Aliens out there?| ಏಲಿಯನ್‌ಗಳ ಇರುವಿಕೆ ದೃಢವಾಯ್ತಾ? ಸೌರವ್ಯೂಹದ ಹೊರಗಿನಿಂದ ರೇಡಿಯೋ ಸಿಗ್ನಲ್‌ಗಳನ್ನು ಪಡೆದ ಭೂಮಿ!

ಡಚ್ ಲೋ-ಫ್ರೀಕ್ವೆನ್ಸಿ ಅರೇ (LOFAR) ಎಂಬ ವಿಶ್ವದ ಅತ್ಯಂತ ಶಕ್ತಿಶಾಲಿ ರೇಡಿಯೋ ಆ್ಯಂಟೆನಾ ಈ ಸಂಕೇತವನ್ನು ಪಡೆದಿದೆ. ದೂರದ ನಕ್ಷತ್ರಗಳು ತಮ್ಮ ಸುತ್ತಲೂ ಗುಪ್ತ ಗ್ರಹಗಳ ಇರುವಿಕೆಯನ್ನು ಸೂಚಿಸುವ ರೇಡಿಯೋ ಸಂಕೇತಗಳನ್ನು ಕಳುಹಿಸುತ್ತಿವೆ ಎಂದು ವಿಜ್ಞಾನಿಗಳು ಈ ಬಗ್ಗೆ ಹೇಳಿದ್ದಾರೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಏಲಿಯನ್‌ಗಳ (Aliens) ಬಗ್ಗೆ ನಾವು ಅನೇಕ ಚಿತ್ರಗಳಲ್ಲಿ ನೋಡಿರುತ್ತೇವೆ. ಮಂಗಳ ಗ್ರಹದಲ್ಲಿ ಹಾಗೂ ಇನ್ನಿತರೆ ಗ್ರಹಗಳಲ್ಲಿ ಜೀವಿಗಳಿವೆಯಾ, ಈ ಹಿಂದೆ ಜೀವಿಗಳು ಇದ್ದವಾ ಎಂಬ ಬಗ್ಗೆ ಆಗಾಗ್ಗೆ ವಿಜ್ಞಾನಿಗಳು ಆವಿಷ್ಕಾರಗಳನ್ನು ಮಾಡುತ್ತಲೇ ಇರುತ್ತಾರೆ. ಭೂಮಿಯಿಂದ ಹೊರಗೆ ರೇಡಿಯೋ ಸಿಗ್ನಲ್‌ಗಳನ್ನು (Radio Signal From Space) ಕಳಿಸುವ ಮೂಲಕವೂ ಏಲಿಯನ್‌ಗಳ ಅಥವಾ ಅನ್ಯ ಗ್ರಹ ಜೀವಿಗಳ ಇರುವಿಕೆ ಬಗ್ಗೆ ಪತ್ತೆ ಹಚ್ಚಲಾಗುತ್ತಿರುತ್ತದೆ. ಇದೇ ರೀತಿ, ಈಗ ಒಂದು ಪ್ರಮುಖ ಆವಿಷ್ಕಾರದಲ್ಲಿ, ವಿಜ್ಞಾನಿಗಳು ನಮ್ಮ ಸೌರವ್ಯೂಹದ (Solar System) ಹೊರಗಿನ ದೂರದ ಗ್ರಹಗಳಿಂದ ರೇಡಿಯೋ ಸಂಕೇತಗಳನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಡಚ್ ಲೋ-ಫ್ರೀಕ್ವೆನ್ಸಿ ಅರೇ (LOFAR) ಎಂಬ ವಿಶ್ವದ ಅತ್ಯಂತ ಶಕ್ತಿಶಾಲಿ ರೇಡಿಯೋ ಆ್ಯಂಟೆನಾ ಈ ಸಂಕೇತವನ್ನು ಪಡೆದಿದೆ. ದೂರದ ನಕ್ಷತ್ರಗಳು ತಮ್ಮ ಸುತ್ತಲೂ ಗುಪ್ತ ಗ್ರಹಗಳ ಇರುವಿಕೆಯನ್ನು ಸೂಚಿಸುವ ರೇಡಿಯೋ ಸಂಕೇತಗಳನ್ನು ಕಳುಹಿಸುತ್ತಿವೆ ಎಂದು ವಿಜ್ಞಾನಿಗಳು ಈ ಬಗ್ಗೆ ಹೇಳಿದ್ದಾರೆ.

ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದ ಡಾ. ಬೆಂಜಮಿನ್ ಪೋಪ್ ಮತ್ತು ಡಚ್ ರಾಷ್ಟ್ರೀಯ ವೀಕ್ಷಣಾಲಯ ASTRONನಲ್ಲಿ ಅವರ ಸಹೋದ್ಯೋಗಿಗಳು ಈ ರೇಡಿಯೋ ಸಿಗ್ನಲ್ ಅನ್ನು ಗುರುತಿಸಿದ್ದಾರೆ. ದೂರದ 19 ಕೆಂಪು ಕುಬ್ಜ ನಕ್ಷತ್ರಗಳಿಂದ ಈ ಸಂಕೆತಗಳನ್ನು ಗುರುತಿಸಲಾಗಿದ್ದು, ಈ ಪೈಕಿ ನಾಲ್ಕು ನಕ್ಷತ್ರಗಳನ್ನು ಸುತ್ತುತ್ತಿರುವ ಗ್ರಹಗಳ ಇರುವಿಕೆಯನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ.

LOFAR ಅನ್ನು ಬಳಸಿ ಖಗೋಳಶಾಸ್ತ್ರಜ್ಞರು ಈ ಹಿಂದಿನಿಂದಲೂ ನಮ್ಮ ಸೌರ ಮಂಡಲದ ಹೊರಗಿನ ಗ್ರಹಗಳನ್ನು ಹುಡುಕುತ್ತಲೇ ಇದ್ದಾರೆ.

"ನಮ್ಮ ಸ್ವಂತ ಸೌರಮಂಡಲದ ಗ್ರಹಗಳು ಶಕ್ತಿಯುತ ರೇಡಿಯೋ ತರಂಗಗಳನ್ನು ಹೊರಸೂಸುತ್ತವೆ ಎಂದು ನಮಗೆ ಬಹಳ ಹಿಂದೆಯೇ ತಿಳಿದಿದೆ, ಏಕೆಂದರೆ ಅವುಗಳ ಕಾಂತೀಯ ಕ್ಷೇತ್ರಗಳು ಸೌರ ಮಾರುತ ಅಥವಾ ಗಾಳಿಯೊಂದಿಗೆ ಸಂವಹನ ನಡೆಸುತ್ತವೆ, ಆದರೆ ನಮ್ಮ ಸೌರವ್ಯೂಹದ ಹೊರಗಿನ ಗ್ರಹಗಳಿಂದ ರೇಡಿಯೋ ಸಂಕೇತಗಳನ್ನು ಇನ್ನೂ ತೆಗೆದುಕೊಳ್ಳಲಾಗಿರಲಿಲ್ಲ" ಎಂದು ಖಗೋಳಶಾಸ್ತ್ರಜ್ಞರ ತಂಡ ಹೇಳಿದೆ .

ಈಘ ಸೌರ ವ್ಯೂಹದ ಹೊರಗಿನಿಂದ ರೇಡಿಯೋ ಸಂಕೇತಗಳನ್ನು ಪಡೆದಿರುವುದರಿಂದ ಈ ಹೊಸ ತಂತ್ರವು ರೇಡಿಯೋ ಖಗೋಳಶಾಸ್ತ್ರಕ್ಕೆ ಮಹತ್ವದ್ದಾಗಿದೆ ಮತ್ತು ನಕ್ಷತ್ರ ಪುಂಜದಾದ್ಯಂತ ಗ್ರಹಗಳ ಆವಿಷ್ಕಾರಕ್ಕೆ ಕಾರಣವಾಗಬಹುದು ಎಂದು ತಂಡವು ಹೇಳಿದೆ.

ಹೊಸ ತಂತ್ರವು ವ್ಯವಸ್ಥೆಯಲ್ಲಿ ಜೀವಿಗಳ ಸಾಧ್ಯತೆಯ ಬಗ್ಗೆಯೂ ಸುಳಿವು ನೀಡುತ್ತದೆ. ಭೂಮಿಯಲ್ಲಿ ಮಾತ್ರ ಜೀವಿಗಳು ಇರೋದಾ ಎಂಬುದು ಖಗೋಳಶಾಸ್ತ್ರದಲ್ಲಿ ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ.

‘ನೇಚರ್ ಆ್ಯಸ್ಟ್ರಾನಮಿ’ ಯಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ, ಈ ಸಂಕೇತಗಳು ನಕ್ಷತ್ರಗಳ ಕಾಂತೀಯ ಸಂಪರ್ಕದಿಂದ ಮತ್ತು ಗುರು ಹಾಗೂ ಅದರ ಚಂದ್ರ,Ioನಡುವಿನ ಪರಸ್ಪರ ಕ್ರಿಯೆಯಂತೆಯೇ ಕಾಣದ ಕಕ್ಷೆಯ ಗ್ರಹಗಳಿಂದ ಬರುತ್ತಿವೆ ಎಂದು ತಂಡವು ವಿಶ್ವಾಸ ಹೊಂದಿದೆ.

ASTRONನ ಲೈಡೆನ್ ವಿಶ್ವವಿದ್ಯಾನಿಲಯದ ಡಾ. ಜೋಸೆಫ್ ಕಾಲಿಂಗ್‌ಹ್ಯಾಮ್ ಮತ್ತು ಆವಿಷ್ಕಾರದ ಪ್ರಮುಖ ಲೇಖಕರು "ನಮ್ಮ ಭೂಮಿಯು ಅರೋರಾಗಳನ್ನು ಹೊಂದಿದೆ, ಇಲ್ಲಿ ಸಾಮಾನ್ಯವಾಗಿ ಉತ್ತರ ಮತ್ತು ದಕ್ಷಿಣ ದೀಪಗಳೆಂದು ಗುರುತಿಸಲಾಗುತ್ತದೆ, ಅದು ಶಕ್ತಿಯುತ ರೇಡಿಯೋ ತರಂಗಗಳನ್ನು ಸಹ ಹೊರಸೂಸುತ್ತದೆ. ಇದು ಸೌರ ಮಾರುತದೊಂದಿಗೆ ಗ್ರಹದ ಕಾಂತೀಯ ಕ್ಷೇತ್ರದ ಪರಸ್ಪರ ಕ್ರಿಯೆಯಿಂದ ಬರುತ್ತದೆ" ಎಂದು ಹೇಳಿದ್ದಾರೆ.

ಈ ಹಿಂದೆ, ಖಗೋಳಶಾಸ್ತ್ರಜ್ಞರು ಅತ್ಯಂತ ಹತ್ತಿರದ ನಕ್ಷತ್ರಗಳಿಂದ ಮಾತ್ರ ರೇಡಿಯೋ ಸಂಕೇತಗಳನ್ನು ಪತ್ತೆ ಮಾಡಲು ಸಾಧ್ಯವಾಗಿತ್ತು. ಆದರೆ, ಇದಕ್ಕೆ ಕಾರಣ ಆಕಾಶದಲ್ಲಿ ಇದ್ದ ನಕ್ಷೆತ್ರಗಳು ಇಂಟರ್‌ಸ್ಟೆಲ್ಲಾರ್‌ ಗ್ಯಾಸ್‌ ಅಥವಾ ಬ್ಲ್ಯಾಕ್‌ ಹೋಲ್ಸ್‌ ಅಥವಾ ಕಪ್ಪು ಕುಳಿಗಳಾಗಿದ್ದಾಗ ಮಾತ್ರ ಸ್ಥಿರ ರೇಡಿಯೋ ಹೊರಸೂಸುವಿಕೆ ಹೊಮ್ಮುತ್ತಿತ್ತು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Single Vote BJP| ತ.ನಾಡು ಸ್ಥಳೀಯ ಚುನಾವಣೆ ಕೇವಲ ಒಂದು ಮತಕ್ಕೆ ತೃಪ್ತಿಪಟ್ಟ ಬಿಜೆಪಿ ಅಭ್ಯರ್ಥಿ; ಜಾಲತಾಣಗಳಲ್ಲಿ ಭಾರೀ ಟ್ರೋಲ್!

ರೇಡಿಯೋ ಖಗೋಳಶಾಸ್ತ್ರಜ್ಞರು ಈಗ ತಮ್ಮ ವೀಕ್ಷಣೆಗಳನ್ನು ಮಾಡಿದಾಗ ಸಾಮಾನ್ಯ ಹಳೆಯ ನಕ್ಷತ್ರಗಳನ್ನು ನೋಡಲು ಸಾಧ್ಯವಾಗುತ್ತದೆ. ಸದ್ಯ, ಖಗೋಳಶಾಸ್ತ್ರಜ್ಞರ ತಂಡ ಕೆಂಪು ಕುಬ್ಜ ನಕ್ಷತ್ರಗಳ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದ್ದು, ಮತ್ತು ನಕ್ಷತ್ರದ ಜ್ವಾಲೆ ಹಾಗೂ ರೇಡಿಯೋ ಹೊರಸೂಸುವಿಕೆಯನ್ನು ಪ್ರಚೋದಿಸುವ ತೀವ್ರ ಕಾಂತೀಯ ಚಟುವಟಿಕೆಯನ್ನು ಹೊಂದಿದ್ದಾರೆ.
Published by:MAshok Kumar
First published: