Taliban| ಅಪಘಾನಿಸ್ತಾನದಲ್ಲಿ ಶತ್ರುಗಳ ಜೊತೆ ಯುದ್ಧವಿಲ್ಲದೇ ತಾಲಿಬಾನಿಗಳು ಏನು ಮಾಡುತ್ತಿದ್ದಾರೆ..?

ತಾಲಿಬಾನಿನ ಪ್ರಾಥಮಿಕ ಶತ್ರುಗಳು ಈಗಾಗಲೇ ದೇಶ ಬಿಟ್ಟು ಹೋಗಿರುವುದರಿಂದ, ತಮ್ಮ ನಿಖರವಾದ ಉದ್ದೇಶ ಏನೆಂಬುವುದನ್ನು ಹೇಳಲು ಸಾಧ್ಯವಾಗದೆ ಆ ಕಮಾಂಡರ್ ಮತ್ತು ಗುಂಪಿನ ಇತರ ನಾಯಕರು ಹೆಣಗಾಡುತ್ತಿದ್ದಾರೆ.

ಜಾಲಿ ಮೂಡ್​ನಲ್ಲಿರುವ ತಾಲಿಬಾನಿಗಳು.

ಜಾಲಿ ಮೂಡ್​ನಲ್ಲಿರುವ ತಾಲಿಬಾನಿಗಳು.

  • Share this:
ಆಗಸ್ಟ್ ತಿಂಗಳ ಮೊದಲಾರ್ಧದಲ್ಲಿ ತಾಲಿಬಾನ್ (Taliban) ಪಡೆಗಳು, ಈ ಹಿಂದಿನ ಅಂತಾರಾಷ್ಟ್ರೀಯ ಬೆಂಬಲಿತ ಅಫ್ಘಾನ್‌ ಸರ್ಕಾರವನ್ನು ಮಿಂಚಿನ ವೇಗದಲ್ಲಿ ಉರುಳಿಸಿದವು. ಈಗ ತಾಲಿಬಾನ್ ಪಡೆಗಳು ಅಫ್ಘಾನಿಸ್ತಾನದಲ್ಲಿ (Afghanistan) “ಬಲವಾದ ಭದ್ರತಾ ಪಡೆಗಳನ್ನು” ನಿರ್ಮಿಸಲು ಬಯಸುತ್ತಿದೆ ಎಂದು ತಾಲಿಬಾನ್ ಕಮಾಂಡರ್ ಡ್ಯೂಟ್ಸ್ಚೆ ವಿಲ್ಲೆ ಸುದ್ದಿಸಂಸ್ಥೆಗೆ ಹೇಳಿದ್ದಾರೆ. ಅದೇನೇ ಇದ್ದರೂ, ತಾಲಿಬಾನಿನ ಪ್ರಾಥಮಿಕ ಶತ್ರುಗಳು ಈಗಾಗಲೇ ದೇಶ ಬಿಟ್ಟು ಹೋಗಿರುವುದರಿಂದ, ತಮ್ಮ ನಿಖರವಾದ ಉದ್ದೇಶ ಏನೆಂಬುವುದನ್ನು ಹೇಳಲು ಸಾಧ್ಯವಾಗದೆ ಆ ಕಮಾಂಡರ್ ಮತ್ತು ಗುಂಪಿನ ಇತರ ನಾಯಕರು ಹೆಣಗಾಡುತ್ತಿದ್ದಾರೆ.

“ವಿಶೇಷ ತಾಲಿಬಾನ್ ಪಡೆಗಳನ್ನು ಸ್ಥಾಪನೆ ಆಗಿದ್ದು ಕೇವಲ ಹಿಂದಿನ ಸರಕಾರದ ವಿರುದ್ಧ ಹೋರಾಡಲು ಮಾತ್ರವಲ್ಲ, ಡಾಯಿಶ್‌ನಂತಹ [ಡಾಯಿಶ್ , ಸ್ವಯಂ ಘೋಷಿತ ಇಸ್ಲಾಮಿಕ್ ರಾಜ್ಯದ (ಐಎಸ್ )ನ ಸಂಕ್ಷಿಪ್ತ ರೂಪ.] ಅಪಾಯ ಉಂಟು ಮಾಡಬಲ್ಲ ಇತರ ಗುಂಪಿನ ವಿರುದ್ಧ ಕೂಡ” ಎಂದು ಅಪ್ಘಾನ್ ಪ್ರಾಂತ್ಯದ ನೂರಿಸ್ತಾನ್‍ನಲ್ಲಿ ತಾಲಿಬಾನ್ ವಿಶೇಷ ಪಡೆಗಳ ದೀರ್ಘಾವಧಿಯ ಕಮಾಂಡರ್ ಆಗಿರುವ ಉಸ್ಮಾನ್ ಜವ್ಹಾರಿ ಡ್ಯೂಟ್ಸ್ಚೆ ವಿಲ್ಲೆಗೆ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಇನ್ನೂ ಯಾರ ವಿರುದ್ಧ ಹೋರಾಡುತ್ತಿದ್ದಾರೆ?

2015ರ ಆರಂಭದಿಂದಲೂ ಐಎಸ್ ಅಪಘಾನಿಸ್ತಾನದಲ್ಲಿ ಸಕ್ರಿಯವಾಗಿದೆ, ಆದರೂ ಕೂಡ ಅದು ಅಧಿಕ ಪ್ರಮಾಣದಲ್ಲಿ ಕಾಬೂಲ್, ನಂಗರ್‌ಹಾರ್‌ ಮತ್ತು ಕುನಾರ್ ಪ್ರಾಂತ್ಯಗಳಿಗೆ ಸೀಮಿತವಾಗಿದೆ. ಈ ಪ್ರಾಂತ್ಯಗಳಲ್ಲಿ ತಾಲಿಬಾನ್, ಐಎಸ್‍ ಅನ್ನು ಗುರಿಯಾಗಿ ಇಟ್ಟುಕೊಂಡು ಈ ಹಿಂದೆ ಕಾರ್ಯಾಚರಣೆ ನಡೆಸಿತ್ತು ಮತ್ತು ತಾಲಿಬಾನ್ ಈಗ ಅಧಿಕಾರಕ್ಕೆ ಬಂದ ನಂತರವೂ ಆ ಕೆಲಸ ಮುಂದುವರೆಸುತ್ತಿದೆ.

ಆದರೂ ಈ ಕಾರ್ಯಾಚರಣೆಗಳು ಇಡೀ ತಾಲಿಬಾನ್ ಪಡೆಗಳನ್ನು ವ್ಯಸ್ಥವಾಗಿ ಇಡುವಷ್ಟು ಪ್ರಮಾಣದಲ್ಲಿ ಇಲ್ಲ. ನೂರಿಸ್ತಾನ್ ಪ್ರಾಂತ್ಯದಲ್ಲಿ ಐಎಸ್ , ಇನ್ನೂ ಯಾವುದೇ ದಾಳಿಗಳನ್ನು ನಡೆಸಿಲ್ಲ. ನೂರಿಸ್ತಾನದ ತಾಲಿಬಾನ್ ವಿಶೇಷ ಪಡೆಗಳ ಓರ್ವ ಸದಸ್ಯ “ಜನ್ನತ್” ಹೇಳುವ ಪ್ರಕಾರ, “ನೂರಿಸ್ತಾನದಲ್ಲಿ ಡಾಯಿಶ್ ಇಲ್ಲ. ಪ್ರಸ್ತುತ ಸುತ್ತಮುತ್ತ ಯಾವುದೇ ಶತ್ರುಗಳು ಇಲ್ಲ.

ತಾಲಿಬಾನ್‍ಗೆ ಬೆದರಿಕೆಗಳು ಕಡಿಮೆ ಆಗಿರುವುದನ್ನು ಜವ್ಹಾರಿ ಒಪ್ಪಿಕೊಂಡಿದ್ದಾರೆ.” ಹಿಂದಿನ ಸ್ಥಿತಿಗೆ ಹೋಲಿಸಿದರೆ, ಶೇಕಡಾ 1ಕ್ಕಿಂತಲೂ ಕಡಿಮೆ” ಎಂದು ಅವರು ಹೇಳಿದ್ದಾರೆ. ತನಗೆ ಬೆದರಿಕೆ ಹಾಕುವವರಿಂದ ರಕ್ಷಿಸಿಕೊಳ್ಳಲು “ಇತರ ರಾಷ್ಟ್ರಗಳಂತೆ, ಪ್ರಬಲ ಸೈನ್ಯದ ಅಗತ್ಯವಿದೆ” ಎಂಬುವುದು ಅವರ ಅಭಿಪ್ರಾಯ.

ತಾಲಿಬಾನ್‍ನ ಸ್ವಯಂ ಘೋಷಿತ “ಅಪ್ಘಾನ್ ಎಮಿರೇಟ್” ಗೆ ನಿರ್ದಿಷ್ಟ ಬೆದರಿಕೆಗಳ ಬಗ್ಗೆ ಕೇಳಿದರೆ, “ಕಾಲ ಉತ್ತರಿಸುತ್ತದೆ” ಎಂದಿರುವ ಜವ್ಹಾರಿ, ಯುಎಸ್ ವಾಪಸಾತಿಯಿಂದ ತಾಲಿಬಾನ್ ಮುಖ್ಯ ವಿದೇಶಿ ಎದುರಾಳಿಯನ್ನು ತೆಗೆದುಹಾಕಿದೆ ಎಂದು ಹೇಳಿದ್ದಾರೆ. ತಾಲಿಬಾನ್ ಇತರ ದೇಶಗಳಿಗೆ ಬೆದರಿಕೆ ಒಡ್ಡುವುದಿಲ್ಲ ಮತ್ತು ಅದರ ಯೋಜನೆಗಳು ಅಫ್ಘಾನಿಸ್ತಾನಕ್ಕೆ ಸೀಮಿತವಾಗಿವೆ ಎಂದು ತಾಲಿಬಾನ್‍ನ ಅಧಿಕೃತ ಸಾಲುಗಳನ್ನು ಪುನರುಚ್ಚರಿಸಿದ್ದಾರೆ.

ತಾಲಿಬಾನ್‍ನ ಯೋಜನೆ ಏನು?

ಅಫ್ಘಾನ್ ಗಣರಾಜ್ಯದ ಪತನದ ನಂತರ, ತಾಲಿಬಾನ್ ಗುಂಪಿನಲ್ಲಿ ತನ್ನ ಯೋಜನೆಗಳ ಕುರಿತ ಅಸ್ಪಷ್ಟತೆಯು ಕೇವಲ ನೂರಿಸ್ತಾನಕ್ಕೆ ಸೀಮಿತ ಆಗಿಲ್ಲ. ಉದಾಹರಣೆಗೆ, ಶತುಗಳನ್ನು ಎದುರಿಸಲು ತಾಲಿಬಾನ್ ಸರಕಾರ, ಬದಕ್ಷಾನ್, ಟಖರ್ ಮತ್ತು ಕುಂಡುಜ್ ಪ್ರಾಂತ್ಯಗಳಿಗೆ ವಿಶೇಷ ಪಡೆಗಳನ್ನು ಘೋಷಿಸಿದರೂ, ತಮ್ಮ ಶತ್ರು ಯಾರೆಂದು ನಿರ್ದಿಷ್ಟವಾಗಿ ಹೇಳಿಲ್ಲ ಮತ್ತು ಆ ಪಡೆಗಳು ನಿಖರವಾಗಿ ಏನು ಮಾಡುತ್ತಿವೆ ಎಂಬುವುದು ಸ್ಪಷ್ಟವಾಗಿಲ್ಲ.

ನಿಖರ ಶತ್ರು ಮತ್ತು ಕಾರ್ಯಚರಣೆ ಇಲ್ಲದೇ ಇರುವುದರಿಂದ, ನೂರಿಸ್ತಾನದ ವಿಶೇಷ ಪಡೆಗಳ ಪುರುಷರು, ಸೇನಾ ತರಬೇತಿ, ಧಾರ್ಮಿಕ ಓದು, ಘನ ವಾಹನಗಳ ಚಾಲನಾ ತರಬೇತಿ ಮತ್ತು ಕಟ್ಟಡ ನಿರ್ವಹಣೆಯಂತಹ ಕೆಲಸಗಳಲ್ಲಿ ವ್ಯಸ್ತರಾಗಿದ್ದಾರೆ. ಅವರು ಗಸ್ತು ಕೂಡ ತಿರುಗುತ್ತಾರೆ, ಆದರೆ ತಮ್ಮ ಕಾಂಪೌಡ್‍ನ ಸುತ್ತಮುತ್ತ ಮಾತ್ರ ಎಂದು ಜವ್ಹಾರಿ ಹೇಳಿದ್ದಾರೆ.

ತಾಲಿಬಾನ್ ಪಡೆಗಳು ನಿಂತಿವೆ;

ತಾಲಿಬಾನ್ ಸರಕಾರವು , ಅಕ್ಟೋಬರ್ 4ರಂದು ತಮ್ಮ ಹೊಸ ಸೇನಾ ದಳಕ್ಕೆ ಕಮಾಂಡರ್‌ಗಳನ್ನು ಘೋಷಿಸಿದರೂ, ಆ ದಳದ ನಿಖರವಾದ ರೂಪುರೇಷೆ ಇನ್ನೂ ಸ್ಪಷ್ಟವಾಗಿಲ್ಲ. ಹಿಂದಿನ ಅಪ್ಘಾನ್ ಸರಕಾರದ ಪತನಕ್ಕೆ ಮುನ್ನ ಈ ಪಡೆಗಳು ಮಿಲಿಟರಿ ಆಯೋಗದ ಅಡಿಯಲ್ಲಿ ಇದ್ದರು. “ನಾವೀಗ ಮಿಲಿಟರಿ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಇದ್ದೇವೋ ಅಥವಾ ಆಂತರಿಕ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಇದ್ದೇವೋ ಎಂಬ ಆದೇಶಕ್ಕೆ ಇನ್ನೂ ಕಾಯುತ್ತಿದ್ದೇವೆ” ಎಂದು ಜವ್ಹಾರಿ ಹೇಳಿದ್ದಾರೆ.

ಹಿಂದಿನ ಸರಕಾರದಲ್ಲಿ, ರಕ್ಷಣಾ ಸಚಿವಾಯವು ಸಾಮಾನ್ಯವಾಗಿ ಮಿಲಿಟರಿ ಪಡೆಗಳ ಮೇಲೆ ಏಕಸ್ವಾಮ್ಯವನ್ನು ಹೊಂದಿರಲಿಲ್ಲ. ತಾಲಿಬಾನ್ ಕೂಡ ಅದೇ ರೀತಿ ಆಡಳಿತ ನಡೆಸುತ್ತದೆಯೋ ಎಂಬುದನ್ನು ನೋಡಬೇಕಿದೆ.

“ದೇಶದಾದ್ಯಂತ ಅಸ್ಪಷ್ಟ ಮಿಲಿಟರಿ ರಚನೆಗಳು ಬಹಳಷ್ಟು ಇವೆಯಾದರೂ, ಕಾಬೂಲಿನಲ್ಲಿ ಅದು ಹೆಚ್ಚು ಕಾಣಿಸುತ್ತಿದೆ. ಉದಾಹರಣೆಗೆ, ಹಲವಾರು ಕಮಾಂಡರ್‌ಗಳು ಒಂದೇ ಪ್ರದೇಶ ಅಥವಾ ಒಂದೇ ಸಮಸ್ಯೆ ಜವಾಬ್ದಾರರು ಎಂದು ಹೇಳಿಕೊಳ್ಳುತ್ತಿದ್ದಾರೆ” ಎಂದು ಅಫ್ಘಾನಿಸ್ತಾನ ಮೂಲದ ಭದ್ರತಾ ವಿಶ್ಲೇಷಕರೊಬ್ಬರು ಹೇಳಿದ್ದಾರೆ.

“ಹೋರಾಟದಿಂದ ಆಡಳಿತದ ಕಡೆಗಿನ ಪರಿವರ್ತನೆ ತಾಲಿಬಾನ್ ವಿಶೇಷ ಪಡೆಗಳಂತಹ ಗುಂಪಿಗೆ ವಿಶೇಷ ಸವಾಲು ಆಗಿದೆ” ಎಂದು ವಾಷಿಂಗ್ಟನ್ ಡಿಸಿಯ ಸ್ಟಿಮ್ಸನ್ ಸೆಂಟರ್‌ನಲ್ಲಿ ದಕ್ಷಿಣ ಏಷ್ಯಾ ಕಾರ್ಯಕ್ರಮ ನಿರ್ದೇಶಕರಾದ ಎಲಿಜಬೆತ್ ತ್ರೆಲ್ಕೇಲ್ಡ್ ಹೇಳಿದ್ದಾರೆ.

ಇದನ್ನೂ ಓದಿ: Fake Al-Qaeda Video| ಭಾರತದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಲು ಪಾಕ್ ಮೂಲದ ಉಗ್ರರಿಂದ ನಕಲಿ 'ಅಲ್​ ಖೈದಾ' ವಿಡಿಯೋ ಬಿಡುಗಡೆ!

“ಅವರು ತಾಲಿಬಾನ್‍ನ ಮಿಲಿಟರಿ ಉದ್ದೇಶಗಳನ್ನು ಭದ್ರ ಪಡಿಸುವುದರಲ್ಲಿ ಮುಖ್ಯಪಾತ್ರ ವಹಿಸಿದ್ದರು, ಆದರೆ ಈಗ ಯುದ್ಧ ಗೆದ್ದಿರುವುದರಿಂದ ಅವರ ಭವಿಷ್ಯದ ಧ್ಯೇಯವು ಕಡಿಮೆ ಅಸ್ಪಷ್ಟವಾಗಿದೆ. ತಾಲಿಬಾನಿಗಳು ಒಗ್ಗಟ್ಟನ್ನು ನಿರ್ವಹಿಸುವುದರಲ್ಲಿ ಪ್ರವೀಣರೆಂದು ಸಾಬೀತುಪಡಿಸಿದ್ದರೂ, ಅದನ್ನು ಮುಂದುವರೆಸಲು ಅವರ ಭವಿಷ್ಯದ ಪಾತ್ರವನ್ನು ನಿರ್ಧರಿಸುವ ಅಗತ್ಯವಿದೆ” ಎಂದು ಅವರು ಹೇಳಿದ್ದಾರೆ.
First published: