Taliban| ತಾಲಿಬಾನ್ ನಾಯಕರ ಕಲಹಗಳ ಸುದ್ದಿ ಕುರಿತು ಉಗ್ರ ಸಂಘಟನೆಯ ಪ್ರತಿಕ್ರಿಯೆ ಏನು? ಬರಾದಾರ್ ಕಣ್ಮರೆಯಾಗಿದ್ದು ನಿಜವೇ..?

ಇತ್ತೀಚಿನ ದಿನಗಳಲ್ಲಿ ಬರಾದಾರ್ ಸಾರ್ವಜನಿಕರ ದೃಷ್ಟಿಯಿಂದ ಕಣ್ಮರೆಯಾಗಿದ್ದಾರೆ ಎಂಬ ಸುದ್ದಿಯಿಂದಾಗಿ ತಾಲಿಬಾನ್ ನಾಯಕತ್ವದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗುತ್ತಿವೆ ಎಂಬ ಕಲ್ಪಿತ ಸುದ್ದಿಗಳು ಹರಿದಾಡುತ್ತಿದೆ.

ಮುಲ್ಲಾ ಅಬ್ದುಲ್ ಘನಿ ಬರಾದಾರ್.

ಮುಲ್ಲಾ ಅಬ್ದುಲ್ ಘನಿ ಬರಾದಾರ್.

 • Share this:
  ಅಪ್ಘಾನಿಸ್ತಾನವನ್ನು (Afghanistan) ವಶಪಡಿಸಿಕೊಂಡ ನಂತರ ಸರ್ವಾಧಿಕಾರ ಪಟ್ಟ ಅಲಂಕರಿಸಿರುವ ತಾಲಿಬಾನ್ (Taliban) ತನ್ನದೇ ನಿಯಮಗಳನ್ನು ರೂಪಿಸಿ ಅಪ್ಘಾನಿಸ್ತಾನವನ್ನು ಇಸ್ಲಾಮಿಕ್ ಪ್ರಾಂತ್ಯ ಎಂಬುದಾಗಿ ಘೋಷಿಸಿದೆ. ಇದೀಗ ಹೊಸ ಸರಕಾರ ರಚನೆಗೆ ಸಂಬಂಧಿಸಿದಂತೆ ತಾಲಿಬಾನ್ ಗುಂಪುಗಳ ನಡುವೆಯೇ ಕಲಹಗಳು ನಡೆಯುತ್ತಿದೆ ಎಂಬುದಾಗಿ ತಾಲಿಬಾನ್ ಮೂಲಗಳು ಬಿಬಿಸಿಗೆ ತಿಳಿಸಿದ್ದಾರೆ. ಗುಂಪಿನ ಸಹ ಸಂಸ್ಥಾಪಕರಾದ ಮುಲ್ಲಾ ಅಬ್ದುಲ್ ಘನಿ ಬರಾದಾರ್ (Mullah Abdul Ghani Baradar) ಹಾಗೂ ಕ್ಯಾಬಿನೆಟ್ ಸದಸ್ಯರ ನಡುವೆ ವಾದ ಏರ್ಪಟ್ಟಿದ್ದು ಅಧ್ಯಕ್ಷೀಯ ಅರಮನೆಯಲ್ಲಿ ವಾದ ವಿವಾದಗಳು ನಡೆದಿದೆ ಎಂಬುದಾಗಿ ಸುದ್ದಿಮೂಲಗಳು ತಿಳಿಸಿವೆ.

  ಆದರೆ, ಇತ್ತೀಚಿನ ದಿನಗಳಲ್ಲಿ ಬರಾದಾರ್ ಸಾರ್ವಜನಿಕರ ದೃಷ್ಟಿಯಿಂದ ಕಣ್ಮರೆಯಾಗಿದ್ದಾರೆ ಎಂಬ ಸುದ್ದಿಯಿಂದಾಗಿ ತಾಲಿಬಾನ್ ನಾಯಕತ್ವದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗುತ್ತಿವೆ ಎಂಬ ಕಲ್ಪಿತ ಸುದ್ದಿಗಳು ಹರಿದಾಡುತ್ತಿದ್ದರೂ ಈ ಸುದ್ದಿಗಳಿಗೆ ಯಾವುದೇ ಹುರುಳಿಲ್ಲ ಎಂಬುದಾಗಿ ತಾಲಿಬಾನ್ ತಿಳಿಸಿದ್ದು ಯಾವುದೇ ಕಲಹ, ಗೊಂದಲಗಳು ಗುಂಪಿನಲ್ಲಿಲ್ಲ ಎಂದು ತಿಳಿಸಿದೆ. ಅದೇ ರೀತಿಯಾಗಿ ಘನಿ ಬರಾದಾರ್ ಸುರಕ್ಷಿತವಾಗಿದ್ದಾರೆ ಎಂದೂ ಹೇಳಿದೆ.

  ತಾಲಿಬಾನ್ ಗುಂಪುಗಳ ನಡುವೆ ಸಂಘರ್ಷ:

  ಅಪ್ಘಾನಿಸ್ತಾನವನ್ನು ಸಂಪೂರ್ಣವಾಗಿ ತನ್ನ ಸುಪರ್ದಿಗೆ ವಶಪಡಿಸಿಕೊಂಡ ತಾಲಿಬಾನ್ ತನ್ನ ಆಡಳಿತದ ಮುದ್ರೆಯನ್ನೊತ್ತಿದೆ. ಇದರ ಮಧ್ಯೆಯೇ ತಾಲಿಬಾನಿಗಳ ಹೊಸ ಸಚಿವ ಸಂಪುಟದಲ್ಲಿ ಸಂಪೂರ್ಣವಾಗಿ ಪುರುಷರೇ ಇದ್ದು ಹಿರಿಯ ತಾಲಿಬಾನ್ ವ್ಯಕ್ತಿಗಳಿಂದ ಸಂಪುಟ ರಚಿಸಲಾಗಿದೆ. ಅವರಲ್ಲಿ ಕೆಲವರು ಅಮೆರಿಕ ಪಡೆಗಳ ಮೇಲೆ ನಡೆಸಿದ ದಾಳಿಗಳಲ್ಲಿ ಕುಖ್ಯಾತರು ಎಂದೆನಿಸಿಕೊಂಡಿದ್ದಾರೆ.

  ತಾಲಿಬಾನ್‌ ಮೂಲವೊಂದು ಬಿಬಿಸಿಗೆ ಬರಾದಾರ್ ಹಾಗೂ ನಿರಾಶ್ರಿತರ ಮಂತ್ರಿ ಮತ್ತು ಉಗ್ರಗಾಮಿ ಹಕ್ಕಾನಿ ಜಾಲದ ಪ್ರಮುಖ ವ್ಯಕ್ತಿಯಾಗಿರುವ ಖಲೀಲ್ ಉರ್ -ರಹಮಾನ್ ಹಕ್ಕಾನಿ ಅನುಯಾಯಿಗಳ ನಡುವೆ ಘರ್ಷಣೆ ಉಂಟಾಗುತ್ತಿದ್ದಂತೆಯೇ ಸಂಘರ್ಷಕಾರಿಯಾಗಿರುವ ಪದಗಳನ್ನು ಬಳಸಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಅಷ್ಟಲ್ಲದೆ ಕತಾರ್‌ನಲ್ಲಿ ನೆಲೆಸಿರುವ ಹಾಗೂ ಹಿರಿಯ ತಾಲಿಬಾನಿ ಸದಸ್ಯರೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಯೊಬ್ಬ ಜಗಳಗಳು ನಡೆದಿವೆ ಎಂಬುದನ್ನು ಪುಷ್ಟೀಕರಿಸಿದ್ದಾನೆ.

  ಅಧಿಕಾರದ ಹಂಬಲ:

  ಹೊಸ ಉಪ ಪ್ರಧಾನಿ ಬರಾದಾರ್ ಮಧ್ಯಂತರ ಸರಕಾರ ರಚನೆಯ ಕುರಿತು ಅತೃಪ್ತಿ ಹೊಂದಿರುವುದೇ ವಾದಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದ್ದು ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಗೆಲುವಿಗೆ ಯಾರಿಗೆ ಪ್ರಾಶಸ್ತ್ಯ ನೀಡಬೇಕು ಎಂಬ ವಿಷಯದ ಕುರಿತೇ ಜಗಳಗಳು ಆರಂಭವಾಗಿದೆ ಎಂಬ ಮಾತೂ ಕೇಳಿಬರುತ್ತಿದೆ.

  ಬರಾದಾರ್ ನಡೆಸುವ ರಾಜತಾಂತ್ರಿಕತೆಗೆ ಆದ್ಯತೆ ನೀಡಬೇಕೆಂದು ಬಯಸಿದರೆ ಹಿರಿಯ ತಾಲಿಬಾನಿ ವ್ಯಕ್ತಿಗಳೊಬ್ಬರಿಂದ ನಡೆಸಲಾದ ಹಕ್ಕಾನಿ ಗುಂಪಿನ ಸದಸ್ಯರು ಹೋರಾಟದ ಮೂಲಕ ಜಯ ಸಾಧಿಸಲಾಗಿದೆ ಎಂದು ವಾದಿಸುತ್ತಿದ್ದಾರೆ. ಹಾಗಾಗಿ ಹಕ್ಕಾನಿ ಗುಂಪಿಗೆ ಆದ್ಯತೆ ನೀಡಬೇಕೆಂದು ಬಯಸುತ್ತಿದ್ದಾರೆ ಎಂಬುದಾಗಿ ಮೂಲಗಳು ಹೇಳಿವೆ.

  ಬರಾದಾರ್ ತನ್ನಿಂದಾಗಿಯೇ ತಾಲಿಬಾನ್ ಸಂಘಟನೆಗೆ ಜಯ ದೊರಕಿತು ಎಂದು ಹೇಳುವುದಕ್ಕೆ ಪುರಾವೆಗಳಿದ್ದು 2020ರಲ್ಲಿ ತಾಲಿಬಾನ್ ನಾಯಕ ಬರಾದಾರ್ ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಮೊದಲ ವ್ಯಕ್ತಿಯಾಗಿದ್ದಾರೆ. ಅದಕ್ಕೂ ಮುಂಚೆ ತಾಲಿಬಾನ್ ಪರವಾಗಿ ಅಮೆರಿಕ ಸೇನೆಯನ್ನು ಹಿಂತೆಗೆದುಕೊಳ್ಳುವ ಕುರಿತು ದೋಹಾ ಒಪ್ಪಂದಕ್ಕೆ ಸಹಿ ಹಾಕಿದವರು ಇವರೇ ಆಗಿದ್ದಾರೆ.

  ಇದನ್ನೂ ಓದಿ: Explainer: ಖಾದ್ಯ ತೈಲಗಳ ಬೆಲೆ ಏರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಕ್ರಮವೇನು..? ಇಲ್ಲಿದೆ ವಿವರ!

  ಬರಾದಾರ್ ಕಣ್ಮರೆ:

  ಹಕ್ಕಾನಿ ಪಡೆಗಳು ಹಿಂಸಾತ್ಮಕ ದಾಳಿಗಳಿಗೆ ಹೆಸರುವಾಸಿಯಾಗಿದ್ದು ಅಮೆರಿಕ ಈ ಗುಂಪಿಗೆ ಭಯೋತ್ಪಾದಕ ಗುಂಪು ಎಂದು ಹೆಸರನ್ನಿಟ್ಟಿದೆ. ಇದರ ನಾಯಕ ಸಿರಾಜುದ್ದೀನ್ ಹಕ್ಕಾನಿ ಹೊಸ ಸರಕಾರದಲ್ಲಿ ಆಂತರಿಕ ಸಚಿವರಾಗಿದ್ದಾರೆ. ತಾಲಿಬಾನ್ ಗುಂಪಿನಲ್ಲಿಯೇ ಪ್ರಸಿದ್ಧ ವ್ಯಕ್ತಿಯಾಗಿರುವ ಬರಾದಾರ್ ಕಣ್ಮರೆಯಾಗುತ್ತಿದ್ದಂತೆಯೇ ಅವರು ಸತ್ತಿರಬಹುದು ಎಂಬ ವದಂತಿಗಳು ಹರಿದಾಡುತ್ತಿದ್ದವು. ಆದರೆ ತಾಲಿಬಾನ್ ಮೂಲಗಳು ಅವರು ಕಾಬೂಲ್‌ನಿಂದ ಕಂದಹಾರ್ ನಗರಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿಸಿದೆ. ಈ ಕುರಿತು ಬರಾದಾರ್ ಆಡಿಯೋ ರೆಕಾರ್ಡಿಂಗ್ ಬಿಡುಗಡೆ ಮಾಡಿದ್ದು ನಾನು ಎಲ್ಲಿದ್ದರೂ ಚೆನ್ನಾಗಿರುವೆ ಎಂದು ತಿಳಿಸಿದ್ದಾರೆ.

  ಇದನ್ನೂ ಓದಿ: America vs Afghan| ಅಫ್ಘಾನಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲಿನ ಅಮೆರಿಕದ ಡ್ರೋಣ್ ದಾಳಿಗೆ ಬಳಕೆಯಾಗಲಿದೆಯೇ ಭಾರತ?

  ಬರಾದಾರ್ ಸುದ್ದಿಯ ಕುರಿತು ತಾಲಿಬಾನ್ ವಿವರವಾದ ಮಾಹಿತಿ ನೀಡುತ್ತಿಲ್ಲ ಹಾಗೂ ಸುರಕ್ಷಿತರಾಗಿದ್ದಾರೆ ಎಂಬ ಅಂಶ ಮಾತ್ರವೇ ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ಬಿಡುಗಡೆ ಮಾಡಿರುವ ತಾಲಿಬಾನ್ ಸಂಘಟನೆಗಳು ಬರಾದಾರ್ ತಾಲಿಬಾನ್‌ನ ಸರ್ವೋಚ್ಛ ನಾಯಕನನ್ನು ಭೇಟಿ ಮಾಡಲು ಕಂದಹಾರ್‌ಗೆ ಪ್ರಯಾಣಿಸಿದ್ದಾರೆ ಎಂಬುದಾಗಿ ಹೇಳಿಕೆ ನೀಡಿದೆ.
  First published: