ಇತಿಹಾಸದ ಅತಿದೊಡ್ಡ ವಿಮಾನ (Flight) ಒಪ್ಪಂದಕ್ಕೆ ಏರ್ಇಂಡಿಯಾವು ಈಗ ಸಜ್ಜಾಗುತ್ತಿದೆ. ಏರ್ ಇಂಡಿಯಾವು ಶತಕೋಟಿ ಡಾಲರ್ ಮೌಲ್ಯದ ಸುಮಾರು 500 ಜೆಟ್ಲೈನರ್ಗಳನ್ನು ಖರೀದಿ ಮಾಡಲು ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಈ 500 ಹೊಸ ಜೆಟ್ ವಿಮಾನಗಳು ಏರ್ಬಸ್ ಮತ್ತು ಬೋಯಿಂಗ್ ಕಾರ್ಪೋರೆಷನ್ ಎರಡರಿಂದಲೂ ಬರಲಿವೆ ಎಂದು ವರದಿಯಾಗಿದೆ (Report). ಈ ಬಗ್ಗೆ ಕೆಲವೊಂದಿಷ್ಟು ವಿವರಗಳನ್ನು ಇಲ್ಲಿ ತಿಳಿಯೋಣ. "ಈ ವರ್ಷದ ಜನವರಿಯಲ್ಲಿ ಏರ್ಇಂಡಿಯಾವನ್ನು ಸ್ವಾಧೀನಪಡಿಸಿಕೊಂಡ ಕಾಂಗ್ಲೋಮೆರೇಟ್ ಟಾಟಾ ಗ್ರೂಪ್ ಈಗ ಏರ್ಲೈನ್ ವ್ಯವಸ್ಥೆಯನ್ನು (Systems) ದೊಡ್ಡ ಪ್ರಮಾಣದಲ್ಲಿ ಅಭಿವೃದ್ದಿಯ ಕಡೆಗೆ ನಡೆಸುತ್ತಿರುವುದು ಕಂಡು ಬರುತ್ತಿದೆ. ಇದರಡಿಯಲ್ಲಿ ಈಗ ಸಂಸ್ಥೆಯು 500 ಜೆಟ್ ವಿಮಾನಗಳ ಖರೀದಿಯ ಒಪ್ಪಂದವನ್ನು ಅಂತಿಮಗೊಳಿಸಲಾಗುತ್ತಿದೆ” ಎಂದು ವರದಿಗಳು ಹೇಳುತ್ತಿವೆ.
ಆದರೆ ಈ ಒಪ್ಪಂದದ ಕುರಿತು ಏರ್ಬಸ್, ಬೋಯಿಂಗ್, ಮತ್ತು ಟಾಟಾ ಗ್ರೂಪ್ ಕಂಪನಿಗಳು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಈ ಒಪ್ಪಂದ ಗೌಪ್ಯವಾಗಿರುವುದರಿಂದ ಸಂಸ್ಥೆ ಈ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.
“ಏರ್ ಇಂಡಿಯಾವು ಏರ್ಬಸ್ ಕಂಪನಿಯ ಎಸ್ಇ ಯ A350 ಮತ್ತು ಬೋಯಿಂಗ್ ಕಂಪನಿಯ 787s ಮತ್ತು 777s ಗಳು ಸೇರಿದಂತೆ 400 ಸಣ್ಣ ಜೆಟ್ಗಳು ಮತ್ತು 100 ಅಥವಾ ಅದಕ್ಕಿಂತ ಹೆಚ್ಚು ವೈಡ್ ಬಾಡಿ ಇರುವ ಜೆಟ್ ವಿಮಾನಗಳನ್ನು ಖರೀದಿ ಮಾಡಲು ಮುಂದಾಗಿದೆ” ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ಹೇಳಿದೆ.
ಇದು ದೊಡ್ಡ ಒಪ್ಪಂದವೇಕೆ ಆಗಿದೆ?
ಈ ಒಪ್ಪಂದವನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಿದಾಗ ತಿಳಿದು ಬರುವ ಮುಖ್ಯ ವಿಷಯವೇನೆಂದರೆ ಇಂತಹ ಅತಿ ದೊಡ್ಡ ಒಪ್ಪಂದಕ್ಕೆ ಸಜ್ಜಾಗುತ್ತಿರುವ ಏರ್ಲೈನ್ಗಳ ಪಟ್ಟಿಯಲ್ಲಿ ಇದು ಅಗ್ರ ಶ್ರೇಣಿಯಲ್ಲಿ ನಿಲ್ಲುತ್ತದೆ.
ಇವುಗಳ ಖರೀದಿಗೆ ಬಹುತೇಕ ಅಂದಾಜು 100 ಬಿಲಿಯನ್ ಡಾಲರ್ ಗಳಷ್ಟು ಹಣ ವ್ಯಯವಾಗುವ ಸಂಭವ ಇದೆ. ಇಂತಹ ಒಂದು ಒಪ್ಪಂದವನ್ನು ಈ ಹಿಂದೆ ಅಮೇರಿಕಾವು ಮಾಡಿಕೊಂಡಿತ್ತು. ಅಮೇರಿಕಾ ಏರ್ಲೈನ್ಸ್ 460 ಏರ್ಬಸ್ ಮತ್ತು ಬೋಯಿಂಗ್ ಜೆಟ್ಗಳಿಗೆ ಆರ್ಡ್ರ್ ಮಾಡಿತ್ತು. ಇದೀಗ ಆ ದಾಖಲೆಯನ್ನು ಇಂಡಿಯನ್ ಏರ್ಲೈನ್ಸ್ ಮೀರಿಸಿದೆ ಎಂದು ಹೇಳಬಹುದಾಗಿದೆ. ಆದ್ದರಿಂದ ಇದನ್ನು ಬಿಗ್ ಡಿಲ್ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕೆಜಿಎಫ್ ಅನ್ನೇ ಮೀರಿಸುವಷ್ಟು ಚಿನ್ನ ಇಲ್ಲಿದ್ಯಂತೆ! ಈ ಅಣೆಕಟ್ಟಿನೊಳಗೇ ಹುದುಗಿದೆಯಾ ಸಂಪತ್ತು?
ಕೆಲವು ವಿಶ್ಲೇಷಕರ ಪ್ರಕಾರ “ಟಾಟಾ ಗ್ರೂಪ್ ಅವರು ಯಾವುದೇ ಡಿಸ್ಕೌಂಟ್ ಇಲ್ಲದೇ ಈ ಒಪ್ಪಂದಕ್ಕೆ ಸಹಿ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ.ಇದು ನಿಜವೇ ಆದರೂ ಸಹ ಈ ಒಪ್ಪಂದವು ಖಂಡಿತವಾಗಿಯೂ ಹತ್ತಾರು ಶತಕೋಟಿ ಡಾಲರ್ಗಳ ಮೌಲ್ಯದ್ದಾಗಿದೆ ಮತ್ತು ಉದ್ಯಮದಲ್ಲಿ ಇದು ಅತ್ಯಂತ ದೊಡ್ಡ ಒಪ್ಪಂದವೇ ಆಗಿದೆ” ಎಂದು ಹೇಳುತ್ತಿದ್ದಾರೆ.
ಅಲ್ಲದೆ, ಟಾಟಾದ ಏರ್ ಇಂಡಿಯಾ ಮತ್ತು ವಿಸ್ತಾರಾವು ವಿಲೀನದ ಘೋಷಣೆಯ ಕೆಲವೇ ವಾರಗಳಲ್ಲಿ ಈ ದೊಡ್ಡ ಡೀಲ್ನ ಕುರಿತು ವರದಿ ಆಗುತ್ತಿವೆ.
ಈ ಒಪ್ಪಂದದ ಪ್ರಮುಖ ಉದ್ದೇಶವೆಂದರೆ ದೊಡ್ಡ ಪೂರ್ಣ-ಸೇವಾ ವಾಹಕವನ್ನು ರಚಿಸಲು ಮತ್ತು ದೇಶೀಯ ಮತ್ತು ಅಂತಾರಾಷ್ಟ್ರೀಯ ಏರ್ಲೈನ್ಸ್ನಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವುದಾಗಿದೆ. ಇದು ಸಿಂಗಾಪುರ್ ಏರ್ಲೈನ್ಸ್ (SIA) ಜೊತೆಗಿನ ಜಂಟಿ ಉದ್ಯಮವಾಗಿದೆ.
ವಿಸ್ತಾರಾ ಒಪ್ಪಂದವು ಟಾಟಾಗೆ 218 ವಿಮಾನಗಳ ಸಮೂಹವನ್ನು ನೀಡಿತು. ಇದು ಏರ್ ಇಂಡಿಯಾವನ್ನು ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ವಾಹಕವನ್ನಾಗಿ ಮಾಡಿತು. ಈಗ ಉದ್ಯಮದಲ್ಲಿ ದೊಡ್ಡ ಕಂಪನಿಯಾಗಿ ಇಂಡಿಗೋ ಕಾರ್ಯ ನಿರ್ವಹಿಸುತ್ತಿದೆ. ತದನಂತರ ಈ ಸ್ಥಾನವನ್ನು ಏರ್ ಇಂಡಿಯಾ ಪಡೆಯುತ್ತದೆ ಎಂದು ಹೇಳಲಾಗುತ್ತಿದೆ.
ಏರ್ಲೈನ್ಸ್ ವಲಯದಲ್ಲಿ ಇದು ಅಸ್ಥಿರ ವರ್ಷವೇಕೆ?
ಕೋವಿಡ್-19 ನಂತರ ಜನರು ಮತ್ತೆ ವಿಮಾನದಲ್ಲಿ ಪ್ರಯಾಣವನ್ನು ಪ್ರಾರಂಭಿಸಿದ್ದರೂ ಸಹ, ವಾಯುಯಾನ ಉದ್ಯಮವು ನಿರಂತರವಾಗಿ ಹೆಚ್ಚುತ್ತಿರುವ ಕೈಗಾರಿಕಾ ಮತ್ತು ಪರಿಸರ ಒತ್ತಡಗಳನ್ನು ಎದುರಿಸುತ್ತಿದೆ. ಅದಕ್ಕೆ ಈ ವರ್ಷವನ್ನು ಅಸ್ಥಿರ ವರ್ಷ ಎಂದು ವಾಯುಯಾನದಲ್ಲಿ ಕರೆಯಲಾಗುತ್ತಿದೆ.
ವಿಸ್ತಾರಾ ಒಪ್ಪಂದದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಸಿಂಗಾಪುರ್ ಏರ್ಲೈನ್ಸ್ (SIA) ಮತ್ತು ಟಾಟಾ ಸನ್ಸ್ ಅವರು ಏರ್ ಇಂಡಿಯಾ ಮತ್ತು ವಿಸ್ತಾರಾವನ್ನು ವಿಲೀನಗೊಳಿಸಲು ಒಪ್ಪಿಕೊಂಡಿದ್ದಾರೆ ಎಂದು ನವೆಂಬರ್ 29 ರಂದು ಘೋಷಿಸಿದರು.
2024 ರ ಮಾರ್ಚ್ ವೇಳೆಗೆ ವಿಸ್ತಾರಾ ಏರ್ಲೈನ್ಸ್ ಅನ್ನು ಟಾಟಾ ಒಡೆತನದ ಏರ್ ಇಂಡಿಯಾದೊಂದಿಗೆ ವಿಲೀನಗೊಳಿಸಲಾಗುವುದು ಎಂದು ಸಿಂಗಾಪುರ್ ಏರ್ಲೈನ್ಸ್ ಹೇಳಿದೆ.
ಇದು ಟಾಟಾ ಜೊತೆಗಿನ ಜಂಟಿ ಉದ್ಯಮದಲ್ಲಿ ವಿಸ್ತಾರಾದಲ್ಲಿ ಹೆಚ್ಚಿನ ಪಾಲನ್ನು ಹೊಂದಿದೆ. ಈಗ ವೀಲಿನ ಪ್ರಕ್ರಿಯೆ ಮೂಲಕ ಏರ್ ಇಂಡಿಯಾ ಬೇಸ್ ಅನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆ ಇದೆ. ಸಿಂಗಾಪೂರ್ ಏರ್ಲೈನ್ಸ್, ಈ ವಿಸ್ತೃತ ಕಂಪನಿಯ ಸುಮಾರು ಶೇ 25 ರಷ್ಟನ್ನು ಹೊಂದಿದ್ದು, ಅದು ರೂ. 2,058.5 ಕೋಟಿಗೂ ಹೆಚ್ಚು ಹಣವನ್ನು ಹೂಡಲಿದೆ.
ಪ್ರಸ್ತುತ ಇದು ವಿಸ್ತಾರಾದ ಶೇಕಡಾ 51 ರಷ್ಟು ಮಾಲೀಕತ್ವವನ್ನು ಹೊಂದಿದೆ, ಆದರೆ ಶೇಕಡಾ 49 ರಷ್ಟು ಟಾಟಾ ಜೊತೆಯಲ್ಲಿದೆ. ಈ ವರ್ಷದ ಆರಂಭದಲ್ಲಿ ಸರ್ಕಾರಿ ಹೂಡಿಕೆಯ ಭಾಗವಾಗಿ ಏರ್ ಇಂಡಿಯಾವನ್ನು ಟಾಟಾ ರೂ. 18,000 ಕೋಟಿಗೆ ಖರೀದಿಸಿತು.
ಏರ್ ಇಂಡಿಯಾ ಗ್ರೂಪ್ನಲ್ಲಿ ಏರ್ ಇಂಡಿಯಾ, ವಿಸ್ತಾರಾ, ಏರ್ ಏಷ್ಯಾ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಏರ್ಲೈನ್ಸ್ಗಳನ್ನು ಸಹ ಹೊಂದಿರುತ್ತದೆ. ಏರ್ ಇಂಡಿಯಾ ಗ್ರೂಪ್ ಎಲ್ಲಾ ಏರ್ಲೈನ್ಗಳ ವಿಲೀನದ ಪ್ರಕ್ರಿಯೆಯನ್ನು ಮಾರ್ಚ್ 2024 ರೊಳಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ.
ಏರ್ ಇಂಡಿಯಾ ಗ್ರೂಪ್ ಈಗಾಗಲೇ ಏರ್ ಇಂಡಿಯಾ ಎಕ್ಸ್ಪ್ರೆಸ್ ಮತ್ತು ಏರ್ ಏಷ್ಯಾ ಇಂಡಿಯಾವನ್ನು ಒಂದು ಘಟಕವಾಗಿ ವಿಲೀನಗೊಳಿಸುವ ಪ್ರಕ್ರಿಯೆಯಲ್ಲಿದೆ. ಇದು ಕಡಿಮೆ-ವೆಚ್ಚದ ವಿಮಾನ ಆಯ್ಕೆಗಳನ್ನು ಒದಗಿಸುತ್ತದೆ ಎಂದು ಸಂಸ್ಥೆ ಹೇಳಿದೆ.
ಆರಂಭದಲ್ಲಿ ಏರ್ ಇಂಡಿಯಾವನ್ನು ಟಾಟಾ ಕಂಪನಿಯೇ ಸ್ಥಾಪಿಸಿತ್ತು, ಆದರೆ ರಾಷ್ಟ್ರೀಕರಣದ ನಂತರ ಸರ್ಕಾರವು ಇದನ್ನು ಸ್ವಾಧೀನಕ್ಕೆ ತೆಗೆದುಕೊಂಡಿತ್ತು, ಆದರೆ ಇದು ನಷ್ಟದ್ದಲ್ಲಿದಿದ್ದರಿಂದಾಗಿ ಪುನಃ ಇದನ್ನು ಸರ್ಕಾರ ಟಾಟಾ ಕಂಪನಿಗೆ ಮಾರಾಟ ಮಾಡಿತು.
ಟಾಟಾ ಗ್ರೂಪ್ನ ಈ ನಿರ್ಧಾರದ ತಂತ್ರವೇನು?
ಏರ್ ಇಂಡಿಯಾದ 500 ಜೆಟ್ಗಳ ಹೊಸ ಆರ್ಡರ್ ಬಗ್ಗೆ ನೋಡಿದಾಗ, 500 ಜೆಟ್ ವಿಮಾನಗಳನ್ನು ಪಡೆಯಲು ಕನಿಷ್ಠ ಒಂದು ದಶಕವೇ ಹಿಡಿಯಬಹುದು.
ಹಿಂದಿನ ವಿಸ್ತಾರಾ ಒಪ್ಪಂದದ ಜೊತೆಗೆ, ಟಾಟಾ ಗ್ರೂಪ್ ಭಾರತಕ್ಕೆ ಮತ್ತು ಭಾರತದಿಂದ ಬರುವ ಸಂಚಾರದ ಪ್ರಮುಖ ಪಾಲನ್ನು ಮರಳಿ ಪಡೆಯಲು ಎಚ್ಚರಿಕೆಯಿಂದ ಈ ಯೋಜನೆಯನ್ನು ಮಾಡಿದೆ ಎಂದು ಕಾಣಿಸುತ್ತದೆ. ಪ್ರಸ್ತುತ ಎಮಿರೇಟ್ಸ್ನಂತಹ ವಿದೇಶಿ ಏರ್ಲೈನ್ಸ್ಗಳು ಹೆಚ್ಚು ಪ್ರಾಬಲ್ಯ ಹೊಂದಿವೆ.
ಇದರೊಂದಿಗೆ, ಏರ್ ಇಂಡಿಯಾವು ಪ್ರಾದೇಶಿಕ ಅಂತರಾಷ್ಟ್ರೀಯ ಟ್ರಾಫಿಕ್ ಮತ್ತು ದೇಶೀಯ ಮಾರುಕಟ್ಟೆಯ ಹೆಚ್ಚಿನ ಪಾಲನ್ನು ಪಡೆಯುವ ಇಚ್ಛೆಯನ್ನು ಹೊಂದಿದೆ ಎಂದು ತಿಳಿಯುತ್ತದೆ.
ಈ ಒಪ್ಪಂದದ ಪರಿಣಾಮಗಳೇನು?
ವಿಶ್ವದಲ್ಲಿ ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಮಾರುಕಟ್ಟೆಯಾಗಿದೆ. 500 ಹೊಸ ಜೆಟ್ಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ ಮತ್ತು ವಿಸ್ತರಿಸುತ್ತವೆ.
ಅದರ ಜೊತೆಗೆ ಹೆಚ್ಚು ಹೆಚ್ಚು ಭಾರತೀಯರು ವಿಮಾನಯಾನವನ್ನು ಕೈಗೆಟುಕುವ ಮತ್ತು ಅನುಕೂಲಕರ ಪ್ರಯಾಣದ ಆಯ್ಕೆಯಾಗಿ ನೋಡುತ್ತಿರುವಾಗ ಗ್ರಾಹಕರ ಇಚ್ಛೆಯನ್ನು ಪೂರ್ಣಗೊಳಿಸುವುದು ಮುಖ್ಯವಾಗುತ್ತದೆ.
ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ತಮ್ಮ ಸರ್ಕಾರದ ಗುರಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಆಗಾಗ ಮಾತನಾಡುತ್ತಲೇ ಇರುತ್ತಾರೆ. ಅದಕ್ಕೂ ಸಹ ಈ ಒಪ್ಪಂದವು ಕೊಡುಗೆಯನ್ನು ನೀಡುತ್ತದೆ.
ಈ ಒಪ್ಪಂದಕ್ಕೆ ಇರುವ ಅಡೆತಡೆಗಳೇನು?
ಯಾವುದೇ ಒಪ್ಪಂದವಿದ್ದರೂ ಸಹ ಅದಕ್ಕೂ ಕೆಲವು ಅಡೆ ತಡೆಗಳು ಇದ್ದೇ ಇರುತ್ತವೆ. ಮತ್ತೆ ಜಾಗತಿಕವಾಗಿ ಮೊದಲ ಸ್ಥಾನದಲ್ಲಿ ಇರಲು ಬಯಸುವ ಏರ್ ಇಂಡಿಯಾದ ಮಹತ್ವಾಕಾಂಕ್ಷೆಯ ಹಾದಿಯಲ್ಲಿ ನಿಂತಿರುವ ವಿವಿಧ ಅಡೆತಡೆಗಳ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.
ಇವುಗಳಲ್ಲಿ ಪ್ರಮುಖವಾದ ಅಡೆತಡೆಗಳೆಂದರೆ- ದುರ್ಬಲವಾದ ದೇಶೀಯ ಮೂಲಸೌಕರ್ಯ, ಪೈಲಟ್ ಕೊರತೆ ಮತ್ತು ಗಲ್ಫ್ ದೇಶಗಳು ಮತ್ತು ಇತರ ದೇಶಗಳ ಏರ್ಲೈನ್ಸ್ಗಳೊಂದಿಗೆ ಕಠಿಣ ಸ್ಪರ್ಧೆಯ ಬೆದರಿಕೆಯೂ ಕೂಡ ಸೇರಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ