Explained: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆಗಿರೋದ್ರಿಂದ ಕಾಶ್ಮೀರದ ಉಗ್ರ ಸಂಘಟನೆಗಳು ಪ್ರಬಲಗೊಳುತ್ತವಾ?

ತಜ್ಞರು ವಿಶ್ಲೇಷಿಸಿರುವ ಮಾಹಿತಿಯ ಪ್ರಕಾರ ಭಾರತಕ್ಕೂ ಉಗ್ರರಿಂದ ಸಂಚಕಾರ ಉಂಟಾಗಲಿದ್ದು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನಿಂದಾಗಿ ಹಾನಿಗೊಳಗಾಗಲಿರುವ ದೇಶಗಳ ಪಟ್ಟಿಯಲ್ಲಿ ಭಾರತ ಕೂಡ ಸೇರಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

Afghanistan: ತಾಲಿಬಾನಿಗಳು (Taliban) ಇದೀಗ ಅಫ್ಘಾನಿಸ್ತಾನದ ಮೇಲೆ ಪೂರ್ಣ ಪ್ರಾಬಲ್ಯವನ್ನು ಪಡೆದುಕೊಂಡಿದ್ದು ಅಲ್ಲಿನ ಪ್ರಜೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ತಮ್ಮ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವವರನ್ನು ಅಮಾನುಷವಾಗಿ ಬರ್ಬರವಾಗಿ ಹತ್ಯೆಗೈಯ್ಯುತ್ತಿದ್ದಾರೆ. ಇದೀಗ ಒಂದೊಂದೇ ದೇಶವನ್ನು ತಾಲಿಬಾನಿಗಳು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಯೋಜನೆಯನ್ನು ಹೊಂದಿದ್ದು ಈ ಸಂಘಟನೆಗಳಿಗೆ ಚೀನಾ ಹಾಗೂ ಪಾಕಿಸ್ತಾನ ದೇಶಗಳ ಬೆಂಬಲ ದೊರಕುತ್ತಿದೆ ಎನ್ನಲಾಗಿದೆ. ಅಫ್ಘಾನ್ ನೆಲದಲ್ಲಿ ತಾಲಿಬಾನಿಗಳ ಅಟ್ಟಹಾಸ ಮತ್ತೊಮ್ಮೆ ವಿಜೃಂಭಿಸಿದ್ದು ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆದು ಓಡಿಹೋಗಿದ್ದಾರೆ. ಹೀಗಾಗಿ ತಾಲಿಬಾನಿಗಳಿಗೆ ಮತ್ತಷ್ಟು ಬಲ ಬಂದಿದ್ದು 20 ವರ್ಷಗಳಿಂದ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ಪ್ರಯತ್ನದಲ್ಲಿದ್ದ ಅಲ್ಲಿನ ಪ್ರಜೆಗಳಿಗೆ ತೀವ್ರ ಹಿನ್ನಡೆ ಉಂಟಾಗಿದೆ. ತಜ್ಞರು ವಿಶ್ಲೇಷಿಸಿರುವ ಮಾಹಿತಿಯ ಪ್ರಕಾರ ಭಾರತಕ್ಕೂ ಉಗ್ರರಿಂದ ಸಂಚಕಾರ ಉಂಟಾಗಲಿದ್ದು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನಿಂದಾಗಿ ಹಾನಿಗೊಳಗಾಗಲಿರುವ ದೇಶಗಳ ಪಟ್ಟಿಯಲ್ಲಿ ಭಾರತ ಕೂಡ ಸೇರಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.


ಭಾರತ ಹಾಗೂ ಅಫ್ಘಾನಿಸ್ತಾನದ ಸಂಬಂಧಗಳು ಇದರಿಂದ ಬದಲಾಗುವ ಅಂಶಗಳು ನಿಚ್ಚಳವಾಗಿ ಕಾಣುತ್ತಿದ್ದು ಅಪ್ಘಾನಿಸ್ತಾನದ ಅಭಿವೃದ್ಧಿಗೆ ಭಾರತ ವ್ಯಯಿಸಿರುವ ಖರ್ಚುವೆಚ್ಚಗಳ ಸ್ಥಿತಿಗತಿ ಏನು? ಚಾಬ್‌ಹರ್ ಯೋಜನೆ ಏನಾಗಬಹುದು? ಜೈಶ್ ಹಾಗೂ ಲಷ್ಕರ್‌ನಂತಹ ಉಗ್ರ ಸಂಘಟನೆಗಳು ಭಾರತದಲ್ಲಿ ಮತ್ತೆ ಪ್ರಾಬಲ್ಯ ಸ್ಥಾಪಿಸಬಹುದೇ ಮೊದಲಾದ ಸಂದೇಹಗಳು ತಲೆದೋರಿದೆ.


ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಪ್ರಾಬಲ್ಯ ನಡೆಸಿದರೆ ಭಾರತದ ಮೇಲೆ ಉಂಟಾಗುವ ಪರಿಣಾಮವೇನು?


ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ನ ಕಬೀರ್ ತನೇಜಾ ಹೇಳುವಂತೆ ಮೇಲ್ನೋಟದಲ್ಲಿ ಭಾರತದ ಮೇಲೆ ಯಾವುದೇ ಮಹತ್ವದ ಪರಿಣಾಮ ಉಂಟಾಗುವುದಿಲ್ಲ. ಭಾರತ ಪರ ಅಥವಾ ವಿರೋಧದ ಕುರಿತಾಗಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಹಾಗಾಗಿ ಭಾರತ ಪ್ರಸ್ತುತ ಬದಲಾವಣೆಗಳನ್ನು ಕಾದು ನೋಡಬೇಕಾಗಿದೆ.


ಇದನ್ನೂ ಓದಿ: 50 ವರ್ಷಗಳ ಹಿಂದೆ ಅಲ್ಲಿನ ಹೆಣ್ಣುಮಕ್ಕಳು ಮಿನಿಸ್ಕರ್ಟ್ ಹಾಕಿಕೊಂಡು ಓಡಾಡ್ತಿದ್ರು, ಹೇಗಿತ್ತು ಗೊತ್ತಾ ತಾಲಿಬಾನ್ ಮುಂಚಿನ ಅಫ್ಘಾನಿಸ್ತಾನ?

ಮುಂದಿನ ದಿನಗಳಲ್ಲಿ ಭಾರತವು ಅಫ್ಘಾನಿಸ್ತಾನದಲ್ಲಿ ಕೆಲವೊಂದು ಕಠಿಣ ಪರಿಸ್ಥಿತಿಗಳಿಗೆ ಸಿಲುಕುವ ಅಪಾಯವೂ ಇದ್ದು ಅಮೆರಿಕಾದೊಂದಿಗೆ ಭಾರತದ ಸಾಮೀಪ್ಯ ಹಾಗೂ ನೀತಿ ತೀರ್ಪಿನಲ್ಲಿನ ಕೆಲವು ಬದಲಾವಣೆಗಳು ಇದಕ್ಕೆ ಕಾರಣವಾಗಲಿವೆ.


20 ವರ್ಷಗಳಲ್ಲಿ ಭಾರತವು ಅಪ್ಘಾನಿಸ್ತಾನದ ಪ್ರಗತಿಗಾಗಿ ಸರಿಸುಮಾರು 500 ಯೋಜನೆಗಳಲ್ಲಿ ಆರ್ಥಿಕ ಸಹಾಯವನ್ನು ಮಾಡಿದೆ ಎನ್ನಲಾಗಿದೆ. ಇದರಲ್ಲಿ ಶಾಲೆ, ಆಸ್ಪತ್ರೆ, ಸಂಸತ್ ಭವನ ಹೀಗೆ ಹತ್ತು ಹಲವು ಯೋಜನೆಗಳು ಒಳಗೊಂಡಿವೆ. ತಾಲಿಬಾನ್ ಆಡಳಿತಕ್ಕೆ ಬಂದ ನಂತರ ಭಾರತಕ್ಕೆ ಸಹಾಯಗಳು ಸ್ಥಗಿತಗೊಳ್ಳಬಹುದು. ಅದೇ ರೀತಿ ಅಪ್ಘಾನಿಸ್ತಾನದ ಪ್ರಗತಿಯೂ ನಿಲ್ಲಬಹುದು ಎನ್ನಲಾಗಿದೆ.


ಅಪ್ಘಾನಿಸ್ತಾನದಲ್ಲಿ ಭಾರತ ಮಾಡಿರುವ ಹೂಡಿಕೆ ಏನಾಗುತ್ತದೆ?


ಕಬೀರ್ ತನೇಜಾ ಹೇಳುವಂತೆ ಅಪ್ಘಾನಿಸ್ತಾನದಲ್ಲಿ ಭಾರತ ಹೂಡಿಕೆ ಮಾಡಿಲ್ಲ ಬದಲಾಗಿ ದೇಶದ ಪ್ರಗತಿಗೆ ಆರ್ಥಿಕ ನೆರವು ನೀಡಿದೆ ಎಂದು ತಿಳಿಸಿದ್ದಾರೆ. ಭಾರತವು ಖರ್ಚು ಮಾಡಿದ 3 ಬಿಲಿಯನ್ ಹಣವು ಹಿಂತಿರುಗುವ ಯಾವುದೇ ಸಾಧ್ಯತೆ ಇಲ್ಲವಾದರೂ ಅಲ್ಲಿನ ಪ್ರಜೆಗಳಿಗೂ ಈ ಪ್ರಗತಿಯಿಂದ ಉಪಕಾರವಾಗುವುದಿಲ್ಲ ಎಂಬುದು ಖೇದಕರ ಸಂಗತಿಯಾಗಿದೆ ಎಂದು ತನೇಜಾ ಅಭಿಪ್ರಾಯ ನೀಡುತ್ತಾರೆ.


ಇದನ್ನೂ ಓದಿ: Afghanistan: ದೇಶ ಕಬಳಿಸಿ ಒಂದು ದಿನವೂ ಆಗಿಲ್ಲ, ಆಗಲೇ ತಾಲಿಬಾನಿಗಳ ಮೋಜು ಮಸ್ತಿ ಜೋರು!

ಅಫ್ಘಾನಿಸ್ತಾನದಲ್ಲಿ ದೊಡ್ಡ ದೊಡ್ಡ ಯೋಜನೆಗಳಿಗೆ ಭಾರತ ಆರ್ಥಿಕ ನೆರವನ್ನು ನೀಡಿದ್ದರೂ ತಾಲಿಬಾನ್ ಇವುಗಳನ್ನು ಹಾಳುಗೆಡವುದಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದ ಅಂಶವಾಗಿದೆ. ಆದರೆ ಜನರಿಗೆ ಈ ಸೌಲಭ್ಯಗಳು ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ, ಅಫ್ಘಾನಿಸ್ತಾನದಲ್ಲಿ ಚೀನಾ ಮತ್ತು ಪಾಕಿಸ್ತಾನದ ಹಸ್ತಕ್ಷೇಪ ಹೆಚ್ಚಾಗುತ್ತದೆ ಎಂದು ಕೆಲವು ತಜ್ಞರು ಹೇಳುತ್ತಾರೆ. ಈ ಎರಡೂ ದೇಶಗಳು ಅಫ್ಘಾನಿಸ್ತಾನದಲ್ಲಿ ಭಾರತದ ಹಸ್ತಕ್ಷೇಪವನ್ನು ತಡೆಯಲಿದೆ ಎಂಬುದು ನಿಚ್ಚಳವಾಗಿ ಕಂಡುಬರುತ್ತದೆ.


ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಭಾರತದ ಚಾಬಹಾರ್ ಯೋಜನೆಯ ಅಸ್ತಿತ್ವವೇನು?


ಇರಾನ್‌ನ ಚಬಹಾರ್ ಬಂದರು ಭಾರತವನ್ನು ಅಫ್ಘಾನಿಸ್ತಾನದೊಂದಿಗೆ ಮತ್ತು ಇರಾನ್ ಅನ್ನು ಮಧ್ಯ ಏಷ್ಯಾದ ದೇಶಗಳೊಂದಿಗೆ ಸಂಪರ್ಕಿಸುತ್ತದೆ. ಈ ಯೋಜನೆಯ ಮೂಲಕ ಅಫ್ಘಾನಿಸ್ತಾನದೊಂದಿಗೆ ನೇರ ವ್ಯಾಪಾರ ಮಾರ್ಗವನ್ನು ಮಾಡಲು ಭಾರತ ಬಯಸಿದೆ. ಈ ಯೋಜನೆಗಳ ಭವಿಷ್ಯ ಏನೆಂದು ಈಗ ಹೇಳುವುದು ತುಂಬಾ ಕಷ್ಟ, ಆದರೆ ಮುಂಬರುವ ವರ್ಷಗಳು ಭಾರತಕ್ಕೆ ಸುಲಭವಾಗುವುದಿಲ್ಲ ಎಂದು ತನೇಜಾ ಹೇಳುತ್ತಾರೆ.


ಜೈಶ್ ಮತ್ತು ಲಷ್ಕರ್‌ನಂತಹ ಸಂಘಟನೆಗಳು ಭಾರತದಲ್ಲಿ, ವಿಶೇಷವಾಗಿ ಕಾಶ್ಮೀರದಲ್ಲಿ, ತಾಲಿಬಾನ್ ಆಗಮನದೊಂದಿಗೆ ಮತ್ತೆ ಸಕ್ರಿಯವಾಗಬಹುದೇ?


ಮುಲ್ಲಾ ಬರದಾರ್ ಅಫ್ಘಾನಿಸ್ತಾನದ ಅಧಿಕಾರದಲ್ಲಿ ಪ್ರಮುಖ ಸ್ಥಾನವನ್ನು ಪಡೆಯುತ್ತಾರೆಯೇ ಎಂದು ನೋಡಬೇಕು. ಬರದಾರ್ ಹಲವು ವರ್ಷಗಳಿಂದ ಪಾಕಿಸ್ತಾನದ ಜೈಲಿನಲ್ಲಿ ಸೆರೆಯಾಗಿದ್ದು ಆತನಿಗೆ ಪಾಕಿಸ್ತಾನದ ಬಲವಾದ ಬೆಂಬಲವಿದೆ. ಇಂತಹ ಪರಿಸ್ಥಿತಿಯಲ್ಲಿ, ಜೈಶ್ ಮತ್ತು ಲಷ್ಕರ್‌ನಂತಹ ಸಂಘಟನೆಗಳು ಅಫ್ಘಾನಿಸ್ತಾನಕ್ಕೆ ಬಂದು ತರಬೇತಿ ಪಡೆಯಲು ಬಯಸಿದರೆ, ಅದು ಸುಲಭದಲ್ಲಿ ಸಾಧ್ಯವಾಗುತ್ತದೆ. ತಾಲಿಬಾನ್ ಹೋರಾಟಗಾರರು ಅಮೆರಿಕ ಮತ್ತು ನ್ಯಾಟೋ ದೇಶಗಳೊಂದಿಗೆ ಯುದ್ಧದ ಸುದೀರ್ಘ ಅನುಭವವನ್ನು ಹೊಂದಿದ್ದಾರೆ, ಆದ್ದರಿಂದ ಅವರು ಅದರಿಂದ ಪ್ರಯೋಜನ ಪಡೆಯುತ್ತಾರೆ. ಈ ಎಲ್ಲಾ ಸನ್ನಿವೇಶಗಳು ಭಾರತಕ್ಕೆ ಗಂಭೀರ ಬೆದರಿಕೆಯನ್ನು ಒಡ್ಡಬಹುದು. ಇದು ಭವಿಷ್ಯದಲ್ಲಿ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು.


ಭಾರತ ಈ ಸವಾಲುಗಳನ್ನು ಹೇಗೆ ಎದುರಿಸಲಿದೆ?


ಈ ಸವಾಲುಗಳನ್ನು ಎದುರಿಸಲು ಭಾರತಕ್ಕೆ ಹೆಚ್ಚಿನ ಆಯ್ಕೆಗಳಿಲ್ಲ. ಆದರೂ ತಾಲಿಬಾನ್ ಜೊತೆಗಿನ ಭಾರತದ ಸಂಬಂಧ ಹೇಗೆ ಇರಲಿದೆ ಎಂಬುದನ್ನು ತುರ್ತಾಗಿ ನಿಶ್ವಯಿಸಲೇಬೇಕಾಗಿದೆ. ಭಾರತ ತಾಲಿಬಾನ್ ಅಧಿಪತ್ಯದಲ್ಲಿ ಯಾವ ರೀತಿಯ ನಿರ್ಣಯ ಕೈಗೊಳ್ಳಲಿದೆ ಎಂಬುದನ್ನು ಕೂಡಲೇ ತೀರ್ಮಾನಿಸಬೇಕಾಗಿದ್ದು ರಾಜತಾಂತ್ರಿಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿದೆಯೇ ಎಂಬುದನ್ನು ನಿಶ್ಚಯಿಸಬೇಕಾಗಿದೆ.


ತಾಲಿಬಾನ್ ರೂಪುಗೊಂಡಿದ್ದು ಹೇಗೆ?


ಅಪ್ಘಾನ್ ಗೆರಿಲ್ಲಾ ಹೋರಾಟಗಾರರು 1980 ರ ದಶಕದ ಕೊನೆಯಲ್ಲಿ ಹಾಗೂ 1990 ರ ಆರಂಭದ ದಶಕದಲ್ಲಿ ಸಂಘಟನೆಯನ್ನು ರಚಿಸಿದರು. ಈ ಹೋರಾಟಗಾರರಿಗೆ ಅಮೆರಿಕಾದ ಗುಪ್ತಚರ ಸಂಸ್ಥೆ ಸಿಐಎ ಹಾಗೂ ಪಾಕಿಸ್ತಾನದ ಐಎಸ್‌ಐ ಬೆಂಬಲ ನೀಡಿದ್ದವು.


ಇದನ್ನೂ ಓದಿ: Bank Loan: ಬ್ಯಾಂಕಿನಿಂದ ಲೋನ್ ಬೇಕಾ? ಹಾಗಿದ್ರೆ ಈ ದಾಖಲೆಗಳನ್ನು ರೆಡಿ ಇಟ್ಕೊಳ್ಳಿ.. ಯಾವ ಲೋನ್​ಗೆ ಯಾವ ಡಾಕ್ಯುಮೆಂಟ್ಸ್? ಇಲ್ಲಿದೆ ಫುಲ್ ಡೀಟೆಲ್ಸ್

ಅಫ್ಘಾನ್ ಹೋರಾಟಗಾರರೊಂದಿಗೆ, ಪಾಷ್ಟೋ ಬುಡಕಟ್ಟು ವಿದ್ಯಾರ್ಥಿಗಳೂ ಇದರಲ್ಲಿ ಭಾಗಿಯಾಗಿದ್ದರು. ಈ ಜನರು ಪಾಕಿಸ್ತಾನದ ಮದರಸಾಗಳಲ್ಲಿ ಅಧ್ಯಯನ ಮಾಡುತ್ತಿದ್ದರು. ಪಾಷ್ಟೋದಲ್ಲಿ ವಿದ್ಯಾರ್ಥಿಗಳನ್ನು ತಾಲಿಬಾನ್ ಎಂದು ಕರೆಯಲಾಗುತ್ತದೆ. ಇಲ್ಲಿಂದ ಅವರಿಗೆ ತಾಲಿಬಾನ್ ಎಂಬ ಹೆಸರು ಬಂತು.


ಸೋವಿಯತ್ ಒಕ್ಕೂಟ ಅಫ್ಘಾನಿಸ್ತಾನವನ್ನು ತೊರೆದ ನಂತರ, ಈ ಚಳುವಳಿಗೆ ಅಫ್ಘಾನಿಸ್ತಾನದ ಸಾಮಾನ್ಯ ಜನರ ಬೆಂಬಲ ಸಿಕ್ಕಿತು. ಚಳುವಳಿಯ ಆರಂಭದಲ್ಲಿ, ಅದನ್ನು ನಡೆಸುತ್ತಿದ್ದ ಹೋರಾಟಗಾರರು ಅವರು ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು. ಇದರೊಂದಿಗೆ, ಶರಿಯಾ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
2001 ಕ್ಕಿಂತ ಮೊದಲು, ಅಫ್ಘಾನಿಸ್ತಾನದ 90% ಪ್ರದೇಶವು ತಾಲಿಬಾನ್ ನಿಯಂತ್ರಣದಲ್ಲಿತ್ತು. ಈ ಅವಧಿಯಲ್ಲಿ ಶರಿಯಾ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು. ಮಹಿಳೆಯರಿಗೆ ಬುರ್ಖಾ ಧರಿಸಲು ಆದೇಶಿಸಲಾಯಿತು. ಸಂಗೀತ ಮತ್ತು ಟಿವಿಯನ್ನು ನಿಷೇಧಿಸಿ, ಸಣ್ಣ ಗಡ್ಡ ಹೊಂದಿದ್ದ ಪುರುಷರನ್ನು ಜೈಲಿಗೆ ತಳ್ಳಲಾಯಿತು. ಜನರ ಸಾಮಾಜಿಕ ಅಗತ್ಯಗಳು ಮತ್ತು ಮಾನವ ಹಕ್ಕುಗಳನ್ನು ಸಹ ಕಡೆಗಣಿಸಲಾಯಿತು.


Published by:Soumya KN
First published: