• Home
 • »
 • News
 • »
 • explained
 • »
 • Thamizhagam Row: ಏನಿದು ತಮಿಳುನಾಡು, ತಮಿಳಗಮ್​ ವಿವಾದ? ರಾಜ್ಯಪಾಲ ಆರ್.ಎನ್ ರವಿ ಕೊಟ್ಟ ಸ್ಪಷ್ಟನೆ ಇದು

Thamizhagam Row: ಏನಿದು ತಮಿಳುನಾಡು, ತಮಿಳಗಮ್​ ವಿವಾದ? ರಾಜ್ಯಪಾಲ ಆರ್.ಎನ್ ರವಿ ಕೊಟ್ಟ ಸ್ಪಷ್ಟನೆ ಇದು

ತಮಿಳುನಾಡು ರಾಜ್ಯಪಾಲ ವಿರುದ್ಧ ಆಡಳಿತಾರೂಢ ಸರ್ಕಾರದ ಶಾಸಕರು ಘೋಷಣೆ

ತಮಿಳುನಾಡು ರಾಜ್ಯಪಾಲ ವಿರುದ್ಧ ಆಡಳಿತಾರೂಢ ಸರ್ಕಾರದ ಶಾಸಕರು ಘೋಷಣೆ

ಈ ವಿವಾದ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಹಾಗೂ ಪ್ರಸ್ತುತ ರಾಜ್ಯಪಾಲರಾದ ಆರ್.ಎನ್ ರವಿ ಅವರ ಮಧ್ಯದ ಜಟಾಪಟಿಗೆ ಕಾರಣವಾಗಿದೆ. ಅಲ್ಲದೆ ದ್ರಾವಿಡ ರಾಜಕೀಯ ಹಾಗೂ ತಮಿಳುನಾಡು ಎಂಬ ಹೆಸರಿನ ಬಗ್ಗೆ ಚರ್ಚೆಗೆ ಕಾರಣವಾಗಿದೆ.

 • Trending Desk
 • Last Updated :
 • New Delhi, India
 • Share this:

  ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ತಮಿಳುನಾಡಿನ ರಾಜ್ಯಪಾಲರಾದ ಆರ್.ಎನ್. ರವಿ ಅವರು ಮಾತನಾಡುತ್ತಾ ತಮ್ಮ ಅಭಿಪ್ರಾಯವೊಂದನ್ನು ಹಂಚಿಕೊಂಡಿದ್ದರು. ಆ ಮೂಲಕ ಅವರ ಮಾತು ಭಾರೀ ವಿವಾದವನ್ನು ಉಂಟಾಗಿತ್ತು. ರಾಜ್ಯಪಾಲರ ಹೇಳಿಕೆ ತಮಿಳುನಾಡಿನಲ್ಲಿ ಹೊಸ ವಿವಾದವೊಂದು ಪ್ರಾರಂಭವಾಗಿಲು ಕಾರಣವಾಗಿತ್ತು. ಅಲ್ಲದೇ ಇದು ತಮಿಳುನಾಡೋ ಅಥವಾ ತಮಿಳಗಮ್ ನೋ ಎಂದು ಚರ್ಚೆಯೂ ರಾಜ್ಯದಲ್ಲಿ ರಾಜಕೀಯದಲ್ಲಿ ಹೊಸ ಸಮರಕ್ಕೆ ಕಾರಣವಾಗಿತ್ತು. ಸದ್ಯ ಈ ಬಗ್ಗೆ ಸ್ಪಷ್ಟನ ನೀಡಿರುವ ರಾಜ್ಯಪಾಲ ರವಿ ಅವರು, ನಾನು ತಮಿಳುನಾಡು ಎಂಬ ಹೆಸರನ್ನು ಬದಲಾವಣೆ ಮಾಡಲು ಸೂಚಿಸಿಲ್ಲ, ನನ್ನಭಾಷಣವನ್ನು ಅರ್ಥ ಮಾಡಿಕೊಳ್ಳದೆ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಿದ್ದಾರೆ.


  ವಾಸ್ತವವಾಗಿ ಈ ವಿವಾದ ಈಗ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಹಾಗೂ ಪ್ರಸ್ತುತ ರಾಜ್ಯಪಾಲರಾದ ಆರ್.ಎನ್ ರವಿ ಅವರ ಮಧ್ಯದ ಜಟಾಪಟಿಗೆ ಕಾರಣವಾಗಿದೆ. ಮತ್ತೊಮ್ಮೆ ಅಲ್ಲಿರುವ ದ್ರಾವಿಡ ರಾಜಕೀಯ ಹಾಗೂ "ತಮಿಳು ನಾಡು" ಎಂಬ ಹೆಸರಿನ ಮಹತ್ವದ ಬಗ್ಗೆ ಕಿಚ್ಚು ಹಚ್ಚಿದಂತಾಗಿದೆ.


  ಜನವರಿ 4 ರಂದು ಚೆನ್ನೈನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯಪಾಲರ ಕೆಲವು ಟಿಪ್ಪಣಿಗಳು ವಿವಾದ ಭುಗಿಲೆಳಲು ಕಾರಣವಾಗಿತ್ತು. ರಾಜ್ಯಪಾಲರು ತಮ್ಮ ಭಾಷಣದಲ್ಲಿ, "ತಮಿಳುನಾಡಿನಲ್ಲಿ ವಿಭಿನ್ನವಾದ ನಿಲುವೊಂದು ಸೃಷ್ಟಿಸಲ್ಪಟ್ಟಿದೆ. ಭಾರತದಾದ್ಯಂತ ಅನ್ವಯವಾಗುವ ಎಲ್ಲವನ್ನೂ ಇಲ್ಲಿ ತಿರಸ್ಕರಿಸಲಾಗುತ್ತದೆ. ಇದೊಂದು ರೂಢಿಯಾಗಿ ನಡೆದುಕೊಂಡು ಬಂದಿದೆ. ಇಲ್ಲಿ ಸಾಕಷ್ಟು ತಪ್ಪು ಹಾಗೂ ಕಾಲ್ಪನಿಕ ಧೋರಣೆಗಳಿವೆ, ಆದರೆ ಸತ್ಯ ಎಂಬುದು ಯಾವಾಗಲೂ ಸತ್ಯವೇ ಆಗಿದೆ" ಎನ್ನುತ್ತ ತಮಿಳುನಾಡು ಪದ ಬಳಕೆಯ ಕುರಿತಂತೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾ "ತಮಿಳಗಮ್" ಸಮರ್ಪಕವಾದ ಪದವಾಗಿದೆ" ಎಂದು ಹೇಳಿದ್ದರು.


  ಇದನ್ನೂ ಓದಿ: Janhvi Kapoor: ತಮಿಳಿನಲ್ಲಿ ಪೊಂಗಲ್ ವಿಶ್ ಮಾಡಿದ ಜಾನ್ವಿ! ಕಾಲಿವುಡ್ ಫ್ಯಾನ್ಸ್ ಖುಷ್


  ಇದರ ಬೆನ್ನಲ್ಲೇ ರಾಜ್ಯಪಾಲರ ಹೇಳಿಕೆಯನ್ನು ಖಂಡಿಸಿದ ಆಡಳಿತಾರೂಢ ಡಿಎಂಕೆ ಪಕ್ಷ ರಾಜ್ಯಪಾಲರ ವಿರುದ್ಧ ಕಿಡಿಕಾರಿತ್ತು. ಈ ರೀತಿಯಾದ ಹೇಳಿಕೆಗಳು ಅಪಾಯಕಾರಿಯಾಗಿದ್ದು, ಇದು ರಾಜ್ಯದ ವಿರೋಧ ಪಕ್ಷವಾದ ಬಿಜೆಪಿ ಹಾಗೂ ಅದರ ಮಾರ್ಗದರ್ಶಕವಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರ ಅಜೆಂಡಾವನ್ನು ಮುನ್ನುಗಿಸುವ ಕ್ರಮವಾಗಿದೆ ಎಂದು ಜರಿದಿತ್ತು.


  ರಾಜ್ಯಪಾಲರು,  ಆಡಳಿತಾರೂಢ ಡಿಎಂಕೆ ಹಾಗೂ ಅದರ ಮೈತ್ರಿ ಪಕ್ಷಗಳು ರಾಜ್ಯದಲ್ಲಿ ಕೇವಲ ತಮಿಳು ನೀತಿಯ ರಾಜಕೀಯದಲ್ಲಿ ತೊಡಗಿದ್ದಾರೆಂದು ಹೇಳುವ ಮೂಲಕ ತಮ್ಮನ್ನು ತಾವು ಅಡಕತ್ತರಿಯಲ್ಲಿ ಸಿಲುಕಿಸಿಕೊಂಡಿದ್ದಾರೆನ್ನಬಹುದಾಗಿದೆ. ಈ ಒಟ್ಟಾರೆ ವಿವಾದ ಹಾಗೂ ಅದರ ಹಿಂದಿರುವ ಕೆಲ ಅಂಶಗಳು ಈ ಕೆಳಗಿನಂತಿವೆ.


  1. ಮೊದಲನೆಯದಾಗಿ ಇಲ್ಲಿ "ನಾಡು" ಎಂಬ ಶಬ್ದವಿರುವುದು ವಿವಾದ ಮೂಲ ಬಿಂದುವಾಗಿದೆ. ತಮಿಳಿನಲ್ಲಿ ನಾಡು ಎಂದರೆ ದೇಶ ಎಂದಾಗುತ್ತದೆ. ಅಂದರೆ ತಮಿಳುನಾಡು ಎಂದಾಗ ಇದು ತಮಿಳಿಗರ ದೇಶ ಎಂಬರ್ಥ ಬರುತ್ತದೆ. ಅದೇ ತಮಿಳಗಮ್ ಎಂದರೆ ತಮಿಳಿಗರ ಮನೆ ಎಂಬರ್ಥ ಬರುತ್ತದೆ.


  2. ಇನ್ನು, ರಾಜ್ಯಪಾಲರು ತಮ್ಮ ಭಾಷಣದ ಮೂಲಕ ತಮಿಳಗಮ್ ಪದ ಬಳಸುವುದು ಹೆಚ್ಚು ಪ್ರಸ್ತುತಾರ್ಹ ಹಾಗೂ ಸೂಕ್ತ ಎಂಬ ಸಲಹೆಯನ್ನಷ್ಟೇ ನೀಡಿದ್ದರು. ಅವರ ಪ್ರಕಾರ, ಹಲವಾರು ವರ್ಷಗಳಿಂದ ಇಲ್ಲಿ ತಮಿಳುನಾಡು ಭಾರತದ ಭಾಗವಲ್ಲ ಎಂಬಂತಹ ಧೋರಣೆಗೆ ಸಾಕಷ್ಟು ಒತ್ತು ನೀಡುವಂತಹ ಕೆಲಸಗಳನ್ನೇ ಮಾಡಲಾಗುತ್ತಿದೆ.


  3. ರಾಜ್ಯಪಾಲರ ವಾದದ ಪ್ರಕಾರ ನಾಡು ಎಂಬ ಶಬ್ದದ ಉಪಸ್ಥಿತಿ ರಾಜ್ಯವು ಭಾರತದ ಭಾಗವಾಗಿದ್ದರೂ ಇದೊಂದು ಅಟೋನೋಮಸ್ ಪ್ರದೇಶ ಎಂಬ ಪರಿಕಲ್ಪನೆಗೆ ಹೆಚ್ಚಿನ ಇಂಬು ನೀಡುತ್ತದೆ ಎಂದಾಗಿದೆ.


  4. ಇದನ್ನು ಡಿಎಂಕೆ ಪಕ್ಷವು ಸರಾಸಗಟಾಗಿ ತಿರಸ್ಕರಿಸಿದೆ ಹಾಗೂ "ತಮಿಳುನಾಡು ಎಂಬುದು ನಮ್ಮ ಭಾಷೆ, ನಮ್ಮ ಸಂಪ್ರದಾಯ, ನಮ್ಮ ರಾಜಕೀಯ ಹಾಗೂ ನಮ್ಮ ಜೀವನಶೈಲಿಯನ್ನು ಪ್ರತಿಬಿಂಬಿಸುತ್ತದೆ. ಇದು ಯಾವಾಗಲೂ ತಮಿಳುನಾಡಾಗಿಯೇ ಇರಲಿದೆ" ಎಂದು ಪ್ರತಿಕ್ರಿಯಿಸಿದೆ.


  5. ಇನ್ನು ಡಿಎಂಕೆ ಪಕ್ಷದ ಮುಖವಾಣಿಯಾದ 'ಮುರಸೋಳಿ' ರಾಜ್ಯಪಾಲರ ಈ ಹೇಳಿಕೆಯನ್ನು ಖಂಡಿಸಿದ್ದು, ಕೆಲವು ಇತರೆ ಉದಾಹರಣೆಗಳನ್ನು ನೀಡುವ ಮೂಲಕ ರಾಜ್ಯಪಾಲರಿಗೆ ಮರುಪ್ರಶ್ನೆ ಕೇಳಿದೆ.
  ಮುಖವಾಣಿ ತನ್ನ ಹೇಳಿಕೆಯಲ್ಲಿ ರಾಜ್ಯಪಾಲರನ್ನು ಕುರಿತು, "ರಾಜಸ್ಥಾನ ಎಂಬ ಹೆಸರು ನಿಮಗೆ ಪಾಕಿಸ್ತಾನ, ಅಫ್ಘಾನಿಸ್ತಾನ, ಉಜ್ಬೇಕಿಸ್ತಾನ್ ಹೆಸರುಗಳಿಗೆ ಸಮಾನವಾಗಿದೆ ಎಂದು ಅನಿಸುವುದಿಲ್ಲವೇ? ಅಥವಾ ಮಹಾರಾಷ್ಟ್ರ ಎಂಬ ಪದ ಮರಾಠಿಗರ ರಾಷ್ಟ್ರ ಎಂಬ ಅರ್ಥವನ್ನು ತಂದುಕೊಡುವುದಿಲ್ಲವೇ? ಇಲ್ಲ ಕೇರಳ ರಾಜ್ಯದ ಪ್ರವಾಸೋದ್ಯಮದ ಟ್ಯಾಗ್ ಲೈನ್ ಆಗಿರುವ 'ದೇವರ ಸ್ವಂತ ನಾಡು' ಎಂಬುದು ಭಾರತದಿಂದ ಭಿನ್ನವಾಗಿದೆ ಎಂಬ ಧೋರಣೆ ನೀಡುತ್ತಿಲ್ಲವೇ?" ಎಂಬುದಾಗಿ ಪ್ರಶ್ನಿಸಿದೆ. ದೇಶ ಎಂಬ ಪದವಿರುವ ತೆಲುಗು ದೇಶಂ ಪಾರ್ಟಿಯ ಹೆಸರು ನಿಮಗೆ ತಪ್ಪು ಅನಿಸುತ್ತಿಲ್ಲವೇ ಎಂಬುದಾಗಿಯೂ ಪ್ರಶ್ನಿಸಿದೆ.


  6. ಅಷ್ಟಕ್ಕೂ ಇವಿ ಪೆರಿಯಾರ್ ರಾಮಸ್ವಾಮಿ ಎಂಬುವವರಿಂದ 1938 ರಲ್ಲಿ ಮೊದಲ ಬಾರಿಗೆ ತಮಿಳಗಂ ಎಂಬ ಶಬ್ದವನ್ನು ಉಪಯೋಗಿಸಲಾಯಿತು. ಆದಾಗ್ಯೂ ಅವರು ಮದ್ರಾಸ್ ಅನ್ನು ಮರುಹೆಸರಿಸುವ ಸಂದರ್ಭದಲ್ಲಿ ತಮಿಳುನಾಡು ಪದವನ್ನು ಉಪಯೋಗಿಸುವ ಆಯ್ಕೆಗೆ ಆದ್ಯತೆ ನೀಡಿದ್ದರು.


  7. ಹಾಗೇ ನೋಡಿದರೆ ಆರಂಭದಲ್ಲಿ ಡಿಎಂಕೆ ಪಕ್ಷವು ಪ್ರತ್ಯೇಕ ದೇಶಕ್ಕಾಗಿ ಬೇಡಿಕೆ ಇಟ್ಟಿತ್ತಾದರೂ ಮದ್ರಾಸ್ ಪ್ರಾಂತ್ಯವನ್ನು ತಮಿಳುನಾಡು ಎಂದು ಮರುನಾಮಕರಣ ಮಾಡಿದಾಗ ಅವರು ತಮ್ಮ ಬೇಡಿಕೆಯನ್ನು ಕೈಬಿಟ್ಟಿದ್ದರು.


  8. "ಮದ್ರಾಸ್ ಅನ್ನು ತಮಿಳುನಾಡು ಎಂದು ಮಾಡಿದಾಗ ನಾವು ನಿಮ್ಮೊಂದಿಗಿರುತ್ತೇವೆ ಹಾಗೂ ನಮಗೆ ಹೆಚ್ಚಿನ ಅಧಿಕಾರಗಳನ್ನು ನೀಡಬೇಕು ಎಂದು ಹೇಳಿದ್ದೆವು. ಈಗ ಅದೆಲ್ಲವೂ ಮುಗಿದಿದೆ" ಎಂದು ಡಿಎಂಕೆ ವಕ್ತಾರ ಹಾಗೂ ಮಾಜಿ ಸಂಸದ ಟಿಕೆ‍ಎಸ್ ಎಲಂಗೋವನ್ ಕಿಡಿಕಾರಿದ್ದಾರೆ.

  Published by:Sumanth SN
  First published: