಟೆಕ್ ಕಂಪನಿಗಳು (Tech Companies) ಉದ್ಯೋಗಿಗಳನ್ನ ವಜಾಗೊಳಿಸುವಂತಹ (Job Cuts) ಕಠಿಣ ಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿವೆ. ಇದೀಗ ಮೈಕ್ರೋಸಾಫ್ಟ್ (Microsoft) ಕೂಡ ಫೇಸ್‌ಬುಕ್ (Facebook), ಟ್ವಿಟರ್ (Twitter), ಗೂಗಲ್‌ (Google) ಹಾದಿಯನ್ನು ಹಿಡಿದಿದ್ದು, ಉದ್ಯೋಗಿಗಳ ಐದು ಪ್ರತಿಶತ ಕಡಿತಗೊಳಿಸುವ ಮೂಲಕ ಸುಮಾರು 11,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಅಮೆಜಾನ್ (Amazon) ಕೂಡ 10,000 ಉದ್ಯೋಗಿಗಳನ್ನು ವಜಾಗೊಳಿಸುವ ಘೋಷಣೆ ಮಾಡಿದೆ. ಹಾಗಿದ್ದರೆ 2023 ಟೆಕ್ ಕ್ಷೇತ್ರಗಳಿಗೆ ಶುಭ ಸೂಚಕವಾಗಿಲ್ಲವೇ? ಎಂಬ ಸಂದೇಹ ಕಾಡುವುದು ಸಹಜವಾಗಿದೆ.


2023 ರಲ್ಲೂ ಮುಂದುವರಿದಿರುವ ಉದ್ಯೋಗಿ ವಜಾಗೊಳಿಸುವಿಕೆ


2022 ರಲ್ಲಿ ಆರಂಭವಾದ ವಜಾಗೊಳಿಸುವಿಕೆ ಪ್ರಕ್ರಿಯೆ 2023ಕ್ಕೆ ಕಾಲಿಟ್ಟರು ಕೊನೆಯಾಗುವ ಲಕ್ಷಣ ಕಾಣುತ್ತಿಲ್ಲ. ಕೋವಿಡ್ ಆರಂಭದಲ್ಲಿ ಪ್ರಾರಂಭವಾದ ಉದ್ಯೋಗಿ ಕಡಿತ/ವಜಾಗೊಳಿಸುವಿಕೆ ಇನ್ನೂ ನಿಂತಿಲ್ಲ.


ಸಾಂಕ್ರಾಮಿಕ ರೋಗ ಉಂಟು ಮಾಡಿದ 2022ರಲ್ಲಿ ಆರ್ಥಿಕ ಅಸ್ಥಿರತೆಯಿಂದ ಟೆಕ್ ಕ್ಷೇತ್ರದಲ್ಲಿ ಸರಿಸುಮಾರು 1,50,000 ಉದ್ಯೋಗಿಗಳನ್ನು ತೆಗೆದುಹಾಕಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆ ವರದಿ ಮಾಡಿದೆ. ಉದ್ಯೋಗಿ ಕಡಿತದಿಂದ ಆರ್ಥಿಕ ಚೇತರಿಕೆ ಉಂಟಾಗುತ್ತದೆ ಎಂದು ಊಹಿಸಿದರೆ ವಿಶ್ವದ ಆರ್ಥಿಕತೆಯೇ ಕುಗ್ಗುಲು ಇದು ಕಾರಣವಾಗಿದೆ ಎಂಬ ಮಾಹಿತಿ ದೊರಕಿದೆ.


ಉದ್ಯೋಗಿಗಳನ್ನು ವಜಾಗೊಳಿಸಿದ ಕಂಪನಿಗಳ ವಿವರ ಹೀಗಿದೆ


ಅಮೆಜಾನ್


ಇ-ಕಾಮರ್ಸ್ ದೈತ್ಯ ಅಮೆಜಾನ್ ಅಮೆರಿಕಾ, ಕೆನಡಾ ಹಾಗೂ ಕೋಸ್ಟರಿಕಾದಲ್ಲಿ ಉದ್ಯೋಗಿ ಕಡಿತವನ್ನು ನಿಶ್ಚಯಿಸಿರುವುದಾಗಿ ತಿಳಿಸಿದ್ದು, 18,000 ಉದ್ಯೋಗಿಗಳನ್ನು ಸಂಸ್ಥೆಯಿಂದ ತೆಗೆದುಹಾಕುವುದಾಗಿ ಘೋಷಿಸಿದೆ. ಸೀಟಲ್ ಹಾಗೂ ಬೆಲ್ವಿಯಲ್ಲಿ ಕಂಪನಿ 2,300 ಉದ್ಯೋಗಿಗಳನ್ನು ವಜಾಗೊಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.


ಮೈಕ್ರೋಸಾಫ್ಟ್


ಮೈಕ್ರೋಸಾಫ್ಟ್ ತನ್ನ 10,000 ಉದ್ಯೋಗಿಗಳನ್ನು ತೆಗೆದು ಹಾಕುವ ಮೂಲಕ ಇತರ ಕಂಪನಿಗಳ ಸಾಲಿಗೆ ಸೇರಿದೆ. ಉದ್ಯೋಗಿಗಳಿಗೆ ಇತರ ಸವಲತ್ತುಗಳು ಹಾಗೂ ಸಂಬಳವನ್ನು ಒದಗಿಸುವ ಮೂಲಕ ವಜಾಗೊಳಿಸುವಿಕೆಗೆ ಟೆಕ್ ದೈತ್ಯ ನಾಂದಿ ಹಾಡಿದೆ.


ಯುಎಸ್‌ನ ಉದ್ಯೋಗಿ ಆರೋಗ್ಯ ವಿಮೆಯನ್ನು ಪಡೆಯುವುದರ ಜೊತೆಗೆ ಆರು ತಿಂಗಳ ಸ್ಟಾಕ್ ವೆಸ್ಟಿಂಗ್ (ಷೇರುಗಳು ಅಥವಾ ಸ್ಟಾಕ್ ಆಯ್ಕೆಗಳನ್ನು ಉದ್ಯೋಗಿಗೆ ವಿತರಿಸುವುದು) ಅನ್ನು ನೀಡುತ್ತದೆ ಎಂದು ತಿಳಿಸಿದೆ.


ಸಾಂದರ್ಭಿಕ ಚಿತ್ರ


ಟ್ವಿಟರ್


ಆರ್ಥಿಕವಾಗಿ ಬಳಲಿರುವ ಟ್ವಿಟರ್ ಕೂಡ ಉದ್ಯೋಗದಲ್ಲಿ ಸಮತೋಲನ ಕಾಪಾಡಲು ಉದ್ಯೋಗಿ ವಜಾಗೊಳಿಸುವಂತಹ ಕ್ರಮಕ್ಕೆ ಮುಂದಾಗಿತ್ತು.


ನವೆಂಬರ್ ಆರಂಭದಲ್ಲೇ 3,700 ಉದ್ಯೋಗಿಗಳನ್ನು ಜಾಲತಾಣ ವಜಾಗೊಳಿಸಿದೆ. ಎಲೋನ್ ಮಸ್ಕ್ ಟ್ವಿಟರ್‌ನ ಒಡೆತನವನ್ನು ಸ್ವಾಧೀನಪಡಿಸಿಕೊಂಡ ನಂತರ ದರ ಕಡಿತದ ಹೆಸರಿನಲ್ಲಿ ಉದ್ಯೋಗಿಗಳನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಆರಂಭಿಸಿದರು.


ಇನ್ನು ಸಂಸ್ಥೆಯು ಟ್ರಸ್ಟ್ ಹಾಗೂ ಸೇಫ್ಟಿ ಟೀಮ್‌ನಲ್ಲೂ ಹೆಚ್ಚಿನ ಸಿಬ್ಬಂದಿಗಳನ್ನು ವಜಾಗೊಳಿಸಿರುವುದು ವರದಿಯಾಗಿದೆ.


ಮೆಟಾ


ಫೇಸ್‌ಬುಕ್‌ನ ಪೇರೆಂಟ್ ಕಂಪನಿ ಮೆಟಾ ಕಳೆದ ವರ್ಷ ನವೆಂಬರ್‌ನಲ್ಲಿ 11,000 ಉದ್ಯೋಗಿಗಳನ್ನು ತೆಗೆದುಹಾಕಿದೆ. ಇದು ಅತ್ಯಂತ ದೊಡ್ಡ ವಜಾಗೊಳಿಸುವಿಕೆಯಾಗಿತ್ತು. ತನ್ನ ಸಿಬ್ಬಂದಿ ಪ್ರಮಾಣದಲ್ಲಿ 13% ಕಡಿತವನ್ನು ಫೇಸ್‌ಬುಕ್ ಮಾಡಿತ್ತು.


ಮೆಟಾ ತನ್ನ 18 ವರ್ಷದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ವಜಾಗೊಳಿಸುವಿಕೆ ಪ್ರಕ್ರಿಯೆಯನ್ನು ಕೈಗೊಂಡಿತ್ತು. ಸಿಇಒ ಮಾರ್ಕ್ ಜುಕರ್‌ಬರ್ಗ್ ಪ್ರತಿಯೊಬ್ಬರಿಗೂ ಇದು ಅತ್ಯಂತ ಕಠಿಣ ಸಮಯವಾಗಿದೆ ಎಂದು ಹೇಳಿದ್ದರು ಹಾಗೂ ವಜಾಗೊಳಿಸುವ ಪರಿಣಾಮಕ್ಕೊಳಗಾದವರಲ್ಲಿ ಕ್ಷಮೆ ಯಾಚಿಸಿದ್ದರು.


ಆ್ಯಪಲ್


ಐಫೋನ್ ತಯಾರಕ ಸಂಸ್ಥೆ ರೀಸರ್ಚ್ ಹಾಗೂ ಡೆವಲಪ್‌ಮೆಂಟ್ ವಿಭಾಗದಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ. ಹೊಸ ವರ್ಷಕ್ಕೆ ಬಜೆಟ್ ಅನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹೊಸ ನೇಮಕಾತಿಗಳಿಲ್ಲ ಎಂದು ಘೋಷಿಸಿದೆ.


ಭವಿಷ್ಯದ ಉತ್ಪನ್ನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತಂಡಗಳ ಮೇಲೆ ಉದ್ಯೋಗಿ ಕಡಿತ ಪರಿಣಾಮ ಬೀರುವುದಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದ್ದು ಕೆಲವೊಂದು ಕಾರ್ಪೋರೇಟ್ ವಲಯಗಳು ಹಾಗೂ ಹಾರ್ಡ್‌ವೇರ್, ಸಾಫ್ಟ್‌ವೇರ್ ಹುದ್ದೆಗಳ ಮೇಲೆ ಪರಿಣಾಮಕಾರಿಯಾಗಬಹುದು ಎಂದು ತಿಳಿಸಿದೆ.


ಇಂಟೆಲ್


ಇಂಟೆಲ್ ಕೂಡ ಉದ್ಯೋಗಿಗಳನ್ನು ತೆಗೆದುಹಾಕುವ ಪ್ರಕ್ರಿಯೆಯಲ್ಲಿ ತೊಡಗಿದ್ದು ಹೊಸ ಸಂಸ್ಥೆಗಳ ಹೂಡಿಕೆಯನ್ನು ಕಡಿತಗೊಳಿಸಿದೆ ಎಂದು ವರದಿಯಾಗಿದೆ.


2025 ರ ಒಳಗೆ ಚಿಪ್‌ತಯಾರಕ ಸಂಸ್ಥೆ $10 ಬಿಲಿಯನ್ ಉಳಿತಾಯ ಮಾಡುವ ಗುರಿಯನ್ನು ಹೊಂದಿದ್ದು, ಹೂಡಿಕೆದಾರರೊಂದಿಗೆ ಒಳ್ಳೆಯ ಬಾಂಧವ್ಯವವನ್ನು ಹೊಂದುವ ಇರಾದೆ ವ್ಯಕ್ತಪಡಿಸಿದೆ. ಸಂಸ್ಥೆ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುವ ನಿಟ್ಟಿನಲ್ಲಿದೆ ಎಂದು ವರದಿಯಾಗಿದೆ.


ಲಿಫ್ಟ್


ಲಿಫ್ಟ್ ಇಂಕ್‌ನ ವಾಹನ ಸೇವೆ ಬ್ಯುಸಿನೆಸ್ ಉದ್ಯಮದಲ್ಲಿ ಕಂಡಿರುವ ಸೋಲನ್ನು ನಿಭಾಯಿಸಲು ತನ್ನ ಉದ್ಯೋಗಿಗಳಲ್ಲಿ 13% ವಜಾಗೊಳಿಸುವಿಕೆಗೆ ಮುಂದಾಗಿದ್ದು, 683 ಉದ್ಯೋಗಿಗಳನ್ನು ತೆಗೆದುಹಾಕಲಿದೆ. ಆರ್ಥಿಕತೆ ಈ ಮೊದಲಿನಂತಿಲ್ಲ ಎಂದು ತಿಳಿಸಿರುವ ಸಹಸ್ಥಾಪಕರಾದ ಜಾನ್ ಜಿಮ್ಮರ್ ಕಂಪನಿ ನಷ್ಟದಲ್ಲಿದೆ ಎಂದು ಬಹಿರಂಗಪಡಿಸಿದ್ದಾರೆ.
ಕ್ವಾಲ್‌ಕಾಮ್


ಸಂಸ್ಥೆಯ ಚಿಪ್‌ಗಳನ್ನು ಬಳಸುತ್ತಿದ್ದ ಸ್ಮಾರ್ಟ್‌ಫೋನ್‌ಗಳಲ್ಲಿ ಕುಸಿತ ಕಂಡುಬಂದಿದ್ದು, ಸಂಸ್ಥೆ ನಷ್ಟದಲ್ಲಿದೆ ಎಂದು ತಿಳಿಸಿದೆ. ಈ ವರ್ಷ ಸ್ಮಾರ್ಟ್‌ಫೋನ್ ಶಿಪ್‌ಮೆಂಟ್ ಕುಸಿತ ಕಾಣಬಹುದು ಎಂದು ವರದಿ ಮಾಡಿದೆ.


ಅಪ್‌ಸ್ಟಾರ್ಟ್


ಆನ್‌ಲೈನ್ ಲೋನ್ ತಾಣವಾದ ಅಪ್‌ಸ್ಟಾರ್ಟ್ 140 ಉದ್ಯೋಗಿಗಳನ್ನು ತೆಗೆದುಹಾಕಿದೆ. ಲೋನ್‌ಗಳ ಮಟ್ಟದಲ್ಲಿ ಕುಸಿತ ಹಾಗೂ ಆರ್ಥಿಕ ನಷ್ಟದಿಂದ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ ಎಂದು ಹೇಳಿಕೆ ನೀಡಿದೆ.


ಸಂಸ್ಥೆಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಕ್ಕೆ ಕಾರಣಗಳೇನು?


ಆರ್ಥಿಕ ಹಿಂಜರಿತದ ಭಯ


ಜಾಗತಿಕ ಆರ್ಥಿಕ ಪ್ರಗತಿ ಮಂದಗತಿಯಲ್ಲಿ ಸಾಗುತ್ತಿದ್ದು ಐಟಿ ಕ್ಷೇತ್ರಗಳು ಆರ್ಥಿಕ ಹಿಂಜರಿತದ ಭೀತಿಯನ್ನೆದುರಿಸುತ್ತಿವೆ. ಹೆಚ್ಚಿನ ಆರ್ಥಿಕ ಪರಿಣಿತರ ಪ್ರಕಾರ ಜಾಗತಿಕ ಆರ್ಥಿಕ ಕುಸಿತ 2023 ರಲ್ಲಿ ತಲೆದೋರಲಿದೆ ಎಂದಾಗಿದೆ.


ವಿಶ್ವ ಬ್ಯಾಂಕ್ ಹಾಗೂ ಅಂತರಾಷ್ಟ್ರೀಯ ವಿತ್ತೀಯ ನಿಧಿಯು ಆರ್ಥಿಕ ಮಂದಗತಿಯನ್ನು ಎದುರಿಸಲು ಸನ್ನದ್ಧರಾಗಿ ಎಂಬ ಎಚ್ಚರಿಕೆಯನ್ನು ನೀಡಿದೆ.


ದುರ್ಬಲ ಗ್ರಾಹಕ ಬೇಡಿಕೆ


ಹೆಚ್ಚಿನ ಹಣದುಬ್ಬರ ಮತ್ತು ದುರ್ಬಲ ಬೇಡಿಕೆಯ ಸಂಕಷ್ಟವನ್ನು ವಿಶ್ವವು 2022 ರ ಆರಂಭದಿಂದಲೇ ಎದುರಿಸುತ್ತಿದೆ.


ಯುಎಸ್, ಯುಕೆ, ಭಾರತ, ಜಪಾನ್, ಯುರೋಪ್ ಮೊದಲಾದ ವಿಶ್ವದ ಪ್ರತಿಯೊಂದು ಪ್ರಮುಖ ಆರ್ಥಿಕ ತಾಣಗಳು ಗ್ರಾಹಕ ಬೆಲೆ ಏರಿಕೆಯ ಸಮಸ್ಯೆಯೊಂದಿಗೆ ಹೆಣಗಾಡುತ್ತಿವೆ.


ಕೋವಿಡ್ ಸಮಸ್ಯೆಗಳು, ಲಾಕ್‌ಡೌನ್ ಸಮಸ್ಯೆಗಳಿಂದ ಈ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಪರಿಸ್ಥಿತಿಗಳು ನಿಧಾನವಾಗಿ ಹದಕ್ಕೆ ಬರುತ್ತಿದೆ ಎಂಬ ಸಂದರ್ಭದಲ್ಲೇ ರಷ್ಯಾ ಹಾಗೂ ಉಕ್ರೇನ್ ಸಮರ ತಾರಕಕ್ಕೇರಿತು .


ಕ್ಷಿಪ್ರ ದರ ಏರಿಕೆ


ಗ್ರಾಹಕ ಬೆಲೆ ಏರಿಕೆಗಳ ಕಾರಣದಿಂದ ಕೇಂದ್ರ ಬ್ಯಾಂಕ್‌ಗಳು ವಿತ್ತೀಯ ನೀತಿಗಳನ್ನು ಇನ್ನಷ್ಟು ಬಿಗಿಗೊಳಿಸಿವೆ ಅಂತೆಯೇ ಬಡ್ಡಿದರಗಳಲ್ಲಿ ಏರಿಕೆಯನ್ನು ಮಾಡಿವೆ. ಯುಎಸ್ ಫೆಡರಲ್ ರಿಸರ್ವ್ ಶೂನ್ಯ ಮಟ್ಟದಿಂದ ದರಗಳ ಏರಿಕೆಯನ್ನು ಆರಂಭಿಸಿದ್ದು, ಈಗ ಕೂಡ ಏರಿಕೆಯ ಮಟ್ಟವನ್ನು ಹೆಚ್ಚಿಸುತ್ತಿದೆ.


ಹೂಡಿಕೆದಾರರಿಂದ ಒತ್ತಡ


ರಾಯಿಟರ್ಸ್ ಮಾಡಿರುವ ವರದಿಯ ಅನ್ವಯ ಗೂಗಲ್ ಉದ್ಯೋಗಿ ಕಡಿತದಂತಹ ಕಠಿಣ ನಿರ್ಧಾರಕ್ಕೆ ಕೈಗೊಂಡಿರುವ ಹಿನ್ನಲೆಯಲ್ಲಿ ಹೂಡಿಕೆದಾರರ ಪಾಲಿದೆ ಎಂಬುದು ತಿಳಿದು ಬಂದಿದೆ.


ವೆಚ್ಚವನ್ನು ಸರಿದೂಗಿಸಲು ಸೂಕ್ತ ನಿರ್ಣಯ ತೆಗೆದುಕೊಳ್ಳುವಂತೆ ಹೂಡಿಕೆದಾರರು ಸಂಸ್ಥೆಗಳಿಗೆ ತಾಕೀತು ಮಾಡಿದ್ದಾರೆ ಎಂಬುದಾಗಿ ರಾಯಿಟರ್ಸ್ ವರದಿಮಾಡಿದೆ.


ವೆಚ್ಚ ಕಡಿತ


ಗೂಗಲ್ ಇತ್ತೀಚಿನ ತಿಂಗಳುಗಳಲ್ಲಿ ವೆಚ್ಚ ಕಡಿತ ಸಂಬಂಧಿತವಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದೆ ಅದರಲ್ಲಿ ಪಿಕ್ಸೆಲ್‌ಬಾಕ್ಸ್ ಲ್ಯಾಪ್‌ಟಾಪ್‌ಗಳನ್ನು ರದ್ದುಗೊಳಿಸಿರುವುದು, ಕ್ಲೌಡ್ ಗೇಮಿಂಗ್ ಸೇವೆಯಾದ ಸ್ಟಡಿಯಾವನ್ನು ಶಾಶ್ವತವಾಗಿ ಮುಚ್ಚಿರುವುದು ಪ್ರಮುಖವಾಗಿದೆ.


ಕಳೆದ ವರ್ಷ ಜನವರಿ ಆರಂಭದಲ್ಲೇ ಆಲ್ಫಾಬೆಟ್‌ನ ಬಯೋಟೆಕ ಯುನಿಟ್ ವರ್ಲಿಯಾ ತನ್ನ 15% ಸಿಬ್ಬಂದಿ ಕಡಿತವನ್ನು ಘೋಷಿಸಿತು.


ಗೂಗಲ್​ ಸಿಇಒ ಸುಂದರ್​ ಪಿಚೈ


ಇ-ಮೇಲ್‌ಗಳಲ್ಲಿ ಸುಂದರ್ ಪಿಚ್ಚೈ ಹೇಳಿರುವ ಮಾತುಗಳೇನು


ಸಿಬ್ಬಂದಿ ಕಡಿತದ ಕ್ರಮವನ್ನು ಪಿಚ್ಚೈ ಇ-ಮೇಲ್‌ಗಳ ಮೂಲಕ ದೃಢೀಕರಿಸಿದ್ದರು. ಕಂಪನಿಯು ಕಳೆದ ಎರಡು ವರ್ಷಗಳಿಂದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ ಎಂದು ಪಿಚ್ಚೈ ಸಿಬ್ಬಂದಿಗಳಿಗೆ ಇ-ಮೇಲ್​ನಲ್ಲಿ ತಿಳಿಸಿದ್ದಾರೆ.


ಸಂಸ್ಥೆಯ ಅಭಿವೃದ್ಧಿಗೆ ಹೆಚ್ಚಿನ ಸಿಬ್ಬಂದಿಗಳು ಕಾರಣರಾಗಿದ್ದರೂ ಇದೀಗ ಸಿಬ್ಬಂದಿಗಳ ಸಂಖ್ಯೆ ಮಿತಿಮೀರಿದೆ ಎಂಬ ಸೂಚನೆಯನ್ನು ನೀಡಿದ್ದರು. ಸಂಸ್ಥೆಯಲ್ಲಿರುವ ನಿರ್ವಾಹಕರಿಗೆ ತಂಡದಲ್ಲಿ ಎಷ್ಟು ಸದಸ್ಯರು ಬೇಕು ಎಂಬುದನ್ನು ನಿರ್ಧರಿಸುವ ಹಕ್ಕನ್ನು ನೀಡಿದರು. ವಜಾಗೊಳಿಸುವ ನೀತಿಗಳಿಗೆ ಕ್ಷಮೆಯಾಚಿಸಿದ್ದರು.


ಗೂಗಲ್ ಸಿಬ್ಬಂದಿಗೆ ನೀಡಿದ ಪರಿಹಾರವೇನು?


ಗೂಗಲ್‌ನಿಂದ ವಜಾಗೊಳಿಸುವಿಕೆಗೆ ಒಳಗಾದ ಯುಎಸ್ ಸಿಬ್ಬಂದಿಗಳು 16 ವಾರಗಳ ಸಂಬಳ ಪರಿಹಾರ ಹಾಗೂ ಆರೋಗ್ಯ ವಿಮೆಗೆ ಅರ್ಹರಾಗಿದ್ದಾರೆ ಎಂದು ಸಂಸ್ಥೆ ತಿಳಿಸಿತ್ತು ಅಂತೆಯೇ ಬೇರೆ ಬೇರೆ ದೇಶಗಳಲ್ಲಿ ಆ ದೇಶದ ಸ್ಥಳೀಯ ಕಾನೂನು ಹಾಗೂ ನೀತಿಗಳಿಗೆ ಅನುಸಾರವಾಗಿ ಉದ್ಯೋಗಿಗಳು ಪರಿಹಾರವನ್ನು ಪಡೆಯುತ್ತಾರೆ ಎಂದು ಘೋಷಿಸಿತ್ತು.


ಇತರ ವಲಯಗಳಿಗೂ ತಟ್ಟಿದ ಬಿಸಿ


ಐಟಿ ವಲಯಗಳಿಗೆ ಮಾತ್ರವಲ್ಲದೆ ಸಿಬ್ಬಂದಿ ಕಡಿತವು ಆರ್ಥಿಕ ರಿಟೇಲ್, ಇಂಧನ, ಆರೋಗ್ಯಸಂಸ್ಥೆಗಳಿಗೆ ತಟ್ಟಿದೆ. ಜಾನ್ಸನ್ ಏಂಡ್ ಜಾನ್ಸನ್ ಸಂಸ್ಥೆ ಹಣದುಬ್ಬರ ಒತ್ತಡ, ಇನ್ನಿತರ ಕಾರಣಗಳಿಂದ ಸಿಬ್ಬಂದಿಗಳನ್ನು ವಜಾಗೊಳಿಸುತ್ತಿದೆ ಎಂದು ಘೋಷಿಸಿತ್ತು.


ಕ್ರಿಪ್ಟೋಕರೆನ್ಸ್ ಎಕ್ಸ್‌ಚೇಂಜ್ 950 ಹುದ್ದೆಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ವೇಗನ್ ಮೀಟ್ ತಯಾರಕ ಸಂಸ್ಥೆ ಬ್ಲು ಆಪ್ರನ್ ಹೋಲ್ಡಿಂಗ್ಸ್ 200 ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರವನ್ನು ಘೋಷಿಸಿತು. ಇದರಿಂದ $39 ಮಿಲಿಯನ್ ಉಳಿಸುವ ನಿರೀಕ್ಷೆಯನ್ನು ಹೊಂದಿದೆ ಎಂದು ತಿಳಿಸಿದೆ.

Published by:Sumanth SN
First published: