CoronaVirus| ಮುಂಬೈನಲ್ಲಿ ಶೂನ್ಯಕ್ಕಿಳಿದ ಕೊರೋನಾ ಸಾವಿನ ಸಂಖ್ಯೆ; ಈ ಯುದ್ಧದಲ್ಲಿ ಮಹಾನಗರ ಗೆದ್ದದ್ದು ಹೇಗೆ?

ಕೋವಿಡ್ -19 ರ ಮೊದಲ ಮತ್ತು ಎರಡನೇ ಅಲೆಗಳಿಗೆ ಭಾರತ ಸಾಕ್ಷಿಯಾಗುವ ಮುನ್ನವೇ, ಮುಂಬೈ ಸೋಂಕಿನೊಂದಿಗೆ ಯುದ್ಧವನ್ನು ಆರಂಭಿಸಿತ್ತು. ಕಳೆದ ವರ್ಷ ಜೂನ್ 30 ರ ಹೊತ್ತಿಗೆ, ಮುಂಬೈ 4,554 ಸಾವುಗಳನ್ನು ವರದಿ ಮಾಡಿತ್ತು. ಇದು ದೇಶದ ಒಟ್ಟು 16,893 ಸಾವುಗಳಲ್ಲಿ ಶೇ.25 ಕ್ಕಿಂತ ಹೆಚ್ಚು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮುಂಬೈ (ಅಕ್ಟೋಬರ್​ 19); ಕಳೆದ ವರ್ಷ ಭಾರತಕ್ಕೆ ಮಾರಕ ಕೊರೋನಾ (CoronaVirus) ಸಾಂಕ್ರಾಮಿಕ ವ್ಯಾಪಿಸಿದ ಸಂದರ್ಭದಲ್ಲಿ ಮುಂಬೈನಲ್ಲಿ ಈ ಸೋಂಕಿಗೆ ಮೊದಲ ಬಲಿಯಾಗಿದ್ದು,  ಮಾರ್ಚ್ 17, 2020 ರಂದು. ಈ ದಿನ ಮುಂಬೈ (Mumbai) ತನ್ನ ಮೊದಲ ಕೋವಿಡ್ -19 ಸಾವನ್ನು ವರದಿ ಮಾಡಿತ್ತು. ಇಡೀ ದೇಶದಲ್ಲಿ ಅತೀ ಹೆಚ್ಚು ಸೋಂಕು ಪೀಡಿತ ರಾಜ್ಯ ಎಂಬ ಕುಖ್ಯಾತಿಗೂ ಮುಂಬೈ ಒಳಗಾಗಿತ್ತು. ಪರಿಣಾಮ ಮಹಾರಾಷ್ಟ್ರ (Maharashtra) ಸರ್ಕಾರ ಸೋಂಕಿನ ವಿರುದ್ಧ ದೊಡ್ಡ ಹೋರಾಟವನ್ನೇ ಕೈಗೊಂಡಿತ್ತು. ಪರಿಣಾಮ ಕಳೆದ ಮಾರ್ಚ್ 17 ರ ನಂತರ ಮೊದಲ ಅಕ್ಟೋಬರ್​ 17 ರಂದು ಮೊದಲ ಕೊರೋನಾ ವೈರಸ್ ಸಂಬಂಧಿತ ಸಾವು ದಾಖಲಾಗಿದೆ. ಕಳೆದ 6 ತಿಂಗಳಿನಿಂದ ಮುಂಬೈನಲ್ಲಿ ಒಂದೇ ಒಂದು ಸಾವು ದಾಖಲಾಗದೆ ಇರುವುದು ವಿಶೇಷ.

    ಕೊರೋನಾ ಅಲೆ ಆರಂಭವಾದ ಕಳೆದ ಒಂದೂವರೆ ವರ್ಷದಲ್ಲಿ ಮುಂಬೈ 16,180 ಸಾವುಗಳನ್ನು ವರದಿ ಮಾಡಿದೆ. ಕಳೆದ 19 ತಿಂಗಳಲ್ಲಿ ಭಾರತದ ಒಟ್ಟು ಕೋವಿಡ್ -19 ಸಾವುಗಳಲ್ಲಿ ಶೇ.4ರಷ್ಟು ಸಾವುಗಳು ಕೇವಲ ಮುಂಬೈನಲ್ಲಿ ಮಾತ್ರ ದಾಖಲಾಗಿದ್ದವು. ಆದರೆ, ಇದೀಗ ಮುಂಬೈ ನಗರವು ಶೂನ್ಯ ಸಾವಿನ ಮೈಲಿಗಲ್ಲನ್ನು ಸಾಧಿಸಿದ್ದು, ಅದನ್ನು ಹೇಗೆ ಸಾಧಿಸಿದೆ ಎಂಬ ವಿವರ ಇಲ್ಲಿದೆ.



    ದಾಖಲೆ ಬರೆದಿತ್ತು ಕೋವಿಡ್ ಸಾವು:

    ಕೋವಿಡ್ -19 ರ ಮೊದಲ ಮತ್ತು ಎರಡನೇ ಅಲೆಗಳಿಗೆ ಭಾರತ ಸಾಕ್ಷಿಯಾಗುವ ಮುನ್ನವೇ, ಮುಂಬೈ ಸೋಂಕಿನೊಂದಿಗೆ ಯುದ್ಧವನ್ನು ಆರಂಭಿಸಿತ್ತು. ಕಳೆದ ವರ್ಷ ಜೂನ್ 30 ರ ಹೊತ್ತಿಗೆ, ಮುಂಬೈ 4,554 ಸಾವುಗಳನ್ನು ವರದಿ ಮಾಡಿತ್ತು. ಇದು ದೇಶದ ಒಟ್ಟು 16,893 ಸಾವುಗಳಲ್ಲಿ ಶೇ.25 ಕ್ಕಿಂತ ಹೆಚ್ಚು. ಜೂನ್ 2020 ರಲ್ಲಿ ಒಂದೇ ದಿನ 136 ಜನ ಮೃತಪಟ್ಟಿದ್ದರು. ನಗರದಲ್ಲಿ ಒಂದು ದಿನದಲ್ಲಿ ವರದಿಯಾದ ಅತಿ ಹೆಚ್ಚು ಸಾವುಗಳ ದಾಖಲೆ ಬರೆದಿತ್ತು.

    ಕೋವಿಡ್ -19 ರೊಂದಿಗಿನ ಮುಂಬೈ ಯುದ್ಧವು ಎಷ್ಟು ಮಾರಕವಾಗಿತ್ತೆಂದರೆ, ಮೇ 2020 ರಲ್ಲಿ 1,000 ಜನ ಮೃತಪಟ್ಟಿದ್ದರು. ಜುಲೈನಲ್ಲಿ 5,000 ಸಾವುಗಳನ್ನು ದಾಟಿತ್ತು, ಅಕ್ಟೋಬರ್ ಅಂತ್ಯದ ವೇಳೆಗೆ 10,000 ದ ಗಡಿ ದಾಟಿತ್ತು. ಆದಾಗ್ಯೂ, ಜೂನ್ 2021 ರಲ್ಲಿ ನಗರವು 15,000 ಸಾವನ್ನ ಕಂಡಿತ್ತು.ಭಾರತದಲ್ಲಿ ಮೊದಲ ಕೊರೋನಾ ಅಲೆಗೆ ಅಕ್ಟೋಬರ್ ಅಂತ್ಯದ ವೇಳೆಗೆ ದೇಶಾದ್ಯಂತ 1.18 ಲಕ್ಷ ಸಾವುಗಳು ವರದಿಯಾಗಿದ್ದವು.



    ಇದನ್ನೂ ಓದಿ: Covaxin for Children: 2 ರಿಂದ 18 ವರ್ಷದೊಳಗಿನ ಮಕ್ಕಳ ಕೋವ್ಯಾಕ್ಸಿನ್ ಲಸಿಕೆಗೆ SEC ಗ್ರೀನ್ ಸಿಗ್ನಲ್

    ಮುಂಬೈನಲ್ಲಿ ಶೂನ್ಯ ಕೊರೋನಾ ಸಾವಿನ ದಾಖಲೆ:

    ಏಪ್ರಿಲ್ 2021 ರಲ್ಲಿ, ಮುಂಬೈ 1,479 ಸಾವುಗಳನ್ನು ವರದಿ ಮಾಡಿತ್ತು. ಏಕೆಂದರೆ ಸೋಂಕಿನ ಎರಡನೇ ಅಲೆ ಆ ಸಂದರ್ಭದಲ್ಲಿ ಉತ್ತುಂಗಕ್ಕೇರಿತು. ಮೇ ತಿಂಗಳಲ್ಲಿ ನಗರವು 1,700 ಕ್ಕೂ ಹೆಚ್ಚು ಸಾವುಗಳನ್ನು ದಾಖಲಿಸಿದೆ. ಜೂನ್ ತಿಂಗಳಲ್ಲಿ ಮುಂಬೈ 625 ಸಾವುಗಳನ್ನು ಕಂಡಿದ್ದು, ಜುಲೈನಲ್ಲಿ ಈ ಸಂಖ್ಯೆ 438 ಕ್ಕೆ ಇಳಿದಿತ್ತು. ಆದರೆ, ಆಗಸ್ಟ್​ನಲ್ಲಿ ಇನ್ನೂ ಇಳಿದಿದ್ದ ಸಾವಿನ ಸಂಖ್ಯೆ 77 ಸಾವುಗಳೊಂದಿಗೆ ಎರಡು ಅಂಕೆಗಳಿಗೆ ಇಳಿದಿತ್ತು.

    ಇದನ್ನೂ ಓದಿ: Win Prizes - ವ್ಯಾಕ್ಸಿನ್ ಹಾಕಿಸಿಕೊಂಡರೆ ಜನರಿಗೆ ಟಿವಿ ಮೊಬೈಲ್ ಗೆಲ್ಲುವ ಆಫರ್

    ಪ್ರಸ್ತುತ, ಮುಂಬೈನಲ್ಲಿ 5,030 ಸಕ್ರಿಯ ಕೋವಿಡ್ -19 ಪ್ರಕರಣಗಳಿವೆ. ನಗರದ ಚೇತರಿಕೆಯ ದರವು ಶೇ.97 ಆಗಿದ್ದು, ಅಕ್ಟೋಬರ್ 10 ರಿಂದ 16 ರವರೆಗಿನ ಕೊರೋನಾ ವೈರಸ್ ಪ್ರಕರಣಗಳ ಒಟ್ಟಾರೆ ಬೆಳವಣಿಗೆ ದರ ಶೇ.0.06 ಮಾತ್ರ. ದೇಶದಲ್ಲಿ ಎಲ್ಲರಿಗೂ ಲಸಿಕೆ ನೀಡುತ್ತಿರುವ ವೇಗ ಅಧಿಕವಾದ ಹಿನ್ನೆಲೆಯಲ್ಲಿ ದೇಶದಾದ್ಯಂತ ಸಾವಿನ ಸಂಖ್ಯೆ ಇಳಿಮುಖವಾಗುತ್ತಿದೆ. ಮುಂಬೈ ಮಹಾನಗರ ಸಹ ಇದಕ್ಕೆ ಹೊರತಾಗಿಲ್ಲ.
    Published by:MAshok Kumar
    First published: