Akasa Air: ಆಗಸ್ಟ್ 7ರಿಂದ ಹಾರಾಟಕ್ಕೆ ಸಜ್ಜಾದ 'ಆಕಾಶ ಏರ್'! ಪ್ರಯಾಣದ ಮಾರ್ಗ, ಆಫರ್, ಟಿಕೆಟ್ ದರದ ಮಾಹಿತಿ ಇಲ್ಲಿದೆ

ರಾಕೇಶ್ ಜುಂಜುನ್‌ವಾಲಾ ಮಾಲೀಕತ್ವದ 'ಆಕಾಶ ಏರ್' ತನ್ನ ಮೊದಲ ವಾಣಿಜ್ಯ ಹಾರಾಟವನ್ನು ಆಗಸ್ಟ್ 7ರಂದು ಆರಂಭಿಸಲಿದೆ. ಈ ಆಕಾಶ ಏರ್‌ ವಿಮಾನವು ಮುಂಬೈ-ಅಹಮದಾಬಾದ್, ಬೆಂಗಳೂರು-ಕೊಚ್ಚಿಯಿಂದ ಎರಡು ಬೋಯಿಂಗ್‌ 737 ಮ್ಯಾಕ್ಸ್ ವಿಮಾನಗಳನ್ನು ಆಕಾಶ್‌ ಏರ್ ಹಾರಿಸಲಿದೆ. ಈ ಆಕಾಶ ಏರ್‌ ತನ್ನ ಹಾರಾಟದ ಮಾರ್ಗಗಳ ಜಾಲವನ್ನು ವಿಸ್ತರಿಸುವ ನಿರೀಕ್ಷೆ ಇದೆ.

ಆಕಾಶ ಏರ್‌

ಆಕಾಶ ಏರ್‌

  • Share this:
ರಾಕೇಶ್ ಜುಂಜುನ್‌ವಾಲಾ (Rakesh Jhunjhunwala) ಮಾಲೀಕತ್ವದ 'ಆಕಾಶ ಏರ್' (Akasa Air) ತನ್ನ ಮೊದಲ ವಾಣಿಜ್ಯ ಹಾರಾಟವನ್ನು ಆಗಸ್ಟ್ 7 ರಂದು ಆರಂಭಿಸಲಿದೆ ಎಂದು ಶುಕ್ರವಾರದಂದು ಘೋಷಣೆ ಮಾಡಿದೆ. ಈ ಆಕಾಶ ಏರ್‌ ವಿಮಾನವು ಮುಂಬೈ- ಅಹಮದಾಬಾದ್, ಬೆಂಗಳೂರು - ಕೊಚ್ಚಿಯಿಂದ ಎರಡು ಬೋಯಿಂಗ್‌ 737 ಮ್ಯಾಕ್ಸ್ ವಿಮಾನಗಳನ್ನು (Flights) ಆಕಾಶ್‌ ಏರ್ ಹಾರಿಸಲಿದೆ. ಈ ಆಕಾಶ ಏರ್‌ ತನ್ನ ಹಾರಾಟದ ಮಾರ್ಗಗಳ (flight path) ಜಾಲವನ್ನು ವಿಸ್ತರಿಸುವ ನಿರೀಕ್ಷೆ ಇದೆ. ಆದರೆ ಈ ಹೆಚ್ಚಿನ ವಿಸ್ತಾರದ ಮಾರ್ಗಗಳ ಹಾರಾಟಕ್ಕೆ ಹೆಚ್ಚಿನ ಸಾಮರ್ಥ್ಯದ ಅಗತ್ಯವಿದೆ.

ಆಕಾಶ ಏರ್‌ವಿಮಾನ ಯಾನದ ಕಾರ್ಯಾಚರಣೆಯ ಕೆಲವು ಮುಖ್ಯ ಘಟನೆಗಳು:
ರಾಕೇಶ್‌ ಜುಂಜುನ್‌ವಾಲಾ ಅವರು ಭಾರತದ ವೈಮಾನಿಕ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಭಾರತದ ಹೊಸ ವಿಮಾನಯಾನ ಸಂಸ್ಥೆ ಆಕಾಶ ಏರ್ ವಾಣಿಜ್ಯ ವಿಮಾನಗಳನ್ನು ಪ್ರಾರಂಭಿಸಲು ವಾಯುಯಾನ ನಿಯಂತ್ರಕದ ಅನುಮತಿಯನ್ನು ಪಡೆದುಕೊಂಡಿದೆ ಎಂದು ಬಿಲಿಯನೇರ್ ಮತ್ತು ಏಸ್ ಹೂಡಿಕೆದಾರ ರಾಕೇಶ್ ಜುಂಜುನ್ ವಾಲಾ ಜುಲೈ ತಿಂಗಳ ಮೊದಲ ವಾರದಲ್ಲಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಟ್ವೀಟ್ ಮಾಡಿದ್ದರು. ಜುಲೈ ತಿಂಗಳ ಅಂತ್ಯದ ವೇಳೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುವುದಾಗಿ ಹೇಳಿಕೆಯಲ್ಲಿ ಆಕಾಶ ಏರ್‌ಲೈನ್ಸ್ ತಿಳಿಸಿತ್ತು "ನಮ್ಮ ಏರ್ ಆಪರೇಟರ್ ಸರ್ಟಿಫಿಕೇಟ್ (ಎಒಸಿ) ಪಡೆದಿರುವುದನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಇದು ಮಹತ್ವದ ಮೈಲಿಗಲ್ಲು, ವಿಮಾನಗಳ ಹಾರಾಟ ಆರಂಭಿಸಲು ಮತ್ತು ವಾಣಿಜ್ಯ ಕಾರ್ಯಾಚರಣೆಗಳ ಪ್ರಾರಂಭಕ್ಕೆ ಇದು ಅವಕಾಶ ಮಾಡಿಕೊಡುತ್ತದೆ" ಎಂದು ಆಕಾಶ ಏರ್ ಟ್ವೀಟ್ ಮಾಡಿತ್ತು.

ಇದನ್ನೂ ಓದಿ: Heart Warming: ವಿಮಾನ ಹತ್ತಿದ ಪೋಷಕರು ಪೈಲಟ್ ಮಗನ ನೋಡಿ ಭಾವುಕ! ಚಂದದ ವಿಡಿಯೋ ಈಗ ವೈರಲ್

ಏರ್ ಆಪರೇಟರ್ ಸರ್ಟಿಫಿಕೇಟ್ ಒಂದು ಹೊಸ ಏರ್‌ಲೈನ್‌ಗೆ ವಾಣಿಜ್ಯ ವಾಯು ಸಾರಿಗೆ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಅನುಮತಿ ನೀಡುತ್ತದೆ. ವಿಮಾನಯಾನ ಜ್ಞಾನ ವೇದಿಕೆ ಸ್ಕೈಬ್ರೇ ಪ್ರಕಾರ, ಏರ್ ಆಪರೇಟರ್ ಸರ್ಟಿಫಿಕೇಟ್ ತನ್ನ ಉದ್ಯೋಗಿಗಳು ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಿಬ್ಬಂದಿ, ಸ್ವತ್ತುಗಳು ಮತ್ತು ವ್ಯವಸ್ಥೆಗಳನ್ನು ಹೊಂದಲು ಏರ್‌ಲೈನ್‌ಗೆ ಅಗತ್ಯವಿದೆ. ಯಾವ ಉದ್ದೇಶಕ್ಕಾಗಿ ಮತ್ತು ಯಾವ ಭೌಗೋಳಿಕ ಪ್ರದೇಶದಲ್ಲಿ ಬಳಸಬಹುದಾದ ವಿಮಾನದ ಪ್ರಕಾರಗಳನ್ನು ಈ ಡಾಕ್ಯುಮೆಂಟ್ ವಿವರಿಸುತ್ತದೆ ಎಂದು ಹೇಳಿತ್ತು.

ಎರಡು ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳಲ್ಲಿ ಹಾರಾಟ ಕಾರ್ಯಾಚರಣೆ ನಡೆಸಲಾಗುವುದು ಎಂದು ಏರ್‌ಲೈನ್ ಹೇಳಿದೆ. ಈಗಾಗಲೇ ಬೋಯಿಂಗ್ ವಿಮಾನ ಸಿದ್ಧವಾಗಿದೆ ಮತ್ತು ಎರಡನೇಯ ಸಿದ್ಧತೆಯನ್ನು ಈ ತಿಂಗಳ ಕೊನೆಯಲ್ಲಿ ನಿಗದಿಪಡಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.

ಆಕಾಶ ಏರ್‌ ಸಂಸ್ಥಾಪಕರೇನು ಹೇಳುತ್ತಾರೆ?
“ನಾವು ಮುಂಬೈ ಮತ್ತು ಅಹಮದಾಬಾದ್ ನಡುವಿನ ವಿಮಾನಗಳೊಂದಿಗೆ ಹೊಚ್ಚ ಹೊಸ ಬೋಯಿಂಗ್ 737 ಮ್ಯಾಕ್ಸ್ ವಿಮಾನದೊಂದಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತೇವೆ” ಎಂದು ಆಕಾಶ ಏರ್‌ನ ಸಹ-ಸಂಸ್ಥಾಪಕ ಮತ್ತು ಮುಖ್ಯ ವಾಣಿಜ್ಯ ಅಧಿಕಾರಿ ಪ್ರವೀಣ್ ಅಯ್ಯರ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. “ನಾವು ಮೊದಲ ವರ್ಷದಲ್ಲಿ ಪ್ರತಿ ತಿಂಗಳು ಎರಡು ವಿಮಾನಗಳನ್ನು ನಮ್ಮ ತಂಡಕ್ಕೆ ಸೇರಿಸುವುದರಿಂದ, ನಮ್ಮ ಜಾಲ ವಿಸ್ತರಣೆ ಯೋಜನೆಗಳನ್ನು ಹೆಚ್ಚಿಸಲು ಹಂತ ಹಂತವಾಗಿ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳುತ್ತೇವೆ. ಅಲ್ಲದೇ ಹೆಚ್ಚಿನ ನಗರಗಳಲ್ಲಿ ಕ್ರಮೇಣವಾಗಿ ಹಾರಾಟ ಹೆಚ್ಚಿಸುತ್ತೇವೆ” ಎಂದು ಅಯ್ಯರ್ ಹೇಳಿದರು.

"ನಮ್ಮ ಆಕಾಶ ಏರ್‌, ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಶ್ರೇಣಿಯ ಏರ್‌ಲೈನ್‌ ಕೋಡ್‌ ಆದ ಮ್ಯಾಕ್ಸ್‌ ಅನ್ನು ಪಡೆದಿರುವುದರಿಂದ, ಇದು ಪೂರ್ವ ಆಫ್ರಿಕಾ, ಆಗ್ನೇಯ ಏಷ್ಯಾ, ಸಿಂಗಾಪುರ್ ಮತ್ತು ಇಂಡೋನೇಷ್ಯಾದಲ್ಲಿ ಯಾವುದೇ ಪೇಲೋಡ್ ನಿರ್ಬಂಧಗಳಿಲ್ಲದೆ ಸುಲಭವಾಗಿ ಹಾರಾಟ ನಡೆಸಬಹುದು” ಎಂದು ಆಕಾಶ ಏರ್ ಸಿಇಒ ವಿನಯ್ ದುಬೆ ಕಳೆದ ತಿಂಗಳು ಸುದ್ದಿಗಾರರಿಗೆ ತಿಳಿಸಿದ್ದರು. ಭಾರತೀಯ ಕಾನೂನುಗಳ ಪ್ರಕಾರ, ವಿಮಾನಯಾನ ಸಂಸ್ಥೆಯು ಅಂತರರಾಷ್ಟ್ರೀಯ ಹಾರಾಟವನ್ನು ಪ್ರಾರಂಭಿಸುವ ಮೊದಲು 20 ವಿಮಾನಗಳನ್ನು ಹೊಂದಿರಬೇಕು. ಹಾಗೆಯೇ ಆಕಾಶ ಏರ್‌ ಮ್ಯಾಕ್ಸ್‌-9 ಏರ್‌ಲೈನ್‌ ಕೋಡ್‌ ಅನ್ನು ಬಳಕೆ ಮಾಡುತ್ತಿದೆ.

ಯಾವ-ಯಾವ ಮಾರ್ಗಗಳಲ್ಲಿ ಆಕಾಶ ಏರ್‌ ಹಾರಟ ನಡೆಸಲಿದೆ?
ಆಕಾಶ ಏರ್‌ ಆರಂಭಿಕ ಹಂತದಲ್ಲಿ ತನ್ನ ಸಂಪರ್ಕವನ್ನು ಹೆಚ್ಚು ಮಾಡಿಕೊಳ್ಳುವ ಸಲುವಾಗಿ ಆಗಸ್ಟ್‌ 7 ರಿಂದ ಮುಂಬೈ-ಅಹಮದಾಬಾದ್‌ ಮಾರ್ಗವಾಗಿ ವಾರಕ್ಕೆ ಒಟ್ಟು 28 ವಿಮಾನಗಳ ಹಾರಾಟ ನಡೆಸುವುದಕ್ಕೆ ಈ ಆಕಾಶ ಏರ್‌ ಸಜ್ಜಾಗಿದೆ. ಇದರ ನಂತರ ಅಂದರೆ ಆಗಸ್ಟ್‌ 13 ರಿಂದ ಬೆಂಗಳೂರು-ಕೊಚ್ಚಿ ಮಾರ್ಗವಾಗಿ ಇಲ್ಲಿಯೂ ವಾರಕ್ಕೆ ಒಟ್ಟು 28 ವಿಮಾನಗಳ ಹಾರಾಟಕ್ಕೆ ನಿರ್ಧರಿಸಿದೆ.

ಇದನ್ನೂ ಓದಿ:  Tea Stall: ಬಿಎ, ಬಿಕಾಂ ಟೀ ಸ್ಟಾಲ್ ಈಗ ಫೇಮಸ್! ಗಂಡನ ಕೆಲಸ ಹೋದಾಗ ಶುರುವಾಯ್ತು ಹೊಸ ಬ್ಯುಸಿನೆಸ್

ಪ್ರಯಾಣಿಕರಿಗೆ ಆಕಾಶ ಏರ್‌ ನೀಡುತ್ತಿರುವ ಕೊಡುಗೆಗಳೇನು?
ಆಕಾಶ ಏರ್‌ ಎಲ್ಲ ವಿಮಾನ ಸಂಸ್ಥೆಗಳ ತರಹ ದುಬಾರಿ ಸಂಸ್ಥೆಯಾಗಿರದೇ ಇದು ಕಡಿಮೆ-ವೆಚ್ಚದ ವಿಮಾನಯಾನ ಸಂಸ್ಥೆಯಾಗಿ ವಿಶೇಷ ಸ್ಥಾನ ಪಡೆದಿದೆ. ಇನ್ನು ಈಗ ಆರಂಭಗೊಳ್ಳುತ್ತಿರುವ ಕಾರಣ ಕಡಿಮೆ ದರದ ಜೊತೆ ಸ್ಪರ್ಧೆಗೆ ಇಳಿದಿದೆ. ಅದೇ ದಿನಾಂಕಗಳಲ್ಲಿ ಇತರ ವಿಮಾನಯಾನ ಸಂಸ್ಥೆಗಳ ಪ್ರಯಾಣದ ದರಗಳಿಗೆ ಹೋಲಿಸಿದರೆ, ಈ ಆಕಾಶ ಏರ್‌ ಪ್ರಯಾಣದ ದರಗಳು ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ಸುಮಾರು 500-600 ರಷ್ಟು ಪ್ರಯಾಣ ದರವು ಕಡಿಮೆ ಇದೆ. ಇದಲ್ಲದೇ ಮುಂಗಡವಾಗಿ ತಮ್ಮ ಟಿಕೆಟ್‌ ಅನ್ನು ಭದ್ರಪಡಿಸಿದವರಿಗೆ ಊಟ ಮತ್ತು ತಿಂಡಿಗಳ ಮೆನುವನ್ನು ಸಹ ಈ ಸಂಸ್ಥೆ ನೀಡಲಿದೆ

ಆಕಾಶ ಏರ್‌ ವಿಮಾನ ಸಂಸ್ಥೆಯ ಮುಂದಿನ ಯೋಜನೆಗಳೇನು?
"ಏರ್ ಆಪರೇಟರ್ ಸರ್ಟಿಫಿಕೇಟ್ ಅನುದಾನವು ಡಿಜಿಸಿಎಯಿಂದ ರೂಪಿಸಲಾದ ಸಮಗ್ರ ಮತ್ತು ಕಠಿಣ ಪ್ರಕ್ರಿಯೆಯ ಅಂತಿಮ ಹಂತವಾಗಿದೆ ಮತ್ತು ವಿಮಾನಯಾನ ಕಾರ್ಯಾಚರಣೆಯ ಸಿದ್ಧತೆಗಾಗಿ ಎಲ್ಲಾ ನಿಯಂತ್ರಕ ಮತ್ತು ಅನುಸರಣೆ ಅಗತ್ಯತೆಗಳ ಪೂರ್ಣಗೊಳಿಸಿದ್ದರೆ ಮಾತ್ರ ಅನುಮತಿ ದೊರೆಯುತ್ತದೆ" ಎಂದು ನಿರ್ದೇಶನಾಲಯದ ಏರ್ ಆಪರೇಟರ್ ಸರ್ಟಿಫಿಕೇಟ್ ಪಡೆದಿರುವುದನ್ನು ಉಲ್ಲೇಖಿಸಿ ಆಕಾಶ ಏರ್ ಹೇಳಿದೆ.

ಏವಿಯೇಷನ್ ​​ರೆಗ್ಯುಲೇಟರ್ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(ಡಿಜಿಸಿಎ) ಜುಲೈ 7ರಂದು ಆಕಾಶ ಏರ್‌ಗೆ ಅದರ ಏರ್ ಆಪರೇಟರ್ ಪ್ರಮಾಣಪತ್ರವನ್ನು (ಎಒಸಿ) ನೀಡಿದೆ. ಇದು ವಾಣಿಜ್ಯ ಹಾರಾಟವನ್ನು ಪ್ರಾರಂಭಿಸಲು ಅವಕಾಶ ಮಾಡಿಕೊಟ್ಟಿದೆ. ಆಗಸ್ಟ್‌ನಲ್ಲಿ ಡಿಜಿಸಿಎಯಿಂದ ಗ್ರೀನ್ ಸಿಗ್ನಲ್ ಪಡೆದ ನಂತರ 72 ಮ್ಯಾಕ್ಸ್ ವಿಮಾನಗಳನ್ನು ಖರೀದಿಸಲು ಆಕಾಶ್ ಏರ್ ಕಳೆದ ವರ್ಷ ನವೆಂಬರ್ 26ರಂದು ಬೋಯಿಂಗ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.

2023ರ ಅಂತ್ಯದ ವೇಳೆಗೆ 18 ವಿಮಾನಗಳ ಹಾರಾಟ 2023 ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ, ಆಕಾಶ ಏರ್ 18 ವಿಮಾನಗಳನ್ನು ಮತ್ತು ನಂತರ ಪ್ರತಿ 12 ತಿಂಗಳಿಗೊಮ್ಮೆ 12-14 ವಿಮಾನಗಳನ್ನು ಕಾರ್ಯಾಚರಣೆಗೆ ಸೇರಿಸುವ ಗುರಿ ಹೊಂದಿದೆ, ಮುಂದಿನ ಐದು ವರ್ಷಗಳಲ್ಲಿ 72 ವಿಮಾನಗಳನ್ನು ಪೂರೈಸಲು ಆರ್ಡರ್ ನೀಡಿದೆ. ಎಲ್ಲಾ 72 ವಿಮಾನಗಳು ಬೋಯಿಂಗ್ 737 ಮ್ಯಾಕ್ಸ್, ಸಿಎಫ್‌ಎಂ ಇಂಧನ ದಕ್ಷತೆ, ಲೀಪ್-1ಬಿ ಎಂಜಿನ್‌ಗಳಿಂದ ಚಾಲಿತವಾಗಿದೆ.

ಮಾರುಕಟ್ಟೆ ಉದ್ಯಮದ ಸ್ಪರ್ಧೆ ಆಕಾಶ ಏರ್‌ ವಿಮಾನ ಯಾನ ಸಂಸ್ಥೆಯ ಮೇಲೆ ಹೇಗೆ ಪ್ರಭಾವ ಬೀರಲಿದೆ?
ಆಕಾಶ ಏರ್‌ ಸಂಸ್ಥೆಯು ಈಗ ತಾನೇ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಈಗಾಗಲೇ ಏರ್‌ಲೈನ್‌ ಇಂಡಿಗೋ ದೇಶಿಯ ಮಾರುಕಟ್ಟೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ಬೇರೆ ವಿಮಾನ ಸಂಸ್ಥೆಗಳ ಮಾರುಕಟ್ಟೆಯು ಎರಡನೇ ಸ್ಥಾನದಲ್ಲಿವೆ.

ಇದನ್ನೂ ಓದಿ:  Ram Setu: ರಾಮಸೇತು ರಾಮನೇ ಕಟ್ಟಿದ್ದಾ, ಪ್ರಕೃತಿಯೇ ನಿರ್ಮಿಸಿದ್ದಾ? ಅಪರೂಪದ ಸ್ಥಳ ವಿವಾದವಾಗಿದ್ದೇಕೆ?

ಈಗ ಮಾರುಕಟ್ಟೆಯನ್ನು ಪ್ರವೇಶ ಮಾಡಿರುವ ಆಕಾಶ ಏರ್‌ ವಿಮಾನ ಸಂಸ್ಥೆಯು ಇದರ ಜೊತೆಗೆ, ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವುದರೊಂದಿಗೆ ವಿಮಾನಯಾನ ಸಂಸ್ಥೆಯ ಉದ್ಯಮವು ಒಂದು ಕ್ರಾಂತಿಗೆ ಸಾಕ್ಷಿಯಾಗಿದೆ, ಇನ್ನಿತರ ವಿಮಾನಯಾನ ಸಂಸ್ಥೆಗಳಾದ ಸ್ಪೈಸ್‌ಜೆಟ್‌ ವಿಮಾನ ಯಾನ ಸಂಸ್ಥೆಯು ಹಣಕಾಸಿನ ತೊಂದರೆಗಳು ಮತ್ತು ಇಂಡಿಗೋ ವಿಮಾನ ಯಾನ ಸಂಸ್ಥೆಯು ತನ್ನ ಹಲವಾರು ಉದ್ಯೋಗಿ ವರ್ಗಗಳಿಂದ ಪ್ರತಿಭಟನೆಯ ರಜೆಗಳನ್ನು ಎದುರಿಸುತ್ತಿದೆ.
Published by:Ashwini Prabhu
First published: