ಪುರಾತನ ಕಾಲದಿಂದಲೂ ಜ್ಯೋತಿಷ್ಯ ಶಾಸ್ತ್ರವು (Astrology) ತನ್ನದೇ ಆದ ಮಹತ್ವವನ್ನು ಹೊಂದಿದೆ. ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರವನ್ನು ಪೂಜನೀಯ ಹಾಗೂ ಪವಿತ್ರವಾದ ಶಾಸ್ತ್ರ ಎಂದು ಉಲ್ಲೇಖಿಸಲಾಗಿದೆ. ವ್ಯಕ್ತಿಯ ಭವಿಷ್ಯವನ್ನು (Future) ಊಹಿಸುವ ಶಕ್ತಿ ಇರುವ ಜ್ಯೋತಿಷ್ಯ ಶಾಸ್ತ್ರವನ್ನು ಅನುಸರಿಸಿಕೊಂಡೇ ಜೀವನದಲ್ಲಿ (Life) ಮಹತ್ತರ ಕಾರ್ಯಗಳನ್ನು ನಡೆಸಲಾಗುತ್ತದೆ. ಭಾರತೀಯ ಜ್ಯೋತಿಷ್ಯ ವಿಧಾನದಂತೆ ಚೀನೀ ಜ್ಯೋತಿಷ್ಯ ಶಾಸ್ತ್ರ (Chinese Astrology) ಕೂಡ ಅತ್ಯಂತ ಭಿನ್ನವಾದುದು ಹಾಗೂ ಪುರಾತನ ಇತಿಹಾಸವನ್ನು (History) ಹೊಂದಿದೆ. ನಿಮ್ಮ ರಾಶಿಯ ಬಗ್ಗೆ ಚೀನೀ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ? ಭಾರತೀಯ ಶಾಸ್ತ್ರಕ್ಕೂ ಚೀನೀ ಶಾಸ್ತ್ರಕ್ಕೂ ಇರುವ ವ್ಯತ್ಯಾಸಗಳೇನು ಎಂಬುದನ್ನು ಅರಿತುಕೊಳ್ಳೋಣ.
ಚೀನೀ ಜ್ಯೋತಿಷ್ಯ ಶಾಸ್ತ್ರ ಎಂದರೇನು?
ಚೀನೀ ಜ್ಯೋತಿಷ್ಯವು ಅನಾದಿಕಾಲದ ಇತಿಹಾಸವನ್ನು ಹೊಂದಿದೆ. ಪ್ರಾಣಿಗಳನ್ನು ಮಾನವ ರಾಶಿ ಚಿಹ್ನೆಯ ಗುರುತುಗಳಾಗಿ ಚೈನೀಸ್ ಜ್ಯೋತಿಷ್ಯದಲ್ಲಿ ಹೊಂದಿವೆ. ಹೀಗೆ ಪ್ರಾಣಿಗೆ ಮಾನವ ರಾಶಿಯನ್ನು ಸಂಯೋಜಿಸಿ ಭವಿಷ್ಯ ಹೇಳುವ ಪರಿಪಾಠ ಹಾನ್ ರಾಜವಂಶದಲ್ಲಿ ಹೆಚ್ಚಾಗಿ ಕಂಡುಬಂದಿದೆ.
ಪಂಚ ಭೂತಗಳು ಮತ್ತು 12 ಪ್ರಾಣಿಗಳನ್ನು ಋತುಗಳು, ದಿನಗಳು ಮತ್ತು ನಕ್ಷತ್ರಗಳ ನೈಸರ್ಗಿಕ ಚಕ್ರವನ್ನು ನಕ್ಷೆ ಮಾಡಲು ಬಳಸಲಾಗಿದೆ. ಈ ಚಕ್ರವು ವರ್ಷವನ್ನು ಮಾತ್ರವಲ್ಲದೆ ತಿಂಗಳು, ದಿನ ಮತ್ತು ಗಂಟೆಗಳನ್ನು ಚಾರ್ಟ್ ಮಾಡಲು ಬಳಸಲಾಗುತ್ತದೆ. ವ್ಯಕ್ತಿ ಹುಟ್ಟಿರುವ ಸಮಯ, ದಿನಾಂಕ, ವರ್ಷಕ್ಕೆ ಸರಿಯಾಗಿ ಪ್ರಾಣಿಗಳನ್ನು ಸಂಯೋಜಿಸಿ ಚೈನೀಸ್ ಶಾಸ್ತ್ರಜ್ಞರು ಭವಿಷ್ಯವನ್ನು ಊಹಿಸುತ್ತಾರೆ.
12 ಚೈನೀಸ್ ರಾಶಿಚಕ್ರ ಚಿಹ್ನೆಗಳು ಹಾಗೂ ನಿಮ್ಮ ರಾಶಿಯನ್ನು ಕಂಡುಹಿಡಿಯುವುದು ಹೇಗೆ?
ಹೆಚ್ಚಿನ ಜನರು ತಮ್ಮ ಚೈನೀಸ್ ರಾಶಿಚಕ್ರದ ಬಗ್ಗೆ ಮಾತನಾಡುವಾಗ, ಅವರು ತಮ್ಮ ಜನ್ಮ ವರ್ಷದ ಚಿಹ್ನೆಯನ್ನು ಉಲ್ಲೇಖಿಸುತ್ತಾರೆ. ಇದರಿಂದ ರಾಶಿ ಚಕ್ರದ ಸ್ವಭಾವನ್ನು ಕಂಡುಹಿಡಿಯಬಹುದಾಗಿದೆ. ರಾಶಿ ಚಕ್ರಗಳೊಂದಿಗೆ ಆ ರಾಶಿಯಲ್ಲಿರುವ ಪ್ರಾಣಿಗಳು ಯಾವುವು ಹಾಗೂ ಆ ರಾಶಿಯ ಗುಣಸ್ವಭಾವಗಳೇನು ಎಂಬುದನ್ನು ತಿಳಿದುಕೊಳ್ಳೋಣ. ಇಲ್ಲಿ ಜನನ ವರ್ಷ, ಸಮಯ ಹಾಗೂ ತಿಂಗಳುಗಳನ್ನು ನೀಡಲಾಗಿದ್ದು ಆ ವರ್ಷಕ್ಕೆ ಅನುಗುಣವಾಗಿರುವ ಪ್ರಾಣಿಗಳ ಅದೇ ಗುಣಗಳನ್ನು ನೀಡಲಾಗಿದೆ. 12 ಚೀನೀ ರಾಶಿಚಕ್ರ ಚಿಹ್ನೆಗಳ ಮೂಲಭೂತ ಅಂಶಗಳು ಹೀಗಿವೆ.
ಇಲಿ
ವರ್ಷಗಳು: 1924, 1936, 1948, 1960, 1972, 1984, 1996, 2008, 2020
ತಿಂಗಳು: 12/7 ರಿಂದ 1/5
ಗಂಟೆ: ರಾತ್ರಿ 11 ಗಂಟೆಯಿಂದ ಬೆಳಗ್ಗೆ 1 ಗಂಟೆ
ರಾಶಿ ಸ್ವಭಾವ: ಸಮಸ್ಯೆ-ಪರಿಹರಿಸುವುದು, ಪಾರ್ಶ್ವ ಚಿಂತನೆ, ವಿವರಗಳಿಗೆ ಗಮನ
ಗುಪ್ತ ಅಂಶ: ಯಾಂಗ್ ವಾಟರ್
ಮೈತ್ರಿಯುಳ್ಳ ಪ್ರಾಣಿಗಳು: ಡ್ರ್ಯಾಗನ್, ಕೋತಿ, ಎತ್ತು
ಪ್ರತಿ ಪ್ರಾಣಿಯು ಸಹ ತಮ್ಮ ಪಾತ್ರಕ್ಕೆ ಹೊಂದಿಕೆಯಾಗುವ ಗುಪ್ತ ಅಂಶವನ್ನು ಹೊಂದಿದೆ. ಇಲಿಗಳ ಗುಪ್ತ ಅಂಶವೆಂದರೆ ಯಾಂಗ್ ವಾಟರ್, ಮತ್ತು ಇಲಿಗಳು ಹೊಂದಿಕೊಳ್ಳುವ ಗುಣವನ್ನು ಸೂಚಿಸುತ್ತವೆ. ಸಮಸ್ಯೆಗಳನ್ನು ಪರಿಹರಿಸುವ ಗುಣವನ್ನು ಇಲಿ ಸೂಚಿಸುತ್ತದೆ. ಬುದ್ಧಿವಂತಿಕೆಯ ಮೂಲಕ ಮತ್ತು ಕನಿಷ್ಠ ಪ್ರತಿರೋಧದ ಮಾರ್ಗವನ್ನು ಕಂಡುಕೊಳ್ಳುತ್ತವೆ. ವಿಪತ್ತನ್ನು ತ್ವರಿತವಾಗಿ ಹುಡುಕುತ್ತಾರೆ.
ಎತ್ತು
ವರ್ಷಗಳು: 1925, 1937, 1949, 1961, 1973, 1985, 1997, 2009, 2021
ತಿಂಗಳು: 1/6 ರಿಂದ 2/3
ಗಂಟೆ: 1 ರಿಂದ 3 ರವರೆಗೆ
ರಾಶಿಯ ವಿಶೇಷತೆ: ಸ್ಥಿರತೆ, ಶಕ್ತಿ, ಸಂಪ್ರದಾಯ
ಗುಪ್ತ ಅಂಶ: ಯಿನ್ ಅರ್ಥ್
ಮೈತ್ರಿಯುಳ್ಳ ಪ್ರಾಣಿಗಳು: ರೂಸ್ಟರ್, ಹಾವು, ಇಲಿ
ಎತ್ತು ಶಾಂತ ಹಾಗೂ ಸ್ಥಿರತೆಯನ್ನು ಸೂಚಿಸುತ್ತದೆ. ಯಿನ್ ಅರ್ಥ್ ಗುಪ್ತ ಅಂಶವಾಗಿದೆ. ಎತ್ತು ಪರಿಶ್ರಮಿ ಹಾಗೂ ಕಠಿಣತೆಯನ್ನು ಸಂಕೇತಿಸುತ್ತದೆ. ಕೆಲಸ ಮಾಡುವ ನಿರ್ದಿಷ್ಟ ವಿಧಾನಕ್ಕೆ ಎತ್ತು ಹೆಸರುವಾಸಿಯಾಗಿದೆ. ಬದಲಾವಣೆಯನ್ನು ಅಷ್ಟಾಗಿ ಇಷ್ಟಪಡುವುದಿಲ್ಲ. ಎತ್ತಿನ ಸ್ಥಿರತೆ ಅದಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ ಹಾಗೂ ಅಂದಂದಿನ ಕೆಲಸವನ್ನು ಅಂದೇ ಮುಗಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ. ಕೋಪಗೊಂಡಾಗ ಸಮಾಧಾನಪಡಿಸುವುದು ಕಷ್ಟ.
ಹುಲಿ
ವರ್ಷಗಳು: 1926, 1938, 1950, 1962, 1974, 1986, 1998, 2010, 2022
ತಿಂಗಳು: 2/4 ರಿಂದ 3/5
ಗಂಟೆ: ಬೆಳಗ್ಗೆ 3 ರಿಂದ 5 ರವರೆಗೆ
ರಾಶಿ ವಿಶೇಷತೆ: ದಂಗೆ, ಉದ್ವೇಗ, ಹೊಸ ಆರಂಭಗಳು
ಗುಪ್ತ ಅಂಶ: ಯಾಂಗ್ ವುಡ್
ಮೈತ್ರಿಯುಳ್ಳ ಪ್ರಾಣಿಗಳು: ನಾಯಿ, ಕುದುರೆ, ಹಂದಿ
ಹುಲಿಯ ತಿಂಗಳು ವಸಂತಕಾಲದ ಆರಂಭವನ್ನು ಮತ್ತು ಪ್ರಾಚೀನ ಚೀನಾದಲ್ಲಿ ಹೊಸ ವರ್ಷವನ್ನು ಸೂಚಿಸುತ್ತದೆ. ಹುಲಿಯ ಗುಪ್ತ ಅಂಶವು ಹೊಸ ಆರಂಭದ ಅಂಶವಾಗಿದೆ: ಯಾಂಗ್ ವುಡ್. ದೀರ್ಘ ಚಳಿಗಾಲದ ನಂತರ ಚಿಗುರೊಡೆಯುವ ವಸಂತಕಾಲದವು ಜೀವನದ ದಿಟ್ಟತನದ ಪ್ರತೀಕವಾಗಿದ್ದು ಹುಲಿಯು ಇದನ್ನು ಸಂಕೇತಿಸುತ್ತದೆ.
ಹುಲಿ ಬಂಡಾಯದ ಸ್ವಭಾವವನ್ನು ಹೊಂದಿದೆ. ನಿಶ್ಚಲತೆ ಅದಕ್ಕೆ ಸಹ್ಯವಾಗುವುದಿಲ್ಲ. ನಿರಂತರ ಸುಧಾರಣೆಯನ್ನು ಅನುಸರಿಸುವ ಪ್ರಾಣಿಯಾಗಿದೆ.
ಮೊಲ
ವರ್ಷಗಳು: 1927, 1939, 1951, 1963, 1975, 1987, 1999, 2011, 2023
ತಿಂಗಳು: 3/6 ರಿಂದ 4/4
ಸಮಯ: ಬೆಳಿಗ್ಗೆ 5 ರಿಂದ 7 ರವರೆಗೆ
ರಾಶಿ ವಿಶೇಷತೆ: ಸೂಕ್ಷ್ಮತೆ, ಕಲೆ, ಸಾಮರ್ಥ್ಯ
ಗುಪ್ತ ಅಂಶ: ಯಿನ್ ವುಡ್
ಮೈತ್ರಿಯುಳ್ಳ ಪ್ರಾಣಿಗಳು: ಹಂದಿ, ಮೇಕೆ, ನಾಯಿ
ಯಿನ್ ವುಡ್‌ನೊಂದಿಗೆ ಸಂಯೋಜಿತವಾಗಿರುವ ಮೊಲವು ಚಂಡಮಾರುತದ ನಂತರದ ಶಾಂತತೆಯನ್ನು ಸೂಚಿಸುತ್ತದೆ. ಕಲೆ ಹಾಗೂ ಸೌಂದರ್ಯದ ಸಂಕೇತವಾಗಿದೆ.
ಡ್ರ್ಯಾಗನ್
ವರ್ಷ: 1928, 1940, 1952, 1964, 1976, 1988, 2000, 2012
ತಿಂಗಳು: 4/5 ರಿಂದ 5/5
ಸಮಯ: ಬೆಳಿಗ್ಗೆ 7 ರಿಂದ 9 ರವರೆಗೆ
ಇತರ ಯಾವುದೇ ಪ್ರಾಣಿಗಳಿಗಿಂತ ಡ್ರ್ಯಾಗನ್ ಯಾಂಗ್ ಪರಿಕಲ್ಪನೆಯನ್ನು ಹೆಚ್ಚು ಪ್ರತಿನಿಧಿಸುತ್ತದೆ. ಡ್ರ್ಯಾಗನ್ ದೃಢವಾದ, ಸಕ್ರಿಯ ಮತ್ತು ಆತ್ಮವಿಶ್ವಾಸದ ಪ್ರತೀಕವಾಗಿದೆ.
ಹಾವು
ವರ್ಷಗಳು: 1929, 1941, 1953, 1965, 1977, 1989, 2001, 2013
ತಿಂಗಳು: 5/6 ರಿಂದ 6/5
ಸಮಯ: ಬೆಳಿಗ್ಗೆ 9 ರಿಂದ 11 ರವರೆಗೆ
ಡ್ರ್ಯಾಗನ್‌ನ ಶಕ್ತಿಯು ಬಹಿರಂಗವಾಗಿದ್ದರೂ, ಹಾವಿನ ಶಕ್ತಿಯು ಸೂಕ್ಷ್ಮವಾಗಿರುತ್ತದೆ. ಹಾವುಗಳು ಗುರುತನ್ನು ಆಂತರಿಕ ಮತ್ತು ಅಜ್ಞಾತವಾದ ಯಾವುದೋ ಒಂದರಲ್ಲಿ ನೆಲೆಸಿದೆ ಎಂದು ತಿಳಿದಿದೆ.
ಕುದುರೆ
ವರ್ಷಗಳು: 1930, 1942, 1954, 1966, 1978, 1990, 2002, 2014
ತಿಂಗಳು: 6/6 ರಿಂದ 7/6
ಗಂಟೆ: 11 ರಿಂದ ಮಧ್ಯಾಹ್ನ 1 ರವರೆಗೆ
ತೀಕ್ಷ್ಣ ಬಿಸಿಲು ಮತ್ತು ಬೇಸಿಗೆಯ ಹೂಬಿಡುವಿಕೆಯೊಂದಿಗೆ ಸಂಬಂಧಿಸಿದೆ, ಕುದುರೆಯ ಗುಪ್ತ ಅಂಶವೆಂದರೆ ಯಾಂಗ್ ಫೈರ್. ಅತಿಯಾಗಿ ಯೋಚಿಸುವುದು ಕುದುರೆಯ ಅದೇ ಅಂಶಗಳನ್ನು ನೆನಪಿಸುತ್ತದೆ.
ಮೇಕೆ
ವರ್ಷಗಳು: 1931, 1943, 1955, 1967, 1979, 1991, 2003, 2015
ತಿಂಗಳು: 7/7 ರಿಂದ 8/7
ಗಂಟೆ: ಮಧ್ಯಾಹ್ನ 1 ಗಂಟೆ ಮಧ್ಯಾಹ್ನ 3 ಗಂಟೆಗೆ
ಮೇಕೆ ತನ್ನ ಗುಪ್ತ ಅಂಶವನ್ನು ಎತ್ತುಗಳೊಂದಿಗೆ ಹಂಚಿಕೊಳ್ಳುತ್ತದೆ. ಆದಾಗ್ಯೂ, ಎತ್ತು ಯಿನ್ ಭೂಮಿಯ ಅದಮ್ಯ ಸ್ಥಿರತೆಯನ್ನು ಸಾಕಾರಗೊಳಿಸಿದರೆ, ಮೇಕೆ ಭೂಮಿಯನ್ನು ನೀಡುವ, ಪೋಷಿಸುವ ಮತ್ತು ಒಗ್ಗೂಡಿಸುವ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ.
ಕೋತಿ
ವರ್ಷಗಳು: 1932, 1944, 1956, 1968, 1980, 1992, 2004, 2016
ತಿಂಗಳು: 8/8 ರಿಂದ 9/7
ಗಂಟೆ: ಮಧ್ಯಾಹ್ನ 3 ಗಂಟೆ ಸಂಜೆ 5 ಗಂಟೆಗೆ
ಕೋತಿಯ ಗುಪ್ತ ಅಂಶವೆಂದರೆ ಯಾಂಗ್ ಮೆಟಲ್. ಇದು ಕೋತಿಯ ತೀಕ್ಷ್ಣ ಮನಸ್ಸನ್ನು ಪ್ರತಿಬಿಂಬಿಸುತ್ತದೆ. ಸಮಸ್ಯೆಗಳನ್ನು ಅಚ್ಚುಕಟ್ಟಾಗಿ ಪರಿಹರಿಸುವ ಗುಣ ಹೊಂದಿದೆ.
ಹುಂಜ
ವರ್ಷಗಳು: 1933, 1945, 1957, 1969, 1981, 1993, 2005, 2017
ತಿಂಗಳು: 9/8 ರಿಂದ 10/7
ಗಂಟೆ: ಸಂಜೆ 5 ರಿಂದ ಸಂಜೆ 7 ಗಂಟೆಗೆ
ಹುಂಜ ಕೌಶಲ್ಯಪೂರ್ಣ, ನಿಯಂತ್ರಿಸುವ ಮತ್ತು ವಿವರ-ಆಧಾರಿತವಾಗಿದೆ. ಜೀವನ ಶೈಲಿ ಮತ್ತು ವಿಧಾನದ ಬಗ್ಗೆ ಸೂಕ್ಷ್ಮವಾಗಿ ಗಮನ ಹರಿಸುತ್ತಾರೆ.
ನಾಯಿ
ವರ್ಷಗಳು: 1934, 1946, 1958, 1970, 1982, 1994, 2006, 2018
ತಿಂಗಳು: 10/8 ರಿಂದ 11/6
ಗಂಟೆ: ಸಂಜೆ 7 ರಿಂದ ರಾತ್ರಿ 9 ವರೆಗೆ
ನಾಯಿಯು ತನ್ನ ಗುಪ್ತ ಅಂಶವನ್ನು ಡ್ರ್ಯಾಗನ್‌ನೊಂದಿಗೆ ಹಂಚಿಕೊಳ್ಳುತ್ತದೆ. ತ್ವರಿತ ನಿರ್ಣಯಿಸುವ ಗುಣವನ್ನು ಈ ರಾಶಿಯ ಪ್ರಾಣಿ ನಾಯಿ ಹೊಂದಿರುತ್ತದೆ. ರಕ್ಷಣೆಯ ಜವದ್ಬಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ.
ಹಂದಿ
ವರ್ಷಗಳು: 1935, 1947, 1959, 1971, 1983, 1995, 2007, 2019
ತಿಂಗಳು: 11/7 ರಿಂದ 12/6
ಗಂಟೆ: ರಾತ್ರಿ 9 ರಿಂದ 11 ರವರೆಗೆ
ರಾಶಿಚಕ್ರದ ಕೊನೆಯ ಸದಸ್ಯ, ಮತ್ತು ಯಿನ್ ವಾಟರ್ ಪ್ರತಿನಿಧಿಸುವ ಹಂದಿ ಭೂತಕಾಲದ ಘಟನೆಗಳಿಗೆ ಅಂಟಿಕೊಂಡಿರುವವರಲ್ಲ. ಇವರು ಅದೃಷ್ಟವಂತರು ಹಾಗೂ ಕಷ್ಟಗಳನ್ನು ಪರಿಹರಿಸುವ ನಿಪುಣತೆಯನ್ನು ಹೊಂದಿರುವವರಾಗಿದ್ದಾರೆ.
ನಿಮ್ಮ ರಾಶಿಚಕ್ರದ ಅಂಶಗಳನ್ನು ಕಂಡುಹಿಡಿಯುವುದು ಹೇಗೆ
ಹನ್ನೆರಡು ಪ್ರಾಣಿಗಳನ್ನು ಹನ್ನೆರಡು ಭೂಮಿಯ ಶಾಖೆಗಳು ಎಂದು ಕರೆಯಲಾಗುತ್ತದೆ, ಆದರೆ ಐದು ಅಂಶಗಳನ್ನು (ಪಂಚ ಭೂತ) ಟೆನ್ ಹೆವೆನ್ಲಿ ಸ್ಟೆಮ್ಸ್ ಎಂದು ಉಲ್ಲೇಖಿಸಲಾಗುತ್ತದೆ. ಈ ಎರಡೂ ಅಂಶಗಳನ್ನು ಒಗ್ಗೂಡಿಸುವ ಮೂಲಕ ಸ್ವರ್ಗ ಹಾಗೂ ಭೂಮಿಯ ನಡುವಿನ ಏಕತೆಯನ್ನು ಚೀನೀಯರು ಸಾಧಿಸುತ್ತಾರೆ. ಪ್ರತಿ ವರ್ಷ, ತಿಂಗಳು, ದಿನ ಮತ್ತು ಗಂಟೆಗಳು ಅಧಿಕೃತ ಪ್ರಾಣಿ ಮತ್ತು ಅಧಿಕೃತ ಪಂಚ ಭೂತಗಳನ್ನು ಹೊಂದಿವೆ.
ಈ ಮಾಹಿತಿಯನ್ನು ಹೇಗೆ ಬಳಸಬಹುದು?
ಈ ಪ್ರಾಣಿಗಳು ನಮ್ಮ ರಾಶಿಯ ಗುಣಸ್ವಭಾವಗಳನ್ನು ತಿಳಿಸುತ್ತವೆ ಹಾಗೂ ನಮ್ಮೊಳಗೆ ಸಮತೋಲವನ್ನು ಕಾಪಾಡಿಕೊಳ್ಳಲು ಸಹಕಾರ ನೀಡುತ್ತವೆ. ನಮ್ಮ ಸಾಮರ್ಥ್ಯಗಳು ಹಾಗೂ ಸವಾಲುಗಳನ್ನು ಅರಿತುಕೊಳ್ಳಲು ಈ ಪ್ರಾಣಿಗಳು ಹಾಗೂ ಅವುಗಳ ಗುಣಸ್ವಭಾವಗಳು ಸಹಕಾರಿಯಾಗಿವೆ.
12 ಪ್ರಾಣಿಗಳು ಮತ್ತು ಐದು ಅಂಶಗಳು ಬ್ರಹ್ಮಾಂಡದ ಚಕ್ರಗಳನ್ನು ವಿವರಿಸುತ್ತವೆ. ಸುತ್ತಲಿನ ಜನರ ಸ್ವಭಾವ ಹಾಗೂ ವ್ಯವಸ್ಥೆಯಲ್ಲಿರುವ ಅಂಶಗಳಲ್ಲಿ ಇದನ್ನು ಮನದಟ್ಟುಮಾಡಿಕೊಳ್ಳಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ